ಗರುಡ ಪುರಾಣ – ಅಧ್ಯಾಯ 10 – ಭಾಗ 01

November 14, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳದ ವಾರ ಅಧ್ಯಾಯ ಒಂಬತ್ತರಲ್ಲಿ ಮರಣಸನ್ನ ಕಾರ್ಯವಿಧಿಗಳ ಬಗ್ಗೆ ಓದಿದ್ದದು. ಮುಂದೆ –

 

ಗರುಡ ಪುರಾಣಮ್                                                        ಗರುಡ ಪುರಾಣ

ಅಥ ದಶಮೋsಧ್ಯಾಯಃ                                                ಅಧ್ಯಾಯ 10

ದಾಹಾಸ್ಥಿ ಸಂಚಯ ಕರ್ಮ ನಿರೂಪಣಮ್                       ದಹನ ಮತ್ತೆ ಅಸ್ಥಿ ಸಂಚಯನ ಕರ್ಮಂಗಳ ನಿರೂಪಣೆ

 

ಗರುಡ ಉವಾಚ
ದೇಹದಾಹ ವಿಧಾನಂ ಚ ವದ ಸುಕೃತಿನಾಂ ವಿಭೋ ।images
ಸತೀ ಯದಿ ಭವೇತ್ಪತ್ನೀ ತಸ್ಯಾಶ್ಚ ಮಹಿಮಾಂ ವದ ॥೦೧॥

ಗರುಡ ಹೇಳಿದ° – ಹೇ ವಿಭೋ!, ಸುಕೃತಿಗಳ (ಪುಣ್ಯವಂತರ) ದೇಹವ ದಹಿಸುವ ವಿಧಾನವ ಹೇಳು ಮತ್ತು ಒಂದು ವೇಳೆ ಪತ್ನಿಯು ಸತಿಯಾದರೆ ಅದರ ಮಹಿಮೆಯನ್ನೂ ಹೇಳು.

ಶ್ರೀ ಭಗವಾನುವಾಚ
ಶ್ರುಣು ತಾರ್ಕ್ಷ್ಯ ಪ್ರವಕ್ಷ್ಯಾಮಿ ಸರ್ವಮೇವೌರ್ಧ್ವದೇಹಿಕಮ್ ।
ಯತ್ಕೃತ್ವಾ ಪುತ್ರಪೌತ್ರಶ್ಚ ಮುಚ್ಯಂತೇ ಪೈತೃಕಾದೃಣಾತ್ ॥೦೨॥

ಹೇ ಗರುಡನೇ!, ಕೇಳು. ಯಾವ ಔರ್ಧ್ವದೇಹಿಕ ಕ್ರಿಯೆಗಳ ಮಾಡುವದರಿಂದ ಪುತ್ರ ಮತ್ತೆ ಪೌತ್ರರು ಪಿತೃಋಣಂದ ಮುಕ್ತರಾವುತ್ತವೋ ಅವೆಲ್ಲವುದರ ಬಗ್ಗೆ ನಿನಗೆ ಆನು ಹೇಳುತ್ತೆ.

ಕಿಂ ದತ್ತೈರ್ಬುಭಿರ್ದಾನೈಃ ಪಿತ್ರೋರಂತ್ಯೇಷ್ಟಿಮಾಚರೇತ್ ।
ತೇನಾಗ್ನಿಷ್ಟೋಮಸದೃಶಂ ಪುತ್ರಃ ಫಲಮವಾಪ್ನುಯಾತ್ ॥೦೩॥

ಬಹುವಾಗಿ ದಾನ ಮಾಡುವದರಿಂದ ಎಂತ ಪ್ರಯೋಜನ?! ಪಿತೃಗಳ ಅಂತ್ಯೇಷ್ಟಿ ಕರ್ಮವ ಮಾಡೆಕು. ಅದರಿಂದ ಅಗ್ನಿಷ್ಟೋಮ ಯಜ್ಞಮಾಡಿದಷ್ಟು ಫಲವ ಆ ಮಗ° ಪಡೆತ್ತ°.

ತದಾ ಶೋಕಂ ಪರಿತ್ಯಜ್ಯ ಕಾರಯೇನ್ಮುಂಡನಂ ಸುತಃ ।
ಸಮಸ್ತ ಬಾಂಧವೈರ್ಯುಕ್ತಾಃ ಸರ್ವಪಾಪಾಪನುತ್ತಯೇ ॥೦೪॥

ಅಂಬಗ ಶೋಕವ ಬಿಟ್ಟಿಕ್ಕಿ ಮಗ° ಎಲ್ಲ ಪಾಪಂಗಳನ್ನೂ ದೂರಮಾಡ್ಳೆ ಸಮಸ್ತ ಬಂಧುಗಳ ಸಹಿತ ಮುಂಡನವ ಮಾಡಿಸಿಕೊಳ್ಳೆಕು.

ಮಾತಾಪಿತ್ರೋರ್ಮೃತೌ ಯೇನ ಕಾರಿತಂ ಮುಂಡನಂ ನ ಹಿ ।
ಆತ್ಮಜಃ ಕಥಂ ಜ್ಞೇಯಃ ಸಂಸಾರಾರ್ಣವತಾರಕಃ ॥೦೫॥

ಮಾತಾಪಿತೃಗೊ ಮರಣ ಹೊಂದಿಯಪ್ಪಗ ಯಾವಾತನಿಂದ ಮುಂಡನ ಮಾಡಿಸಿಕೊಳ್ಳಲ್ಪಡುತ್ತಿಲ್ಲೆಯೋ (ಆರು ಮುಂಡನ ಮಾಡಿಸಿಕೊಳ್ಳುತವಿಲ್ಲೆಯೋ), ಅವ° ಸಂಸಾರ ಹೇಳ್ವ ಸಮುದ್ರವ ದಾಂಟುಸುವಂತಹ ಮಗ° ಹೇದು ಹೇಂಗೆ ತಿಳಿಯಲ್ಪಡುತ್ತ°?

ಅತೋ ಮುಂಡನಮಾವಶ್ಯಂ ನಖಕಕ್ಷ ವಿವರ್ಜಿತಮ್ ।
ತತಃ ಸಮಾಂಧವಃ ಸ್ನಾತ್ವಾ ಧೌತವಸ್ತ್ರಾಣಿ ಧಾರಯೇತ್ ॥೦೬॥

ಹಾಂಗಾಗಿ ಉಗುರು ಮತ್ತು ಕಂಕುಳವ ಬಿಟ್ಟು ಮುಂಡನ ಆವಶ್ಯಕ. ಮತ್ತೆ ತನ್ನ ಬಾಂಧವರ ಸಮೇತನಾಗಿ ಮಿಂದಿಕ್ಕಿ ಒಗದ ವಸ್ತ್ರವ ಧರಿಸೆಕು.

ಸದ್ಯೋ ಜಲಂ ಸಮಾನೀಯ ತತಸ್ತಂ ಸ್ನಾಪಯೇಚ್ಛವಮ್ ।
ಮಂಡಯೇಚ್ಚಂದನೈಃ ಸ್ರಗ್ಭಿರ್ಗಂಗಾಮೃತ್ತಿಕಯಾsಥವಾ ॥೦೭॥

ಮತ್ತೆ ಹೊಸ ನೀರು ತೆಕ್ಕೊಂಡು ಬಂದು ಅದರಿಂದ ಶವವ ಮೀಶೆಕು. ಮತ್ತೆ ಚಂದನ, ಹೂಮಾಲೆ ಅಥವಾ ಗಂಗೆಯ ಮೃತ್ತಿಕೆಂದ ಅಲಂಕರುಸೆಕು.

