ಗರುಡ ಪುರಾಣ – ಅಧ್ಯಾಯ 13 – ಭಾಗ 02

December 26, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರ ಹದಿಮೂರನೇ ಅಧ್ಯಾಯದ ಪ್ರಥಮ ಭಾಗಲ್ಲಿ ಸಪಿಂಡೀಕರಣವ ಮಾಡಿಕ್ಕಿ ದೇಹಶುದ್ಧಿಯಾಗ್ಯೊಂಡು ಶಯ್ಯಾದಾನವ ಮಾಡೆಕು ಹೇಳಿ ಓದಿದಲ್ಯಂಗೆ ನಿಲ್ಸಿದ್ದದು. ಮುಂದೆ-

 

ಗರುಡ ಪುರಾಣ – ಅಧ್ಯಾಯ 13 – ಭಾಗ 02

 

ಶಯ್ಯಾದಾನಂ ಪ್ರಶಂಸಂತಿ ಸರ್ವೇ ದೇವಾಃ ಸವಾಸವಾಃ ।images
ತಸ್ಮಾಚ್ಛಯ್ಯಾ ಪ್ರದಾತವ್ಯಾ ಮರಣೇ ಜೀವಿತೇsಪಿ ವಾ ॥೫೯॥

ಶಯ್ಯಾದಾನವ  (ಮಂಚ) ಇಂದ್ರನ ಸಮೇತ ಎಲ್ಲ ದೇವತೆಗಳೂ ಪ್ರಶಂಸಿಸುತ್ತವು. ಹಾಂಗಾಗಿ ಬದುಕ್ಕಿಪ್ಪಗಳದರೂ, ಮರಣ ಹೊಂದಿದ ಮತ್ತೆಯಾರೂ ಶಯ್ಯಾದಾನವ ಮಾಡೆಕು.

ಸಾರದಾರುಮಯೀಂ ರಮ್ಯಾಂ ಸುಚಿತ್ರೈಶ್ಚಿತ್ರಿತಾಂ ದೃಢಾಮ್ ।
ಪಟ್ಟಸೂತ್ರೈರ್ವಿತನಿತಾಂ ಹೇಮಪತ್ರೈರಲಂಕೃತಾಮ್ ॥೬೦॥

ಶಕ್ತಿಯುತವಾದ (ಒಳ್ಳೆ) ಮರಂದ ಮಾಡಲ್ಪಟ್ಟ, ಮನೋಹರವಾದ ಸುಂದರ ಚಿತ್ರಂಗಳಿಂದ ಚಿತ್ರಿತವಾದ, ಪರಿಪುಷ್ಟವಾದ, ರೇಶ್ಮೆ ವಸ್ತ್ರಂದ ಹೊದೆಶಿದ, ಚಿನ್ನದ ಎಲೆಗಳಿಂದಲಂಕೃತವಾದ

ಹಂಸತೂಲೀಪ್ರತಿಚ್ಛನ್ನಾಂ ಶುಭಶೀರ್ಷೋಪಧಾನಿಕಾಮ್ ।
ಪ್ರಚ್ಛಾದನಪಟೀಯುಕ್ತಾಂ ಪುಷ್ಪಗಂಧೈಃ ಸುವಾಸಿತಾಮ್ ॥೬೧॥

ಹಂಸದ ಹಾಂಗೆ ಬೆಳ್ಳಂಗೆ ಇಪ್ಪ, ಹತ್ತಿಂದ ತುಂಬಿದ ಚಂದದ ತಲೆಗೊಂಬು ಮತ್ತೆ ಹೊದವ ನಯಗಂಬಳಿಂದೊಡಗೂಡಿದ, ಪುಷ್ಪಗಂಧಂಗಳಿಂದ ಸುವಾಸಿತವಾದ,

ದಿವ್ಯಬಂಧೈಃ ಸುಬದ್ಧಾಂ ಚ ಸುವಿಶಾಲಾಂ ಸುಖಪ್ರದಾಮ್ ।
ಶಯ್ಯಾಮೇವವಿಧಾಂ ಕೃತ್ವಾ ಹ್ಯಾಸ್ತೃತಾಯಾಂ ನ್ಯಸೇದ್ಭುವಿಃ ॥೬೨॥

ದಿವ್ಯಬಂಧಂಗಳಿಂದ ಹೆಣದ (ಲಾಯಕಕ್ಕೆ ಕಟ್ಟಿದ), ವಿಶಾಲವಾದ, ಸುಖದಾಯಕವಾದ ರತ್ನಗಂಬಳಿ ಹಾಸಿದ ಶಯ್ಯೆಯ (ಮಂಚ) ಮಾಡಿ ಭೂಮಿಲಿ (ನೆಲಕ್ಕೆ) ಮಡುಗೆಕು.

