- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ವೈದಿಕ ಸನ್ಮಾನದೊಟ್ಟಿಂಗೆ ಸಂಪನ್ನಗೊಂಡ ಸತ್ಯನಾರಾಯಣ ಪೂಜೆ
ಶೇಂತಾರುಬೈಲು ವೇ|ಮೂ|ಶಂಭಟ್ಟರ [ಮುದ್ದುಭಟ್ರ] ಎರಡನೇ ಮಗ ಕೊಡೆಯಾಲಲ್ಲಿ ವಕೀಲರಾಗಿಪ್ಪ ಮಹಾಲಿಂಗೇಶ್ವರ ಪ್ರಸಾದರಲ್ಲಿ, ಒಂದು ಸತ್ಯನಾರಾಯಣಪೂಜೆ ಇತ್ತೀಚಗೆ ಕಳಾತಿದ. ಚತುಶ್ಕೋಣಉದಕಶಾಂತಿ ಪಾರಾಯಣ, ಶ್ರೀಲಕ್ಷ್ಮಿನಾರಾಯಣಹೃದಯ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಹಾಂಗೂ, ಅನ್ನಸಂತರ್ಪಣೆ, ಮಾಡಿದ್ದಲ್ಲದ್ದೆ ವಿಶೇಷವಾಗಿ ಹೆರಿಯ ವಿದ್ವಾಂಸರಾದ “ವೇದಬ್ರಹ್ಮ” ಹೇಳ್ಲಕ್ಕಾದ ಪಂಜಸೀಮೆ, ಮೊಡಪ್ಪಾಡಿ ವೇ|ಮೂ|ಕೃಷ್ಣಭಟ್ಟರಿಂಗೆ ಸನ್ಮಾನವೂ ಈ ಸಂದರ್ಭಲ್ಲಿ ಮಾಡಿದೊವು.
ವಿಷ್ಣು ಉಪಾಸನೆಲಿ ಸರಳವೂ ವಿಶೇಷವೂ ಆದ ಉಪಾಸನೆ ಶ್ರೀ ಸತ್ಯನಾರಾಯಣ ಪೂಜೆ. ಎಲ್ಲೋರು ಈ ಪೂಜೆಯ ಸಾಮಾನ್ಯವಾಗಿ ಮನೆ ಎಜಮಾನ ಹಾಂಗೂ ಒಬ್ಬ ಪುರೋಹಿತರಿಂದ ಮಾಡ್ತಾ ಇಪ್ಪದು ಕಾಣ್ತು. ಆದರೆ ಈ ವಕೀಲರಲ್ಲಿ ಅಪ್ಪಂತಹ ವಿಶೇಷ ಎಂತ ಹೇಳಿರೆ; ಏವದೇ ಪೂಜಗೂ ಸಂಕಲ್ಪಂದ ತೊಡಗಿ ಬ್ರಹ್ಮಾರ್ಪಣೆ ವರೆಗೂ ವೇದಘೋಷ ಸಹಿತ ಪೂಜೆಮಾಡುದು ಅವರ ಕ್ರಮ. ಮನ್ನೆಯಾಣ ಪೂಜೆದಿನವೂ ಸಂಕಲ್ಪಂದ ಶುರುಮಾಡಿ ಬ್ರಹ್ಮಾರ್ಪಣೆವರೆಗೂ ಚತುಶ್ಕೋಣ ಉದಕಶಾಂತಿ ಪಾರಾಯಣ, ಶ್ರೀಲಕ್ಷ್ಮೀಹೃದಯ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ ಹೀಂಗೆಲ್ಲ ವೈದಿಕ ವೈವಿದ್ಯತೆ ಇದ್ದತ್ತು.