ನವೀನವಸ್ತ್ರೈಃ ಸಂಚ್ಛಾದ್ಯ ತದಾ ಪಿಂಡಂ ಸದಕ್ಷಿಣಮ್ ।
ನಾಮಗೋತ್ರೇ ಸಮುಚ್ಛಾರ್ಯ ಸಂಕಲ್ಪೇನಾಪಸ್ವತಃ ॥೦೮॥

ಮತ್ತೆ ಹೊಸ ವಸ್ತ್ರವ ಹೊದೆಶಿ, ಪಿಂಡವ ದಕ್ಷಿಣೆ ಸಮೇತವಾಗಿ ನಾಮ ಗೋತ್ರವ ಉಚ್ಚಾರಮಾಡಿಗೊಂಡು ಅಪಸವ್ಯಂದ ಸಂಕಲ್ಪ ಮಾಡೆಕು.

ಮೃತ್ಯುಸ್ಥಾನೇ ಶವೋ ನಾಮ ತಸ್ಯ ನಾಮ್ನಾ ಪ್ರದಾಪಯೇತ್ ।
ತೇನ ಭೂಮಿರ್ಭವೇತ್ತುಷ್ಟಾ ತದಧಿಷ್ಠಾತೃದೇವತಾ ॥೦೯॥

ಮೃತ್ಯುಸ್ಥಾನಲ್ಲಿ ಅವನ ‘ಶವ’ ಹೇದು ಹೇಳುತ್ತವು. ಆ ಹೆಸರಿಂದ ಪಿಂಡವ ಕೊಡೆಕು. ಅದರಿಂದ ಭೂಮಿ ಮತ್ತು ಅದರ ಅಧಿಷ್ಠಾತೃ ದೇವತೆಗೊ ಪ್ರಸನ್ನರಾವುತ್ತವು.

ದ್ವಾರದೇಶೇ ಭವೇತ್ಪಾಂಥಸ್ತಸ್ಯ ನಾಮ್ನಾ ಪ್ರದಾಪಯೇತ್ ।
ತೇನ ನೈವೋಪಘಾತಾಯ ಭೂತಕೋಟಿಷು ದುರ್ಗತಾಃ ॥೧೦॥

ದ್ವಾರ ಪ್ರದೇಶಲ್ಲಿ ‘ಪ್ರಯಾಣಿಕ’ (‘ಪಾಂಥ’)ನಾವುತ್ತ°. ಆ (‘ಪಾಂಥ’) ಹೆಸರಿಂದ ಪಿಂಡದಾನವ ಮಾಡೆಕು. ಇದರಿಂದ ದುರ್ಗತಿ ಹೊಂದಿದ ಭೂತಾದಿ ಪ್ರೇತಂಗೊ ಮೃತ ಜೀವಿಯ ಸದ್ಗತಿಯ ಹಾದಿಲಿ ವಿಘ್ನ-ಬಾಧೆಗಳ ಉಂಟುಮಾಡುತ್ತವಿಲ್ಲೆ.

ತತಃ ಪ್ರದಕ್ಷಿಣಾಂ ಕೃತ್ವಾ ಪೂಜನೀಯಃ ಸ್ನುಷಾದಿಭಿಃ ।
ಸ್ಕಂದಃ ಪುತ್ರೇಣ ದಾತವ್ಯಸ್ತದಾsನ್ಯೈರ್ಬಾಂಧವೈಃ ಸಹ ॥೧೧॥

ಮತ್ತೆ ಸೊಸೆಯಾದಿಗೊ ಪ್ರದಕ್ಷಿಣೆ ಮಾಡಿ ಪೂಜಿಸೆಕು. ಮತ್ತೆ ಮಗ ಮತ್ತೆ ಇತರ ಬಾಂಧವರು ಹೆಗಲು ಕೊಡೆಕು.

ಧೃತ್ವಾ ಸ್ಕಂಧೇ ಸ್ವಪಿತರಂ ಯಃ ಶ್ಮಶಾನಾಯ ಗಚ್ಛತಿ ।
ಸೋsಶ್ವಮೇಧಫಲಂ ಪುತ್ರೋ ಲಭತೇ ಚ ಪದೇ ಪದೇ ॥೧೨॥

ಯಾವಾತ° ತನ್ನ ಅಪ್ಪನ ಹೆಗಲ ಮೇಲೆ ಹೊತ್ತೊಂಡು ಸ್ಮಶಾನಕ್ಕೆ ಹೋವುತ್ತನೋ, ಆ ಮಗ° ಹೆಜ್ಜೆ ಹೆಜ್ಜಗೂ ಅಶ್ವಮೇಧಯಾಗದ ಫಲವ ಪಡೆತ್ತ°.

ನೀತ್ವಾ ಸ್ಕಂಧೇ ಸ್ವಪೃಷ್ಠೇsಂಕೇ ಸದಾ ತಾತೇನ ಲಾಲಿತಃ ।
ತದೈವ ತದೃಣಾನ್ಮುಚ್ಯೇನ್ಮೃತಂ ಸ್ವಪಿತರಂ ವಹೇತ್ ॥೧೩॥

ತನ್ನ ಅಪ್ಪನ ಹೆಗಲು, ಬೆನ್ನ ಮೇಗೆ, ತೊಡೆ ಮೇಗೆ ಏವತ್ತೂ ಲಾಲಿಸಲ್ಪಟ್ಟ ಮಗ°, ಮೃತನಾದ ತನ್ನ ಅಪ್ಪನ ಹೆಗಲ ಮೇಗೆ ಧರಿಸಿ ತೆಕ್ಕೊಂಡು ಹೋದಪ್ಪಗಳೇ ಅವ° ಪಿತೃಋಣಂದ ಮುಕ್ತನಪ್ಪದು.

ತತೋsರ್ಧಮಾರ್ಗೇ ವಿಶ್ರಾಮಂ ಸಂಮಾರ್ಜ್ಯಾಭ್ಯುಕ್ಷ್ಯ ಕಾರಯೇತ್ ।
ಸಂಸ್ನಾಪ್ಯ ಭೂತಸಂಜ್ಞಾಯ ತಸ್ಮೈ ತೇನ ಪ್ರದಾಪಯೇತ್ ॥೧೪॥

ಮತ್ತೆ ಅರ್ಧ ಮಾರ್ಗಲ್ಲಿ ಭೂಮಿಯ ಶುದ್ಧಮಾಡಿ, ನೀರು ತಳುದು ವಿಶ್ರಮಿಸೆಕು. ಮತ್ತೆ ಆ ಶವಕ್ಕೆ ಸ್ನಾನ ಮಾಡ್ಸಿ ‘ಭೂತ’ ಹೇಳ್ವ ಹೆಸರಿಂದ ಅದಕ್ಕೆ ಪಿಂಡವ ಕೊಡೆಕು.

ಪಿಶಾಚಾ ರಾಕ್ಷಸಾ ಯಕ್ಷಾ ಯೇ ಚಾನ್ಯೇ ದಿಕ್ಷು ಸಂಸ್ಥಿತಾಃ ।
ತಸ್ಯ ಹೋತವ್ಯದೇಹಸ್ಯ ನೈವಾಯೋತ್ಯತ್ವಕಾರಕಾಃ ॥೧೫॥

ಅದರಿಂದ ಅನ್ಯ ದಿಕ್ಕುಗಳಲ್ಲಿಪ್ಪ ಪಿಶಾಚ, ರಾಕ್ಷಸ, ಯಕ್ಷಾದಿಗೊ ಹವನ ಮಾಡ್ಳೆ ಯೋಗ್ಯವಾದ ಆ ದೇವವ ಅಯೋಗ್ಯವನ್ನಾಗಿ ಮಾಡುತ್ತವಿಲ್ಲೆ.

ತತೋ ನೀತ್ವಾ ಶ್ಮಶಾನೇಷು ಸ್ಥಾಪಯೇದುತ್ತರಾಮುಖಮ್ ।
ತತ್ರ ದೇಹಸ್ಯ ದಾಹಾರ್ಥಂ ಸ್ಥಲಂ ಸಂಶೋಧಯೇದ್ಯಥಾ ॥೧೬॥

ಮತ್ತೆ, ಶ್ಮಶಾನಕ್ಕೆ ಕೊಂಡೋಗಿ ಅಲ್ಲಿ ಉತ್ತರಾಭಿಮುಖವಾಗಿ ಮಡುಗೆಕು. ಅಲ್ಲಿ ದೇಹದ ದಹನಕ್ರಿಯೆಗಾಗಿ ಸ್ಥಳವ ಪರಿಶುದ್ಧ ಮಾಡೆಕು.

ಸಂಮಾರ್ಜ್ಯ ಭೂಮಿಂ ಸಂಲ್ಲಿಪ್ಯೋಲ್ಲಿಖ್ಯೋದ್ಧೃತ್ಯ ಚೆ ವೇದಿಕಾಮ್ ।
ಅಭ್ಯುಕ್ಷೋಪಸಮಾಧಾಯ ವಹ್ನಿಂ ತತ್ರ ವಿಧಾನತಃ ॥೧೭॥

ಭೂಮಿಯ ಶುದ್ಧಮಾಡಿ, ಗೋಮಯಂದ ಲೇಪಿಸಿ, ರೇಖೆಯ ಎಳದು ರಜ ಮಣ್ಣ ಗರ್ಪಿ ಹೆರತೆಗದು ವೇದಿಕೆಯ ಮಾಡಿ ನೀರು ಹಾಕಿ ಅಲ್ಲಿ ಅಗ್ನಿಯ ವಿಧಿಪೂರ್ವಕವಾಗಿ ಸ್ಥಾಪಿಸೆಕು.

ಪುಷ್ಪಕ್ಷತೈರಥಾಭ್ಯರ್ಚ್ಯ ದೇವಂ ಕ್ರವ್ಯಾದಸಂಜ್ಞಕಮ್ ।
ಲೋಮಭ್ಯಸ್ತ್ವನುವಾಕೇನ ಹೋಮಂ ಕುರ್ಯಾದ್ಯಥಾವಿಧಿ ॥೧೮॥

ಕ್ರವ್ಯಾ ಸಂಜ್ಞಾರ್ಥವಾಗಿ (ಹಸಿ ಮಾಂಸವ ತಿಂಬವ°) ಅಗ್ನಿಯ ಪುಷ್ಪಾಕ್ಷತೆಗಳಿಂದ ಅರ್ಚಿಸಿ ‘ಲೋಮಭ್ಯಃ ಸ್ವಾಹಾ’ ಇತ್ಯಾದಿ ಅನುವಾಕಂಗಳಿಂದ ವಿಧಿಪೂರ್ವಕವಾಗಿ ಹೋಮವ ಮಾಡೆಕು.

ತ್ವಂ ಭೂತಭೃಜ್ವಗದ್ಯೋನಿಸ್ತ್ವಂ ಭೂತಪರಿಪಾಲಕಃ ।
ಮೃತಃ ಸಾಂಸಾರಿಕಸ್ತಸ್ಮಾದೇನಂ ಸ್ವರ್ಗತಿಂ ನಯ ॥೧೯॥

“ಹೇ ಅಗ್ನಿಯೇ!, ನೀನು ಜೀವಿಗಳ ಧರಿಸಿದ್ದೆ. ನೀನು ಜಗತ್ತಿನ ಉತ್ಪತ್ತಿ ಸ್ಥಾನ, ಜೀವಿಗಳ ಪರಿಪಾಲುಸುವವ°. ಈ ಸಂಸಾರಿಕ ಮರಣ ಹೊಂದಿದ್ದ°. ಅವನ ನೀನು ಸ್ವರ್ಗದ ಕಡೆಂಗೆ ಕರಕ್ಕೊಂಡು ಹೋಗು”

ಇತಿ ಸಂಪ್ರಾರ್ಥಯಿತ್ವಾಗ್ನಿಂ ಚಿತಾಂ ತತ್ರೈವ ಕಾರಯೇತ್ ।
ಶ್ರೀಖಂಡತುಲಸೀಕಾಷ್ಠೈಃ ಪಲಾಶಾಶ್ವತ್ಥದಾರುಭಿಃ ॥೨೦॥

ಈ ರೀತಿಯಾಗಿ ಅಗ್ನಿಯ ಪ್ರಾರ್ಥಿಸಿ ಅಲ್ಲಿಯೇ ಶ್ರೀಚಂದನ, ತುಳಸಿ ಕಡ್ಡಿಗಳಿಂದ, ಪಾಲಾಶ, ಅಶ್ವತ್ಥದ ಕಟ್ಟಿಗೆಗಳಿಂದ ಚಿತೆಯ ಮಾಡೆಕು.

ಚಿತಾಮಾರೋಪ್ಯ ತಂ ಪ್ರೇತಂ ಪಿಂಡೌ ದ್ವೌ ತತ್ರ ದಾಪಯೇತ್ ।
ಚಿತಾಯಾಂ ಶವಹಸ್ತೇಚ ಪ್ರೇತನಾಮ್ನಾ ಖಗೇಶ್ವರ ।
ಚಿತಾಮೋಕ್ಷ ಪ್ರಭೃತಿಕಂ ಪ್ರೇತತ್ವಮುಪಜಾಯತೇ ॥೨೧॥

ಹೇ ಗರುಡನೇ!, ಆ ಮೃತದೇಹವ ಚಿತೆಯ ಮೇಗೆ ಏರಿಸಿಕ್ಕಿ, ಅಲ್ಲಿ  ಎರಡು ಪಿಂಡವ- ಒಂದರ ಚಿತೆಲಿಯೂ, ಎರಡ್ನೇದರ ಶವದ ಕೈಲಿ ‘ಪ್ರೇತ’ ಹೇಳ್ವ ಹೆಸರಿಂದ ಮಡುಗೆಕು. ಶವವ ಚಿತೆಲಿ ಮಡಿಗಿದ ಮತ್ತೆ ಆ ಶವಲ್ಲಿ ಪ್ರೇತತ್ವ ಬಂದುಬಿಡುತ್ತು.

ಕೇsಪಿ ಸಾಧಕಂ ಪ್ರಾಹುಃ ಪ್ರೇತಕಲ್ಪವಿದೋ ಜನಾಃ ।
ಚಿತಾಯಾಂ ತೇನ ನಾಮ್ನಾ ವಾ ಪ್ರೇತನಾಮ್ನಾಥವಾ ಕರೇ ॥೨೨॥

‘ಪ್ರೇತಕಲ್ಪ’ವ ತಿಳುದ ವಿದ್ವಾಂಸರು ಚಿತೆಯ ಮೇಗೆ ಪ್ರದಾನ ಮಾಡ್ವ ಪಿಂಡಾಕ್ಕೆ ‘ಸಾಧಕ’ ಹೇಳ್ವ ಹೆಸರಿಂದ ಹೇಳುತ್ತವು. ಹಾಂಗಾಗಿ ಚಿತೆಯ ಮೇಗೆ ‘ಸಾಧಕ’ ಹೆಸರಿಂದ ಮತ್ತೆ ಹಸ್ತಲ್ಲಿ ‘ಪ್ರೇತ’ ಹೇಳ್ವ ಹೆಸರಿಂದ ಪಿಂಡದಾನ ಮಾಡೆಕು.