ಛತ್ರಂ ದೀಪಾಲಯಂ ರೌಪ್ಯಂ ಚಾಮರಾಸನಭಾಜನಮ್ ।
ಭೃಂಗಾರಕರಕಾದರ್ಶಂ ಪಂಚವರ್ಣವಿತಾನಕಮ್ ॥೬೩॥

ಕೊಡೆ, ಬೆಳ್ಳಿದೀಪ, ಚಾಮರ, ಆಸನ, ಪಾತ್ರೆ, ಚಿನ್ನದ ಗಿಂಡಿ, ಕಮಂಡಲು, ಕನ್ನಾಟಿ, ಪಂಚವರ್ಣದ ತಳಿರುತೋರಣ ಕಟ್ಟೆಕು.

ಶಯನಸ್ಯ ಭವೇತ್ಕಿಂಚಿದನ್ಯಚ್ಚಾನ್ಯದುಪಕಾರಕಮ್ ।
ತತ್ಸರ್ವಂ ಪರಿತಸ್ತಸ್ಯಾಃ ಸ್ವೇ ಸ್ವೇ ಸ್ಥಾನೇ ನಿಯೋಜಯೇತ್ ॥೬೪॥

ಶಯ್ಯೆಗೆ ಬೇಕಾದ ಇನ್ನೂ ಇತರ ವಸ್ತುಗಳೆಲ್ಲವ ಹಾಸಿಗೆಯ ಸುತ್ತಲೂ ಅದರದರ ಜಾಗೆಲಿ ಮಡುಗೆಕು.

ತಸ್ಯಾಂ ಸಂಸ್ಥಾಪಯೇದ್ದೈಮಂ ಹರಿಂ ಲಕ್ಷ್ಮೀಸಮನ್ವಿತಮ್ ।
ಸರ್ವಾಭರಣಸಂಯುಕ್ತಮಾಯುಧಾಂಬರಸಂಯುತಮ್ ॥೬೫॥

ಅದರ ಮೇಗೆ ಸರ್ವಾಭರಣಭೂಷಿತನಾದ ಆಯುಧ, ವಸ್ತ್ರಂಗಳಿಂದೊಡಗೂಡಿದ ಚಿನ್ನಂದ ಮಾಡಿದ ಲಕ್ಷ್ಮೀಸಮೇತನಾದ ನಾರಾಯಣನ ಪ್ರತಿಮೆಯ ಮಡುಗೆಕು.

ಸ್ತ್ರೀಣಾಂ ಚ ಶಯನೇ ಧೃತ್ವಾ ಕಜ್ಜಲಾಲಕ್ತಕುಂಕುಮಮ್ ।
ವಸ್ತ್ರಂ ಭೂಷಾಧಿಕಂ ಯಚ್ಚ ಸರ್ವಮೇವ ಪ್ರದಾಪಯೇತ್ ॥೬೬॥

ಸ್ತ್ರೀ ಶಯ್ಯೆ ಮೇಗೆ ಕಾಡಿಗೆ, ಅರಶಿನ, ಕುಂಕುಮ, ವಸ್ತ್ರ, ಆಭರಣ ಇತ್ಯಾದಿಗಳ ಮಡಿಗಿ ದಾನಕೊಡೆಕು.

ತತೋ ವಿಪ್ರಂ ಸಪತ್ನೀಕಂ ಗಂಧಪುಷ್ಪೈರಲಂಕೃತಂ ।
ಕರ್ಣಾಂಗುಲೀಯಾಭರಣೈಃ ಕಂಠಸೂತ್ರೈಶ್ಚ ಕಾಂಚನೈಃ ॥೬೭॥

ಮತ್ತೆ ಗಂಧ, ಪುಷ್ಪ, ಓಲೆ, ಉಂಗುರ ಮತ್ತೆ ಚಿನ್ನದ ಮಾಲೆಂದ ಅಲಂಕೃತವಾದ ಪತ್ನೀಸಮೇತ ಬ್ರಾಹ್ಮಣನ

ಉಷ್ಣೀಷಮುತ್ತರೀಯಂ ಚ ಚೋಲಕಂ ಪರಿಧಾಯ ಚ ।
ಸ್ಥಾಪಯೇತ್ಸುಖಶಯ್ಯಾಯಾಂ ಲಕ್ಷ್ಮೀನಾರಾಯಣಾಗ್ರತಃ ॥೬೮॥

ಮುಂಡಾಸು, ಉತ್ತರೀಯ, ಮತ್ತೆ ಅಂಗಿ ಧರಿಸಿಪ್ಪ ಅವನ ಆ ಸುಖ ಹಾಸಿಗೆಲಿ ಲಕ್ಷ್ಮೀನಾರಯಣ ಪ್ರತಿಮೆಯ ಮುಂದೆ ಕೂರುಸೆಕು.

ಕುಂಕುಮೈಃ ಪುಷ್ಪಮಾಲಾಭಿರ್ಹರಿಂ ಲಕ್ಷ್ಮೀಸಮರ್ಚಯೇತ್ ।
ಪೂಜಯೇಲ್ಲೋಕಪಾಪಾಂಶ್ಚ ಗ್ರಹಾನ್‍ದೇವೀಂ ವಿನಾಯಕಮ್ ॥೬೯॥

ಕುಂಕುಮ ಹಾಂಗೂ ಪುಪ್ಷಮಾಲೆಗಳಿಂದ ಲಕ್ಷ್ಮೀನಾರಾಯಣರ ಪೂಜೆ ಮಾಡೆಕು. ಮತ್ತೆ ಲೋಕಪಾಲರನ್ನೂ, ನವಗ್ರಹಂಗಳನ್ನೂ, ದೇವಿಯನ್ನೂ, ವಿನಾಯಕನನ್ನೂ ಪೂಜೆಮಾಡೆಕು.

