Oppanna.com

ಸ್ವಯಂವರ : ಕಾದಂಬರಿ : ಭಾಗ 04 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   17/06/2019    1 ಒಪ್ಪಂಗೊ

ಈವರೆಗೆ:

ಸ್ವಯಂವರ : ಕಾದಂಬರಿ : ಭಾಗ 04 

ಕೆಂಪು ಸೀರೆ ಸುತ್ತಿದ ಒಂದು ಹೆಮ್ಮಕ್ಕೊ  ಒಪ್ಪಕ್ಕನ ಕೈ ಹಿಡ್ಕೊಂಡದು.ಅದರೊಟ್ಟಿಂಗೆ ಒಬ್ಬ ಮಾವನೂ ಇತ್ತಿದ್ದ°. ಆರೂಳಿ ಗೊಂತಿಲ್ಲದ್ರೂ ಒಪ್ಪಕ್ಕ ಕೂಗುದು ನಿಲ್ಸಿ ಅವರ ಮೋರೆಯನ್ನೇ ನೋಡಿತ್ತು.

“ನೀನು ಸುಶೀಲಕ್ಕನ ಮಗಳಾ?” ಅವು ಕೇಳಿದ ಭಾಷೆ ಅದರತ್ರೆ ಅಮ್ಮ ಯೇವಗಲೂ ಮಾತಾಡುವ ಭಾಷೆ.ಹಾಂಗಾಗಿಯೋ ಏನೋ ಒಪ್ಪಕ್ಕ ಬೇಗ ಅವು ಕೇಳಿದ ಪ್ರಶ್ನೆಗೆಲ್ಲ ಉತ್ತರ ಹೇಳಿತ್ತು.

“ನಿನ್ನ ಅಪ್ಪ° ಬಯಿಂದಿಲ್ಯೋ” ಆ ಹೆಮ್ಮಕ್ಕೊ ಕೇಳಿಯಪ್ಪಗಲೇ ಒಪ್ಪಕ್ಕಂಗೆ ಅಪ್ಪನ ನೆಂಪಾದ್ದು. ಎಷ್ಟೊತ್ತಿಂಗು ಕೆಂಪು ಕಣ್ಣು ಮಾಡಿಂಡು, ಬಾಯಿಲಿ ಎಂತೋ ತುಂಬುಸಿಂಡು ಅದರ ಅಬ್ಬಗೆ ಬಡುದು, ಮೆಟ್ಟಿ ಮಾಡುವ ಅಪ್ಪನ ನೆಂಪಾದರೆ ಅದಕ್ಕೆ ಹೆದರಿ ನಡುಗುತ್ತು.

“ಶನಿ,ಪೀಡೆ…..” ಹೀಂಗೇ ಒಪ್ಪಕ್ಕನ ಅದರ ಅಪ್ಪ ದೆನಿಗೇಳುದು.ಅಪ್ಪ° ಬಂದರೆ ಅದು ಮನೆಯ ಹಿಂದೆ ಹೋಗಿ ಹುಗ್ಗುದು.ಕೆಲವು ಸರ್ತಿ ಅದರೊಟ್ಟಿಂಗೆ ಬೇರೆ ಆರಾರು ಇದ್ದರೆ ಮತ್ತೆ ಗೌಜಿ ಕೇಳುದೇ ಬೇಡ.

ವಾಸನೆ ಬಪ್ಪ ಎಂತದನ್ನೋ ಕುಪ್ಪಿಲಿ ತಂದು ಕುಡಿವದು.ಬೇರೆಂತದೋ ಹೇಸಿಗೆ ಅಪ್ಪ ಹಾಂಗಿದ್ದ ಸಾಮಾನಿನ ತಿಂಬದು.ಹುಗ್ಗಿ ನಿಂದಲ್ಲಿಂದ ಒಂದೊಂದರಿ ಬಗ್ಗಿ ನೋಡಿರೆ ಒಪ್ಪಕ್ಕಂಗೆ ಕಂಡು ಕೊಂಡಿದ್ದದು ಹೀಂಗಿದ್ದ ಚಿತ್ರಂಗೊ.

ಅಪ್ಪ° ಹಾಂಗೆ ಕುಡುದು,ತಿಂದು ಮಾಡಿದ ಒಂದು ದಿನ ಅಮ್ಮನ ಬಡುದು ,ಮೆಟ್ಟಿ ಮನೆಂದ ಹೆರ ಹಾಕಿದ್ದದು ಆ ಪುಟ್ಟು ಮನಸಿಂದ ಎಂದಿಂಗೂ ಮರೆಯ.

“ಅಪ್ಪನಮನೆಂದ ಒಂದು ಪೈಸೆಯು ತೆಕ್ಕೊಳದ್ದೆ ಓಡಿಂಡು ಬಯಿಂದದು ..ಎಂತಕೆ? ಯೇವ ಕೆಲಸ ಮಾಡ್ಲೂ ಅರಡಿತ್ತಿಲ್ಲೆ.ಒಂದು ಕೋಳಿ ಕಡಿವಲು ಗೊಂತಿಲ್ಲೆ, ಮೀನು ಕೊರವಲು ಗೊಂತಿಲ್ಲೆ. ನಿನ್ನ ಹಾಂಗಿದ್ದವರ ಮದುವೆ ಆಗಿ ಪೂಜೆ ಮಾಡೆಕಾರೆ ಆ ಹೆಗಲಿಂಗೆ ನೂಲು ಹಾಕಿದ ನಿನ್ನ ಅಪ್ಪನ ಜಾತಿಯವು ಆಯೆಕು. ಇಲ್ಲಿಗೆ ಬಂದ ಮತ್ತೆ ಎಂಗೊ ಇಪ್ಪ ಹಾಂಗೆ ಇರೆಕೂಳಿ ಗೊಂತಿಲ್ಯಾ” ಅದರ ಅಪ್ಪನ ಅಬ್ಬೆ ಆಡ.ಬೆಳಿ ತಲೆ ಕಸವಿನ ಕಪ್ಪು ಬಣ್ಣದ ಕೆಂಪು ಕಣ್ಣಿನ ಒಂದು ತೊಂಡಿ ಒಪ್ಪಕ್ಕನ ಅಬ್ಬೆಯ ದೂಡಿ ಹೆರ ಹಾಕುಗ ಹೀಂಗೆ ಬೈದ್ದದು ಅದಕ್ಕೆ ಸರೀ ನೆಂಪಿದ್ದು.

ಹೆಗಲಿಂಗೆ ನೂಲು ಹಾಕುವವು ಹೇಳಿರೆ ಆರು ಹೇಳಿ ಅದಕ್ಕೆ ಗೊಂತಿಲ್ಲೆ. ಪೂಜೆ ಹೇಳಿರೆ ಎಂತರ ಗೊಂತಿಲ್ಲೆ. ಇದು ಎಂತಾರು ಕೇಳಿರೆ ಅಮ್ಮ ಇದರ ಗಟ್ಟಿ ಅಪ್ಪಿ ಹಿಡ್ಕೊಂಡು ಕೂಗುಗು.

“ಆನು ತಪ್ಪು ಮಾಡಿದೆ ಮಗಳೂ..ಆನು ಹುಟ್ಟಿದ ಜಾತಿಲಿ ಮಾಡ್ಲಾಗದ್ದ ಅನಾಚಾರ ಮಾಡಿದೆ.ಎನಗೆ ಹೀಂಗೇ ಆಯೆಕು…..ಅಬ್ಬೆ ಅಪ್ಪನ ಮಾತು ಕೇಳದ್ದೆ ಬಂದ ಎನಗೆ ಹೀಂಗೇ ಆಯೆಕೂ…..” ಹೇಳಿ ಅಟ್ಟಾಸ ಕೊಟ್ಟು ಕೂಗುದು ಕಾಂಬಗ ಒಪ್ಪಕ್ಕಂಗೆ ಹೆದರಿಕೆ ಅಕ್ಕು.

“ಬೇಡಮ್ಮಾ..ಎನಗೆಂತ ಗೊಂತಾಗೆಡ,ಆನೆಂತದು ಕೇಳ್ತಲ್ಲೆ” ಅದರ ಪುಟ್ಟು ಕೈಲಿ ಅಮ್ಮನ ಕಣ್ಣೀರು ಉದ್ದಿಕ್ಕಿ ಸಮದಾನ ಮಾಡ್ಲೆ ನೋಡುಗದು.

