ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 41- 43

May 24, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ಲೋಕ

ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ ।
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನನಾಶನಮ್ ॥೪೧॥

ಪದವಿಭಾಗ

ತಸ್ಮಾತ್ ತ್ವಮ್ ಇಂದ್ರಿಯಾಣಿ ಆದೌ ನಿಯಮ್ಯ ಭರತ-ಋಷಭ । ಪಾಪ್ಮಾನಮ್ ಪ್ರಜಹಿ ಹಿ ಏನಮ್ ಜ್ಞಾನ-ವಿಜ್ಞಾನ-ನಾಶನಮ್ ॥   

ಅನ್ವಯ

ಹೇ ಭರತರ್ಷಭ !, ತಸ್ಮಾತ್ ತ್ವಮ್ ಆದೌ ಇಂದ್ರಿಯಾಣಿ ನಿಯಮ್ಯ, ಜ್ಞಾನ-ವಿಜ್ಞಾನ-ನಾಶನಮ್ ಏನಂ ಪಾಪ್ಮಾನಂ ಪ್ರಜಹಿ ಹಿ ।

ಪ್ರತಿಪದಾರ್ಥ

ಹೇ ಭರತ-ಋಷಭ! – ಏ ಭರತ ವಂಶಲ್ಲಿ ಶ್ರೇಷ್ಠನಾದ ಅರ್ಜುನ!, ಭರತ-ಋಷಭ – ಭರತ ವಂಶಲ್ಲಿ ಶ್ರೇಷ್ಠನಾದವನೇ, ತಸ್ಮಾತ್ – ಹಾಂಗಾಗಿ, ತ್ವಮ್ – ನೀನು , ಆದೌ – ಈಗ ಮದಾಲು, ಇಂದ್ರಿಯಾಣಿ – ಇಂದ್ರಿಯಂಗಳ,  ನಿಯಮ್ಯ – ನಿಯಂತ್ರುಸಿ, ಜ್ಞಾನ-ವಿಜ್ಞಾನ-ನಾಶನಮ್  – ಜ್ಞಾನ  ಶುದ್ಧಾತ್ಮನ ವೈಜ್ಞಾನಿಕ ಜ್ಞಾನಂಗಳ ನಾಶಮಾಡುವ,  ಏನಮ್ ಪಾಪ್ಮಾನಮ್ – ಈ ಪಾಪದ ಮಹಾಸಂಕೇತವಾದ್ದರ, ಪ್ರಜಹಿ – ತಡೆಹಿಡುಕ್ಕೊ, ಹಿ – ಖಂಡಿತವಾಗಿಯೂ.

ಅನ್ವಯಾರ್ಥ

[ಇಂದ್ರಿಯಂಗೊ, ಮನಸ್ಸು, ಬುದ್ಧಿ –  ಇವು ಕಾಮದ ನೆಲೆಗೊ. ಇವುಗಳ ಮೂಲಕ ಕಾಮವು ಜ್ಞಾನವ ಕವಿದು ಸಾಧಕನ ಕಂಗೆಡೆಸುತ್ತು.] ಹಾಂಗಾಗಿ, ಭರತವಂಶಜರಲ್ಲಿ ಶ್ರೇಷ್ಠನಾದ ಅರ್ಜುನನೇ!, ಸುರುವಿಲ್ಲಿಯೇ ಇಂದ್ರಿಯಂಗಳ ನಿಯಂತ್ರಿಸಿ, ಪಾಪದ ಮಹಾಸಂಕೇತವಾದ ಈ ಕಾಮಕ್ಕೆ ಕಡಿವಾಣ ಹಾಕು. ಜ್ಞಾನ ಮತ್ತು ಆತ್ಮ ಸಾಕ್ಷಾತ್ಕಾರಂಗಳ ನಾಶಮಾಡುವ ಈ ಕಾಮವ ಧ್ವಂಸಮಾಡು.

