ಈವರೆಗೆ:
-
ಸ್ವಯಂವರ : ಕಾದಂಬರಿ : ಭಾಗ 01 : https://oppanna.com/kathe/swayamvara-01-prasanna-chekkemane/
-
ಸ್ವಯಂವರ : ಕಾದಂಬರಿ : ಭಾಗ 02 : https://oppanna.com/kathe/swayamvara-02-prasanna-chekkemane/
ಸ್ವಯಂವರ : ಕಾದಂಬರಿ : ಭಾಗ 03
“ಅಯ್ಯೋ….. ದೇವರೇ….ಬೇನೆ ತಡೆತ್ತಿಲ್ಲೆಪ್ಪಾ….ಎನ್ನ ಮಗಳೆಲ್ಲಿದ್ದು..ಎನ್ನ ಪುಟ್ಟೂ….ಅದು ಮಾಂತ್ರ ಅಲ್ಲಿ ಹೆರ ಇಪ್ಪದು….ಇಂದಿಡೀ ಎಂತದೂ ತಿಂದಿದಿಲ್ಲೆ…..ಮಗಳೂ……ಒಪ್
“ನಿಂಗಳೊಟ್ಟಿಂಗೆ ಮನೆಯವು ಆರೂ ಬಯಿಂದವಿಲ್ಯಾ?,ಹೆರಿಗೆಗೆ ಬಪ್ಪಗ ಅನುಪ್ಪತ್ಯಕ್ಕೆ ಹೋಪ ಹಾಂಗೆ ಮಕ್ಕಳನ್ನು ಕರಕ್ಕೊಂಡು ಬಪ್ಪದಾ?” ಹತ್ತರೆ ಇಪ್ಪ ನರ್ಸು ಕೋಪಲ್ಲಿ ಪರಂಚಿತ್ತು.
“ಎನಗಾರೂ ಇಲ್ಲೆ. ಸರಕಾರಿ ಆಸ್ಪತ್ರೆಗೆ ಹೋದ ಎನ್ನ ಅಲ್ಲಿ ಆವ್ತಿಲ್ಲೆ ಹೇಳಿ ಇಲ್ಲಿಗೆ ಕಳ್ಸಿದ್ದು. ಮಗಳು ಮಾಂತ್ರ ಎನಗಿಪ್ಪದು” ಸುಶೀಲ ಬೇನೆ ಎಡೆಲಿ ನರಕ್ಕಿಕೊಂಡೇ ಅಷ್ಟು ಹೇಳಿಯಪ್ಪಗ ಆ ನರ್ಸಿಂಗೆ ಎಂತಾತೋ ಗೊಂತಿಲ್ಲೆ.
“ಹಾಂಗಾ..ನಿಂಗೊಗಿನ್ನು ಹೆರಿಗೆ ಆಗಿ ಹೆರ ಹೋಪಗ ಸುಮಾರು ಹೊತ್ತಕ್ಕು.ಆರಿಂಗಾರು ಪೋನು ಮಾಡ್ತೆ.ನಂಬರು ಇದ್ದರೆ ಕೊಡಿ.”
“ಎನಗೆ ಆರೂ ಇಲ್ಲೆ.ಎನ್ನ ಮಗಳು ಬಿಟ್ಟು….. ಸುಶೀಲನ ಕಣ್ಣಿಂದ ನೀರಧಾರೆ ಹರಿವದು ಕಾಂಬಗ ಆ ನರ್ಸಿಂಗೂ ‘ ಪಾಪ’ ಹೇಳಿ ಕಂಡತ್ತು. ಬೇಗ ಅದರ ಕಣ್ಣೀರು ಉದ್ದಿಕ್ಕಿ ಸಮದಾನ ಮಾಡಿತ್ತು
” ಕೂಗೆಡಿ ಅಕ್ಕಾ..ಈಗ ಆರೂ ಇಲ್ಲದ್ರು ಮುಂದಂಗೆ ಎಲ್ಲರು ಆವ್ತವು.ಆರೂ ಇಲ್ಲದ್ದವರ ದೇವರು ಕಾಪಾಡ್ತ.ಬೇಜಾರು ಮಾಡೆಡಿ.ನಿಂಗಳ ಮಗಳಿಂಗೆ ಊಟ ಆನು ಕೊಡ್ತೆ.ಎಲ್ಲಿದ್ದು ? ಅದರ ಹೆಸರೇಂಗೆ?”
