Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 68 – 78

ಬರದೋರು :   ಚೆನ್ನೈ ಬಾವ°    on   13/06/2013    2 ಒಪ್ಪಂಗೊ

ಚೆನ್ನೈ ಬಾವ°

ಆಧ್ಯಾತ್ಮಿಕ ಜ್ಞಾನದ ಪರಮ ರಹಸ್ಯಂಗಳ ಕುಲಂಕುಷವಾಗಿ ಅರ್ಜುನಂಗೆ ವಿವರಿಸಿದ ಭಗವಂತ° ಈ ವಿಚಾರಂಗಳ ಅಯೋಗ್ಯರಲ್ಲಿ ಚರ್ಚಿಸಲಾಗ, ಅಪಾತ್ರರಿಂಗೆ ಬೋಧುಸಲಾಗ, ಕಂಡಕಂಡಲ್ಲಿ ಬಿಡುಸಿ ಮಡುಗಲಾಗ ಹೇದು ಎಚ್ಚರಿಕೆಯ ನೀಡಿದ್ದ ಹೇಳುವಲ್ಲಿವರೇಂಗೆ ಕಳುದವಾರದ ಭಾಗಲ್ಲಿ ಓದಿದ್ದದು. ಆರಿಂಗೆ ಆಸಕ್ತಿ, ನಂಬಿಕೆ ಇಲ್ಯೋ ಅವಕ್ಕೆ ಇದು ಪ್ರಯೋಜನಕ್ಕೆ ಬಾರ ಹೇಳಿ ಮಾಂತ್ರವೇ ಹೇಳಿದ್ದದು. ಆಸಕ್ತಿ ಇಪ್ಪೋರು, ನಂಬಿಕೆ ಇಪ್ಪೋರು ಇದರ ಆಳ ಚಿಂತನೆಲಿ ತೊಡಗಿ ಜ್ಞಾನಾರ್ಜನೆ ಮಾಡಿ, ತಮ್ಮ ಜೀವನದ ಮುಂದಾಣ ದಾರಿಯ ಸುಗಮಗೊಳಿಸಿಗೊಂಡು, ಸಾಧನಾಪಥಲ್ಲಿ ಮುಂದುವರಿಯೇಕ್ಕಾದ್ದು ಮನುಷ್ಯನ ಕರ್ತವ್ಯ.

ಈ ಪರಮ ರಹಸ್ಯ ವಿಚಾರಂಗಳ ಅಡಕವಾಗಿಪ್ಪ ಈ ಅಮೂಲ್ಯ ಭಗವದ್ಗೀತೆಯ ಸಂದೇಶವ ಅಧ್ಯಯನ ಮಾಡಿ ಮನನ ಮಾಡುವದರಿಂದ ಎಂತ ಪ್ರಯೋಜನ ಹೇಳ್ವದರ ಭಗವಂತ° ಮುಂದೆ ಹೇಳುತ್ತ° –

 

ಶ್ರೀಮದ್ಭಗವದ್ಗೀತಾ – ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ – 68 – 78

 

ಶ್ಲೋಕ

ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ।
BHAGAVADGEETHAಭಕ್ತಿಂ ಮಯಿ ಪರಾಂ ಕೃತ್ವಾ ಮಾಮೈವೈಷ್ಯತ್ಯಸಂಶಯಃ ॥೬೮॥

ಪದವಿಭಾಗ

ಯಃ ಇದಮ್ ಪರಮಮ್ ಗುಹ್ಯಮ್ ಮತ್-ಭಕ್ತೇಷು ಅಭಿಧಾಸ್ಯತಿ । ಭಕ್ತಿಮ್ ಮಯಿ ಪರಾಮ್  ಕೃತ್ವಾ ಮಾಮ್ ಏವ ಏಷ್ಯತಿ ಅಸಂಶಯಃ ॥

ಅನ್ವಯ

ಯಃ ಇದಮ್ ಪರಮಮ್ ಗುಹ್ಯಮ್ (ಜ್ಞಾನಮ್) ಮತ್-ಭಕ್ತೇಷು ಅಭಿಧಾಸ್ಯತಿ, (ಸಃ) ಮಯಿ ಪರಾಮ್ ಭಕ್ತಿಮ್ ಕೃತ್ವಾ, ಅಸಂಶಯಃ (ಸನ್) ಮಾಮ್ ಏವ ಏಷ್ಯತಿ ।

ಪ್ರತಿಪಾದಾರ್ಥ

ಯಃ – ಯಾವಾತ°, ಇದಮ್ ಪರಮಮ್ ಗುಹ್ಯಮ್ (ಜ್ಞಾನಮ್) – ಈ ಪರಮೋನ್ನತವಾದ ಅತಿರಹಸ್ಯವಾದ (ಜ್ಞಾನವ), ಮತ್-ಭಕ್ಟೇಷು – ಎನ್ನ ಭಕ್ತರಲ್ಲಿ, ಅಭಿಧಾಸ್ಯತಿ – ವಿವರುಸುತ್ತನೋ, (ಸಃ- ಅಂವ°), ಮಯಿ – ಎನ್ನಲ್ಲಿ, ಪರಾಮ್ ಭಕ್ತಿಮ್ ಕೃತ್ವಾ – ದಿವ್ಯವಾದ ಭಕ್ತಿಸೇವೆಯ ಮಾಡಿ, ಅಸಂಶಯಃ (ಸನ್) – ಸಂಶಯವಿಲ್ಲದ್ದೆ, ಮಾಮ್ ಏವ – ಎನ್ನನ್ನೇ, ಏಷ್ಯತಿ – ಹೊಂದುತ್ತ° (ಎನ್ನಲ್ಲಿಗೇ ಬತ್ತ°).

ಅನ್ವಯಾರ್ಥ

ಈ ಪರಮರಹಸ್ಯವಾದ ಪರಮೋನ್ನತವಾದ ಜ್ಞಾನವ ಯಾವಾತ° ಎನ್ನ ಭಕ್ತಿರಿಂಗೆ ವಿವರುಸುತ್ತನೋ, ಅಂವ° ಎನ್ನಲ್ಲಿ ಅತಿ ಭಕ್ತಿಯ ಮಡಿಕ್ಕೊಂಡು (ಭಕ್ತಿಸೇವೆಯ ಮಾಡಿ) ನಿಸ್ಸಂಶಯವಾಗಿ ಎನ್ನನ್ನೇ ಬಂದು ಹೊಂದುತ್ತ°.

ತಾತ್ಪರ್ಯ / ವಿವರಣೆ

ಗೀತಾರಹಸ್ಯವ ಭಕ್ತರಾದವು ತಮ್ಮ ತಮ್ಮೊಳ ಚರ್ಚಿಸೆಕು ಹೇಳಿ ಭಗವಂತ° ಗೌಪ್ಯವಾಗಿ ಇಲ್ಲಿ ಸಾರಿದ್ದ°. ಭಕ್ತರಲ್ಲದವರಿಂಗೆ ಇದು ಸಲ್ಲುತ್ತಿಲ್ಲೆ, ದಕ್ಕುತ್ತಿಲ್ಲೆ. ಭಗವಂತನ ಅರ್ಥಮಾಡಿಗೊಳ್ಳದ್ದೆ , ಗೀತಾರಹಸ್ಯ  ಯಥಾರ್ಥ ವಿಚಾರ ಮನಸ್ಸಿಂಗೆ ಬಂದ ಹಾಂಗೆ ವಿವರಿಸಿರೆ ಅಪಾರ್ಥಂಗಳೇ ಅಕ್ಕಷ್ಟೆ. ಹಾಂಗಾಗಿ ಭಗವದ್ಭಕ್ತರಾದೋರಿಂಗೆ ಮಾಂತ್ರ ಇದರ ವಿವರಣೆ ಮಾಡೆಕು. ಊಹಾತ್ಮಕ ಚಿಂತಕರಿಂಗೆ ಇದರಲ್ಲಿ ಅವಕಾಶ ಕೊಡ್ಳಾಗ. ಭಗವಂತನ ಪರಿಶುದ್ಧ ಭಕ್ತರಿಂಗೆ ಮಾತ್ರ ಗೀತಾರಹಸ್ಯ ವಿಚಾರಂಗೊ ತಿಳಿವಲೆ ಅರ್ಹತೆ ಇಪ್ಪದು. ಅದರ ಅರ್ತು ಅನುಸರುಸಿ, ಮತ್ತೊಬ್ಬ ಭಕ್ತಂಗೆ ವಿವರಿಸಿ ಹೇಳಿ ತನ್ನ ಭಕ್ತಿಮಾರ್ಗಲ್ಲಿ ಮುಂದುವರುದರೆ ಭಗವಂತನ ನಿಜ ಭಕ್ತನಾಗಿ ಅಕೇರಿಗೆ ಆ ಭಗವಂತನ ನಿಸ್ಸಂಶಯವಾಗಿ ಹೋಗಿ ಸೇರ್ಲಕ್ಕು.

ಹೀಂಗೆ ಇಲ್ಲಿ ಭಗವಂತ° ಭಗವದ್ ಜ್ಞಾನ ಪರಂಪರೆಯ ಹೇಂಗೆ ರಕ್ಷಿಸೆಕು ಹೇಳ್ವದರ ಹೇಳಿದ್ದ°. ಹಾಂಗೇ ಆರಿಂಗೆ ಇದರ ಬಿಚ್ಚಿತೋರುಸೆಕು ಹೇಳಿಯೂ ಹೇಳಿದ್ದ°. ಯಾವಾತ° ಇಂತಹ ಪರಮ ಜ್ಞಾನವ ಅರ್ತು, ಭಗವಂತನ ಶ್ರದ್ಧಾಭಕ್ತಿಯುಳ್ಳ ಸಾಧಕಂಗೆ ಕೊಡುತ್ತನೋ (“ಮತ್-ಭಕ್ತೇಷು ಅಭಿಧಾಸ್ಯತಿ”) ಅಂವ° ಭಕ್ತಿಸೇವೆಯ ಮಾಡಿಗೊಂಡು (“ಮಯಿ ಪರಾಮ್ ಭಕ್ತಿಂ ಕೃತ್ವಾ”), ನಿಶ್ಚಿತವಾಗಿ ಭಗವಂತನ ಹೋಗಿ ಸೇರುತ್ತ°. ಇದಕ್ಕೆ ಸಂಶಯ ಇಲ್ಲೆ (“ಮಾಮ್ ಏವ ಏಷ್ಯತಿ ಅಸಂಶಯಃ”) ಹೇದು ಭಗವಂತನ ವಾಣಿ.