ಇತ್ಯೇವಂ ಪಂಚಭಿಃ ಪಿಂಡೈಃ ಶವಸ್ಯಾಹುತಿಯೋಗ್ಯತಾ ।
ಅನ್ಯಥಾ ಚೋಪಘಾತಾಯ ಪೂರ್ವೋಕ್ತಾಸ್ತೇ ಭವಂತಿ ಹಿ ॥೨೩॥

ಈ ರೀತಿ ಪಿಂಡಂಗಳ ಕೊಡುವದರಿಂದ ಶವವು ಆಹುತಿಗೆ ಯೋಗ್ಯವಾವುತ್ತು. ಇಲ್ಲದ್ರೆ ಮದಲೆ ಹೇಳಿದ ಆ (ಪಿಶಾಚ, ರಾಕ್ಷಸ, ಯಕ್ಷಾದಿಗಳ) ತೊಂದರೆಗೊ ಆಗಿಹೋವುತ್ತು.

ಪ್ರೇತೋ ದತ್ವಾ ಪಂಚ ಪಿಂಡಾನ್ ಹುತಮಾದಾಯ ತಂ ತೃಣೈಃ ।
ಅಗ್ನಿಂ ಪುತ್ರಸ್ತದಾ ದದ್ಯಾನ್ನ ಭವೇತ್ಪಂಚಕಂ ಯದಿ ॥೨೪॥

ಶವಕ್ಕೆ ಐದು ಪಿಂಡಂಗಳ ಕೊಟ್ಟು ಮತ್ತೆ ಹೋಮ ಮಾಡಲ್ಪಟ್ಟ ಅಗ್ನಿಯ ಹುಲ್ಲಿಲ್ಲಿ ತೆಕ್ಕೊಂಡು ಮಗ°, ಮೃತ° ಪಂಚಕನಲ್ಲದ್ರೆ ಮಾಂತ್ರ ಅಗ್ನಿಯ ಚಿತೆಗೆ ಹಾಕೆಕು.

( ಪಂಚಕ = ಧನಿಷ್ಠಾದಿ ಪಂಚಕ. = ಧನಿಷ್ಠ, ಶತಭಿಷಾ, ಪೂರ್ವಾಭದ್ರ, ಉತ್ತರಾಭದ್ರ, ರೇವತಿ.  )

ಪಂಚಕೇಷು ಮೃತೋ ಯಸ್ತು ನ ಗತಿಂ ಲಭತೇ ನರಃ ।
ದಾಹಸ್ತತ್ರ ನ ಕರ್ತವ್ಯಃ ಕೃತೇsನ್ಯಮರಣಂ ಭವೇತ್ ॥೨೫॥

ಮನುಷ್ಯ° ಪಂಚಕಲ್ಲಿ ಮರಣ ಹೊಂದಿರೆ ಅವಂಗೆ ಸದ್ಗತಿ ಸಿಕ್ಕುತ್ತಿಲ್ಲೆ. ಪಂಚಕಲ್ಲಿ ದಹನ ಸಂಸ್ಕಾರವ ಮಾಡ್ಳಾಗ. ಒಂದು ವೇಳೆ ಮಾಡಿರೆ ಇನ್ನೊಂದು ಮರಣ ಉಂಟಾವುತ್ತು.

ಆದೌ ಕೃತ್ವಾ ಧನಿಷ್ಠಾರ್ಧಮೇತನ್ನಕ್ಷತ್ರಪಂಚಕಮ್ ।
ರೇವತ್ಯಂತಂ ನ ದಾಹೇssರ್ಹಂ ದಾಹೇ ಚ ನ ಶುಭಂ ಭವೇತ್ ॥೨೬॥

ಧನಿಷ್ಠಾ ನಕ್ಷತ್ರದ ಮಧ್ಯಂದ ಸುರುಮಾಡಿ ರೇವತೀ ನಕ್ಷತ್ರದ ಅಂತ್ಯದವರೇಂಗೆ ಐದು ನಕ್ಷತ್ರಂಗೊ ದಹನ ಸಂಸ್ಕಾರಕ್ಕೆ ಯೋಗ್ಯವಲ್ಲ. ಅದರ್ಲಿ ದಹನ ಸಂಸ್ಕಾರ ಮಾಡಿರೆ ಶುಭ ಆವುತ್ತಿಲ್ಲೆ.

ಗೃಹೇ ಹಾನಿರ್ಭವೇತ್ತಸ್ಯ ಋಕ್ಷೇಷ್ವೇಷು ಮೃತೋ ಹಿ ಯಃ ।
ಪುತ್ರಾಣಾಂ ಗೋತ್ರೀಣಾಂ ಚಾಪಿ ಕಶ್ಚಿದ್ವಿಘ್ನಃ ಪ್ರಜಾಯತೇ ॥೨೭॥

ಆರು ಈ ನಕ್ಷತ್ರಂಗಳಲ್ಲಿ ಮರಣ ಹೊಂದುತ್ತವೋ, ಅವನ ಮನೆಲಿ ಹಾನಿ ಉಂಟಾವ್ತು. ಅವರ ಪುತ್ರರಲ್ಲಿ, ಗೋತ್ರದವರಲ್ಲಿ ಏನಾರು ವಿಘ್ನಂಗೊ ಉಂಟಾವ್ತು.

ಅಥವಾ ಋಕ್ಷಮಧ್ಯೇ ಹಿ ದಾಹಃ ಸ್ಯಾದ್ವಿಧಿಪೂರ್ವಕಃ ।
ತದ್ವಿಧಿಂ ತೇ ಪ್ರವಕ್ಷ್ಯಾಮಿ ಸರ್ವದೋಷಪ್ರಶಾಂತಯೇ ॥೨೮॥

ಅಥವಾ ನಕ್ಷತ್ರ ಮಧ್ಯಲ್ಲೇ ವಿಧಿಪೂರ್ವಕವಾಗಿ ದಹನ ಸಂಸ್ಕಾರ ಮಾಡೇಕಾರೆ ಸರ್ವದೋಷಂಗಳನ್ನೂ ಪರಿಹರುಸುವಂತಹ ಆ ವಿಧಿಯ ನಿನಗೆ ಹೇಳುತ್ತೆ.

ಶವಸ್ಯ ನಿಕಟೇ ತಾರ್ಕ್ಷ್ಯ ನಿಕ್ಷಿಪೇತ್ಪುತ್ತಲಾಂಸ್ತದಾ ।
ದರ್ಭಮಯಾಂಶ್ಚ ಚತುರ ಋಕ್ಷಮಂತ್ರಾಭಿಮಂತ್ರಿತಾನ್ ॥೨೯॥

ಹೇ ಗರುಡ!, ಅಂಬಗ, ಆ ಶವದ ಹತ್ರೆ ದರ್ಭೆಂದ ಮಾಡಿದ ಮತ್ತೆ ಆ ನಕ್ಷತ್ರ ಮಂತ್ರಂಗಳಿಂದ ಅಭಿಮಂತ್ರಿತ ನಾಲ್ಕು ಬೊಂಬೆಗಳ ಮಡುಗೆಕು.

ತಪ್ತಹೇಮ ಪ್ರಕರ್ತವ್ಯಂ ವಹಂತಿ ಋಕ್ಷನಾಮಭಿಃ ।
ಪ್ರೇತಾಜಯತಮಂತ್ರೇಣ ಪುನರ್ಹೋಮಸ್ತು ಸಂಪುಟೈಃ ॥೩೦॥

ಕಾಸಿದ ಚಿನ್ನವ ಉಪಯೋಗುಸಿ, ನಕ್ಷತ್ರ ನಾಮಂಗಳಿಂದ ಆಹುತಿ ಕೊಡೆಕು. ‘ಪ್ರೇತಾಜಯತ’ ಮಂತ್ರಂದ ಪುನಃ ಹೋಮ ಮಾಡೆಕು.

