Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ಪಟಲ್ಲಿ ಕಾ೦ಬ ದೃಶ್ಯಕ್ಕೆ ಯೇವದೇ ಛ೦ದಸ್ಸಿಲಿ ಕವಿತೆ ಬರೆಯಿ.
ಚಿತ್ರಕೃಪೆ ಃ ಪವನಜ ಮಾವ
ಮರಕಡುದು ಬೋಳಾತು
ಗರಗಸಕ್ಕೆ ಸಿಕ್ಕಿಯೆ
ಮರುಭೂಮಿಯಕ್ಕು ಹಸುರು ಬೆಳಶದ್ದೆ
ಸುರುವಾಯೆಕ್ಕು ಚಳವಳಿ
ಪರಿಸರದ ಕಾಳಜಿಯ
ಹೊರತು ಪರಿಪೂರ್ಣವಾಗ ಜೀವನವೆ
——————
ಒಂದು ಕಡಿವನ್ನ ಮದಲೆ ನೆಡೆಕೆರಡು ಗೆಡು
ಇದುವೆ ಪರಿಸರ ಪ್ರೇಮದ ಕರಡು ನೋಡು
ಕಾಡು ಬೆಳಶಿ ಒಳುಶೆಕ್ಕು ಊರಿನ ಹಸುರು
ಕಾಣುತ್ತು ಭೂದೇವಿಯ ತುಂಬಿದ ಬಸರು
ಪರಿಸರ ಕಾಳಜಿ ತುಂಬಿಪ್ಪ ಪದ್ಯಂಗೊ ನಿಜಕ್ಕೂ ತುಂಬಾ ಲಾಯ್ಕಾಯ್ದು.
“ಭೂದೇವಿಯ ತುಂಬಿದ ಬಸರು” – ಒಳ್ಳೆ ವಾಕ್ಯ ಪ್ರಯೋಗ.
ಏರು ಬಾ ಮೇಲೇರು ಹತ್ತರೆ
ಹಾರು ಬಾನಕೆ ಮೀರುಸೆನ್ನನೆ
ಕೋರುವ೦ತಿದ್ದನ್ನೆ ಕೈಗಳ ಬೀಸಿ ದೆನಿಗೇಳಿ|
ಜಾರುಬ೦ಡಿಯ ಹಾ೦ಗೆ ಕಾಲಿನ
ದಾರಿ ಕಾಣುತ್ತನ್ನೆ ನೂರ್ತಲೆ
ಮಾರುಗಳ ಮೀರಿಕ್ಕು ಪರ್ವತ ಸಾಲು ಬೆಳಬೆಳದು||
ಬೋಳುಗುಡ್ದೆಯ ನೋಡಿ ಮೂಡಿದ ಸ೦ದೇಹ ಲಾಯ್ಕ ಆಯಿದು ಅಕ್ಕ.
ನಿಜವಾಗಿಯೂ ಚಿಂತಿಸೆಕ್ಕಾದ ವಿಷಯ… ಸೂಪರಾಯ್ದಕ್ಕಾ..
ಎಲ್ಲಿ ಕಾಣೆಯು ಜಾನುವಾರುಗೊ
ಹುಲ್ಲು ಮೇವದು ಮರದು ಹೋಯಿದ?
ಪಲ್ಲವಗೊ ನಾಲಗೆಯ ರುಚಿಮೊಗ್ಗಿಂಗೆ ಬೊಡುದತ್ತೊ?
ಇಲ್ಲಿ ಚೆಗುಳಿದ ಹಸುರು ಹುಲ್ಲಿನ
ಮೆಲ್ಲದೇಡುಗೊ ಹೋದವೆಲ್ಲಿಗೆ
ಮೆಲ್ಲ ಭೂಮಿಯ ಜೀವಸಂಕುಲ ಚಿತ್ರಪಟವಾವ್ತ?
ಬೋಳುಗುಡ್ಡೆಯ ಪರಿಣಾಮದ ಚಿತ್ರಣ ಸಕತ್ತಾಯಿದು-ಜೀವಸಂಕುಲ ಚಿತ್ರಪಟವಾಗದ್ದರೆ ಸಾಕು.
ಹಾ೦ಗಕ್ಕೊ ? ಅಕ್ಕಾ?ಇದು ಸ೦ಶಯವೆ
ಭಾಗ್ಯಕ್ಕ,
ಪಟ ನೋಡಿಯಪ್ಪಗ, ಇಂಥ ಹಸುರು ಹುಲ್ಲಿನ ಮೇಯುವ ಸಾಧು ಪ್ರಾಣಿಗೊ ಚಿತ್ರಲ್ಲಿ ಇಲ್ಲೆನ್ನೇ ಹೇಳಿ ಅನಿಸಿತ್ತು.
ಈ ಸ್ವಾರ್ಥಿ ಮನುಷ್ಯನ ಕಿತಾಪತಿಲಿ ಮುಂದೆ ಹೀಂಗಕ್ಕೋ ಹೇಳಿ ಎನಗೊಂದು ಕಲ್ಪನೆ ಬಂದದ್ದರ ಪದ್ಯವಾಗಿಸಿದೆ. ಇದೊಂದು ಅತಿಶಯ ಕಲ್ಪನೆ ಅಷ್ಟೆ.
ಚಿತ್ರಪಟವಾವ್ತ? ಕೇಳಿದರೆ ಆಗ. ಎ೦ತಕೆ? ಪ್ರಾಣಿಗೊಕ್ಕೆ ರಕ್ಶಿತಾರಣ್ಯ ಇದ್ದು.
ಚಿತ್ರಪಟವಾಗದೋ? ಕೇಳಿದರೆ ಅಕ್ಕು. ಎ೦ತಕೆ? ಮನುಷ್ಯನ ಆಕ್ರಮಣ ಬುದ್ದಿ೦ದ.ಹಾ೦ಗೆ ಎನಗೂ ಸ೦ಶಯವೆ ಬ೦ತು.