ಶ್ಲೋಕ

ನ ಚ ತಸ್ಮಾನ್ಮನುಷ್ಯೇಶು ಕಶ್ಚಿನ್ಮೇ ಪ್ರಿಯಕೃತ್ತಮಃ ।
ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರೋ ಭುವಿ ॥೬೯॥

ಪದವಿಭಾಗ

ನ ಚ ತಸ್ಮಾತ್ ಮನುಷ್ಯೇಷು ಕಶ್ಚಿತ್ ಮೇ ಪ್ರಿಯ-ಕೃತ್ತಮಃ । ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರಃ ಭುವಿ ॥

ಅನ್ವಯ

ಮನುಷ್ಯೇಷು ಚ ಕಶ್ಚಿತ್ ತಸ್ಮಾತ್ ಪ್ರಿಯ-ಕೃತ್ತಮಃ ಮೇ ನ (ಅಸ್ತಿ); ತಸ್ಮಾತ್ ಅನ್ಯಃ ಭುವಿ ಪ್ರಿಯತರಃ ಚ ಮೇ ನ ಭವಿತಾ ।

ಪ್ರತಿಪದಾರ್ಥ

ಮನುಷ್ಯೇಷು – ಮನುಷ್ಯರಲ್ಲಿ, ಚ – ಕೂಡ, ಕಶ್ಚಿತ್ – ಆರೊಬ್ಬನೂ, ತಸ್ಮಾತ್ – ಅವನಿಂದ, ಪ್ರಿಯ-ಕೃತ್ತಮಃ – ಅತ್ಯಂತಪ್ರಿಯ, ಮೇ – ಎನಗೆ, ನ (ಅಸ್ತಿ) – ಇಲ್ಲೆ, ತಸ್ಮಾತ್ – ಹಾಂಗಾಗಿ, ಅನ್ಯಃ – ಬೇರೊಬ್ಬ°, ಭುವಿ – ಭೂಮಿಲಿ, ಪ್ರಿಯತರಃ – ಪ್ರಿಯಕರ°, ಚ – ಕೂಡಾ, ಮೇ – ಎನಗೆ, ನ ಭವಿತಾ – ಇರುತ್ತನಿಲ್ಲೆ / ಆವುತ್ತನಿಲ್ಲೆ.

ಅನ್ವಯಾರ್ಥ

ಪ್ರಪಂಚಲ್ಲಿ (ಭೂಮಿಲಿ) ಇವನಿಂದ ಉತ್ತಮ ಪ್ರೀತಿಪಾತ್ರನಪ್ಪವ° ಬೇರೆ ಯಾವ ಮನುಷ್ಯನೂ ಇಲ್ಲೆ, ಹಾಂಗಾಗಿ ಅವನಿಂದ ಪ್ರಿಯಕರ° ಮುಂದೆಯೂ ಕೂಡ ಆವುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ತನ್ನ ನಿಜ ಭಕ್ತರಲ್ಲಿ ಎಷ್ಟು ಪ್ರೀತಿಯುಳ್ಳವ° ಹೇಳ್ವದರ ಇಲ್ಲಿ ಹೇಳಿದ್ದ. ತನ್ನ ನಿಜ ಭಕ್ತರೆಂದರೆ ಭಗವಂತಂಗೆ ಅತೀ ಪ್ರೀತಿ. ಅವನ ಸಂಪೂರ್ಣ ಜವಾಬ್ದಾರಿಯ ತಾನು ನೋಡಿಗೊಳ್ತ°. ಭಗವದ್ ಭಕ್ತಂಗೆ ಸಮನಾದ ಯೋಗ್ಯ ಪ್ರೀತಿಪಾತ್ರನಾದ ಮನುಷ್ಯ ಈ ಪ್ರಪಂಚಲ್ಲಿ ಆರೂ ಇಲ್ಲೆ, ಪ್ರೀತಿಪಾತ್ರ° ಅಪ್ಪಂವ° ಇನ್ನು ಮುಂದೆಯೂ ಇಲ್ಲೆ. ಗೀತೆಯ ಅರ್ತು ಅದರ ಭಕ್ತಜನಾಂಗಕ್ಕೆ ತಲುಪುಸುವ ಶ್ರೇಷ್ಠ ಕಾರ್ಯ ಮಾಡುವವು ಮನುಷ್ಯರಲ್ಲಿ ಅತ್ಯಂತ ಪ್ರೀತಿಪಾತ್ರರು ಹೇಳಿ ಭಗವಂತ° ಇಲ್ಲಿ ಹೇಳುತ್ತ°. ಇಂತಹ ಭಗವದ್ ಭಕ್ತರ ಸಮಾನ ಇನ್ಯೂರು ಶ್ರೇಷ್ಠ/ಉತ್ತಮ ಪ್ರೀತಿಪಾತ್ರರು ಈ ಪ್ರಪಂಚಲ್ಲಿ ಆರೂ ಇಲ್ಲೆ, ಇನ್ನೂ ಮುಂದೆಯೂ ಸಾನ ಅಪ್ಪಲಿಲ್ಲೆ ಹೇಳಿ ಭಗವಂತನ ಮಾತು.

ಶ್ಲೋಕ

ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯ ಸಂವಾದಮಾವಯೋಃ ।
ಜ್ಞಾನಯಜ್ಞೇನ ತೇನಾಹಂ ಇಷ್ಟಃ ಸ್ಯಾಮಿತಿ ಮೇ ಮತಿಃ ॥೭೦॥

ಪದವಿಭಾಗ

ಅಧ್ಯೇಷ್ಯತೇ ಚ ಯಃ ಇಮಮ್ ಧರ್ಮ್ಯಮ್ ಸಂವಾದಮ್ ಆವಯೋಃ । ಜ್ಞಾನ-ಯಜ್ಞೇನ ತೇನ ಅಹಮ್ ಇಷ್ಟಃ ಸ್ಯಾಮ್ ಇತಿ ಮೇ ಮತಿಃ ॥

ಅನ್ವಯ

ಯಃ ಚ ಆವಯೋಃ ಇಮಂ ಧರ್ಮ್ಯಂ ಸಂವಾದಮ್ ಅಧ್ಯೇಷ್ಯತೇ, ತೇನ ಜ್ಞಾನ-ಯಜ್ಞೇನ ಅಹಮ್ ಇಷ್ಟಃ ಸ್ಯಾಮ್ ಇತಿ ಮೇ ಮತಿಃ ।

ಪ್ರತಿಪದಾರ್ಥ

ಯಃ – ಯಾವಾತ°, ಚ – ಕೂಡ, ಆವಯೋಃ  – ನಮ್ಮಿಬ್ಬರ, ಇಮಮ್ – ಈ, ಧರ್ಮ್ಯ ಸಂವಾದಮ್ –  ಪವಿತ್ರವಾದ ಧರ್ಮ ಸಂವಾದವ, ಅಧ್ಯೇಷ್ಯತೇ – ಅಧ್ಯಯನ ಮಾಡುತ್ತನೋ, ತೇನ – ಅವನಿಂದ, ಜ್ಞಾನ-ಯಜ್ಞೇನ – ಜ್ಞಾನ ಯಜ್ಞಂದ (ಜ್ಞಾನಯಜ್ಞದ ಮೂಲಕ), ಅಹಮ್ – ಆನು, ಇಷ್ಟಃ ಸ್ಯಾಮ್ – ಆರಾಧಿತ (ಪೂಜಿತ) ಆವ್ತೆ, ಇತಿ – ಹೇದು, ಮೇ – ಎನ್ನ, ಮತಿಃ – ಅಭಿಪ್ರಾಯವು.

ಅನ್ವಯಾರ್ಥ

ಯಾವಾತ° ನಮ್ಮಿಬ್ಬರ ಪ್ರವಿತ್ರ ಧರ್ಮಸಂವಾದವ ಅಧ್ಯಯನ ಮಾಡುತ್ತನೋ ಅವನಿಂದ ಜ್ಞಾನಯಜ್ಞದ ಮೂಲಕ ಆನು ಪೂಜಿತನಾವ್ತೆ ಹೇದು ಎನ್ನ ಅಭಿಪ್ರಾಯ.

ತಾತ್ಪರ್ಯ / ವಿವರಣೆ

‘ಜೀವನಧರ್ಮವ ತಿಳಿಹೇಳುವ ನಮ್ಮಿಬ್ಬರ ಈ ಮಾತುಕತೆಯ (ಸಂವಾದವ) ಯಾವಾತ° ಅಧ್ಯಯನ ಮಾಡುತ್ತನೋ, ಆ ಅಧ್ಯಯನದ ಜ್ಞಾನಯಜ್ಞದ ಮೂಲಕ ಆನು ಪೂಜಿತನಾವ್ತೆ ಹೇದು ಎನ್ನ ಅಭಿಪ್ರಾಯ’ ಹೇದು ಭಗವಂತ° ಹೇಳಿದ್ದ°. ಭಗವದ್ಗೀತೆಯ ಅಧ್ಯಯನ ಮಾಡಿ ಅರ್ಥ ಮಾಡಿಗೊಂಡರೆ ಅದು ಜ್ಞಾನಯಜ್ಞದ ಮೂಲಕ ಭಗವಂತನ ಪೂಜಿಸಿದಾಂಗೇ ಆವ್ತು ಹೇಳಿ ಭಗವಂತನ ಅಭಿಪ್ರಾಯ. ಇಲ್ಲಿ ಅಧ್ಯಯನ ಮಾಡುತ್ತದು ಹೇಳಿರೆ ಬರೇ ಓದುವದು ಅಲ್ಲ., ಅದರಲ್ಲಿಪ್ಪ ಜೀವನ ತತ್ವವ ಯಥಾರ್ಥವಾಗಿ ಅರ್ಥ ಮಾಡಿಗೊಂಡು ತಿಳಿಯೆಕು, ಅನುಷ್ಠಾನವಾಯೇಕು. ಗೀತೆಯ ಜ್ಞಾನವ ಅರಗಿಸಿಗೊಂಡು ಇನ್ನೊಬ್ಬಂಗೆ ಹೇಳ್ವ ಕ್ಷಮತೆ ನಮ್ಮಲ್ಲಿ ಇಲ್ಲದ್ರೆ ಧರ್ಮ ವಿಷಯಕವಾದ ಈ ಕೃಷ್ಣಾರ್ಜುನ ಸಂವಾದವ ಗುರುಮುಖಲ್ಲಿ ಅಧ್ಯಯನ ಮಾಡಿರೆ ಕೂಡ ಅದು ಜ್ಞಾನಯಜ್ಞದ ಭಗವಂತನ ಪೂಜೆ ಆವ್ತು. ಭಗವಂತನ ಬಗ್ಗೆ ಮನುಷ್ಯ° ಏನ ತಿಳಿಯೆಕು, ಅದರ ತಿಳುದು ಹೇಂಗೆ ಧರ್ಮದ ದಾರಿಲಿ ಮುಂದುವರಿಯೆಕು ಹೇಳ್ವ ‘ಜೀವನ ಧರ್ಮವ’ ಗೀತೆಯ ಮೂಲಕ ತಿಳುದು ಮೋಕ್ಷದ ಹಾದಿ ಹಿಡಿವಲಕ್ಕು ಹೇಳಿ ಭಗವಂತನ ಹೇಳಿಕೆ.

