ಮಳೆಗಾಲಲ್ಲಿ ಒ೦ದು ದಿನ

July 13, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ
ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕಿ ಶ್ರೀಮತಿ ಅದಿತಿ ಶ್ರೀಹರ್ಷ,ಸಾದ೦ಗಯ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನತು೦ಬಿದ ಅಭಿನ೦ದನೆಗೊ.

***********************************

ಅದಿತಿ ಅಕ್ಕ
ಅದಿತಿ ಅಕ್ಕ

ಸಾರಥಿಯು ತಾನಾದ° ಮಣಿರಥ

ವೇರಿ ಕ೦ಸನು ದಿಬ್ಬಣಲಿ ನಡು

ದಾರಿಲೇ ಕೇಳಿತ್ತು ದೇವಕಿಯಷ್ಟಮ ಕುಮಾರ|

ಘೋರ ಸಾವಿನ ತತ್ತ° ಕೋಪದಿ

ಹಾರಿ ಕಡಿಲೋಪಗಳೆ ಸಮಯವ

ಕೋರಿ ವಸುದೇವಾಖ್ಯ ಕೊಡುಲೊಪ್ಪುತ್ತ° ಶಿಶುಗಳನೂ||

 

ಹೆದರಿ ಕಸ್ತಲೆ ಕೋಣೆಗಟ್ಟಿದ°

ಮದಲು ಹುಟ್ಟಿದ ಸಪ್ತ ಶಿಶುಗಳ

ತದುಕಿ ಹಿಡುದಪ್ಪಳಿಸಿ ಗೋಡಗೆ ಕೊಂದ° ದುರುಳರಸ|

ಕದಡಿ ಹೋತದ ಮನದ ಶಾಂತಿಯು

ಚದುರಿ ಹಾರಿತ್ತಿರುಳ ನೆಮ್ಮದಿ

ಕದಲಿ ಹೋದಷ್ಟಮದ ಗರ್ಭವು ಮೂಡಿ ದೇವಕಿಲಿ||

 

ಕಂದ ಹುಟ್ಟಿದ° ಮಳೆಯ ರಾತ್ರಿಲಿ

ಬಂದತೊಂದಶರೀರ ವಾಣಿಯು

ನಂದ ಕಂದನ ಜಾಗೆ ಬದಲಿಸಿ ಕೃಷ್ಣ° ಹೋಯೆಕ್ಕು|

ತಂದೆ ಮಡುಗಿದ° ಮಗನ ಕುರುವೆಲಿ

ಮುಂದೆ ಯಮುನೆಯು ದಾರಿ ಕೊಟ್ಟತು

ಹಿಂದೆ ಹೆಡೆಕೊಡೆ ಬಿಡುಸಿ ತಡದನೊ ಶೇಷ ಮಳೆಹನಿಯ||

 

ಬೆಳಕು ಮೂಡಿದ ಮತ್ತೆ ರಾಜನು

ಸೆಳದ ಕೂಸಿನ ಜೀವ ತೆಗವಲೆ

ಹಳಿದು ಕಂಸನ ಹಾರಿ ಹೋತದು ಭೂಮಿ ಮೇಗಂದ |

ಬಿಳುಚಿ ರಾಜನ ಮೋರೆ ಬೆಗರಿತು

ಕಳಚಿ ಹೋತದ ಧೈರ್ಯ ಮನಸಿಲಿ

ಸುಳುಹು ಸಿಕ್ಕಿತ್ತಾಘಳಿಗೆಲಿಯೆ ತನ್ನ ಸಾವಿಂದು||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. ಗೋಪಾಲಣ್ಣ
    ಎಸ್.ಕೆ.ಗೋಪಾಲಕೃಷ್ಣ ಭಟ್ಟ

    ಲಾಯ್ಕ ಆಯಿದು.

    [Reply]

    VA:F [1.9.22_1171]
    Rating: 0 (from 0 votes)
  2. ಗಣೇಶ ಪೆರ್ವ
    ಗಣೇಶ ಪೆರ್ವ

    ವಿಷಯವ ಬೇರೆಯೇ ರೀತಿಲಿ ಚಿ೦ತಿಸಿ ಆಯ್ಕೆ ಮಾಡಿದ್ದು ವಿಶೇಷ ಆಯಿದು..

    [Reply]

    VA:F [1.9.22_1171]
    Rating: 0 (from 0 votes)
  3. ಚೆನ್ನೈ ಬಾವ°
    ಚೆನ್ನೈ ಭಾವ

    ಹರೇ ರಾಮ. ಲಾಯಕ ಆಯ್ದು.

    [Reply]

    VA:F [1.9.22_1171]
    Rating: 0 (from 0 votes)
  4. ಇಂದಿರತ್ತೆ
    ಇಂದಿರತ್ತೆ

    ಹಿಂದೊಂದು ದಿನ ಮಳೆಗಾಲಲ್ಲಿ ಹೀಂಗಾಗಿತ್ತು ಹೇಳುದರ ಭಾಮಿನಿ ಕತೆಯಾಗಿ ಹೇಳಿದ್ದು ತುಂಬಾ ಚೊಕ್ಕ ಆಯಿದು. ಶ್ರೀಕೃಷ್ಣಜನ್ಮಾಷ್ಟಮಿ ಹೇಳುವಾಗ ‘ ಧೋ ‘ರನೆ ಸೊಯ್ಪುವ ಮಳೆ ನೆಂಪಾಗಿಯೇ ಆವುತ್ತು. ಅಂಥಾ ನಿಕಟವಾದ ಸಂಬಂಧ ಮಳೆಗುದೆ ಆ ಸಂದರ್ಭಕ್ಕುದೆ ಇತ್ತಲ್ಲದಾ. ಹೊಸ ರೀತಿಯ ಕಲ್ಪನೆಲಿ ಕವನ ಕಟ್ಟಿದ್ದಕ್ಕೆ ನಿಂಗಳ ಅಭಿನಂದಿಸುತ್ತೆ ಅದಿತಿ.

    [Reply]

    VA:F [1.9.22_1171]
    Rating: 0 (from 0 votes)
  5. ಶೈಲಜಾ ಕೇಕಣಾಜೆ

    ಕವನದ ಯೋಚನಾ ಶೈಲಿ ವಿಭಿನ್ನವಾಗಿ ಮೂಡಿದ್ದು ಲಾಯ್ಕಾಯಿದು… ಅಭಿನಂದನೆಗ ಅಕ್ಕಾ..

    [Reply]

    VA:F [1.9.22_1171]
    Rating: 0 (from 0 votes)
  6. ಅದಿತಿ

    ಒಪ್ಪ ಕೊಟ್ಟ ಎಲ್ಲೋರಿಂಗು ಧನ್ಯವಾದ. :-)

    [Reply]

    VA:F [1.9.22_1171]
    Rating: 0 (from 0 votes)
  7. ಮುಳಿಯ ಭಾವ
    ರಘುಮುಳಿಯ

    ಮಳೆಗಾಲದ ಆ ಒ೦ದು ದಿನ ನೆಡದ ಘಟನೆ ಈಗ ಪುರಾಣದ ಭಾಗ ಆತು.ಮು೦ದೆ ಭಾರತದೇಶದ ಮನೆ-ಮನ೦ಗಳಲ್ಲಿ ಶಾಶ್ವತ ಆಗಿ ನಿ೦ದತ್ತು.
    ಅನಿರೀಕ್ಷಿತ ಕಲ್ಪನೆ ಅದಿತಿ ಅಕ್ಕ.ಅಭಿನ೦ದನೆಗೊ.

    [Reply]

    VA:F [1.9.22_1171]
    Rating: 0 (from 0 votes)
  8. ಭಾಗ್ಯಲಕ್ಶ್ಮಿ

    ಕತೆಯ ಪದ್ಯ ರೂಪಲ್ಲಿಳಿಶಿದ್ದು ಲಾಯಿಕಾಯಿದು ಅದಿತಿಯಕ್ಕ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಕಾವಿನಮೂಲೆ ಮಾಣಿಗಣೇಶ ಮಾವ°ವೇಣಿಯಕ್ಕ°ಹಳೆಮನೆ ಅಣ್ಣದೀಪಿಕಾವಾಣಿ ಚಿಕ್ಕಮ್ಮಅಕ್ಷರ°ಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಡಾಗುಟ್ರಕ್ಕ°ಶಾ...ರೀಸುಭಗರಾಜಣ್ಣಕೊಳಚ್ಚಿಪ್ಪು ಬಾವಒಪ್ಪಕ್ಕಚೆನ್ನೈ ಬಾವ°ಚುಬ್ಬಣ್ಣಪೆರ್ಲದಣ್ಣಡೈಮಂಡು ಭಾವಬೊಳುಂಬು ಮಾವ°ದೊಡ್ಡಭಾವನೀರ್ಕಜೆ ಮಹೇಶಪುತ್ತೂರುಬಾವವಸಂತರಾಜ್ ಹಳೆಮನೆಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