ಎನಗಿದ್ದ ಎರಡು ದೋಸ್ತಿಗೊ…

February 17, 2012 ರ 11:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕತೆ 1
ರಜಾ ಹಳೆ ಕತೆ ಆತೋ!
ಹಳತ್ತು ಹೇಳಿರೆ ನಲವತ್ತು ವರ್ಷರಷ್ಟೂ ಹಳತ್ತೋ ಹೇಳಿ ಗ್ರೇಶೇಕು ಹೇಳಿ ಇಲ್ಲೆ; ಅಂತೂ ಇಪ್ಪತ್ತಕ್ಕೆ ಅಡ್ಡಿ ಇಲ್ಲೆ ಹೇಳ್ಳಕ್ಕು.
ಒಬ್ಬ ಆತ್ಮೀಯ.
ಉದ್ಯೋಗ ಹೇಳಿ ಹೇಳ್ಳೆ ಎಂತ್ಸೂ ಇತ್ತಿದ್ದಿಲ್ಲೇ. ಹಾಂಗೇಳಿ ಆದಾಯ ಏನೂ ಇತ್ತಿದ್ದಿಲ್ಲೇಳಿ ಇಲ್ಲೆ. ಕೆಲವೊಂದು ವಿದ್ಯೆ ಕೆಲವೊಂದು ಕಡೆ. ಉದರನಿಮಿತ್ಥಂ ಬಹುಕೃತ ವೇಷಂ – ತಪ್ಪಲ್ಲನ್ನೇ.
ಉಪಕಾರ ರಜಾ ಮಾಡುಗು. ಸಹಕಾರವೂ ಮಾಡುಗು. ಸುಧಾರಿಕೆಯೂ ಮಾಡುಗುದೇ. ಅಂದರೆಂತಾ…. ಒಳ್ಳೆತ ಪಿಸುಂಟ.
ಹಾಂಗಾಗಿ ಜನ ಅವ ಹೇಳಿದ್ದಕ್ಕೆ ಅಪ್ಪಪ್ಪು ಹೇಳಿ ಹೇಳಿಕ್ಕುವದು. ಇಲ್ಲದ್ರೆ ನೀಯೆಂತ್ಸರ ಹೇಳುತ್ಸು ಹೇಳಿ ಎರಡು ಮಡುಗುಗುದೇ.
ಮಡುಗಿದ್ದನೋ ಅಂಬಗ ?!…. ಎನಗೊಂತಿಲ್ಲೇ ಬಿಡಿ.
ದಿನಕ್ಕೊಂದರಿ ಉದಿಯಪ್ಪಗ ದಿನಕ್ಕೊಂದರಿ ಹೋತ್ತೋಪಗ ಪೇಟಗೆ ಹೋಪಲೇ ಬೇಕು.
ಎಂತಕೆ….. ಹಾಲು ಯೇಪಾರ ಏನಾರು ಇದ್ದೋ ಕೇಳ್ತೀರೋ ? ಇಲ್ಲೆ., ಅಂತೇ.. ಹೊತ್ತು ಹೋಪಲೆ.
ನಮ್ಮ ಊರ್ಲಿ ನಮ್ಮ ಪೇಟಗೆ ಹೋದರೆ ನಮ್ಮವು ಸಿಕ್ಕದ್ದೇ ಇರ್ತವೋ ಮತ್ತೆ. ಇವಂಗೆ ಆ ರೀತಿಲಿ ಆ ನಮ್ಮವು ಸಿಕ್ಕಿತ್ತೋ – ಆತದು ಬಗೆ.
ಬಾವ ., ಒಂದು ಸಿಂಗುಲು ಚಾಯೇ ಕುಡಿವನೋ?‘..
ಅಕ್ಕು
ಅಂದರೆ ಇಂದ್ರಾಣ ಪೈಸೆ ನಿಂಗೊ ಕೊಡೆಕು. ಹೇಂಗೆ?.
ಅಕ್ಕು.