ಶ್ಲೋಕ

ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।
ಸೋsಪಿ ಮುಕ್ತಃ ಶುಭಾಂಲ್ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ ॥೭೧॥

ಪದವಿಭಾಗ

ಶ್ರದ್ಧಾವಾನ್ ಅನಸೂಯಃ ಚ ಶೃಣುಯಾತ್ ಅಪಿ ಯಃ ನರಃ । ಸಃ ಅಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯ-ಕರ್ಮಣಾಮ್ ॥

ಅನ್ವಯ

ಶ್ರದ್ಧಾವಾನ್ ಅನಸೂಯಃ ಚ ಯಃ ನರಃ (ಇದಂ) ಶೃಣುಯಾತ್ ಅಪಿ ಸಃ ಮುಕ್ತಃ (ಸನ್) ಪುಣ್ಯ-ಕರ್ಮಣಾಂ ಶುಭಾನ್ ಲೋಕಾನ್ ಅಪಿ ಪ್ರಾಪ್ನುಯಾತ್ ।

ಪ್ರತಿಪದಾರ್ಥ

ಶ್ರದ್ಧಾವಾನ್ – ಶ್ರದ್ಧಾಪೂರ್ಣನಾದವ°, ಅನಸೂಯಃ – ಅಸೂಯೆ ಇಲ್ಲದ್ದವ°, ಚ – ಕೂಡ, ಯಃ ನರಃ – ಯಾವಾತ° ಮನುಷ್ಯ°, (ಇದಮ್ – ಇದರ), ಶೃಣುಯಾತ್ – ಕೇಳಲಿ, ಅಪಿ – ಕೂಡ, ಸಃ – ಅವ°, ಮುಕ್ತಃ (ಸನ್) – ಮುಕ್ತನಾಗಿದ್ದುಗೊಂಡು, ಪುಣ್ಯ-ಕರ್ಮಣಾಮ್ – ಪುಣ್ಯವಂತರ, ಶುಭಾನ್ ಲೋಕಾನ್ – ಮಂಗಳಕರವಾದ ಲೋಕಂಗಳ, ಅಪಿ – ಕೂಡ, ಪ್ರಾಪ್ನುಯಾತ್ – ಪಡೆಯಲಿ.

ಅನ್ವಯಾರ್ಥ

ಶ್ರದ್ಧಾವಂತನಾದಂವ, ಅಸೂಯೆ ಇಲ್ಲದ್ದಂವ ಯಾವ ಮನುಷ್ಯ° ಕೇಳಿಯಾದರೂ ಅಂವ ಪಾಪಕರ್ಮಗಳ ಫಲಂದ ಮುಕ್ತನಾಗಿ, ಪುಣ್ಯಕರ್ಮಿಗೊ ವಾಸಿಸುವ ಶುಭಲೋಕಂಗಳ ಹೊಂದಗು.

ತಾತ್ಪರ್ಯ / ವಿವರಣೆ

ಭಗವಂತನ ವಿಷಯಲ್ಲಿ ಶ್ರದ್ಧೆ ಇಲ್ಲದ್ದೋರಿಂಗೆ, ಅಸೂಯಾಪರರಿಂಗೆ ಗೀತೆಯ ಹೇಳುವದರ ಭಗವಂತ° ತಿರಸ್ಕರಿಸಿದ್ದ° (ಭ.ಗೀ 18.67). ಭಗವದ್ಗೀತೆ ಇಪ್ಪದು ಭಗವದ್ ಭಕ್ತರಿಂಗೆ ಮಾತ್ರ. ಕೆಲವೊಂದರಿ ಹೀಂಗೂ ಅಪ್ಪದಿದ್ದು – ಭಗವದ್ ಭಕ್ತರು ಎಲ್ಲರೂ ಕೇಳಲಿ ಹೇಳಿ ಪ್ರವಚನ ನಡೆಶುತ್ತವು. ಇಂತಹ ಪ್ರವಚನಕ್ಕೆ ಬಪ್ಪ ಜನಂಗೊ ಎಲ್ಲೋರು ಭಕ್ತರಾಗಿರೆಕು ಹೇಳಿ ನಿರೀಕ್ಷಿಸಲೆ ಎಡಿಯ. ಹಾಂಗಾರೆ ಎಲ್ಲೋರು ಕೇಳ್ತಾಂಗೆ ಪ್ರವಚನ ಎಂತಕೆ ಮಾಡ್ತವು?! ಅಲ್ಲಿ, ಬಪ್ಪೋರೆಲ್ಲ ಭಕ್ತರಲ್ಲದ್ರೂ ಭಗವಂತನಲ್ಲಿ ಅಸೂಯೆ ಇಲ್ಲದ್ದೋರೂ ಕೆಲವರು ಇರ್ತವು. ಅವು ಪೂರ್ಣ ಭಕ್ತರಲ್ಲದ್ರೂ ಶ್ರದ್ಧೆಯಿಪ್ಪೋರು ಆಯ್ಕು. ಇಂತೋರು ಒಬ್ಬ ನಿಜ ಭಕ್ತನಿಂದ ಭಗವಂತನ ವಿಷಯವ ಕೇಳಿಯಪ್ಪಗ ಅದರ ಪರಿಣಾಮವಾಗಿ ಭಕ್ತನಾಗಿ ಮಾರ್ಪಾಡಪ್ಪಲೆ ಸಾಧ್ಯತೆ ಇದ್ದು. ಅದರ ಪರಿಣಾಮವಾಗಿ ಅವು ಪಾಪಕರ್ಮಂಗಳಿಂದ ಮುಕ್ತರಪ್ಪಲೆ ಸಾಧ್ಯ ಇದ್ದು. ಹೀಂಗಿರ್ತವು (ಶ್ರದ್ದೆಂದ ಅಸೂಯಾರಹಿತರಾಗಿಪ್ಪೋರು) ಗೀತಾ ವಿಷಯವ ಶ್ರವಣ ಮಾಡಿ ಪಾಪಮುಕ್ತರಾಗಿ ಧರ್ಮಾತ್ಮರ ಶುಭಲೋಕವ ಸೇರ್ಲಕ್ಕು. ಗೀತಾಪಾರಾಯಣ ಶ್ರದ್ದೆಂದ ಶ್ರವಣ ಮಾಡಿರೂ ಪುಣ್ಯ ಇದ್ದು ಹೇಳ್ವ ವಿಷಯವ ಇಲ್ಲಿ ಕಂಡುಗೊಂಬಲಕ್ಕು. ಹಾಂಗಾಗಿ ಭಗವಂತನಲ್ಲಿ ಶ್ರದ್ಧೆ ಇರಿಸಿಗೊಂಡ ಪ್ರತಿಯೊಬ್ಬ ಮನುಷ್ಯಂಗೂ ಭಗವಂತನ ಭಕ್ತನಪ್ಪ ಅವಕಾಶ ಇದ್ದು ಆ ಮೂಲಕ ಪಾಪವಿಮೋಚನೆಯ ಪಡವಲಕ್ಕು. ಮುಂದಾಣ ದಾರಿ ಸುಗಮಗೊಳುಸಲಕ್ಕು. ಪಾಪಕರ್ಮಂಗಳಿಂದ ಬಿಡುಗಡೆ ಹೊಂದಿ ಪುಣ್ಯಜೀವಿಗಳಾಗಿ ಭಗವದುಗ್ರಹಕ್ಕೆ ಪಾತ್ರರಪ್ಪಲೆ ಅವಕಾಶ ಇದ್ದು. ಒಟ್ಟಿಲ್ಲಿ ಭಗವಂತನಲ್ಲಿ ಶ್ರದ್ದೆ ಇರೆಕು. ಅದರಿಂದ ಮಾತ್ರ ಏಳಿಗೆ ಕಾಂಬಲೆಡಿಗು.

ಒಂದು ವೇಳೆ ಗೀತೆಯ ಸ್ವಯಂ ಅಧ್ಯಯನ ಮಾಡ್ವ ಸಾಮರ್ಥ್ಯ ನಮ್ಮಲ್ಲಿ ಇಲ್ಲದ್ದರೆ ಏವುದೇ ಅಸೂಯೆ ಇಲ್ಲದ್ದೆ, ಶ್ರದ್ಧಾಭಕ್ತಿಂದ ತಿಳುದೋರಿಂದ ತಿಳುದರೂ /ಕೇಳಿರೂ ಸಾಕು – ನಾವು ನಮ್ಮ ಪಾಪವ ತೊಳ್ಕಂಡು ಪುಣ್ಯಲೋಕವ ಸೇರ್ಲಕ್ಕು ಹೇಳಿ ಇಲ್ಲಿ ಭಗವಂತನ ಭರವಸೆಯ ನುಡಿ.

ಶ್ಲೋಕ

ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ ।
ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಂಜಯ ॥೭೨॥

ಪದವಿಭಾಗ

ಕಚ್ಚಿತ್ ಏತತ್ ಶ್ರುತಮ್ ಪಾರ್ಥ ತ್ವಯಾ ಏಕಾಗ್ರೇಣ ಚೇತಸಾ । ಕಚ್ಚಿತ್ ಅಜ್ಞಾನ-ಸಂಮೋಹಃ ಪ್ರನಷ್ಟಃ ತೇ ಧನಂಜಯ ॥

ಅನ್ವಯ

ಹೇ ಪಾರ್ಥ! ತ್ವಯಾ ಏತತ್ ಏಕಾಗ್ರೇಣ ಚೇತಸಾ ಶ್ರುತಂ ಕಚ್ಚಿತ್ ? । ಹೇ ಧನಂಜಯ!, ತೇ ಅಜ್ಞಾನ-ಸಂಮೋಹಃ ಪ್ರನಷ್ಟಃ ಕಚ್ಚಿತ್ ?

