Oppanna.com

ಉಪನಯನದ ಉಪಯೋಗ

ಬರದೋರು :   ವಿಜಯತ್ತೆ    on   18/05/2014    4 ಒಪ್ಪಂಗೊ

ಉಪನಯನದ ಉಪಯೋಗ

“ಮಾಣಿಯ ಮಾರಾಯನ ಹಾಂಗೆ ಕಾಣುತ್ತು.ಇನ್ನೊಂದು ನೂಲು ಕಟ್ಟಿಹಾಕ್ತ ಕಾರ್ಯಆಯೆಕ್ಕು”  ಈ ಮಾತಿನ ಆನು ಸಣ್ಣದಿಪ್ಪಗ ಎನ್ನ ಅಜ್ಜ ಅವರ  ಪುಳ್ಳಿಮಾಣಿಯ, ನೋಡಿಗೊಂಡು ಹೇಳುವದು ಕೇಳಿದ್ದೆ. ಅಪ್ಪು, 7,9,11, ಈ ವರ್ಷಂಗಳಲ್ಲಿ  ಏವಗ ಸೇರಿ ಬತ್ತು ನೋಡಿಗೊಂಡು ಉಪ್ನಾನ ಮಾಡುತ್ತ ಕ್ರಮ.ಕೆಲವು ಕಡೆ ಮನೆ ಸ್ಥಿತಿ-ಗತಿ ಅಥವಾ ಇನ್ನಿತರ ಕಾರಣಂದ ಧೀರ್ಘ ಹೋಪದೂ ಇದ್ದು. ಷೋಡಷ ಸಂಸ್ಕಾರಂಗಳಲ್ಲಿ ಉಪನಯನವೂ ಒಂದು.{ನಮ್ಮ ಚೆನ್ನೈ ಭಾವ ಬರದ ಹದಿನಾರು ಸಂಸ್ಕಾರಂಗೊ ಪುಸ್ತಕಲ್ಲಿ ಇದ್ದಿದ}.  ಅದದು ಪ್ರಾಯಲ್ಲಿ ಆಗದ್ರೆ ಹಾಂಗೆ! ಕೊರಳಿಂದ ಬಲತ್ತಿಂಗೆ ಇಳಿಬಿಟ್ಟ ಜೆನಿವಾರ ಕಾಣದ್ರೆ ಹೆರಿಯವಕ್ಕೆ  ಆ ಜಾಗೆ ಶೂನ್ಯ ಕಾಂಬದು!!. ಹೆರ ದೇಶಕ್ಕೆ ಹೋದವೋ ಆಧುನಿಕರೆನಿಸಿ ಕೊಂಡವಕ್ಕೋ ಉಪ್ನಾನ ಒಂದು ತೋರಿಕಗಷ್ಟೆ! ಅದರ ಮೌಲ್ಯ ಗೊಂತಿದ್ದೊ,ಗೊಂತಿಲ್ಲದ್ದೆಯೊ ಜೆನಿವಾರ ಮಾಂತ್ರ ಪೆಟ್ಟಿಗೆ ಒಳ ಭದ್ರ!!. |ಜನ್ಮನಾಜಾಯತೇ ಜಂತುಃ ಕರ್ಮಣಾ ಜಾಯತೇ ದ್ವಿಜಃ| ಹೇಳಿ ಭಟ್ಟಮಾವ ಮದಾಲು ಹೇಳಿ ಕೊಡ್ತವು.ಜನಿಸುತ್ತಾ ಜಂತುವಿನ ಹಾಂಗಿಪ್ಪ ಮನುಷ್ಯ ಅವನ ಒಳ್ಳೆ ಕರ್ಮಂದ ದ್ವಿಜ[ಬ್ರಾಹ್ಮಣ]ಆವುತ್ತ೦.ಹೀಂಗಿದ್ದ ಸಂಸ್ಕಾರ ಕೊಡುವದೇ ಉಪನಯನಲ್ಲಿ. ಉಪನಯನಕ್ಕೆ ಜ್ಞಾನದ ಕಣ್ಣು ಹೇಳಿಯೂ ಅರ್ಥ ಇದ್ದಡ.ಉಪಯೋಗ:- ಉಪನಯನಲ್ಲಿ ಮುಖ್ಯವಾಗಿ ಗಾಯತ್ರಿ ಉಪದೇಶವೇ ಇದ್ದರೂ ಮುಂದೆ ಬ್ರಾಹ್ಮಣ ಸಹಜವಾದ ಆಚಾರ-ವಿಚಾರ,ವೇದಾಧ್ಯಯನಕ್ಕೆ ದಾರಿ,ಆಧ್ಯಾತ್ಮಿಕ ತಿಳುವಳಿಕೆ,ಎಲ್ಲವೂ ಸಿಕ್ಕುತ್ತು.ಮೊನ್ನೆ-ಮೊನ್ನೆ ಒಂದು ಅತ್ತಿಗೆ ಮಾತಾಡ್ತಾ “ಎನ್ನ ಮಗ ಬರೇ ಗೆಂಟುಪಿಟ್ಕಾಯಿ ಆಗೆಂಡಿದ್ದ ಮಾಣಿ ,ಉಪ್ನಾನ ಆದ ಮತ್ತೆ ಎಷ್ಟು ಪರಿವರ್ತನೆ ಆಯಿದ ಹೇಳಿರೆ ಎನಗೇ ಆಶ್ಚರ್ಯ ಆವುತ್ತಾ ಇದ್ದು!” ಹೇಳಿತ್ತು.ಇತ್ತಿತ್ತಲಾಗಿ ಇಂಗ್ಲಿಷ್ ಮೀಡಿಯಮ್ ಕಲಿತ್ತ ಮಕ್ಕೊಗೆ ಸಂಸ್ಕೃತ ಗಂಧ-ಗಾಳಿ ಗೊಂತಿರ್ತಿಲ್ಲೆ.ಹೊಸ ಬ್ರಹ್ಮಚಾರಿಗಳ ವೇದಪಾಠಕ್ಕೆ ಕಳುಗೀರೆ ಅವಕ್ಕೆ  ಸಂಸ್ಕೃತ ಉಚ್ಚಾರಣೆ ಒಟ್ಟಿಂಗೆ, ಶ್ಲೋಕಂಗೊ,ಮಂತ್ರಪುಷ್ಪ,ಹೀಂಗಿದ್ದೆಲ್ಲ ಕಲ್ತರೆ; ಅದರದೇ ಆದ ಧಾಟಿಲಿ ಹೇಳ್ತು ಕೇಳ್ಲೇ ಒಂದು ಕೊಶಿ!.ಫಲಿತಾಂಶ;-ಇದರ ಆನೀಗ ಹೇಳ್ಲೆ ಹೆರಟದೆಂತಕೆ ಕೇಳ್ತೀರೊ? ಮೊನ್ನೆ 11/5/14ಕ್ಕೆ ಎನ್ನ ಸಣ್ಣ ತಮ್ಮ ಮಂಜುನಾಥನ ಮಗಂಗೆ  ಕುಮಾರ ಮಂಗಲ ದೇವಸ್ಥಾನಲ್ಲಿ ಉಪ್ನಾನ ಕಳಾತಿದ. 9 ವರ್ಷಾಣ ಮಾಣಿ. ’ಬಿಂಗ್ರಿ’ ಮಾಡಿಯೊಂಡಿಪ್ಪದೇ ಹೆಚ್ಚು. ಕಲಿವದು ಇಂಗ್ಲಿಷ್ ಮೀಡಿಯಮ್ ಕೇಂದ್ರೀಯ ವಿದ್ಯಾಲಯ.ಮನೆಲಿಪ್ಪಗ ಈಗಾಣ ಎಲ್ಲಾ ಮಕ್ಕಳ ಹಾಂಗೆ  ಟಿ.ವಿ ಅಥವಾ ಕಂಪ್ಯೂಟರ್ ಮುಂದೆ ಸ್ಥಾನ ಭದ್ರ!. ಹಾಂಗಿದ್ದ ಪೋಕ್ರಿ ಪುಟ್ಟ, ಉಪ್ನಾನ ಕಳುದ ಮತ್ತೆ ಒಳ್ಳೆ ಒಪ್ಪಣ್ಣ!ಅಚ್ಚುಕಟ್ಟಾಗಿ  ಎರಡು ಹೊತ್ತೂ ಗಾಯತ್ರಿ ಜಪ,ಸಂಧ್ಯಾವಂದನೆ ಚಾ-ಚೂ ತಪ್ಪದ್ದೆಮಾಡ್ತ೦!.ಅವನ ಅಬ್ಬೆ-ಅಪ್ಪಂಗಂತೂ ಕೊಶಿಯೋ ಕೊಶಿ! ಒಂದು ಸಂತೋಷದ ವಿಚಾರ ಎಂತರ ಕೇಳಿರೆ; ಇತ್ತಿತ್ತಲಾಗಿ ಉಪ್ನಾನ ಆದ ವಟುಗೊಕ್ಕೆ ಬೇಸಗೆ ರಜೆಲಿ, ಶಾಲಗಳಲ್ಲೋ, ದೇವಸ್ಥಾನಂಗಳಲ್ಲೋ, ಮಂತ್ರಪಾಠಕ್ಕೆವ್ಯವಸ್ಥೆಇದ್ದು.ಉದಾ:ಮುಜುಂಗಾವುಶಾಲೆ,ಕುಮಾರಮಂಗಲ,ಪೆರಡಾಲ,ಮಧೂರು ಮೊದಲಾದ ದೇವಸ್ಥಾನಂಗಳಲ್ಲೂ ಏರ್ಪಾಡಿದ್ದು.ಆ ಸಮಯಲ್ಲಿ ಅಲ್ಲಿಗೊಂದಾರಿ ಭೇಟಿ ಕೊಟ್ರೆ, ಸಾಲು-ಸಾಲಾಗಿ ಕುಞ್-ಕುಞ್ ಮಾಣಿಯಂಗೊ ಕೂದಂಡು ಒಂದೇ ಉಸುರಿಲ್ಲಿ ಮಂತ್ರೋಛ್ಛಾರ ಮಾಡುಸ್ಸು ನೋಡ್ಳೆ ಬಹು ಚೆಂದ. ಕೆಲವು ಜೆನ “ಎನ್ನ ಮಗ ಮಂತ್ರಪಾಠಕ್ಕೆ ಹೋಪಲೆ ಒಪ್ಪುತ್ತನೇ ಇಲ್ಲೆ” ಹೇಳುಸ್ಸು ಕೇಳಿದ್ದೆ. ಹಾಂಗೆ ಬೇಜವಾಬ್ದಾರಿಲಿ ಕೂರೆಡಿ.ಶಾಲಗೆ ಸುರುವಿಂಗೆ ಕಳುಗೆಕ್ಕಾರೆ ಮಂಕಾಡುಸುತ್ತ ಹಾಂಗೆ ಇಲ್ಲಿಯೂ ಮಂಕಾಡ್ಸಿ ಕಳುಗಿ.ಅಲ್ಲಿ ಬಾಕಿ ಎಲ್ಲೋರೊಟ್ಟಿಂಗೆ ಹೊಂದಿಯಪ್ಪಗ ಅವಕ್ಕೆ ಅಭ್ಯಾಸ ಆವುತ್ತು.ಉಪ್ನಾನ ಒಂದು…., ಗೌಜಿಲಿ ಮಾಡೀರೆ ಸಾಕೋ? ಅದರ ಅರ್ಥ,ಮಹತ್ವ ಅವಕ್ಕೆ ಹೇಳಿಕೊಡೆಡದೊ?ಹಾಂಗೇ ಸಂಧ್ಯಾವಂದನೆ ಮಾಡುವಾಗ ಜೆಪ ಮಾಡುವಾಗ,ಶ್ಲೋಕಂಗಳ ಹೇಳುವಾಗೆಲ್ಲ ಅದರ ಅರ್ಥ ಮಕ್ಕೊಗೆ ಹೇಳಿಕೊಡೆಕು.ಹಾಂಗಾದರೆ,  ಆ ಕ್ರಿಯೆಯ  ಅಡಿಪಾಯ ಭದ್ರ ಆವುತ್ತಲ್ಲೋ.ಎಂತ ಹೇಳ್ತಿ?.

ನಮ್ಮ ಹವ್ಯಕರ ಸಂಸ್ಕಾರ,ಸಂಸ್ಕೃತಿ,ಆಚಾರ-ವಿಚಾರಂಗೊ ಸಮಾಜಲ್ಲಿ ಬಹು ಮಾನ್ಯತೆ ಇಪ್ಪಂತಾದ್ದು.ಎಲ್ಲೋರುದೆ ಇದರ ಅರ್ತು ಒಳುಶಿ-ಬೆಳೆಶಲೆ ಪ್ರಯತ್ನ ಮಾಡುವೊ೦.

——೦——-

4 thoughts on “ಉಪನಯನದ ಉಪಯೋಗ

  1. ವಿಜಯತ್ತೆಯ ಚಿ೦ತನೆ,ಮಾರ್ಗದರ್ಶನ ಭಾರೀ ಮಹತ್ವದ್ದು.ಧನ್ಯವಾದ.

  2. ಒಳ್ಳೆ ಬರಹ ವಿಜಯಕ್ಕ

  3. ಸಂಸ್ಕಾರ ಸಂಸ್ಕೃತಿಯ ಸಣ್ಣಾಗಿಪ್ಪಗಳೇ ಸರಿಯಾಗಿ ಅರಗಿಶ್ಯೊಂಡ್ರೆ ಅದು ಮುಂದಗೂ ಒಳಿಗು ಹೇಳ್ತ ಆಶಯ ಲಾಯಕ ಬರದ್ದಿ ಹೇದೊಂದೊಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×