ತಿಂಬಲೆ ?
ಪೋಡಿ, ಬನ್ಸು, ಬಿಸ್ಕುಟಂಬಡೆ ಯಾವುದೂ ಅಕ್ಕು. ಎನಗೊಂದು, ನಿನಗೊಂದು ಏ°?.
ಅಕ್ಕು.
[ಪೈಸೆ ಕೊಟ್ಟಿಕ್ಕಿ ಇಬ್ರೂ ಹೆರಬತ್ತವು]
ಬಾವ ಒಂದು ಬಲುಗೆಡೆದೋ.  ನಿಂಗೊಗೆ ಬೇಡದ್ರೆ ಬೇಡ.. ಒತ್ತಾಯ ಮಾಡ್ತಿಲ್ಲೇ.
ಓ  ಅಕ್ಕು..
ಇದರ ಪೈಸೆ ಕೊಟ್ಟಿಕ್ಕು ಆತೋ. ಎನ ಬಪ್ಪಗ ಪೈಸೆ ಕಿಸಗೆ ಹಾಕಲೆ ಮರುದತ್ತು ಹೇಳಿ.
ಆತು ತೊಂದರೆ ಇಲ್ಲೆ.
ಪಿಲ್ಟರ್ ಇಪ್ಪ ವಿಲ್ಸ್ ಸಾಕು ಆತೊ. ಆಚದು ದೊಂಡೆ ಕಂತುತ್ತು. ಸ್ವರ ಹಾಳಾವ್ತು.
ಅಕ್ಕು ಅಕ್ಕು
ಇದಾ ಆನು ಎರಡು ತೆಕ್ಕೊಳ್ತೆ ಆತೋ. ಈಗಂಗೆ ಒಂದು ಮತ್ತೆ ಮನಗೆ ನಡಕ್ಕೊಂಡು ಹೋಪಗ ದಾರಿಲಿ ಇನ್ನೊಂದು.
ಅಕ್ಕಪ್ಪ ಅಕ್ಕು.
[ ಇಬ್ರೂ ಅವರವರ ದಾರಿ ಹಿಡಿತ್ತವು. ]
ಅವಂಗೆ ಮರುದಿನವೋ….ಮತ್ತೊಂದು ದಿನವೋ – ಅದೇ ವ್ಯಕ್ತಿ ಸಿಕ್ಕಿರೂ, ಅಲ್ಲ ಇನ್ನೊಬ್ಬ ಸಿಕ್ಕಿರೂ…..
ಎಂತರ  …?
ಪುನಃ ಸುರುವಿಂದ ಓದಿ.
~*~*~*~
ಕತೆ 2
ಒಬ್ಬ ನಿವೃತ್ತ ಅಜ್ಜ.
ಎಲ್ಲೋರು ಬೇಕು ಈ ಅಜ್ಜಂಗೆ. ಎಲ್ಲೋರತ್ರೂ ಪ್ರೀತಿಂದ ಮಾತೇಡೆಕು. ದಿನಾ ಬೇಡ . ಅಪರೂಪ ಅಲ್ಲ. ಅಂಬಗಂಬಗಳೂ ಅಲ್ಲ……
ಕಾರ್ಯ ಇದ್ದರೆ ಪೇಟೆಗೆ ಬಂದೇ ಬಕ್ಕು. ಕುಚ್ಚಿ ತೆಗೆಶುಲೇ, ಕರೆಂಟು ಬಿಲ್ಲು ಕಟ್ಟಲೆ, ಪೆನ್ಸನ್ ತೆಕ್ಕೊಂಬಲೆ.
ಬಸ್ಸು ಇಳುದ ಕೂಡಲೆ ಆರಾರು ಒಬ್ಬ ಸಿಕ್ಕೆಕು. ಸಿಕ್ಕಿಯೇ ಸಿಕ್ಕುತ್ತವು. ಇಲ್ಲದ್ರೆ ರಜಾ ಅಲ್ಲೇ ನಿಂದು ಕಾಯುಗು.
