ಒಪ್ಪಣ್ಣನ ಬೈಲಿಂಗೆ ಒಂದೊಪ್ಪ

ನಮ್ಮ ಪ್ರತಿಷ್ಠಾನ ನೆಡೆಶಿದ ವಿಷು ವಿಶೇಷ ಸ್ಪರ್ಧೆಯ ಪ್ರಬಂಧ ವಿಭಾಗಲ್ಲಿ ಪ್ರಥಮ ಬಹುಮಾನ ಪಡದ ವಿಜಯತ್ತೆ, ಬೈಲಿಂಗೆ ಕಳುಗಿದ “ಧನ್ಯವಾದ ಪತ್ರ”.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದವು ನಡೆಸಿದ ವಿಷು ವಿಶೇಷ ಸ್ಪರ್ಧೆಲಿ ಪ್ರಬಂಧ ವಿಭಾಗಲ್ಲಿ ಪ್ರಥಮ ಬಹುಮಾನ ಬಂದದು ಎನಗೆ ಭಾರೀ ಸಂತೋಷ ಆತು.
ಇದೀಗ ಎರಡು ರೀತಿಲಿ ಸಂತೋಷ. ಒಂದನೆದಾಗಿ – ಎನ್ನ ಒಬ್ಬ ತಮ್ಮನ ಅಡ್ಡ ಹೆಸರು ಒಪ್ಪಣ್ಣ. ಹಾಂಗಾಗಿ ತಮ್ಮನ ಬಳಗ ಹೇಳಿ ಭಾವನೆ ಬತ್ತಾ ಇದ್ದು.
ಇನ್ನೊಂದು ರೀತಿಲಿ ಸಾಹಿತ್ಯ ಕ್ಷೇತ್ರಂದ ಪ್ರಶಸ್ತಿ ಬಹುಮಾನ ಸಿಕ್ಕಿದರೆ ಎನಗೆ ‘ಪುತ್ರೋತ್ಸವ’ ವಾದಷ್ಟೇ ಸಂತೋಷ ಆವುತ್ತು.
ಈ ಸರ್ತಿಯೂ ಹಾಂಗೇ ಆತು.