‘ಮೆಲ್ಲ ಭೂಮಿಯ ಜೀವ ಸಂಕುಲ … ‘ ತುಂಬ ಅರ್ಥಗರ್ಭಿತ ಪದಂಗೊ… ಲಾಯಕ ಆಯಿದು ಅದಿತಿ ಅಕ್ಕ
ಗುರಿ
——
ಇದ್ದೆಷ್ಟು ದೂರ…
ಹಾವು ಮನುಗಿದ ಹಾಂಗೆ
ಹೊರಳಿ, ನರಳಿ, ಹೊಟ್ಟೆ ಮೇಲಾಗಿ, ಬಿಳಿಯಾಗಿ
ಉದ್ದಕ್ಕೆ ಬಿದ್ದತ್ತು
ಶಬ್ದ ಇಲ್ಲದ್ದೆ…..
ಊರೂರು ಹೋದರೂ
ಇದ್ದಲ್ಲೆ ಬಿದ್ದರೂ
ಸುದ್ದಿ ಹೇಳುವ ಜೆನದ ಕಾಲು
ಸಮೆಸುವ ದೂರಕ್ಕೆ
ಮೈಲಿ ಕಲ್ಲೂ ಕಾಣದ್ದೆ
ಮೈಲಿ ಬೆಗರ ಧಾರೆ
ಎಳದಷ್ಟು ಎಳದರೂ
ಉದ್ದಕ್ಕೆ ಹರಿಯದ್ದೆ
ನಡೆದಷ್ಟು ನಡೆದರೂ ಮುಗಿಯದ್ದೆ
ಕವಲು ದಾರಿಲಿ ಮರದ ನೆರಳು
ಏರುದಾರಿಯ ಹೊರಳು
ನಡೆಯಕ್ಕು ನಿಲ್ಲದ್ದೆ
ಮೇಲಂಗೆ ಏರುವ ಬಯಕೆ
ನವ್ಯ ಕವಿತೆ ತುಂಬಾ ಅರ್ಥವತ್ತಾಗಿದ್ದು.
ಭಾರೀ ಲಾಯ್ಕ ಆಯಿದು ಶ್ಯಾಮಣ್ಣ.
ಮೈಲಿ ಕಲ್ಲೂ ಕಾಣದ್ದೆ
ಮೈಲಿ ಬೆಗರ ಧಾರೆ
– ನವ್ಯಲ್ಲಿಯೂ ಒ೦ದು ಪ್ರಾಸಜೋಡಣೆ..
ಶ್ಯಾಮಣ್ಣನ
..ಉದ್ದಕ್ಕೆ ಬಿದ್ದತ್ತು ಶಬ್ದ ಇಲ್ಲದ್ದೆ…..
…ಮೈಲಿ ಕಲ್ಲೂ ಕಾಣದ್ದೆ ಮೈಲಿ ಬೆಗರ ಧಾರೆ….. ಫಷ್ಟಾಯಿದೆನಗೆ.
ಕವಿತೆ ಫಸ್ಟ್ ಕ್ಲಾಸ್ ಆಯಿದು ಶ್ಯಾಮಣ್ನ- ಪೆನ್ಸಿಲಿಲಿ ಚಿತ್ರ ಬಿಡಿಸಿದಷ್ಟೇ ಸಲೀಸಾಗಿ ಕವನ ರಚನೆಯುದೆ ಆಯಿದನ್ನೆ.
ಭಾರೀ ಲಾಯಿಕ ಆಯಿದು . ಶಾಮಣ್ಣ.
ಎಳದಷ್ಟು ಎಳದರೂ
ಉದ್ದಕ್ಕೆ ಹರಿಯದ್ದೆ ….. ಇದೆ೦ತರ ? ಪದ್ಯ ಎಳದ್ದೊ ಹೇಳಿ ಗ್ರೇಶಿದೆ.
(ಎಳದಷ್ಟು ಎಳದರೂ
ಉದ್ದಕ್ಕೆ ಹರಿಯದ್ದೆ )
ದಾರಿಗೆ ಕಡೆ ಕೊಡಿ ಇರ್ತಿಲ್ಲೆ, ಹೋದಷ್ಟು ಮುಗಿತ್ತಿಲ್ಲೆ…. ಎಷ್ಟು ಎಳದರೂ ಮತ್ತೂ ಇರ್ತಲ್ಲದಾ?
ಈಗ ಅರ್ಥಾತು ಶ್ಯಾಮಣ್ಣ. ಈ ನೆಗೆ ಚಿತ್ರ ಮಾಡುವೊರು ಹೇ೦ಗೆಲ್ಲ ತೆಕ್ಕೊ೦ಡು ಹೋಕು ಹೇಳಿ ಅ೦ದಾಜಿ ಆವುತ್ತಿಲ್ಲೆ. ಹಾನ್ಗೆ ಕೇಳಿಗೊ೦ಡದು.
ಶ್ಯಾಮಣ್ಣ ಬಂದವು, (ಮಧುರ)ಕಾನಣ್ಣ ಎತ್ತ ಹೋದವೋ..?
ಶಾಮಣ್ಣನೊಟ್ತಿಂಗೆ
ಚಿತ್ರ ಬರವಲೆ ಹೇಳಿ
ಗುಡ್ಡೆ ಹತ್ತಿದೆ ಅಂದು ಕಾಲು ಬಚ್ಚಿತ್ತು /
ಇಲ್ಲೇ ಒಳ್ಲೆ ಯ ಜಾಗೆ
ಅಲ್ಲೇ ಆ ಮರದಡಿಲಿ
ಬಣ್ಣ ,ಕಾಗದ,ಬ್ರಶ್ಶು- ಚೀಲ ಬಿಡುಸಿತ್ತು/೧/
ಗುಡ್ದೆ ಕೊಡಿ ಹತ್ತಿದರೆ
ಬಯಲು ಚೆಂದಕೆ ಕಾಂಗು
ಬತ್ತ ಕಂಗು ತೆಂಗು ಸುತ್ತು ನೋಟ /
ಬಯಲ ಚೆಂದವ ನೋಡಿ
ಬರದೆಯೋ೦ ಚೆಂದಲ್ಲಿ
ಮೇಗೆ ನೋಡಿರೆ ಎಂತ ಮುಗಿಲಿನಾಟ ! /೨/
ಗುಡ್ಡೆ ಬುಡಲ್ಲೇ ನಿಂದು
ಬೈಲಿನೆಲ್ಲೋರುದೇ
ಹುಡ್ಕಿದವು , ಬೋಳು ಗುಡ್ಡೆಯ ಕೊಡಿಲದಾರು?/
ತೆ.ಕು.ಮಾವನೊ ಕೂಕಿ-
ಲಾಕಿ ದೆನಿಗೇಳಿದವೊ!
ಹತ್ತಲೆಡಿಗೋ! ದೊಡ್ದ ಬೆಟ್ಟದೇರು?/೩/
ಓ ಬಂದೆ ,ಮುಳಿಯಣ್ನ ,
ತೆ.ಕು. ಮಾವಾ, ಬಂದೆ
ದೆನಿಗೇದಿರಾ ಗುಡ್ದೆ ಕೊಡಿಲಿಪ್ಪಗಾ?/
ಸುತ್ತು ಬಳಸಿನ ದಾರಿ
ಇಳುದು ಬತ್ತಾ ಇದ್ದೆ
ದೆನಿಗೇಳೆಕಂಬಂಗಸಕ್ಕಪ್ಪಗಾ/೪/
(ಬೈಲಿಂಗಿಳಿಯದ್ದೆ ಕೆಲಾವು ಸಮಯ ಆತು. ಸಮಯದ ಅಭಾ…ವ , ಕ್ಷಮಿಸಿ)
ಬಾಲಣ್ಣ ಬಾರದ್ರೆ ಅಸಕ್ಕ ಅಪ್ಪದು ಅ೦ತೆ ಅಲ್ಲ. ಕವನ,ಕಲ್ಪನೆ ಎಲ್ಲವೂ ಅದ್ಭುತ.
ಈ ಬರಹದ ಶೈಲಿಯೆ ಹೇ೦ಗೆ ವರ್ಣನೆ ಮಾಡಲಿ?
ಕೃತಜ್ಞತೆಗೊ.
ಭಾರೀ ಲಾಯಿಕಾಯಿದು ಗುರುಗಳೇ..
“ಬತ್ತ ಕ೦ಗು ತೆ೦ಗು ಸುತ್ತು ನೋಟ”
“ಗುಡ್ಡೆ ಬುಡಲ್ಲೇ ನಿ೦ದು”
ಈ ಸಾಲುಗಳಲ್ಲಿ ಎಲ್ಲವೂ ಸರಿ ಇದ್ದಾ? ನಿ೦ಗೊಗೆ ಇದರ ಇನ್ನುದೆ ಚೆ೦ದ ಮಾಡ್ಲೆಡಿಯದಾ?
ಲಾಯಿಕಾತು, ಈಗ ಸರಿ ಆತುದೆ.
ಪವನಜ ಮಾವ ಜಾಗೆಯ ಗುರ್ತ ಹೇಳಿದ ಮೇಲೆ ಮನಸ್ಸು ಎಲ್ಲಿಯೋ ತೇಲಿತ್ತು !
ತೋರು ಬೆರಳಿನ ಕೊಡಿಲಿ ಕಾ೦ಬ ಸು
ಮೇರು ಪರ್ವತ ನೋಡಿದರೆ ಮನ
ಜಾರುಗೋ ದ್ವಾಪರಕೆ ನಿಮಿಷಾರ್ಧಲ್ಲಿ ಮೈಮರದೂ।
ಮಾರುದೂರದ ಮರದ ಬುಡ ನೋ
ಡಾರು? ದನಗಳ ಹುಲ್ಲು ಮೇಯಿಸಿ
ನೀರೆಯರ ಸೀರೆಯನೆ ಕದಿವಲೆ ಹೆರಟ° ಚೋರಗುರು ।।
ಮ೦ದ ‘ಪವನ’ವು ಬೀಸುವಗಳಾ
ನ೦ದವಾಗಸ ಬೇಲಿ ಹಾರಿ
ತ್ತಿ೦ದು ನ೦ದನ ಕ೦ದ°ನೂದಿದ ಕೊಳಲ ನಾದಕ್ಕೆ।
ಬ೦ದು ಶಕಟನ ಬ೦ಡಿಯಾಕೃತಿ
ನಿ೦ದ ಜಾಗೆಯೊ? ನೋಡು ಗುಡ್ಡೆಲಿ
ಚೆ೦ದಕೋರೆಯ ಮಾರ್ಗವಚ್ಚೊತ್ತಿದ್ದು ಕೊಡಿವರೆಗೆ।।
ಯಬ್ಬಾ ಸೂಪರೋ ಸೂಪರು 🙂
ಯೆನಗೆ ಹೀಗೊಲ್ಲಾ ಬರವಲೆ ಎಡಿತ್ತಿಲ್ಲನ್ನೆ!!
ಶೈಲಜಕ್ಕ,ಇ೦ದಿರತ್ತೆ,ಭಾಗ್ಯಕ್ಕ,ಅದಿತಿ ಅಕ್ಕ, ರಘು ಅಣ್ಣ… ಎನಗೆ ಕಲಿಶಿ ಕೊಡ್ತಿರಾ?? 🙂
ನಿ೦ಗಳ ಅಸಕ್ತಿ ನೋಡಿ ಕೊಶಿ ಆತು ಪುಟ್ಟಕ್ಕ.
ಆನು ಇಲ್ಲಿ ಅ೦ಗನವಾಡಿ ಹ೦ತಲ್ಲಿದ್ದೆ. ಇದು ಈಜು ಕಲಿವ ಹಾ೦ಗೆ. ಥಿಯರಿ ಕ್ಲಾಸಿಲಿ ಕೈ , ಕಾಲು ಬಡುದರೆ ಈಜುಲೆ ಬಾರ. ಅದು ನೀರಿ೦ಗೆ ಇಳುದು ನೀರು ಕುಡುದರೆ ಬಪ್ಪದಸ್ಟೆ. ಹಾನ್ಗೆ ಇದುದೆ , ತಪ್ಪು ತಪ್ಪು ಬರೆಯದ್ದೆ ಸರಿಯಾಗ. ಹಳೆ ವಿದ್ಯಾರ್ಥಿಯಾಗಿ ಸ್ವಾಗತ ಕೋರ್ತೆ. ಬನ್ನಿ.
ಧನ್ಯವಾದ೦ಗೊ..
ಪುಟ್ಟಕ್ಕಾ,ಇದಾ ಇಲ್ಲಿ೦ದ ಸುರುಮಾಡು.
https://oppanna.com/?p=9294
ಒಪ್ಪಣ್ಣ ಬಗೆಬಗೆ ಹಪ್ಪಳ ಹೊರಿವದು ಕಲುಶಿದ್ದ°.
ಧನ್ಯವಾದ೦ಗೊ..
ರಜ್ಜ ಕಲ್ತೆ ಇದಾ..
4 | 4
4 | 4
4 | 4 | 4 | 2 ||
4 | 4
4 | 4
4 | 4 | 4 | 2 ||
ವಾವ್… ಗಣಿತ ಕವನ ಲಾಯ್ಕಿದ್ದು….
ಭಾವ,
ಸೂ…ಪರ್.. ಅದ್ಭುತ ಕಲ್ಪನೆ. ಓದಿ ತುಂಬಾ ಕುಶಿಯಾತು.
೨ನೇ ಪದ್ಯದ ಪೂರ್ವಾರ್ಧ ಪಷ್ಟಾಯಿದಣ್ಣಾ…
ಅಪ್ಪಪ್ಪು. ‘ಪವನ’ ಮ೦ದ ಇದ್ದರೂ ಪದ್ಯ ‘ಪವನಜ’ ನಸ್ಟೆ ವೇಗಲ್ಲಿ ಬಯಿ೦ದು.
ಇನ್ನೂ ಸುಮಾರು ಪಟಂಗೊ ಇದ್ದು. ಬೇಕಾ?
ಎಲ್ಲವೂ ಎಂತಕ್ಕೆ ಛಂದೋಬದ್ಧ ಕವಿತೆಗಳನ್ನೇ ಬರೆವದು? ಸುಮ್ಮನೆ ನವ್ಯ ಕವಿತೆಯನ್ನೂ ಬರವಲಾಗದ? ಕೆಲವು ಸರ್ತಿ ಪ್ರಾಸಕ್ಕಾಗಿ ತ್ರಾಸಪಟ್ಟು ಅರ್ಥ ಕೆಡುವಂತ ಪದಗಳ ಮಧ್ಯಲ್ಲಿ ತುರುಕುಸೆಕ್ಕಾಗುತ್ತು. ಅದಿಕ್ಕೆ ಹೇಳಿದ್ದು ಅಷ್ಟೆ.
ಛಂದೋಬದ್ಧ ಬರವದು ಎಷ್ಟು ಕಷ್ಟಾಳಿ ಎನಿಗೆ ಗೊಂತಿದ್ದು. ಎನಿಗಂತೂ ಹಾಂಗೆ ಬರವಲೆ ಎಡಿಲೇ ಎಡಿಯ.
ನಿಂಗಳ ಇನ್ನೊಂದು ಪಟಕ್ಕೆ ಆನು ನವ್ಯಕವಿತೆ ಬರದ್ದೆ… ನಿಂಗ ನೋಡಿದ್ದಿಲ್ಲೆಯ ಹೇಳಿ….
ಎಲ್ಲಿ? ಸ್ವಲ್ಪ ಲಿಂಕ್ ಕೊಡಿ
ಮಾವ, ಲಿ೦ಕ್ ಇಲ್ಲಿದ್ದು . https://oppanna.com/?p=31949
ನಿ೦ಗೊ ಒದಗಿಸಿದ ಐದು ಪಟ ಬೈಲಿಲಿ ಸಮಸ್ಯಾಪೂರಣಲ್ಲಿ ಬಯಿ೦ದು.ಧನ್ಯವಾದ.
ಛಂದೋಬದ್ಧ ಕವಿತೆಗೆ ಟೀಕೆ ಮಾಡ್ಲೆ ಎನಗೆ ಅರಡಿಗು. ನವ್ಯ ಕವಿತೆಗೆ ಟೀಕೆ ಮಾಡ್ಲೆ ಎನಗರಡಿಯ.
“ಸೇರುಲಾ ಗುರಿಯೊಂದೆದುರಿರೆಯದೆ ಮನಕಾಹ್ಲಾದ” – ಒಳ್ಳೆ ವಾಕ್ಯ. ಇದಕ್ಕೆ ಪುಟಗಟ್ಳೆ ವ್ಯಾಖ್ಯಾನ ಮಾಡುಲಕ್ಕು.
ಲ್ಲ ಪದ್ಯಂಗೊ ಲಾಯಿಕ್ಕಿದ್ದು.
ದೂರದ ಬೆಟ್ಟವು
ತೋರುಗು ನುಣ್ಣನೆ
ಸಾರವ ಕಾಣದ ಮೇಲ್ನೋಟ
ದಾರಿಯ ಕಾಂಗದು
ಸೇರುಲೆ ಗುರಿಯಾ
ಭಾರವ ಹೊರುವಾ ಒಳನೋಟ
ಭಾರ = ಜವಾಬ್ದಾರಿ
ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಕಾಂಬದು ಜವಾಬ್ದಾರಿ ಇಲ್ಲದಿಪ್ಪಗ ಹೇಳುವ ಅರ್ಥಲ್ಲಿ .