ಸುಶೀಲೆ ಮಗಳ ಹೆಸರು ಹೇಳಿತ್ತು.ಆ ಒಳ್ಳೆ ಮನಸಿನ ನರ್ಸು ಹೆರ ಬಂದು ನೋಡಿಯಪ್ಪಗ ಐದಾರು ವೊರ್ಷದ ಕೂಸೊಂದು ಜೆಗುಲಿಲಿಪ್ಪ ಬೆಂಚಿಲ್ಲಿ ಕೂದಂಡು ಒರಗುತ್ತು.
ಬಣ್ಣ ಅಬ್ಬೆಯಷ್ಟು ಶುಭ್ರ ಅಲ್ಲದ್ರೂ ಕಪ್ಪಲ್ಲ.ಸುರುಳಿ ಸುರುಳಿ ತಲೆಕಸವು ಕೊರಳಿಂಗೆ ವರೆಗೆ ನೇತುಕೊಂಡಿದ್ದು.ಕೈ,ಕಾಲು,ಕೊರಳು ಎಲ್ಲ ಬೋಳು ಬೋಳು ಇದ್ದರೂ ಆ ಕೂಸಿನ ಕಂಡಪ್ಪಗ ಒಂದರಿ ಕೊಂಡಾಟ ಮಾಡೆಕು ಹೇಳುವಷ್ಟು ಮುದ್ದು ಮುದ್ದು ಕಂಡತ್ತದಕ್ಕೆ.
ಪಾಪ ,ಇಂದಿಡೀ ಎಂತದೂ ತಿನ್ನದ್ದ ಕಾರಣ ಬಚ್ಚಿ ಹೀಂಗೆ ಒರಗಿದ್ದಾದಿಕ್ಕು ಕೂಸು.ಒಂದು ಜೆನವೂ ಒಟ್ಟಿಂಗೆ ಬಯಿಂದವಿಲ್ಲೆ ಹೇಳಿರೆ ಎಂತ ಸಂಗತಿ.ಅಬ್ಬೆ ಇಲ್ಲದ್ರೆ ಅತ್ತೆ ಬೇಕಾತು.ಅವು ಇಬ್ರೂ ಇಲ್ಲದ್ರೆ ಗೆಂಡ ಆದರೂ ಒಟ್ಟಿಂಗೆ ಬೇಡದೋ? ಒಳ್ಳೆ ಸಂಸ್ಕಾರ ಇಪ್ಪ ಹೆಮ್ಮಕ್ಕಳ ಹಾಂಗೆ ಕಾಣ್ತು ಸುಶೀಲನ.!!
ಮತ್ತೆಂತ ಹೀಂಗೆ…..’ ಲಿಲ್ಲಿ ಹೇಳುವ ಆ ನರ್ಸು ಹೀಂಗೆಲ್ಲ ಆಲೋಚನೆ ಮಾಡಿಂಡೇ ಒರಗಿದ ಆ ಒಪ್ಪಕ್ಕನ ಮೆಲ್ಲಂಗೆ ನೆಗ್ಗಿ ಒಳ ಒಂದು ರೂಮಿಲ್ಲಿ ಮನುಶಿತ್ತು.ಅಲ್ಲಿ ನಾಲ್ಕೈದು ನರ್ಸುಗೊ ಬೇರೆಯೂ ಇತ್ತಿದ್ದವು.
