ನೆಗೆಗಾರನ ಇಂಗ್ಳೀಶು – 03

ಅಂದೇ ಇಂಗ್ಲೀಶು ಕಲಿವಲೆ ಹೆರಟಿತ್ತಿದ್ದೆ, ಅಲ್ಲದೋ?

ಅದು ಕಲ್ತಷ್ಟೂ ಮುಗಿತ್ತಿಲ್ಲೆ, ದೊಡ್ಡ ಇದ್ದು ಬಾಶೆ!
ಎರಡು ವಾರ ಕಲ್ತು ಆರು ಶಬ್ದ ಬಾಯ್ಪಾಟ ಮಾಡಿದ್ದೆ.. ಬೈಲಿಂಗೆ ನೆಂಪಿದ್ದೋ?

(ಸುರುವಾಣ ವಾರ ಕಲ್ತ ಶಬ್ದಂಗೊ ಇಲ್ಲಿದ್ದು: ಸಂಕೊಲೆ)
(ಎರಡ್ಣೆ ವಾರ ಕಲ್ತ ಶಬ್ದಂಗೊ ಇಲ್ಲಿದ್ದು: ಸಂಕೊಲೆ)

ಮೊನ್ನೆ ಕನ್ನಡವುದೇ ಟೈಪು ಮಾಡ್ಳೆಡಿತ್ತು – ಹೇಳಿಅಪ್ಪಗ ನೆಂಪಾತು, ಓ ಇಂಗ್ಳೀಶು ಕಲಿವದು ಬಾಕಿ ಆಯಿದು ಹೇಳಿಗೊಂಡು.
ಇದರೆಡಕ್ಕಿಲಿ ಒಂದೆರಡು ಸರ್ತಿ ಬಂಡಾಡಿ ಅಜ್ಜಿ ಜೋರುಮಾಡಿ ಕೇಳಿತ್ತಿದ್ದವು, ಎಲ್ಲಿಗೆತ್ತಿತ್ತು ನಿನ್ನ ಇಂಗ್ಳೀಶು – ಹೇಳಿಗೊಂಡು!
ಮಾಷ್ಟ್ರುಮಾವಂಗೆ ಪುರುಸೊತ್ತಿಲ್ಲೆ – ಹೇಳಿ ಹಾರುಸಿಗೊಂಡಿತ್ತಿದ್ದು ನಾವು.
ಮಾಷ್ಟ್ರುಮಾವಂಗೆ ಪುರುಸೊತ್ತಿರ ಪುರುಸೊತ್ತಿರ ಹೇಳಿ ನೀನು ಗ್ರೇಶಿ ಹೀಂಗೆ ಕೂದ್ದದಾಯಿಕ್ಕು – ಹೇಳಿಯೂ ಪರಂಚಿಗೊಂಡಿತ್ತಿದ್ದವು!
ಮತ್ತೆ, ಈಗ ಚಳಿ ಇದಾ – ಉದಿಯಪ್ಪಗ ಬೇಗ ಏಳುದುದೇ ಕಷ್ಟ ಆವುತ್ತು!

ಅಂತೂ ಮೊನ್ನೆ ಒಂದರಿ ಪರೆಂಚಾಣಲ್ಲಿ ಕೂಪಲೆಡಿಯದ್ದೆ ಉದಿಉದೀಯಪ್ಪಗ ಹೋದೆ – ಮಾಷ್ಟ್ರುಮಾವನಲ್ಲಿಗೆ.
ಅಂತಾ ಅಂಬೆರ್ಪಿಲಿ ಏನೂ ಇತ್ತಿದ್ದವಿಲ್ಲೆ – ಅವು ಜೆಪ ಮಾಡಿಗೊಂಡು ಇತ್ತಿದ್ದವು, ಅಷ್ಟೆ.
ಹೇಳಿದಾಂಗೆ,
ಅವು ಯೇವಗ ಮಾತಾಡಿರೂ ಜೆಪ ಮಾಡುವಗ ಮಾತಾಡವು. 😉

ಅದೊಳ್ಳೆದಾತು, ಜೆಪ ಮುಗಿವ ಮೊದಲು ಕಳುದ ಸರ್ತಿ ಕಲ್ತದರ ಒಪ್ಪುಸಿಕ್ಕಿ ಬಂದೆ!
ಆನು ಹೆರಟ ಮತ್ತೆ ಎಂತಾರು ಹೇಳಿದವೋ ಗೊಂತಿಲ್ಲೆ, ಆನು ಹೆರಡುವನ್ನಾರ ಒಪ್ಪುಸಿದ್ದರ ಮವುನಲ್ಲಿಯೇ ಒಪ್ಪಿದವು.
ಇಂದು ಮತ್ತಾಣ ವಾರದ ಪಾಟ..

—————
ಇಂದ್ರಾಣ ಪಾಟ:

7. ಅಜ್ಜಕಾನ ಭಾವ:
Edge-Can-Bow

ಡಿಕಿಶ್ನರಿಯ ಅರ್ತಂಗೊ:
Edge = ಕರೇಲಿ (ಬರೆ ಕರೇಲಿ)
Can= ಕೇನು (-ಚಿಮ್ಣೆಣ್ಣೆ ತುಂಬುಸುತ್ತದು)
Bow= ಬಗ್ಗು!
ನೆಗೆಗಾರನ ಅರ್ತ: ಬರೆಕರೇಲಿ ಚಿಮ್ಣೆಣ್ಣೆ ಕೇನು ತೆಕ್ಕೊಂಡೋಪಗ ಬಗ್ಗುವವ!
ಅಪ್ಪು, ಅವಂಗೆ ಹಾಂಗಿರ್ತ ಬಿಂಗಿ ಜೋರಿದ್ದು! 😉