ವಿಜಯತ್ತೆ

ಹವ್ಯಕದೋರಿಂಗೆ ಒಪ್ಪಣ್ಣ ಬೈಲು ಹೇಲಿರೆ ಒಳ್ಳೆ ಕೃಷಿ ಮಾಡ್ತ ಬೈಲು.
ಸಾಹಿತ್ಯವೋ. ಕಲೆಯೋ, ಜಾನಪದವೋ ಸಂಸ್ಕೃತಿಯೋ ಹೀಂಗಿದ್ದದರ ಒಳಿಶಿ ಬೆಳೆಶಲೆ ಇದು ಒಂದು ಮಾಧ್ಯಮ ಒಳ್ಳೆ ರೀತಿಲಿ ನೆಡೆತ್ತಾ ಇಪ್ಪದು ನವಗೆಲ್ಲಾ ಅಭಿಮಾನದ ಸಂಗತಿ.
ಇನ್ನು ಮುಂದೆಯೂ ಮುಂದುವರಿಯಲಿ.
ಮೂನ್ನೆ ಎಪ್ರಿಲ್ 26ಕ್ಕೆ ಕಾನಾವು ಶ್ರೀ ಅಕ್ಕನ ಮನೆಲಿ ಅವರ ಮಗನ ಉಪನಯನದ ಸುಸಂದರ್ಭಲ್ಲಿ ವಿಷು ವಿಶೇಷ ಸ್ಪರ್ಧೆಲಿ ಬಹುಮಾನ ಬಂದವಕ್ಕೆ ಬಹುಮಾನ ಕೊಡ್ತ ಕಾರ್ಯಕ್ರಮ ಹಮ್ಮಿಕೊಂಡು ಚೆಂದಕ್ಕೆ ಯೇವ ಕೊರತ್ತೆಯೂ ಇಲ್ಲದ್ದೆ ನಡೆಸಿಕೊಟ್ಟವು.
ಈ ಕಾರ್ಯಕ್ರಮಕ್ಕೆ ಹೋಗಿ ಬಂದವಕ್ಕೆ ಭಾಗವಹಿಸಿದವಕ್ಕೆ ಮನಸ್ಸು ತುಂಬಿ ಬಯಿಂದು.
ಚಪ್ಪರದ ಸುತ್ತೂ ಒಳ ಜಾಗೆ ಬಿಡದ್ದೆ ಹವ್ಯಕ ಆಡು ಭಾಷೆಯ ಸಾಹಿತ್ಯ ಒಟ್ಟಿಂಗೆ ಶ್ರೀಗುರುಗಳ ಸಂದೇಶ, ನೋಡಿದಲ್ಲೆಲ್ಲ ಚಿತ್ರಂಗೊ, ಪ್ರದರ್ಶಿನಿಗೊ, ಹೂಗಿನ ಮಂಡಲ, ಸಂಸ್ಕೃತ ಭಾಷಾ ಬೆಳವಣಿಗೆಯ ಬಗ್ಗೆ ಮಾಹಿತಿ ಸಭೆ, ಪುಷ್ಕಳ ಊಟೋಪಚಾರ ಇದರ ಎಲ್ಲ ಸ್ವೀಕರಿಸಿ ಹೊಟ್ಟೆಯೂ ತುಂಬಿತ್ತು, ಮನಸ್ಸೂ ತುಂಬಿತ್ತು.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಎಲ್ಲಾ ಕಾರ್ಯಕರ್ತರಿಂಗೂ ಎನ್ನ ಒಪ್ಪಾದ ಒಪ್ಪಂಗಳ ಸುರಿಮಳೆ ಹೇಳ್ತಾ ಇದ್ದೆ.
ಬಹುಮಾನ ಪ್ರದಾನ ಮಾಡಿದ ಅರ್ತಿಕಜೆ ಅಣ್ಣಂಗೆ, ಮಾಷ್ಟ್ರುಮಾವಂಗೆ, ವೇದಿಕೆಲಿ ಇತ್ತಿದ್ದ ಎಲ್ಲೋರಿಂಗೂ ತುಂಬಾ ತುಂಬಾ ತುಂಬಾ ಪ್ರೀತಿಪೂರ್ವಕ ಧನ್ಯವಾದಂಗೊ.
ಹಾಂಗೇ ಅಂದ್ರಾಣ ವಟುವಿಂಗೂ ಅವನ ವಿದ್ಯೆ ಬುದ್ಧಿಗೆ ಶುಭ ಹಾರೈಕೆ.
ಒಟ್ಟಿಂಗೆ ಭವಿಷ್ಯಲ್ಲಿ ಆಯುರಾರೋಗ್ಯ, ಅಷ್ಟೈಶ್ವರ್ಯ ಸಿಕ್ಕಲಿ ಹೇಳಿ ಆಶೀರ್ವಾದ ಮಾಡ್ತಾ ಇಂದಿಂಗೆ ಮುಗುಶುತ್ತೆ ಆಗದಾ….

~

ವಿಜಯತ್ತೆ
(ವಿಜಯಾ ಸುಬ್ರಹ್ಮಣ್ಯ ಕುಂಬಳೆ)
vijikarthikeya@gmail.com

ವಿಜಯತ್ತೆ

   

You may also like...

8 Responses

 1. ರಘು ಮುಳಿಯ says:

  ಅತ್ತೆಗೆ ಮತ್ತೊ೦ದಾರಿ ಅಭಿನ೦ದನೆಗೊ.
  ಕಾಗದ ನೋಡಿ ಕೊಶಿ ಆತು.ನಿ೦ಗಳ ಶುದ್ದಿಗೊ ಬೈಲಿ೦ಗೆ ಬರಳಿ,ನಮ್ಮ ಭಾಷೆ ಬೆಳೆಯಲಿ ಹೇಳಿ ಹಾರೈಸುತ್ತೆ.

 2. ತೆಕ್ಕುಂಜ ಕುಮಾರ ಮಾವ° says:

  ಸಂತೋಷ. ನಿಂಗಳ ಆಶೀರ್ವಾದ ಸದಾ ಇರಳಿ. ಶುದ್ದಿಗಳ, ಒಪ್ಪಂಗಳ ಬರಕ್ಕೊಂಡಿರಿ.