ತಾತ್ಪರ್ಯ / ವಿವರಣೆ

ಕಾಮವು ಆತ್ಮಸಾಕ್ಷಾತ್ಕಾರದ ಮತ್ತು ಆತ್ಮದ ನಿಶ್ಚಿತ ಜ್ಞಾನದ ಹಂಬಲವ ನಾಶಮಾಡುತ್ತು. ಇದು ಮನುಷ್ಯನ ಅತ್ಯಂತ ಪಾಪಿಯಾದ ಶತ್ರು. ಇದರ ನಿಯಂತ್ರುಸುಲೆ ಸುರುವಿಂದಲೇ ಇಂದ್ರಿಯಂಗಳ ಹತೋಟಿಲಿ ಮಡುಗೆಕು ಹೇದು ಭಗವಂತ ಅರ್ಜುನಂಗೆ ಸಾರುತ್ತ. ಜ್ಞಾನ ಹೇಳಿರೆ ಆತ್ಮವು ದೇಹವಲ್ಲ ಎಂಬ ಅರಿವು. ವಿಜ್ಞಾನ ಹೇಳಿರೆ ಆತ್ಮದ ಸ್ವರೂಪ ಮತ್ತು ಪರಮಾತ್ಮನನೊಡನೆ ಇಪ್ಪ ಅದರ ಸಂಬಂಧ ಇವುಗಳ ಬಗ್ಗೆ ಇಪ್ಪ ಜ್ಞಾನ.  ಭಗವದ್ಗೀತೆಲಿ ಹೇಳಿಪ್ಪ ಪ್ರಕಾರ, ಜೀವಿಗೊ ಭಗವಂತನ ವಿಭಿನ್ನಾಂಶ. ಆದ್ದರಿಂದ ಅವರ ಅಸ್ತಿತ್ವದ ಉದ್ದೇಶವೇ ಭಗವಂತನ ಸೇವೆ. ಈ ಪ್ರಜ್ಞೆಗೆ ಕೃಷ್ಣಪ್ರಜ್ಞೆ ಹೇಳಿ ಹೆಸರು. ಆದ್ದರಿಂದ ಬದುಕಿನ ಸುರುವಿಂದಲೇ ಮನುಷ್ಯ° ಕೃಷ್ಣಪ್ರಜ್ಞೆಯ ಮೈಗೂಡುಸೆಕು. ಇದರಿಂದ ಮತ್ತೆ ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯ ಬೆಳೆಸಿಗೊಂಡು ಅದಕ್ಕೆ ಅನುಗುಣವಾಗಿ ನಡಕ್ಕೊಂಬಲೆ ಸಾಧ್ಯ ಆವುತ್ತು.

ಪ್ರತಿಯೊಂದು ಜೀವಿಗೂ ಭಗವಂತನ ಪ್ರೇಮವು ಸಹಜ. ಕಾಮವು ಈ ಪ್ರೇಮದ ವಕ್ರ ಪ್ರತಿಬಿಂಬ. ಆದರೆ ಸುರುವಿಂದಲೇ ಕೃಷ್ಣಪ್ರಜ್ಞೆಲಿ ಶಿಕ್ಷಣ ಪಡದವಂಗೆ ಭಗವಂತನಲ್ಲಿನ ಪ್ರೇಮವೇ ಕಾಮವಾಗಿ ಪರಿಣಮಿಸುಗು. ಭಗಂತನಲ್ಲಿನ ಪ್ರೇಮವೇ ಕಾಮ ಆದಪ್ಪಗ ಮತ್ತೆ ಇತ್ತು ಐಹಿಕ ಕಾಮದ ಚಪಲತೆ ಉಂಟಪ್ಪಲೆ ಇಲ್ಲೆ. ಆ ಹಂತಕೆ ತಲುಪಿದವಂಗೆ ಐಹಿಕ ಕಾಮವು ಹೇಸಿಕೆ ಅನುಸುಗು. ಕೃಷ್ಣಪ್ರಜ್ಞೆಯ ಶಕ್ತಿ ಎಷ್ಟು ಹೇಳಿರೆ ಭಗವಂತನ ಪ್ರೇಮವೇ ಜೀವನದ ಕಾಮ ಹೇಳ್ವ ಸ್ಥಿತಿಗೆ ಬಂದಪ್ಪಗ ಮತ್ತೆ ಈ ಭೌತಿಕ ಕಾಮದ ಸ್ಥಿತಿಗೆ ಹಿಂತುರುಗುದು ಕಷ್ಟ. ಆದ್ದರಿಂದ ಬದುಕಿನ ಯಾವುದೇ ಹಂತಲ್ಲಿ ಅಥವಾ ಅದರ ತುರ್ತಿನ ಅರ್ಥಮಾಡಿಕೊಂಡ ಕಾಲಂದಾಗಲೀ ಕೃಷ್ಣಪ್ರಜ್ಞೆಂದ ಇಂದ್ರಿಯಂಗಳ ನಿಯಂತ್ರಿಸಿ ಭಗವಂತನ ಪ್ರೇಮಪೂರ್ವಕ ಸೇವೆಯ ಪ್ರಾರಂಭಿಸಲಕ್ಕು. ಕಾಮವ ಭಗವಂತನ ಪ್ರೇಮವಾಗಿ ಪರಿವರ್ತಿಸಿಗೊಂಬಲಕ್ಕು. ಭಗವತ್ಪ್ರೇಮವೇ ಮನುಷ್ಯ ಜೀವನದ ಅತ್ಯಂತ ಪರಿಪೂರ್ಣ ಹಂತ.

