- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಹಟ್ಟಿಲಿ ಕಟ್ಟಿ ಸಾಂಕುವ ದನಗೊಕ್ಕೆ, ಕಂಜಿಗೊಕ್ಕೆ, ಏನಾರೂ ಅಸೌಖ್ಯ ಅಪ್ಪದು ಸಾಮಾನ್ಯ. ಎಲ್ಲದಕ್ಕೂ ನವಗೆ ಪಶು ವೈದ್ಯರ ಹತ್ರಂಗೆ ಹೋಯೆಕ್ಕೂದು ಇಲ್ಲೆ. ಮನೆ ಹತ್ರೆ ಸಿಕ್ಕುವ ಮೂಲಿಕೆಗಳ ಉಪಯೋಗಿಸಿ ಮದ್ದು ಮಾಡ್ಲಕ್ಕು. ಹಾಂಗಿಪ್ಪ ಕೆಲವು ಮದ್ದುಗಳ ಮಾಡ್ತ ವಿಧಾನಂಗಳ ಇಲ್ಲಿ ಕೊಡ್ತಾ ಇದ್ದೆ.
~
ಸಣ್ಣ ಕಂಜಿಗಳ [ಕರುಗಳ] ಹುಳ ಭಾಧೆಗೆ ಮದ್ದು
ಹೂಬಾಳೆ ದಂಡಿನ ಗುದ್ದಿ ಎಸರಿಂಡಿ[ಬಾಳೆ ದಂಡಿನ ಪೊಳಿ] ಅರ್ಧ ಕುಡ್ತೆಯಷ್ಟು ಕುಡಿಸುವದು
ಅಜೀರ್ಣ್ಣಕ್ಕೆ
ಕಂಜಿಗಳ ಅಜೀರ್ಣಕ್ಕೆಃ-
೧: ಸಣ್ಣಕಂಜಿಗೊಕ್ಕೆ ಅಜೇರ್ಣವಾಗಿ ಎಂತೂ ತಿನ್ನದ್ದೆ ಸುಮ್ಮನೆ ಮನಿಗೊಂಡಿದ್ದರೆ ಒಂದೆರಡು ದಿನ ಅವರ ಬಾಯಿಗೆ ಒಂದು ಕಡಿ ಲಿಂಬೆ ಹುಳಿ ಎಸರು ಹಿಂಡೆಕ್ಕು
೨: ಕಂಚಿ ಸಟ್ಟು[ಕಂಚಿಹುಳಿಯ ಓಡಿನ ಉಪ್ಪಿಲ್ಲಿ ಹಾಕಿ ಮಡಗಿದ್ದದು] ಒಂದು ತುಂಡು ಗುದ್ದಿ ಹುಡಿಮಾಡಿಗೊಂಡು ದನದ ಮಜ್ಜಿಗೆಲಿ ಕರಡುಸಿ ಎರಡು ದಿನ ಕುಡಿಶೆಕ್ಕು
೩: ಮಸ್ತಕಾರಿಷ್ಟ ಹಾಂಗೂ ದಶಮೂಲಾರಿಷ್ಟ ಒಂದೊಂದು ಔನ್ಸು ಮಿಶ್ರ ಮಾಡಿ ಎರಡು ಹೊತ್ತು ಕುಡುಶೆಕ್ಕು ಬರೀ ಎಳೆಕಂಜಿಗಾದರೆ ಅರ್ಧ ಔನ್ಸುಸಾಕು.
೪: ಕುಟಜಾರಿಷ್ಟ ಹಾಂಗು ದಶಮೂಲಾರಿಷ್ಟ ಕೊಡ್ಲಕ್ಕು.
೫: ಹಿಪ್ಪಿಲಿ ಆಸವ ಎರಡು ಔನ್ಸು ಎರಡು ಹೊತ್ತು ಕೊಡ್ಲಕ್ಕು
೬: ಸಣ್ಣ ಕಂಜಿಗೊಕ್ಕೆ ಅಜೀರ್ಣ ಬಾರದ್ದ ಹಾಂಗೆ ನಾಲ್ಕು ದಿನಕ್ಕೊಂದಾರಿ ಚಾಯದ ಪುಂಟೆ ಕೊಟ್ರೂ ಆವುತ್ತು
೭: ಮಜ್ಜಿಗ್ಗೆ ಇಂಗು ಬೆರ್ಸಿ ಕುಡುಶಿರೂ ಒಳ್ಳೆದಾವುತ್ತು
೮-ಕಂಚಿಸಟ್ಟು ಹೊಡಿ ಮಾಡಿ ಮಜ್ಜಿಗೆಲಿ ಕರಡಿಸಿ ಅಥವಾದೊಡ್ಡವಕ್ಕೆ ಬಾಳೆಲೆಲಿ ಸುರುಟಿ ತಿಂಬಲೆ ಕೊಡುವದು
ಕಂಜಿಗೆ ಪರಂಗಿ ಹಿಡುದರೆ,-[ರೋಮ ಉದುರುವದು]
೧: ಗೇರು ಬೀಜದ ಓಡಿನ ಅಕ್ಕಿ ಮಡ್ಡಿಗೆ ಹಾಕಿ ಕೊಡೆಕು. ನಾಲ್ಕೈದು ಬೀಜದ ಓಡು ಎರಡು ಕುಡ್ತೆ ಅಕ್ಕಿ ಮಡ್ಡಿಗೆ ಸಾಕು
೨: ಮೇಗೆ ಹೇಳಿದ ಹಾಂಗೆ ಗೇರೆ ಕೆತ್ತೆಯ ಮಾಡಿರೂ ಆವುತ್ತು.
೩: ಪೊನ್ನೆ ಎಣ್ಣೆಯ ನಾಲ್ಕು ಚಮಚದಷ್ಟು ಕುಡುಸಿರೂ ಆವುತ್ತು.
೪: ಸಣ್ಣ ಕಂಜಿಗೊಕ್ಕೆ ಹೊಕ್ಕುಳು ಹುಣ್ಣಾದರೆ – ಲೋಶನ್ ನೀರಿಲಿ ತೊಳೆದು ಬೇಪೆಣ್ಣೆ ಅಥವಾ ನೀಲಗಿರಿ ಎಣ್ಣೆ ಹಚ್ಚುವದು. ನೀಲಗಿರಿ ಎಣ್ಣೆಯ ಹುಣ್ಣಿಂಗೆ ಬಿಟ್ಟರೆ ಹುಳ ಇದ್ದರೆ ಮೇಲೆ ಮೇಲೆ ಬತ್ತು.
ಹಸುಗಳ ಕೆಚ್ಹಲು ಬೀಗಿರೆ,-
ದನದ ಮಲೆ ಬೀಗಿರೆ ಹಾಲು ಕರವಲೆ ಬಿಡುತ್ತಿಲ್ಲೆ [ಹಾಲು ಹಿಂಡಿ ಬಿಡೆಕು. ನಾವು ಉಪಯೋಗುಸಲಾಗ]
೧: ಮದ್ದರಸನ [ಚಟ್ಟೆ ಕೊಡಂಜಿ] ಮರದ ಎಳೆ ಸೊಪ್ಪಿನ [ಒಂದು ಹಿಡಿ] ಒಂದು ಮುಷ್ಟಿ ಬೆಣ್ತೆಕ್ಕಿ ಸೇರ್ಸಿ ನೊಂಪಿಂಗೆ ಅರದು ಬೀಗಿದ ಜಾಗ್ಗೆ ಆರಾರ ಲೇಪನ ಮಾಡೆಕ್ಕು
೨: ಬೂದುಕುಂಬಳ ಸೊಪ್ಪಿನನ್ನೂ ಮೇಲೆ ಹೇಳಿದಹಾಂಗೆ ಪ್ರಯೋಗ ಮಾಡಿರೂ ಒಳ್ಳೆ ಪರಿಣಾಮಕಾರಿ ಆವುತ್ತು.
೩: ನಯವಾದ ಬೆಳಿ ಜೇಡಿ ಮಣ್ಣಿನ ನೀರಿಲ್ಲಿ ಅರದು ಕೆಚ್ಚಲಿಂಗೆ ಲೇಪನ ಮಾಡಿರೂ ಆವುತ್ತು.
೪: ಕಸ್ತಲಪ್ಪಾಣ ಹೊತ್ತಿಂಗೆ ಕುರುದಿ ನೀರು [ಸುಣ್ಣ+ಅರಿಶಿನನೀರು] ಒಂದು ಕುತ್ತಿಯಷ್ಟುತೆಕ್ಕೊಂಡು ರಜ ರಜವೇ ಕೆಚ್ಚಲಿಂಗೆ ತೋಕೆಕ್ಕು
೫: ಮೂಲಿಕೆ;-ಒಂದು ಕಬ್ಬಿಣದ ತುಂಡು ಕೆಂಡಕ್ಕೆ ಹಾಕಿ ಕೆಂಪಪ್ಪಗ ತೆಗದು ಅದರ ಹೆಜ್ಜೆ ತೆಳಿಗೆ ಮುಳುಗಿಸಿ ತೆಗದು ಆ ತೆಳಿಯ ಮೂರ್ಸಂದಿ ಹೊತ್ತಿಂಗೆ ಕುಡುಸೆಕ್ಕು.
೪: ಚೂರಿ ಮುಳ್ಳಿನ ಎಲೆ ಚಿಗುರುದೆ ಹಸಿಅರಸಿನವೂ ಒಟ್ಟಿಂಗೆ ಅರದು ಹಚ್ಚೆಕ್ಕು ದಿನಲ್ಲಿ ಮೂರು ಸರ್ತಿ.
೫: ಹಳೆ ತುಪ್ಪವುದೆ ಜೇನವುದೆ ಒಟ್ಟಿಂಗೆ [ತುಪ್ಪವೂ ಜೇನೂ ಸೇರ್ಸುವಾಗ ಸಮಪ್ರಮಾಣಲ್ಲಿ ಸೇರ್ಸಲೆ ಆಗ. ಯಾವುದಾದರೂ ಒಂದರ ರಜ್ಜ ಕಮ್ಮಿ ಮಾಡೆಕ್ಕು] ಕಲಸಿ ಕಿಟ್ಟೆಕ್ಕು.
೬: ತಟ ಪಟಕ್ಕನಸೊಪ್ಪು [ನಾವು ಸಣ್ಣಾದಿಪ್ಪಾಗ ಪುಸ್ತಕದ ಎಡೆಲಿ ಬೇರು ಬಪ್ಪಲೆ ಮಡಗಿಯೊಂಡಿದ್ದಸೊಪ್ಪು] ಅಕ್ಕಚ್ಚು ನೀರಿಲ್ಲಿ ಅರದು ಲೇಪ ಹಾಕುವದು.
ದನಗಳ ಮೈ ಮೇಲೆ ದಡಿಕ್ಕೆ , ಹುಣ್ಣಾದರೆ
೧: ಆನೆ ಸಜಂಕಿನ [ತಗತ್ತೆ ಸೊಪ್ಪಿನ ಹಾಂಗೆ ಸೊಪ್ಪು, ಸಣ್ಣ ಮರದ ಹಾಂಗೆ ಆವುತ್ತು] ಸೊಪ್ಪುದೆ, ಆನೆ ಮಂಜಳು [ಅರಸಿನಲ್ಲಿಯೆ ದೊಡ್ಡ ಜಾತಿ] ಸೊಪ್ಪು, ಇವೆರಡನ್ನೂ ನೊಂಪಿಂಗೆ ಅರದು ದಡಿಕ್ಕೆ ಬಿದ್ದ ದನದ ಮೈಗೆ ಲೇಪನ ಮಾಡೆಕ್ಕು, ಬಿಡದ್ದೆ ಆರು ಅಥವಾ ಬೇಕಾಗಿ ಬಂದರೆ ಹನ್ನೆರಡು ದಿನ ಕಿಟ್ಟಿರೆ, ದಡಿಕ್ಕೆ, ಹುಣ್ಣು, ಉರುಣಿ, ಹೀಂಗಿದ್ದ ಚರ್ಮ ರೋಗಂಗೊ ಗುಣ ಆವುತ್ತು.
೨: ಒಣ ಅರಸಿನ ಕೊಂಬಿನ ಕರೀ ಅಪ್ಪಷ್ಟು ಸುಟ್ಟು ಹೊಡಿ ಮಾಡಿ ಎಳ್ಳೆಣ್ಣೆಲಿ ಕಲಸಿ ಕಿಟ್ಟುವದು ದನಗಳ ಮೈ ಮೇಲಣ ಹುಣ್ಣಿಂಗೆ ಬಹು ಒಳ್ಳೆ ಮದ್ದು.
೩: ಗೋವಿನ ಮೈ ಮೇಲೆ ವಿಶೇಷ ಹುಣ್ಣು, ಹುಳು, ಆದರೆ, ಸೀತಾಪಲದಸೊಪ್ಪು ಒಣಗಿದ್ದು ಒಂದು ಭಾಗ, ಹೊಗೆಸೊಪ್ಪು ಒಂದುಭಾಗ ಇವೆರಡರ ಚೀಂಚಟ್ಟಿಲಿ ಹೊರುದು ಕರೀಆದಮೇಲೆ ಬೂದಿಮಾಡಿ, ಸುಣ್ಣದ ಹುಡಿ ಒಂದು ಭಾಗ ಸೇರ್ಸಿ ಜಾಳಿಸಿಗೊಂಡು ಹುಳು ಇದ್ದ ಹುಣ್ಣಿಂಗೆ ಹಾಕೆಕ್ಕು, ಬೇವಿನೆಣ್ಣೆ ಜಾಳ್ಸಿ ಹಚ್ಚಲೂ ಅಕ್ಕು. ಇದು ಒಳ್ಳೆ ಪ್ರಯೋಗ.
೪: ಬರೇ ಸೀತಾಪಲದ ಸೊಪ್ಪಿನ ನೀರು ಸೇರ್ಸದ್ದೆ ನಯ ಅರದು ಹುಣ್ಣಿನ ಮೇಗೆ ಕಿಟ್ಟಿರೂ ಹುಳು. ಹುಣ್ಣು ಗುಣ ಆವುತ್ತು.
೫: ಗೋಸಂಪಗೆ ಗೆಡುವಿನ ಸೊಪ್ಪು ಮುರುದಪ್ಪಗ ಬಪ್ಪ ಹಾಲಿಲ್ಲಿ ಜಿರಳೆ ಮಾತ್ರೆಯ ಅರದು ಕಿಟ್ಟಿರೆ ಹುಣ್ಣು ಬೇಗನೆ ಮಾಸುತ್ತು.
೬: ಬೆಳೂಲಿನ ಹುಡಿಲಿ ಒಲೆ ಬೂದಿಯ ಬೆರ್ಸಿ ಕಜ್ಜಿಯ ಮೇಲೆ ತಿಕ್ಕೀರೆ ಒಳ್ಳೆ ಪರಿಣಾಮ, ಈ ಪ್ರಯೋಗವ ಚಳಿ ಹಿಡುದ ದನಗೊಕ್ಕೆ ಮಾಡಿರೂ ಬೇಗ ಚೇತರಿಸುತ್ತವು.
ದನಗಳ ಕಣ್ಣು ಬೇನಗೆ
೧: ಮಂದಾರ ಸೊಪ್ಪಿನ ನಮ್ಮ ಬಾಯಿಲಿ ಅಗುದು ದನದ ಕಣ್ಣಿಂಗೆ ಪಸರ್ಸಿ ಬೀಳುವಾಂಗೆ ತುಪ್ಪೆಕ್ಕು.
೨: ಕೆಲವು ಸರ್ತಿ ದನಗಳ ಕಣ್ಣಿಲ್ಲಿ ಹಿಕ್ಕುತುಂಬಿ ನೀರು ಹರಿತ್ತು. ಈ ಸಂದರ್ಭಲ್ಲಿ ಇದಕ್ಕೆ ನಸು ಉಪ್ಪುಹಾಕಿ ಒಂದುಲೋಟ ನೀರಿಲ್ಲಿ ಕರಡಿಸಿಗೊಂಡು ಆ ನೀರಿನ ಅವರ ಕಣ್ಣಿಂಗೆ ತೋಕೆಕ್ಕು.
