- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಸತ್ಯಣ್ಣ ಬೈಲಿಂಗೆ ಬಾರದ್ದರೆ ಕೆಲವರಿಂಗಲ್ಲದ್ರೂ ಹಲವರಿಂಗೆ ಅಸಕ್ಕ ಆವುತ್ತಪ್ಪೋ! ಎಂತ ಮಾಡುದು? ಕೆಲವು ಸರ್ತಿ ಸತ್ಯಣ್ಣ ಹೋಪಲ್ಲಿ ಸರಿಗಟ್ಟು ಸಿಗ್ನಾಲುಗ ಸಿಕ್ಕದ್ದೆ, ಮಾತಾಡಿ ವಿವರ ತೆಕ್ಕೊಂಬದು ಕಷ್ಟ ಆವುತ್ತಿದಾ… ಅದರೆಡಕ್ಕಿಲಿ ರಾಜ್ಯಂಗಳನ್ನೇ ಬದಲ್ಸಿ ಹೋವುತ್ತ ಏರ್ಪಾಡಿಲಿ ಕತೆ ಸಿಕ್ಕುತ್ತದರ ಬರವಲೆ ಮೂರ್ತ ಆಯೆಕ್ಕನ್ನೆ. ಹಾಂಗೆ ರಜಾ ಎಡವಟ್ಟಾಗಿ ಹೋಪದಿದಾ…. ಅದರೆಡಕ್ಕಿಲ್ಲಿ ಅಡಿಗೆ ಸತ್ಯಣ್ಣಂಗೆ ನೆಂಟ್ರ ಮನೆ ಅನುಪ್ಪತ್ಯಂಗಳುದೇ. ನೆಂಟ್ರ ಮನೆ ಅನುಪ್ಪತ್ಯ ಹೇತುಕಂಡ್ರೆ ಮತ್ತೆ ಅಡಿಗೆ ಸತ್ಯಣ್ಣಂದು ಸುಧರಿಕೆಯೇ ಸುಧರಿಕೆ. ಅಲ್ಯಾಣದ್ದರ ಮುಗುಶಿ ಮತ್ತಾಣದ್ದಕ್ಕೆ ಹೋಗಿ ಮುಟ್ಟಿ ಆಯೇಕ್ಕದಾ. ಹೀಂಗೆಲ್ಲ ಅಪ್ಪಗ ಬೈಲ ದಡಮ್ಮೆ ದಾಂಟದ್ದೆ ಕರೇಲಾಗಿ ಹೋಯೇಕ್ಕಾವ್ತು ಅಡಿಗೆ ಸತ್ಯಣ್ಣಂಗೂ ಒಂದೊಂದರಿ.
ನಿಂಗಳ ಸಹಕಾರಕ್ಕೆ, ಪ್ರೋತ್ಸಾಹಕ್ಕೆ ಮನದುಂಬಿದ ಧನ್ಯವಾದಂಗೊ. ಸದ್ಯಕ್ಕೆ ಸಿಕ್ಕಿದ ವೊರ್ತಮಾನವ ನಾವಿಲ್ಲಿ ಓದುವೋ ಈಗ.
~
1
ಆರ್ಲಪದವಿನ ಹತ್ರೆ ಒಂದು ಬೊಜ್ಜ. ಸತ್ಯಣ್ಣನ ಸೆಟ್ಟು ಕಾಲವೇಳೆಲಿ ಅಲ್ಲಿಗೆ ಮುಟ್ಟಿ ಎಲ್ಲಾ ದಿನಕ್ಕಿಪ್ಪ ವೆವಸ್ಥೆಗಳ ಮಾಡಿಗೊಂಡಿತ್ತು.
ದೂರದ ಚೆನ್ನೈ ಹೊಡೆಂದ ಅಲ್ಲಿಯಾಣ ನೆಂಟ್ರು ಬಂದಿತ್ತಿದ್ದವು.
ರೈಲಿಲಿ ಬಪ್ಪಗ ಓದಲೆ ಹೇಳಿ ತಂದ ತೆಮಿಳು ಪೇಪರು ಗಾಳಿಗೆ ಸತ್ಯಣ್ಣನ ಕಾಲಬುಡಕ್ಕೆ ಬಂದು ಬಿದ್ದತ್ತು.
ಅದರಲ್ಲಿ ಆನೆಗಳ ಪಟವೂ, ಶುದ್ದಿಯೂ ಇಪ್ಪದು ಕಂಡತ್ತು!
ಪಟ ಕಂಡರೆ ಅರ್ತ ಮಾಡಿಗೊಂಬಲೆಡಿಗು. ಬರವದೆಲ್ಲ ಒಂದೇ ಶಾಯಿಲಿ ಆದರೂ ತೆಮಿಳಿಲಿ ಬರದ್ದದರ ಓದುಲೆಡಿಗೋ? ಪೇಪರು ತಂದ ಜೆನದ ಹತ್ರೆಯೇ ಸತ್ಯಣ್ಣ ಕೇಟ. ಕತೆ ಎಂತರ ಹೇದು.
ಅದು ತೆಮಿಳುನಾಡಿನ ಒಂದು ವಾರ್ಷಿಕ ಆಚರಣೆ ಅಡೊ. ಒರಿಶಕ್ಕೊಂದರಿ ದೇವಸ್ಥಾನಂಗಳಲ್ಲಿ, ಪಳ್ಳಿಗಳಲ್ಲಿ(ಆ ಊರಿಲಿ ಪಳ್ಳಿಲಿಯೂ ಆನೆಗೋ ಇರ್ತು, ಹೆಸರೂ ಬ್ಯಾರ್ತಿಗಳದ್ದೇ ಇರ್ತು!!!) ಇಪ್ಪ ಆನೆಗಳ ಒಂದು ದೊಡ್ಡ ಜಾಗೆಲಿ ಸೇರ್ಸಿ ಅವಕ್ಕೆ ಆರೋಗ್ಯಕ್ಕೆ ಬೇಕಾದ ಎಲ್ಲ ಏರ್ಪಾಡುಗಳ ಮಾಡ್ತದಡ! ಕಾಡಿಲಿಪ್ಪ ಆನೆಗಳ ನಾಡಿಂಗೆ ತಂದ ತಪ್ಪಿಂಗೆ ಕಾಡಿನ ಹಾಂಗಿರ್ಸ ಜಾಗೆಯ ಒಂದರಿ ತೋರ್ಸುದು ಹೇದು ಹೇಳುಲಕ್ಕೋದು! ಇನ್ನೂ ಸುಲಾಬಲ್ಲಿ ಹೇಳ್ತಾರೆ, ನಮ್ಮ ಶರ್ಮಪ್ಪಚ್ಚಿ ಒರಿಶಕ್ಕೊಂದರಿ ಪರ್ಕಳಕ್ಕೆ ಹೋಗಿ ಶರೀರ, ಮನಸ್ಸು ಶುದ್ಧಿ ಮಾಡಿ ಬಪ್ಪ ಹಾಂಗೆ!!
ರಂಗಣ್ಣ ಕೇಟ: ಅಂಬಗ ನಮ್ಮ ಊರಿಲಿ ಎಲ್ಲ ಹೀಂಗಿರ್ಸು ಏಕೆ ಮಾಡ್ತವಿಲ್ಲೆ ಹೇಳಿ.
ಸತ್ಯಣ್ಣ ಹೇದ° : ಅದು ಪುರಚ್ಚಿ ತಲೈವಿಗೆ ಆನೆಗೆ ಹೇದರೆ ಭಾರೀ ಇಷ್ಟ ಹಾಂಗೆ ಆದಿಕ್ಕು ಹೇಳಿ.
ರಂಗಣ್ಣ ಕೇಟ° : ಎಂತ ಕಾಂಬಲೆ ಒಂದೇ ಹಾಂಗೆ ಹೇಳಿಯಾ? 😉
ಸತ್ಯಣ್ಣ ಹೇದ° – ನಿನ್ನ ಸಂಶಯಂಗಳ ಎಲ್ಲ ಒಂದಿಕ್ಕೆ ಬರದು ಮಡಿಕ್ಕೊ. ಮತ್ತೆ ಸಾವಕಾಶಲ್ಲಿ ಕೂದೊಂಡು ಮಾತಾಡುವೋ° ಅದರ 😀
~
2
ಕಾನಾವಕ್ಕನಲ್ಲಿ ಹೋಮ, ಪೂಜೆಗೊ ಇಪ್ಪಗ ಸತ್ಯಣ್ಣ ಬತ್ತಿಲ್ಲೆ ಹೇಳುದಿದ್ದೊ?
ಒಂದು ದಿನ ಮದಲೇ ಸತ್ಯಣ್ಣನೂ, ರಂಗಣ್ಣನೂ ಅಲ್ಲಿಗೆತ್ತಿದವು.
ಜಾಲಿಂಗೆತ್ತುವಾಗ ಅಲ್ಲಿಯಾಣ ಆಣು ಒಂದಿಕ್ಕಂಗೆ ಹೆರಟೋಂಡಿತ್ತು, ರಂಗ ಕೇಟ.. ದೂರ? ಹೇದು.
ಮಾಷ್ಟ್ರುಮಾವನಲ್ಲಿಗೆ ಪಾಲಾಶ ಹೂಗು ತಪ್ಪಲೆ ಹೇದಾತು. ರಂಗಣ್ಣ ಸತ್ಯಣ್ಣನ ಬೈಕ್ಕಿಂದ ಇಳುದು ಆಚ ಬೈಕ್ಕು ಹತ್ತಿದ! ಕೂದಪ್ಪದ್ದೇ ಹೆರಟದು ಮಿನಿಟಿಲಿ ಮಾಷ್ಟ್ರುಮಾವನಲ್ಲಿತ್ತು!! 😉
ಮಾಷ್ಟ್ರುಮಾವ° ಖುದ್ದಾಗಿ ಏನು ಹೇದು ವಿಚಾರ್ಸಿ, ಪಾಲಾಶ ಮರದ ಜಾಗೆ ತೋರ್ಸಿದವು.
ಆಣು ಮರಕ್ಕೆ ಹತ್ತಿ ಹೂಗು ಉದುರುಸಿತ್ತು. ರಂಗಣ್ಣ ಹೆರ್ಕಿದ! ಸಾವಿರಂದ ಮೇಗೆ ಆಯೆಕ್ಕಡ! ಅಂದಾಜು ಲೆಕ್ಕ ಮಾಡಿಕ್ಕಿ ಅಣ್ಣ ಹೇಳಿತ್ತು ಮರಂದಲೇ ಆಣು ಹೂಗು ಕೆಳ ಹಾಕಿಯೊಂಡು!
ರಂಗ ಲೆಕ್ಕ ಮಾಡಿಗೊಂಡು ಹೆರ್ಕುತ್ತಾ ಇಪ್ಪಗ ಮಾಷ್ಟ್ರುಮಾವನಲ್ಲಿ ಕೆಲಸಕ್ಕಿಪ್ಪ ಕುಸುಮ ಬಂತು. ಅದೂ ಸೇರಿಗೊಂಡತ್ತು ಹೂಗು ಹೆರ್ಕುಲೆ!
ರಂಗಂಗೆ ಮತ್ತೆ ಹೂಗಿನ ಲೆಕ್ಕ ಸಿಕ್ಕ್ಕಿತ್ತೋ ಇಲ್ಲೆಯೋ ಹೇದು ಗೊಂತಿಲ್ಲ್ಲೆ. ಬಿದ್ದಷ್ಟರ ಹೆರ್ಕಿ ತಂದು ಚೆಂದಕ್ಕೆ ಮಡಗಿ ಆತು. ಬಟ್ಟಮಾವ ಬಂದಪ್ಪಗ ಸುರೂವಿಂಗೆ ಕಂಡದೇ ಪಾಲಾಶ ಹೂಗು! ಅಂಗಿ ತೆಗೆಯೆಕ್ಕಾದರೇ ಕೇಟವು. ಓ! ಭಾರೀ ಲಾಯ್ಕದ ಪಾಲಾಶ ಹೂಗು, ಎಲ್ಲಿಂದ ಸಿಕ್ಕಿತ್ತು ಹೇದು.
ಕಾನಾವಕ್ಕ ಬಾಯಿ ತೆಗೆಯೆಕ್ಕಾದರೇ ರಂಗಣ್ಣ ಎಲ್ಲಿ ಇತ್ತಿದ್ದ°.., ಎಲ್ಲೆ ಕೂಡಿ ಬಂದ ಹೇದು ಗೊಂತಿಲ್ಲೆ!, ಒಂದರಿಯೆ ಬಂದು ಹೇದ°- ಬಟ್ಟಮಾವ, ಅದು ಮಾಷ್ಟ್ರುಮಾವನಲ್ಲಿಂದ! ಆನು ಹೋಗಿ ಹೆರ್ಕಿ ತಂದದು! ಹೇದು.
ಲಾಯ್ಕಾತು ರಂಗೋ ಚೆಂದದ ಹೂಗು ತಯಿಂದೆನ್ನೇ!ಹೇದವು ಬಟ್ಟಮಾವ°.
ರಂಗಂಗೆ ಒಳಂದ ಕೊಶೀ ಆತು! ಹೂಗು ಚೆಂದದ್ದು ಸಿಕ್ಕಿದ್ದಕ್ಕೋ, ಅಷ್ಟು ಹೊತ್ತು ಹೂಗು ಹೆರ್ಕುಲೆ ಕುಸುಮ ಸಿಕ್ಕಿದ್ದಕ್ಕೋ ಹೇದು ಆರಿಂಗೂ ಅಂದಾಜು ಆಯಿದಿಲ್ಲೆ!! 😉
~
3
ಡಿಸೆಂಬರ್ ಬಪ್ಪಗ ಎಲ್ಲಾ ಶಾಲೆಲಿಯೂ ಪ್ರವಾಸ ಮಡುಗುತ್ತವಪ್ಪೋ!.
ನಮ್ಮ ತರವಾಡು ಮನೆಯ ಮಾಣಿ ವಿನುವಿಂಗೂ ಪಿಲಿಕುಳಕ್ಕೆ ಹೋಪಲಿತ್ತು.
ಕೊಡೆಯಾಲಕ್ಕೆ ಅಡಿಗ್ಗೆ ಹೋದ ಸತ್ಯಣ್ಣನ ಸೆಟ್ಟೂ ಅಲ್ಲಿಗೆತ್ತಿದ್ದು ಅಚಾನಕ್ಕಾಗಿ!
ಸತ್ಯಣ್ಣಂಗೆ ಬೈಲಿನ ಇಡೀಕ ಗೊಂತಿಪ್ಪಗ ವಿನುವಿನ ಅರಡಿಯದಾ ಎಂತ?!
ಮಾಣಿಗೆ ಕಂಪ್ಲೀಟರ್ ನ ಮೋರೆ ನೋಡಿ ಮಾಂತ್ರ ಗೊಂತು, ಮನುಷ್ಯರ ಮೋರೆ ಅರಡಿಯ ಇದಾ… ಎಂತಬ್ಬೋ ಹೇಳಿ ಮಾತಾಡ್ಸಿಕ್ಕಿ ಸತ್ಯಣ್ಣ ಮಕ್ಕಳ ಸಾಲಿಲಿಯೇ ಸೇರಿಗೊಂಡ°.
ಹಿಡುದು ಮಡಗಿದ ವಾತಾವರಣಲ್ಲಿಯೇ ಆದರೂ ಪ್ರಾಣಿಗ ಹೊಂದಿಗೊಂಡು ಅವರಷ್ಟಕ್ಕೇ ಬದುಕ್ಕುತ್ತಾ ಇದ್ದವು. ಆದರೆ ನೋಡ್ಲೆ ಬಂದೋರ ಆರ್ಭಟ ನೋಡಿರೆ ಇವರ ಈಗ ಹಿಡುದು ಬೋನಿನೊಳ ಹಾಕುತ್ತವೋ ಹೇದು ಜಾನ್ಸೆಕ್ಕು. ಹಾಂಗಿರ್ಸ ವೆವಹಾರ!
ಕೊಟ್ಟದರ ತಿಂದು ಅವಕ್ಕವಕ್ಕೇ ಸೀಮಿತ ಆದ ಜಾಗೆಲಿ ತಿರುಗಿಯೋಂಡಿಪ್ಪ ಪ್ರಾಣಿಗೊಕ್ಕೆ ಸುರು ಸುರುವಿಂಗೆ ಹೀಂಗಿರ್ಸ ಗಲಾಟೆಗ ಅತಿಶಯ ಕಂಡಿಕ್ಕು, ಆದರೆ ಈಗ ಅವಕ್ಕೂ ಅಭ್ಯಾಸ ಆದ ಹಾಂಗೆ ಸತ್ಯಣ್ಣಂಗೆ ಕಂಡತ್ತು.
ಆ ಪ್ರಾಣಿಗ ಅವರ ಪಾಡಿಂಗೆ ತಳಿಯದ್ದ್ದೆ ಮನುಗಿದ್ದರೂ ಈ ಹೊಟ್ಟೆತುಂಬಿದ ತಲೆ ಕಾಲಿ ಇಪ್ಪ ಮನುಷ್ಯ ಪ್ರಾಣಿಗ ಇದ್ದವಲ್ಲದಾ…. ಅಂತೇ ಮನಿಗಿದ್ದದರ ಕೆಣಕ್ಕುದಾ, ಕಲ್ಲಿಡ್ಕುದಾ, ಪ್ಲಾಷ್ಟಿಕ್ಕು ಹಾಕುದಾ? ಹೆರಾಣ ತಿಂಡಿ ಕೊಡುದಾ ಇತ್ಯಾದಿ ಹೆಬ್ಬೆಪ್ಪಾರಿ ಕೆಲಸ ಮಾಡುದರ ಕಂಡು ಸತ್ಯಣ್ಣಂಗೆ ಸಂಕಟ ಆತು.