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನಾದ ಅರ್ಜುನ!, ತ್ವಯಾ – ನಿನ್ನಂದ, ಏತತ್ – ಇದು, ಏಕಾಗ್ರೇಣ – ಏಕಾಗ್ರತೆಂದ, ಚೇತಸಾ – ಮನಸ್ಸಿಂದ, ಶ್ರುತಮ್ ಕಚ್ಚಿತ್ ? – ಕೇಳಲ್ಪಟ್ಟತ್ತೋ?, ಹೇ ಧನಂಜಯ! – ಏ ಧನಂಜಯ ಹೇಳ್ವ ಕೀರ್ತಿಗಳಿಸಿದ ಅರ್ಜುನನೇ!, ತೇ – ನಿನ್ನ, ಅಜ್ಞಾನ-ಸಂಮೋಹಃ – ಅಜ್ಞಾನದ ಭ್ರಾಂತಿ, ಪ್ರನಷ್ಟಃ ಕಚ್ಚಿತ್? – ನಷ್ಟ ಆತೋ (ತೀರಿತ್ತೋ, ಕಳುದತ್ತೋ ? ನಾಶವಾತೋ?).

ಅನ್ವಯಾರ್ಥ

ಏ ಪಾರ್ಥನೆಂಬ ಖ್ಯಾತಿಗಳಿಸಿದ ಅರ್ಜುನ!, ನಿನ್ನಂದ ಇದು ಏಕಾಗ್ರಚಿತ್ತಂದ ಕೇಳಲ್ಪಟ್ಟತ್ತೋ, ಏ ಧನಂಜಯನೆಂಬ ಖ್ಯಾತಿಯ ಅರ್ಜುನ!, ನಿನ್ನ ಅಜ್ಞಾನ ಭ್ರಾಂತಿ ನಾಶವಾತೋ?

ತಾತ್ಪರ್ಯ / ವಿವರಣೆ

ಭಗವಂತ° ಅರ್ಜುನಂಗೆ ಗುರುವಾಗಿ ಗೀತೋಪದೇಶ ಮಾಡಿದ್ದ°. ಹಾಂಗಾಗಿ ಇಡೀ ಭಗವದ್ಗೀತೆಯ ಅರ್ಜುನ ಸರಿಯಾಗಿ ಅರ್ಥಮಾಡಿಗೊಂಡನೋ ಹೇದು ಕೇಳ್ತ. ಅರ್ಜುನಂಗೆ ಮನದಟ್ಟು ಆಗದ್ರೆ ಯಾವುದೇ ಅಂಶವ ಅಥವಾ ಇಡೀ ಭಗವದ್ಗೀತೆಯ ಮತ್ತೆ ವಿವರುಸಲೆ ಭಗವಂತ° ಗುರು ಸ್ಥಾನಲ್ಲಿ ಇದ್ದು ಸಿದ್ಧನಿದ್ದ° ಹೇಳ್ವ ಅಂಶ ಗಮನುಸಲಕ್ಕು. ಗುರುವಾದಂವ° ಶಿಷ್ಯನ ಯಾವತ್ತೂ ಸಂಶಯಂಗಳ ನಿವಾರುಸುವ ಹೊಣೆಗಾರಿಕೆ ಇಪ್ಪಂವ°.  ವಾಸ್ತವವಾಗಿ ಕೃಷ್ಣನಂತಹ ಅಥವಾ ಅವನ ಪ್ರತಿನಿಧಿಯಾದ ಸದ್ಗುರುವಿನ ಮೂಲಕ ಭಗವದ್ಗೀತೆಯ ಕೇಳಿರೆ ತನ್ನ ಅಜ್ಞಾನ ನಾಶ ಆಯೇಕು. ಇನ್ನು ಭಗವದ್ಗೀತೆ ಭಗವಂತನ  ಯಥಾರ್ಥತೆಯ ಸಾರುವ ಮಹತ್ ವಿಷಯ, ಜ್ಞಾನದ ರಹಸ್ಯ, ಇದರ ತಿಳುದರೆ ಅಜ್ಞಾನ ತೊಳದು ಹೋಕು ಹೇಳ್ವದರನ್ನೂ ಭಗವಂತನ ಈ ವಾಕ್ಯಂದ ನಾವಿಲ್ಲಿ ಗಮನುಸಲಕ್ಕು. ಹಾಂಗಾಗಿ ಭಗವಂತ° ಹೇಳೆಕ್ಕಪ್ಪಷ್ಟರನ್ನೂ ಹೇಳಿಕ್ಕಿ ಅರ್ಜುನತ್ರೆ ಪ್ರಶ್ನಿಸುತ್ತ° – “ಹೇಳಿದ್ದಷ್ಟರ ನೀನು ಏಕಾಗ್ರಚಿತ್ತಂದ ಕೇಳಿ ಅರ್ತುಗೊಂಡೆಯೋ?, ನಿನ್ನ ಅಜ್ಞಾನ ಭ್ರಾಂತಿ ನಾಶ ಆತೋ?”

ಇದು ಗೀತೆಲಿ ಭಗವಂತನ ಅಕೇರಿಯಾಣ ಮಾತು. ಅರ್ಜುನನ ಯಾವತ್ತೂ ಸಂದೇಹಕ್ಕೆ ಸಂಪೂರ್ಣ ಮನದಟ್ಟಾಪ್ಪಾಂಗೆ ಎಲ್ಲ ರಹಸ್ಯ ವಿಚಾರವ ಜ್ಞಾನಕ್ಕಾಗಿ, ಅಜ್ಞಾನ ಭ್ರಾಂತಿಯ ಉದ್ದಿತೆಗವಲೆ ಹೇಳಿದ್ದದು. ಎಲ್ಲವನ್ನೂ ವಿವರಿಸಿದ ಭಗವಂತ° ಗುರುವಾದಂವ° ಶಿಷ್ಯನತ್ರೆ ಹೇಳಿದ್ದಷ್ಟು ಮನದಟ್ಟು ಆತೋ ಹೇಳಿ ಕೇಳ್ವ ಕ್ರಮಲ್ಲಿ ಕೇಳುತ್ತ° – “ಆನು ಹೇಳಿದ್ದಷ್ಟು ಗೂಢ ವಿಚಾರಂಗೊ ನಿನ್ನ ಕೆಮಿಗೆ ಹೊಕ್ಕಿ ಮನಸ್ಸಿಂಗೆ ನಾಟಿತ್ತೋ. ನಿನ್ನ ಮನಸ್ಸಿಲ್ಲಿ ಇತ್ತಿದ್ದ ಗೊಂದಲಂಗೊ ಕಳದು ಹೋತೋ”. ಅರ್ಥಾತ್.., ಇನ್ನೂ ಸಂಶಯ ಇದ್ದರೆ ಕೇಳಿಗೊ ಪರಿಹರಿಸುತ್ತೆ ಹೇಳ್ವ ಭಾವಲ್ಲಿ. ಗುರುವಾದವಂಗೆ ಶಿಷ್ಯ ಸಂಪೂರ್ಣವಾಗಿ ಅರ್ಥಮಾಡಿಗೊಂಡರಷ್ಟೇ ತೃಪ್ತಿ. ಒಟ್ಟಾರೆ ಹೇಳೇಕ್ಕನ್ನೇ ಹೇಳಿ ಒಂದಷ್ಟು ಪಕ್ಕ ಹೇಳಿಮುಗಿಷಿಕ್ಕಿ ಶಿಷ್ಯನ ಕಳ್ಸಿಕೊಡುವದು ಗುರುವಿಂಗೆ ಭೂಷಣ ಅಲ್ಲ. ಸಮಧಾನಲ್ಲಿ ಅರ್ಥ ಅಪ್ಪಾಂಗೆ, ಮನದಟ್ಟಪ್ಪಾಂಗೆ ಹೇಳಿಕೊಡೇಕ್ಕಾದ್ದು ಗುರುವಿನ ಕರ್ತವ್ಯ ಹೇಳ್ವದರನ್ನೂ ಭಗವಂತನ ಮಾತಿನ ಭಾವಲ್ಲಿ ಅರ್ಥೈಸಿಗೊಂಬಲಕ್ಕು.

[ಇಲ್ಲಿಗೆ ಭಗವದ್ಗೀತೆಲಿ ಭಗವಂತನ ಮಾತುಗಳ ಒಳಗೊಂಡ 574 ಶ್ಲೋಕಂಗೊ ಮುಗುದತ್ತು. ಅರ್ಜುನನ ಒಟ್ಟು 84 ಶ್ಲೋಕಂಗಳಲ್ಲಿ ಅಕೇರಿಯಾಣ ಶ್ಲೋಕ, ಮತ್ತೆ ಸಂಜಯನ 41 ಶ್ಲೋಕಂಗಳಲ್ಲಿ ಅಕೇರಿಯಾಣ 5 ಶ್ಲೋಕ ಈ ಅಧ್ಯಾಯದ ಉಳುದ ಭಾಗ. (ಕೃಷ್ಣ 574 + ಅರ್ಜುನ 84 + ಸಂಜಯ 41 + ಧೃತರಾಷ್ಟ್ರ 1 ಹೀಂಗೆ ಭಗವದ್ಗೀತೆಲಿ ಒಟ್ಟು 700 ಶ್ಲೋಕಂಗೊ)].

ಶ್ಲೋಕ

ಅರ್ಜುನ ಉವಾಚ

ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ ।
ಸ್ಥಿತೋsಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ॥೭೩॥

ಪದವಿಭಾಗ

ಅರ್ಜುನಃ ಉವಾಚ

ನಷ್ಟಃ ಮೋಹಃ ಸ್ಮೃತಿಃ ಲಬ್ಧಾ ತ್ವತ್ ಪ್ರಸಾದಾತ್ ಮಯಾ ಅಚ್ಯುತ । ಸ್ಥಿತಃ ಅಸ್ಮಿ ಗತ-ಸಂದೇಹಃ ಕರಿಷ್ಯೇ ವಚನಮ್ ತವ ॥

ಅನ್ವಯ

ಅರ್ಜುನಃ ಉವಾಚ

ಹೇ ಅಚ್ಯುತ!, ತ್ವತ್ ಪ್ರಸಾದಾತ್ (ಮೇ) ಮೋಹಃ ನಷ್ಟಃ, ಮಯಾ ಸ್ಮೃತಿಃ ಲಬ್ಧಾ, (ಅಹಂ) ಗತ-ಸಂದೇಹಃ ಸ್ಥಿತಃ ಅಸ್ಮಿ, (ಇದಾನೀಂ) ತವ ವಚನಂ ಕರಿಷ್ಯೇ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಅಚ್ಯುತ! – ಏ ಚ್ಯುತಿರಹಿತನಾದ ಕೃಷ್ಣನೇ!, ತ್ವತ್ ಪ್ರಸಾದಾತ್ – ನಿನ್ನ ಅನುಗ್ರಹಂದ, (ಮೇ – ಎನ್ನ), ಮೋಹಃ – ಮೋಹವು, ನಷ್ಟಃ – ಕಳುದತ್ತು, ಮಯಾ – ಎನ್ನಿಂದ, ಸ್ಮೃತಿಃ – ಸ್ಮೃತಿ (ನೆಂಪು), ಲಬ್ಧಾ – ಪ್ರಾಪ್ತಿಯಾತು, (ಅಹಮ್ – ಆನು), ಗತ-ಸಂದೇಹಃ – ಸಂಶಯವ ಕಳಕ್ಕೊಂಡು, ಸ್ಥಿತಃ  ಅಸ್ಮಿ – ಸುಸ್ಥಿತನಾಗಿದ್ದೆ, (ಇದಾನೀಮ್ – ಈಗ), ತವ ವಚನಮ್ – ನಿನ್ನ ಮಾತಿನ, ಕರಿಷ್ಯೆ – ಮಾಡುತ್ತೆ (ನಿನ್ನ ಮಾತಿನಂತೆ ನಡಕ್ಕೊಳ್ಳುತ್ತೆ).