8. ಬಟ್ಯ:
But-Yeah
ಡಿಕಿಶ್ನರಿಯ ಅರ್ತಂಗೊ:
But= ಆದರೆ
yeah= (yes) ಅಪ್ಪು
ನೆಗೆಗಾರನ ಅರ್ತ: ಆದರೂ, ವಿಶಯ ಅಪ್ಪು! ಅದು ಬಟ್ಯನೇ.
(ನೋಡುವಗ ಅದು ನಮ್ಮೋರ ಹಾಂಗೇ ಕಾಂಗಿದಾ!) 😉

9. ಶಂಕರ
Shun-Car

ಡಿಕಿಶ್ನರಿಯ ಅರ್ತಂಗೊ:
Shun = ಅಸಹ್ಯ, ಎಲರ್ಜಿ!
Car = ಕಾರು – ನಾಕು ಚಕ್ರದ್ದು, ರೂಪತ್ತೆಯತ್ರೆ ಇಪ್ಪಂತಾದ್ದು!
ನೆಗೆಗಾರನ ಅರ್ತ: ಕಾರಿನ ವಿಶಯಲ್ಲಿ ಕೋಂಗಿ ಕಟ್ಟುದರ ಬಗ್ಗೆ ಅಸಹ್ಯ ಅಪ್ಪವ°!
—————
ಅಪ್ಪೋ ಅಲ್ಲದೋ – ಬಪ್ಪ ವಾರ ನೋಡೆಕ್ಕಟ್ಟೆ.
ಇದರ ಕಲ್ತು ಮಾಷ್ಟ್ರುಮಾವಂಗೆ ಒಪ್ಪುಸುವಗ ಗೊಂತಕ್ಕು.

ಅದಿರಳಿ, ನಿಂಗಳದ್ದೂ ಈ ನಮುನೆ ಶಬ್ದಂಗೊ ಇದ್ದರೆ ತಿಳಿಶಿ ಆತೋ?
ಒಟ್ಟಿಂಗೇ ಕಲಿವೊ°.
~
ನೆಗೆಮಾಣಿ

<< ನೆಗೆಗಾರನ ಇಂಗ್ಳೀಶು – 01
<< ನೆಗೆಗಾರನ ಇಂಗ್ಳೀಶು – 02

ನೆಗೆಗಾರನ ಇಂಗ್ಳೀಶು – 04 >>

ನೆಗೆಗಾರ°

   

You may also like...

27 Responses

 1. ಅನುಶ್ರೀ ಬಂಡಾಡಿ says:

  ಎನಗೂ ಒಂದು ಅರ್ಥ ಸಿಕ್ಕಿತ್ತು!

  ನೆಗೆಗಾರ
  Neg-Gear

  ಡಿಕ್ಷ್ನರಿ ಅರ್ಥ:
  Neg-Negate = ನಿರಾಕರಿಸು, ತಿರಸ್ಕರಿಸು.
  Gear = ಪರಿಸ್ಥಿತಿಗೆ ಸರಿಹೊಂದಿಸು (ಕ್ರಿಯಾಪದ)

  ಎನ್ನ ಅ(ನ)ರ್ಥ:
  ನಾವು ಪರಿಸ್ಥಿತಿಗೆ ತಕ್ಕ ಹಾಂಗೆ, ಹೊಂದಿಕೆ ಅಪ್ಪಾಂಗೆ ಮಾತಾಡಿದ್ದರ, ಅದು ಹಾಂಗಲ್ಲ ಹೇಳಿ ಪೆರಟ್ಟು ಅರ್ಥ ಮಾಡಿಗೊಂಬವ! ಅವನೇ ನೆಗೆಗಾರ!
  🙂

  • raghumuliya says:

   ಓ,ನೆಗೆಗಾರ ಹೇದರೆ ನೆಗೆಗೆ ಬ್ರೇಕು ಹಾಕದ್ದೆ ಗೇರು ಹಾಕುವವ° ಹೇಳಿ ಅರ್ಥ ಅಲ್ಲದೋ..ನೆಗೆಯ ಸ್ಪೀಡು ಹೆಚ್ಚುಸುವವ° ಹೇಳಿ ಆತು ಅ೦ಬಗ. ಎನಗೆ ಗೊ೦ತೇ ಇತ್ತಿಲ್ಲೆ ಇದಾ.

 2. ಬಂಡಾಡಿ ಅಜ್ಜಿ says:

  ಕಡೆಂಗೂ ಚಳಿ ಬಿಟ್ಟು ಕಲಿವ ಮನಸ್ಸು ಬಂತನ್ನೆ…. ನೇರ್ಪಕ್ಕೆ ಕಲಿ… ಕಲುತ್ತದರ ತಪ್ಪುಸದ್ದೆ ಒಪ್ಪುಸೇಕು.. ಎಂತ?
  ಆನು ಮಾಷ್ಟರಣ್ಣನ ಹತ್ತರೆ ವಿಚಾರುಸುತ್ತೆ… ಗಾಳಿ ತೋಟಲ್ಲೆ ಆಗಿ ಹೋವುತ್ತರೆ ನಾಕು ಗಾಳಿ ಅಡರುದೇ ತೆಕ್ಕೊಂಡೋಪಲಕ್ಕಿದಾ… ‘ಇನ್ನು ಕಲಿವಲೆ ತಪ್ಪುಸಿರೆ ಬಿಡೆಡಿ ಅಣ್ಣೊ.. ನಾಕು ಅಡರು ಮುರುದರೂ ಸಾರ ಇಲ್ಲೆ..’ ಹೇಳಿ ಹೇಳೆಕ್ಕು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *