ವಿಭೂತಿ ಮಾಡುವ ರೀತಿ

February 25, 2013 ರ 10:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಿವರಾತ್ರಿ  ಸಂದರ್ಭಕ್ಕಾಗಿ  ವಿಭೂತಿ  ಮಾಡುವ  ರೀತಿ

ಎನ್ನ ಪುಟ್ಟು ಅಳಿಯಂಗೆ  ಒಂದು ದಿನ ಮೋರಗೆ ಭಸ್ಮ ಹಾಕುವಾಗ ಒಂದು ಕುತೂಹಲ ಮೂಡಿತ್ತು. ದೊಡ್ಡತ್ತೆ ಇದರ  ಹೇಂಗೆ ಮಾಡುವದು?  ಒಲೆಂದ ಬೂದಿ ಬಾಚಿ ಉಂಡೆ ಮಾಡುವದಾ? ಕೇಳಿದ°.
‘ಅಲ್ಲ ಪುಟ್ಟಾ, ಆದರ ವಿಧಿವತ್ತಾಗಿ ಮಾಡುವ ಕ್ರಮ ಇದ್ದು. ನಮ್ಮ ಅಜ್ಜನತ್ರೆ ಕೇಳುವೊ°’,  ಹೇಳಿದೆ.  ಹಾಂಗೆ ಎನ್ನ ಅಪ್ಪ° ಇದ್ದಲ್ಲಿಂಗೆ ಚಾವಡಿಗೆ ಇಬ್ರೂ ಹೋದಿಯೊ°.
‘ಅಪ್ಪಾ,  ನಿಂಗಳ ಪುಳ್ಳಿಗೆ ವಿಭೂತಿ ಮಾಡುವದೇಂಗೆ ಹೇಳಿ ಅರಡಿಯೆಕ್ಕಡ ಇದ.  ಹೇಳಿರೆ ಎನಗೂ ಗೊಂತಕ್ಕು ಕೇಳಿಗೊಂಡೆ’.
‘ಅದಕ್ಕೆಂತ ಹೇಳುವೊ°’, ಹೇಳಿದವು.

ಎನ್ನಪ್ಪ°(ನಿಡುಗಳ ಶಂಭುಭಟ್ಟ, ಶಂಕರಮೂಲೆ) ಹೇಳಿದ ಕ್ರಮ. ಅವು  ವರ್ಷವು ಮಾಡಿಗೊಂಡಿತ್ತಿದ್ದವು.

ವಿಭೂತಿ ಮಾಡುವ ಕ್ರಮ:

ಬೇಕಪ್ಪ ಸಾಮಾನುಗೊ:-
ಕರವ ದನದ ಮೂತ್ರ(ಊರ ದನ ಆಯೆಕ್ಕು, ಕಪಿಲೆ ಆದರೆ ಒಳ್ಳೆದು), ಸಗಣ, ಅರಿಶುವ ವಸ್ತ್ರ (ಬಿಳಿ ವಸ್ತ್ರ- ಹತ್ತಿ ನೂಲಿಂದಾಯೆಕ್ಕು)