ಅನ್ವಯ

ಅರ್ಜುನ° ಹೇಳಿದ° – ಹೇ ಚ್ಯುತಿರಹಿತನಾದ ಕೃಷ್ಣ°!, ನಿನ್ನ ಅನುಗ್ರಹಂದ ಎನ್ನ ಮೋಹವೆಲ್ಲವೂ ನಷ್ಟವಾತು. ಎನಗೆ ಸ್ಮೃತಿ ಬಂತು. ಸಂಶಯವ ಕಳಕೊಂಡವನಾಗಿ ಆನು ಸುಸ್ಥಿತನಾಗಿದ್ದೆ. ಇನ್ನು ನಿನ್ನ ಮಾತುಗಳ ಪಾಲುಸುತ್ತೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳೇಕ್ಕಪ್ಪದರ ಎಲ್ಲವ ಹೇಳಿಕ್ಕಿ ಅಕೇರಿಗೆ ನಿನಗೆ ಇನ್ನೇನಾರು ಸಂಶಯಂಗೊ ಇದ್ದೋ ಹೇಳಿ ಕೇಳಿತ್ತಿದ್ದ. ಅದಕ್ಕೆ ಸಂಪೂರ್ಣ ತೃಪ್ತಿಯ ಉತ್ತರವ ಅರ್ಜುನ ಇಲ್ಲಿ ನೀಡುತ್ತ° – “ಸ್ವಯಂ ಅಚ್ಯುತನಾದ ನಿನ್ನ ಉಪದೇಶವ ಕೇಳಿ ಎನ್ನಲ್ಲಿಪ್ಪ ಎಲ್ಲ ಸಂಶಯಂಗೊ ಪೂರ್ತಿ ನಿವಾರಣೆ ಆತು. ಯಥಾರ್ಥ ಪ್ರಜ್ಞೆಯ ಆನು ಈಗ ಪಡಕ್ಕೊಂಡೆ. ಇನ್ನು ನಿನ್ನ ಉಪದೇಶವನ್ನೇ ಪಾಲುಸುತ್ತೆ”.

ಬನ್ನಂಜೆ ಈ ಸಂದರ್ಭಲ್ಲಿ ಒಂದು ಮುಖ್ಯ ವಿಷಯವ ಗಮನಿಸಿ ಹೇಳ್ತವು. ಭಗವಂತನ ಮಾತುಗಳ ಸಂಪೂರ್ಣವಾಗಿ ವಿಧೇಯ ಶಿಷ್ಯನಾಗಿ ಕೇಳಿ ‘ಎನಗೆ ಸ್ಮೃತಿ ಬಂತು / ಜ್ಞಾನ ಬಂತು ಹೇಳಿ ಹೇಳುತ್ತ°. ಇಲ್ಲಿ ಗಮನುಸೆಕ್ಕಾದ ಮುಖ್ಯ ವಿಚಾರ – ಅರ್ಜುನ ಆ ಕಾಲದ ಮಹಾಜ್ಞಾನಿ. ಆದರೆ ಯುದ್ಧರಂಗಲ್ಲಿ ಅಂವ ತನ್ನೆಲ್ಲ ಸ್ಮೃತಿಯ ಕಳಕ್ಕೊಂಡು ಕುಸುದು ಕೂದ°. ಇದೊಂದು ಭಗವಂತನ ಆಟವೇ ಸರಿ. ಪ್ರಪಂಚಕ್ಕೆ ಇಂಥಹ ಅಮೂಲ್ಯ ವಿಷಯವ ಕೊಡ್ಳೆ ಬೇಕಾಗಿಯೇ ಭಗವಂತ° ಈ ರೀತಿಯ ಸನ್ನಿವೇಶವ ಸೃಷ್ಟಿಮಾಡಿ ಅರ್ಜುನನ ಮಾಧ್ಯಮವಾಗಿ ಬಳಸಿದ°. ಭಗವದ್ಗೀತೆಲಿ ಎಂತ ಸಂದೇಶ ಇದ್ದೋ ಅದರ ಪ್ರಾಯೋಗಿಕ ವಿವರಣೆ ಮಹಾಭಾರತ. ಅಲ್ಲಿ ಬಪ್ಪ ಪ್ರತಿಯೊಂದು ಪಾತ್ರವೂ ಗೀತೆಯ ಒಂದೊಂದು ಸಂದೇಶವ ಪ್ರತಿನಿಧಿಸುತ್ತು. ಮನಃಶಾಸ್ತ್ರೀಯವಾಗಿ ನೋಡಿರೆ ಮಹಾಭಾರತ ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುಕಾಣ ಬರೇ ಇತಿಹಾಸ ಅಲ್ಲ. ಅದು ನಮ್ಮ ಅಂತರಂಗದ, ನಮ್ಮ್ ಜೀವನದ ಹೋರಾಟ. ಜ್ಞಾನ ಸಂದೇಶ ಮತ್ತೆ ಅದರ ಪ್ರಾಯೋಗಿಕ ನಿರೂಪಣೆ ನವಗೆ ನೀಡಿದ್ದದು ಮಹಾಭಾರತದ ಮೂಲಕ.

ಶ್ಲೋಕ

ಸಂಜಯ ಉವಾಚ

ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
ಸಂವಾದಮಿಮಮಶ್ರೌಷಮ್ ಅದ್ಭುತಂ ರೋಮಹರ್ಷಣಮ್ ॥೭೪॥

ಪದವಿಭಾಗ

ಸಂಜಯಃ ಉವಾಚ

ಇತಿ ಅಹಮ್ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ । ಸಂವಾದಮ್ ಇಮಮ್ ಅಶ್ರೌಷಮ್ ಅದ್ಭುತಮ್ ರೋಮ-ಹರ್ಷಣಮ್ ॥

ಅನ್ವಯ

ಸಂಜಯಃ ಉವಾಚ

ಇತಿ ಅಹಂ ವಾಸುದೇವಸ್ಯ ಮಹಾತ್ಮನಃ ಪಾರ್ಥಸ್ಯ ಚ ಇಮಮ್ ಅದ್ಭುತಂ ರೋಮ-ಹರ್ಷಣಂ ಸಂವಾದಮ್ ಅಶ್ರೌಷಮ್ ।

ಪ್ರತಿಪದಾರ್ಥ

ಸಂಜಯಃ ಉವಾಚ – ಸಂಜಯ ಹೇಳಿದ°, ಇತಿ ಅಹಮ್ – ಹೀಂಗೆ ಆನು, ವಾಸುದೇವಸ್ಯ – ವಾಸುದೇವನಾದ ಕೃಷ್ಣನ, ಮಹಾತ್ಮನಃ ಪಾರ್ಥಸ್ಯ – ಮಹಾತ್ಮನಾದ ಪಾರ್ಥನ, ಚ – ಕೂಡ, ಇಮಮ್ – ಈ, ಅದ್ಭುತಮ್ – ಅದ್ಭುತವಾದ, ರೋಮ-ಹರ್ಷಣಮ್ – ರೋಮಾಂಚಕವಾದ, ಸಂವಾದಮ್ – ಸಂವಾದವ, ಅಶ್ರೌಷಮ್ – ಕೇಳಿದೆ.

ಅನ್ವಯಾರ್ಥ

ಸಂಜಯ° ಹೇಳಿದ° – ಈ ರೀತಿಯಾಗಿ (ಹೀಂಗೆ) ಆನು ವಾಸುದೇವನಾದ ಕೃಷ್ಣನ ಮತ್ತು ಮಹಾತ್ಮನಾದ ಅರ್ಜುನರ ನಡುಕೆ ಆದ ಅದ್ಭುತವಾದ, ರೋಮಾಂಚಕವಾದ ಸಂವಾದವ ಕೇಳಿದೆ.