ಹಾಂಗಾಗಿ , ಆತ್ಮಸಾಕ್ಷಾತ್ಕಾರದ ನೀಚ ವೈರಿಯಾದ ಕಾಮವ ನಾವು ಮೊದಲ ಹಂತಲ್ಲೇ ನಿಯಂತ್ರಿಸೆಕು. ಈ ಶತ್ರುವಿನ ಮೊದಲ ಪ್ರವೇಶದ್ವಾರಲ್ಲೇ ನಿಯಂತ್ರಣ ಮಾಡೆಕು. ನಮ್ಮ ಜ್ಞಾನ – ವಿಜ್ಞಾನ ಶಕ್ತಿಯ ನಾಶಮಾಡುವ ಈ ಪಾಪಿಯ ಒದ್ದೋಡುಸುವದು ಹೇಳಿರೆ ಹೇಂಗೆ –

ಶ್ಲೋಕ

ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ ।
ಮನಸಸ್ತು ಪರಾ ಬುದ್ಧಿಃ ಯೋಬುದ್ಧೇಃ ಪರತಸ್ತು ಸಃ ॥೪೨॥

ಪದವಿಭಾಗ

ಇಂದ್ರಿಯಾಣಿ ಪರಾಣಿ ಆಹುಃ ಇಂದ್ರಿಯೇಭ್ಯಃ ಪರಮ್ ಮನಃ । ಮನಸಃ ತು ಪರಾ ಬುದ್ಧಿಃ ಯಃ ಬುದ್ಧೇಃ ಪರತಃ ತು ಸಃ ॥

ಅನ್ವಯ

ಇಂದ್ರಿಯಾಣಿ ಪರಾಣಿ ಆಹುಃ, ಇಂದ್ರಿಯೇಭ್ಯಃ ಮನಃ ಪರಂ, ಮನಸಃ ತು ಬುದ್ಧಿಃ ಪರಾ, ಯಃ ತು ಬುದ್ಧೇಃ ಪರತಃ ಸಃ ಆತ್ಮಾ ಅಸ್ತಿ ।

ಪ್ರತಿಪದಾರ್ಥ

ಇಂದ್ರಿಯಾಣಿ – ಇಂದ್ರಿಯಂಗೊ, ಪರಾಣಿ – ಶ್ರೇಷ್ಠವು, ಆಹುಃ – ಹೇದು ಹೇಳಿದ್ದವು, ಇಂದ್ರಿಯೇಭ್ಯಃ – ಇಂದ್ರಿಯಂಗಳಿಂದಲೂ, ಮನಃ – ಮನಸ್ಸು, ಪರಮ್ – ಶ್ರೇಷ್ಠವಾದ್ದು, ಮನಸಃ – ಮನಸ್ಸಿನಿಂದಲ್ಲೂ, ತು – ಕೂಡ, ಬುದ್ಧಿಃ – ಬುದ್ಧಿಯು, ಪರಾ – ಶ್ರೇಷ್ಠವು,  ಯಃ – ಆರು, ತು – ಆದರೋ, ಬುದ್ಧೇಃ – ಬುದ್ಧಿಂದಲೂ, ಪರತಃ – ಶ್ರೇಷ್ಥವಾಗಿಪ್ಪದು, ಸಃ  ಆತ್ಮಾ ಅಸ್ತಿ – ಅವ° ಆತ್ಮ ಆಗಿದ್ದ.

ಅನ್ವಯಾರ್ಥ

ಕ್ರಿಯಾಶಾಲಿಯಾದ ಇಂದ್ರಿಯಂಗೊ ಜಡವಸ್ತುವಿಂಗಿಂತ ಶ್ರೇಷ್ಠ. ಮನಸ್ಸು ಇಂದ್ರಿಯಂಗೊಕ್ಕಿಂತ ಶ್ರೇಷ್ಠ, ಬುದ್ಧಿಯು ಮನಸ್ಸಿಗಿಂತ ಇನ್ನೂ ಬಹು ಶ್ರೇಷ್ಠ ಮತ್ತು ಆತ್ಮ° ಬುದ್ಧಿಂದಲೂ ಅತೀ ಶ್ರೇಷ್ಠ.