ತತೋ ದಾಹಃ ಪ್ರಕರ್ತವ್ಯಸ್ತೈಶ್ಚ ಪುತ್ತಲಕೈಃ ಸಹ ।
ಸಪಿಂಡದಿನೇ ಕುರ್ಯಾತ್ತಸ್ಯ ಶಾಂತಿವಿಧಿಂ ಸುತಃ ॥೩೧॥

ಮತ್ತೆ ಆ ಬೊಂಬೆಗಳ ಸಹಿತವಾಗಿ ದಹನ ಸಂಸ್ಕಾರವ ಮಾಡೆಕು. ಮಗ ಮತ್ತೆ ಸಪಿಂಡಿ ದಿನಲ್ಲಿ ಅದರ ಶಾಂತಿವಿಧಿಯ ಮಾಡೆಕು.

ತಿಲಪಾತ್ರಂ ಹಿರಣ್ಯಂ ಚ ರೂಪ್ಯಂ ರತ್ನಂ ಯಥಾಕ್ರಮಮ್ ।
ಘೃತಪೂರ್ಣಂ ಕಾಂಸ್ಯಪಾತ್ರಂ ದದ್ಯಾದ್ಧೋಷಪ್ರಶಾಂತಯೇ ॥೩೨॥

ಎಳ್ಳು ತುಂಬಿದ ಪಾತ್ರೆ, ಸುವರ್ಣ, ಬೆಳ್ಳಿ, ರತ್ನ ಮತ್ತೆ ತುಪ್ಪ ತುಂಬಿದ ತಾಮ್ರದ ಪಾತ್ರೆ ಇವುಗಳ ಯಥಾಕ್ರಮವಾಗಿ ದೋಷಂಗಳ ಶಾಂತಿಗೋಸ್ಕರವಾಗಿ ದಾನಕೊಡೆಕು.

ಏವಂ ಶಾಂತಿವಿಧಾನಂ ತು ಕೃತ್ವಾ ದಾಹಂ ಕರೋತಿ ಯಃ ।
ತ ತಸ್ಯ ವಿಘ್ನೋ ಜಾಯೇತ ಪ್ರೇತಾ ಯಾಂತಿ ಪರಾಂ ಗತಿಮ್ ॥೩೩॥

ಈ ರೀತಿ ಶಾಂತಿ ಕರ್ಮಂಗಳ ಮಾಡಿಕ್ಕಿ ಆರು ದಹನ ಸಂಸ್ಕಾರವ ಆಚರುಸುತ್ತವೋ ಅವಕ್ಕೆ ಏವ ವಿಘ್ನಂಗಳೂ ಉಂಟಾವುತ್ತಿಲ್ಲೆ. ಆ ಪ್ರೇತವು ಪರಮ ಗತಿಯ ಹೊಂದುತ್ತು.

 

ಗದ್ಯರೂಪಲ್ಲಿ –

ವೈನತೇಯ ಗರುಡ° ಕೇಳಿದ° – ಹೇ ಪ್ರಭೋ! ಪುಣ್ಯಾತ್ಮ ಪುರುಷರ ದೇಹ ದಹನದ ವಿಧಾನವ ಎನಗೆ ಹೇಳು. ಮತ್ತೆ ಒಂದುವೇಳೆ ಪತ್ನಿ ಸತಿ ಹೋದರೆ ಅದರ ಮಹಿಮೆಯನ್ನೂ ಹೇಳು.

ಭಗವಂತ° ಹೇಳಿದ° – ಹೇ ಗರುಡ!, ಯಾವ ಔರ್ಧ್ವದೇಹಿಕ ಕ್ರಿಯೆಗಳ ಮಾಡುವದರಿಂದ ಪುತ್ರ ಮತ್ತೆ ಪೌತ್ರರು ಪಿತೃಋಣಂದ ಮುಕ್ತರಾವುತ್ತವೋ ಅವೆಲ್ಲವುದರ ಬಗ್ಗೆ ನಿನಗೆ ಆನು ಹೇಳುತ್ತೆ. ಬಹುವಾಗಿ ದಾನಮಾಡ್ವದರಿಂದ ಎಂತ ಇದ್ದು?! ಅಬ್ಬೆ-ಅಪ್ಪನ ಅಂತ್ಯಕಾರ್ಯವ ಸೂಕ್ತರೀತಿಲಿ ಮಾಡೆಕು. ಅದರಿಂದ ಆ ಮಗ° ಅಗ್ನಿಷ್ಟೋಮ ಯಜ್ಞವ ಮಾಡಿದಷ್ಟು ಫಲವ ಪಡೆತ್ತ°. ಅಂಬಗ (ಅಬ್ಬೆ-ಅಪ್ಪ ಮರಣ ಹೊಂದಿಯಪ್ಪಗ), ಮಗನಾದವ° ಶೋಕವ ಬಿಟ್ಟಿಕ್ಕಿ ಎಲ್ಲ ಪಾಪಂಗಳನ್ನೂ ದೂರ ಮಾಡುವದಕ್ಕಾಗಿ ಸಮಸ್ತ ಬಂಧುಗಳ ಸಹಿತ ಮುಂಡನ ಮಾಡಿಸಿಕೊಳ್ಳೆಕು. ಅಬ್ಬೆ-ಅಪ್ಪ° ಸತ್ತಪ್ಪಗ ಯಾವಾತ° ಮುಂಡನ ಮಾಡಿಸಿಕೊಳ್ಳುತ್ತವಿಲ್ಲೆಯೋ ಅವ° ಸಂಸಾರಸಾಗರವ ಉದ್ಧಾರ ಮಾಡುವ ಪುತ್ರ° ಹೇದು ತಿಳಿವಲೆ ಹೇಂಗೆ ಎಡಿಗು?!. ಹಾಂಗಾಗಿ, ಉಗುರು ಮತ್ತೆ ಕಂಕುಳವ ಹೊರತುಪಡಿಸಿ ಮುಂಡನ ಮಾಡಿಸಿಗೊಂಬದು ಅವಶ್ಯಕ (ಕೇಶಲ್ಲಿ ಕಾಮದ ವಾಸ ಇರುತ್ತು ಹೇಳಿ ಒಳಗುಟ್ಟು).  ಇದಾದಿಕ್ಕಿ, ಸಮಸ್ತ ಬಂಧುಗಳ ಒಟ್ಟಿಂಗೆ ಒಗದ ವಸ್ತ್ರವ ಧಾರಣೆ ಮಾಡೆಕು.

ಮತ್ತೆ, ಅವ° ಹೊಸ ನೀರು ತೆಕ್ಕೊಂಡು ಬಂದು ಅದರಿಂದ ಶವವ ಮೀಶೆಕು. ಮತ್ತೆ, ಚಂದನ ಅಥವಾ ಗಂಗಾಮೃತ್ತಿಕೆಯ ಲೇಪನ ಮತ್ತು ಮಾಲೆಗಳಿಂದ ಅಲಂಕರುಸೆಕು. ಮತ್ತೆ ಹೊಸ ವಸ್ತ್ರವ ಶವದ ಮೇಗೆ ಹೊದೆಶಿ, ಅಪಸವ್ಯನಾಗಿ ನಾಮ-ಗೋತ್ರ ಉಚ್ಚಾರಣೆ ಮಾಡಿ ಸಂಕಲ್ಪಪೂರ್ವಕ ದಕ್ಷಿಣಾಸಹಿತ ಪಿಂಡದಾನವ ನೀಡೆಕು. ಮೃತ್ಯುವಿನ ಸ್ಥಾನಲ್ಲಿ ‘ಶವ’ ಹೇದು ಹೇಳುತ್ತವು. ಆ ಹೆಸರಿಂದ ಪಿಂಡ ಪ್ರದಾನ ಮಾಡೆಕು. ಅದರಿಂದ ಭೂಮಿ ಮತ್ತೆ ಭೂಮಿಯ ಅಧಿಷ್ಠಾತೃ ದೇವತೆಗೊ ಪ್ರಸನ್ನರಾವುತ್ತವು.

ಇದಾದಿಕ್ಕಿ, ದ್ವಾರದ ಸ್ಥಾನಲ್ಲಿ ‘ಪಾಂಥ’ (ಪ್ರಯಾಣಿಕ°) ಹೇಳ್ವ ಪಿಂಡವ ಮೃತನ ನಾಮ-ಗೋತ್ರಾದಿ ಉಚ್ಚರಿಸಿ ಪಿಂಡಪ್ರದಾನ ಮಾಡೆಕು. ಇದರಿಂದ ದುರ್ಗತಿ ಹೊಂದಿದ ಭೂತಾದಿ ಪ್ರೇತಂಗೊ ಮೃತ ಜೀವಿಯ ಸದ್ಗತಿಯ ಹಾದಿಲಿ ವಿಘ್ನ-ಬಾಧೆಗಳ ಉಂಟುಮಾಡುತ್ತವಿಲ್ಲೆ. ಮತ್ತೆ, ಸೊಸೆ ಮುಂತಾದೋರು ಶವಕ್ಕೆ ಪ್ರದಕ್ಷಿಣೆ ಮಾಡಿ ಅದಕ್ಕೆ ಪೂಜೆ ಸಲ್ಲುಸೆಕು. ಮತ್ತೆ ಅನ್ಯ ಬಂಧುಗಳ ಒಟ್ಟಿಗೆ ಪುತ್ರ° (ಶವಯಾತ್ರೆಯ ನಿಮಿತ್ತ) ಹೆಗಲು ಕೊಡೆಕು. ತನ್ನ ಅಪ್ಪನ ಹೆಗಲ ಮೇಗೆ ಹೊತ್ತು ಏವ ಮಗ° ಶ್ಮಶಾನಕ್ಕೆ ಹೋವುತ್ತನೋ, ಅವ° ಹೆಜ್ಜೆ ಹೆಜ್ಜಗೂ ಅಶ್ವಮೇಧಯಾಗದ ಫಲವ ಪಡೆತ್ತ°.  ತನ್ನ ಅಪ್ಪನ ಹೆಗಲಿಲ್ಲಿ ಅಥವಾ ಬೆನ್ನ ಮೇಗೆ ಅಥವಾ ತೊಡೆಮೇಗೆ ಕೂರ್ಸಿ, ಏವತ್ತೂ ಲಾಲನೆ ಪೋಷಣೆ ಮಾಡಲ್ಪಟ್ಟ ಮಗ°, ತನ್ನ ಅಪ್ಪನ ಹೆಗಲ ಮೇಗೆ ಹೊತ್ತು ತೆಕ್ಕೊಂಡು ಹೋದಪ್ಪಗಳೇ ಅವ° ಆ ಪಿತೃಋಣಂದ ಮುಕ್ತನಪ್ಪದು.

ಮತ್ತೆ, ಅರ್ಧ ಮಾರ್ಗಲ್ಲಿ ಭೂಮಿಯ ಶುದ್ಧಮಾಡಿ, ನೀರು ತಳುದು ಶವಕ್ಕೆ ವಿಶ್ರಾಂತಿ ಮಾಡುಸೆಕು. ಮತ್ತು, ಅಲ್ಲಿ ಶವಕ್ಕೆ ಸ್ನಾನ ಮಾಡ್ಸಿ, ‘ಭೂತ’ ಹೇಳ್ವ ಸಂಜ್ಞೆಂದ ಅದಕ್ಕೆ ಪಿಂಡದಾನ ಮಾಡೆಕು. ಅದರಿಂದ ಅನ್ಯ ದಿಕ್ಕುಗಳಲ್ಲಿಪ್ಪ ಪಿಶಾಚ, ರಾಕ್ಷಸ, ಯಕ್ಷಾದಿಗೊ ಹವನ ಮಾಡ್ಳೆ ಯೋಗ್ಯವಾದ ಆ ದೇವವ ಅಯೋಗ್ಯವನ್ನಾಗಿ ಮಾಡುತ್ತವಿಲ್ಲೆ.

ಮತ್ತೆ, ಶವವ ಸ್ಮಶಾನಕ್ಕೆ ಕೊಂಡೋಗಿ ಅಲ್ಲಿ ಉತ್ತರಾಭಿಮುಖವಾಗಿ ಮಡುಗೆಕು. ಅಲ್ಲಿ ದೇಹದ ದಹನಕ್ರಿಯೆಗಾಗಿ ಸ್ಥಳವ ಶುದ್ಧಗೊಳುಸೆಕು. ಭೂಮಿಯ ತೊಳದು ಮತ್ತೆ ಗೋಮಯ ಸಾರುಸಿ, ರೇಖೆಗಳ ಎಳದು ರಜಾ ಮಣ್ಣು ಗರ್ಪಿ ಹೆರತೆಗದು ವೇದಿಕೆಯ ಮಾಡಿ ನೀರು ತಳುದು ಅದರ ಮೇಗೆ ವಿಧಿಪೂರ್ವಕವಾಗಿ ಅಗ್ನಿಸ್ಥಾಪನೆ ಮಾಡೆಕು. ಪುಷ್ಪ ಅಕ್ಷತಾದಿಗಳಿಂದ ಕ್ರವ್ಯಾದಸಂಜ್ಞಕ° (ಹಸಿಮಾಂಸವ ತಿಂಬವ°) ಅಗ್ನಿದೇವನ ಪೂಜೆ ಮಾಡಿಕ್ಕಿ, ‘ಲೋಮಭ್ಯಃ ಸ್ವಾಹಾ’ ಇತ್ಯಾದಿ ಮಂತ್ರಾನುವಾಕಂಗಳಿಂದ ಯಥಾವಿಧಿ ಹೋಮ ಮಾಡೆಕು.

“ಎಲೈ ಅಗ್ನಿಯೇ!, ನೀನು ಜೀವಿಗಳ ಧಾರಣೆ ಮಾಡುವವ°, ಅವರ ಉತ್ಪನ್ನ ಮಾಡುವವ°, ಮತ್ತು ಜೀವಿಗಳ ಪಾಲನೆ ಮಾಡುವವ° ಆಗಿದ್ದೆ. ಈ ಸಾಂಸಾರಿಕ° ಮರಣ ಹೊಂದಿದ್ದ°.  ನೀನು ಇವನ ಸ್ವರ್ಗಕ್ಕೆ ಕೊಂಡೋಗು”. – ಈ ಪ್ರಕಾರ ಅಗ್ನಿಯ ಪ್ರಾರ್ಥಿಸಿ, ಅಲ್ಲಿಯೇ ಶ್ರೀ ಚಂದನ, ತುಳಸಿ ಕಡ್ಡಿಗಳಿಂದ, ಪಲಾಶಕಾಷ್ಠ ಹಾಂಗೂ ಅಶ್ವತ್ಥ ಕಾಷ್ಠಂಗಳಿಂದ ಚಿತೆಯ ನಿರ್ಮಾಣ ಮಾಡೆಕು.