ತಾತ್ಪರ್ಯ/ವಿವರಣೆ

ಹುಟ್ಟುಕುರುಡನಾದ ರಾಜ° ಧೃತರಾಷ್ಟ್ರ° ತನ್ನ ಮಕ್ಕಳ ಚಿಂತೆಂದ ಇದ್ದವನಾಗಿ ತನ್ನ ಆಪ್ತನಾದ ಸಂಜಯನತ್ರೆ ಕುರುಕ್ಷೇತ್ರಲ್ಲಿ ಎಂತ ಆತು, ಎಂತ ಆವ್ತಾ ಇದ್ದು ಹೇಳಿ ಕ್ಷಣ ಕ್ಷಣ ಕೇಳಿ ತಿಳಿತ್ತ ಇದ್ದ. ಭಗವದ್ಗೀತೆಯ ಆರಂಭಲ್ಲಿ “ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಃ ಶ್ಚೈವ ಕಿಂಕುರ್ವತ ಸಂಜಯ” ॥ – ‘ಯುದ್ಧೋತ್ಸಾಹಿಗಳಾಗಿ ಕುರುಕ್ಷೇತ್ರಲ್ಲಿ ನೆರೆದ ಎನ್ನವರು ಮತ್ತೆ ಪಾಂಡವರು ಎಂತ ಮಾಡಿದವು’ ಹೇಳಿ ಕೇಳುತ್ತ°. ಸಂಜಯನ ಗುರುಗಳಾದ ವ್ಯಾಸರ ಕೃಪೆಂದ ಇಡೀ ಸಂಗತಿ ಸಂಜಯನ ಹೃದಯಲ್ಲಿ ವೇದ್ಯವಾಗಿತ್ತು. ಹಾಂಗಾಗಿ ಅವಂಗೆ ರಣಕ್ಷೇತ್ರದ ವಿವರಣೆಯ ಯಥಾವತ್ತಾಗಿ ಧೃತರಾಷ್ಟ್ರಂಗೆ ನೀಡ್ಳೆ ಸಾಧ್ಯ ಆತು. ಧೃತರಾಷ್ಟ್ರ ಮಕ್ಕೊ ಎಂತ ಮಾಡಿದವು ಹೇಳಿ ಕೇಳಿದ್ದಕ್ಕೆ ಅಲ್ಲಿ ನಡದ ಘಟನೆಗಳ ವಿವರಣೆಯ ನೀಡುತ್ತಾ “ಹೀಂಗೆ ಕೃಷ್ಣ ಅರ್ಜುನರೊಳ ಅದ್ಭುತವಾದ, ರೋಮಾಂಚಕವಾದ ಸಂವಾದ ನಡದತ್ತು” ಹೇಳಿ ಹೇಳುತ್ತ°. ಇದರ ಬರೇ ಸಂಭಾಷಣೆ ಹೇಳಿ ವರ್ಣಿಸಿದ್ದವಿಲ್ಲೆ. ‘ಸಂವಾದ’ ಹೇಳ್ವ ಮಹತ್ವ ಪದಪ್ರಯೋಗ ಮಾಡಿ ಅಲ್ಲಿ ನಡದ್ದದು ಚಿಂತನೆ ವಿಮರ್ಷೆ  ಹೇಳ್ವದರ ಒತ್ತಿ ಹೇಳಿದ್ದವು. ಸಂಜಯ° ಕೃಷ್ಣ ಅರ್ಜುನರ ಅಪೂರ್ವ ಸಂವಾದವ ಸಾಕ್ಷಾತ್ ನೋಡಿ ವಿಸ್ಮಯಗೊಂಡಿದ°. ಹಾಂಗಾಗಿ ಅಂವ ಧೃತರಾಷ್ಟ್ರನತ್ರೆ ಹೇಳ್ವಾಗ ಹೇಳಿದ – ” ಸಂವಾದಂ ಇಮಂ ಅಶ್ರೌಷಂ ಅದ್ಭುತಂ ರೋಮ-ಹರ್ಷಣಂ” – ‘ಅದ್ಭುತವೂ ರೋಮಾಂಚಕವೂ ಆದ ಸಂವಾದ ಆಗಿತ್ತು’. ಆ ಸಂವಾದವ ಕೇಳಿ ಸಂಜಯಂಗೇ ಮೈನವಿರೆದ್ದಿದು. ಆನಂದ ಪುಳಕಲ್ಲಿ ಸಂಜಯ ಇದ್ದ°.

ಶ್ಲೋಕ

ವ್ಯಾಸಪ್ರಸಾದಾಚ್ಛೃಣುತವಾನ್ ಏತದ್ಗುಹ್ಯಮಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ಕಥಯತಃ ಸ್ವಯಮ್ ॥೭೫॥

ಪದವಿಭಾಗ

ವ್ಯಾಸ-ಪ್ರಸಾದಾತ್ ಶ್ರುತವಾನ್ ಏತತ್ ಗುಹ್ಯಮ್ ಅಹಮ್ ಪರಮ್ । ಯೋಗಮ್ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ ॥

ಅನ್ವಯ

ವ್ಯಾಸ-ಪ್ರಸಾದಾತ್ ಸ್ವಯಂ ಯೋಗಂ ಕಥಯತಃ ಯೋಗೇಶ್ವರಾತ್ ಕೃಷ್ಣಾತ್ ಏತತ್ ಪರಂ ಗುಹ್ಯಮ್ ಅಹಂ ಸಾಕ್ಷಾತ್ ಶ್ರುತವಾನ್ ।

ಪ್ರತಿಪದಾರ್ಥ

ವ್ಯಾಸ-ಪ್ರಸಾದಾತ್ – ವೇದವ್ಯಾಸರ ಅನುಗ್ರಹಂದ, ಸ್ವಯಮ್ – ಸ್ವತಃ, ಯೋಗಮ್ – ಯೋಗವ, ಕಥಯತಃ – ಹೇಳುತ್ತಿಪ್ಪ, ಯೋಗೇಶ್ವರಾತ್ ಕೃಷ್ಣಾತ್ – ಸರ್ವಯೋಗಂಗಳ ಈಶನಾದ ಕೃಷ್ಣನಿಂದ, ಏತತ್ – ಈ, ಪರಮ್ ಗುಹ್ಯಮ್ – ಪರಮೋನ್ನತವಾದ ರಹಸ್ಯವಾದ್ದರ, ಅಹಮ್ – ಆನು, ಸಾಕ್ಷಾತ್ – ಸಾಕ್ಷಾತ್ತಾಗಿ (ಪ್ರತ್ಯಕ್ಷವಾಗಿ), ಶ್ರುತವಾನ್ – ಕೇಳಿದೆ.

ಅನ್ವಯಾರ್ಥ

ವೇದವ್ಯಾಸರ ಕೃಪೆಂದ ಆನು ಈ ಅತ್ಯಂತ ರಹಸ್ಯವಾದ ಮಾತುಗಳ ಯೋಗೇಶ್ವರನಾದ ಕೃಷ್ಣನಿಂದ ನೇರವಾಗಿ ಕೇಳಿದೆ (ಕೃಷ್ಣ ಅರ್ಜುನಂಗೆ ಹೇಳುತ್ತಿಪ್ಪಗಳೇ ಪ್ರತ್ಯಕ್ಷವಾಗಿ ಕೇಳಿದೆ).

ತಾತ್ಪರ್ಯ/ವಿವರಣೆ

ವ್ಯಾಸ° ಸಂಜಯನ ಗುರುಗೊ. ವ್ಯಾಸರ ದಯೆಂದ (ಅನುಗ್ರಹಂದ) ತನಗೆ ದೇವೋತ್ತಮ ಪರಮ ಪುರುಷನ ಅರ್ಥಮಾಡಿಗೊಂಬಲೆ ಸಾಧ್ಯ ಆತು ಹೇಳಿ ಇಲ್ಲಿ ಹೇಳುತ್ತ°. ಹೇಳಿರೆ., ಮನುಷ್ಯ° ಭಗವಂತನ ಅರ್ಥಮಾಡಿಗೊಂಬಲೆ ಪ್ರಯತ್ನಿಸೆಕ್ಕಾದ್ದು ನೇರವಾಗಿ ಅಲ್ಲ, ಗುರುಮಾಧ್ಯಮದ ಮೂಲಕ ಹೇಳಿ ಗೂಢಾರ್ಥ. ಗುರು ಪಾರದರ್ಶಕ ಮಾಧ್ಯಮವಾದರೂ ಅನುಭವ ನೇರವಾದ್ದು. ಇದುವೇ ಗುರುಶಿಷ್ಯ ಪರಂಪರೆಯ ರಹಸ್ಯ. ಗುರು ನಿಜವಾಗಿ ಗುರುವಾದರೆ ಅರ್ಜುನ ಕೇಳಿದಾಂಗೆ ಭಗವದ್ಗೀತೆಯ ನೇರವಾಗಿ ಕೇಳ್ಳೆ ಎಡಿಗು. ಜಗತ್ತಿಲ್ಲಿ ಹಲವಾರು ಯೋಗಿಗೊ ಇದ್ದವು. ಆದರೆ ಭಗವಂತ°- ಕೃಷ್ಣ° ಎಲ್ಲ ಯೋಗಪದ್ಧತಿಗೇ ಗುರುವಾಗಿಪ್ಪಂವ°. ಹಾಂಗಾಗಿ ಇಲ್ಲಿ ಹೇಳಿದ್ದದು – ‘ಯೋಗೇಶ್ವರಾತ್ ಕೃಷ್ಣಾತ್’ – ‘ಯೋಗಂಗಳ ಈಶನಾದ ಕೃಷ್ಣನಿಂದ’ ಕೇಳಿದೆ ಹೇದು.

ನಾರದ° ಕೃಷ್ಣನ ನೇರ ಶಿಷ್ಯ°. ವ್ಯಾಸರ ಗುರು. ಹಾಂಗಾಗಿ ವ್ಯಾಸರು ಅರ್ಜುನನಷ್ಟೇ ಅರ್ಹರು. ಅಲ್ಲಿಯೂ ಗುರುಶಿಷ್ಯ ಪರಂಪರೆಯ ಕಾಂಬಲಕ್ಕು. ಸಂಜಯ ವ್ಯಾಸರ ಶಿಷ್ಯ°. ಇಲ್ಲಿಯೂ ಗುರುಶಿಷ್ಯ ಪರಂಪರೆಲಿ ಜ್ಞಾನ ಪ್ರಾಪ್ತಿಯಪ್ಪದರ ಗಮನುಸಲಕ್ಕು. ವ್ಯಾಸರ ಕೃಪೆಂದ ಸಂಜಯನ ಇಂದ್ರಿಯಂಗೊ ಶುದ್ಧವಾದವು. ಹಾಂಗಾಗಿ ಕೃಷ್ಣನ ನೇರವಾಗಿ ನೋಡ್ಳೆ ಕೇಳ್ಳೆ ಎಡಿಗಾಗು. ಕೃಷ್ಣನ ಮಾತುಗಳ ನೇರವಾಗಿ ಕೇಳ್ಳೆ ಎಡಿಗಪ್ಪವಕ್ಕೆ ಈ ರಹಸ್ಯ ಜ್ಞಾನವ ಅರ್ಥಮಾಡಿಗೊಂಬಲೆಡಿಗು. ಗುರುಶಿಷ್ಯ ಪರಂಪರಗೆ ಸೇರದ್ದಿಪ್ಪ ಮನುಷ್ಯರು ಕೃಷ್ಣನ ಉಪದೇಶವ ನೇರವಾಗಿ ಕೇಳಿ ಅನುಭವುಸಲೆ ಎಡಿಯ. ಹಾಂಗಾಗಿ ಅವರ ಜ್ಞಾನ ಭಗವದ್ಗೀತೆಯ ಅರ್ಥಮಾಡಿಗೊಂಬ ಮಟ್ಟಿಂಗಾದರೂ ಅಪರಿಪೂರ್ಣವೇ.