“ಇದಾರು?” ಕೇಳಿಂಡು ಅಲ್ಲಿಪ್ಪವೆಲ್ಲ ತಿರುಗಿ ನೋಡಿಯಪ್ಪಗ ಮಂಚಲ್ಲಿ ಮನುಶಿದ ಕೂಸಿಂಗೆ ಎಚ್ಚರಿಕೆ ಆತು.
“ಅಮ್ಮಾ…..” ಹೇಳಿ ಸಣ್ಣಕೆ ಕೂಗಲೆ ಸುರು ಮಾಡಿದ ಆ ಒಪ್ಪಕ್ಕನ ಅಲ್ಲಿಪ್ಪ ನರ್ಸುಗೊ ಸಮದಾನ ಮಾಡಿದವು.
“ಹೆರಿಗೆಗೆ ಬಪ್ಪಗ ಹೀಂಗೆ ಬಪ್ಪ ಕ್ರಮ ಇದ್ದಾ? ಈ ಕೂಸು ಉದಿಂದ ಲಾಗಾಯ್ತು ಉಪವಾಸಾಡ.ಈಗ ಒಂಭತ್ತು ಗಂಟೆ ಆತು.ಆ ಮಾರಾಯ್ತಿ ಎಂತ ಗ್ರೇಶಿದ್ದೋ ಏನೋ” ಒಪ್ಪಕ್ಕನ ಕರಕ್ಕೊಂಡು ಬಂದ ನರ್ಸು ಬಾಕಿದ್ದವರತ್ರೆ ಕತೆ ಹೇಳಿಂಡು ಅದು ತಂದ ಬುತ್ತಿಂದ ರಜ ಅಶನ ಅದರ ಮುಚ್ಚಲಿಲ್ಲಿ ಹಾಕಿ ಒಪ್ಪಕ್ಕನ ಮುಂದೆ ಮಡುಗಿತ್ತು.
“ನೀನು ಮಾಡಿದ ಅಡಿಗೆ ಅವು ತಿಂತವಾ ,ಇಲ್ಯಾ? ದೊಡ್ಡವಾದರೆ ಬೇಕು,ಬೇಡ, ಹೇಳ್ತಿತವು.ನಾವಾಗಿ ಆ ಮಕ್ಕೊಗೆ ಕೊಟ್ಟು ಅವರ ಜಾತಿ ಕೆಡಿಸುದು ಬೇಡ” ಅಲ್ಲಿ ರಜಾ ಪ್ರಾಯ ಆದ ನರ್ಸು ಒಪ್ಪಕ್ಕಂಗೆ ಗೊಂತಪ್ಪಲಾಗ ಹೇಳಿ ಬೇರೆ ಭಾಷೆಲಿ ಹೇಳಿತ್ತು.
“ಎನಗೆ ಹಶು ಆವ್ತು. ಎನಗಿದುವೇ ಅಕ್ಕು, ಬೇರೆ ಬೇಡ” ಹೇಳಿ ಒಪ್ಪಕ್ಕ ಅದೇ ಬಾಷೆಲಿ ಉತ್ತರ ಕೊಟ್ಟಪ್ಪಗ ಅಲ್ಲಿಪ್ಪವಕ್ಕೆಲ್ಲ ಆಶ್ಚರ್ಯ ಆತು.
“ಹ್ಜೋ…. ಸಣ್ಣ ಕೂಸು ಇಷ್ಟು ಲಾಯ್ಕಲ್ಲಿ ಈ ಭಾಷೆ ಮಾತಾಡೆಕೂಳಿ ಆದರೆ ಅದರ ಮನೆ ಭಾಷೆ ಅದುವೇ ಆಗಿರೆಕು.ಇದರಲ್ಲಿ ಎಂತೋ ಸಂಶಯ ಇದ್ದು.ಹಾಂಗೇ ಆ ಹೆಮ್ಮಕ್ಕಳೊಟ್ಟಿಂಗೆ ಆರೂ ಬಾರದ್ದದು.” ಮತ್ತೊಂದು ನರ್ಸು ಸಣ್ಣಕೆ ಅವಕ್ಕೆ ಮಾಂತ್ರ ಕೇಳುವಾಂಗೆ ಹೇಳಿತ್ತು.
“ಎಂತದೋ ಏನೋ..ಆರಿಂಗೆ ಎಂತ ಬೇಕಾರು ಆಗಲಿ.ನಾವು ನಮ್ಮ ಕೆಲಸ ಮಾಡುವ” ಲಿಲ್ಲಿ ಹಾಂಗೆ ಹೇಳಿಂಡಿಪ್ಪಗಳೇ ಹೆರಾಂದ ಮತ್ತೊಂದು ನರ್ಸು ಓಡಿಂಡು ಬಂದು
“ಲಿಲ್ಲೀ….ಲಿಲ್ಲೀ…ಆ ಸುಶೀಲನ ಹತ್ರಂದ ಎಲ್ಲಿಗೋದ್ದು ನೀನು..ಬೇಗ ..ಬೇಗ..ಬಾ..ಡಾಕ್ಟರ್ ಅರ್ಜೆಂಟ್ ಕಾಯ್ತಾಯಿದ್ದವು”
ಅದರ ಮಾತು ಕೇಳಿದ್ದದೂದೆ ಲಿಲ್ಲಿ ಬುತ್ತಿ ಪಾತ್ರವ ಒಪ್ಪಕ್ಕನ ಹತ್ತರೆ ಬಿಟ್ಟಿಕ್ಕಿ ಹಾಂಗೇ ಓಡಿತ್ತು.
“ಎನ್ನಬ್ಬಗೆಂತಾತು….ಎನ್ನಬ್ಬಗೆಂ
“ರೋಗಿಯ ನೋಡುದು ಬಿಟ್ಟು ಬೇರೆಲ್ಲಿಗೆ ಹೋಗಿ ಪಟ್ಟಾಂಗಕ್ಕೆ ಕೂದ್ದು” ಡಾಕ್ಟರ್ ಸುಲೋಚನ ಲಿಲ್ಲಿಯ ಜೋರು ಮಾಡಿದವು.
“ಇಷ್ಟು ಜೋರಿದ್ದ ಕಾರಣ ಅಲ್ಲದ ಬೇರೆ ಆಸ್ಪತ್ರೆಯವು ಇಲ್ಲಿಗೆ ಕಳ್ಸಿದ್ದು. ಅಷ್ಟಪ್ಪಗ ರೋಗಿಯ ಜೀವಕ್ಕೆಂತಾರು ಅಪಾಯ ಆದರೆ ಆರಿದ್ದವು?”
ಡಾಕ್ಟರ್ ಹೇಳಿದ್ದು ಸತ್ಯ ಹೇಳಿ ಲಿಲ್ಲಿಗೂ ಗೊಂತಿದ್ದು.
ಒಂದು ಸಣ್ಣ ತಪ್ಪು ಕೂಡ ಒಂದು ಜೀವವ ತೆಗೆತ್ತು.ಹೋದ ಜೀವವ ಆರಿಂಗಾರು ವಾಪಸು ತಂದು ಕೊಡ್ಲೆಡಿಗೋ.ದೇವರೇ ಆ ಒಪ್ಪಕ್ಕಂಗೆ ಅಬ್ಬೆ ಇಲ್ಲದ್ದಾಂಗೆ ಮಾಡೆಡ’ ಹೇಳಿ ಮನಸಿಲ್ಲೆ ಪ್ರಾರ್ಥನೆ ಮಾಡಿಂಡು ಡಾಕ್ಟರ್ ಹೇಳಿದಾಂಗೆ ಆಪರೇಷನಿಂಗೆ ಬೇಕಾದ ಸಕಾಯ ಮಾಡ್ಲೆ ಸುರು ಮಾಡಿತ್ತು.
“ಬೇಗ ಆ ಇಂಜೆಕ್ಷನು ಕೊಡು.ತಡವಾವ್ತು.ಎಲ್ಲಿದ್ದವು ಉಮಾ..ಸುಜಯಾ…..” ಡಾಕ್ಟರ್ ಸುಲೋಚನ ಎಲ್ಲರನ್ನೂ ಒಟ್ಟಿಂಗೆ ದಿನಿಗೇಳಿದವು.