**********************
ಹಸಿಹುಲ್ಲು ಬೆಳಗಿಲ್ಲಿ
ತುಸು ಮಳೆಯು ಚದುರುಲೇ
ಮಸುಕಾದ ಧಾರಿಣಿಯು ಮೈದುಂಬುಗು
ಹಸುರಿಕ್ಕು ಬೇಸಗೆಲಿ
ಬಸವಳಿದ ತರುಗಳೂ
ಹೊಸಹರ್ಷವಿಳಗೆ ಮಳೆಹನಿಯ ಸ್ಪರ್ಶ
ಸುರುವಾಣ ಮಳಗೆ ಈ ಗುಡ್ದೆಲಿ ಹುಲ್ಲು , ಮರಂಗೊ ಚಿಗುರಿದ ಹಾಂಗೆ ಕಂಡತ್ತು
****************************
ಚಾರಣ ಪ್ರಿಯರಾ ಮನಕಿದುವೆ
ಧಾರಣ ಚರಣ ನಡಿಗೆಗಿದು ಸೊಗ
ಸೇರುಲಾ ಗುರಿಯೊಂದೆರುರಿರೆಯದೆ ಮನಕಾಹ್ಲಾದ
ಏರುಲೀ ಬೋರೆ ತೊಡಗಿರೆ ತೊಡ
ಕೂರುಲೇ ಪಾದಕ್ಕಡಿಯೆ ಸಿ
ಕ್ಕೇರಿ ಯೊಂಡೋಪಲಿರಲೂರುಲೆರಡಸಿಯಾದಡರು
ದಾರಿ ಇಲ್ಲದ್ದಲ್ಲಿ ದಾರಿ ಮಾಡಿಗೊಂಡು ಗುಡ್ಡೆ ಹತ್ತೊದು
ಧಾರಣ = ಭೌತಿಕವಾದ ವಸ್ತುವಿನ ಮೇಲೆ ಚಿತ್ತದ ಏಕಾಗ್ರತೆ
ಬೋರೆ = ಗುಡ್ಡೆ ( ಗುಡ್ಡೆ ಬೋರ್ಯಲ್ಲಿ ದನ ಮೇಯಿತ್ತು ಹೇಳಿ ಸಣ್ಣದಿಪ್ಪಗ ಹೇಳಿಗೊ೦ಡಿತ್ತದು ನೆ೦ಪಾತು )
” ಗುರಿಯೊಂದೆದುರಿರೆಯದೆ” ಹೇಳಿ ಅಯೆಕಾತು. ಇಲ್ಲಿ ಬರವಗ ತಪ್ಪಿತ್ತು.
ಭಾಗ್ಯಕ್ಕ,
ಒಂದೇ ಚಿತ್ರವ ನಾನಾ ನಮುನೆಲಿ ನೋಡಿ ಪದ್ಯ ಕಟ್ಟಿದ್ದು ತುಂಬಾ ಲಾಯ್ಕಾಯ್ದು.
“ಮಸುಕಾದ ಧಾರಿಣಿಯು ಮೈದುಂಬುಗು” – ಒಳ್ಳೆಯ ಕಲ್ಪನೆ.
ಅಕ್ಕ, ಅಕೇರಿಯಣ ಪದ್ಯಲ್ಲಿ ಆನು ಹೀಂಗೆ (ಏರಿಯೊಂಡು + ಹೋಪಲೆ + ಇರಲಿ + ಊರುಲೆ + ಎರಡು + ಹಸಿಯು + ಆದ + ಅಡರು ) ಬಿಡಿಸಿದ್ದೆ. ಸರಿಯ?
ಇಲ್ಲಿ ರಜ್ಜ ವ್ಯಾಕರಣ ತಪ್ಪಪ್ಪ ಕಾರಣ ಬದಲಿಸಿರೆ ಒಳ್ಳೇದಿತ್ತು.
ಏರಿಯೊಂಡು + ಹೋಪಗ = ಏರಿಯೊಂಡೋಪಗ, ಎರಡು + ಹಸಿ = ಎರಡಸಿ, ಹೇಳಿ ಮಾಡಿರೆ ವ್ಯಾಕರಣದ ಸಂಧಿ ನಿಯಮ ಪಾಲನೆ ಆವ್ತಿಲ್ಲೆ.
ಹಾಂಗಾದ ಕಾರಣ
“ಕ್ಕೇರಿ ಹೋಪಗ ಬೇಕು ಕೈಲೆರಡು ಹಸಿಯಾದಡರು”
ಅಥವ
“ಕ್ಕೇರಿ ಹೋಪಗ ಬೇಕದೂರುಲೆರಡು ಹಸಿಯಡರುಗೊ” – ಹೀಂಗೆ ಬದಲಸುಲಕ್ಕು.
ಸರಿ ಮಾಡಿ ತೋರ್ಸಿದ್ದಕ್ಕೆ ಧನ್ಯವಾದ೦ಗೊ ಅದಿತಿಯಕ್ಕ. ಎನಗೂ ಅದು ಸರಿ ಆಯಿದಿಲ್ಲೆ ಹೇಳಿ ಗೊ೦ತಾಗಿತ್ತು. ಆದರೆ ಸರಿ ಮಾಡ್ಲೆ ಎಡಿಗಾಯಿದಿಲ್ಲೆ.
ಆನು ಬರದ್ದರ ನೋಡಿ ಇನ್ನು ಸರಿ ಗೊನ್ತಿಪ್ಪೊರು ಆ ಷಡ್ಪತಿಯ ಮರೆಯದ್ದರೆ ಸಾಕು ಹೇಳಿ ಗ್ರೇಶಿಗೊ೦ಡಿತ್ತಿದ್ದೆ. ಃ-) ಸದ್ಯಕ್ಕೆ ಬಚಾವಾದೆ.
ಮಳೆಯು ಸೊರುಗಿತು ಭೂಮಿ ತಣುದತು
ಹಲಸು ಮಾವಿನ ಫಸಲು ಬೆಳದತು
ಹುಲುಸು ಹಸುರಿನ ನೆಡುಕೆ ದಾರಿಯು ನಡದು ಹೋಪಲದಾ ।
ಹಲವು ನಮುನೆಯ ಮರಗಳಲ್ಲಿಯೆ
ಫಲವ ಬಯಸುವ ಪಕ್ಷಿಸಂಕುಲ
ನೆಲೆಯ ಮಾಡಿಯೆ ಗೂಡು ಕಟ್ಟುಗುಯೆಲೆಯ ಸಂದಿಲಿಯೆ ॥
ಅತ್ತೆ,
ಸಕಾರಾತ್ಮಕ ದೃಷ್ಟಿಯಿಂದ (ಸಕಾರಾತ್ಮಕ ದೃಷ್ಟಿ ಹೇಳಿದ್ದು ಯಾಕೆ ಹೇಳಿದ್ರೆ ಎನಗೆ ಏನು ಮಾಡಿದ್ರು ಚಿತ್ರಲ್ಲಿ ಗುಡ್ಡೆ ಬೋಳು ಕಾಣ್ತಾ ಇದ್ದು 🙂 ) ಚಿತ್ರವ ನೋಡಿ, ಇಳೆಯ ವೈಭವ ವರ್ಣಿಸಿದ್ದು ತುಂಬಾ ಲಾಯ್ಕಾಯ್ದು.
“ಕಟ್ಟುಗುಯೆಲೆಯ” ಹೇಳುವಲ್ಲಿ ವ್ಯಾಕರಣ ತಪ್ಪುವ ಕಾರಣ, “ಕಟ್ಟುಗೆಲೆಗಳ” ಹೇಳಿ ಮಾಡಿರೆ ಒಳ್ಳೇದಿತ್ತು ಕಾಣ್ತು. ಎಂತ ಹೇಳ್ತಿ ?
ತಿದ್ದುಪಡಿ ಸರಿ ಇದ್ದು.
ಅದಿತಿ, ನಿಂಗಳ ವಿಮರ್ಶೆಯನ್ನೂ ತಿದ್ದುಪಡಿಯನ್ನೂ ಸ್ವೀಕಾರಮಾಡ್ತೆ. ಬೋಳುಗುಡ್ಡೆಲಿ ಅಲ್ಲಲ್ಲಿ ಮರಂಗೊ ಇಪ್ಪದಪ್ಪನ್ನೆ- ಹಾಂಗೆ ತಿಳಿಯಾದ ಪಚ್ಚೆಯ ಲೇಪನವೂ ಇದ್ದ ಹಾಂಗಿದ್ದನ್ನೆ. ಆ ಎಳೆಹಸುರು ಹದವಾದ ಮಳೆಗೆ ಚಿಗುರಿದ್ದು ಹೇಳಿ ಕಲ್ಪನೆ ಮಾಡಿ ಬರದ್ದದು. ಹಲಸು ಮಾವು ಹೇಳುದರ ಉದ್ದೇಶಪೂರ್ವಕ ಹೇಳಿದ್ದಲ್ಲ- ಹಣ್ಣು ಕೊಡುವ ಮರ ಹೇಳಿ ಮಾಂತ್ರ ಅದರ ಹೇಳಿದ್ದು. ಹಲಸುದೆ ಮಾವುದೆ ಮೊದಲೆಲ್ಲಾ ಕಾಡುತ್ಪತ್ತಿಯ ವರ್ಗಕೆ ಸೇರಿದ್ದು ಹೇಳಿ ಎನ್ನ ಅನಿಸಿಕೆ- ಅಂಥಾ ಗುಡ್ಡೆಗಳಲ್ಲಿ ಆ ಮರಂಗೊ ಬೆಳವಲಾಗ ಹೇಳಿ ಇಲ್ಲೆನ್ನೆ- ಆ ಪ್ರದೇಶಲ್ಲಿ ಹಲಸು ಮಾವಿಂಗೆ ನಿಷೇಧ ಇಪ್ಪದು ಗೊಂತಿತ್ತಿಲ್ಲೆ- ಹಾಂಗಿಪ್ಪ ಗುಡ್ಡೆ ಬೇರೆ ಕಡೆಯೂ ಕಾಂಬಲೆ ಸಿಕ್ಕುಗಲ್ಲದ- ಅಲ್ಲಿ ಹಣ್ಣು ಬಿಡುವ ಮರ ಬೆಳೆವಲೂ ಸಾಕು, ಹಕ್ಕಿಗೊ ಗೂಡು ಕಟ್ಟುಲೂ ಸಾಕು- ಇದು ನಿಂಗಳ ವಿಮರ್ಶೆಯ ಖಂಡನೆ ಅಲ್ಲ- ವ್ಯಾಕರಣಕ್ಕಾಗಿ ತಿದ್ದಿದ್ದು ಸರಿಯಾಯಿದು.
ಅತ್ತೆ,
ಆನು ನಿಜಕ್ಕೂ ನಿಂಗಳ ಸಕಾರಾತ್ಮಕ ದೃಷ್ಟಿಯ ಪ್ರಶಂಸೆ ಮಾಡಿದ್ದು. ಮಾತಾಡುವಾಗ ನೆಗೆ ಮಾಡಿಕೊಂಡು ಮಾತಾಡುವ ಅಭ್ಯಾಸ ಇಪ್ಪ ಕಾರಣ smiley ಹಾಕಿದೆ ಅಷ್ಟೆ.
ಖಂಡಿತ ತಮಾಷೆ ಮಾಡಿದ್ದು ಅಲ್ಲ.
ಆ ಚಿತ್ರ ನೋಡಿದಪ್ಪಗ ಎನ್ನ ತಲೆಲಿ ಸುರುವಿಂಗೆ ಬಂದದೇ ನಾಕೇ ನಾಕು ಮರ ಇದ್ದನ್ನೇ ಹೇಳಿ ಅರಣ್ಯ ನಾಶದ ಬಗ್ಗೆ ಕಲ್ಪನೆ ಬಂತು. ಇದಕ್ಕೆ ಆನು ಹೇಳಿದ್ದು ಗುಡ್ಡೆ ಬೋಳು ಕಂಡತ್ತು ಹೇಳಿ.
ಆದರೆ ನಿಂಗಳ ಪದ್ಯ ಓದಿದ ಮೇಲೆ ಅನುಸಿತ್ತು, ಆನು ನಕಾರಾತ್ಮಕವಾಗಿ ಚಿಂತಿಸಿದೆ, ನಿಂಗ ಸಕಾರಾತ್ಮಕವಾಗಿ ಯೋಚಿಸಿದ್ದಿ ಹೇಳಿ. ಅದಕ್ಕೆ ನಿಂಗಳ ಯೋಚನೆಯ ಪರಿಗೆ ಕುಶಿಯಾಗಿ ಹಾಂಗೆ ಬರದ್ದು.
ಎನಗೇ ಗೊಂತಿಲ್ಲದೆ ನಿಂಗೊಗೆ ಬೇನೆ ಆಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಅತ್ತೆ.
ಆರೋಗ್ಯಪೂರ್ಣ ವಿಮರ್ಶೆ ಬಂದರೆ ಮಾಂತ್ರ ನಾವು ನಡದ್ದೆಲ್ಲಿ ಎಡವಿದ್ದೆಲ್ಲಿ ಹೇಳ್ತದು ಗೊಂತಪ್ಪದು. ನಿಂಗಳ ಮಾತುಗಳ ಆನುದೆ ಸಕಾರಾತ್ಮಕವಾಗಿಯೇ ತೆಕ್ಕೊಂಡಿದೆ- ಮತ್ತೆ ಬೇಜಾರಪ್ಪಲೆ ಬೇನೆಯಪ್ಪಲೆ ಎಡೆಯೇ ಇಲ್ಲೆನ್ನೆ ಅದಿತಿ. ಇಷ್ಟುದೆ ಹೇಳುಲೆ ಆಗ ಹೇಳಿಯಾದರೆ ‘ ಕವನ ಲಾಯ್ಕ ಆಯಿದು’ ಹೇಳಿ ಮಾಂತ್ರ ಹೇಳೆಕ್ಕು ಹೇಳುವ ನಿರೀಕ್ಷೆ ದ್ದ ಹಾಂಗೆ ಕಾಣ್ತು- ಹಾಂಗಾದರೆ ಮತ್ತೆ ಬೆಳವಣಿಗೆ ಹೇಂಗಕ್ಕು? ನಮ್ಮ ಬೆನ್ನು ತಟ್ಟುದರಿಂದಲೂ ತಪ್ಪು ಮಾಡಿದ್ದರ ತೋರಿಸಿಕೊಡುವವು ಇದ್ದರೆ ನಾವೂ ಮುಂದೆ ಬಪ್ಪಲೆ ಸಾಧ್ಯ ಅಲ್ಲದಾ- ಆರೋಗ್ಯಪೂರ್ಣ ವಿಮರ್ಶೆಗೆ ಇನ್ನೊಂದರಿ ಥ್ಯಾಂಕ್ಸ್.
ಅತ್ತೆ, ಭಾಮಿನಿಲಿ ಪದ್ಯ ಬರವಗ ಮೂರು + ನಾಲ್ಕು ಮಾತ್ರೆಗೊಕ್ಕೆ ಬೇಕಾಗಿ ಶಬ್ದಂಗಳ ಹುಡ್ಕೆಡಿ. ಹಾಂಗೆ ಮಡದ್ದೆ ಪದ್ಯವ ಬರದರೆ ಪದ್ಯ ಒಂದು ಚೆಂದದ ಕವನ ಆಗಿ ಬಕ್ಕು, ಎಂತ ಹೇಳ್ತಿ..?
ಸರಳವಾದ ಪದಂಗಳ ಬಳಕೆ ಬರವಲೂ ಓದುಲೂ ಎನಗೆ ಆರಾಮ ಆವುತ್ತು- ಸಂಕೀರ್ಣ ಶಬ್ದಂಗೊ ಬಂದರೆ ರಜಾ ಪರಡೆಕ್ಕಾವುತ್ತು ಹೇಳಿ ಎನ್ನ ಭಾವನೆ. ಹಾಂಗಾಗಿ ಹಾಂಗಿಪ್ಪ ಪದಂಗಳ ಹುಡುಕಿ ಬರೆತ್ತೆಷ್ಟೆ. ಸಂಕೀರ್ಣ ಶಬ್ದಂಗಳೇ ಬಂದರೆ ಲಾಯ್ಕ ಹೇಳಿ ಆದರೆ ಇನ್ನು ಆ ನಿಟ್ಟಿಲಿ ಪ್ರಯತ್ನಮಾಡ್ತೆ.
ಈ ಪಟ ಮೈಸೂರಿಂದ ಬಂಡೀಪುರಕ್ಕೆ ಹೋಪ ದಾರಿಯ ಹತ್ರ ಇಪ್ಪ ವೇಣುಗೋಪಾಲಸ್ವಾಮಿ ಬೆಟ್ಟಂದ ತೆಗದ್ದು. ಅಲ್ಲಿ ಹಲಸು ಮಾವು ಇತ್ತಿಲ್ಲೆ 🙂
ಆಲ್ಲಿಪ್ಪ ಆಲಯದ ಕಲ್ಲಿನ ಮಾಡಿನ ಎಡೆ೦ದ, ಪ್ರತಿದಿನವೂ ನೀರು ಜಿನುಗುವುದೂ ಅಪ್ಪಲ್ಲದೋ?
ಮೈಸೂರಿಂದ ಬಂಡೀಪುರಕ್ಕೆ ಹೋಪ ದಾರಿಲಿ ವೇಣುಗೋಪಾಲಸ್ವಾಮಿ ಬೆಟ್ಟದ ಹತ್ತರೆ ಇಪ್ಪ ಗುಡ್ಡೆಯ ಚಿತ್ರ ಹೇಳಿ ಬರಕ್ಕೊಂಡು ಇಲ್ಲದ್ದ ಕಾರಣ ಎನಗೆ ಗೊಂತಾಯಿದಿಲ್ಲೆ. ಎನಗೆ ಆ ಜಾಗೆಗೆ ಹೋಗಿ ನೋಡಿ ಗೊಂತಿಲ್ಲದ್ದ ಕಾರಣ ಅಲ್ಲಿ ಆ ಜಾಗೆಲಿ ಹಲಸುದೆ ಮಾವುದೆ ಇಲ್ಲೆ ಹೇಳಿದೆ ಗೊಂತಿಲ್ಲೆ. ಆದರೆ ಅದೇ ನಮುನೆಯ ಜಾಗೆ ಬೇರೆಲ್ಲಿಯಾದರೂ ಇದ್ದರೆ ಅಲ್ಲಿಯೂ ಹಲಸಿನಮರವೂ ಮಾವಿನಮರವೂ ಇರದೋ? ಹಣ್ಣು ಬಿಡುವ ಮರ ಹೇಳಿ ಮಾಂತ್ರ ಅದೆರಡರ ಆನು ಹೇಳಿದ್ದದಷ್ಟೆ.
ಅತ್ತೆ … ಕವಿ ಕಲ್ಪನೆ ಹೇಳುದು ಇದಕ್ಕೇ…
ನಿಂಗಳ ತರ್ಕ ಸಮಂಜಸ…
ಕುತ್ತ ಗುಡ್ಡೆಯ ತುತ್ತ ತುದಿಗದ
ಹತ್ತಿ ಹೋಪಲೆ ಸುತ್ತ ದಾರಿಗೊ
ನೆತ್ತಿ ಮೇಗಣ ಹೊತ್ತು ಕಳುದರೆ ಮತ್ತೆಗದು ಬಕ್ಕೋ ?
ಬತ್ತ ಬೆಗರಿನ ಕಿತ್ತ ಮೆಟ್ಟಿನ
ಸುತ್ತ ನಿರ್ಜನ ಮುತ್ತಿ ಕಾಡದೆ
ಹತ್ತು ಬೇಗದಿ ಸುಪ್ತ ಹುರುಪಿಲಿ ಸೂಕ್ತ ಸಾಧನೆಗೇ ॥
ಶೈಲಜಕ್ಕಾ, ಕವನ ಸೊಗಸಾಗಿ ಬಯಿಂದು. ಜನಸಂಚಾರವೂ ನೆರಳೂ ಇಲ್ಲದ್ದ ಮಾರ್ಗ ಸರಿಯಾಗಿ ವ್ಯಕ್ತವಾಯಿದು- ಅಭಿನಂದನೆಗೊ.
ಶೈಲಜಕ್ಕ,
ಅನುಪ್ರಾಸ ಬಪ್ಪ ಹಾಂಗೆ ಬರದ್ದು, ಕವನದ ವಸ್ತು ಎರಡೂ ಲಾಯ್ಕಿದ್ದು. ಯಾವುದಕ್ಕೂ ಹೆದರದ್ದೆ ಜೀವನಲ್ಲಿ ಮುಂದೆ ಹೋಯೆಕ್ಕು ಹೇಳುವ ಅಂಶ ಲಾಯ್ಕ ಬೈಂದು.
ಪವನಜನ ಫಟ ಎಷ್ಟು ಚೆಂದವೋ, ಅಷ್ಟೇ ಚೆಂದ ಈ ಕವನ. ಲಾಯಿಕಾಯಿದು ಶೈಲಜಕ್ಕ.
“ಬಕ್ಕೋ” ಮತ್ತೆ “ಸಾಧನೆಗೇ” ಹೇಳ್ತಲ್ಲಿ ದೀರ್ಘ ಎಳವಲೆ ಯೇನಾರು ಕಾರಣ ಇದ್ದೋ, ಅಕ್ಕ. ?
ಸುಮಾರು ದಿನಂದ ಒಪ್ಪಣ್ಣ ನೋಡಿತ್ತಿದ್ದಿಲ್ಲೆ. ಎನ್ನ ಪಟವ ಇಲ್ಲಿ ಸ್ಫರ್ಧೆಗೆ ಹಾಕಿದ್ದೂಳಿ ಇಂದು ರಾಮ ಅಜ್ಜಕಾನ ಹೇಳಿ ಗೊತ್ತಾತು. ಎನ್ನತ್ರ ಹೀಂಗಿಪ್ಪ ಪಟಂಗ ಸುಮಾರು ಸಾವಿರ ಇದ್ದು 🙂
ಧನ್ಯವಾದಂಗೋ ಅತ್ತೆ, ಅಕ್ಕ ಮತ್ತೆ ಮಾವಂಗೆ……
ಫಟ ಮತ್ತೆ ಪದ್ಯದ ವಿಷಯ ಒಂದೆ ಆದರೂ ಭಾವಲ್ಲಿ ವ್ಯತ್ಯಾಸ ಇದ್ದಲ್ಲದಾ…
ಒಬ್ಬ ಕವಿಯ ಚಿತ್ರಕಾರ ಹೇಂಗೆ ಹೇಳುಗು ಹೇದು ಎನ್ನ ಕಲ್ಪನೆಯ ಚುಟುಕ
ಲೇಖನಿಯ
ಕುಂಚದಲಿ
ಚಿತ್ತವನು
ಚಿತ್ತಿರಿಸೊ
ಭಾವದ ವಕ್ತಾರ
ವ್ಹಾ ! ವ್ಹಾ!!