ಮತ್ತೆ, ಆ ಶವವ ಆ ಚಿತೆಲಿ ಮಡುಗಿ, ಅಲ್ಲಿ ಎರಡು ಪಿಂಡವ- ಒಂದರ ಚಿತೆಲಿಯೂ, ಎರಡ್ನೇದರ ಶವದ ಕೈಲಿ ‘ಪ್ರೇತ’ ಹೇಳ್ವ ಹೆಸರಿಂದ ಮಡುಗೆಕು. ಚಿತೆಲಿ ಮಡಿಗಿದ ಮತ್ತೆ ಆ ಶವಲ್ಲಿ ಪ್ರೇತತ್ವ ಬಂದುಬಿಡುತ್ತು. ‘ಪ್ರೇತಕಲ್ಪ’ವ ತಿಳುದ ವಿದ್ವಾಂಸರು ಚಿತೆಯ ಮೇಗೆ ಪ್ರದಾನ ಮಾಡ್ವ ಪಿಂಡಾಕ್ಕೆ ‘ಸಾಧಕ’ ಹೇಳ್ವ ಹೆಸರಿಂದ ಹೇಳುತ್ತವು. ಹಾಂಗಾಗಿ ಚಿತೆಯ ಮೇಗೆ ‘ಸಾಧಕ’ ಹೆಸರಿಂದ ಮತ್ತೆ ಹಸ್ತಲ್ಲಿ ‘ಪ್ರೇತ’ ಹೇಳ್ವ ಹೆಸರಿಂದ ಪಿಂಡದಾನ ಮಾಡೆಕು.

ಈ ರೀತಿ ಐದು ಪಿಂಡವ ಪ್ರದಾನ ಮಾಡುವದರಿಂದ ಶವಲ್ಲಿ ಆಹುತಿ ಯೋಗ್ಯತೆ ಸಂಪನ್ನವಾವುತ್ತು. ಇಲ್ಲದ್ರೆ ಪೂರ್ವೋಕ್ತ ಪಿಶಾಚ, ರಾಕ್ಷಸ, ಯಕ್ಷಾದಿಗಳ ತೊಂದರೆಗೊ ಆಗಿಹೋವುತ್ತು. ಪ್ರೇತಕ್ಕಾಗಿ ಐದು ಪಿಂಡಗಳ ಪ್ರದಾನಿಸಿ, ಹವನ ಮಾಡಲಾದ ಆ ಕ್ರವ್ಯಾದ ಅಗ್ನಿಯ ಹುಲ್ಲಿಲ್ಲಿ ಮಗ° ತೆಕ್ಕೊಂಡು, ಒಂದು ವೇಳೆ ಮೃತ°, ಪಂಚಕ° ಅಲ್ಲದ್ರೆ ಮಾಂತ್ರ ಚಿತಗೆ ಅಗ್ನಿಯ ಹಾಕೆಕು.

(ಧನಿಷ್ಠ, ಶತಭಿಷಾ, ಪೂರ್ವಾಭದ್ರ, ಉತ್ತರಾಭದ್ರ ರೇವತಿ – ಇವು- ನಕ್ಷತ್ರ ಪಂಚಕಂಗೊ. ಇದನ್ನೇ ನಮ್ಮಲ್ಲಿ ಧನಿಷ್ಠಾ ಪಂಚಕ ಹೇದು ಹೇಳುವದು. ಈ ನಕ್ಷತ್ರಂಗಳಲ್ಲಿ ಮೃತನಾದರೆ ಧನಿಷ್ಠಾಪಂಚಕ ದೋಷ ಹೇದು ಹೇಳುವದು). ಮನುಷ್ಯ°, ಪಂಚಕಲ್ಲಿ ಮರಣ ಹೊಂದಿರೆ ಸದ್ಗತಿ ಪ್ರಾಪ್ತಿ ಆವುತ್ತಿಲ್ಲೆ. ಪಂಚಕಲ್ಲಿ ದಹನ ಸಂಸ್ಕಾರ ಮಾಡ್ಳಾಗ. ಒಂದು ವೇಳೆ ಮಾಡಿರೆ ಇನ್ನೊಂದು ಮರಣ ಸಂಭವುಸುತ್ತು.

ಧನಿಷ್ಠಾ ನಕ್ಷತ್ರದ ಮಧ್ಯಂದ ತೊಡಗಿ ರೇವತೀ ನಕ್ಷತ್ರದ ಅಂತ್ಯದ ವರೇಂಗೆ ಐದು ನಕ್ಷತ್ರಂಗೊ ದಹನ ಸಂಸ್ಕಾರಕ್ಕೆ ಯೋಗ್ಯ ಅಲ್ಲ. ಅದರ್ಲಿ ದಹನ ಮಾಡಿರೆ ಶುಭ ಆವುತ್ತಿಲ್ಲೆ. ಈ ನಕ್ಷತ್ರಂಗಳಲ್ಲಿ ಆರು ಮರಣ ಹೊಂದುತ್ತವೋ, ಅವರ ಮನೇಲಿ ಏನಾರು ಹಾನಿಗೊ ಉಂಟಾವ್ತು. ಅವರ ಪುತ್ರರಲ್ಲಿ, ಗೋತ್ರದವರಲ್ಲಿ ಏನಾರು ವಿಘ್ನಂಗೊ ಉಂಟಾವ್ತು.

ಅಥವಾ, ಈ ಪಂಚಕಲ್ಲೇ ವಿಧಿಪೂರ್ವಕ ದಹನಸಂಸ್ಕಾರ ಮಾಡೇಕು ಹೇದು ಆದರೆ, ಸರ್ವದೋಷಂಗಳ ಪರಿಹರುಸುವ ಆ ವಿಧಿಯ ನಿನಗೆ ಹೇಳುತ್ತೆ, ಕೇಳು-

ಹೇ ವೈನತೇಯ!, ಅಂತಹ ಸಂದರ್ಭಲ್ಲಿ, ಆ ಶವದ ಹತ್ರೆ ದರ್ಭೆಗಳಿಂದ ಮಾಡಿದ ಮಂತ್ರಂಗಳಿಂದ ಅಭಿಮಂತ್ರಿತವಾದ ನಾಲ್ಕು ಬೊಂಬೆಗಳ ಮಾಡೆಕು. ಆ ಬೊಂಬಗೆ ಕಾಸಿ ಶುದ್ಧಗೊಳುಸಿದ ಚಿನ್ನವ ಉಪಯೋಗುಸಿ, ನಕ್ಷತ್ರ ನಾಮಂಗಳಿಂದ ಆಹುತಿ ಕೊಡೆಕು. ‘ಪ್ರೇತಾಜಯತ’ (ಪ್ರೇತಾಜಯತಾ ನರ ಇಂದ್ರೋ ವಃ ಶರ್ಮ ಯಚ್ಛತು..) ಮಂತ್ರಂದ ಪುನಃ ಹೋಮ ಮಾಡೆಕು. ಇದಾದಿಕ್ಕಿ, ಬೊಂಬೆಗಳ ಸಹಿತವಾಗಿ ದಹನ ಸಂಸ್ಕಾರವ ಮಾಡೆಕು. ಪುತ್ರನಾದವ° ಸಪಿಂಡಿ ದಿನ ಅದರ ಶಾಂತಿವಿಧಿಯ ಮಾಡೆಕು. ಎಳ್ಳುತುಂಬಿದ ಪಾತ್ರೆ, ಸುವರ್ಣ, ಬೆಳ್ಳಿ, ರತ್ನ ಮತ್ತೆ ತುಪ್ಪ ತುಂಬಿದ ತಾಮ್ರದ ಪಾತ್ರೆ ಇವುಗಳ ಯಥಾಕ್ರಮವಾಗಿ ದೋಷಂಗಳ ನಿವೃತ್ತಿಗಾಗಿ ದಾನಕೊಡೆಕು. ಈ ರೀತಿ ಶಾಂತಿಕರ್ಮವ ಮಾಡಿಕ್ಕಿ ಆರು ದಹನ ಸಂಸ್ಕಾರವ ಮಾಡುತ್ತವೋ ಅವಕ್ಕೆ ಏವ ವಿಘ್ನಂಗಳೂ ಉಂಟಾವುತ್ತಿಲ್ಲೆ. ಆ ಪ್ರೇತವು ಪರಮ ಗತಿಯ ಹೊಂದುತ್ತ°.