ಭಗವದ್ಗೀತೆಲಿ ಎಲ್ಲ ಯೋಗಪದ್ಧತಿಗಳ – ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ವಿವರಣೆ ಆಯ್ದು. ಇಂತಹ ಎಲ್ಲ ಯೋಗಂಗಳ ಈಶ್ವರ° – ಆ ಭಗವಂತನಾದ ಶ್ರೀಕೃಷ್ಣ°. ಕೃಷ್ಣನ ನೇರವಾಗಿ ತಿಳಿವ ಭಾಗ್ಯ ಅರ್ಜುನಂಗೆ. ಹಾಂಗೇ ವ್ಯಾಸರ ಕೃಪೆಂದ ಸಂಜಯನೂ ಕೃಷ್ಣನ ಮಾತುಗಳ ನೇರವಾಗಿ ಕೇಳುವ ಅದೃಷ್ಟಶಾಲಿಯಾದ° ಹೇಳ್ವದರ ನಾವಿಲ್ಲಿ ತಿಳ್ಕೊಂಬಲಕ್ಕು. ಗುರು ವ್ಯಾಸದೇವರ ಪ್ರತಿನಿಧಿಯೂ ಅಪ್ಪು. ನೇರವಾಗಿ ಕೃಷ್ಣನಿಂದ ಕೇಳುವದರಲ್ಲಿ ಅಥವಾ ಕೃಷ್ಣನ ಪ್ರತಿನಿಧಿಯಾದ ವ್ಯಾಸರಂತಹ ಸದ್ಗುರುವಿನತ್ರಂದ ಕೇಳುತ್ತರ್ಲಿಯೂ ಏನೂ ವ್ಯತ್ಯಾಸ ಇಲ್ಲೆ. ಹಾಂಗಾಗಿ ವೇದಪದ್ಧತಿಯ ಪ್ರಕಾರ ಗುರುವಿನ ಜನ್ಮದಿನವ ಶಿಷ್ಯರು ವ್ಯಾಸಪೂಜೆ ಹೇದು ಆಚರುಸುತ್ತವು.

ಹಾಂಗಾಗಿ ಸಂಜಯ° ಇಲ್ಲಿ ಹೇಳಿದ್ದದು – ‘ಪರಮ ಪೂಜ್ಯ ಗುರುಗಳಾದ ವ್ಯಾಸರ ಅನುಗ್ರಹಂದ ಆನು ಈ ಅದ್ಭುತವಾದ ರೋಮಾಂಚನ ಕಥನವ ಕೇಳ್ವ ಭಾಗ್ಯ ಪಡದೆ. ಬೇಕು ಹೇಳಿರೆ ಸಿಕ್ಕದ್ದ ಪ್ರಪಂಚದ ಅತ್ಯಂತ ರಹಸ್ಯಂಗಳ ರಹಸ್ಯವಾಗಿಪ್ಪ ಈ ಆಧ್ಯಾತ್ಮ ಸತ್ಯ / ಜ್ಞಾನಸಾರವ ಆ ಗುರುಕೃಪೆಂದ ಯೋಗೇಶ್ವರನಾದ ಕೃಷ್ಣನತ್ರಂದ ಎಲ್ಲವನ್ನೂ ಸಾಕ್ಷಾತ್ ಕೇಳಿಸಿಗೊಂಡೆ’.

ಶ್ಲೋಕ

ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।
ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ ॥೭೬॥

ಪದವಿಭಾಗ

ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮ್ ಇಮಮ್ ಅದ್ಭುತಮ್ । ಕೇಶವ-ಅರ್ಜುನಯೋಃ ಪುಣ್ಯಮ್ ಹೃಷ್ಯಾಮಿ ಚ ಮುಹುಃ ಮುಹುಃ ॥

ಅನ್ವಯ

ಹೇ ರಾಜನ್! (ಅಹಂ) ಕೇಶವ-ಅರ್ಜುನಯೋಃ ಇಮಂ ಪುಣ್ಯಮ್ ಅದ್ಭುತಂ ಚ ಸಂವಾದಂ ಸಂಸ್ಮೃತ್ಯ ಸಂಸ್ಮೃತ್ಯ ಮುಹುಃ ಮುಹುಃ ಹೃಷ್ಯಾಮಿ ।

ಪ್ರತಿಪದಾರ್ಥ

ಹೇ ರಾಜನ್! – ಏ ರಾಜನಾದ ಧೃತರಾಷ್ಟ್ರನೇ!, (ಅಹಮ್ – ಆನು), ಕೇಶವ-ಅರ್ಜುನಯೋಃ – ಕೇಶವ (ಕೃಷ್ಣ) ಅರ್ಜುನ ಇವರಿಬ್ಬರ. ಇಮಮ್ ಪುಣ್ಯಮ್  – ಈ ಪಾವನವಾದ (ಪುಣ್ಯಕರವಾದ), ಅದ್ಭುತಮ್ – ಅದ್ಭುತವಾದ, ಚ – ಕೂಡ, ಸಂವಾದಮ್ – ಸಂವಾದವ, ಸಂಸ್ಮೃತ್ಯ ಸಂಸ್ಮೃತ್ಯ – ಸ್ಮರಿಸಿಗೊಂಡು ಸ್ಮರಿಸಿಗೊಂಡು, ಮುಹುಃ ಮುಹುಃ – ಮತ್ತೆ ಮತ್ತೆ, ಹೃಷ್ಯಾಮಿ – ಹರ್ಪಪಡುತ್ತೆ.

ಅನ್ವಯಾರ್ಥ

ಏ ರಾಜನಾದ ಧೃತರಾಷ್ಟ್ರನೇ!, ಕೇಶವ ಅರ್ಜುನರ ನಡುವೆ ನಡದ ಪವಿತ್ರವಾದ ಹಾಂಗೂ ಅದ್ಭುತವೂ ಆದ ಈ ಸಂವಾದವ ಅನು ಸ್ಮರಿಸಿಗೊಂಡು ಸ್ಮರಿಸಿಗೊಂಡು ಮತ್ತೆ ಮತ್ತೆ ಹರ್ಷಪಡುತ್ತೆ.

ತಾತ್ಪರ್ಯ / ವಿವರಣೆ

ಭಗವದ್ಗೀತೆಯ ಜ್ಞಾನ ಅರ್ಥಮಾಡಿಗೊಂಡರೆ ಎಷ್ಟು ದಿವ್ಯವಾದ್ದು ಹೇಳಿರೆ ಸಂಜಯನೇ ಹೇಳ್ತಾಂಗೆ ಮತ್ತೆ ಮತ್ತೆ ಕೇಳಿ ಆನಂದಾನುಭವವ ಪಡವಲೆ ಎಡಿಗಪ್ಪಂತಾದ್ದು. ಭಗವದ್ಗೀತೆಯ ಶ್ರವಣ ಪುಣ್ಯಕರವಾದ ಕಾರ್ಯ. ಭಗವಂತನ ತಿಳಿವದು ಆನಂದದಾಯಕ. ಅವನ ಮಹಾತ್ಮೆಯ ಕೇಳಿದಷ್ಟೂ ಮಧುರವೇ. ಅದು ಮತ್ತೂ ಮತ್ತೂ ಕೇಳೆಕು ಹೇಳಿ ಕಾಂಬದು. ಹಾಂಗಾಗಿ, ಸಂಜಯ° ಧೃತರಾಷ್ಟ್ರನ ಸಮ್ಮುಖಲ್ಲಿ ನಿಂದುಗೊಂಡು ಆ ಅದ್ಭುತ ಸನ್ನಿವೇಶ ಮತ್ತೆ ಮತ್ತೆ ನೆಂಪಿಂಗೆ ತಂದು ಹೊಗಳುತ್ತ° – ಇದರ ನೆಂಪುಮಾಡಿಗೊಂಡು ಮತ್ತೆ ಮತ್ತೆ ಪುಳಕಗೊಳ್ಳುತ್ತೆ’.

ಅಖಿಲಾಂಡಕೋಟಿಬ್ರಹ್ಮಾಂಡನಾಯಕನಾದ ಆ ಸಾಕ್ಷಾತ್ ಭಗವಂತನೇ, ಸಮಸ್ತ ವಿಶ್ವವ, ದೇವಾಧಿದೇವತೆಗಳ ದೇವನಾದ, ಇಡೀ ವಿಶ್ವವನ್ನೇ ನಿಯಂತ್ರುಸುವ ಶಕ್ತಿಯಾದ, ಇಡೀ ವಿಶ್ವವ ಪಾಲುಸುವ ಸಾರಥಿಯಾದ,  ಆ ಭಗವಂತ° ಇಲ್ಲಿ ಒಬ್ಬ° ಕ್ಷತ್ರಿಯ ಪುರುಷನಾದ ಆ ಅರ್ಜುನನ ಸಾರಥಿ ರೂಪಲ್ಲಿ ನಿಂದು ಹೇಳಿದ ನುಡಿಗೊ ಅದ್ಭುತ ಸಂದೇಶವ ನೀಡಿದ್ದು. ಅಪೂರ್ವವಾದ ಈ ಸಂಗತಿಯ ಪ್ರತ್ಯಕ್ಷವಾಗಿ ಅನುಭವಿಸದಂವ ನಿಜವಾಗಿ ಭಾಗ್ಯಶಾಲಿಯೇ ಅಪ್ಪು.

ಶ್ಲೋಕ

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥೭೮॥

ಪದವಿಭಾಗ

ಯತ್ರ ಯೋಗೇಶ್ವರಃ ಕೃಷ್ಣಃ ಯತ್ರ ಪಾರ್ಥಃ ಧನುರ್ಧರಃ । ತತ್ರ ಶ್ರೀಃ ವಿಜಯಃ ಭೂತಿಃ ಧ್ರುವಾ ನೀತಿಃ ಮತಿಃ ಮಮ ॥

ಅನ್ವಯ

ಯತ್ರ ಯೋಗೇಶ್ವರಃ ಕೃಷ್ಣಃ, ಯತ್ರ ಧನುರ್ಧರಃ ಪಾರ್ಥಃ,  ತತ್ರ ಶ್ರೀಃ, ವಿಜಯಃ, ಭೂತಿಃ, ಧ್ರುವಾ ನೀತಿಃ (ಚ ಇತಿ) ಮಮ ಮತಿಃ (ಅಸ್ತಿ) ।

ಪ್ರತಿಪದಾರ್ಥ

ಯತ್ರ- ಎಲ್ಲಿ, ಯೋಗೇಶ್ವರಃ ಕೃಷ್ಣಃ – ಯೋಗೇಶ್ವರನಾದ ಕೃಷ್ಣನೋ, ಯತ್ರ – ಎಲ್ಲಿ, ಧನುರ್ಧರಃ ಪಾರ್ಥಃ – ಧನುರ್ಧಾರಿಯಾದ ಪಾರ್ಥನೋ, ತತ್ರ – ಅಲ್ಲಿ, ಶ್ರೀಃ – ಸಂಪತ್ತು, ವಿಜಯಃ – ಜಯ, ಭೂತಿಃ – ಅಸಾಧಾರಣ ಶಕ್ತಿ, ಧ್ರುವಾ ನೀತಿಃ – ಖಂಡಿತವಾಗಿಯೂ ನೀತಿಯು, (ಚ ಇತಿ – ಕೂಡ ಹೇದು), ಮಮ ಮತಿಃ (ಅಸ್ತಿ) – ಎನ್ನ ಅಭಿಪ್ರಾಯವು ಆಗಿದ್ದು.