ಬಂದ ಮಕ್ಕಳೂ ಬೇರೆಯೋರ ಅನುಕರುಸುಲೆ ಸುರು ಮಾಡಿದವು. ಮನುಷ್ಯಂಗೆ ಕಲಿಯುವಿಕೆ ಮಾಂತ್ರ ಇದ್ದರೆ ಆತಿಲ್ಲೆ, ತಿಳುವಳಿಕೆಯೂ ಬೇಕು ಹೇದು ಮನಸ್ಸಿಲಿ ಗ್ರೇಶಿದ°.
ಲೋಕದ ಎಲ್ಲೋರ ತಿದ್ದುಲೆ ಎಡಿಯ, ಆದರೆ ನಮ್ಮ ಊರ ಮಕ್ಕಳ ಆದರೂ ದಾರಿ ತಪ್ಪುಸದ್ದ ಹಾಂಗೆ ಮಾಡ್ಲಕ್ಕನ್ನೆ ಹೇದು ತೋರಿತ್ತು ಸತ್ಯಣ್ಣಂಗೆ!
ಅವ ಮಕ್ಕಳ ದಿನಿಗೇಳಿ ಹೇದ°- ಮಕ್ಕಳೇ! ಈ ಪ್ರಾಣಿಗ ಅವರ ವಾತಾವರಣಲ್ಲಿಯೇ ಇಪ್ಪ ಹಾಂಗೆ ಮಾಡ್ಲೆ ಪ್ರಯತ್ನ ಮಾಡಿ ನಾವು ಸಾಂಕುತ್ತಾ ಇಪ್ಪದು. ಸರಿಯಾದ ಕಾಡುಗ ಇಲ್ಲದ್ದೆ ಇಪ್ಪಗ ತಳಿ ನಶಿಸಿ ಹೋಗದ್ದೆ ಇರಲಿ. ಮುಂದಾಣ ಮಕ್ಕೊಗೂ ಪ್ರಾಣಿಗಳ ಒಳಿಶಿಕೊಡುದು ನಮ್ಮ ಜೆಬಾದಾರಿ. ಅವು ನವಗೆ ಉಪದ್ರ ಮಾಡ್ತವಿಲ್ಲೆ. ಆದರೆ ನಾವು ಅವಕ್ಕೆ ಉಪದ್ರ ಮಾಡ್ಲಾಗ. ಪ್ರಾಣಿಗಳ ಮೌನವ ನಾವು ಗೌರವಿಸೆಕ್ಕು. ಹಾಂಗೆ ಆದರೇ ದೇವರೂ ಒಳ್ಳೆದು ಮಾಡುಗು ಹೇದ°.
ಅಷ್ಟೂ ಹೊತ್ತು ಸುಮ್ಮನೆ ಇದ್ದ ರಂಗಣ್ಣ ಮಾತಾಡಿದ: ಮಾವ, ಹೀಂಗೆ ಬಿಂಗ್ರಿ ಮಾಡ್ಸ ಮನುಷ್ಯರು ಬಾರದ್ರೆ ಪ್ರಾಣಿಗೊಕ್ಕೆ ಕಷ್ಟ ಆಗದಾ? ಎಲ್ಲೊರೂ ಮೌನಲ್ಲಿಯೇ ನೋಡಿ ಹೋದರೆ ಅವಕ್ಕೆ ಮನರಂಜನೆಗೆ ಎಂತ ಇದ್ದು? ಹೀಂಗಿರ್ಸ ತಲೆಹೋಕಂಗ ಬಂದು ಬಿಂಗ್ರಿ ಮಾಡುವಾಗ ಪ್ರಾಣಿಗೊಕ್ಕೆ ಕೊಶೀ ಆಗದಾ? ಹೇದ.
ಅಷ್ಟಪ್ಪಗ ವಿನು ಹೇದ°: ಸತ್ಯ ಮಾವ, ಜೆನಂಗಳ ನೋಡಿ ಪ್ರಾಣಿಗೊಕ್ಕೆ ಟೀವಿ ನೋಡಿದ ಹಾಂಗೆ ಅಕ್ಕಲ್ಲದಾ? ನಮುನೆ ನಮುನೆ ಜೆನಂಗ ಬಂದು ಏನಕ್ಕೇನಾರು ಮಾಡುವಾಗ ಅವಕ್ಕೆ ಮನರಂಜನೆ ಅಕ್ಕಲ್ಲದಾ ನಮ್ಮ ಹಾಂಗೆ?
ಸತ್ಯಣ್ಣ ಹೇದ°- ಅಪ್ಪು, ಕೆಲವು ಪ್ರಾಯ ಆದ ಪ್ರಾಣಿಗೊಕ್ಕೆ ಮನಸ್ಸಿಲಿ ಕಂಡು ಹೋಕು, ಆ ಬಿಂಗ್ರಿ ಮಾಡ್ತ ಜೆನ ಗೂಡಿನೊಳ ಇರೆಕ್ಕಾತು, ಆನು ಹೆರ ಇರೆಕ್ಕಾತು ಹೇದು!!! 😀
~
4
ಅಡಿಗೆ ಸತ್ಯಣ್ಣ ಕಾನಾವಕ್ಕನಲ್ಲಿಗೆ ಬಂದ್ಸು ಕೊಡೆಯಾಲದ ಮೂರು ದಿನಾಣ ಅನುಪ್ಪತ್ಯ ಕಳುಶಿಕ್ಕಿ ಆವ್ತು.
ಮೂರು ದಿನ ಪೇಟೆ ಅನುಪ್ಪತ್ಯಲ್ಲಿ ಇತ್ತಿದ್ದ ಅಡಿಗೆ ಸತ್ಯಣ್ಣಂಗೆ ಇನ್ನೂ ಆ ಪೇಟೆ ಗಾಳಿ ಬಿರುದ್ದಿಲ್ಲೆ.
