Oppanna.com

“ಆಪತ್ತು ಮನುಷ್ಯಂಗೆ ವಿವೇಚನೆಯನ್ನೂ ತತ್ತು”.–(ಹವ್ಯಕ ನುಡಿಗಟ್ಟು -68)

ಬರದೋರು :   ವಿಜಯತ್ತೆ    on   08/10/2016    2 ಒಪ್ಪಂಗೊ

“ಆಪತ್ತು  ಮನುಷ್ಯಂಗೆ  ವಿವೇಚನೆಯನ್ನೂ ತತ್ತು”.-(ಹವ್ಯಕ ನುಡಿಗಟ್ಟು-68)

ಶಂಬಣ್ಣ,  ಹೇದೊಬ್ಬᵒ ಇತ್ತಿದ್ದᵒ. ಕೃಷಿ ಮಾಡಿಯೊಂಡು ದನಗಳ ಸಾಂಕೆಂಡು ಇತ್ತಿದ್ದ ಅವಂಗೆ ಮಕ್ಕೊ, ಸೊಸೆಯಕ್ಕೊ, ಪುಳ್ಳಿಯಕ್ಕೊ ಹೇಳಿ ಸಂಸಾರವೂ ಬೆಳದತ್ತು. ಮನೆಲಿ ಜೆನ ಸಂಖ್ಯೆ ಹೆಚ್ಚಾದಾಂಗೆ ಎಲ್ಲೋರಿಂಗೂ ಒಂದೇ ನಮುನೆ ಆರೋಗ್ಯ ಇರ್ತಾ?.ಒಂದು ದಿನ ಎಜಮಾನ್ತಿಗೆ ಸೌಕ್ಯ ಇಲ್ಲೇದು ಮದ್ದು ತಂದು ಗುಣಾತೂಳಿಯಪ್ಪಗ, ಮತ್ತೆ ಮಗನ ಆರೋಗ್ಯ ಏರು-ಪೇರು, ಅದಕ್ಕೆ ಪರಿಹಾರ ಮಾಡಿಯಪ್ಪಗ, ಹಟ್ಟಿಲಿ ಕರೆತ್ತ ದನಕ್ಕೆ ಹುಶಾರಿಲ್ಲೆ.ಹೀಂಗಪ್ಪಗ ಸುರು-ಸುರುವಿಂಗೆ ಅವಂಗೆ  ಬೇಡಪ್ಪ ಈ ಜೀವನ ಹೇಳಿ ಆದರೂ ಪುಳ್ಳಿಯಕ್ಕಳೊಟ್ಟಿಂಗೆ ಹೊತ್ತು ಕಳದಪ್ಪಗ ಆ ಬೇನೆ ಮರದತ್ತು. ಆದರೆ ನಾಕು ದಿನಪ್ಪಗ ಏವಗಳೂ ಅಜ್ಜನೊಟ್ಟಿಂಗೆ ಆಡೆಂಡಿದ್ದ ಪುಳ್ಳಿ ಜ್ವರಲ್ಲಿ ಕಂಗಾಲು!. ಈಗ ಅವᵒ  ಹೀಂಗಿದ್ದಕ್ಕೆಲ್ಲಾ ಹೆದರದ್ದೆ ಧ್ಯೆರ್ಯ ತೆಕ್ಕೊಂಬಲೆ ಸುರುಮಾಡಿಯೊಂಡು ತನ್ನ ಕರ್ತವ್ಯಕ್ಕೆ ಲೋಪ-ದೋಷ ಮಾಡದ್ದೆ, ವೆವಹರ್ಸಿದಾಂಗೆ ಅವನ ವಿವೇಚನೆ ಬೆಳದತ್ತು!!. ಮತ್ತೆ- ಮತ್ತೆ  ಕಷ್ಟ ಬಂದಾಂಗೆ ಎದುರುಸುವ ಮನಸ್ಥ್ಯೆರ್ಯವ  ಮಕ್ಕೊ ಪುಳ್ಳಿಯಕ್ಕೊಗೆ  ಉಪದೇಶ ಮಾಡ್ಳೆ ಸುರುಮಾಡಿದᵒ.  ಇದುವೇ ಅಪ್ಪೊ ಪಕ್ವತೆ ಹೇಳಿರೆ…, ಹಾಂ ಅದುವೇ ನಮ್ಮಲ್ಲಿ ವಿವೇಚನೆ(ವಿವೇಕ) ಹೇಳ್ತವು.

ಇಂದು ಶ್ರೀಗುರುಗಳ ಸಂದೇಶವ ( ಮನದಾಳದ ಮಾತುಗ ಆಡಳಿತ ಸರಕಾರಕ್ಕಾದರೂ, ಶಿಷ್ಯ ಸಮೂಹಕ್ಕೂ ಅದೆಷ್ಟೋ  ಸಂದೇಶ ಇದ್ದದಲ್ಲಿ), ’ಶಪಥ ಪರ್ವ’ ಲ್ಲಿ ಕೇಳಿಯಪ್ಪಗ ಕಣ್ಣುನೀರು ಬುಳು-ಬುಳುನೆ ಬಂತು.ಎನ್ನ ವಿವೇಚನೆಗೆ ಟೋನಿಕ್ ಬಿದ್ದು ಮತ್ತೂ ಗಟ್ಟಿ ಆತಿದ. ಹೆರಾಂದ ಸುಕಾಸುಮ್ಮನೆ ಬತ್ತ ಆಕ್ರಮಣವ ಮಾಂತ್ರ ಅಲ್ಲ; ಬದುಕಿಲ್ಲಿ ಬಪ್ಪ ರೋಗ ,ರುಜಿನ, ಸಂಕಷ್ಟವನ್ನೂ ಎದುರುಸುವ ಶೆಕ್ತಿ, ಗುರುದೇವತಾನುಗ್ರಹಂದ ಬರಲಿ ಕೇಳಿಗೊಂಡೆ . ಹೀಂಗಿದ್ದ ನೀತಿ ಮಾತಿನ ಶ್ರೀಗುರುಗಳ ಸಂದೇಶಂದ ಅದೆಷ್ಟೋ  ಧ್ಯೆರ್ಯ ಮಾಸುತ್ತಿಪ್ಪ ಸಣ್ಣವಕ್ಕೆ  ಹೇಳೆಕ್ಕಾದ ಅವಶ್ಯ ಇದ್ದಲ್ಲಾ? .   —–೦—-

 

2 thoughts on ““ಆಪತ್ತು ಮನುಷ್ಯಂಗೆ ವಿವೇಚನೆಯನ್ನೂ ತತ್ತು”.–(ಹವ್ಯಕ ನುಡಿಗಟ್ಟು -68)

  1. ಅಪ್ಪು , ನಿಂಗ ಹೇಳಿದ್ದು ನಿಜ. ಲಾಯಕ ಆಯಿದು.

  2. ಅಪ್ಪು ವಿಜಯಕ್ಕ , ಸರಿಯಾಗಿ ಹೇಳಿದಿರಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×