Oppanna.com

ಕಾಸಿನ ಸರ-೨೦೧೮ನೇ ಸಾಲಿನ ಕೊಡಗಿನಗೌರಮ್ಮ  ಪ್ರಶಸ್ತಿ ಪಡೆದ ಕತೆ.

ಬರದೋರು :   ವಿಜಯತ್ತೆ    on   24/09/2018    0 ಒಪ್ಪಂಗೊ

 
ಕಾಸಿನ ಸರ

೨೦೧೮ನೇ ಸಾಲಿನ ಕೊಡಗಿನಗೌರಮ್ಮ  ಪ್ರಶಸ್ತಿ ಪಡೆದ ಕತೆ.

ಲೇಖಿಕೆ-ಶ್ರೀಮತಿ ಅಕ್ಷತಾರಾಜ್ ಪೆರ‍್ಲ.

ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ 2018
ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ 2018

ಕಳುಹಿಸಿದವರು ಕತಾಸ್ಪರ್ದೆಯ ಸಂಚಾಲಕಿ, ವಿಜಯಾಸುಬ್ರಹ್ಮಣ್ಯ

~~~~~~~~~~~~~~~~~~~~~~~~~~~~~~~~~~~~~~

ಬಂದ ನೆಂಟರಿಷ್ಟರೆಲ್ಲಾ ಹೋಗಿ ಚಪ್ಪರ ಖಾಲಿ ಖಾಲಿ ಆತು. ಮಗಂದಿರು ಮಗಳಕ್ಕೋ ಹೇಳಿ ಮನೆಯವರ ಬಿಟ್ಟರೆ ಅಲ್ಲಿ ಮತ್ತೆ ಇದ್ದದು ಶಾಂತಿ ಮಾತ್ರ. ಹೆಸರಿಂಗೆ ಹೆರಣದ್ದು,ಮನೆ ಕೆಲಸದ್ದು ಹೇಳಿ ಆದರುದೇ ಮನೆಯ ಮಗಳಂದ ಹೆಚ್ಚು ಶಾಂತಿ. ಶಾಂತಿ ಒಳ ಒಂದರಿ ಒತ್ತರೆ ಮಾಡೆಕ್ಕು ಮಾರಾಯ್ತಿ,ಹರಗಣ ಎಲ್ಲಾ ತೆಗದು ಸರಿ ಮಾಡುದು ನಿನಗೆ ಬಿಟ್ಟದು ಹೇಳಿಗೊಂಡು ಕೇಶು ಮಾವ ಹೆರಣ ಮಣ್ಚಿಟ್ಟೆಲ್ಲಿ ಉಸ್ಸಪ್ಪಾ ಹೇಳಿಗೊಂಡು ಕೂದವು. ಆತು ಅಣ್ಣ ಆನು ಇಪ್ಪಗ ಎಂತಗೆ ಮಂಡೆಬೆಶಿ ಅಲ್ಲೆಲ್ಲೋ ಕೊಟ್ಟಗೆಯ ಹತ್ತರೆ ಶಾಂತಿಯ ಸ್ವರ ಕೆಮಿಗೆ ಬಿದ್ದತು. ಆತು ಮಾರಾಯ್ತಿ ನೀನು ಮೊದಲು ರಜ ಉಣ್ಣು,ಕೆಲಸ ಏವಗಳೂ ಇಪ್ಪದೇ ಮತ್ತೆ ಹೇಳಿದವು ಕೇಶು ಮಾವ.ಅದು ಶಾಂತಿಯ ಕೆಮಿಗೆ ಬಿದ್ದತೋ ಇಲ್ಲೆಯೋ ಗೊಂತಿಲ್ಲೆ.ಪಾತ್ರೆ ದಡಬಡ ಶಬ್ಧ ಮಾತ್ರ ಕೆಮಿಗೆ ಬಿದ್ದತು. ಇದಕ್ಕೆ ಕೆಲಸ ಇದ್ದರೆ ಸಾಕು,ಹೊಟ್ಟೆಗೆ ತಿಂಬ ನೆಂಪು ನಾವೇ ಮಾಡೆಕ್ಕಷ್ಟೇ,ಹಾಂಗೇ ಅಲ್ಲದಾ ಎನಗೆ,ಶಾರಿಗೆ ಮಗಳಂದ ಹೆಚ್ಚು  ಆದ್ದದು,ಏವ ಜಾತಿ ಆದರೆ ಎಂತ ?ಆ ವಾತ್ಸಲ್ಯ ಹೆಚ್ಚು ಹೇಳಿ ತನ್ನಷ್ಟಕ್ಕೇ ಹೇಳಿಗೊಂಡು ಜಾಲ ತಲೇಂಗೆ ದೃಷ್ಟಿ ನೆಟ್ಟವು ಕೇಶು ಮಾವ.

ಕಾಕೆಗೆ ಮಡುಗಿದ ಬಾಳೆ ಹಾಂಗೇ ಇದ್ದತು. ಏವಗಳೂ ಕಾ….ಕಾ ಹೇಳಿ ಮಡುಗಿದ ಕೊಪ್ಪರ,ಮಾಂಬಳ ತಿಂಬಲೆ ಬಪ್ಪ ಕಾಕೆಗೋ ಈಗ ನಾಲ್ಕು ದಿನಂದ ಶಾರಿಯ ಉತ್ತರ ಕ್ರಿಯೆ ಕಾರ‍್ಯಕ್ರಮ ಸುರು ಆದ ಮತ್ತೆ ನಾಪತ್ತೆ ಆಯ್ದವು. ಹೆರ ಮಡುಗಿದ ಬಲಿ ಬಾಳೆಂದ ಒಂದು ಅಶನ ಆದರುದೇ ಕಾಕೆ ಬಂದು ಹೆರ್ಕಿ ತಿಂದರೆ ಮಾಡಿದ ಕಾರ‍್ಯ ಹೋದವಕ್ಕೆ ತೃಪ್ತಿ ಹೇಳ್ತ ನಂಬಣಿಗೆ ಇದ್ದು. ಹಾಂಗಿಪ್ಪಗ  ಎರಡು ದಿನಂದ ಒಂದರಿ ಆದರುದೇ ಕಾಕೆ ಇತ್ಲಾಗಿ ಬರೆಕ್ಕಾತನ್ನೇ?ಅದೊಂದು ಕಾಕೆ ಮಾತ್ರ ಮೊನ್ನೆಂದ ಹಟ್ಟಿಯ ಮಾಡಿಲ್ಲಿ ಕೂದು ಎನ್ನನ್ನೇ ತಿಂಬ ಹಾಂಗೆ ನೋಡ್ತಾ ಇದ್ದಲ್ಲದೇ ಬಲಿಬಾಳೆಯ ಹತ್ತರೆಯೂ ಸುಳಿತ್ತಿಲ್ಲೆ. ನಾಲ್ಕು ನಾಲ್ಕು ಸರ್ತಿ ಮನೆಗೆ ಸುತ್ತಾ ಹಾರ್ತು,ಅಲ್ಲಿ ಶಾಂತಿ ಪಾತ್ರೆಗಳ ಹತ್ತರೆ ಆ ಕಾಕೆ ಬಂದು ದಡಬಡ ಮಾಡಿಕ್ಕಿ ಹೋವುತ್ತು ಹೇಳಿ ಪರಂಚುದು ಕೆಮಿಗೆ ಬಿದ್ದಿದ್ದತು. ಅಲ್ಲ ಅಷ್ಟು ಹೊಟ್ಟೆಗೆ ಬೇಕು ಹೇಳಿ ಇದ್ದರೆ ಬಲಿಬಾಳೆಯ ಹತ್ತರೆ ಬಪ್ಪದಲ್ಲದಾ?ಕಾಕೆ ಮುಟ್ಟಿದರೆ ಮಾಡಿದ ಕಾರ್ಯ ಸರಿ ಆತು ಹೇಳ್ತ ನೆಮ್ಮದಿ ಅಲ್ಲದಾ ಹೇಳಿ ತನ್ನಷ್ಟಕ್ಕೇ ಕೇಶು ಮಾವ ಹೇಳುವಾಗ ಮತ್ತದೇ ಕಾಕೆ ಕಾ.. ..ಕಾ ಹೇಳಿ ನಾಯಿಗೂಡಿನ ಮೇಲೆ ಕೂದುಗೊಂಡು ಅದರ ಭಾಷೆಲಿ ಮಾವಂಗೆ ಬಯ್ತ ಹಾಂಗೆ ಕೆಕ್ಕರಿಸಿ ನೋಡ್ಲೆ ಸುರು ಮಾಡಿತು.ಹ್ಹ….ಹ್ಹ ಸಂಶಯ ಇಲ್ಲೆ,ಇದು ನೋಡುದು ನೋಡಿದರೆ ಶಾರಿ ದಿನಾ ಕೊಪ್ಪರ ಮಡುಗುವಾಗ  ಕದ್ದು ತಿಂತು ಹೇಳಿ ಪರಂಚಿಗೊಂಡು ಇದ್ದ  ಅದೇ ಕಾಕೆ,ಓ ಕಾಕೆ ನೀನು ಇಲ್ಲಿ ಕೂದು ಬೊಬ್ಬೆ ಹಾಕೆಡ,ಹೋಗು ಆ ಬಲಿ ಬಾಳೆಯ ಒಂದರಿ ಮುಟ್ಟು,ಕದ್ದು ತಿಂಬದೇ ಜನ್ಮ ಆತನ್ನೇ ನಿನ್ನದು.!! ಬೊಬ್ಬೆ ಹಾಕಿದವು ಕೇಶು ಮಾವ. ಮಾವನ ಬೊಬ್ಬೆಗೆ ಮಾವನನ್ನೇ ನೋಡಿದ ಕಾಕೆ ಮತ್ತೆ ಸಂಪಗೆ ಮರಲ್ಲಿ ಹೋಗಿ ಕೂದತು. ತಥ್ ಹಾಳು ಕಾಕೆ,ಅದಕ್ಕೆ ಹೇಳ್ವದು ಕಾಕೆ ಜನ್ಮ ಹೇಳಿ ಹೇಳ್ತಾ  ಎಲೆ ಅಡಕ್ಕೆ ತಟ್ಟೆಗೆ ಕೈ ಹಾಕಿದವು ಮಾವ.