“ಏಕೆ ಮಾತಾಡ್ತಿಲ್ಲೆ? ನಿನಗೆ ಹಶು ಆವ್ತಾ? ಎಂತ ತಿಂದಿದೆ?” ಆ ಕೆಂಪು ಸೀರೆಯ ಹೆಮ್ಮಕ್ಕೊ ಮತ್ತೆ ಪುನಃ ಕೇಳಿಯಪ್ಪಗ ಒಪ್ಪಕ್ಕ ಮತ್ತೊಂದರಿ ಅವರನ್ನೇ ನೋಡಿತ್ತು.
ಚೆಂದದ ಸೀರೆ ಸುತ್ತಿ ಕೊರಳಿಲ್ಲಿ, ಕೈಲಿ ಫಳಫಳ ಹೊಳವ ಒಪ್ಪಿ ಹಾಕಿದ ಅವರ ಕಾಂಬಗ ಅಮ್ಮನ ಹಾಂಗೇ ಕಂಡತ್ತದಕ್ಕೆ.

“ಅಮ್ಮ….ಅಮ್ಮಾ…..” ಹೇಳಿ ಅವರ ಕೈಯ ಮತ್ತೂ ಗಟ್ಟಿಯಾಗಿ ಹಿಡ್ಕೊಂಡತ್ತು.

“ಪಾಪ ಕೂಸು,ತುಂಬ ಹೆದರಿದ್ದು ಕಾಣ್ತು. ನಾವೊಂದರಿ ಹೆರ ಹೋಗಿ ಇದಕ್ಕೆಂತಾರು ತೆಗದು ಕೊಡುವನಾ” ಅವು ಅವರೊಟ್ಟಿಂಗೆ ಇಪ್ಪ ಆ ಮಾವನತ್ರೆ ಕೇಳಿದವು.

“ಇಲ್ಲದ್ದ ರಗಳೆ ಎಳದು ಹಾಕು.ನಾಯಿ ಮುಟ್ಟಿದ ಅಳಗೆಯ ಮತ್ತೆ ಪುನಃ ಉಪಯೋಗಿಸುವ ಕ್ರಮ ಇಲ್ಲೇಳಿ ನಿನಗೆ ಗೊಂತಿದ್ದನ್ನೇ” ಅವರ ದೆನಿಲಿ ರಜ ಅಸಮಾಧಾನ ಇದ್ದದು ಗೊಂತಾಗಿಂಡಿತ್ತಿದ್ದು.

“ಸುಶೀ ತಪ್ಪು ಮಾಡಿಕ್ಕು.ಅಂದರೂ ಈ ಕೂಸು ಈಗ ಎಂತ ಮಾಡಿದ್ದು? ಆರಾರಿಂಗೋ ಅಂತು ಗೊಂತಿಲ್ಲದ್ದವಕ್ಕೆ ಸಕಾಯ ಮಾಡ್ತಾಡ.ಮತ್ತೆ ಇದಕ್ಕೆ ಮಾಡಿರೆಂತ?” ಹೆಮ್ಮಕ್ಕಳ ಮಾತಿಂಗೆ ಆ ಮಾವ ಮಾತಾಡಿದ್ದವಿಲ್ಲೆ.

“ಆನು ನಿನ್ನ ಅಬ್ಬೆಯ ಅಕ್ಕ .ಎನ್ನ ದೊಡ್ಡಮ್ಮ’ ಹೇಳು” ಅವು ಹೇಳಿಯಪ್ಪಗ ಒಪ್ಪಕ್ಕ ಮೆಲ್ಲಂಗೆ ಬಾಯಿ ಹನ್ಸಿತ್ತು.ಇಷ್ಟರವರೆಗೆ ಕೇಳದ್ದ ಹೊಸ ಶಬ್ದವ ಮತ್ತೆ ಮತ್ತೆ ಹೇಳಿತ್ತು.