ದನಗಳ ಮೈಲಿ ಉಣುಗು ತುಂಬಿರೆ
೧: ಉದ್ದಿನಎಣ್ಣೆ ಮಾಡಿ ಮೈಗೆ ಕಿಟ್ಟಿಕ್ಕಿ ಒಂದು ಗಂಟೆ ಬಿಟ್ಟು ಬೆಳೂಲಿಂದ ತಿಕ್ಕಿ ಉಣುಗು ಉದುರಿಸಿಡೆಕು,
ಹಶುಗೊ [ದನಗೊ] ಕ್ಕೆ ಜ್ವರ ಬಂದರೆ [ಸಾಮಾನ್ಯ ಜ್ವರ]
೧: ಒಳ್ಳೆ ಮೆಣಸು, ನುಗ್ಗೆಕೆತ್ತೆ, ಕಾಟು ಮೆಣಸಿನ ಬಳ್ಳಿ, ಹೆಣ್ಣುಹೊಂಗಾರೆ ಕೆತ್ತೆ, ಒಣಶುಂಠಿ, ಅರಶಿನಕೊಂಬು, ಇದರೆಲ್ಲ ಒಟ್ಟಿಂಗೆ ಒಂದೊಂದು ಮುಷ್ಟಿ ಹಾಕಿ ಒಂದು ಕುತ್ತಿ ನೀರಿನ ಕಶಾಯ.
೨: ಎರಡು ಇಂಚು ಉದ್ದದ ನುಗ್ಗಿ ಮರದಕೆತ್ತೆ, ಅಷ್ಟೆ ಪ್ರಮಾಣದ ಹೆಣ್ಣುಹೊಂಗಾರೆ ಕೆತ್ತೆ, ಒಂದುಹಿಡಿ ಒಳ್ಳೆಮೆಣಸು, ಕಾಟುಮೆಣಸಿನ ಬಳ್ಳಿ[ನೀರಿನ ಪಸೆ ಇಪ್ಪ ತೋಟಲ್ಲಿರುತ್ತು] ಎರಡು ಇಂಚು ಪ್ರಮಾಣದ ಒಣಶುಂಠಿ, ಅಷ್ಟೇಒಣಾರಸಿನಕೊಂಬು, ಇಷ್ಟನ್ನೂ ಒಂದುಸೇರು ನೀರಿಲ್ಲಿ ಕಷಾಯ ಮಡಗಿ ಎರಡು ಕುಡ್ತೆಗೆ ಬತ್ತಿಸಿ ಪ್ರತಿ ದಿನ ಎರಡು ಸರ್ತಿ ಹಾಂಗೆ ಮೂರು ದಿನ ಕೊಡೆಕು.
ಒಡಲಡ್ಡಿ ಬೇನೆ ಹಾಂಗು ಜ್ವರಕ್ಕೆ
೧: ಮರುವದ ಕೆತ್ತೆ ಅಥವಾ ಹೊಳೆ ಮತ್ತಿಕೆತ್ತೆ [ನೀರ್ಮತ್ತಿ ಅಥವಾ ಅರ್ಜುನ ವೃಕ್ಷ] ಯನ್ನೂ ಸ್ವಚ್ಛ ಮಾಡಿ ನಾಲ್ಕು ತೊಲೆಯಷ್ಟು ಹಾಕಿ ಕಷಾಯ ಮಾಡಿ ಆರ್ದ ಔನ್ಸು ಎಳ್ಳೆಣ್ಣೆ, ರಜ ಅರಸಿನಹೊಡಿ ಸೇರ್ಸಿ ಕೊಟ್ಟರೆ ಮೇಲೆ ಹೇಳಿದ ರೋಗ ಗುಣ ಆವುತ್ತು,
ಬಾಣಂತಿ ದನದ ಜ್ವರಕ್ಕೆ- [ಲಕ್ಷಣ,-ದನದಮೈ ಬೆಶಿ ಇಕ್ಕು. ಅಕ್ಕಚ್ಹು, ಹಿಂಡಿ, ಹುಲ್ಲು, ವಗೈರೆ ತಿನ್ನವು. ಒಂದುವೇಳೆ ತಿಂದರೂ ನಿರಾಸಕ್ತಿ ಇಕ್ಕು.]
೧: ಒಳ್ಳೆತ ಒಂದು ಹಿಡಿ ಕಹಿಬೇವಿನ ಕಣೆ ಹಾಕಿ ನಾಲ್ಕು ಕುಡ್ತೆ ನೀರಿಲ್ಲಿ ಕೊದಿಶಿ ೨ಕುಡ್ತಗೆ ಬತ್ತಿಸಿ ಇದರ ದಿನಕ್ಕೆರಡು ಸರ್ತಿ ಮೂರು ದಿನ ಕೊಡೆಕು.