ಅನ್ವಯಾರ್ಥ

ಎಲ್ಲಿ ಯೋಗೇಶ್ವರನಾದ ಶ್ರೀಕೃಷ್ಣ (ಭಗವಂತ°) ಇರುತ್ತನೋ, ಎಲ್ಲಿ ಧನುರ್ಧಾರಿಯಾದ ಪಾರ್ಥ° ಇರುತ್ತನೋ, ಅಲ್ಲಿ ಸಿರಿ(ಸಂಪತ್ತು), ವಿಜಯ, ಅಸಾಧಾರಣ ಶಕ್ತಿ, ನ್ಯಾಯನೀತಿ ಇದ್ದು ಹೇಳಿ ಎನ್ನ ಅಭಿಪ್ರಾಯ.

ತಾತ್ಪರ್ಯ / ವಿವರಣೆ

ಮಹಾಭಾರತ ಯುದ್ಧ ಪ್ರಾರಂಭಂದ ಮದಲು ಧೃತರಾಷ್ಟ್ರಂಗೆ ಮತ್ತೆ ದುರ್ಯೋಧನಂಗೊಕ್ಕೆಲ್ಲ ಒಂದು ಅಭಿಪ್ರಾಯ ಇದ್ದತ್ತು – ‘ಭೀಷ್ಮ, ದ್ರೋಣ, ಜಯದ್ರಥ, ಕರ್ಣ ಮೊದಲಾದ ಅತಿರಥ ಮಹಾರಥರು ತಮ್ಮ ಪಕ್ಷಲ್ಲಿ ಗಟ್ಟಿಗಂಗೊ ಆಗಿ ಇಪ್ಪ ಕಾರಣ ತನಗೇ ಜಯ ಸಿಕ್ಕುತ್ತು’ ಹೇಳ್ವ ನಂಬಿಕೆ ಇತ್ತಿದ್ದು. ಆದರೆ ರಣರಂಗಲ್ಲಿ ಯೋಧರು ಸಜ್ಜಾದಪ್ಪಗ ದುರ್ಯೋಧನಂಗೆ ಮನಸ್ಸಿನೊಳವೇ ಹೆರ ತೋರ್ಸಲೆಡಿಯದ್ದೆ ಭೀಷ್ಮನ ಬಳಿ ಸಾರಿ ಮಾತುಗಳ ಮೂಲಕ ಹಸಬಡುದ°. ಮದಲೇ ಕುರುಡ°ನಾಗಿಪ್ಪ ಧೃತರಾಷ್ಟ್ರಂಗಾದರೂ ಎಲ್ಲಿಂದ ಕಣ್ಣಿಂಗೆ ಕಾಣುತ್ತು ಸನ್ನಿವೇಶ ಏವ ನೆಲೆಲಿ ಇದ್ದು ಹೇದು!. ವೀರಯೋಧರು ತನ್ನ ಪಕ್ಷಲ್ಲೇ ಬಹುಸಂಖ್ಯೆಲಿ ಇಪ್ಪದರಿಂದ ತನ್ನ ಪಕ್ಷಕ್ಕೆ ಜಯ ಖಂಡಿತ ಹೇಳ್ವ ಭರವಸೆಯ ಮಡಿಕ್ಕೊಂಡಿದ್ದ°. ಜಯ ತನ್ನ ಪಕ್ಷಕ್ಕೇ ಹೇಳಿ ಭರವಸೆ ಮಡಿಕ್ಕೊಂಡಿದ್ದ ಧೃತರಾಷ್ಟ್ರಂಗೆ ಸಂಜಯ ಸನ್ನಿವೇಶವ ವಿವರಿಸಿಕ್ಕಿ ಅಕೇರಿಗೆ ಹೇಳ್ತ° – ‘ಎಲ್ಲಿ ಯೋಗೇಶ್ವರನಾದ ಭಗವಂತ° ಇದ್ದನೋ, ಎಲ್ಲಿ ಧನುರ್ಧಾರಿಯಾದ ಅರ್ಜುನ° ಇದ್ದನೋ ಅಲ್ಲಿಗೇ ಸಿರಿ, ವಿಜಯ, ಶಕ್ತಿ. ನೀತಿ ಒಲಿತ್ತು’. ಸಾಕ್ಷಾತ್ ಭಗವಂತನೇ ಅರ್ಜುನನ ಒಟ್ಟಿಂಗೆ ಇಪ್ಪಕಾರಣ ಜಯದ ಹಂಬಲ ನಿನಗೆ ಬೇಡ ಹೇಳಿ ಓರಗೆ ಹೇಳಿಬಿಡ್ತ°. ಅದೃಷ್ಟ ದೇವತೆ ಧೃತರಾಷ್ಟ್ರನ ಬಾಗಿಲಿಂದ ಆಗಳೇ ದೂರ ಹೋಗಿ ಆಯ್ದು.  ಹಾಂಗಾಗಿ ತನ್ನ ಪಕ್ಷಕ್ಕೆ ಗೆಲುವು ನಿರೀಕ್ಷಿಸಿಗೊಂಬದರಲ್ಲಿ ಅರ್ಥ ಇಲ್ಲೆ. ಸರ್ವಗುಣಪರಿಪೂರ್ಣ, ಸರ್ವಸಿರಿಗಳೂ ತುಂಬಿಗೊಂಡಿಪ್ಪ ಭಗವಂತ° ಅರ್ಜುನನ ಒಟ್ಟಿಂಗೆ ಇಪ್ಪಗ ಧೃತರಾಷ್ಟ್ರಂಗೆ ಇನ್ನೆಂತಕೆ ನಪ್ಪಾಸೆ?!

ಯೋಗೇಶ್ವರ° ಭಗವಂತನ ಕೃಪೆ ಇಲ್ಲದ್ದೆ ಏನನ್ನೂ ಸಾಧುಸವ ಯೋಗ ಆರಿಂಗೂ ಇಲ್ಲೆ. ಅವನ ಕೃಪಂಗೆ ಪಾತ್ರರಾಯೇಕ್ಕಾರೆ ಧನುರ್ಧಾರಿ ಪಾರ್ಥನ ಗುಣ ನಮ್ಮಲ್ಲಿ ಇರೆಕು. ನರನಾರಾಯಣರಿಪ್ಪಲ್ಲಿ ಗೆಲುವು ಸದಾ ನಿಶ್ಚಯ. ಎಲ್ಲ ಬಗೆ ಸಂಪತ್ತು, ಅಂತರಂಗ ಸಾಧನೆ, ಬಾಹ್ಯ ಉನ್ನತಿ ಸಾಧ್ಯ.

ಭಗವದ್ಗೀತೆ ಹೇಳಿರೆ ಜೀವನ ರಹಸ್ಯ ಸಾರ. ಎಲ್ಲಿ ಗೀತೆಯ ಜ್ಞಾನ ಇದ್ದೋ ಅಲ್ಲಿ ಪ್ರಾಮಾಣಿಕತೆ ಇದ್ದು, ಗೆಲುವು ಇದ್ದು, ಉನ್ನತಿ ಇದ್ದು, ನೀತಿ ಇದ್ದು. ಆತ್ಮೋತ್ಕರ್ಷಣಗೆ ದಾರಿದೀಪವಾಗಿದ್ದು ಹೇಳಿ ಸಂಜಯ° ಧೃತರಾಷ್ಟ್ರಂಗೆ ವಿಷಯವ ಮನಬಿಚ್ಚಿ ಹೇಳಿದಲ್ಯಂಗೆ-

 

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಮೋಕ್ಷಸಂನ್ಯಾಸಯೋಗೋ ನಾಮ ಅಷ್ಟಾದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಮೋಕ್ಷ-ಸಂನ್ಯಾಸ-ಯೋಗಃ ಹೇಳ್ವ ಹದಿನೆಂಟನೇ ಅಧ್ಯಾಯ ಮುಗುದತ್ತು.

 

ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

ಓಂ ತತ್ಸತ್  ಶ್ರೀಕೃಷ್ಣಾರ್ಪಣಮಸ್ತು

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 68 – 78
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

2 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 68 – 78

  1. ಚೆನ್ನೈಭಾವ,
    ಹರೇ ರಾಮ;ನಿ೦ಗಳ ಶ್ರಮ ಸಾರ್ಥಕವಾಯಿದು.ಬೈಲಿನ ಪರವಾಗಿ ನಿ೦ಗಗೆ ಅನ೦ತ ಧನ್ಯವಾದ೦ಗೊ.ನಿ೦ಗ ಎನಗೆ ಮೈಲ್ ಮಾಡಿದ್ದರ ಇ೦ದು ಓದಿದೆ.”ದ್ರಷ್ಠಾರ” ಕ್ಕೆ ಕೊಟ್ಟ ಒಪ್ಪಕ್ಕೂ ಆಭಾರ೦ಗೊ.ಆನು ಈಗ ಇಲ್ಲಿ ಯು.ಕೆ.ಲಿ ಸೌತ್ ಆನ್ಟೇನಲ್ಲಿ ಮಗಳೊಟ್ಟಿ೦ಗೆ ಡಿಸ೦ಬರ್ ವರೆಗೆ ಇರ್ತೆ.ಇಲ್ಲಿ ಇವು ಮನೆ ಚೇನ್ಜ್ ಮಾಡಿದ್ದರಿ೦ದ ಅ೦ತರ್ಜಾಲ ರಜಾ ಸಮಯಕ್ಕೆ ಸಿಕ್ಕ.ಸಿಕ್ಕಿದ ಮತ್ತೆ ನಿ೦ಗಳ ಸ೦ಪರ್ಕ ಮಾಡ್ತೆ. ನಮಸ್ತೇ.

  2. ಚೆನ್ನೈಭಾವಸ್ಯ ಇದಂ ಪುಣ್ಯಂ ಅದ್ಭುತಂ ಚ ವಿವರಣಂ ಸಂಸ್ಮೃತ್ಯ ಸಂಸ್ಮೃತ್ಯ ಮುಹುಃ ಮುಹುಃ ಹೃಷ್ಯಾಮಿ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×