ಮಾಡುವ ವಿಧಾನ:
ಮಣ್ಣು ಕಸವು ಇಲ್ಲದ್ದ ಸಗಣವ ಬೆರಟಿ ತಟ್ಟಿ ಸರಿಯಾಗಿ ಒಣಗಿಸೆಕ್ಕು.  ಒಣಗಿದ ಬೆರಟಿಯ ಶಿವರಾತ್ರಿ ದಿನವೇ ಹೊತ್ತುಸೆಕ್ಕು. ಇದು ಒಳ್ಳೆ ಜಾಗೆಲಿ ಆಯೆಕ್ಕು.
ಹೊತ್ತಿ ಬೂದಿಯಾಗಿ ತಣುದ ಮತ್ತೆ ಅದರ ನೀರಿಲ್ಲಿ ಕರಡಿಸಿ ಮೇಲಿ ಹೇಳಿದ ವಸ್ತ್ರಲ್ಲಿ ಅರಿಶೆಕ್ಕು. ಅರಿಶಿ ಅಪ್ಪಗ  ಬೂದಿ ಅಡಿಲಿ ಕೂರುತ್ತು. ಮತ್ತೆ ಅದರ ಮೇಲಣ ನೀರಿನ ಅರಿಶಿ ವಾಪಾಸು ಕರಡಿಸಿ ಅರಿಶೆಕು.
ಹೀಂಗೆ ಏಳು ಸರ್ತಿ ಅರಿಶೆಕು. ಅರಿಶಿದ ಬೂದಿಯ ನೀರಿನ ಪಸೆ ಆರುವನ್ನಾರ ಒಣಗಿಸೆಕ್ಕು.
ಮತ್ತೆ ಕಪಿಲೆ ದನದ ಮೂತ್ರ 7 ಸರ್ತಿ ಅರಿಶೆಕು. ಈ ಗೋಮೂತ್ರಲ್ಲಿ ಬೂದಿಯ ಗಟ್ಟಿಯಾಗಿ ಕಲಿಸಿ ಸಾಧಾರಣ ನಿಂಬೆ ಗಾತ್ರದ ಉಂಡೆ ಮಾಡೆಕ್ಕು. ಈ ಉಂಡೆಯ ಸರಿಯಾಗಿ ಒಣಗಿಸೆಕ್ಕು.
ವಾಪಾಸ್ ಅದರ ಬೆರಟಿಲೇ ಹೊತ್ತಿಸೆಕ್ಕು. ಅದು ಹೊತ್ತಿ ಕೆಂಪು ಬಣ್ಣಕ್ಕೆ ಬಂದ ಮೇಲೆ ಅದರ ಬೇರೆ ಬೇರೆ ಹರಗಿ ತಣಿಶೆಕು. ಇದೀಗ ಹೊಡಿ ಹೊಡಿ ಆವುತಿಲ್ಲೆ. ಗಟ್ಟಿಯಾದ ಬಿಳಿ ಬಣ್ಣದ ಉಂಡೆ.
ಇದು ಎಷ್ಟು ವರ್ಷಕ್ಕು ಹಾಳಾವುತಿಲ್ಲೆ. ಸಾಧಾರಣ ಇಪ್ಪತ್ತು ಬೆರಟಿ ಇದ್ದರೆ ಇಪ್ಪತ್ತು ಉಂಡೆ ವಿಭೂತಿ ಆವುತ್ತು.

(ಇಲ್ಲಿ ಬೆರಟಿಯ ಹೊತ್ತಿಸುವ ಧಾರ್ಮಿಕ ವಿಧಿ ಮಾತ್ರ ಶಿವರಾತ್ರಿಯ ದಿನವೇ ಆಯೆಕು. ಮುಂದಿನ ಕೆಲಸಂಗ ಮತ್ತೆ ನಾಲ್ಕಾರು ದಿನ ಹಿಡಿತ್ತು. ಅದಕ್ಕೆ ಮುಹೂರ್ತ ಇಲ್ಲೆ.)

~*~

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. Shyamsundar V N

  Very nice info. Clearly explained!

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇ ರಾಮ. ಶ್ಯಾಮ ಸುಂದರ್ ವಿ.ಎನ್ . ಇವು ಆರೂಳಿ ಅಷ್ಟು ನೆಂಪಾವುತ್ತಿಲ್ಲೆ!!. ಅಂತೂ ಆನು ೨೦೧೩ ನೇ ಶಿವರಾತ್ರಿ ಸಂದರ್ಭಲ್ಲಿ ಬರದ ವಿಭೂತಿ ಮಾಡುವ ಕ್ರಮವ ಓದಿ ಮೆಚ್ಚಿದ್ದು ಎನಗೆ ತುಂಬಾ ತುಂಬಾ ಕುಶಿ ಆತು. ಧನ್ಯವಾದ ಅಣ್ಣ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಶಾ...ರೀವಿಜಯತ್ತೆಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕಬಟ್ಟಮಾವ°ಜಯಗೌರಿ ಅಕ್ಕ°ಹಳೆಮನೆ ಅಣ್ಣಪುಟ್ಟಬಾವ°ಮಂಗ್ಳೂರ ಮಾಣಿಅನು ಉಡುಪುಮೂಲೆವೇಣೂರಣ್ಣಜಯಶ್ರೀ ನೀರಮೂಲೆಕಳಾಯಿ ಗೀತತ್ತೆಸರ್ಪಮಲೆ ಮಾವ°ಒಪ್ಪಕ್ಕಸುವರ್ಣಿನೀ ಕೊಣಲೆಶರ್ಮಪ್ಪಚ್ಚಿನೆಗೆಗಾರ°ವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿಸುಭಗಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣದೀಪಿಕಾಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