Kaufen Sie Replik-Uhren ಒಳ ಕೋಣೆಲ್ಲಿ ಭಾರಿ ಮಾತುಕತೆ ಮುಗಿಶಿ ಮಾವನ ದೊಡ್ಡ ಮಾಣಿ ಅನಂತ ಅಪ್ಪಯ್ಯನೆದುರು ಬಂದು ನಿಂತ. ಕೇಶು ಮಾವ ನೋಡಿದರುದೇ ಮಾತಾಡದ್ದೇ ಬಲಿಪರ ಏರು ಸ್ವರದ ಭೀಷ್ಮ ವಿಜಯ ಪ್ರಸಂಗದ ಪದ ಹೇಳಿಗೊಂಡು ಎಲೆಗೆ ಸುಣ್ಣ ಉದ್ದಿಗೊಂಡು ಕೂದವು. ಅಪ್ಪಯ್ಯ ನಿಂಗಳಲ್ಲಿ ಮಾತಾಡ್ಲೆ ಇದ್ದತು,ರಜ ಒಳ ಬಂದರೆ ಒಳ್ಳೆದಿದ್ದತು ಹೇಳಿದ ಅನಂತ. ಒಳ ಮಾತಾಡ್ಲೆ ಎಂಥ ಇದ್ದು?ಅಂಥ ಗುಟ್ಟಿನ ವಿಷಯ ಇದ್ದಾ!!ಇಲ್ಲೇ ಮಾತಾಡು ಬಾಮಾವ ಹೇಳಿದವು. ಅಪ್ಪಯ್ಯ ಅಲ್ಲಿ ಶಾಂತಿ ಇದ್ದು,ನಮ್ಮ ಮನೆ ಸುದ್ಧಿ ಹೆರಣವಕ್ಕೆ ಗೊಂತಾಯೆಕ್ಕಾ?ಇನ್ನುದೇ ನಿನ್ನದೇ ಮಾಡೆಡ,ಅಬ್ಬೆ ಹೇಂಗೂ ಹೋತು,ಇನ್ನು ಇಪ್ಪದು  ನೀನೊಬ್ಬ,ರಜ ಹೇಳಿದ ಮಾತು ಕೇಳೆಕ್ಕು ಮಗಳು ಸುಮಾ ಒಳಂದ ದೊಡ್ಡಕ್ಕೆ ಬೊಬ್ಬೆ ಹಾಕಿತು. ಬಾಯಿಲಿ ಎಲೆ ಅಡಕ್ಕೆ ಇದ್ದು,ಅದು ತುಪ್ಪದ್ದೇ ಆನು ಒಳ ಬಾರೆ,ಅಂಥ ತುರ್ತು ಇದ್ದರೆ  ಹೆರ ಬಪ್ಪಲಕ್ಕು,ಶಾಂತಿ ಈ ಮನೇದ್ದೆ,ಅದಕ್ಕೆ ಗೊಂತಿಲ್ಲದ್ದು ಎಂಥ ಇದ್ದು?ಈ ಮನೆ ಹೀಂಗೆ ಇಪ್ಪದು ಅದರಿಂದ ಅಲ್ಲದೇ ವರ್ಷಕ್ಕೊಂದರಿ ಭಾರೀ ಕಷ್ಟಲ್ಲಿ ಬಪ್ಪ ಎನ್ನ ಮಕ್ಕಳ ಕಾರಣಂದ ಅಲ್ಲನ್ನೇ ಅಷ್ಟೇ ವ್ಯಂಗ್ಯವಾಗಿ ಎಲೆ ಅಡಕ್ಕೆ ಮೆಲ್ಲುತ್ತಾ ಹೇಳಿದವು ಮಾವ. ಅಪ್ಪಯ್ಯ ಚುಚ್ಚು ಮಾತು ಬೇಡ,ಎಂಗೊ ಕೆಲಸ ಬಿಟ್ಟು ಈ ತೋಟ ಮನೆ ಹೇಳಿ ಅಡಕ್ಕೆ – ಕಾಯಿ ಹೆರ್ಕಿಗೊಂಡು ಕೂದರೆ ಎಂಗಳ ವಿದ್ಯೆಗೆ ಎಂಥ ಬೆಲೆ ಇದ್ದು?ಅಬ್ಬೆ ಇಲ್ಲದ್ದೇ ಆದ ಮತ್ತೆ ಆದರುದೇ ಸರಿಯಪ್ಪೆ ಹೇಳಿ ಎಂಗೊ ಗ್ರೇಶಿದರೆ ನೀನು ನಿನ್ನ ಬುದ್ಧಿ ಬಿಡೆಕ್ಕನ್ನೇ?ಎಂಗಳೇ ಬತ್ತೆಯಾ ಹೆರ ಹೇಳಿಗೊಂಡು ಮಾವನ ಸಣ್ಣ ಮಾಣಿ ಅವಿನಾಶ ಹೆರ ಬಂದರೆ ಅವನ ಹಿಂದೆ ಮಗಂದಿರ ಹೆಂಡತಿಯಕ್ಕೋ,ಮಗಳು – ಅಳಿಯ ಎಲ್ಲೋರು ಬಂದವು.ಅವಿನಾಶನ ಸಣ್ಣ ಮಗ ಅಜ್ಜಾ ಹೇಳ್ತಾ ಮಾವನ ತೊಡೆ ಮೇಲೆ ಹತ್ತಿಯಪ್ಪಗ ಸಣ್ಣ ಸೊಸೆ  ಶಾಂತಿ ಬಾಲೆನ್ ಪತೊಂದು ಅಂಚಿ ಪೋಲ,ಒಂತೆ ಪೊರ್ತು ಹೇಳಿ ತೊಳದ ಪಾತ್ರೆ ಉದ್ದಿ ಕವುಂಚಿ ಹಾಯ್ಕೊಂಡು ಇದ್ದ ಶಾಂತಿಯ ಹತ್ತರೆ ಹೇಳಿತು. ಭಲೇ!! ಗೆಂಡಂಗೆ ತಕ್ಕ ಹೆಂಡತಿ ಮನಸ್ಸಿಲಿ ನೆಗೆ ಬಂತು ಮಾವಂಗೆ.