 3. ಬೊಳುಂಬು ಗೋಪಾಲ says:

  ಧನ್ಯವಾದ ಕಾಕತದ ಒಟ್ಟಿಂಗೆ ಬೈಲಿಂಗೆ ವಿಜಯತ್ತೆ ಬೈಂದವು. ಮತ್ತೊಂದರಿ ಅಭಿನಂದನೆಗಳ ಹೇಳುತ್ತಾ ಎದುರುಗೊಂಬೊ. ಅವು ಬರದ ಕಥಗೊ, ಲೇಖನಂಗೊ ಬೈಲಿಂಗೆ ಬರಳಿ. ಓದಿ ಒಪ್ಪ ಕೊಡುವ ಜವಾಬ್ದಾರಿ ನಮ್ಮದು.

 4. ಚೆನ್ನೈ ಭಾವ° says:

  ಬೈಲಿಂಗೆ ಅತ್ತೆಯ ಪ್ರೋತ್ಸಾಹದ ಕಾಗದಕ್ಕೆ ಧನ್ಯವಾದಂಗೊ. ಬೈಲು ಬಹುಜನರಿಂಗೆ ಎತ್ತೆಕು, ಬಹುಜನರಿಂಗೆ ಮತ್ತು ಬಹುಜನರಿಂದ ಪ್ರಯೋಜನ ಆಯೇಕು ಹೇಳ್ತದು – ‘ಚೆನ್ನೈವಾಣಿ’

 5. ಸುಭಗ says:

  ತಮ್ಮನ ಬಳಗ ಹೇಳಿ ಅಭಿಮಾನಂದ, ಆತ್ಮೀಯತೆಂದ ಒಪ್ಪಣ್ಣ ಬೈಲಿಂಗೆ ಪ್ರೋತ್ಸಾಹದ ಮಾತುಗಳ ಹೇಳಿದ ವಿಜಯತ್ತೆಗೆ ಅಭಿನಂದನೆಗೊ. ನಿಂಗಳ ಸಾಹಿತ್ಯ ಕೊಡುಗೆಯೂ ಸೇರಿರೆ ಬೈಲು ಇನ್ನಷ್ಟು ಬೆಳಗು. ಅಂಬಗಂಬಗ ಬತ್ತಾ ಇರಿ, ಬರೆತ್ತಾ ಇರಿ.

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ವಿಜಯ ಚಿಕ್ಕಮ್ಮಂಗೆ ಸ್ವಾಗತ. ಹಲವು ವರ್ಷಂದ ಹವ್ಯಕ ಸಾಹಿತ್ಯಕ್ಕಾಗಿ ಕೆಲಸ ಮಾಡುತ್ತಾ ಇಪ್ಪ ನಿಂಗೊ ಬಂದದು ಸಂತೋಷ.

 7. ವಿಜಯತ್ತೆ ನಿಂಗ ಬಂದದು ಭಾರಿ ಕೊಶಿ ಆತು. ನಿಂಗಳ ಲೇಖನಂಗ ಬತ್ತ ಇರಲಿ……ಎನ್ನದೊಂದು ಒಪ್ಪ.ನಿಂಗಳ ಬರಹಕ್ಕೂ ಒಪ್ಪಣ್ಣ ಬೈಲಿಂಗೂ…..

 8. ವಿಜಯತ್ತೆ,
  ಬೈಲಿಂಗೆ ಸ್ವಾಗತ ನಿಂಗೊಗೆ.
  ತುಂಬಾ ತುಂಬಾ ಧನ್ಯವಾದ ನಿಂಗಳ ಮನದ ಮಾತುಗಳ ಇಲ್ಲಿ ಹೇಳಿದ್ದಕ್ಕೆ. ನಿಂಗೋ ಕಾರ್ಯಕ್ರಮಕ್ಕೆ ಬಂದದು ಎಂಗೊಗೂ ಕೊಶೀ ಆತು. ಬೈಲಿಲಿ ನಿಂಗಳ ಶುದ್ದಿಗೋ ಬತ್ತಾ ಇರೆಕ್ಕು.
  ಧನ್ಯವಾದ ವಿಜಯತ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *