ಕೇಶವಂಗೆ ಬಸ್ಸಿಳುದು ಬಪ್ಪಗಳೇ ದಾರಿಲಿ ಸಿಕ್ಕಿದ ಆಳುಗಳ ಕೈಯಿಂದ ಸುಶೀಲನ ವಿಶಯ ಗೊಂತಾತು.ಕೋಪಲ್ಲಿ ಉರಿ ದರ್ಸಿಂಡೇ ಬಂದರೂ ಇಲ್ಲಿ ಅಪ್ಪ° ಹೀಂಗೆ ಕೂದ್ದು ಕಾಂಬಗ ಮಾತ್ರ ಮನಸ್ಸು ತಡದ್ದಿಲ್ಲೆ. ಭಾವ° ಅರ್ಧ ದಾರಿಲಿ ಸಿಕ್ಕಿಯಪ್ಪಗ “ಮಾವ° ಕಂಗಾಲು ಭಾವಾ” ಹೇಳಿದರೂ ಇಷ್ಟು ಕಂಗಾಲಾದಿಕ್ಕು ಗ್ರೇಶಿದ್ದಾ° ಇಲ್ಲೆ.
“ಅದು ಬರದ ಕಾಗದ ಎಲ್ಲಿದ್ದು?” ಕೇಳಿದವ° ಆ ಕಾಗದ ಅಬ್ಬೆ ಕೈಂದ ತೆಗದು ಓದಿ ಹಲ್ಲುಮುಟ್ಟೆ ಕಚ್ಚಿದ°
“ಇದರ ಸ್ವಯಂವರ’ ಆಡ..ಸ್ವಯಂವರ!! ಹಣೆಬಾರ ಕೆಟ್ಟ ಜಾತಿಗೆ ಸ್ವಯಂವರ ಅಲ್ಲ ಇದರ ಬೊಜ್ಜ ಮಾಡೆಕಾದ್ದು ಮದಾಲು…..!! ಹೋಗಲಿ ಇದು ಅದರೊಟ್ಟಿಂಗೆ ಹೋದರೂ ನೇರ್ಪ ಬದ್ಕುಲೆಡಿಯ.ಅನುಭವಿಸುಗ ಗೊಂತಕ್ಕು, ಬಾಶೆ ಕೆಟ್ಟದಕ್ಕೆ……!” ಹಾಂಗೆ ರೆಜಾ ದೊಡ್ಡಕೆ ಹೇಳಿಂಡೇ ಅಪ್ಪನೆದುರು ಬಂದು ನಿಂದದು.
‘ಅಂದು ಆನು ಹೇಳುಗ ನಿಂಗೊ ಎಂತ ಮಾಡಿದ್ದು.ಆನೆಂತಕೆ ಸುಶೀಯ ಬಡುದ್ದು ಹೇಳಿ ಸರಿಯಾಗಿ ಕೇಳಿದ್ದರೆ ಇಂದೀಗ ಹೀಂಗಾವ್ತಿತಿಲ್ಲೆ.ಇದಕ್ಕೆಲ್ಲ ಕಾರಣ ನಿಂಗಳ ಅತಿರೇಕದ ಕೊಂಗಾಟ’ ಹೇಳಿ ಅಬ್ಬೆಪ್ಪನ ಎದುರು ನಿಂದು ಹೇಳ್ಲೆ ಹೇಳಿ ಜಾನ್ಸಿರೂ ಅಪ್ಪನೆದುರು ಬಂದು ನಿಂದಪ್ಪಗ ಅವನ ಬಾಯಿ ಕಟ್ಟಿತ್ತು.
ಚಂದ್ರಣ್ಣ ಮಗನ ಕಾಂಬಗ ಎಂತೋ ಹೇಳ್ಲೆ ಹೆರಟವು.ಎಡಿಗಾಯಿದಿಲ್ಲೆ.