ಎಂಥ ವಿಷಯ? ಕೇಶು ಮಾವ ಅನಂತನ ಮೋರೆ ನೋಡಿಗೊಂಡು ಕೇಳಿದವು. ಅಪ್ಪಯ್ಯ ಇನ್ನೆಂತ ಮಾಡ್ತೆ ನೀನು?ಅಬ್ಬೆಯೂ ಹೋತು….ನೀನು ಒಬ್ಬನೇ ಇಲ್ಲಿ ಇರ್ತೆಯಾ? ಅನಂತ ಕೇಳಿದ. ಕೇಶು ಮಾವ  ಇನ್ನೇನು  ಬಾಯಿ ಬಿಡೆಕ್ಕಷ್ಟೇ ಅವನ ಹೆಂಡತಿ ಎಂಗಳಲ್ಲಿಂಗೆ ಬಪ್ಪಲಾವುತ್ತಿತ್ತು ಆದರೆ ಬಾಂಬೆಲಿ ಬಂದು ಮಾಡುದೆಂತರ?ಮಾವಂಗೆ ಭಾಷೆ ಬೇರೆ ಬತ್ತಿಲ್ಲೆ,ಹೊತ್ತು ಹೋಯೆಕ್ಕನ್ನೇ!! ಹೇಳಿತು. ಅದರ ಬೆನ್ನಿಂಗೇ  ಮಾವನ ಕಂಡರೆ ಎನಗೆ ಪ್ರೀತಿ ಆದರೆ ಎಂತ ಮಾಡುದು ಎಂಗಳ ಫ್ಲ್ಯಾಟ್‌ಲಿ ಏಜ್ ಆದವ್ರ ಮನೆಲಿ ತುಂಬಾ ಟೈಮ್ ಕೂರ‍್ಸುಲಾಗ ಹೇಳಿ ಡೈರೆಕ್ಟರ್ ರೂಲ್ಸ್ ಅರ್ಧಂಬರ್ಧ ನಮ್ಮ ಭಾಷೆಲಿ ಹೇಳಿ ಮುಗುಶಿತು ಸಣ್ಣ ಸೊಸೆ. ಮಗಳ ಮೋರೆ ನೋಡಿದವು. ಅಲ್ಲ ಮಾಣಿಯಂಗೊ ಇಪ್ಪಗ ಅಪ್ಪಯ್ಯ ಎನ್ನ ಮನೇಲಿ ಇದ್ದರೆ ಲೋಕ ಎಂತ ಹೇಳುಗು ಅಲ್ಲದಾ? ಅಳಿಯನ ಮೋರೆ ನೋಡಿಗೊಂಡು ಮಗಳು ಹೇಳಿತು. ಅಪ್ಪಪ್ಪು ಅಂವ ತಲೆಯಾಡಿಸಿದ. ಮೂರು ಮೂರು ಸರ್ತಿ ವ್ಯಾಪಾರ ಲಾಸ್ ಹೇಳಿ ಮಾವನ ಮನೇಲಿ ಕೂದ ಅಳಿಯನ ಲೋಕ ಹೊಗಳಿತ್ತೋ?ಕೇಶು ಮಾವನ ಮನಸ್ಸ್ಸಿಲ್ಲಿ ಪ್ರಶ್ನೆ ಹುಟ್ಟಿತು.

ಅಲ್ಲ ಅಪ್ಪಯ್ಯಂಗೆ ಇನ್ನು ಇಲ್ಲಿ ಕಂಪೆನಿ ಆರಿದ್ದವು?ಇಷ್ಟು ಸಮಯ ಅಬ್ಬೆ ಮನುಗಿದಲ್ಲೇ ಇದ್ದರುದೇ ಮಾತಾಡ್ಲೆ ಹೇಳಿ ಜನ ಇದ್ದತು,ಇನ್ನು ಈ ತೋಟದ ಉಸ್ತುವಾರಿ ಎಲ್ಲ ಎಂತಗೆ?ಒಳ್ಳೆ ರೇಟು ಬಂದರೆ ಮಾರುವ ಅಪ್ಪಯ್ಯ ಅವಿನಾಶ ಹೇಳಿದ. ಎಲ್ಲಾ ಮಾರಿಕ್ಕಿ ಆನೆಲ್ಲಿಗೆ ಹೋಪದು? ಮಾವ ಕೇಳಿದವು. ಅದೆಂತಗೆ ಮಂಡೆಬೆಶಿ?ನಿನ್ನ ಹಾಂಗಿಪ್ಪೋರ ಒಳ್ಳೇ ಕಂಪೆನಿ ಸಿಕ್ಕುತ್ತು ಓಲ್ಡೇಜ್ ಹೋಮಿಲಿ,ಜಾಗೆ ಮಾರಿಕ್ಕಿ ನಾಲ್ಕು ಪಾಲು ಮಾಡಿ ಒಂದು ಪಾಲು ನಿನ್ನ ಹೆಸರಿಂಗೆ ಮಡುಗುವ,ಎಂಗಳೂ ಹಬ್ಬ ಹರಿದಿನಕ್ಕೆ ಬತ್ತೆಯಾ ನಿನ್ನ ನೋಡ್ಲೆ ಅನಂತ ಹೇಳಿ ಮುಗುಶಿದ. ಮಾವನ ಬಾಯಿಲಿ ಇದ್ದ ಎಲೆ – ಅಡಕ್ಕೆ ಮಾತು ಮುಗುದಪ್ಪಗ ಸಣ್ಣ ಹೊಡಿ ಆಗಿದ್ದತು. ಸರಿಯಾಗಿ ವಿಷು – ದೀಪಾವಳಿಗೆ ಮನೆಗೆ ಬಾರದ್ದವು ಇನ್ನು ಎನ್ನ ನೋಡ್ಲೆ ಆ ವೃದ್ಧಾಶ್ರಮಕ್ಕೆ  ಬಪ್ಪ ಮಾತು ಹೇಳಿ ಗ್ರೇಶಿ ಕೂದಲ್ಲಿಂದ ಎದ್ದಿಕ್ಕಿ ಜಾಲಿನ ತಲೇಲಿ ಇದ್ದ ನೀರಿನ ಪೈಪ್ಪಿಲಿ ಬಾಯಿ ಮುಕ್ಕುಳಿಸಿಗೊಂಡು ಇಪ್ಪಗ ಅವಿನಾಶನ ಮಗನ ಕರಕ್ಕೊಂಡು ಶಾಂತಿ ಅಲ್ಲಿಗೆ ಬಂತು. ಅಜ್ಜನ ಕಂಡಪ್ಪಗ ಮಾಣಿ ಅಜ್ಜಾ ಎನ್ನ ಉಪ್ಪುಮೂಟೆ ಮಾಡು ಹೇಳಿದ. ಮಾವ ಹೆರ ಪಡಸಾಲೆಲಿದ್ದ ಮಕ್ಕಳ ಮೋರೆ ನೋಡಿ ಉಪ್ಪುಮೂಟೆ ಮಾಡ್ತ ಪ್ರಾಯ ಕಳುದತು ಪುಟ್ಟುಕುಂಞ,ಇನ್ನೆಂತ ಇದ್ದರೂ  ಎನ್ನ ಗೋಣಿಲಿ ತುಂಬಿಸಿ ಗುಜುರಿ ಅಂಗಡಿಗೆ ನಿಂಗ ಹೊತ್ತುಗೊಂಡು ಹೋಗಿ ಹಾಕುವ ಕಾಲ ಹೇಳಿದವು. ಮಾಣಿ ಅರ್ಥ ಆಗದ್ದೇ ಪಿಳಿ-ಪಿಳಿ ಕಣ್ಣು ಬಿಟ್ಟ,ಆದರೆ ಮಕ್ಕೊಗೆ ದ್ವಂದ್ವಾರ್ಥ ಅರ್ಥ ಆತು ಹೇಳಿ ಮೋರೆ ನೋಡುವಾಗ ಗೊಂತಾತು ಮಾವಂಗೆ. ಸೀದಾ ಬಂದು ಮಣ್ಚಿಟ್ಟೆಲಿ ಕೂದವು ಕೇಶು ಮಾವ. ಎಲ್ಲೋರ ಮಾತು ಮುಗುದರೆ ಆನು ಸುರು ಮಾಡ್ತೆ ಹೇಳಿ ಮಕ್ಕಳ ಮೋರೆ ನೋಡಿದವು. ಉತ್ತರ ಇಲ್ಲೆ. ಮತ್ತೆ ಸುರು ಮಾಡಿದವು. ನಿಂಗಳ ಮಾತು ಎಲ್ಲ ಕೇಳಿಸಿಗೊಂಡೆ,ಈಗ ಎನ್ನ ಮಾತು ಹೇಳ್ತೆ. ಆನು ಕುಬೇರ ಎಂತ ಅಲ್ಲ.ನಿಂಗಳ ಅಬ್ಬೆಯ ಮದುವೆ ಆಗಿ ಈ ಮನೆಗೆ ಕರಕ್ಕೊಂಡು ಬಪ್ಪಗ ಇದ್ದದು ಮಡಲ ತಟ್ಟಿ ಗೋಡೆಯ ಸೋಗೆ ಹಾಕಿದ ಮನೆ,ಎರಡೆಕ್ರೆ ಗುಡ್ಡೆ. ಹಿಂದೆ ಮುಂದೆ ಆರೂ ಇಲ್ಲದ್ದ ಎನಗೆ ಅಂಬಗ ಇದ್ದದು ಹೇಳಿರೆ ಶಾರೀ,ಈ ಮನೆ ಮತ್ತೆ ಹಡಿಲು ಬಿದ್ದ ಗುಡ್ಡೆ. ಎರಡೆಕ್ರೆ ಗುಡ್ಡೆಯ ತೋಟ ಮಾಡೆಕ್ಕಾರೆ ಬಂದ ಕಷ್ಟ ಎನಗೆ ಮತ್ತೆ ನಿಂಗಳ ಅಬ್ಬೆಗೆ ಬಿಟ್ಟರೆ ಬೇರೆ ಆರಿಂಗೆ ಗೊಂತಿದ್ದು?ಬೆಗರಲ್ಲ ನೆತ್ತರು ಹರಿಸಿದ್ದೆ ಈ ಮನೆ ಹೀಂಗೆ ಆಯೆಕ್ಕಾರೆ. ಇದಾ ಇದೇ ತೋಟಂದಲೇ ನಿಂಗ ಎಲ್ಲರುದೇ ಆ ಪೇಟೆಲಿ ಇಪ್ಪದು ಗೊಂತಾತೋ??ಹೀಂಗಿಪ್ಪಗ ಈ ಜಾಗೆ ಮನೆ ಮಾರಿ ಆನು ಆ ಪೇಟೆಲಿ ಆರದ್ದೋ ಅಶನಲ್ಲಿ ಇರೆಕ್ಕಾ??ನಿಂಗಳ ಅಬ್ಬೆ ಮನುಗಿದಲ್ಲೇ ಆಗಿ ವರ್ಷ ಐದಾತು. ಈ ಐದು ವರ್ಷಲ್ಲಿ ನಿಂಗ ಎಲ್ಲೋರುದೇ ಎಂಗಳ ಎಷ್ಟು ಸರ್ತಿ ಬಂಯ್ದಿ ನೋಡ್ಲೆ??ಈಗ ಎನ್ನ ನೋಡುವ ಕಾಳಜಿ ಎಂತಗೆ?ಎನ್ನ ಆಸ್ತಿ ಪಾಲು ಮಾಡುವ ಹಕ್ಕು ಎನಗೆ ಅಲ್ಲದ್ದೇ ನಿಂಗೊಗಿಲ್ಲೆ,ಅಬ್ಬೆಯ ಕಾರ್ಯ ಮುಗುದತು,ಮಕ್ಕೊ ಆಗಿ ನಿಂಗಳ ಕರ್ತವ್ಯ ಮುಗುದತು ಯಾವಾಗ ಹೆರಡುದು ಹೇಳಿ ತಿಳಿಸಿದರೆ ಒಳ್ಳೆದು. ಮೋರೆಗೆ ಬಡುದಾಂಗೆ ಹೇಳಿದವು ಕೇಶುಮಾವ.  ಅಪ್ಪಯ್ಯ ಇಷ್ಟು ಹಠ ಒಳ್ಳೆದಲ್ಲ,ನಾಳೆ ನಿನ್ನ ಕೈಕಾಲು ಬಿದ್ದರೆ ನೋಡುದಾರು? ಅನಂತನ ಪ್ರಶ್ನೆಗೆ ಶಾರಿಯ ನೋಡಿದ್ದಾರು?ಶಾಂತಿ ಅಲ್ಲದಾ?ಎನಗೆ ಶಾಂತಿ ಮಗಳ ಹಾಂಗೆ ಆಯ್ದು,ಅಂಬಗ  ಅದರ ಹಾಂಗಿಪ್ಪ ಮಗ ಸಿಕ್ಕುತ್ತನಾ ಹೇಳಿ ನೋಡಿದರಾತು ಮಾವ ಹೇಳಿದವು. ಸೊಸೆಯಕ್ಕೊಳ ಮೋರೆ ಇಷ್ಟುದ್ದ ಆತು. ಅಷ್ಟಪ್ಪಗ ಅಳಿಯ ಮಗಳ ಕೆಮಿಲಿ ಎಂಥದ್ದೋ ಹೇಳಿದ. ಮಗಳು ಆತು ನೀನು ಇಲ್ಲೇ ಇರು ,ಹೇಂಗೂ ಶಾಂತಿ ಇದ್ದನ್ನೇ!ನಿನ್ನ ನೋಡ್ಲೆ ಹೇಳಿ ಇಲ್ಲಿಗೆ ಅಷ್ಟು ದೂರಂದ ಬಪ್ಪಲೆ ಪುರ್ಸೊತ್ತು ಆರಿಂಗಿದ್ದು??ಎಂಗೊ ನಾಳೆ ಉದಿಯಪ್ಪಗ ಹೆರಡ್ತೆಯಾ,ಆದರೆ ಎಂಗೊಗೆ ಅಬ್ಬೆಯ ವಸ್ತ್ರ ಮತ್ತೆ ಆ ಕಾಸಿನ ಸರಲ್ಲಿ ಸಮಪಾಲು ಮಾಡಿಕೊಡು ಮಗಳು ಹೇಳಿತು. ಮಗಳ ಬಾಯಿಂದ ಕಾಸಿನ ಸರ ಹೇಳುದರ ಕೇಳಿ ಮಾವನ ಕಣ್ಣಿಂದ ನೀರು ಬಂತು ಅರ್ಧಾಂಗಿಯ ನೆನಪಿಲಿ. ಅದೆಲ್ಲ ಮತ್ತೆ ನೋಡಿಗೊಂಬ ಬೈಸಾರಿ ಆಗಲಿ. ಎನಗೆ ಬಚ್ಚಿದ್ದು ಅರ್ಧ ಗಂಟೆ ತಲೆ ಅಡ್ಡ ಹಾಕುತ್ತೆ,ಗಂಟೆ ಮೂರಾತು ಹೇಳಿ ಆರ ಮೋರೆಯನ್ನೂ ನೋಡದ್ದೇ ಕೈಲಿದ್ದ ಬೈರಾಸಿಲಿ ಮೋರೆ ಮುಚ್ಚಿ ಮನುಗುಗಿದವು ಕೇಶುಮಾವ.