ಸುಮಾರು ಹೊತ್ತು ಕಳುದು ನರ್ಸು ಲಿಲ್ಲಿ ಬೆಳಿ ಪೊಪ್ಪೆಲಿ ಸುತ್ತಿದ ಒಂದು ಪುಟ್ಟು ಪಾಪುವಿನ ತಂದು ಒಪ್ಪಕ್ಕನ ಎದುರು ತಂದು ತೋರ್ಸಿತ್ತು.
ಕೆಂಪು ಕೆಂಪಾಗಿ ಸಣ್ಣ ಬೊಂಬೆ ಹಾಂಗಿದ್ದ ಆ ಪಾಪುವಿನ ಕೆಪ್ಪಟೆ ಮುಟ್ಟಿತ್ತು ಒಪ್ಪಕ್ಕ.
“ಇದಾ ನಿನಗೆ ಆಡ್ಲೆ ಚಾಮಿ ಕೊಟ್ಟ ತಮ್ಮ° ಇವ°. ಲಿಲ್ಲಿ ಹಾಂಗೇಳಿಯಪ್ಪಗ ಒಪ್ಪಕ್ಕನ ಮೋರೆ ಅರಳಿತ್ತು.ಇವನ ಎನಗೇ ಕೊಡ್ತೀರಾ? ಅಮ್ಮ ಎಲ್ಲಿದ್ದು? ಎನಗಮ್ಮನ ನೋಡೆಕು”
“ಅಮ್ಮನ ಮತ್ತೆ ನೋಡ್ಲಕ್ಕು. ಈಗ ತಮ್ಮನ ಒಳ ಮನುಶುತ್ತೆ.ಈಗ ಇಲ್ಲೇ ಕೂರು” ಹೇಳಿಕ್ಕಿ ಅದು ತಮ್ಮನನ್ನು ಕರಕ್ಕೊಂಡು ಒಳ ಹೋದಪ್ಪಗ ಒಪ್ಪಕ್ಕಂಗೆ ಮನಸಿಂಗೆ ಎಂತೋ ಹೆದರಿಕೆ ಆತು.
“ಅಮ್ಮಾ…..ಎನಗಮ್ಮನ ನೋಡೆಕೂ” ಳಿ ಕೂಗಿಂಡು ಆ ಕೋಣೆಂದ ಹೆರ ಬಂದ ಒಪ್ಪಕ್ಕನ ಕೈಯ ಆರೋ ಪ್ರೀತಿಲಿ ಹಿಡ್ಕೊಂಡವು.
“ಎನ್ನ ಗುರ್ತಯಿದ್ದ ನಿನಗೆ” ಹೇಳಿ ಪ್ರೀತಿಲಿ ಕೇಳಿದ ಆ ಜನರ ಗೊಂತಾಗದ್ದೆ ಆಶ್ಚರ್ಯಂದ ಅವರ ಮೋರೆಯನ್ನೇ ನೋಡಿಂಡು ನಿಂದತ್ತು ಒಪ್ಪಕ್ಕ.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಆರಪ್ಪಾ ಬಂದದು ? ಕುತೂಹಲ ತಡವಲೆಡಿತ್ತಿಲ್ಲೆ.
ಕತೆಗೊಂದು ತಿರುವು ಸಿಕ್ಕಿತ್ತನ್ನೆ. ಕಳುದ ವಾರದ ಗೆಳತಿಯರ ಸುದ್ದಿ ಇಲ್ಲೆ.
ಒಪ್ಪಕ್ಕನ ಕೈ ಹಿಡುದ ಗುರ್ತದವು ಆರಾಗಿಕ್ಕು. ಕುತೂಹಲ.
ಕಾಯೆಕ್ಕು ಇನ್ನಾಣ ವಾರಕ್ಕೆ.