“ಎಂತಾತಪ್ಪಾ° ?” ಕೇಳಿಂಡು ಅಪ್ಪನ ಹತ್ತರಂಗೆ ಬಂದ ಅವ°.ಅಷ್ಟಪ್ಪಗ ಚಂದ್ರಣ್ಣನ ಎಡದ ಕೈ ದರ್ಸುಲೆ ಸುರುವಾತು. ಏಳ್ಲೆ ಹೆರಟವು ಒಂದು ಹೊಡೆಂಗೆ ಮಾಲಿ ಅಲ್ಲೇ ಬಿದ್ದವು.
ಕೆಳ ಬೀಳದ್ದಾಂಗೆ ಫಕ್ಕನೆ ಹಿಡ್ಕೊಂಡ° ಅವ°.ಅಷ್ಟಪ್ಪಗ ರಾಮಚಂದ್ರನೂ ಸೇರಿಕೊಂಡ°.ಚಂದ್ರಣ್ಣನ ಅಣ್ಣ ತಮ್ಮಂದ್ರುದೆ ಇದ್ದ ಕಾರಣ ಎಲ್ಲೋರು ಒಟ್ಟು ಸೇರಿ ಅಲ್ಲೇ ಹತ್ತರೆ ಇಪ್ಪ ಮಂಚಲ್ಲಿ ಮನುಶಿದವು.ಅಷ್ಟಪ್ಪಗಳೇ ಚಂದ್ರಣ್ಣನ ಮೋರೆ ಎಡದ ಹೊಡೆಂಗೆ ಪೀಂಟಿದ ಹಾಂಗಾಗಿ ಕೈ ಕಾಲು ಎಲ್ಲ ಒಂದು ಹೊಡೇಂಗೆ ತಿರ್ಪಿತ್ತು.
“ಅಯ್ಯೋ.. ಇದೆಂತಾತು?” ಶಾರದೆ ಓಡಿ ಬಂದು ಚಂದ್ರಣ್ಣನ ಹತ್ತರೆ ನಿಂದು ದೊಡ್ಡಕೆ ಕೂಗಿತ್ತು.ಶೈಲಂಗೂ ಗಾಬರಿ ಆತು.ಅದಕ್ಕೆ ಸರಿಯಾಗಿ ವಿಶಯ ಗೊಂತಪ್ಪ ಮದಲೇ ಅದರ ಅತ್ತೆಯೋರು ಹೆರ ಕರಕ್ಕೊಂಡು ಹೋದವು.
“ಬಸರಿ ಫಕ್ಕನೆ ಹೆದರ್ಲಾಗ.” ಹೇಳಿ ಸಣ್ಣಕೆ ಹೇಳಿದ್ದು ಹತ್ತರೆ ಇಪ್ಪವಕ್ಕೆ ಮಾತ್ರ ಕೇಳಿತ್ತು.
“ನೀರು ತಂದು ಕೊಡಿ,ಬೊಂಡ ನೀರು ಅಕ್ಕು” ಚಂದ್ರಣ್ಣನ ತಮ್ಮ ಗಡಿಬಿಡಿ ಮಾಡಿದ°. ಬೋದ ತಪ್ಪದ್ದ ಕಾರಣ ಚಂದ್ರಣ್ಣ ಕೇಶವನನ್ನೇ ನೋಡಿಂಡು ಎಂತೋ ಹೇಳ್ಲೆ ಹೆರಟರೂ ನಾಲಗೆ ತೆರ್ಚದ್ದೆ ಕಣ್ಣೀರು ಧಾರೆಯಾಗಿ ಅರುದತ್ತು.
“ಈಗಲೇ ಆಸ್ಪತ್ರೆಗೆ ಕರಕ್ಕೊಂಡು ಹೋಪೋ° ” ಹೇಳಿದ° ರಾಮಚಂದ್ರ. ಆ ಮಾತು ಎಲ್ಲೋರಿಂಗು ಸರಿ ಹೇಳಿ ಕಂಡತ್ತು.ಅಂಬಗಳೇ ಅವರ ಜೀಪಿಲ್ಲಿ ಆಸ್ಪತ್ರೆಗೆ ಕರಕ್ಕೊಂಡು ಹೋದವು.ಅಲ್ಲಿ “ಇಲ್ಲಿ ಎಡಿಯ,ಬೇರೆ ಆಸ್ಪತ್ರೆಗೆ ಕರಕ್ಕೊಂಡು ಹೋಗಿ” ಹೇಳಿಯಪ್ಪಗ ಕೇಶವಂಗೂ ಝಿಮ್ ಆತು.
“ಎಂತಾಗ,ನಾವು ಕೊಡೆಯಾಲಕ್ಕೆ ಕರಕ್ಕೊಂಡು ಹೊಪೋ°.ಅಲ್ಲಿ ಸ್ಪೆಶಲಿಸ್ಟ್ ಡಾಕ್ಟರಕ್ಕೊ ಇರ್ತವು” ಹೇಳಿ ಅವರ ತಮ್ಮ ಹೇಳಿದ ಕಾರಣ ಅಂದೇ ಚಂದ್ರಣ್ಣನ ಕೊಡೆಯಾಲಕ್ಕೆ ಕರಕ್ಕೊಂಡು ಹೋದವು.
ಅಲ್ಲಿ ಹೋದರೂ, ತಿಂಗಳುಗಟ್ಲೆ ಮದ್ದು ಮಾಡಿರೂ ಚಂದ್ರಣ್ಣ ಮದ್ಲಾಣಾಂಗೆ ಆಯಿದವೇ ಇಲ್ಲೆ. ಕಷ್ಟ ಪಟ್ಟು ಕಲ್ತು ,ಇಷ್ಟ ಪಟ್ಟು ಸೇರಿದ ಕೆಲಸಕ್ಕೆ ಎರಡು ತಿಂಗಳಾಯೆಕಾರೆ ಕೇಶವ° ರಾಜೀನಾಮೆ ಕೊಟ್ಟು ಮನೆಲಿ ನಿಲ್ಲೆಕಾಗಿ ಬಂತು.
ತೋಟವ,ದನಗಳ ಮಕ್ಕಳ ಹಾಂಗೆ ನೋಡಿದ°.ಅಪ್ಪನ ಸುಮಾರು ದಿಕೆ ಕರಕ್ಕೊಂಡು ಹೋಗಿ ಮದ್ದು ಮಾಡ್ಸಿದ.ಆಯುರ್ವೇದ, ಹೋಮಿಯೋಪತಿ, ನಾಟಿಮದ್ದುಗೊ,ಉದ್ದುಸುದು…….ಹೀಂಗೇ ಹಗಲು ಇರುಳು ಅಪ್ಪಂಗೆ ಬೇಕಾಗಿ ಬಂಙ ಬಂದ°.
“ಈ ಕೇಶವ° ಪಾಪ ಅಪ್ಪಂಗೆ ಬೇಕಾಗಿ ಎಷ್ಟು ಬಂಙ ಬತ್ತಾ” ಹೇಳಿ ಪ್ರತಿಯೊಬ್ಬರೂ ಹೇಳಿದವು.
” ಅವನ ತೋಟ ನೋಡುವ ಸಾಧನೆಗೆ ಮೆಚ್ಚೆಕು” ಹೇಳಿ ಬೆನ್ನು ತಟ್ಟಿದವು.ಅವ° ಉಬ್ಬಿದ್ದಾಯಿಲ್ಲೆ,ತಗ್ಗಿದ್ದಾ° ಇಲ್ಲೆ.ಒಂದೇ ರೀತಿಲಿ ಮುಂದೆ ಹೋದ°.