ತಾತ್ಪರ್ಯ / ವಿವರಣೆ

ಇಂದ್ರಿಯಂಗೊ ಕಾಮ ಚಟುವಟಿಕೆಗಳ ವಿವಿಧ ದ್ವಾರಂಗೊ. ಕಾಮವು ದೇಹಲ್ಲಿ ಅಡಗಿದ್ದು. ಅದು ಇಂದ್ರಿಯಂಗಳ ಮೂಲಕ ಹೊರಹೊಮ್ಮುತ್ತು. ಆದ್ದರಿಂದ ಇಡೀ ಹೇಹಕ್ಕಿಂತ ಇಂದ್ರಿಯಂಗೊ ಶ್ರೇಷ್ಠ. ಶ್ರೇಷ್ಠ ಪ್ರಜ್ಞೆ / ಕೃಷ್ಣಪ್ರಜ್ಞೆ ಇಪ್ಪಗ ಈ ದ್ವಾರಂಗಳ ಬಳಕೆಗೆ ಅವಕಾಶ ಇಲ್ಲೆ. ಕೃಷ್ಣಪ್ರಜ್ಞೆಲಿ ಆತ್ಮವು ದೇವೋತ್ತಮ ಪರಮ ಪುರುಷನ ಹತ್ರೆ ನೇರ ಸಂಪರ್ಕ ಮಾಡಿಗೊಳ್ಳುತ್ತು. ಹಾಂಗಾಗಿ ದೈಹಿಕ ಕ್ರಿಯೆಗಳ ವ್ಯವಸ್ಥೆ ಅಕೇರಿಗೆ ಪರಮಾತ್ಮನಲ್ಲಿ ಮುಕ್ತಾಯ ಆವುತ್ತು. ದೈಹಿಕ ಕ್ರಿಯೆಗೊ ಹೇಳಿರೆ ಇಂದ್ರಿಯಂಗಳ ಕೆಲಸ ಕಾರ್ಯಂಗೊ. ಇಂದ್ರಿಯಂಗಳ ತಡೆಹಿಡಿವದು ಹೇಳಿರೆ ಎಲ್ಲಾ ದೈಹಿಕ ಕ್ರಿಯೆಗಳ ನಿಲ್ಲುಸುವದು. ಆದರೆ, ಮನಸ್ಸು ಮಾತ್ರ ಕ್ರಿಯಾಶೀಲವಾದ್ದ್ದರಿಂದ , ದೇಹವು ಮೌನವಾಗಿ ವಿಶ್ರಾಂತಿಲಿದ್ದರೂ ಮನಸ್ಸು ಮಾತ್ರ ಕೆಲಸ ಮಾಡಿಗೊಂಡೇ ಇರುತ್ತು. ಕನಸ್ಸು ಕಾಂಬಗ ಹೀಂಗಾವುತ್ತು. ಆದರೆ, ಬುದ್ಧಿಶಕ್ತಿಯ ನಿರ್ಧಾರವು ಮನಸ್ಸಿಂದಲೂ ಮೇಗೆ. ಬುದ್ಧಿಶಕ್ತಿಯ ಮೇಲೆ ಆತ್ಮ ಇದ್ದು. ಆದ್ದರಿಂದ ಆತ್ಮವು ಪರಾತ್ಪರದ ಒಟ್ಟಿಂಗೆ ನೇರವಾಗಿ ಕಾರ್ಯತೊಡಗಿದರೆ ಅದಕ್ಕೆ ಅಧೀನವಾದ ಬುದ್ಧಿಶಕ್ತಿ, ಮನಸ್ಸು ಮತ್ತು ಇಂದ್ರಿಯಂಗೊ ತನ್ನಿಂತಾನೇ ಅದರಲ್ಲಿ ಚುರುಕುಗೊಳ್ಳುತ್ತು. ಅರ್ಥಾತ್ ಮನಸ್ಸು ಸದಾ ಭಗವಂತನಲ್ಲೇ / ಭಗವಂತನ ಸೇವೆಲಿಯೇ ತೊಡಗಿರೆ ಇಂದ್ರಿಯಂಗೊಕ್ಕೆ ಬೇರೆ ಕೆಲಸಕ್ಕೆ ಅವಕಾಶ ಇಲ್ಲೆ.  ಮನಸ್ಸು ಭಗವಂತನ ಅಲೌಕಿಕ ಸೇವೆಲಿ ನಿರತವಾಗಿದ್ದರೆ ಕೀಳು ಪ್ರವೃತ್ತಿಲಿ ಅದು ತೊಡಗಲೆ ಅವಕಾಶವೇ ಇಲ್ಲೆ. ಆದ್ದರಿಂದ ಆತ್ಮವು ಇಂದ್ರಿಯ ವಸ್ತುಗೊ, ಇಂದ್ರಿಯಂಗೊ , ಮನಸ್ಸು ಮತ್ತು ಬುದ್ಧಿ ಇವೆಲ್ಲವುಕ್ಕಿಂತ ಶ್ರೇಷ್ಠ. ಆದ್ದರಿಂದ, ಆತ್ಮಸ್ವರೂಪವ ನೇರವಾಗಿ ಅರ್ತುಗೊಂಬದೇ ಈ ಇಡೀ ಸಮಸ್ಯೆಗೊಕ್ಕೆ ಪರಿಹಾರ.

ಬುದ್ಧಿಯ ಬಳಸಿಗೊಂಡು ಮನುಷ್ಯ° ಆತ್ಮದ ಸ್ವರೂಪವ ಕಂಡುಕೊಳ್ಳೆಕು. ಮತ್ತೆ ಮನಸ್ಸಿನ ಸದಾ ಕೃಷ್ಣಪ್ರಜ್ಞೆಲಿ ತೊಡಗಿಸಿಕೊಳ್ಳೆಕು. ಇದು ಇಡೀ ಸಮಸ್ಯೆಗೆ ಪರಿಹಾರ.  ಹೇಂಗೆ ದುಷ್ಟ ಶಕ್ತಿಗೊ ಇರ್ತವೋ, ಹಾಂಗೇ, ನಮ್ಮ ಒಳಿತಿನ ಬಯಸಿ ದೇವತಾಶಕ್ತಿಗೊ ನಮ್ಮ ರಕ್ಷಣಗೆ ನಿಂದಿರ್ತವು. ಪ್ರತಿಯೊಂದು ಇಂದ್ರಿಯಂಗೊಕ್ಕೆ ಒಬ್ಬೊಬ್ಬ ದೇವತೆ ಅಭಿಮಾನಿ. ನಮ್ಮ ಇಂದ್ರಿಯದ ಅಭಿಮಾನ ದೇವತೆ ಇಂದ್ರ, ಮನಸ್ಸಿನ ಅಭಿಮಾನಿ ಶಿವ-ಪಾರ್ವತಿ, ಬುದ್ಧಿಯ ಅಭಿಮಾನಿ ಸರಸ್ವತಿ, ಬುದ್ಧಿಯಿಂದ ಆಚಿಗೆ ಇಪ್ಪದು ಆತ್ಮ., ಅದುವೇ ಆ ಭಗವಂತನ ಸ್ಥಾನ. ನಾವು ನಮ್ಮ ಇಂದ್ರಿಯ ಮನಸ್ಸು ಬುದ್ಧಿಯ ನಿಯಂತ್ರುಸುವ ದೇವತಾ ಶಕ್ತಿಗೆ ಶರಣಾಯೇಕು. ಅಷ್ಟಪ್ಪಗ ಆ ದೇವತಾ ಶಕ್ತಿಗಳ ಸಹಾಯಂದ ನಾವು ಜ್ಞಾನವ ಪಡದು ಭಗವಂತನ ಕಾಂಬಲೆಡಿಗು. ನಮ್ಮ ಪ್ರತಿಯೊಂದು ಇಂದ್ರಿಯಂಗೊಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದವು. ಕಣ್ಣಿಂಗೆ ಸೂರ್ಯ, ಕೆಮಿಗೆ ಚಂದ್ರ, ಬಾಯಿಗೆ ಅಗ್ನಿ, ನಾಲಗಗೆ ಅರುಣ, ಮೂಗಿಂಗೆ ಅಶ್ವಿನಿದೇವತೆಗೊ, ಕೈಗೆ ಇಂದ್ರ (ಸರ್ವೇಂದ್ರಿಯಂಗೊಕ್ಕೂ ಇವನೇ ಒಡೆಯನೂ ಅಪ್ಪು), ಕಾಲಿಂಗೆ ಇಂದ್ರ ಪುತ್ರ ಉಪೇಂದ್ರ, ವಿಸರ್ಜನಾಂಗಕ್ಕೆ ಮತ್ತು ಸಂತಾನಕ್ಕೆ ಯಮ  ಸಂಬಂಧಪಟ್ಟ ಅಂಗ ದೇವತೆಗೊ. ಹೀಂಗೆ ಪ್ರತಿಯೊಂದು ದೇವತೆಗೊ ನವಗೆ ನಮ್ಮ ಶತ್ರುವಿಂದ ಪಾರಾಗಿಯೊಂಬಲೆ ಸಹಾಯ ಮಾಡುತ್ತುಹೇದು ಬನ್ನಂಜೆಯವು ಅವರ ವ್ಯಾಖ್ಯಾನಲ್ಲಿ ಹೇಳಿದ್ದವು.

ಶ್ಲೋಕ

ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ ।
ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್ ॥೪೩॥

ಪದವಿಭಾಗ

ಏವಂ ಬುದ್ಧೇಃ ಪರಮ್ ಬುದ್ಧ್ವಾ ಸಂಸ್ತಭ್ಯ ಆತ್ಮನಮ್ ಆತ್ಮನಾ । ಜಹಿ ಶತ್ರುಮ್ ಮಹಾ-ಬಾಹೋ ಕಾಮ-ರೂಪಮ್ ದುರಾಸದಮ್ ॥

ಅನ್ವಯ

ಹೇ ಮಹಾ-ಬಾಹೋ!, ಏವಮ್ ಆತ್ಮನಂ ಬುದ್ಧೇಃ ಪರಂ ಬುದ್ಧ್ವಾ ಆತ್ಮನಾ ಆತ್ಮನಂ ಸಂಸ್ತಭ್ಯ, ಕಾಮ-ರೂಪಂ ದುರಾಸದಂ ಶತ್ರುಂ ಜಹಿ ।

ಪ್ರತಿಪದಾರ್ಥ

ಹೇ ಮಹಾ-ಬಾಹೋ! – ಮಹಾಬಾಹುವೇ!, ಏವಮ್ – ಹೀಂಗೆ, ಆತ್ಮಾನಮ್ – ಮನಸ್ಸ,  ಬುದ್ಧೇಃ ಪರಮ್ – ಬುದ್ಧಿಂದಲೂ  – ಶ್ರೇಷ್ಠವಾದ್ದು, ಬುದ್ಧ್ವಾ – ತಿಳುದು, ಆತ್ಮನಾ – ಸಾವಧಾನದ ಬುದ್ಧಿಂದ, ಸಂಸ್ತಭ್ಯ – ಸ್ಥಿರಗೊಳುಸಿ, ಕಾಮ-ರೂಪಮ್ – ಕಾಮದ ಆಕಾರಲ್ಲಿಪ್ಪ, ದುರಾಸದಮ್ – ದುರ್ದಮವಾದ, ಶತ್ರುಮ್ – ವೈರಿಯ,  ಜಹಿ – ಗೆದ್ದುಗೊ.

ಅನ್ವಯಾರ್ಥ

ಏ ಮಹಾಬಾಹುವೇ!, ಮನಸ್ಸು ಬುದ್ಧಿಂದಲೂ ಶ್ರೇಷ್ಠವಾದ್ದು ಹೇದು ತಿಳುದು, ಸಮಧಾನಂದ ಆ ಬುದ್ಧಿಯ ಸ್ಥಿರಗೊಳುಸಿ, ಕಾಮದ ರೂಪಲ್ಲಿಪ್ಪ, ಕಠಿಣವಾದ ಆ ವೈರಿಯ ಗೆದ್ದುಗೊ.

ತಾತ್ಪರ್ಯ / ವಿವರಣೆ

ಭೌತಿಕ ಇಂದ್ರಿಯಂಗೊ, ಮನಸ್ಸು ಮತ್ತು ಬುದ್ಧಿ ಇವೆಲ್ಲವನ್ನೂ ಮನುಷ್ಯ° ಮೀರಿದವ°. ಇದರ ಅರ್ತುಗೊಂಡು, ಮನಸ್ಸ ಉದ್ದೇಶಪೂರ್ವಕವಾಗಿ ಅಲೌಕಿಕ ಬುದ್ಧಿಂದ (ಕೃಷ್ಣಪ್ರಜ್ಞೆಂದ) ದೃಢಗೊಳುಸೆಕು. ಹೀಂಗೆ ಆಧ್ಯಾತ್ಮಿಕ ಶಕ್ತಿಂದ ಎಂದೂ ತೃಪ್ತಿಪಡುಸಲೆ ಸಾಧ್ಯವಿಲ್ಲದ್ದ ಈ ಕಾಮ ಹೇಳ್ವ ವೈರಿಯ ಗೆಲ್ಲೆಕು.
ನಿರಾಕಾರ ಶೂನ್ಯತೆಯ ಅಂತಿಮ ಗುರಿಯಾಗಿ ಪರಿಗಣುಸಲಾಗ. ದೇವೋತ್ತಮ ಪರಮ ಪುರುಷನ ನಿತ್ಯಸೇವಕ ತಾನು ಹೇಳಿ ತಿಳುಕ್ಕೊಂಡು ಕೃಷ್ಣಪ್ರಜ್ಞೆಯ ಸಾಧುಸೆಕು ಹೇಳಿ ಈ ಅಧ್ಯಾಯವು ನಿರ್ಣಾಯಕವಾಗಿ ಸಾರುತ್ತು. ಬದುಕಿನ ಐಹಿಕ ಅಸ್ತಿತ್ವಲ್ಲಿ ಕಾಮಪ್ರವೃತ್ತಿಗಳಿಂದ ಭೌತಿಕ ನಿಸರ್ಗ ಸಂಪನ್ಮೂಲಂಗಳ ಮೇಲೆ ಪ್ರಭುತ್ವ ನಡಸುವ ಆಸೆಂದ ನಿಶ್ಚಯವಾಗಿಯೂ ಮನುಷ್ಯ ಪ್ರಭಾವಿತನಾಗುತ್ತ. ಯಜಮಾಂತಿಗೆ ನಡಸುವ ಆಸೆ ಮತ್ತು ಇಂದ್ರಿಯಭೋಗದ ಆಸೆ ಬದ್ಧ ಆತ್ಮದ ಅತ್ಯಂತ ದೊಡ್ಡ ಶತ್ರು. ಆದರೆ, ಕೃಷ್ಣಪ್ರಜ್ಞೆಂದ ಬಲವಾದ ಭೌತಿಕ ಇಂದ್ರಿಯಂಗಳನ್ನೂ , ಮನಸ್ಸನ್ನೂ ಮತ್ತು ಬುದ್ಧಿಯನ್ನೂ ಹತೋಟಿಲಿ ಮಡಿಕ್ಕೊಂಬಲೆ ಸಾಧ್ಯ. ಇದ್ದಕ್ಕಿದ್ದ ಹಾಂಗೆ ಆರೂ ಕರ್ಮವನ್ನೂ ನಿಯತ ಕಾರ್ಯಂಗಳನ್ನೂ ಬಿಡುವ ಹಾಂಗಿಲ್ಲೆ. ಆದರೆ, ಕ್ರಮೇಣ ಕೃಷ್ಣಪ್ರಜ್ಞೆಯ ಬೆಳೆಸಿಗೊಂಡು ತನ್ನ ಶುದ್ಧ ವ್ಯಕ್ತಿತ್ವದ ಕಡೆಂಗೆ ಬುದ್ಧಿಯ ದೃಢವಾಗಿ ನಿರ್ದೇಶಿಸುಸಲೆ ಸಾಧ್ಯ. ಹೀಂಗೆ ಮಾಡಿ ಭೌತಿಕ ಇಂದ್ರಿಯಂಗಳ ಮತ್ತು ಮನಸ್ಸಿನ ಪ್ರಭಾವಕ್ಕೆ ಒಳಗಾಗದ್ದೆ, ಆಧ್ಯಾತ್ಮಿಕ ಸ್ಥಿತಿಲಿ ನೆಲೆಗೊಂಬಲಕ್ಕು. ಐಹಿಕ ಅಸ್ತಿತ್ವದ ಅಪರಿಪಕ್ವ ಘಟ್ಟಂಗಳಲ್ಲಿ ತಾತ್ವಿಕ ಊಹೆಗೊ ಆಗಲೀ ಮತ್ತು ಯೋಗಾಸನಂಗಳ ಅಭ್ಯಾಸ ಹೇಳಿ ಹೇಳಿಗೊಂಬ ಅಭ್ಯಾಸಂದ ಇಂದ್ರಿಯ ನಿಗ್ರಹ ಕೃತಕ ಪ್ರಯತ್ನಂಗಳಿಂದ ಮನುಷ್ಯ ಆಧ್ಯಾತ್ಮಿಕ ಬದುಕಿಂಗೆ ನೇರ ಕಾಲುಮಡುಗಲೆ ಸಾಧ್ಯವಿಲ್ಲೆ. ಅದು ಶಾರೀರಿಕ ವ್ಯಾಯಮಕ್ಕಷ್ಟೆ ಸೀಮಿತ. ಮನುಷ್ಯಂಗೆ ಉನ್ನತ ಬುದ್ಧಿಂದ ಉತ್ತಮ ಗುರುವಿಂದ ಕೃಷ್ಣಪ್ರಜ್ಞೆಯ ಶಿಕ್ಷಣ ಅಗತ್ಯ.

