Oppanna.com

೨೦೧೮ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ಪ್ರದಾನ(ವರದಿ)

ಬರದೋರು :   ವಿಜಯತ್ತೆ    on   01/09/2018    0 ಒಪ್ಪಂಗೊ

೨೦೧೮ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ಪ್ರದಾನ(ವರದಿ)

ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಾಮಂಡಲ ಮಾತೃವಿಭಾಗ ಸಹಯೋಗಲ್ಲಿ ಪ್ರತಿವರ್ಷ ನೆಡದು ಬಪ್ಪ ೨೦೧೮ನೇ ಸಾಲಿನ; ೨೩ನೇ ವರ್ಷದ ಕಥಾಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಳಾತು.
ಶ್ರೀರಾಮಚಂದ್ರಾಪುರ ಮಠದ ನಮ್ಮ ಆರಾಧ್ಯ ಗುರುಗಳಾದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗೊ ತಮ್ಮ ದಿವ್ಯ ಕರಕಮಲಗಳಿಂದ ಪ್ರದಾನ ಮಾಡಿದೊವು.

ಚಾತುರ್ಮಾಸ್ಯ ಸಂದರ್ಭದ  ಮುಳ್ಳೆರಿಯ ಹವ್ಯಕಮಂಡಲದ ಗುರುಭಿಕ್ಷಾ ದಿನವಾದ ೨೭-೮-೨೦೧೮ ರಂದು ಪ್ರಶಸ್ತಿಗೆ ಆಯ್ಕೆಯಾದ ತಂಗೆ ಶ್ರಿಮತಿ ಅಕ್ಷತಾರಾಜ್ ಪೆರ್ಲ; ಕೊಡಗಿನಗೌರಮ್ಮ ಪ್ರಶಸ್ತಿಯೊಟ್ಟಿಂಗೆ ಶ್ರೀಗಳ ಕರಕಮಲಂಗಳಿಂದ ಶ್ರೀಸಂಸ್ಥಾನವರಿಂದ ಆಶೀರ್ವಾದ ಮಂತ್ರಾಕ್ಷತೆ ಸ್ವೀಕರಿಸಿದೊವು.replica watches UK

ದ್ವಿತೀಯ ವಿಜೇತೆ ಸಾಹಿತ್ಯಲೋಕಲ್ಲಿ ಇತ್ತೀಚೆಗೆ ಮಿಂಚಿದ; ಕತೆ,ಕವನ ಬರವ ತಂಗೆ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರ ಭಟ್ ಬೆಜಪ್ಪೆ ಶ್ರೀಗಳವರ ಅಮೃತ ಹಸ್ತಂದ ಬಹುಮಾನದೊಟ್ಟಿಂಗೆ ಆಶೀರ್ವಾದ ಮಂತ್ರಾಕ್ಷತೆ ಪಡಕ್ಕೊಂಡೊವು.

ತೃತೀಯ ವಿಜೇತೆ  ಶ್ರೀಮತಿ ಮನೋರಮಾ ಬಿ.ಎನ್, ಮಂಗಳೂರು ಇವರ ಅನುಪಸ್ಥಿತಿಲಿ;ಅವರ ಹೇಳಿಕೆ ಪ್ರಕಾರ ಅವಕ್ಕೆ ಸಲ್ಲುವ ಒಂದು ಸಾವಿರ ನಗದು ಹಣವ ಕೊಡಗಿನ ಸಂತ್ರಸ್ಥರ ಪ್ರವಾಹ ಪರಿಹಾರ ನಿಧಿಗೆ ಶ್ರೀಮಠಕ್ಕೆ ಒಪ್ಪುಸಿದಿಯೊ°.

ಕಥಾ ತೀರ್ಪುಗಾರರಲ್ಲಿ ಒಬ್ಬರಾದ ಶ್ರೀಯುತ ಎಸ್.ವಿ. ಭಟ್, ಕಾಸರಗೋಡು ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ ಸಂಸ್ಥಾನದವರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದವು.

ಈ ಸರ್ತಿ ಒಟ್ಟು ೨೪ ಕತೆ ಬಯಿಂದು.ಕಾಸರಗೋಡು ಜಿಲ್ಲೆ ಅಲ್ಲದ್ದೆ, ಪುತ್ತೂರು, ಮಂಗಳೂರು, ಉಡುಪಿ,  ಉತ್ತರಕನ್ನಡ, ಬೆಂಗಳೂರು, ಹೈದ್ರಾಬಾದ್, ಮೊದಲಾದ ಕಡೆಂದ ಅಕ್ಕ-ತಂಗೆಕ್ಕೊ ಸ್ಪರ್ಧಿಸಿದ್ದೊವು.  ಹಾಂಗೇ ಮೌಲ್ಯ ಮಾಪನ ಮಾಡಿ ವಿಜೇತೆಯರ ಪಟ್ಟಿ ಬಿಡುಗಡೆಯಾದ ಮೇಲೂ ನಿಯಮಾವಳಿ ಗಮನ ಕೊಡದ್ದೆ ಬೇರೆ ಆರೋ ಹೇಳಿದವು ಹೇಳೆಂಡು ನಾಲ್ಕೈದು ಕತೆ ಬಯಿಂದು. ಅದಿನ್ನು ಮುಂದಿನ ವರ್ಷಕ್ಕೆ ಆತಷ್ಟೇ ಹೇಳೆಕ್ಕಾಗಿ ಬಂತು.

ಇವಕ್ಕೆಲ್ಲರಿಂಗೂ ಮುಂದಿನ ಸರ್ತಿಗೆ  ಶುಭಹಾರೈಕೆ ಹೇಳುವ- ವಿಜಯಾಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ,ಕೊಡಗಿನಗೌರಮ್ಮ ಕಥಾಸ್ಪರ್ಧೆ.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×