ದೂರಂದ ಕಂಡರೂ ನಿಂಗೊಗೆ ಕಾಣದ್ರೂ ಕೈ ತಟ್ಟಿ ದೆನಿಗೊಳುಗು.  ಓಯಿ…. ಬಾ ಬಾ
ಎಂತ ಮಾವ?
ಆನೀಗ ಎನ್ನ ಕೆಲಸಕ್ಕೆ ಪೇಟಗೆ ಬಂದದು.
ಹಾಮ್ಮ್ಮ್  ಆತೋ ಕೆಲಸ.?
ಇಲ್ಲೆ ., ಈಗಷ್ಟೇ ಬಸ್ಸು ಇಳುದ್ದಷ್ಟೇ. ಅಷ್ಟಪ್ಪಗ ನಿನ್ನ ಕಂಡತ್ತಿದಾ.  ನಾವೊಂದು ಕಾಪಿ ಕುಡಿವನೋ.
ಬೇಡ . ಆನೀಗ ಕುಡುದ್ದಷ್ಟೇ.
ಅದು ತೊಂದರೆ ಇಲ್ಲೆ. ನೀ ಬಾ ಎನ್ನ ಒಟ್ಟಿನ್ಗೆ.  ಒಂದು ಕಾಪಿ ಮದಾಲು ಕುಡುದಾದರೆ ಒಂದು ಕೆಲಸವೂ ಮುಗುತ್ತು ಮತ್ತೆ ಬಂದ ಕಾರ್ಯ ಮುಗಿಷಿಕ್ಕಿ ಬಸ್ಸು ಹಿಡಿವಲಕ್ಕನ್ನೇ. ಬಾ ಬೇಗ ಹೊಪೋ ಹೋಟೆಲಿಂಗೆ.
ಅಕ್ಕು ಮಾವ ಹೋಪೋ ಅಂಬಗ.
ಕಾಪಿ ಕುಡುದವು. ದೋಸೆಯೋ ಚಪಾತಿಯೋ ತಿಂದವು. ಈಚವಂಗೆ ಎಂತದೂ ಬೇಡದ್ರೂ ಅಡ್ಡಿ ಇಲ್ಲೆ. ಅಂತೇ ಬ್ರಹ್ಮತ್ವಕ್ಕೆ ಮಾತಾಡಿಯೊಂಡು ಕೂದರೆ ಸಾಕು.
ಎಂತ ಪೈಸೆ ಕೊಡ್ಳೋ ಗ್ರೇಶಿದಿರೋ ??
ತಪ್ಪು. ಆ ಮಾವ / ಅಜ್ಜ ಎಂದಿಂಗೂ ಅರತ್ರೆಯೂ ನೀ ಪೈಸೆ ಕೊಡು ಹೇಳಿದವ ಅಲ್ಲ.
ಅಜ್ಜಂಗೆ ಆಯೇಕ್ಕಾದ್ದು ಇಷ್ಟೇ. ಪೇಟೆಗೆ ಹೋದರೆ ಮದಾಲು ಹೋಟಲಿಲಿ ಚಾ ಕುಡಿಯೇಕು. ಹೋಟೆಲಿಂಗೆ ಹೋಯೇಕ್ಕಾರೆ ಆರರೊಬ್ಬ ಜನ ಒಟ್ಟಿ೦ಗೆ ಬೇಕೇ ಬೇಕು. ಅಷ್ಟೇ.
ಅಷ್ಟೇ ಅಷ್ಟೆ.   ನಾಳೆಯೋ ನಾಡದ್ದೋ ಅಲ್ಲ ಇನ್ನೊಂದರಿಯೋ ಅದೇ ಅಜ್ಜ / ಮಾವ ಅದೇ ರೀತಿ ಪುನಃ ಸಿಕ್ಕಿರೆ ……?!
ಏನಿಲ್ಲೆ….  ಪುನಃ ಸುರುವಿಂದ ಓದಿರಾತು.