ಅಷ್ಟು ಮದ್ದು ಮಾಡಿರೂ ಚಂದ್ರಣ್ಣಂಗೆ ಹೆಚ್ಚು ಬದಲಾವಣೆ ಎಂತದೂ ಆಯಿದಿಲ್ಲೆ.. ಅಂದರೂ ಬಂಙಲ್ಲಿ ಒಂದೊಂದಕ್ಷರ ಸೇರ್ಸಿ ಮಾತಾಡುವಷ್ಟಾದವು.ಬಲದ ಕೈ ಸರಿ ಇದ್ದ ಕಾರಣ ಎಂತಾರು ಆಯೆಕಾರೆ ಬರದು ತೋರ್ಸುಗು. ಎಷ್ಟೋ ಸರ್ತಿ ಒಬ್ಬನೇ ಕೂದು ಕಣ್ಣೀರು ಹಾಕುದು ಕಾಂಬಗ ಶಾರದೆಗೆ ತಡವಲೆಡಿವಲಿಲ್ಲೆ.
“ನವಗೆ ಎಂತಕೆ ಹೀಂಗಾತೋ” ಹೇಳಿ ಕಣ್ಣನೀರು ಹಾಕುಗು.ಮನಸ್ಸು ಓಡಿ ಹೋದ ಸುಶೀಗೆ ಶಾಪವನ್ನು ಹಾಕುಗು
“ಎಲ್ಲಿಗೆ ಹೋದರೂ ಬರ್ಕತ್ತಾಗ ಅದು, ಅಬ್ಬೆಪ್ಪನ ಕಣ್ಣು ತಪ್ಸಿ ಯೇವದರೊಟ್ಟಿಂಗೋ ಹೋಗಿ ಸ್ವಯಂವರ ಮಾಡಿಕೊಂಡದಲ್ಲದ……ಹಾಳಾಗಿ ಹೋಗಲಿ”
ಇದು ಗೊಂತಾದರೆ ಕೇಶವ° ಬೈಗು.
“ಅಂತೇ ಅದರ ವಿಶಯ ಆಲೋಚನೆ ಮಾಡೆಡಬ್ಬೇ..ಅದು ಹೇಂಗೂ ಹಾಳಾತು.ಅದರೊಟ್ಟಿಂಗೆ ನೀನುದೆ ವ್ಯತೆ ಪಟ್ಟು ಆರೋಗ್ಯ ಹಾಳು ಮಾಡೆಡ.”
ಹೀಂಗೇ ವೊರುಶ ನಾಲ್ಕೈದು ಶುದ್ದಿಲ್ಲದ್ದಾಂಗೆ ದಾಂಟಿ ಹೋತು. ಶೈಲಂಗೂ ಟೀಚರು ಕೆಲಸ ಸಿಕ್ಕಿತ್ತು.ಎರಡು ಮಕ್ಕಳೂ ಆದವು.
ಸುಶೀಲನ ಶುದ್ದಿ ಈಗ ಹಳತ್ತಾತು.ಅಂದರೂ ಕೆಲಾವು ಜನ ಶೈಲನ ಕಂಡಪ್ಪಗಳೋ,ಶಾರದೆಯ ಕಂಡಪ್ಪಗಳೋ ಈ ವಿಶಯ ಮೆಲ್ಲಂಗೆ ಒಕ್ಕುವ ಕ್ರಮವೂ ಇದ್ದತ್ತು..ಆರಿಂಗೂ ಅದು ಎಲ್ಲಿಗೆ ಹೋತು,ಎಲ್ಲಿದ್ದು ಯೇವ ಶುದ್ದಿಯೂ ಗೊಂತಾಯಿದಿಲ್ಲೆ.
ಶಾರದೆಯ ತಲೆಕಸವು ಹಣ್ಣಪ್ಪಲೆ ಸುರುವಾತು.ಈಗ ಅದು ಎಲ್ಲೋರಿಂಗು ಶಾರದಕ್ಕ°.
ಚಂದ್ರಣ್ಣನ ಆರೋಗ್ಯಲ್ಲೂ ಅಂಬಗಂಬಗ ಏರಿಳಿತ ಅಪ್ಪಲೆ ಸುರುವಾತು. ಒಂದೊಂದರಿ ಏನೂ ಎಡಿಯದ್ದೆ ಕಂಗಾಲು.ಅಂಬಗ ಒಂದರಿ ದೊಡ್ಡ ಆಸ್ಪತ್ರೆಗೆ ಕರಕ್ಕೊಂಡು ಹೋಗಿ ಅಡ್ಮಿಟ್ ಮಾಡಿ ಎರಡು ಮೂರು ಇಂಜೆಕ್ಷನೆಲ್ಲ ಕೊಟ್ಟಪ್ಪಗ ರಜ್ಜ ಸರಿಯಾವ್ತು.