 

[ಚಿಂತನೀಯಾ –

 

ಮನುಷ್ಯ° ಜೀವಲ್ಲಿ ಇಪ್ಪನ್ನಾರ ಮಾತ್ರ ಅವಂಗೆ ಸ್ಥಾನಮಾನ ಗೌರವ ಆದರ ಎಲ್ಲ. ಸತ್ತಮತ್ತೆ ಆರಿಂಗೂ ಬೇಡ. ಒಂದರಿ ಹೊತ್ತುಸಿ ಬೂದಿ ಮಾಡಿರೆ ಸಾಕು ಹೇದು ಕಾಂಬದು. ಹಾಂಗೇ ಅಂತೇ ಕಟ್ಟಿ ಬಲುಗಿ ಕೊಂಡೋಗಿ ಕಿಚ್ಚಿಂಗೆ ಹಾಕಿಕ್ಕಿ ಬಂದರೆ ಕೆಲಸ ಮುಗುತ್ತು ಹೇದು ಗ್ರೇಶುವೋರು ಅನೇಕ ಮಂದಿಗೊ. ಆದರೆ ಮೃತನ ಸದ್ಗತಿಗೋಸ್ಕರ ಅಂತ್ಯೇಷ್ಟಿ ಕಾರ್ಯ ಅತೀ ಆವಶ್ಯ. ಅಂತ್ಯೇಷ್ಟಿ ಮಾಡದ್ದವಂಗೆ ಸದ್ಗತಿ ಉಂಟಾವುತ್ತಿಲ್ಲೆ. ಮೃತನ ಅಂತ್ಯೇಷ್ಟಿಯ ವಿಧಿಯುಕ್ತವಾಗಿ ಮಾಡೆಕು. ಅದರಿಂದ ಮೃತಂಗೂ ಸದ್ಗತಿ, ಪುತ್ರ ಪೌತ್ರರಿಂಗೂ ಶುಭ. ತನ್ನ ಹೆತ್ತು ಹೊತ್ತು ಕೊಣುದು ಕೊಂಗಾಟ ಮಾಡಿ ಬೆಳೆಶಿದ ಅಬ್ಬೆ-ಅಪ್ಪನ ಋಣ ಪುತ್ರನಾದವನ ಜೀವಮಾನಕ್ಕೆ ಇದ್ದು. ಅದರ ಶ್ರದ್ಧಾಪೂರ್ವಕವಾಗಿ ಆಚೆರುಸೆಕ್ಕಾದ್ದು ಮಗನಾದವನ ಕರ್ತವ್ಯ. ಪಿತೃಕಾರ್ಯವ ಮಾಡದ್ದ ಮಗ° ಪಿತೃಋಣಂದ ಎಂದಿಂಗೂ ಮುಕ್ತನಾವುತ್ತನಿಲ್ಲೆ. ಅಂತಹ ಮಗಂಗೆ ಎಂದಿಂಗೂ ಏಳಿಗೆಯೂ ಇಲ್ಲೆ.  ಈ ಶ್ರದ್ಧಾಪೂರ್ವಕ ಗೌರವ ಪ್ರತಿಯೊಬ್ಬನಲ್ಲೂ ಜಾಗೃತವಾಗಿರಲಿ ಹೇದುಗೊಂಡು ಈ ಭಾಗಕ್ಕೆ ಹರೇ ರಾಮ ]

 

ಮುಂದೆ ಎಂತರ ?…     ಮುಂದಾಣ ಭಾಗಲ್ಲಿ ನೋಡುವೋ°

 

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಧನಿಷ್ಟಾ ಪಂಚಕ ದೋಷ ವಿಚಾರ ತಿಳುದ್ದದು ತುಂಬಾ ಒಳ್ಳೇದಾತು. ಶವ ಸಂಸ್ಕಾರ ರೀತಿ ತಿಸಿದ್ದಕ್ಕೆ ಧನ್ಯವಾದ.ಬೆಂಗಳೂರಿಲ್ಲಿ ಶವದ ಬಾಯಿಗೆ ಸಂಭಂದಿಕರು ಅಕ್ಕಿ ಹಾಕುವುದು ನೋಡಿದ್ದೆ. ಇದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ. ಹರೇ ರಾಮ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಹರೇ ರಾಮ ಭಾವಂಗೆ.

  ನಮ್ಮದರ್ಲಿಯೂ ಇದ್ದು ಅದು. ಆದರೆ ನಾವು ನಿಂಗಳ ಬೆಂಗಳೂರ್ಲಿ ಮಾಡ್ತಷ್ಟು ಗೌಜಿಗೆ ಮಾಡ್ಳೆ ಇಲ್ಲೆ.

  ಮೃತಂಗೆ ಈ ಭೂಮಿ ಋಣ ಮುಗುತ್ತು ಹೇಳ್ವ ಸೂಚಕವಾಗಿ – ‘ದಧಿಮಧುಘೃತಂ ತಿಲತಂಡುಲಾಂಶ್ಚ ಸಮುದಾಯಿತ್ಯ ಶವಮುಖೇ ನಿವಪತಿ’ ಹೇದು “ಭುವನಸ್ಯಪತೇ ಇದಗ್‍ಂ ಹವಿಃ……” ಮಂತ್ರಂದ ಈ ಹೇಳಿದ ವಸ್ತುಗಳ ಮಿಶ್ರಮಾಡಿ ಶವದ ಬಾಯಿಗೆ ಹಾಕುತ್ತದು ಪ್ರಯೋಗಲ್ಲಿ ಇದ್ದು.

  [Reply]

  VA:F [1.9.22_1171]
  Rating: +2 (from 2 votes)
 2. ಕೆ. ವೆಂಕಟರಮಣ ಭಟ್ಟ

  ಧನ್ಯವಾದ ಹರೇ ರಾಮ.

  [Reply]

  VA:F [1.9.22_1171]
  Rating: +1 (from 1 vote)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸತ್ತ ನಂತರದ ದೇಹಕ್ಕೆ (ಶವಕ್ಕೆ) ಮಗನಾದವ ಕೊಡೆಕಾದ ಸಂಸ್ಕಾರ, ಅದರಿಂದ ಅವಂಗೆ ಸಿಕ್ಕುವ ಲಾಭ ಮತ್ತೆ ಪಿತೃ ಋಣ ಸಂದಾಯ ಅಪ್ಪದು, ಈ ಎಲ್ಲಾ ವಿವರಂಗೊ ಲಾಯಿಕಲಿ ತಿಳಿಶಿ ಕೊಟ್ಟ ಲೇಖನ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ವಸಂತರಾಜ್ ಹಳೆಮನೆರಾಜಣ್ಣಪೆರ್ಲದಣ್ಣಶೇಡಿಗುಮ್ಮೆ ಪುಳ್ಳಿಕಜೆವಸಂತ°ದೊಡ್ಡಭಾವಕೆದೂರು ಡಾಕ್ಟ್ರುಬಾವ°ಅಕ್ಷರ°ಸಂಪಾದಕ°ಡೈಮಂಡು ಭಾವಚುಬ್ಬಣ್ಣವಿದ್ವಾನಣ್ಣಪುತ್ತೂರುಬಾವಕೊಳಚ್ಚಿಪ್ಪು ಬಾವನೆಗೆಗಾರ°ಶ್ಯಾಮಣ್ಣಬಟ್ಟಮಾವ°ಚೆನ್ನಬೆಟ್ಟಣ್ಣಶರ್ಮಪ್ಪಚ್ಚಿಜಯಶ್ರೀ ನೀರಮೂಲೆಶುದ್ದಿಕ್ಕಾರ°ತೆಕ್ಕುಂಜ ಕುಮಾರ ಮಾವ°ಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