ಕಾನಾವಕ್ಕನಲ್ಲಿ ಉದಿಯಪ್ಪಣ ಕಾಪಿ ಆಗಿಕ್ಕಿ ಮಧ್ಯಾಹ್ನದ ತಯಾರಿಲಿ ಇತ್ತಿದ್ದ ಅಡಿಗೆ ಸತ್ಯಣ್ಣನತ್ರೆ ಅಡಿಗೆ ಕೊಟ್ಟಗ್ಗೆ ಬಂದ ಪನೆಯಾಲ ಮಾಣಿ, ‘ಒಳ್ಳೆತ ತಲೆ ಶೆಳಿತ್ತು, ಒಂದು ಗ್ಲಾಸು ಬೆಶಿ ಚಾಯೆ ಮಾಡಿ ಕೊಟ್ಟಿಕ್ಕಿ ಸತ್ಯಣ್ಣ’ ಹೇದ°.
ಸತ್ಯಣ್ಣನೂ ಪ್ರೀತಿಲಿ ಪೆಸ್ಸಲು ಚಾಯೆ ಮಾಡಿ ಕೊಟ್ಟಿಕ್ಕಿ, ಆಚಿಗೆ ತಿರುಗಿ ಒಲೆಲಿ ಮಡಗಿದ ಬೆಶಿ ಬೆಶಿನೀರ ಒಂದು ಪಾಟೆಲಿ ತೋಡಿ ಕವಂಗಕ್ಕೆ ಎರಶಿಗೊಂಡಿತ್ತಿದ್ದ °
ಚಾಯ ಕುಡುದಾದ ಪನೆಯಾಲ ಮಾಣಿ ಆ ಮೂಲೆಂದಲೆ – “ಗ್ಲಾಸು ಎಂತ ಮಾಡೆಕು ಸತ್ಯಣ್ಣ” – ಕೇಟ°
ಮೂರು ದಿನ ಕೊಡೆಯಾಲಲ್ಲಿ ಹೋವ್ತ ಬತ್ತವಕ್ಕೆ ಬೆಶಿ ಬೆಶಿ ಚಾಯೆ ಕಾಪಿ ಮಾಡಿ ಪೇಪರು ಗ್ಲಾಸಿಲ್ಲಿ ಎರೆಶಿ ಕೊಟ್ಟುಗೊಂಡಿತ್ತಿದ್ದ ಸತ್ಯಣ್ಣಂಗೆ ಅದುವೇ ನೆಂಪಾತೋ ಎಂತ್ಸೋ.. ತಟಕ್ಕನೆ ಹೇದ° – ಆ ಕರೇಲಿ ಹೆಡಗೆಲಿ ಹಾಕು. ಮತ್ತೆ ಒಟ್ಟಿಂಗೆ ಇಡ್ಕಲಕ್ಕು 😀
~
5
ಅಡಿಗೆ ಸತ್ಯಣ್ಣಂಗೆ ಒಂದೇ ಹಾಂಗಿರ್ತ ಹೆಸರಿನವು ಇನ್ನು ಒಂದೇ ಸೀಮೆಲಿ ಇಪ್ಪಲಾಗ ಹೇದು ತೋರ್ಲೆ ಸುರುವಾಯ್ದಡ°! 🙁
ಅದೆಂತ ಹಾಂಗೆ ಹೇದು ಕುಂಟಾಂಗಿಲ ಭಾವನ ಅಣ್ಣ ಮನ್ನೆ ಅಡಿಗೆ ಸತ್ಯಣ್ಣನತ್ರೆ ಪುತ್ತೂರ್ಲಿ ಕಂಡಪ್ಪಗ ಕೇಟನಡ
“ಅದು ಕುಂಬ್ಳೆಜ್ಜ° ಹೋದ ದಿನಾಣದ ಅವಸ್ಥೆ ಹಾಂಗೆ ಆಗಿ ಹೋಕು ಇಲ್ಲದ್ರೆ!” – ಹೇದ° ಸತ್ಯಣ್ಣ°
ಅದು ಎಂತ್ಸರಪ್ಪ! ಹೇದು ಮತ್ತೂ ಕೇಟಪ್ಪಗ ಗೊಂತಾತು ವಿಷಯ ಎಂತರ ಹೇದು –
ಯಮಧರ್ಮರಾಯ ಅಂದು ಕುಂಬ್ಳೆ ಸೀಮೆಲಿ ಗಣಪತಿ ಭಟ್ಟನ ವಾಯ್ದೆ ಆತು, ಹೋಗಿ ಕರ್ಕೊಂಡು ಬನ್ನಿ ಹೇದು ದೂತರ ಕಳ್ಸಿದನಡ.
ದೂತರು ‘ಒಡೆಯನ ಆಜ್ಞೆ’ ಹೇದು ಕೂಡ್ಳೆ ಬಳ್ಳಿ ತೆಕ್ಕೊಂಡು ಹೆರಟಿಕ್ಕಿ ಬಂದವುದೆ.
ಬಪ್ಪ ದಾರಿಲಿ ಬಸ್ಸಿಲ್ಲಿ ಹೋಗ್ಯೊಂಡಿತ್ತಿದ್ದ ಕುಂಬ್ಳೆ ಗಣಪತಿ ಭಟ್ಟರ ಕಂಡತ್ತು, ಬಳ್ಳಿ ಹಾಕಿ ಎಳದವು. ಮುಂದೆ ಹೋಪಗ ಹೊಸಮನೆ ಗಣಪತಿ ಭಟ್ರ ಕಂಡತ್ತು, ಬಳ್ಳಿ ಬೀಸಿದವು ಕರಕ್ಕೊಂಡು ಎಳದವು, ಮುಂದೆ ಹೋಪಗ ಮತ್ತೊಬ್ಬ ಗಣಪತಿ ಭಟ್ಟನ ಕಂಡತ್ತು. ಅವನನ್ನೂ ಎಳದವು. ಒಟ್ಟಿಲ್ಲಿ ಎಡ್ರೆಸ್ಸು ನೇರ್ಪಕ್ಕೆ ಕೈಲಿ ತೆಕ್ಕೊಳ್ಳದ್ದೆ ಬಂದ ಯಮದೂತರ ಕೈಲಿ ಒಂದೇ ದಿನ ಹೆಚ್ಚು ಕಮ್ಮಿ ಒಂದೇ ಹೊತ್ತಿಲ್ಲಿ ಕುಂಬ್ಳೆ ಸೀಮೆಲಿ ಆರು ಗಣಪತಿ ಭಟ್ಟರ ದಿನ ಅಕೇರಿ ಆಗಿ ಹೋತಡ ಚೇ!! 🙁
~
6
ಅಡಿಗೆ ಸತ್ಯಣ್ಣನ ಕೆಲಸ ಹೇದರೆ ವೃತ್ತಿಯೂ ಅಪ್ಪು ಸೇವೆಯೂ ಅಪ್ಪು.
ನೆರೆಕರೆ ನೆಂಟ್ರಿಷ್ಟರಿದ್ದರೆ ಅವರದ್ದು ಸೇವೆ. ಸುಧರಿಕೆಯೋರದಾರೆ ಅದು ಲೆಕ್ಕ ಬೇರೆ.
ಅಡಿಗೆ ಸತ್ಯಣ್ಣ ದಕ್ಷಿಣೆಗೆ ಹೇದೇ ಕೆಲಸ ಮಾಡ್ಸಲ್ಲ. ಹಾಂಗೇದು ಹೋದ್ದಕ್ಕೆ ದಕ್ಷಿಣೆ ತೆಕ್ಕೊಳ್ತಿಲ್ಲೆ ಹೇದರೆ ಮನಗೆ ಎಂತರ ಕೊಂಡೋಪದು ಮತ್ತೆ ಹೋಳಿಗೆಯೋ!
ಇತ್ತೀಚೆಗೆ ಸತ್ಯಣ್ಣನೂ ರಂಗಣ್ಣನೂ ಪುರುಸೊತ್ತಿಪ್ಪಗ ಆಟ ತಾಳಮದ್ದಳೆ ಹೇದು ಹಾಜರು ಹಾಕುವದಿದ್ದಿದ..
ಹೋದಲ್ಲೆಲ್ಲ ಹೇಳ್ಸು ಕೇಳ್ತು ವ್ಯವಸ್ಥಾಪಕರದ್ದು .. ಇಂದು ಭಾಗವತ್ರೆ ಇವತ್ತು ಸೇವೆ ಮಾತ್ರ, ಅರ್ಥ ಹೇದವನತ್ರೆಯೂ ಇವತ್ತು ಕವರು ಎಂತದೂ ಇಲ್ಲ ಸೇವೆ ಮಾತ್ರ, ವೇಷ ಹಾಕಿದವನತ್ರೆಯೂ ಇವತ್ತು ಸೇವೆ ಮಾತ್ರ.
ಅಡಿಗೆ ಸತ್ಯಣ್ಣ ರಂಗಣ್ಣ ಕೆಮಿ ಬುಡಲ್ಲೆ ಬಂದು ಹೇದ° – ನಾಳೆಂದ ಅನುಪ್ಪತ್ಯಕ್ಕೆ ಹೋದಲ್ಲಿ ನವಗೂ ಹೀಂಗೇ ಅಕ್ಕೋ ?! 😀
~~
7
ಅಡಿಗೆ ಸತ್ಯಣ್ಣ ಎಟ್ಟು ಲಾಯಕಕ್ಕೆ ಅಡಿಗೆ ಮಾಡಿರೆ ಎಂತಾತು. ಬಳ್ಸೋರು ಅಷ್ಟೇ ಜಾಗ್ರುತೆ ಮಾಡೆಕು
ಇಲ್ಲದ್ರೆ ಓ ಮನ್ನೆ ಆದಾಂಗೆ ಅಕ್ಕಿದಾ 🙁
ಅಡಿಗೆ ಸತ್ಯಣ್ಣ ಹೋದಲ್ಲಿ ಒಂದಿಕ್ಕೆ ಅಡಿಗೆ ಕೊಟ್ಟಗೆ ರಜ ಕಸ್ತಲೆ ಕಸ್ತಲೆ
ಅದು ಅಡಿಗೆ ಸತ್ಯಣ್ಣಂಗೆ ಎಂತ ಬುದ್ದಿಮುಟ್ಟು ಆಯ್ದಿಲ್ಲೆ ಹೇಳ್ವೊ
ಊಟಕ್ಕೆ ಬಳ್ಸುಲೆ ನಿಂದ ಬಾವಯ್ಯ ಒಬ್ಬ ಮೆಣಸು ಕಾಯಿ ಕವಂಗಲ್ಲಿ ಹಾಕಿ ಮಡಿಗಿದ್ದರ ತೆಕ್ಕೊಂಡು ಹೋದ ಬಳ್ಸುಲೆ.
ವಿಚಾರಣೆಗೆ ತೋಡಿ ಕೊಂಡೋಪಲೆ ಅಡಿಗೆ ಕೊಟ್ಟಗ್ಗೆ ಬಂದ ಆ ಭಾವಯ್ಯ ಏವುದು ಏನು ತಾನು ನೋಡದ್ದೆ ಕೈಮರಿಗೆಲಿ ಇತ್ತಿದ್ದ ಸೌತೆಕ್ಕಾಯಿ ಉಪ್ಪಿನಕಾಯಿಯ ಅತ್ತೆ ಕವಂಗಕ್ಕೆ ಸೊರುಗಿ ಕೊಂಡೋಗಿ ಮೆಣಸು ಕಾಯಿ ಮೆಣಸು ಕಾಯಿ ಹೇದು ವಿಚಾರ್ಸಿಕ್ಕಿ ಬಂದ°
ಮೆಣಸುಕಾಯಿ ಬಳ್ಸಿದ ಭಾವನತ್ರೆ ಇನ್ನು ಉಪ್ಪಿನಕಾಯಿ ಬಳ್ಸೆಕು, ಓ ಆ ಕೈಮರಿಗೆಲಿ ಇದ್ದದಾ, ಕೊಂಡೋಗು ಹೇದು ಅಡಿಗೆ ಸತ್ಯಣ್ಣ ಹೇದಪ್ಪಗಳೇ ಭಾವಯ್ಯಂಗೆ ಗೊಂತಾದ್ದು ಸಂಗತಿ ಮೋಸ ಆಯ್ದು ಹೇದು. 🙁
ಇದಾ ಕೈತೊಳದಿಕ್ಕಿ ಬತ್ತೆ ಹೇದು ಆ ಭಾವಯ್ಯ ಮೆಲ್ಲಂಗೆ ಚಾಂಬುವಾಗಳೇ ಸತ್ಯಣ್ಣಂಗೂ ಅಂದಾಜಿ ಆತು ಇವ ಮಾಡಿದ್ದೆಂತರ ಹೇದು.
ಮತ್ತೆ ಎಂತ ಮಾಡ್ಸು. ಉಪ್ಪಿನಕಾಯಿಯ ದೊಡ್ಡ ಮಾಡಿದ್ದತ್ತೆ.!
ಅದು ಹೇಂಗೆ ಹೇದೆಲ್ಲ ಹೇಳ್ತ ಕ್ರಮ ಇಲ್ಲೆ ಆತ. 😀
~~
8
ಓ ಮನ್ನೆ ತೆಕ್ಕುಂಜ ಮಾವನ ನೆಂಟ್ರ ಮನೆಲಿ ಅದೆಂತ್ಸೋ ಒಂದು ಅನುಪ್ಪತ್ಯ.
ತೆಕ್ಕುಂಜ ಮಾವನೂ ಪಾರು ಅತ್ತೆಯೂ ಮುನ್ನಾಣ ದಿನಂದಲೇ ಸುಧರಿಕೆ
ಊಟದ ಒಂದನೇ ಹಂತಿ ಎರಡ್ನೇ ಹಂತಿ ಕಳುತ್ತು. ಮತ್ತಾಣದ್ದು ಮನೆಯೋರ ಒಟ್ಟಿಂಗೆ ಹತ್ರಾಣ ನೆಂಟ್ರುಗೊ ಎರಡೂ ಹಂತಿಗೆ ಬಳ್ಸಿದೋರು ಕೂದ್ದು.
ತೆಕ್ಕುಂಜ ಮಾವನ ಎದುರೆ ಪಾರು ಅತ್ತೆ, ಇಂದಿರತ್ತೆ, ವಿಜಯತ್ತೆ, ಕೇಕಣಾಜೆ ಅಕ್ಕ, ಭಾಗ್ಯಕ್ಕ, ಅದಿತಿಕ್ಕ ಊಟಕ್ಕೆ ಕೂದ್ದು. ಬಲದ ಹೊಡೆಲಿ ಅಡಿಗೆ ಸತ್ಯಣ್ಣ, ಅದರಿಂದ ಆಚಿಗೆ ರಂಗಣ್ಣ, ಎಡದ ಹೊಡೆಲಿ ಏತಡ್ಕ ಮಾವ°, ಮುಳಿಯ ಭಾವ ಅದರಿಂದಾಚಿಗೆ ಇವಕ್ಕೆಲ್ಲ ಪಕ್ಕಬಲ ಸುಭಗಣ್ಣ.
ಅಂಬಗ ಒಪ್ಪಣ್ಣನೋ…?!! – ಗೊಂತಿಪ್ಪದೆ ಬಿಡಿ.., – ಒಂದನೆ ಹಂತಿಲಿ
ಬಳುಸಲೆ ಕುಂಟಾಂಗಿಲ ಬಾವ, ವಜ್ರಾಂಗಿ ಬಾವ, ಬೆಟ್ಟುಕಜೆ ಬಾವ ಇತ್ಯಾದಿ ಜವ್ವನಿಗರು
ಕೂದವರ ಹೆಸರು ನೋಡ್ವಾಗಳೇ ಗೊಂತಾವ್ತಿಲ್ಯ… ಎಲ್ಲ ಕವಿಗಳ ಸಾಲು!!
ಮೂರ್ನೇ ಹಂತಿಲಿ ಚೂರ್ಣಿಕೆಗೆ ನಿಯಮಂಗೆ ರಜ ಸಡ್ಳಾವ್ತು. ಆ ಹಂತಿಗೆ ಶ್ಲೋಕವೋ ಸುಭಾಷಿತವೇ ಆಯೇಕ್ಕು ಹೇದೇನಿಲ್ಲೆಡ. ಪದ ಪದ್ಯ ಎಲ್ಲವೂ ನಡೆತ್ತು ಚೆಂಙಾಯಿಗಳ ಕಳ ಆದಕಾರಣ.
ಆರಾರು ಹಾಂಗೆಲ್ಲ ಹೇಳ್ಳಕ್ಕೋ ಕೇಟ್ರೆ ಅಡಿಗೆ ಸತ್ಯಣ್ಣ ಹೇಳುಗು – ಯತ್ಕರೋಷಿ ಯದಶ್ನಾಸಿ ಯಜ್ಜುಹೋಸಿ ದದಾಸಿ ಯತ್ | ಯತ್ತಪ್ಪಸ್ಯಸಿ ಕೌಂತೇಯ ತತ್ಕುರುಶ್ವ ಮದರ್ಪಣಮ್ || ನೀ ಆಚಿಗೆ ಹೋಗಿ ಕೂರು. 😀
ಹಾಂಗೆ ಒಬ್ಬೊಬ್ಬನದ್ದೇ ಸುರುವಾತು.. ‘ಪರಮ ಶೋಡಷ ಭೋಜನವ ಉಂಡುಊ ಊ ಊ… ಹೇದು ಒಬ್ಬ ಭಾಗವತಿಗೆ ಕಲಿವ ಭಾವನದ್ದೂ ಸೇವೆ ಆತು. ಎದುರೆದುರೆ ಕೂದ ಕವಿಗಳದ್ದೂ ಒಂದೊಂದು ಬಂತು.