ಹೀಂಗೆ ಇಂದ್ರಿಯ-ಮನಸ್ಸು-ಬುದ್ಧಿಗೆ ನಿಲುಕದ ಆ ಪರತತ್ವವ ಕೃಷ್ಣಪ್ರಜ್ಞೆಂದ ಅರ್ತುಗೊಂಡು, ಮನಸ್ಸೆಂಬ ಚಂಚಲ ಕುದುರೆಗೆ ಬುದ್ಧಿಯೆಂಬ ಲಗಾಮು ಕಟ್ಟಿ, ಆ ಕಡಿವಾಣವ ಭಗವಂತನ ಕೈಲಿ ಕೊಟ್ಟು, ಸರ್ವ ದೇವತೆಗಳ ಸಹಾಯಂದ ಕಾಮ ಎಂಬ ಶತ್ರುವಿನ  ಗೆದ್ದು ಭಗವಂತನ ಸೇರು ಹೇದು ಭಗವಂತನ ಆದೇಶ ಹೇದು ಬನ್ನಂಜೆಯವರ ವ್ಯಾಖ್ಯಾನ.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕರ್ಮಯೋಗೋನಾಮ ತೃತೀಯೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಕರ್ಮಯೋಗ  ಹೇಳ್ವ ಮೂರ್ನೇ ಅಧ್ಯಾಯ ಮುಗುದತ್ತು.

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

॥ ಶ್ರೀಕೃಷ್ಣಾರ್ಪಣಮಸ್ತು ॥

…..ಮುಂದುವರಿತ್ತು

ಕೆಮಿಲಿ ಕೇಳ್ಳೆ –
SRIMADBHAGAVADGEETHA – CHAPTER 03 – SHLOKAS 41 – 43 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಧನ್ಯವಾದಂಗೊ.

  [Reply]

  VN:F [1.9.22_1171]
  Rating: +3 (from 3 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಮನದ ಕಾಮಕ್ಕೆ comma ಹಾಕಿ ಕೃಷ್ಣಪ್ರಜ್ಞೆಯ ಬೆಳೆಸಿಯೊಳಿ ಹೇಳಿ ಕರ್ಮಯೋಗದ ಅರ್ಥ ತಿಳುಸಿದ ಭಾವಯ್ಯಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +3 (from 3 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  :-)

  [Reply]

  VA:F [1.9.22_1171]
  Rating: +2 (from 2 votes)
 4. ಜಯಶ್ರೀ ನೀರಮೂಲೆ
  jayashree.neeramoole

  “ಭಗಂತನಲ್ಲಿನ ಪ್ರೇಮವೇ ಕಾಮ ಆದಪ್ಪಗ ಮತ್ತೆ ಇತ್ತು ಐಹಿಕ ಕಾಮದ ಚಪಲತೆ ಉಂಟಪ್ಪಲೆ ಇಲ್ಲೆ. ಆ ಹಂತಕೆ ತಲುಪಿದವಂಗೆ ಐಹಿಕ ಕಾಮವು ಹೇಸಿಕೆ ಅನುಸುಗು.”,”ಆಧ್ಯಾತ್ಮಿಕ ಶಕ್ತಿಂದ ಎಂದೂ ತೃಪ್ತಿಪಡುಸಲೆ ಸಾಧ್ಯವಿಲ್ಲದ್ದ ಈ ಕಾಮ ಹೇಳ್ವ ವೈರಿಯ ಗೆಲ್ಲೆಕು”…

  ನಿಜವಾಗಿಯೂ ಇಂದು ಕಾಲ ಅತಿ ಪಕ್ವ ಆಗಿದ್ದು… ಎಲ್ಲ ಮನುಷ್ಯರು ಕಾಮದ(ಹೊನ್ನು,ಹೆಣ್ಣು,ಕೀರ್ತಿ) ಉತ್ತುಂಗ ಸ್ಥಿತಿಲಿ ಇದ್ದವು… ಈಗ ದೇವರು ಹೇಳಿ ಎಲ್ಲ ಹೇಳಿರೆ ಆರುದೆ ಅರ್ಥ ಮಾಡಿಗೊಂಬ ಪರಿಸ್ಥಿತಿಲಿ ಇಲ್ಲೇ… ಅಮ್ಬಗ ಇಂದು ಸಮಾಜ ಸರಿದಾರಿಗೆ ತಪ್ಪಲೆ ಎಂತ ಮಾಡುಲಕ್ಕು ಹೇಳಿರೆ ಒಂದು ಕಥೆಯ ಮೂಲಕ ಹೇಳುತ್ತೆ…

  ಒಬ್ಬ ಶಿಷ್ಯಂಗೆ ವೇಶ್ಯೆಯ ಸಹವಾಸ ಇದ್ದತ್ತಡ. ಒಳುದ ಶಿಷ್ಯರು ಎಲ್ಲ ಸೇರಿ ಗುರುಗಳ ಹತ್ತರೆ ಅವನ ಬಗ್ಗೆ ದೂರು ಹೇಳಿದವಡ. ಆ ಶಿಷ್ಯನ ಸರಿದಾರಿಗೆ ತಪ್ಪಲೆ ಗುರು ಎಂತ ಮಾಡಿದವಡ ಹೇಳಿರೆ – “ನೀನು ಎಂತಕೆ ಆ ವೇಶ್ಯೆಯ ಹತ್ತರೆ ಹೋಪದು? ನಿನಗೆ ಅಲ್ಲಿ ಅಷ್ಟೂ ಆಕರ್ಷಣೆ ಎಂತರ?” ಕೇಳಿದವಡ. “ಎನಗೆ ಆ ವೇಶ್ಯೆಯ ಕಣ್ಣು ಇಷ್ಟ” ಹೇಳಿ ಶಿಷ್ಯ ಹೇಳಿದನಡ. ಗುರುಗೋ ಸೀದಾ ಆ ಶಿಷ್ಯನ ಕರಕ್ಕೊಂಡು ಹೋಗಿ ಪಾಂಡುರಂಗನ ಕಣ್ಣು ನೋಡು ಹೇಳಿ ತೋರುಸಿದವಡ. ಪಾಂಡುರಂಗನ ಕಣ್ಣು ನೋಡಿದ ಮೇಲೆ ಶಿಷ್ಯಂಗೆ ವೇಶ್ಯೆಯ ಕಣ್ಣು ಮರದೇ ಹೋತಡ. ಇಂದು ಸಮಾಜವ ಸರಿದಾರಿಗೆ ತಪ್ಪಲೆ ನಾವುದೇ ಆ ಗುರು ಅನುಸರಿಸಿದ ಪದ್ದತಿಯ ಅನುಸರಿಸೆಕ್ಕಷ್ಟೇ.

  [Reply]

  VA:F [1.9.22_1171]
  Rating: +2 (from 2 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ವಾಕ್ಯ ವಾಕ್ಯಂಗಳಲ್ಲಿಯೂ ಗಹನವಾದ ವಿಚಾರಂಗೊ. ಮತ್ತೆ ಮತ್ತೆ ಓದಿ ಅರ್ಥ ಮಾಡ್ತ ವಿಶ್ಯಂಗೊ.
  ಜೀವಿಗಳ ಅಸ್ತಿತ್ವವೇ ಭಗವಂತನ ಸೇವೆಗೆ ಹೇಳ್ತ ಕೃಷ್ಣಪ್ರಜ್ಞೆ ಬೆಳೆಶಿಗೊಂಡರೆ ಜೀವನ ಎಷ್ಟೊಂದು ಸುಖಮಯ ಅಕ್ಕು.

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವಯೇನಂಕೂಡ್ಳು ಅಣ್ಣಶ್ಯಾಮಣ್ಣಡಾಮಹೇಶಣ್ಣಬೋಸ ಬಾವಪೆರ್ಲದಣ್ಣನೀರ್ಕಜೆ ಮಹೇಶಪವನಜಮಾವವಸಂತರಾಜ್ ಹಳೆಮನೆಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆನೆಗೆಗಾರ°ಮಾಷ್ಟ್ರುಮಾವ°ಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮಕಜೆವಸಂತ°ಕಾವಿನಮೂಲೆ ಮಾಣಿಕೊಳಚ್ಚಿಪ್ಪು ಬಾವಪುಟ್ಟಬಾವ°ಶ್ರೀಅಕ್ಕ°ಅನು ಉಡುಪುಮೂಲೆಜಯಗೌರಿ ಅಕ್ಕ°ದೊಡ್ಡಮಾವ°ಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