“ದೊಡ್ಡಮ್ಮ…..ದೊಡ್ಡಮ್ಮ….” ಆ ಶಬ್ದಕ್ಕೆ ಎಂತೋ ಶಕ್ತಿ ಇದ್ದ ಹಾಂಗಾತು ಆ ಪುಟ್ಟು ಕೂಸಿಂಗೆ.

“ಇವು ನಿನ್ನ ದೊಡ್ಡಪ್ಪ ಚಂದ್ರಶೇಖರ.ನಮಸ್ತೇ ಹೇಳು ದೊಡ್ಡಪ್ಪಂಗೆ” ದೊಡ್ಡಮ್ಮ ಹೇಳಿರೂ ಈ ನಮಸ್ತೆ ಹೇಳಿರೆ ಎಂತರ ಹೇಳಿ ಗೊಂತಿಲ್ಲದ್ದೆ ಅವರನ್ನೇ ರಜ ಹೆದರಿಕೆಂದ ನೋಡಿತ್ತದು.

“ಸಂಸ್ಕಾರ ಇಲ್ಲದ್ದವಕ್ಕೆಲ್ಲಿಂದ ಬತ್ತು ಇದೆಲ್ಲ,  ನಿನಗೆ ಅಗತ್ಯ ಇಲ್ಲದ್ದೆ ಅಂತೇ ಒಂದೊಂದು ಮಾಡುದು ಕಾಂಬಗ ಪಿಸುರು ಬತ್ತೆನಗೆ” ದೊಡ್ಡಪ್ಪಂಗೆ ದೊಡ್ಡಮ್ಮ ಒಪ್ಪಕ್ಕನತ್ರೆ ಮಾತಾಡುದು ರಜವು ಸಮದಾನ ಇಲ್ಲೆ ಹೇಳಿ ಅವರ ಮೋರೆ ನೋಡುಗ ಅಂದಾಜಾತದಕ್ಕೆ.

“ಹೊಸಬ್ಬರ ಕಂಡು ಮಾತಾಡ್ವಗ ಹೀಂಗೆ ಕೈ ಮುಗುದು ‘ ನಮಸ್ತೇ’ ಹೇಳೆಕು” ದೊಡ್ಡಮ್ಮ ಒಪ್ಪಕ್ಕನ ಎರಡೂ ಕೈ ಜೋಡಿಸಿ ಕೈ ಮುಗಿವಲೆ ಹೇಳಿಕೊಟ್ಟತ್ತು.
ದೊಡ್ಡಮ್ಮ ಹೇಳಿದಾಂಗೆ ಸಣ್ಣ ಸ್ವರಲ್ಲಿ ದೊಡ್ಡಪ್ಪನ ನೋಡಿ “ನಮಸ್ತೆ” ಹೇಳಿತ್ತದು.

ಅಷ್ಟು ಹೊತ್ತು ಹೆಂಡತಿಯ ಕೆಲಸಕ್ಕೆ ಪಿರಿಪಿರಿ ಹೇಳಿಂಡಿದ್ದ ಅವು ಈ ಪುಟ್ಟು ಕೂಸು ಹೇಳಿದಾಂಗೆ ಮಾಡ್ಯಪ್ಪಗ ಒಂದರಿ ಮೋರೆಲಿದ್ದ ಕನ್ನಡ್ಕ ತೆಗದು ಉದ್ದಿಕ್ಕಿ ಪುನಃ ಮೋರೆಲಿ ಮಡುಗಿದವು.

“ನಿಂಗೊ ಸುಶೀಲನ ಪೈಕಿಯಾ? ಇದಾ ಈಗಲೇ ಈ ಮದ್ದುಗಳ ತಂದು ಕೊಡೆಕಾಡ.” ಒಂದು ನರ್ಸು ಬಂದು ದೊಡ್ಡಪ್ಪನ ಕೈಗೆ ಒಂದು ಕಾಗದ ತಂದು ಕೊಟ್ಟಪ್ಪಗ ಅವು ಕೋಪಲ್ಲಿ ದೊಡ್ಡಮ್ಮನ ಮೋರೆ ನೋಡಿದವು.