ಈ ಸರ್ತಿ ಚಂದ್ರಣ್ಣಂಗೆ ಬಂದದು ಜ್ವರ! ಚಳಿ ಜ್ವರ ,ಕಫ ತುಂಬಿ ಉಸಿಲು ಬಿಡ್ಲೆ ಬಂಙಾಗಿ ನಡುಗಿಯಪ್ಪಗ ಕೇಶವ° ಈ ದೊಡ್ಡ ಆಸ್ಪತ್ರೆಗೆ ಸೀದಾ ಕರಕ್ಕೊಂಡು ಬಂದ°. ಅವು ಜ್ವರ ಜೋರಿದ್ದೂಳಿ ಐಸಿಯು ವಿಂಗೆ ಕರಕ್ಕೊಂಡು ಹೋದವು.”ಎಂತ ಹೆದರೆಡಿ.ಎರಡು ದಿನಲ್ಲಿ ಸರಿಯಕ್ಕು ” ಹೇಳಿ ಅವು ಹೇಳಿರೂ ಡಾಕ್ಟರಕ್ಕಳ ಮೋರೆ ನೋಡುಗ ಮಾಂತ್ರ ಕೇಶವಂಗೆ ಎಂತೋ ಸಂಶಯ ಬಯಿಂದು.
• * * * * * * * * *
“ಸುಶೀ…..ಸುಶೀ…….” ಅರೆ ಒರಕ್ಕಿಲ್ಲಿ ಅಬ್ಬೆ ಹಾಂಗೆ ಹೇಳುದು ಕೇಳುಗ ಶೈಲಂಗೆ ಎಂತ ಮಾಡೆಕೂಳಿ ಗೊಂತಾಯಿದಿಲ್ಲೆ. ಇಷ್ಟರವರೆಗೆ ಅದರ ಹೆಸರೆತ್ತಿರೆ ಬೈವ ಅಬ್ಬೆ ಇಂದೀಗ ಈ ಆಸ್ಪತ್ರೆಯ ಒಳ ಅರೆ ಒರಕ್ಕಿಲ್ಲಿ ಸುಶೀಯ ಹೆಸರು ಹೇಳ್ಲೆ ಕಾರಣ ಎಂತ?
ಕಣ್ಣಿಂಗೆ ಗೊಂತಾಗದ್ರೂ ಕರುಳಿಂಗೆ ಗೊಂತಾವ್ತು’ ಹೇಳುದು ಇದನ್ನೇ ಆದಿಕ್ಕು. ಬಾಯಿಲಿ ಪೋರ್ಸಿಂಗೆ ಎಷ್ಟು ಬೈದರೂ ಮನಸ್ಸಿನೊಳ ಮಗಳು ಹೇಳುವ ಪ್ರೀತಿ ಇಲ್ಲದ್ದಿರ್ತೋ? ಈಗ ಸುಶೀಲನೂ ಇದೇ ಆಸ್ಪತ್ರೆಲಿ ಇದ್ದು ಹೇಳಿ ಗೊಂತಾದರೆ ಅಬ್ಬೆ ಎಂತ ಮಾಡುಗು?!
“ಬೇಡ ,ತಳಿಯದ್ದೆ ಕೂದರೆ ರಗಾಳೆ ಇಲ್ಲೆ,ಆ ಕೂಸೆಂತ ಮಾಡ್ತೋ? ನೆತ್ತರು ಕೊಡ್ಲೆ ಹೋದ ಕೇಶವನನ್ನು ಕಾಣ್ತಿಲ್ಲೆ. ಒಟ್ಟಾರೆ ಮನಸ್ಸಿನ ಮೂಲೆಲಿ ಎಂತೋ ಅಪಶಕುನದ ಬಳ್ಳಿ ನೇಲುವ ಹಾಂಗೆ ಎಂತೆಲ್ಲ ಆತದಕ್ಕೆ.