ಪೂಜೆಯ ಮಹಾಮಂಗಳಾರತಿ ಕಳುದು ವಿಶೇಷವಾಗಿ “ಅಷ್ಟಾವಧಾನ ಸೇವೆ” ಹೇದಿದ್ದತ್ತು. ಇದು ಎಲ್ಲೋಡಿಕೂ ಮಾಡದ್ದ; ಚತುರ್ವೇದ ಮಂತ್ರ ಸಹಿತ ಎಂಟು ಕಲಾಸೇವಗೊ! ದೇವರಿಂಗೆ ನಿವೇದನೆ ಮಾಡುದು. ಈ ಅಪರೂಪದಸೇವೆ; ಭಜನೆ, ಸಂಗೀತ, ತಾಳಮದ್ದಳೆ, ಭಾಗವತಿಕೆಯೂ ಇದ್ದೊಂಡು ಕೆಮಿಗೆ, ಕಣ್ಮನಕ್ಕೆ ಭಕ್ತಿಪುರಸ್ಸರವಾಗಿ ತೋರುತ್ತದಪ್ಪು. ತಾಳಮದ್ದಳೆ ಭಾಗವತಿಕೆ; ಕಲ್ಲುಕುಟ್ಟಿಮೂಲೆ ಶ್ರೀಯುತ ನರಸಿಂಹ ಭಟ್ಟರಿಂದಾದರೆ, ಸಂಗೀತ ಹಾಡಿದ್ದು ಅವರ ಮಗಳಕ್ಕೊ ಎರಡು ಜೆನ ಪುಟ್ಟು-ಪುಟ್ಟು ಕೂಸುಗೊ!. ಉಪ್ಪಂಗಳ ಅನುಪಮ ಹಾಂಗೂ ಪಾರ್ಟಿ, ಭಜನೆ ಹಾಡಿದೊವು.
ವಿಶೇಷಸನ್ಮಾನಿತರುಃ- ಪೌರೋಹಿತ್ಯ ಮಾಡುಸುವ ಶಿಷ್ಯವರ್ಗಲ್ಲಿ ಸಂಸ್ಕೃತಿ,ಸಂಸ್ಕಾರ,ರೀತಿ- ರಿವಾಜುಗಳ ಅಕ್ಷರಶಃ ಪಾಲಿಸುತ್ತಾ ಬಪ್ಪ,ಪುರೋಹಿತ ಕ್ಷೇತ್ರದ ದ್ರುವ ನಕ್ಷತ್ರವಾಗಿ ಕಾಂಬ ಅಪರೂಪದ ಪುರೋಹಿತರೇ ವೇ|ಮೂ|ಕೃಷ್ಣಭಟ್ಟರು. ಕಿಳಿಂಗಾರು ನಡುಮನೆ ವಸಿಷ್ಠ ಸಂಪ್ರತಿಷ್ಠಾನಂದ “ವಸಿಷ್ಠ ಪ್ರಶಸ್ತಿ” ಪಡೆದ ಇವು ಪಂಜಸೀಮೆಯ ಮೊಡಪ್ಪಾಡಿಯೊವು. ಬರ್ಲಾಯ ಬೆಟ್ಟು ವೇ|ಮೂ|ಗಣಪತಿ ಭಟ್ಟ-ಗೌರಮ್ಮ ದಂಪತಿಗಳ ಸಪುತ್ರ. ಇವರ ಹೆಂಡತಿ ಶ್ರೀಮತಿ ಲಲಿತಲಕ್ಷ್ಮಿ. ಇವು ಕೋಟೆ ಪಂಡಿತರ ಪುಳ್ಳಿಯಾಡ. ಇವಕ್ಕೆ ಮೂರುಜೆನ ಮಕ್ಕೊ. ಅವೆಲ್ಲಾ ಮದುವೆಯಾಗಿ ಸಂಸಾರವಂದಿಗರು. ಈ ಹೆರಿ ವಿದ್ವಾಂಸರ ಪ್ರಾಯ ೬೪. ಇವು ತಂಜಾವೂರಿಲ್ಲಿ ವೇದಾಧ್ಯಯನ ಮಾಡಿದೊವಾಡ. ಅವು ಕಲ್ತಮತ್ತೆ ಹೇಂಗೆ ಕಲ್ತಿದೊವೊ ಹಾಂಗೇ ಶಾಸ್ತ್ರೋಕ ರೀತಿಲಿ ಶಿಷ್ಯ ವರ್ಗಲ್ಲಿ ಮಾಡ್ಸುತ್ತಾ ಬಯಿಂದೊವು. ಕಾರ್ಯಕ್ರಮ ಆಯೆಕ್ಕಾದೊವು; ಆಧುನಿಕತೆಯ ಅನುಕೂಲ ಶಾಸ್ತ್ರಕ್ಕೆ ಮಾರುಹೋಗಿ ಅವಕ್ಕವಕ್ಕೆ ಬೇಕಾದ ರೀತಿ ಹೇಳಿರೆ; ಎನ್ನಂದಾಗ ಹೇಳುಗಡ [ಒಂದು ದಿನಾಣ ಮದುವೆ, ಅಂತರ್ಜಾತಿ ಮದುವೆ. ಒಟ್ಟಿಲ್ಲಿ ಕ್ರಮ ತಪ್ಪಿದ ರೀತಿಲಿ ಮಾಡಿದ್ದೊವಿಲ್ಲೇಡ].
ಇನ್ನೊಬ್ಬ ಗಮನ ಸೆಳೆದ ಪುರೋಹಿತರು; ಅಡಿಕೆಹಿತ್ತಿಲಿನ,ವೇ|ಮೂ|ಶ್ರೀಕೃಷ್ಣಉಪಾಧ್ಯಾಯರು. ಇವರ ಕಂಠವೋ ಅದ್ಭುತ!.ಕಂಚಿನ ಕಂಠ!!.ಸ್ಪಷ್ಟ ಉಚ್ಚಾರಣೆಲಿ ಎಲ್ಲಿಯೂ ಪುಸ್ತಕ ನೋಡದ್ದೆ, ಎಡವದ್ದೆ, ಹೇಳುವ ತರುಣ. ಇವರ ಮಂತ್ರೋಚ್ಛಾರಣೆ ಕೇಳುವದೇ ಕರ್ಣಾನಂದ!!. ಕಣ್ಮನ ಸೆಳೆತ!!.
ಶಾಸ್ತ್ರೋಕ್ತ ರೀತಿಲಿ ಪೂಜೆ, ಘನ ಪಂಡಿತರಿಂಗೆ ಸನ್ಮಾನ, ಒಟ್ಟಿಂಗೆ ನವದಂಪತಿಗೊಕ್ಕೆ ಉಡುಗೊರೆ ಸಹಿತ ಸಮ್ಮಾನ, ಪೂಜೆ ಸಮಯಲ್ಲಾದ ಅಷ್ಟಾವಧಾನ. ಇದರೆಲ್ಲಾ ಮಾಡ್ಸಿದವಕ್ಕೆ ಸಾರ್ಥಕತೆ ತಂದರೆ; ಬಂದ ಎಲ್ಲಾ ಅತಿಥಿಗೊ ಅಪರೂಪದ ಪೂಜೆಯ ನೋಡಿದ ಸಂತೃಪ್ತಿಲಿ ಹೊಗಳೆಂಡು ಹೋದ್ದಂತೂ ನಿಜ!. ಶೇಂತಾರು ಮನೆಯವಕ್ಕೆ; ಉತ್ತರೋತ್ತರ ಅಭಿವೃದ್ಧಿಯಾಗಲಿ, ಈ ವಕೀಲ ಎಸ್.ಎಮ್.ಭಟ್ಟರ ಇಷ್ಟಾರ್ಥ ಈಡೇರಲಿ ಹೇದು ನಾವು ಒಪ್ಪಣ್ಣ ಬಯಲಿನವೆಲ್ಲ ಶುಭ ಹಾರೈಸುವೊ°.
~~~***~~~
Mahalingeshwara Bhatrige namaskaragalu
ಅಪರೂಪದ ಕಾರ್ಯಕ್ರಮ. ಒಳ್ಳೆ ಸುದ್ದಿಗೊಂದು ಒಪ್ಪ 🙂
ಹರೇ ರಾಮ . ಅಪರೂಪದ ಭವ್ಯ ಪುಣ್ಯ ಕಾರ್ಯಕ್ರಮ.
ಒಪ್ಪಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ.
ಇವರ ಮನೆಲಿ ಇಂತಹ ಕಾರ್ಯಕ್ರಮ ತೂಂಬಾ ನೆಡೆತ್ತಾ ಇರುತ್ತು.ದೇವರು ಇವಕ್ಕೆ ಒಳ್ಳಯದು ಮಾಡಿ,ಇವರ ಕಷ್ಟಂಗಳ ದೂರಮಾಡಲಿ ಹೇಳಿ ದೇವರತ್ತರೆ ಕೇಳಿಯೊಳುತ್ತೆ
ಒಳ್ಳೆಶುದ್ದಿ. ಹೀಂಗಿದ್ದ ಶುದ್ದಿ ಇನ್ನೂ ಬರಲಿ
ನಿಜಕ್ಕೂ ಅಪ್ಪು ಆನುದೇ ಈ ಕಾರ್ಯಕ್ರಮಲ್ಲಿ ಬಾಗಿ ಆಗಿ ಪುಣ್ಯಸಂಚಯನ ಮಾಡಿದ್ದೆ…
ಹರೇ ರಾಮ. ಒಳ್ಳೆ ಸುದ್ದಿ. ಅಕ್ಕ೦ಗೆ ಅಭಿನ೦ದನಗೊ.
ಹರೇ ರಾಮ.