“ಬಂದ ಕೆಲಸ ಮಾಡಿಕ್ಕಿ ಹೋಪ° ಹೇಳಿರೆ ಅದರದ್ದೊಂದು ತಂಗೆಯ ಮೇಲಿನ ಮಮಕಾರ..ಹೂಂ..ಬೇಗ ತಂದು ಕೊಡು.ಹೋಗು”

“ಅಪ್ಪಪ್ಪು ಬೇಗ ತಂದು ಕೊಡಿ.ರೋಗಿಯ ಸ್ಥಿತಿ ಅಷ್ಟೆಂತ ಸರಿಯಿಲ್ಲೆ.ಡಾಕ್ಟರ್ ಅರ್ಜೆಂಟು ಮಾಡ್ತವು.” ಆ ನರ್ಸುದೆ ಗಡಿಬಿಡಿ ಮಾಡ್ಯಪ್ಪಗ ದೊಡ್ಡಮ್ಮ ಒಪ್ಪಕ್ಕನನ್ನು ಕರಕ್ಕೊಂಡು ಅಲ್ಲೇ ಇಪ್ಪ ಮದ್ದಿನ ಅಂಗುಡಿಗೆ ಹೋಗಿ ಆ ಚೀಟಿಲ್ಲಿಪ್ಪ ಮದ್ದೆಲ್ಲ ತಂದು ಕೊಟ್ಟತ್ತು.

“ಇದಾ….ಇರುಳಾದ ಕಾರಣ ಮದ್ದಿಂಗೆ ಕಾವ ಹಾಂಗಾಯಿದಿಲ್ಲೆ.ಅಂಗುಡಿಲಿ ಜೆನ ಕಮ್ಮಿ. ಅಂದರೂ ಮೂರೂವರೆ ಸಾವಿರ ಆತು.ಎಂತ ಮದ್ದೋ ಏನೋ? ಅದರ ನೋಡ್ಲೆ ಬಿಡ್ತರೆ ಒಂದರಿ ನೋಡ್ಲಾವ್ತಿತು” ದೊಡ್ಡಮ್ಮ ಮದ್ದಿನ ನರ್ಸಿನ ಕೈಲಿ ಕೊಟ್ಟು ಕೊಂಡು ಅದರಷ್ಟಕೆ ಹೇಳಿದ್ದದು ದೊಡ್ಡಪ್ಪಂಗೆ ಕೇಳ್ಲೆ ಬೇಕಾಗಿ.

“ಹೋಗು..ಹೋಗು ತಂಗೆಯ ಬಾಣಂತನ ಕಳುಶಿಕ್ಕಿ ಮನಗೆ ಬಂದರೆ ಸಾಕು.ನಿನಗೆ ಶಾಲೆ ಸುರುವಪ್ಪಲೆ ಇನ್ನು ಎರಡು ತಿಂಗಳಿದ್ದು.” ದೊಡ್ಡಪ್ಪ ಹಾಂಗೆ ಹೇಳಿದ್ದೆಂತಕೇಳಿ ಗೊಂತಾಗದ್ದೆ ಒಪ್ಪಕ್ಕ ಅವರಿಬ್ರ ಮೋರೆಯನ್ನೂ ಬದಲ್ಸಿ ಬದಲ್ಸಿ ನೋಡಿಂಡು ನಿಂದತ್ತು.ಆ ಪುಟ್ಟು ಮನಸಿಂಗೆ ಭಾಷೆ ಅರ್ಥ ಆಗದ್ರೂ ಭಾವ ಅರ್ಥ ಆಗದ್ದಿಕ್ಕಾ……

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

ಪ್ರಸನ್ನಾ ಚೆಕ್ಕೆಮನೆ

One thought on “ಸ್ವಯಂವರ : ಕಾದಂಬರಿ : ಭಾಗ 04 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಅದ, ಈಗ ರಜ್ಜ ಕತೆಯ ಹಿಡಿತ ಸಿಕ್ಕಿತ್ತು. ವಿಷಯ ತುಂಬಾ ಗಂಭೀರ ಇದ್ದ ಹಾಂಗಿದ್ದು. ಕತೆ ಮುಗುದಪ್ಪಗ ನಮ್ಮ ಕಣ್ಣಿಲ್ಲಿ ನೀರು ಹರುಶುತ್ತದಂತೂ ಖಂಡಿತ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×