ಮೋರೆಯ ವಸ್ತ್ರಲ್ಲಿ ಮುಚ್ಚಿದರೂ ಮನಸ್ಸು ಆ ದಿನಗಳ ನೆಂಪಿಂಗೆ ಹೋತು. ನಲ್ವತ್ತು ವರ್ಷಣ ಹಳೇ ಘಟನೆಗೋ. ಕೇಶವ ರಾಯರು ಜವ್ವನಿಗ. ಸಣ್ಣ ಇಪ್ಪಗಳೇ ಅಬ್ಬೆಪ್ಪ ಇಲ್ಲದ್ದೇ ಆರೋ ಅತ್ತೆ ಹೇಳುವ ಒಂದು ಹೆಮ್ಮಕ್ಕೋ ಸಾಂಕಿ ದೊಡ್ಡ ಮಾಡಿದರುದೇ ಮುಂದೆ ಅದುದೇ ಕಣ್ಣು ಮುಚ್ಚಿಯಪ್ಪಗ ಒಂಟಿ ಬಾಳು ಕೇಶವಂದು. ಮದುವೆಯ ಪ್ರಾಯಕ್ಕೆ ಬಂದ ಮಾಣಿಗೆ ಮದುವೆ ಬೇಕಾರೂ ಮಾಡ್ಸುವವರಾರು??ಆಸ್ತಿ ಬದುಕು ಹೇಳಿ ಇದ್ದದು ಗುಡ್ಡೆ ಮತ್ತೆ ಸೋಗೆಯ ಕೊಟ್ಟಗೆ. ಆದರೂ ಕೂಸು ಹುಡುಕುಲೇ ಕೇಶವನೇ ಹೆರಟ. ಅಂಬಗ ಈಗಣ ಹಾಂಗೆ ಅಲ್ಲ. ಮನೆ ತುಂಬಾ ಕೂಸುಗೊ ಇದ್ದ ಕಾಲ. ಒಂದು ಕೂಸಿಂಗೆ ಮದುವೆ ಅಪ್ಪದು ಹೇಳಿರೆ ದೊಡ್ಡ ಸಾಹಸ. ಅಲ್ಲಿ ಇಲ್ಲಿ ಸುತ್ತಿ ಸುತ್ತಿ ಅಖೇರಿಗೆ ಶಾರದೆ ಸಿಕ್ಕಿತು. ಅಪ್ಪನ ಮನೇಲಿ ಆಸ್ತಿ ಧಾರಾಳ ಇದ್ದರುದೇ ಒಂದು ಕೂಸಿಂಗೆ ಕೊಟ್ಟರೆ ಬಾಕಿದ್ದವಕ್ಕೆ ಎಂತ ಮಾಡುದು ಹೇಳ್ತ ಜಿಪುಣ ಶಾರದೆಯ ಅಪ್ಪ. ಆರು ಕೂಸುಗಳಲ್ಲಿ ಇದು ಎರಡನೇ ಕೂಸು. ಬಂದ ಯೇವ ಸಂಬಂಧವೂ  ಜಾತಕ ಹೊಂದಿಕೆಯಾಗದ್ದೇ ಪ್ರಾಯ ಏರಿಗೊಂಡು ಹೋಪಗ  ಮನೇಲಿ ಶಾರದೆಗೆ ಪಿರಿಪಿರಿ ಸುರುವಾಗಿದ್ದತು. ಕೇಶವಂಗೆ ಸುರುವಿಂಗೆ ಕೂಸಿನ ನೋಡುವಾಗ ಬೇಡ ಹೇಳಿ ಕಂಡತು. ಕೇಶವ ಬೆಣ್ಣೆಯ ಹಾಂಗಿಪ್ಪ ಮಾಣಿ ಆದರೆ ಶಾರದೆ ಅವನ ತಲೆ ಕೂದಲಿಂದ ರಜ್ಜ  ಬೆಳಿ. ಬೇಡ ಹೇಳಿ ಹೋದರುದೇ ಅದರ ಕಷ್ಟ ಬೇರೆ ಮೂಲಂದ  ತಿಳುದು ಮದುವೆಗೆ ಅಸ್ತು ಹೇಳಿದ. ಶಾರದೆಯ ಮನೆಯವಕ್ಕೂ ಇದರ ಮದುವೆ ಆದರೆ ಸಾಕಿದ್ದತು. ಅಂತೂ ಶುಭ ಮುಹೂರ್ತಲ್ಲಿ ಕೈ ಹಿಡುದು ಅದೇ ಸೋಗೆ ಕೊಟ್ಟಗೆಗೆ ಹೆಂಡತಿಯ ಕರಕ್ಕೊಂಡು ಬಂದ. ಕೇಶವಂಗೆ ಸಮಸ್ಯೆಯ ಆಳ ಗೊಂತಾದ್ದೇ ಅಂಬಗ. ಅಷ್ಟನ್ನಾರ ಬ್ರಾಹ್ಮಣಾರ್ಥ,ಕೈನ್ನೀರು ಹೇಳಿ ಹೋಯ್ಕೊಂಡು ಅವನ ಒಬ್ಬನ ಜೀವನ ಕಷ್ಟ ಇತ್ತಿಲ್ಲೆ ಆದರೆ ಈಗ ಸಂಸಾರ ಇದ್ದತು. ಸುರುವಿಂಗೆ ಶಾರದೆಯ ಅಪ್ಪನ ಮನೆಂದ ಅಷ್ಟಿಷ್ಟು ಬಂದರುದೇ  ಕೇಶವನ ಸ್ವಾಭಿಮಾನ ಒಪ್ಪಿದ್ದಿಲೆ ಅದಕ್ಕೆ. ಆರಾರದ್ದೋ ಕೈ ಕಾಲು ಹಿಡುದು ಗುಡ್ಡೆಯ ಸಮ ಮಾಡಿ ಅಡಕ್ಕೆ ಸೆಸಿ ನೆಟ್ಟವು. ಉದಿಯಪ್ಪಗ ಎದ್ದು ಶಾರದೆ ಬಾವಿಂದ ನೀರೆಳದು ಕೊಟ್ಟರೆ ಕೇಶವ ಸೆಸಿಗೊಕ್ಕೆ ನೀರೆರವದು,ಕೇಶವ ಜೆಂಬರ ಹೇಳಿ ಹೋದರೆ ಶಾರದೆ ಒಂದೇ ನೀರೆಳದು ಹಾಯ್ಕೊಂಡಿತ್ತು. ಒಂದು ಘಳಿಗೆ ಶಾರದೆ ಸುಮ್ಮನೆ ಕೂರ. ಬೇಸಗೆಲಿ ಹಪ್ಪಳ,ಮಾಂಬಳ,ಸಂಡಗೆ ಹೇಳಿ ಮಾಡಿ ಮಾರಿ ಹಂಹಾಂಗೆ ಹೀಂಗೆ ಕಳಕ್ಕೊಂಡು ಇದ್ದ ದಿನ ನೆಮ್ಮದಿ ಕಂಡದು ತೋಟದ ಫಸಲು ಬಪ್ಪಲೆ ಸುರುವಾದ ಮತ್ತೆ.ಭೂಮಿಯ ಫಸಲು,ಸಂಸಾರದ ಉಸುಲು ಒಟ್ಟೊಟ್ಟಿಂಗೇ ಆಗಿ ದೊಡ್ಡ್ಡ ಮಾಣಿ ಅನಂತನೂ ಹುಟ್ಟಿದ. ನಂತ್ರಣ ಜೀವನ  ಸುಖ ಅಲ್ಲದ್ದರುದೇ ಮೊದಲಣ ಕಷ್ಟ ಇತ್ತಿಲ್ಲೆ.ಅವಿನಾಶ,ಮಗಳು ಎಲ್ಲರೂ ಬಪ್ಪ ಹೊತ್ತಿಂಗೆ ಹತ್ರಣ ಸುಬ್ಬಣ್ಣನ ತೋಟವನ್ನುದೇ ಸಾಲ ಮಾಡಿ ಮಾಡಿಗೊಂಡವು ಕೇಶುಮಾವ. ಕಾಲ ಉರುಳಿಗೊಂಡು ಇದ್ದತು. ಕೇಶವ ಕೇಶುಮಾವ ಆದರೆ ಶಾರದೆ ಕೇಶುಮಾವನ ಪ್ರೀತಿಯ ಶಾರೀ. ಶಾರದೆ ಕೇಶು ಮಾವನ ಮಾತು ತಪ್ಪಿ ನಡೆದ ಹೆಮ್ಮಕ್ಕೋ ಅಲ್ಲ.ಯಾವುದರಲ್ಲಿಯುದೇ ಆಸೆ ಇಲ್ಲದ್ದ ಶಾರದೆಗೆ ಇದ್ದ ಆಸೆ ಒಂದೇ ಅದುವೇ ಜೀವನಲ್ಲಿ ಒಂದರಿ ಆದರುದೇ ಕಾಸಿನ ಸರ ಹಾಯೆಕ್ಕು,ಅದರ ಹಾಕಿ ಒಂದರಿ ಕನ್ನಟಿಯೆದುರು ನಿಲ್ಲೆಕ್ಕು ಹೇಳ್ವದು. ಪಾಪ ಕೇಶುಮಾವ ಮದುವೆಗೆ ನೂಲಿಲ್ಲಿ ಕಟ್ಟಿದ ತಾಳಿಗೇ ಒಂದೆಳೆ ಚಿನ್ನ ಕಟ್ಟಿಸಿದ್ದು  ಅವನ ಮಗಳ ಮದುವೆಗಪ್ಪಗ .ಇನ್ನು ಕಾಸಿನ ಸರ ಕನಸಿನ ಮಾತು. ಮಕ್ಕಳ ವಿದ್ಯೆ,ಮಗಳ ಮದುವೆ ಎಲ್ಲವೂ ಆತು. ಮಕ್ಕೊ ಕಲ್ತು ಗೂಡು ಬಿಟ್ಟ ಹಕ್ಕಿಗೊ ಆದವು. ಅನಂತ ದೂರದ ಬಾಂಬೆಲಿ ಯಾವುದೋ ಕಂಪೆನಿ ಕೆಲಸ ಹೇಳಿ ಹೋದರೆ ಅವಿನಾಶ  ಬೆಂಗ್ಳೂರಿಲಿ ಕೆಲಸ ಮಾಡಿಗೊಂಡು ಅಲ್ಲಿಯೇ ಮದುವೆ ಆದ,ಇನ್ನು ಕೊಟ್ಟ ಮಗಳು!! ಅಳಿಯನ ವ್ಯಾಪಾರ ಎಲ್ಲಿಯೂ ನೆಲೆ ಹೇಳಿ ಕಾಣದ್ದೇ ಊರೂರು ಅಲೆದಾಟ. ಮಗಳಿಂಗೂ ಅದೇ ಖುಷಿ. ಮಕ್ಕೊ ಊರಿಂಗೆ ಬಪ್ಪದು ಅಪರೂಪ ಆದರುದೇ ಬಂದರೆ ಶಾರದೆಗೆ ಪುರ್ಸೊತ್ತಿಲ್ಲೆ. ಮಕ್ಕೊ ಹೇಳಿದ ಚಾಕ್ರಿ ಮಾಡಿ ಇನ್ನುದೇ ತಲೇಲಿ ಕೂರ‍್ಸೆಡ ಹೇಳಿ ಮಾವ ಬಯ್ದರೂ ಕೆಮಿಗೆ ಹಾಯ್ಕೊಂಡು ಇತ್ತಿಲ್ಲೆ. ಮಗಳು,ಸೊಸೆ ಹೇಳಿ ಎಲ್ಲರ ಬಾಣಂತನ ಮಾಡಿ ಸೋಗೆ ಮಾಡಿನ ಕೊಟ್ಟಗೆಗೆ ಶಾರದೆಯಾಗಿ ಬಂದು ಓಡಿನ ಮಾಡಿನ ಶಾರದತ್ತೆ ಆದರುದೇ ಇದ್ದ ಕಾಸಿನ ಸರದ ಆಸೆ ಹಾಂಗೇ ಇದ್ದತು ಒಳ ಸಾಸಮೆ ಕರಡಿಗೆಲಿ ಆರಿಂಗೂ ಕಾಣದ್ದೇ ಕಾಸಿನ ಸರದ ಕಾಸು ಜೋಡಣೆ ಆಯ್ಕೊಂಡು!!

ದೀಪಾವಳಿಗೆ ಒಂದು ವಾರ ಇದ್ದತು. ಒಂದು ದಿನ ಮಧ್ಯಾಹ್ನ ಉಂಡಿಕ್ಕಿ ಹೆರ ಕೂದ ಮಾವನ ಎದುರು ಅತ್ತೆ ಸಾಸಮೆ ಕರಡಿಗೆ ತಪ್ಪಗ ಎಂತದೇ??ಎನ್ನ ದೃಷ್ಟಿ ಈಗ ತೆಗೆಯೆಡ ಮಾರಾಯ್ತಿ ಮಾವ ನೆಗೆ ಮಾಡಿದವು. ಅತ್ತೆ ಮಾತಾಡದ್ದೇ ಅದರಿರೊಳ ಇಪ್ಪ ಪೈಸೆ ಮಾವನ ಕೈಲಿ ಕೊಟ್ಟಪ್ಪಗ ಎಲ್ಲಿಂದ ಇದು??ಇಷ್ಟು ಪೈಸೆ??ಮಾವನ ಒರಕ್ಕು ಹಾರಿತುತ್ತು. ಮೂವತ್ತು ವರ್ಷಂದ ಒಳುದ ಹಪ್ಪಳ,ಮಾಂಬಳ ಇದು ಅತ್ತೆ ಹೇಳಿದವು. ಈಗ ಎಂತಗೆ!!ಬ್ಯಾಂಕಿಲಿ ಹಾಕೆಕ್ಕಾ? ಮಾವನ ಮಾತಿಂಗೆ ಆನು ಪೈಸೆ ಬ್ಯಾಂಕಿಲಿ ಕಟ್ಟಿ ಮಡುಗಿ ಹೋಪಗ ಹಿಡ್ಕೊಂಡು ಹೋವುತ್ತಿಲ್ಲೆ,ಇದಕ್ಕೆ ಪೈಸೆ ಸೇರಿಸಿ ಎನಗೊಂದು ಕಾಸಿನ ಸರ ದೀಪಾವಳಿಗೆ ಬೇಕು ಅತ್ತೆ ಹೇಳಿದವು. ಅಲ್ಲ ಮಾರಾಯ್ತಿ ನೀನು ಹೋದ ಮತ್ತೆ ನಿನ್ನ ಬಂಗಾರಿಂಗೆ ಹೇಳಿ ಮಕ್ಕೊ ಯುದ್ಧಕ್ಕೆ ನಿಲ್ಲವು ಹೇಳಿ ಕೊಶಿ ಇತ್ತು ಆದರೆ ನೀನು ನೋಡಿರೆ!! ಮಾವನ ಮಾತಿಂಗೆ ಅದೆಲ್ಲ ಮತ್ತಣದ್ದು,ಹಾಂಗೆ ಯುದ್ಧ ಆಗದ್ದಾಂಗೆ ಆನು ಸಾಯುವಾಗ ವ್ಯವಸ್ಥೆ ಮಾಡ್ತೆ,ಆದರೆ ಆನು ಸಾಯೆಕ್ಕಾರೆ ಒಂದರಿ ಕಾಸಿನ ಸರ ಹಾಯೆಕ್ಕು ಮಕ್ಕಳ ಹಾಂಗೆ ಹಠ ಹಿಡುದವು ಅತ್ತೆ. ಯೇವಗಳೂ ಎಂತದ್ದೂ ಕೇಳದ್ದ ಅತ್ತೆಗೆ ಇಲ್ಲೆ ಹೇಳದ್ದೇ ಅತ್ತೆ ಕೊಟ್ಟ ಪೈಸೆಗೆ ಇದ್ದ ಒಂದಷ್ಟು ಹಳೆ ಅಡಕ್ಕೆ,ಗೆನಮೆಣಸು ಮಾರಿ ಹತ್ತರತ್ತರೆ ಹತ್ತು ಪವನ್ನಿನ ಕಾಸಿನ ಸರ ತಂದೇ ಕೊಟ್ಟವು ಮಾವ. ಪಾಪ ಅತ್ತೆ ಅಂದು ಇರುಳು ಒರಗಿದ್ದಿಲ್ಲೆ.ಮಕ್ಕೊಗೆ ಫೋನು ಮಾಡಿ ಹೇಳಿತು. ಕಾಸಿನ ಸರ ನೋಡ್ಲೆ ಹೇಳಿಯೇ ಸೊಸೆಯಕ್ಕೋ,ಮಗಳು ಹಬ್ಬಕ್ಕೆ ಬಪ್ಪ ಬುಲಾವ್ ಬಂತು. ಎಲ್ಲಾ ನೋಡಿಗೊಂಡು ಇದ್ದ ಮಾವಂಗೆ ಎಂಥದ್ದೋ ಅಶುಭ ಸೂಚನೆ ಹೇಳಿ ಕಂಡರುದೇ ಶಾರಿಯ ಕೊಶಿಗೆ ತಲೆಬಾಗಿದವು.

ದೀಪಾವಳಿಗೆ ಮಕ್ಕೊ ಎಲ್ಲರುದೇ ಬಂದವು. ಅಬ್ಬೆಯ ಕೊರಳಿಲಿ ಇದ್ದ ಕಾಸಿನ ಸರ ಒಬ್ಬೊಬ್ಬನ ಮನಸ್ಸಿಲಿ ಒಂದೊಂದು ಭಾವನೆ ಹುಟ್ಸಿತು. ಮಗಳು ಅಬ್ಬೆ ಚೆಂದ ಇದ್ದು ಸರ,ಮಗಳಿಂಗೆ ಹೇಳಿ ಇಷ್ಠಷ್ಟಾದರುದೇ ಮಾಡಿದೆ ಹೇಳಿರೆ ಅತ್ತೆ ನಿಂಗೊ ಎಂಗೊಗೆ ಅಬ್ಬೆ ಇದ್ದ ಹಾಂಗೆ,ಪುಳ್ಳಿಯಕ್ಕೊಗೆ ಹೇಳಿ ಮಾಡ್ಸಿದ್ದು ಒಳ್ಳೆದಾತು ಸೊಸೆಯಕ್ಕೊ ಹೇಳಿದವು.ಇಷ್ಟನ್ನಾರ ಚಾಕ್ರಿ ಮಾಡಿಗೊಂಡು ಇತ್ತಿದ್ದ ಶಾರಿ ಈ ಸರ್ತಿ ರಾಣಿಯ ಹಾಂಗೆ ಕೂದತು, ಕಾರಣ ಕಾಸಿನ ಸರ!!

ಎಣ್ಣೆ ಹಬ್ಬದ ದಿನ ಬಂತು.ಮಿಂದಿಕ್ಕಿ ಹೊಸ ಸೀರೆ ಅಸುತ್ತಿದ ಅತ್ತೆ ದೇವರ ಮಂಟಪಲ್ಲಿ ಕಾಸಿನ ಸರ ಮಡುಗಿ ಮಾವನ ಕೈಲಿ ಕೊಟ್ಟು ಕಟ್ಟಿ ಹೇಳಿ ಹೇಳಿತು.ಮಾವ ಕಟ್ಟುವಾಗ ಮದಿಮ್ಮಾಳ ಹಾಂಗೆ ನಾಚಿದ ಅತ್ತೆ ಕನ್ನಟಿಯೆದುರು ನಿಂದತು ಅಷ್ಟೇ!!!!!!ಅಲ್ಲಿಯೇ ಬಿದ್ದ ಅತ್ತೆ ಮತ್ತೆ ಎದ್ದಿದೇ ಇಲ್ಲೆ. ಎಷ್ಟು ಮದ್ದು ಮಾಡಿದರುದೇ ಶರೀರದ ಒಂದು ಹೊಡೆ ಸ್ವಾಧೀನ ಕಳಕ್ಕೊಂಡು ಕೊರಡು ಕಟ್ಟಿತು. ಅಂದು ಹಾಕಿದ ಆ ಕಾಸಿನ ಸರ ಮತ್ತೆ ಅತ್ತೆಯ ಕೊರಳಿಲ್ಲಿ ನೆಗೆ ಮಾಡಿದ್ದಿಲ್ಲೆ.ಆದರೆ ಅತ್ತೆಯ ದಿಂಬಿನ ಅಡಿಲ್ಲಿ ಮಾತಾಡದ್ದೇ ಸುಮ್ಮನಿದ್ದತು. ಒಂದಿಷ್ಟು ದಿನ ಊರಿಲ್ಲಿ ಇದ್ದ ಮಕ್ಕೊ ಹೆರಟು ನಿಂದವು. ಕಾಸಿನ ಸರದ ಆಸೆಯ ಕಣ್ಣಿಂಗೆ ಅರಸಿ ಆದ ಶಾರಿ ಮೂಲೆಲಿ ಬಿದ್ದಪ್ಪಗ ಸವಕಲು ನಾಣ್ಯ ಆತು. ಅತ್ತೆಯ ಚಾಕ್ರಿ ಆ ಪ್ರಾಯಲ್ಲಿ ಮಾವಂಗೆ ಕಷ್ಟ.ಚಿಂತೆಗೆ ಬಿದ್ದ ಮಾವನ ಸಹಾಯಕ್ಕೆ ನಿಂದದು ಅಡಕ್ಕೆ ಕೊಯ್ವಲೆ ಬಂದುಗೊಂಡು ಇದ್ದ ಚೋಮನ ಮಗಳು ಶಾಂತಿ. ಮಾವನ ಮಗಳ ಪ್ರಾಯ ಆದರುದೇ ಮದುವೆ ಆಗದ್ದೇ ಹಾಂಗೇ ಇದ್ದತು. ಚೋಮನೂ  ಸತ್ತ ಮತ್ತೆ ಅದರ ಮನೆಗೆ ಕರಕ್ಕೊಂಡು ಬಂದವು ಮಾವ. ಪಾಪದ ಹೆಣ್ಣು.ಒಂದಿಷ್ಟು ಅದರ ಮದುವೆಗೆ ಹೇಳಿ ಪೈಸೆ ಬ್ಯಾಂಕಿಲಿ ಜಮೆ ಮಾಡಿಗೊಂಡು ಅದರ ಖರ್ಚು ನೋಡುವ ಕೆಲಸ ಮಾವಂದು. ಅತ್ತೆಯ ಹೇಲುಚ್ಚು ತೆಗದು ಮಗಳಂದ ಹೆಚ್ಚು ಹತ್ತರೆ ಆತದು ಅತ್ತೆಗೆ.

ಅತ್ತೆ ಮನುಗಿದಲ್ಲೇ ಆಗಿ ವರ್ಷ ಐದು ಕಳುದತು.ಶಾಂತಿಗೆ ಅದೇ ಊರಿನ ಗೆಂಡು ನೋಡಿದವು ಮಾವ. ಅಬ್ಬೆಯ ಹೇಲುಚ್ಚು ವಾಸನೆ,ಆ ನರಕ ಎಲ್ಲ ನೋಡ್ಲೆ ಆವುತ್ತಿಲ್ಲೆ ಹೇಳಿ ಮಕ್ಕೊ ಬಪ್ಪದೇ ಅಪರೂಪ ಆತು. ಇಡೀ ಶರೀರಲ್ಲಿ ಎಡ ಕೈ ಮಾತ್ರ ಅತ್ತೆ ಹೇಳಿಂದ ಹಾಂಗೆ ಕೇಳಿಗೊಂಡು ಇದ್ದತು. ಮನುಗಿದಲ್ಲೇ ಆದ ಸ್ಥಿತಿಗೆ ಕಣ್ಣಿಲಿ ಹನಿ ಉದುರಿಸಿಗೊಂಡು ಇದ್ದತು ಅತ್ತೆ. ಒಂದೊಂದರಿ ಕೈಸನ್ನೆಲಿ ಫೋನು ಬೈಂದ ಹೇಳಿ ಸುರುವಿಂಗೆ ಕೇಳಿಗೊಂಡು ಇಪ್ಪಗ ಬಾರದ್ದರುದೇ ಬೈಂದು ಹೇಳಿ ತಲೆಯಾಡಿಸಿಗೊಂಡು ಇತ್ತಿದ್ದವು ಮಾವ. ಮಾವ ಸುಳ್ಳು ಹೇಳಿ ಸಮಾಧಾನ ಮಾಡುದು ಅತ್ತೆಗೆ ಗೊಂತಾಗಿರೆಕ್ಕು ನಂತ್ರ ಕೇಳುದೇ ಬಿಟ್ಟವು.