ಅಕೇರಿಗೆ ತೆಕ್ಕುಂಜಮಾವನ ಬಲದ ಹೊಡೆಲಿ ಕೂದ ಸತ್ಯಣ್ಣನ ಕುಟ್ಳೆ ಸುರುಮಾಡಿದವು
ಅಡಿಗೆ ಸತ್ಯಣ್ಣ ಹೇದರೆ ಹಪ್ಪಳ ಹೊರಿವಲೆ ಮಾಂತ್ರ ಅಕ್ಕಷ್ಟೇ ಗ್ರೇಶಿದಿರೋ!!! – ತೆಕ್ಕುಂಜೆ ಮಾವ ಅಡಿಗೆ ಸತ್ಯಣ್ಣನಲ್ಲಿ ಪರಕಾಯ ಪ್ರವೇಶ ಮಾಡಿದ್ದರ್ಲಿ ಸತ್ಯಣ್ಣನ ಪದ ಹೆರಟತ್ತದಾ –
ಕಾಯಿ ಕಡವಲೆ ಕೂರು ರಂಗಣ್ಣಾ…ಆ…ಆ..ಆ !
ಗೋಣೀ ಕಟ್ಟದ ಬಳ್ಳಿಯ ಬಿಚ್ಚಿ
ತೆಂಗಿನ ಕಾಯಿಯ ಒಡದು ಹಾಕು
ನೀರಿನ ಮಾಂತ್ರ ಚೆಲ್ಲಡ ರಂಗ
ಕವಂಗವ ತೆಗದು ಅದರಲ್ಲಾಕು
ಕಾಯಿ ಕಡವಲೆ ಕೂರು ರಂಗಣ್ಣಾ…ಆ…ಆ..ಆ.
ಒಡದ ಕಾಯಿಯ ಒಂದೊಂದಾಗಿ
ಕೆರೆಮಣೆ ಮಡಗಿ ಕೆರೆ ಕೆರೆ ಕೆರದು
ಹಾಳೆಲೆ ತುಂಬುಶಿ ಬಾಳೆಲೆ ಮುಚ್ಚು
ಕರಟವ ವಾಪಸು ಗೋಣಿಲೆ ತುಂಬುಸು
ಕಾಯಿ ಕಡವಲೆ ಕೂರು ರಂಗಣ್ಣಾ…ಆ…ಆ..ಆ.
ಸೌದಿ ಎರಡರ ಒಲೆಯೊಳ ತಳ್ಳು
ಕಾಯಿ ನೀರಿನ ಕುಡುದಾದಿಕ್ಕಿ
ಕಾಯಿಯ ನಾಕೂ ಪಾಲು ಮಾಡಿ
ಕಡವ ಕಲ್ಲಿಂಗಾಕಿ ಗರ ಗರ ಗರ್ರನೆ ತಿರುಗುಸು
ಕಾಯಿ ಕಡದು ಬೇಗನೆ ಕೂಡು ರಂಗಣ್ಣಾ..ಆ..ಆ..ಅ
ಮಜ್ಜಿಗೆ ನೀರು ಬಳ್ಸಿ ಆತು. ಇನ್ನು ನಿಂಗೊ ಗೋವಿಂದ ಹೇಳ್ಳಕ್ಕಾತೋ 😀
~~
😀 😀 😀 *** 😀 😀 😀
ಹರೇರಾಮ, ಓಹೋ! ರಂಗಣ್ಣಂಗೆ ಪರಾಕಾಯ ಪ್ರವೇಶ ಮಾಡ್ಲೆ ಗೊಂತಿದ್ದಲ್ಲೊ!? ಈ ವಿಷಯ ಸಿಕ್ಕಿದ್ದು ಒಳ್ಲೆದಾತಿದ. ಅಂತೂ ಎನ ಇದರ ಮನ್ನೆಯೇ ಓದಿಗೊಂಬಲೆ ಎಡಿಗಾಯಿದಿಲ್ಲೆ ಚೆನ್ನೈ ಭಾವ. ಲಾಯ್ಕಾಯಿದು.
ಪಾಪ ಈಗ ಪುರಚ್ಚಿ ಜಯಕ್ಕ ಸಪೂರ ಆಯಿದು. ಹರೇ ರಾಮ.
ಸತ್ಯಣ್ಣನ ಕಾಣದ್ದೆ ಅಸಕ್ಕ ಆದ್ದಂತೂ ನಿಜ. ತೆಕ್ಕುಂಜೆ ಮಾವ ಪರಕಾಯ ಪ್ರವೇಶ ಮಾಡಿಯಪ್ಪಗ ಪದ್ಯ ಹೆರ ಹೆರಟದು ಸೂಪರ್ ಆಯಿದು. ಸತ್ಯಣ್ಣಾ ಇನ್ನಾಣ ವಾರವುದೆ ಖಂಡಿತಾ ಬರೆಕಾತೊ ?
Helleli enthille… adbhutha… satyanna na pada supper aaidu.
illige govindavo henge.? aagaddirali…
ಅಂಬಗ ಗೋವಿಂದ ಹೇಳಿಕ್ಕುವೊ ಚೆನ್ನೈ ಭಾವ.’ಭೋಜನಾಂತೇ ಗೋವಿಂದ ನಾಮ ಸಂಕೀರ್ತನಂ ಗೋವಿಂದಾನೆ ಗೋವಿಂದಾ ಗೋವಿಂದ’.ಹರೇ ರಾಮ.
ಸತ್ಯಣ್ಣ ಸುಪರ್ಬ್!ಸುಮಾರು ದಿನಂದ ಕಾಣದ್ದ ಸತ್ಯಣ್ಣನ ನೋಡಿ ಕೊಷಿ ಆತು ಉಪ್ಪಿನಕಾಯಿ ಉದ್ದ ಮಾಡಿದ್ದು ಹೇಂಗೆ ಹೇಳುವ ಗುಟ್ಟು ಹೇಳಿರೆ ಒಳ್ಳೇದಿತ್ತು !ದಿ |ನಯನಕುಮಾರ (ಅವರ ದೊಡ್ಡ ಫ್ಯಾನ್ ಆನು )ಅವು ಸಾರಿನ ಉದ್ದ ಮಾಡಿ ಅರಸನ ಮರ್ಯಾದಿ ?! ಕಾಪಾಡಿದ ಹಾಂಗೆಯ ಇದುದೆ ! ತೆಕ್ಕುಂಜೆ ಮಾವನ ಪದ್ಯಭಾರೀ ರೈಸಿದ್ದು೧ತುಮ್ಬ ಲಾಯ್ಕ ಆಯಿದು ಪದ್ಯ