ಉತ್ತರಾಭಿಮುಖೋ ಭೂತ್ವಾ ಗೃಹೀತ್ವಾ ಕುಸುಮಾಂಜಲಿಮ್ ।
ಉಚ್ಚಾರಯೇದಿಮಂ ಮಂತ್ರಂ ವಿಪ್ರಸ್ಯ ಪುರತಃ ಸ್ಥಿತಃ ॥೭೦॥

ಉತ್ತರಾಭಿಮುಖವಾಗಿ ಕೈಲಿ ಹೂಗುಹಿಡ್ಕೊಂಡು ಬ್ರಾಹ್ಮಣನ ಎದುರು ನಿಂದೊಂಡು ಈ ಮಂತ್ರವ ಹೇಳೆಕು –

ಯಥಾ ಕೃಷ್ಣ ತ್ವದೀಯಾಸ್ತಿ ಶಯ್ಯಾ ಕ್ಷೀರೋದಸಾಗರೇ ।
ತಥಾ ಭೂಯಾದಶೂನ್ಯೇಯಂ ಮಮ ಜನ್ಮನಿ ಜನ್ಮನಿ ॥೭೧॥

ಹೇ ಕೃಷ್ಣ!, ಯಾವ ಪ್ರಕಾರ ಕ್ಷೀರಸಾಗರಲ್ಲಿ ನಿನ್ನ ಶಯ್ಯೆ ಇದ್ದೋ, (ಹೇಂಗೆ ನಿನ್ನ ಶಯ್ಯೆ ಕ್ಷೀರಸಾಗರವಾಗಿದ್ದೋ)  ಹಾಂಗೇ ಜನ್ಮಜನ್ಮಂಗಳಲ್ಲಿ ಎನ್ನ ಈ ಶಯ್ಯೆ ಶೂನ್ಯ ಆಗದ್ದೆ ಇರಳಿ.

ಏವಂ ಪುಷ್ಪಾಂಜಲೀಂ ವಿಪ್ರೇ ಪ್ರತಿಮಾಯಾಂ ಹರೇಃ ಕ್ಷಿಪೇತ್ ।
ತತಃ ಸೋಪಸ್ಕರಂ ಶಯ್ಯಾದಾನಂ ಸಂಕಲ್ಪ ಪೂರ್ವಕಮ್ ॥೭೨॥

ಈ ರೀತಿ ಪುಷ್ಪಾಂಜಲಿಯ ಬ್ರಾಹ್ಮಣನತ್ರೆ, ಲಕ್ಷ್ಮೀನಾರಾಯಣ ಪ್ರತಿಮೆಯತ್ರೆ ಹಾಕೆಕು. ಮತ್ತೆ ಸಂಕಲ್ಪಪೂರ್ವಕವಾಗಿ ಎಲ್ಲ ಸಾಮಾಗ್ರಿಗಳ ಸಮೇತ ಶಯ್ಯಾದಾನ ಮಾಡೆಕು.

ದದ್ಯಾದ್ವ್ರತೋಪದೇಷ್ಟ್ರೇ ಚ ಗುರವೇ ಬ್ರಹ್ಮವಾದಿನೇ ।
ಗೃಹಾಣ ಬ್ರಾಹ್ಮಣೈನಾಂ ತ್ವಂ ಕೋ ದದಾತೀತಿ ಕೀರ್ತಯನ್ ॥೭೩॥

ವ್ರತನಿಷ್ಠನಾದ,  ಗುರುವಾಗಿಪ್ಪ, ಬ್ರಹ್ಮವಾದಿಯಾಗಿಪ್ಪ ಬ್ರಾಹ್ಮಣಂಗೆ  ‘ಹೇ ಬ್ರಾಹ್ಮಣ, ಇದರ ನೀನು ಸ್ವೀಕರಿಸು’ ಹೇಳಿಗೊಂಡು ದಾನ ಕೊಡೆಕು. ತೆಕ್ಕೊಂಬ ಬ್ರಾಹ್ಮಣ “ಕೊಡುತ್ತಿಪ್ಪವ° ಆರು!” ಹೇದು ಕರ್ತೃತ್ವಾಭಿಮಾನರಹಿತನಾಗಿ ಹೇಳೆಕು.

ಆಂದೋಲಯೇದ್ದ್ವಿಜಂ ಲಕ್ಷ್ಮೀಂ ಹರಿಂ ಚ ಶಯನೇ ಸ್ಥಿತಮ್ ।
ತತಃ ಪ್ರದಕ್ಷಿಣೀ ಕೃತ್ಯ ಪ್ರಣಿಪತ್ಯ ವಿಸರ್ಜಯೇತ್ ॥೭೪॥

ಮತ್ತೆ ಶಯ್ಯೆಲಿ ಕೂದಿಪ್ಪ ಬ್ರಾಹ್ಮಣನ, ಲಕ್ಷ್ಮೀನಾರಾಯಣರ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡಿ ವಿಸರ್ಜನೆ ಮಾಡೆಕು.

ಸರ್ವೋಪಸ್ಕರಣೈರ್ಯುಕ್ತಂ ಪ್ರದದ್ಯಾದತಿಸುಂದರಮ್ ।
ಶಯ್ಯಾಯಾಂ ಸುಖಸುಪ್ತರ್ಥಂ ಗೃಹಂ ಚ ವಿಭವೇ ಸತಿ ॥೭೫॥

ಶಯ್ಯೆಲಿ ಸುಖವಾಗಿ ಒರಗಲೆ, ಸಂಪತ್ತಿಪ್ಪೋರಾದರೆ ಸಕಲ ಸಾಮಾಗ್ರಿಗಳ ಸಮೇತವಾಗಿ, ಚೆಂದದ ಮನೆಯನ್ನೂ ಉದಾರವಾಗಿ ದಾನಮಾಡೆಕು.

ಜೀವಮಾನಃ ಸ್ವಹಸ್ತೇನ ಯದಿ ಶಯ್ಯಾಂ ದದಾತಿ ಯಃ ।
ತಜ್ಜೀವತಾ ವೃಷೋತ್ಸರ್ಗಂ ಪರ್ವಣೀಷು ಸಮಾಚರೇತ್ ॥೭೬॥

ತನ್ನ ಜೀವಮಾನಲ್ಲೇ ಆರು ಸ್ವಹಸ್ತಲ್ಲೇ ಶಯ್ಯಾದಾನವ ಒಂದು ವೇಳೆ ಮಾಡಿದ್ದಿದ್ದರೆ, ಅವ್ವು ಪರ್ವದಿನಂಗಳಲ್ಲಿ ವೃಷೋತ್ಸರ್ಗವ ಆಚರುಸೆಕು.

ಇಯಮೇಕಸ್ಯ ದಾತವ್ಯಾ ಬಹೂನಾಂ ನ ಕದಾಚನ ।
ಸಾ ವಿಭಕ್ತಾಃ ಚ ವಿಕ್ರೀತಾ ದಾತಾರಂ ಪಾತಯತ್ಯಧಃ ॥೭೭॥

ಈ ಶಯ್ಯಾದಾನವ ಒಬ್ಬಂಗೇ ಕೊಡೆಕು. ಬಹುಜನಕ್ಕೆ ಎಂದಿಂಗೂ ಕೊಡ್ಳಾಗ. ಹಂಚಿ ಹೋದ ಮತ್ತು ಮಾರಲ್ಪಟ್ಟ ಈ ಶಯ್ಯಾದಾನವು ದಾನಿಯ ನರಕಕ್ಕೆ ತಳ್ಳುತ್ತು.

ಪಾತ್ರೇ ಪ್ರದಾಯ ಶಯನಂ ವಾಂಛಿತಂ ಫಲಮಾಪ್ನುಯಾತ್ ।
ಪಿತಾ ಚ ದಾತಾ ತನಯಃ ಪರತ್ರೇಹ ಚ ಮೋದತೇ ॥೭೮॥

ಸತ್ಪಾತ್ರಂಗೆ ಶಯ್ಯಾದಾನವ ಮಾಡಿ ಅಪೇಕ್ಷಿಸಿದ ಫಲವ ಪಡದು, ಅಪ್ಪ° ಮತ್ತೆ ದಾನಿಯಾದ ಮಗ° ಇಹಪರಲ್ಲಿ ಸಂತೋಷಪಡುತ್ತವು.

ಪುರಂದರಗೃಹೇ ದಿವ್ಯೇ ಸೂರ್ಯಪುತ್ರಾಲಯೇ ನ ಚ ।
ಉಪತಿಷ್ಠೇನ್ನ ಸಂದೇಹಃ ಶಯ್ಯಾದಾನ ಪ್ರಭಾವತಃ ॥೭೯॥

ಶಯ್ಯಾದಾನದ ಪ್ರಭಾವಂದ ದಾನಿ ದಿವ್ಯವಾದ ಇಂದ್ರಲೋಕಲ್ಲಿ ವಾಸಿಸುತ್ತ°, ಸೂರ್ಯಪುತ್ರನಾದ ಯಮನ ಲೋಕವ ತಲಪುತ್ತನಿಲ್ಲೆ. ಇದರ್ಲಿ ಏವ ಸಂಶಯವೂ ಇಲ್ಲೆ.

ವಿಮಾನವರಮಾರೂಢಃ ಸೇವ್ಯಮಾನೋsಪ್ಸರೋಗಣೈಃ ।
ಆಭೂತಸಂಪ್ಲವಂ ಯಾವತ್ತಿಷ್ಠತ್ಯಾತಂಕವರ್ಜಿತಃ ॥೮೦॥

ಅವ° ಶ್ರೇಷ್ಠವಾದ ವಿಮಾನವ ಏರಿಗೊಂಡು ಅಪ್ಸರೆಯರಿಂದ ಸೇವಿಸಲ್ಪಟ್ಟುಗೊಂಡು ಪ್ರಳಯಕಾಲದವರೆಂಗೆ ತೊಂದರೆಗಳಿಲ್ಲದ್ದೆ ಇರುತ್ತ°.

ಸರ್ವತೀರ್ಥೇಷು ಯತ್ಪುಣ್ಯಂ ಸರ್ವಪರ್ವದಿನೇಷು ಚ ।
ತೇಭ್ಯಶ್ಚಾಪ್ಯಧಿಕಂ ಪುಣ್ಯಂ ಶಯ್ಯಾದಾನೋದ್ಭವಂ ಭವೇತ್ ॥೮೧॥

ಸಕಲ ತೀರ್ಥಂಗಳಲ್ಲಿಯೂ, ಮತ್ತೆ ಎಲ್ಲ ಪರ್ವದಿನಂಗಳಲ್ಲಿಯೂ ಏವ ಪುಣ್ಯ ಇದ್ದೋ ಅದರಿಂದ ಹೆಚ್ಚಿಗಾಣ ಪುಣ್ಯ ಶಯ್ಯಾದಾನಂದ ಉಂಟಾವ್ತು.

ಏವಂ ದತ್ವಾ ಸುತಃ ಶಯ್ಯಾಂ ಪದದಾನಂ ಪ್ರದಾಪಯೇತ್ ।
ತಚ್ಛೃಣುಷ್ವ ಮಯಾಖ್ಯಾತಂ ಯಥಾವತ್ಕಥಯಾಮಿ ತೇ ॥೮೨॥

ಈ ರೀತಿ ಮಗ° ಶಯ್ಯಾದಾನವ ಮಾಡಿಕ್ಕಿ ಮತ್ತೆ ಪದದಾನವ ಮಾಡೆಕು. ಅದರ ವರ್ಣನೆಯ ಎನ್ನತ್ರಂದ ಕೇಳು. ಅದರ ಯಥಾವತ್ತಾಗಿ ನಿನಗೆ ಹೇಳುತ್ತೆ.

 

ಪದದಾನ ವಿಷಯವಾಗಿ ಭಗವಂತ° ಎಂತ ಹೇಳಿದ° ಹೇಳ್ವದರ ಬಪ್ಪವಾರ ನೋಡುವೋ°

 

 

ಗದ್ಯರೂಪಲ್ಲಿ –

ಇಂದ್ರಾದಿ ದೇವತೆಕ್ಕೊ ಶಯ್ಯಾದಾನವ ಪ್ರಶಂಸೆ ಮಾಡುತ್ತವು. ಹಾಂಗಾಗಿ ಮೃತನ ಉದ್ದೇಶಂದ ಮೃತ್ಯುವಿನ ನಂತ್ರ ಅಥವಾ ಜೀವನ ಕಾಲಲ್ಲಿಯೂ ಕೂಡ ಶಯ್ಯಾದಾನ ಮಾಡೆಕು. ಶಯ್ಯೆ (ಮಂಚ) ಸುಂದರ ಸಾರವತ್ತಾದ ಮರಂದ, ನಾನಾ ಚಿತ್ರ ವಿಚಿತ್ರ ಚಿತ್ರಿತ, ದೃಢ, ರೇಶ್ಮೆ ವಸ್ತ್ರಂದ ಹೊದೆಶಿದ, ಚಿನ್ನದ ಎಲೆಗಳಿಂದಲಂಕೃತವಾದ, ಹಂಸದ ಹಾಂಗೆ ಬೆಳ್ಳಂಗೆ ಇಪ್ಪ ಹತ್ತಿಂದ ತುಂಬಿದ ಚಂದದ ತಲೆಗೊಂಬು ಮತ್ತೆ ಹೊದವ ನಯಗಂಬಳಿಂದೊಡಗೂಡಿದ, ಪುಷ್ಪಗಂಧಂಗಳಿಂದ ಸುವಾಸಿತವಾದ,  ದಿವ್ಯಬಂಧಂಗಳಿಂದ ಹೆಣದ (ಲಾಯಕಕ್ಕೆ ಕಟ್ಟಿದ), ವಿಶಾಲವಾದ, ಸುಖದಾಯಕವಾದ ರತ್ನಗಂಬಳಿ ಹಾಸಿದ ಶಯ್ಯೆಯ (ಮಂಚ) ಮಾಡಿ ಭೂಮಿಲಿ (ನೆಲಕ್ಕೆ) ಮಡುಗೆಕು. ಆ ಶಯ್ಯೆಯ ನಾಲ್ಕೂ ದಿಕ್ಕುಗಳಲ್ಲಿ ಛತ್ರ, ಬೆಳ್ಳಿ ದೀಪ, ಚಾಮರ, ಆಸನ ಮತ್ತೆ ಪಾತ್ರ, ಚೆಂಬು ಅಥವಾ ಕಲಶ, ಕಮಂಡಲು, ಕನ್ನಾಟಿ, ಪಂಚವರ್ಣದ ಒಂದು ಸಣ್ಣ ತಳಿರುತೋರಣ ಕಟ್ಟೆಕು. ಶಯನೋಪಯೋಗಿ ಎಲ್ಲ ಸಾಮಾಗ್ರಿಗಳ ಅದರ್ಲಿ ಯಥಾಯಥಾಸ್ಥಾನಲ್ಲಿ ಮಡುಗೆಕು. ಆ ಶಯ್ಯೆಯ ಮೇಗೆ ಎಲ್ಲ ಪ್ರಕಾರದ ಆಭೂಷಣ, ಆಯುಧ ಮತ್ತೆ ವಸ್ತ್ರಲ್ಲಿ ಹೊದೆಶಿದ ಚಿನ್ನದ ಶ್ರೀಲಕ್ಷ್ಮೀ-ನಾರಾಯಣ ಪ್ರತಿಮೆಯ ಮಡುಗೆಕು.

ಸೌಭಾಗ್ಯವತೀ ಸ್ತ್ರೀಗೆ (ಹೆಮ್ಮಕ್ಕೊಗೆ) ಕೊಡ್ತ ಶಯ್ಯೆಯೊಟ್ಟಿಂಗೆ ಮೇಗೆ ಹೇಳಿದ ಎಲ್ಲ ಸಾಮಾಗ್ರಿಗೊ ಅಲ್ಲದ್ದೆ ಕಾಡಿಗೆ, ಅರಶಿನ-ಕುಂಕುಮ, ಸ್ತ್ರೀಯೋಚಿತ ವಸ್ತ್ರಾಭರಣ, ಸೌಭಾಗ್ಯದ್ರವ್ಯಾದಿ ಎಲ್ಲವನ್ನೂ ಕೊಡೆಕು. ಮತ್ತೆ ಬ್ರಾಹ್ಮಣ ದಂಪತಿಗಳ ಗಂಧ-ಪುಷ್ಪಾದಿಗಳಿಂದ ಅಲಂಕೃತಗೊಳುಸಿ, ಆ ಹೆಮ್ಮಕ್ಕೊಗೆ ಕರ್ಣಾಭರಣ, ಉಂಗುರ, ಬಂಗಾರದ ಕಂಠಾಭರಣಂದ ಅಲಂಕಾರ ಮಾಡೆಕು. ಮತ್ತೆ, ಆ ಬ್ರಾಹ್ಮಣಂಗೆ ಮುಂಡಾಸು, ಹೊದವ ಶಾಲು, ಅಂಗಿ ಹಾಕಿ ಅಲಂಕರುಸಿ, ಶ್ರೀಲಕ್ಷ್ಮೀ-ನಾರಾಯಣ  ಪ್ರತಿಮೆಯ ಎದುರಿಲ್ಲಿ ಈ ಸುಖಶಯ್ಯೆಯ ಮೇಗೆ ಕೂರುಸೆಕು.

ಕುಂಕುಮ ಮತ್ತೆ ಪುಷ್ಪಮಾಲೆ ಮುಂತಾದವುಗಳಿಂದ ಶ್ರೀಲಕ್ಷ್ಮೀನಾರಾಯಣರಿಂಗೆ ಪೂಜೆಯ ವಿಧಿವತ್ತಾಗಿ ಮಾಡೆಕು. ಮತ್ತೆ ಲೋಕಪಾಲ, ನವಗ್ರಹ, ದೇವಿ ಹಾಂಗೂ ವಿನಾಯಕ -ಇವಕ್ಕೆ ಪೂಜೆ ಮಾಡೆಕು. ಉತ್ತರಾಭಿಮುಖವಾಗಿ ಕೈಲಿ ಹೂಗು ತೆಕ್ಕೊಂಡು, ಬ್ರಾಹ್ಮಣನ ಎದುರ್ಲಿ ನಿಂದುಗೊಂಡು ಈ ಮಂತ್ರವ ಹೇಳೆಕು – ಹೇ ಕೃಷ್ಣ!, ಯಾವ ಪ್ರಕಾರ ಕ್ಷೀರಸಾಗರಲ್ಲಿ ನಿನ್ನ ಶಯ್ಯೆ ಇದ್ದೋ, ಅದೇ ಪ್ರಕಾರ ಜನ್ಮ ಜನ್ಮಾಂತರಲ್ಲಿ ಎನ್ನ ಈ ಶಯ್ಯೆ ಸಾನ ಶೂನ್ಯ ಆಗದ್ದಿರಳಿ. ಈ ಪ್ರಕಾರ ಪ್ರಾರ್ಥನೆಯ ಮಾಡಿಕ್ಕಿ, ಬ್ರಾಹ್ಮಣ ಮತ್ತೆ ಶ್ರೀಲಕ್ಷ್ಮೀನಾರಾಯಣರಿಂಗೆ ಹೂಗಿನ ಅರ್ಪುಸೆಕು. ಮತ್ತೆ ಸಂಕಲ್ಪಪೂರ್ವಕ ಸಮಸ್ತ ಪರಿಕರ ಸಹಿತ ವ್ರತನಿಷ್ಠನಾದವಂಗೆ, ಗುರುವಾಗಿಪ್ಪವಂಗೆ, ಬ್ರಹ್ಮವಾದಿಯಾಗಿಪ್ಪವಂಗೆ ದಾನ ಕೊಡೆಕು. ತೆಕ್ಕೊಂಬ ಬ್ರಾಹ್ಮಣ “ಕೊಡುತ್ತಿಪ್ಪವ° ಆರು!” ಹೇದು ಕರ್ತೃತ್ವಾಭಿಮಾನರಹಿತನಾಗಿ ಹೇಳೆಕು. [‘ಕೋsದಾತ್ಕಸ್ಮಾ ಅದಾತ್ಕಾಮೋsದಾತ್ಕಾಮಾಯಾದಾತ್ । ಕಾಮೋದಾತಾ ಕಾಮಃ ಪ್ರತಿಗ್ರಹೀತಾ ಕಾಮೈತತ್ತೇ ॥’ – ಯಜು.೭.೪೮]. ಮತ್ತೆ ಶಯ್ಯೆಲಿಪ್ಪ ಬ್ರಾಹ್ಮಣ ದಂಪತಿಗೊ ಶ್ರೀಲಕ್ಷ್ಮೀ-ನಾರಾಯಣ ಸ್ವರೂಪರು ಹೇದು ಗ್ರೇಶಿಗೊಂಡು ಅವಕ್ಕೆ ಕೈಮುಕ್ಕೊಂಡು ಪ್ರದಕ್ಷಿಣೆ ಬಂದು ನಮಸ್ಕಾರ ಮಾಡೆಕು. ಮತ್ತೆ ವಿಸರ್ಜನೆ ಮಾಡೆಕು.

ಒಂದು ವೇಳೆ ಸಾಕಷ್ಟು ಧನ-ಸಂಪತ್ತು (ಶಕ್ತಿ-ಸಾಮರ್ಥ್ಯ) ಇದ್ದರೆ, ಶಯ್ಯೆಲಿ ಸುಖವಾಗಿ ಮನುಗಲೆ ಬೇಕಾದ ಎಲ್ಲ ಪ್ರಕಾರದ ಉಪಕರಣಂಗೊ ಇಪ್ಪ ಚೆಂದದ ಮನೆಯನ್ನೂ ದಾನ ಮಾಡೆಕು. ಆರು ಜೀವಿತಾವಸ್ಥೆಲಿ ತಮ್ಮ ಕೈಂದಲೇ ಶಯ್ಯಾದಾನವ ಮಾಡ್ತವೋ, ಅಂಥವು ಜೀವಿತಾವಧಿಲ್ಲಿಯೇ ಪರ್ವಕಾಲಲ್ಲಿ ವೃಷೋತ್ಸರ್ಗ ಸಾನ ಮಾಡಕೆ. ಒಂದು ಶಯ್ಯೆಯ ಒಬ್ಬ ಬ್ರಾಹ್ಮಣಂಗೇ ಕೊಡೆಕು. ಅನೇಕರಿಂಗೆ ಒಂದೇ ಶಯ್ಯೆಯ ಸರ್ವಥಾ ಕೊಡ್ಳಾಗ. ಒಂದು ವೇಳೆ ಆ ಶಯ್ಯೆಯ ವಿಭಾಗಿಸಿರೆ ಅಥವಾ ಮಾರಾಟ ಮಾಡ್ಳೆ ಕೊಟ್ರೆ, ಅದು ದಾನಿಯ ಅಧಃಪತನಕ್ಕೆ ಕಾರಣ ಆವ್ತು.

ಸತ್ಪಾತ್ರರಿಂಗೆ ಶಯ್ಯಾದಾನ ಮಾಡ್ವದರಿಂದ ಇಚ್ಛಿತ ಫಲಪ್ರಾಪ್ತಿ ಆವ್ತು ಮತ್ತು ಪಿತೃ ಮತ್ತು ದಾನ ಮಾಡುವ ಪುತ್ರ ಇಬ್ರೂ ಈ ಲೋಕ ಮತ್ತು ಪರಲೋಕಲ್ಲಿ ಸುಖಿಯಾಗಿರುತ್ತವು. ಶಯ್ಯಾದಾನದ ಪ್ರಭಾವಂದ ದಾನಿ ದಿವ್ಯವಾದ ಇಂದ್ರಲೋಕಲ್ಲಿ ವಾಸಿಸುತ್ತ°, ಸೂರ್ಯಪುತ್ರ ಯಮನ ಲೋಕವ ತಲಪುತ್ತನಿಲ್ಲೆ. ಇದರ್ಲಿ ಏವ ಸಂಶಯವೂ ಇಲ್ಲೆ. ಶ್ರೇಷ್ಠ ವಿಮಾನಲ್ಲಿ ಆರೂಢನಾಗಿ ಅಪ್ಸರೆಯರಿಂದ ಸೇವಿತನಾಗಿ, ದಾನಿ ಪ್ರಳಯಪರ್ಯಂತ ಆತಂಕರಹಿತನಾಗಿ ಸ್ವರ್ಗಲ್ಲಿ ಇರ್ತ°. ಸಮಸ್ತ ತ್ರೀರ್ಥಸ್ನಾನ ಮಾಡುವದಿರಿಂದ, ಸಮಸ್ತ ಹಬ್ಬಹರಿದಿನ ಆಚರಣೆ ಮಾಡುವದರಿಂದ ಎಷ್ಟು ಪುಣ್ಯ ಸಿಕ್ಕುತ್ತೋ ಅದರಿಂದ ಹೆಚ್ಚಿಗಾಣ ಪುಣ್ಯ ಶಯ್ಯಾದಾನಂದ ಸಿಕ್ಕುತ್ತು. ಈ ಪ್ರಕಾರ ಮಗನಾದವ° ಶಯ್ಯಾದಾನವ ಮಾಡಿಕ್ಕಿ ಮತ್ತೆ ‘ಪದದಾನ’  ಮಾಡೆಕು. ಈ ಪದದಾನದ ವಿಷಯವಾಗಿ ಯಥಾವತ್ತಾಗಿ ನಿನಗೆ ಆನು ಹೇಳುತ್ತೆ, ಕೇಳು.

 

ಭಗವಂತ° ಗರುಡಂಗೆ ‘ಪದದಾನ’ ವಿಷಯವಾಗಿ ಎಂತ ಹೇಳುತ್ತ° ಹೇಳ್ವದರ ಬಪ್ಪವಾರ ನೋಡುವೋ°.

 

[ಚಿಂತನೀಯಾ –

ದಾನ ಭಗವಂತಂಗೆ ಪ್ರಿಯವಾದ ಕಾರ್ಯ. ದಾನ ಮಾಡಿದಷ್ಟು ಸತ್ಫಲ ಪ್ರಾಪ್ತಿ ಆವ್ತು. ದಾನ ಮಾಡುವಾಗ ಸತ್ಪಾತ್ರಂಗೆ ಸದ್ವಿನಿಯೋಗಕ್ಕೆ ತಕ್ಕುದಾಯೇಕು. ದಾನ ಆಡಂಬರ ತೋರ್ಸಲೆ ಇಪ್ಪದಲ್ಲ. ಶಕ್ತಿ ಮೀರಿ ದಾನ ಮಾಡೆಕು ಹೇದು ಎಲ್ಯೂ ಒತ್ತಾಯ ಹೇರಿದ್ದನಿಲ್ಲೆ ಭಗವಂತ. ಯಥಾಸಾಧ್ಯ ಯಥಾಶಕ್ತಿ. ಈ ಸಾಧ್ಯವೂ ಶಕ್ತಿಯೂ ನಮ್ಮ ಮನಃಸ್ಥಿತಿಯ ಹೊಂದಿಗೊಂಡಿಪ್ಪದು. ಆಡಂಬರ ತೋರ್ಸಲೂ ಇಲ್ಲೆ, ಹುಗ್ಗಿಸಿ ಮಡುಗಲೂ ಇಲ್ಲೆ. ಹಾಂಗೆ ಮಾಡಿರೆ ಅದು ಅಲ್ಲಿ ರೆಕಾರ್ಡು ಆವ್ತು.

ಶಯ್ಯಾದಾನದ ಬಗ್ಗೆ ಭಗವಂತ° ಮೇಲೆ ನಿರೂಪಿಸಿದ್ದ°.  ಮುಂದೆ ‘ಪದದಾನ’. ಭಗವಂತ° ಎಂತ ಹೇಳಿದ್ದ ಹೇಳ್ವದರ ಬಪ್ಪವಾರ ನೋಡುವೋ°. ಹರೇ ರಾಮ.]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಕೆ. ವೆಂಕಟರಮಣ ಭಟ್ಟ

    ಹರೇ ರಾಮ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಗಣೇಶ ಮಾವ°ಜಯಶ್ರೀ ನೀರಮೂಲೆಅನಿತಾ ನರೇಶ್, ಮಂಚಿಪುತ್ತೂರುಬಾವಚೂರಿಬೈಲು ದೀಪಕ್ಕವಸಂತರಾಜ್ ಹಳೆಮನೆಶಾಂತತ್ತೆಅನುಶ್ರೀ ಬಂಡಾಡಿಶರ್ಮಪ್ಪಚ್ಚಿಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ಸುಭಗಗೋಪಾಲಣ್ಣಅನು ಉಡುಪುಮೂಲೆನೆಗೆಗಾರ°ಕಜೆವಸಂತ°ಅಕ್ಷರದಣ್ಣಸುವರ್ಣಿನೀ ಕೊಣಲೆಮುಳಿಯ ಭಾವಬಟ್ಟಮಾವ°ಯೇನಂಕೂಡ್ಳು ಅಣ್ಣಮಾಲಕ್ಕ°ವೇಣೂರಣ್ಣಹಳೆಮನೆ ಅಣ್ಣಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