ಉದಿಯಪ್ಪಗ ಮೀಶಿಕ್ಕಿ ತಂದು ಮನುಗಿಸಿದ ಶಾಂತಿ ತಿಂಡಿ ತಿನುಸುಲೆ ಎಷ್ಟು ದಿನಿಗೇಳಿದರುದೇ ಅತ್ತೆಯ ಸದ್ಧಿಲ್ಲೆ. ಹೆದರಿ ಹೆರ ಓಡಿ ಬಂದು ಮಾವನ ಕೆಮಿಗೆ ಹಾಕಿತು. ಡಾಕ್ಟ್ರು ಬಂದು ನೋಡ್ವಗ ಅತ್ತೆ ಮಾವನನ್ನೇ ಬಿಟ್ಟಿಕ್ಕಿ ಹೋಗಿತ್ತಿದ್ದವು. ಆದರೆ ಮಾವಂಗೆ ಸೋಜಿಗ ಆದ್ದು ಹೇಳಿರೆ ದಿಂಬಿನಡಿಲಿ ಇದ್ದ ಕಾಸಿನ ಸರ ಈಗ ಅಲ್ಲಿ ಇತ್ತಿದ್ದಿಲ್ಲೆ!!!!ಅಲ್ಲಿಲ್ಲಿ ಹುಡುಕಿಯಪ್ಪಗ ಒಂದು ಸಣ್ಣ ವಸ್ತ್ರದ ಸಂಚಿಲ್ಲಿ ಎಂತದೋ ಕಾಗದಲ್ಲಿ ಬರದು ಸುರುಟಿ ಅದರೊಳ ಮಡುಗಿತ್ತದ್ದವು,ಕಾರ್ಯ ಮುಗಿಯಲಿ ಹೇಳಿ ಮಾವನೂ ಬಿಡಿಸಿ ನೋಡಿದ್ದವಿಲ್ಲೆ.

ಅಣ್ಣ ಬೇಲೆ ಮುಗೀಂಡ್,ನನ ದಾದ ಮಲ್ಪೊಡು? ಸ್ವರ ಕೇಳಿ ಈ ಲೋಕಕ್ಕೆ ಜಾರಿದವು ಮಾವ. ಮೋರೆಂದ ವಸ್ತ್ರ ತೆಗದರೆ ಶಾಂತಿ ಇದ್ದತು. ಸಣ್ಣಸೊಸೆ ಚಾಯ ತಂದು ಮಡುಗಿತು. ಗಂಟೆ ಐದಾಗಿದ್ದತು. ಎಲ್ಲರನ್ನೂ ಬಪ್ಪಲೆ ಹೇಳು ಸೊಸೆಯತ್ತರೆ ಹೇಳಿ ಅಬ್ಬ್ಬಿಕಟ್ಟೆಲಿ ಮೋರೆ ತೊಳೆದು ಆ ಸಣ್ಣ ಸಂಚಿ ಹೆರ ತಂದು ಕೂದವು. ಎಲ್ಲರ ಕಣ್ಣು ಮಾವನ ಸಂಚಿಯ ಮೇಲೆ ಇದ್ದರೆ ಶಾಂತಿ ಅದರದ್ದೇ ಲೋಕದಲ್ಲಿ ಇದ್ದತು. ಸಂಚಿಲಿದ್ದ ಕಾಸಿನ ಸರ ನೆಲಕ್ಕಲ್ಲಿ ಇಟ್ಟ ಮಾವ ಒಟ್ಟಿಂಗಿದ್ದ ಚೀಟಿ ಓದುಲೆ ಸುರು ಮಾಡಿದವು.

ಪ್ರೀತಿಯಿಂದ,

ಎನ್ನ ಜೀವನಲ್ಲಿ ಆನು ಆಸೆ ಪಟ್ಟದು ಈ ಕಾಸಿನ ಸರಕ್ಕೆ ಮಾತ್ರ. ಇದಕ್ಕೆ ಬೇಕಾಗಿ ಹೊಟ್ಟೆ ಬಟ್ಟೆ ಕಟ್ಟಿ ಪೈಸೆ ಪೈಸೆ ಕೂಡಿಸಿ ಮಡುಗಿದೆ. ಎನ್ನ ಆಸೆ ಕೈಗೂಡಿತು ಆದರೆ ಹಾಕಿದ್ದು ಒಂದರಿ ಮಾತ್ರ. ಎನ್ನ ಕಷ್ಟದ ಈ ಉಡುಗೊರೆ ಕಷ್ಟ ಬಂದವರ ಸೊತ್ತು. ಇಷ್ಟು ವರ್ಷ ಹಗಲು ರಾತ್ರಿ ಎನ್ನ ಚಾಕ್ರಿ ಮಾಡಿದ ಶಾಂತಿಯ ಕೊರಳಿಂಗೆ ಈ ಸರ ಸೇರೆಕ್ಕು, ಇದುವೇ ಎನ್ನ ಜೀವನಲ್ಲಿ ಕಾಸಿನ ಸರದ ಮತ್ತೊಂದು ಆಸೆ.

ಇಂತೀ ಶಾರದೆ

ಕಾಗದ ಓದಿ ಮುಗಿಸಿದವು ಮಾವ. ಮಕ್ಕಳ ಮೋರೆ ಕಪ್ಪಾತು. ನೆಲಲ್ಲಿ ಮಡುಗಿದ ಕಾಸಿನ ಸರ ತೆಗದು ಶಾಂತಿಯ ಕೈಲಿ ಮಡುಗಿದವು. ಶಾಂತಿಯ ಕೈ ನಡುಗಿತು. ಬೊಡ್ಚಿ ಅಣ್ಣೆರೇ…. ಶಾಂತಿ ಹೇಳಿತು. ಪಾಡ್ಲ ಕೆಕ್ಕಿಲ್‌ಗ್ ಕಣ್ಣಲ್ಲೇ ಜೋರು ಮಾಡಿದವು ಮಾವ. ಮಾವನ ಮಾತಿಂಗೆ ತಲೆಬಾಗಿ ಕೊರಳಿಂಗೆ ಹಾಕಿ ಜಾಲಿಂಗೆ ಇಳುದತು ಶಾಂತಿ. ಮೂರು ದಿನಂದ ಬಲಿಬಾಳೆಯ ಹತ್ತರೆಯೂ ಬಾರದ್ದ ಅದೇ ಸಂಪಗೆ ಮರದ ಮೇಲಣ ಕಾಕೆ ಈಗ ಬಲಿಬಾಳೆಯ ವಡೆಯ ಕುಕ್ಕಿ ತಿಂಬಲೆ ಸುರು ಮಾಡಿತು!! ಕಾಸಿನ ಸರ ಶಾಂತಿಯ ಕೊರಳಿಂಗೆ ಬಿದ್ದದೇ ಮಕ್ಕೊ ಒಳಂದ ಹೆರಡುವ ಗೌಜಿ ಕೇಳಿತು.ಕೇಶು ಮಾವ ಕರ್ಣಾವಸಾನದ ಅಖೇರಿಯಣ ಪದ ಹೇಳಿಗೊಂಡು ಕೂದಲ್ಲಿಂದ ಎದ್ದಿಕ್ಕಿ ಹಟ್ಟಿಯತ್ತರೆ ಹೋದವು. ಶಾರದೆ ಕೊಟ್ಟ ಮಾತಿಂಗೆ ತಪ್ಪದ್ದೇ ಸಾಯುವ ಮೊದಲು ಕಾಸಿನ ಸರಕ್ಕೆ ವ್ಯವಸ್ಥೆ ಮಾಡಿತು ಶಾಂತಿಯ ಕೊರಳಿಲಿ.

~~~***~~~

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×