” ಸುಶೀ…ಜಾಗ್ರತೆ ಮಗಳೂ..ಕೈ ಬಿಡೆಡ..ಹೊಂಡಕ್ಕೆ ಬೀಳುವೆ..ಅಯ್ಯೋ….! ಸುಶೀ….ಬಿದ್ದತ್ತು…..ಹೊಂಡಕ್ಕೆ ಬಿದ್ದತ್ತು..ಕೇಶೂ….ಒಂದರಿ ಅದರ ನೆಗ್ಗು…ಬೇಗ…..” ಹೇಳಿ ಎದ್ದು ಕೂದತ್ತು ಶಾರದಕ್ಕ°
ಶೈಲಂಗೆ ಇದರ ನೋಡಿ ಹೆದರಿಕೆ ಆತು.
“ಅಬ್ಬೇ….ಅಬ್ಬೇ…ಎಂತಾತು?” ಹೇಳಿಂಡು ಮೆಲ್ಲಂಗೆ ತಟ್ಟಿ ಏಳ್ಸಿತ್ತು.
“ಎಂತ ಶೈಲಾ…ಎಂತಾತು?” ಶಾರದಕ್ಕ° ಪಕ್ಕನೆ ಎದ್ದು ಸರೀ ಕೂದವು.
“ಎಂತಯಿಲ್ಲೆ ಅಬ್ಬೇ..ನೀನೆಂತೋ ಒರಕ್ಕಿಲ್ಲಿ ರಜ ಬೊಬ್ಬೆ ಹಾಕಿದೆ,ಇದು ಆಸ್ಪತ್ರೆ ಆದ ಕಾರಣ ಏಳ್ಸಿದೆ”
“ಹ್ಹೋ…ಅಪ್ಪೋ…ಆನು ಬೊಬ್ಬೆ ಹಾಕಿದನಾ? ಎಂತೋ ಭಯಂಕರ ಕನಸು ಬಿದ್ದತ್ತು ಶೈಲಾ!!!! ಈಗ ಸರೀ ನೆಂಪಾಗದ್ರೂ ಮೈಯೆಲ್ಲ ಝುಮ್ ಆವ್ತು! ” ಅಷ್ಟು ಹೇಳಿಕ್ಕಿ ಎದ್ದು ನಿಂದವು.
‘ಸುಶೀಯ ಕನಸಾಳಿ ಕೇಳೆಕು ಗ್ರೇಶಿರೂ ಈಗ ಅದಕ್ಕೆ ಸೀದಾ ಕೇಳ್ಲೆ ಧೈರ್ಯ ಬಯಿಂದಿಲ್ಲೆ.ಈಗ ಸುಶೀ ಇಲ್ಲೇ ಇದ್ದೂಳಿ ಗೊಂತಾದರೆ ಅಬ್ಬೆ ಎಂತ ಮಾಡುಗು? ‘ ಶೈಲಂಗೆ ಅದರ ಬಾಣಂತನದ ಸಮಯ ನೆಂಪಾತು.
“ನಿಂಗೊಗೆ ಅಣ್ಣನ ನೋಡ್ಯೊಂಡು ಬಾಣಂತನ ಮಾಡ್ಲೆ ಕಷ್ಟ ಅಕ್ಕು ಅತ್ತಿಗೇ.ಎನ್ನ ಮಗಳಕ್ಕಳ ನೋಡಿಕೊಂಡ ಹಾಂಗೆ ನೋಡ್ಯೊಂಬೆ” ಹೇಳಿ ಅದರ ಅತ್ತೆಯೋರು ಶಾರದಕ್ಕನತ್ರೆ ಹೇಳಿದ್ದು ಮಾಂತ್ರ ಅಲ್ಲ,ಆ ಮಾತಿನಾಂಗೆ ನೆಡಕ್ಕೊಂಡಿದವು ಕೂಡ.
