ರಾಮಾಯಣ ಸಾರ

September 22, 2012 ರ 4:02 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೋಸಲದೇಶದ ದಶರಥರಾಜಂಗೆ
ಹಿರಿಮಗನಾಗಿ ಜನಿಸಿದ ರಾಮ
ಕೌಸಲ್ಯಾದೇವಿಯ ಹಿರಿಮೆಯ ಪುತ್ರಂಗೆ
ಕರಮುಗಿವೊ° ಭಕ್ತಿಲಿ ನಮಿಸುತ್ತ ನಾಮ॥೧॥

ದಶಾವತಾರದ ರಾಮಾವತಾರವೆ
ಧರಣಿಲಿ ಬಾಳಿದ ಪುರುಷೋತ್ತಮ
ಲೋಕದ ಜನರ ಕಷ್ಟ ಕರಗಿಸುವ
ಲಾಲಿತ್ಯವೆನಿಪ ಲೋಕಾಭಿರಾಮ॥೨॥

ಅಪ್ಪನ ಮಾತಿನ ಶಿರಸಾವಹಿಸಿ
ತೀರ್ಪಿತ್ತ ಕೈಕೆಯ ಹಠವ ಪೂರೈಸಿ
ಕೌಸಲ್ಯೆ ಸುಮಿತ್ರೆಯರ ಕಣ್ಣೀರೊರೆಸಿ
ಹೊರಟನೆ ಹದಿನಾಕು ವರ್ಷಕ್ಕೆ ವನವಾಸಿ॥೩॥

ರಾಮನ ಹೆಂಡತಿ ರಮಣಿ ಸೀತಾಮಣಿ
ಪತಿವ್ರತೆ ಸಾಲಿಲ್ಲಿ ಮಿಂಚುವ ಮಾನಿನಿ
ಸೋದರ ವಾತ್ಸಲ್ಯಕೆ ಭರತನೆ ಪ್ರಥಮ
ಅತ್ತಿಗೆಯು ಲಕ್ಷ್ಮಣಂಗೆ ಅಬ್ಬಗೆ ಸಮ॥೪॥

ಮಾಯಮೃಗಕೆ ಮನಸೋತ ಸೀತೆ
ಮಮ್ಮಲ ಮರುಗಿರು ಲಂಕೆಲಿ ಮತ್ತೆ
ರಾವಣನ ಹಿಡಿತಕ್ಕೆ ದಕ್ಕಿದ್ದಿಲ್ಲೆ ಮಾತೆ
ಅವನಿಲಿ ಅವತರಿಸಿದ ಪುನೀತೆ ಪ್ರಖ್ಯಾತೆ॥೫॥

ರಾಮ ರಾವಣರ ಯುದ್ಧದ ತತ್ವ
ಅಡಗಿಸಿದ ಅವತಾರಿ ಅಸುರೀ ಕೃತ್ಯ
ಮನುಜಂಗೆ ರಾಮ ಲಕ್ಷ್ಮಣರ ಉಪದೇಶ
ಮಾನಿನಿಯರಿಂಗೆಲ್ಲ ಸೀತೆಯೇ ಆದರ್ಶ॥೬॥

ರಾಮಾಯಣ ಮಹಾಭಾರತ ಪುರಾಣ ಜ್ಞಾನ
ಯುಗ ಯುಗ ಕಳುದರು ನವೀನ ಕಥನ
ಬಯಸಿದ್ದವಿಲ್ಲೆ ವ್ಯಾಸ, ವಾಲ್ಮೀಕಿ ಪ್ರಶಸ್ತಿ ಸನ್ಮಾನ
ಬಯಕೆ ನಿರೀಕ್ಷೆಲಿ ಇದ್ದದೇ ಲೋಕ ಕಲ್ಯಾಣ ॥೭॥

***

ಲೇಃ ವಿಜಯತ್ತೆ (ವಿಜಯಾಸುಬ್ರಹ್ಮಣ್ಯ,ಕುಂಬಳೆ)

 

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಮಾನೀರ್ ಮಾಣಿ
  ಮಾನೀರ್ ಮಾಣಿ

  ಚೊಲೋ ಆಯ್ದು ವಿಜಯತ್ತೇ….

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಅಜ್ಜಕಾನ ಭಾವದೀಪಿಕಾಚೂರಿಬೈಲು ದೀಪಕ್ಕಮಂಗ್ಳೂರ ಮಾಣಿಮಾಷ್ಟ್ರುಮಾವ°ಅಕ್ಷರದಣ್ಣಅಡ್ಕತ್ತಿಮಾರುಮಾವ°ವಿದ್ವಾನಣ್ಣಒಪ್ಪಕ್ಕಕೆದೂರು ಡಾಕ್ಟ್ರುಬಾವ°ಪೆಂಗಣ್ಣ°ತೆಕ್ಕುಂಜ ಕುಮಾರ ಮಾವ°ಅನಿತಾ ನರೇಶ್, ಮಂಚಿಸುಭಗಮಾಲಕ್ಕ°ದೊಡ್ಡಭಾವಸಂಪಾದಕ°ಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುವೇಣಿಯಕ್ಕ°ಬಂಡಾಡಿ ಅಜ್ಜಿಕಜೆವಸಂತ°ಚುಬ್ಬಣ್ಣಜಯಗೌರಿ ಅಕ್ಕ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