೨: ಬಾಣಂತಿ ದನಕ್ಕೆ ದಶಮೂಲಾರಿಷ್ಟವನ್ನೂ ಕುಮಾರಿ ಆಸವವನ್ನೂ ಸಮಪ್ರಮಾಣಲ್ಲಿ ಮಿಶ್ರಮಾಡಿಯೊಂಡು ಪ್ರತಿದಿನ ಅರ್ಧ ಕುಡ್ತೆ ಹಾಂಗೆ ದಿನಕ್ಕೊಂದಾವರ್ತಿ ಹತ್ತು ದಿನ ಕೊಡೆಕು. ಈ ಪ್ರಯೋಗ ಹಸುಗೊಕ್ಕೆ ಹಾಲು ವೃದ್ಧಿಗೂ ಆರೋಗ್ಯಕ್ಕೂ ಉತ್ತಮ. ಬೇರೆ ಕಾಯಿಲೆ ಬೇಗ ಬಾರ.
ದನಗೊಕ್ಕೆ ಕಾಲು ಜ್ವರ ಬಂದರೆ- [ಲಕ್ಷಣ-ಇದು ಹೆಚ್ಹಾಗಿ ಚಳಿಗಾಲಲ್ಲಿ ಬಪ್ಪ ರೋಗ. ಕಾಲಿನ ಗೊರಸುಗಳ ಸಂದಿಲಿ ಹುಣ್ಣು , ಒಟ್ಟಿಂಗೆ ಜ್ವರವೂ ಇಕ್ಕು.ಇದು ಪಗರುವ ರೋಗ]
೧: ಗೊಂತಾದಕೂಡ್ಲೇ ಬೇಪೆಣ್ಣೆ, ನೀಲಗಿರಿ, ಟಾರು, ಇದರಲ್ಲಿ ಯಾವುದಾದರೊಂದರ ಕಾಲಿನ ಗೊರಸಿನೆಡೆಂಗೆ ಬಿಟ್ಟು ಹುಳು ತೆಗದು ಲೋಶನ್ ನೀರಿಲ್ಲಿ ತೊಳದು ಬಿಡೆಕು, ದಿನಕ್ಕೊಂದಾರಿ
೨: ಮುಳ್ಳು ದಾಸನ ಹೂಗು [ಬೊಟ್ಟು ಹೂಗು ಹೇಳ್ತವು. ಬೇಲಿ ಕರೆಲೆಲ್ಲ ಇರ್ತು] ದಂಡು ಸಮೇತ ಅಕ್ಕಿ ಮಡ್ಡಿಗೆ ಹಾಕಿ ಬೇಶಿ ಕೊಟ್ಟರೆ ಒಳ್ಳೆ ಮದ್ದು.
೨: ಅಡಕ್ಕೆ ಮರದ ಹಾಳೆಯ ಹೊತ್ತಿಸಿ ಕರಿಮಾಡಿ , ಅರದು ಕಹಿ ಬೇವಿನೆಣ್ಣೆಲಿ ಜಾಳಿಸಿ ಮಡಗಿಯೊಂಡು ಕಾಲೊಡದ ಜಾಗ್ಗೆ ಕಿಟ್ಟಿಯೊಂಡು ಇಪ್ಪಲಕ್ಕು. ಹುಳುವಾದರೆ ಚಿಮಿಣಿ ಎಣ್ಣೆ ಬಿಟ್ಟು ಹುಳ ಹೆರ ಬಪ್ಪ ಹಾಂಗೆ ಮಾಡೆಕ್ಕು. ಮತ್ತೆ ಬೆಶಿ ನೀರಿಂಗೆ ಡೆಟ್ಟಾಲ್ ಹಾಕಿ ಹುಣ್ಣು ತೊಳದು ಮತ್ತೆ ಮೇಲಿನ ಲೇಪನ ಮಾಡೆಕ್ಕು. ಬಿಡದ್ದೆ ೬. ಅಥವಾ ೮, ದಿನ ಈ ಮದ್ದು ಮಾಡಿರೆ ಹುಣ್ಣು ಗುಣ ಆವುತ್ತು.
೪: ಬೀಟಿ ಮರದ ಕಾಂಡದ ತಿರುಳಿನನ್ನೂ ಕರಟವನ್ನೂ ಸೇರ್ಸಿ ಜಜ್ಜಿ ಪುಡಿಮಾಡಿ ಬೀಜದಓಡಿನ ಎಣ್ಣೆ ತೆಗೆತ್ತಹಾಂಗೆ ಕೊಡಲ್ಲಿ ತುಂಬುಸಿ ಎಣ್ಣೆ ತೆಗೆಕು , ಈ ಎಣ್ಣೆಯ ದನಗಳ ಕಾಲು ಒಡದ ಹುಣ್ಣಿಂಗೆ ಕಿಟ್ಟಿರೆ ಬೇಗ ಗುಣ ಆವುತ್ತು. ಹಸುಗಳ ಇತರ ಹುಣ್ಣಿಂಗೂ ಇದರ ಕಿಟ್ಲಕ್ಕು.
೫: ಜ್ವರ ಇದ್ದರೆ ದಿನಕ್ಕೊಂದಾರಿ ಪಂಚತಿಕ್ತ ಕಶಾಯ ಅಥವಾ ಸುದರ್ಶನ ಕ್ವಾಥವನ್ನೂ ೩ಔನ್ಸು ಕುಡುಶೆಕ್ಕು, ಹೀಂಗೆ ಮಾಡಿರೆ ೩ ಅಥವಾ ೬ದಿನಲ್ಲಿ ಜ್ವರ ಬಿಡುತ್ತು. ಸಣ್ಣ ಕಂಜಿಗೊಕ್ಕೆ ಒಂದೂವರೆ ಔನ್ಸು ಹಾಂಗೂ ದೊಡ್ಡ ದನಗೊಕ್ಕೆ ೪ ಔನ್ಸು ಕೊಡ್ಲಕ್ಕು.
ವಿ.ಸೂಃ-ಗೊಬ್ಬರದ ಹಟ್ಟಿಲಿ ಕಾಲು ರೋಗದ ದನಗಳ ಕಟ್ಳಾಗ. ಗೆದ್ದೆಕೆಸರಿಲ್ಲಿ ಕಟ್ಟಿರೆ ಒಳ್ಳೆದು.
~*~
ಹರೇ ರಾಮಾ , ಒಳ್ಳೊಳ್ಳೆ ಮಾಹಿತಿ ಕೊಡ್ತಾ ಇದ್ದಿ, ನಿಮ್ಮ ಪ್ರಯತ್ನ ಹಿಂಗೇ ಮುಂದವರಿಲಿ ಹೇಳಿ ಬಯಸ್ತೆ…
ಉತ್ತಮ ಮಾಹಿತಿ, ದನ್ಯವಾದ೦ಗೊ
iharE raama. chennai bhaavana haaraike, uDupu moole appachhiya aasheervaada iddare khaMDita hedarike ille
ಹರೇ ರಾಮ; ಮಹತ್ವದ ಕೆಲಸ;ಒಳ್ಳೆ ಸ೦ಗ್ರಹ. ನಿ೦ಗಳ ಹೇಮಾರಿಕೆಲಿ ಎ೦ತೆ೦ಥಲ್ಲ ಇದ್ದೊ!ಸಾರ್ಥಕ ಕೆಲೆಸ!ಮು೦ದುವರಿಸಿ. [ಕೊಡಂಜಿ ಹೇದರೆ ಬೆಳಿಹೂಗಪ್ಪ, ಉದ್ದದ ಕೊ೦ಬುಗಳ ಬಿಡುವ(ಕುಟಜ)ಕೊಡಗಸನವೋ? ]ಇ೦ಥ ಉತ್ಕೃಷ್ಟ ಮಾಹಿತಿ ಕೊಡುವ ನಿ೦ಗಗೆ ಧನ್ಯವಾದ೦ಗ, ನಮಸ್ತೇ.
ಹರೇ ರಾಮ. ಒಳ್ಳೆ ಮಾಹಿತಿಯ ಶುದ್ದಿ. ಉಪಯುಕ್ತ ವಿಷಯಗಳ ಆಯ್ದು ಬೈಲಿಲಿ ಶುದ್ದಿ ಮಾಡುವ ವಿಜಯತ್ತಗೆ ನಮಸ್ಕಾರ.