ನಿಂಗೊಗೆ ನೆಗೆ ಬಂದರೆ ಎನಗೆ ತಿಳಿಸಿಕ್ಕಿ. ಅಷ್ಟೇ.
ಎಂತಕೆ ಅಂಬಗ ಈ ಎರಡನೇ ವ್ಯಕ್ತಿಯ ಸುರುವಾಣದೊನೊಟ್ಟಿಂಗೆ ತೆಕ್ಕೊಂಡು ಬಂದ್ಸು ಹೇದು ಕೇಳ್ತಿರೋ ……. ಕೆಳ ಓದಿ –
ಚೆನ್ನೈವಾಣಿ: ‘ಮಿತ್ರರು ಇರೆಕ್ಕಾದ್ದು ಅಪ್ಪು, ಆದರೆ., ಅದು ಪೀಡೆ ಅಪ್ಪಲಾಗ ‘.
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಕಥೆಯೂ, ಅದರ್ಲಿಪ್ಪ ನೀತಿಯೂ ಲಾಯ್ಕಿದ್ದು. ಇದರ ಓದುವಾಗ ಎನಗೆ ಕಾಲೇಜಿನ ದೋಸ್ತಿಗಳ ನೆಂಪಾವುತ್ತು. ನಮ್ಮತ್ರ ಎಂತಾರು ನೋಟ್ಸೋ ಮತ್ತೊಂದೋ ಇದ್ದು ಹೇಳಿರೆ, ಆಹಾ ಎಷ್ಟು ಚೆಂದಕೆ ಬಂದು ಮಾತಾಡುಸಿ ತೆಕ್ಕೊಂಡು ಹೋಕು ಅದರ! ಮತ್ತೆ ಮರದಿನಂದ ಮೋರೆ ಕಂಡ್ರೆ ನೆಗೆಯೂ ಮಾಡವು. ಹುಳ್ಕು ಹೊಣವದೇ ಕೆಲಸ ಕೆಲವಕ್ಕೆ. ಎರಡ್ನೇ ಕತೆಲಿ ಬಪ್ಪಾಂಗಿಪ್ಪ ಮಿತ್ರರು ಸಿಕ್ಕುದು ಅಪುರೂಪ.

  [Reply]

  VA:F [1.9.22_1171]
  Rating: +1 (from 1 vote)
 2. ಸುಮನ ಭಟ್ ಸಂಕಹಿತ್ಲು.

  ತುಂಬಾ ಲಾಯಿಕಾಯಿದು ನಿರೂಪಣೆ..
  ಹಾಂಗಿಪ್ಪ ೨ ನಮುನೆಯ ಜನಂಗೊ ಇಪ್ಪದು ಅಪ್ಪು…
  ಬರದ ರೀತಿಯಂತೂ ಬಹಳ ಲಾಯಿಕಾಯಿದು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°ವಿದ್ವಾನಣ್ಣಗೋಪಾಲಣ್ಣvreddhiಚುಬ್ಬಣ್ಣನೀರ್ಕಜೆ ಮಹೇಶವೇಣೂರಣ್ಣಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿಶರ್ಮಪ್ಪಚ್ಚಿವಾಣಿ ಚಿಕ್ಕಮ್ಮಪೆರ್ಲದಣ್ಣಸುಭಗದೊಡ್ಮನೆ ಭಾವಅಕ್ಷರದಣ್ಣಸರ್ಪಮಲೆ ಮಾವ°ಅನುಶ್ರೀ ಬಂಡಾಡಿಚೂರಿಬೈಲು ದೀಪಕ್ಕಚೆನ್ನಬೆಟ್ಟಣ್ಣಕೇಜಿಮಾವ°ಜಯಗೌರಿ ಅಕ್ಕ°ಕಜೆವಸಂತ°ವಿನಯ ಶಂಕರ, ಚೆಕ್ಕೆಮನೆಪುಣಚ ಡಾಕ್ಟ್ರುಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