ಅಂದರೂ ಎರಡನೇ ಬಾಣಂತನಕ್ಕಪ್ಪಗ ಆಸ್ಪತ್ರೆಲಿ ನಿಂಬಲೆ ಶಾರದಕ್ಕನೇ ಬಯಿಂದು.
“ಸುರುವಾಣದ್ದಕ್ಕೆ ಎಡ್ತಿದಿಲ್ಲೆ. ಈ ಸರ್ತಿಯಾದರೂ ಇಷ್ಟು ಮಾಡ್ತೆ” ಹೇಳಿದಕ್ಕೆ ಅವ್ವು ಆರೂ ಬೇಡ ಹೇಳಿದ್ದವಿಲ್ಲೆ.
‘ಅಬ್ಬೆ ಎಷ್ಟು ಕೊಂಗಾಟಲ್ಲಿ ನೋಡಿದ್ದು.ಹಿಳ್ಳೆ,ಬಾಣಂತಿಯ ಬಗ್ಗೆ ಎಷ್ಟು ಜಾಗ್ರತೆ!! ಆದರೆ ಈಗ ಸುಶೀಯ ಹತ್ತರೆ ಆರಿದ್ದವು? ತಂಗಮ್ಮ ಎಲ್ಲಿ ಹೋಯಿದೋ,ದಿನೇಸ ಎಂತ ಮಾಡ್ತೋ?
ಈಗ ಅಬ್ಬೆ ಹತ್ತರೆ ಇರ್ತಿದ್ದರೆ ಸುಶೀಗೆ ಎಷ್ಟು ಧೈರ್ಯ ಬತ್ತಿತು.ದಿನೇಸನೊಟ್ಟಿಂಗೆ ಓಡುಗ ಯೆಂತದೂ ನೆಂಪಿಲ್ಲೆ.ಈಗ ಅನುಭವಿಸುತ್ತು ಕಾಣ್ತು. ಪಾಪದ ಆ ಕೂಸಿಂಗೆ ಬಂಙ.
ವಿಶಯ ಎಂತರಾಳಿ ಸರಿಯಾಗಿ ಸುಶೀಯತ್ರೆ ಮಾತಾಡೆಕು.ಕೇಶವ° ಬೈಗು.ಇವುದೆ ಒಪ್ಪವು.ಅಂದರೂ ಅದರ ಅವಸ್ಥೆ ನೋಡುಗ ಎಂತೋ ಭಾರೀ ಬಂಙದ ಸ್ಥಿತಿಲಿದ್ದಾಂಗಿದ್ದು……’ ಹೀಂಗೇ ಶೈಲನ ಆಲೋಚನೆಗೊ ಗಟ್ಟ ಹತ್ತಿ ಹೋಪಗ ಒಂದು ನರ್ಸು ಬಂದು
“ನಿಮ್ಮನ್ನು ಮೇಲೆ ಒಬ್ಬರು ಕರೀತಾರೆ” ಹೇಳಿತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 24: https://oppanna.com/kathe/swayamvara-24-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
flash back ಕಳುದು ಕತೆ ಮುಂದುವರುದತ್ತು. ಕುತೂಹಲವನ್ನುದೆ ಮುಂದುವರುಸೆಂಡು ಹೋವ್ತಾ ಇದ್ದು. ಕತೆ ರೈಸಲಿ.
ಕಥೆ ತುಂಬಾ ಲಾಯ್ಕಲ್ಲಿ ಮುಂದೆ ಹೋವತ್ತ ಇದ್ದು…ನಿಂಗಳ ಬರವಣಿಗೆ ಶೈಲಿ ಮೆಚ್ಚೆಕ್ಕು…ಒಂದು ಗೆರೆ ಬರದರು ಅದು ಕಥೆಯೇ…ತುಂಬಾ ತುಂಬಾ ಲಾಯ್ಕಿದ್ದು….ಇಂಟರೆಸ್ಟಿಂಗ್