Oppanna.com

ಸ್ವಯಂವರ : ಕಾದಂಬರಿ : ಭಾಗ 26 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   02/12/2019    2 ಒಪ್ಪಂಗೊ

ಸ್ವಯಂವರ ಭಾಗ 26

ಸುಶೀಲನ ಬೊಬ್ಬೆ ಕೇಳಿ ಮನುಗಿದಲ್ಲಿಂದ ಎದ್ದು ಕೂದ ಕೇಶವಂಗೆ ಒಂದರಿ ಅದರ ನೋಡೆಕೂಳಿ ಆತು.ನರ್ಸ್ ನ ಹತ್ತರೆ ಕೇಳಿಯಪ್ಪಗ
“ನಿಂಗೊ ನೆತ್ತರು ಕೊಟ್ಟಿಕ್ಕಿ ಹೋಗಿ” ಹೇಳಿತ್ತು.ಅದು ಹಾಂಗೆ ಹೇಳಿದ ಕಾರಣ ಅಲ್ಲೇ ಕಣ್ಣು ಮುಚ್ಚಿ ಮನುಗಿದ°. ಒಂದೊಂದೇ ಹನಿ ನೆತ್ತರು ವಯರಿಲ್ಲೇ ಆಗಿ ಹೋಪಗಳೂ ಅವನ ಮನಸ್ಸು ಸುಶೀಯ ಹತ್ತರೇ ಇದ್ದತ್ತು.
‘ಆಗ ಶೈಲ° ಆ ಒಪ್ಪಕ್ಕನ ಕರಕ್ಕೊಂಡದಕ್ಕೆ ಬೈದರೂ ಈಗ ಮಾಂತ್ರ ಅವನ ಮನಸ್ಸು ಉಯ್ಯಾಲೆ ಆಡ್ಲೆ ಸುರುವಾತು.
‘ಶೈಲನ ಮನಸ್ಸು ಹೂಗಿನ ಹಾಂಗಿಪ್ಪದು.ಆರಿಂಗೂ ಹಾಳಾಯೆಕೂಳಿ ಗ್ರೇಶುವ ಜೆನ ಅಲ್ಲ.ನಾವು ಎಷ್ಟು ಕಷ್ಟ ಬಂದರೂ ನಮ್ಮಿಂದಾಗಿ ಇನ್ನೊಬ್ಬಂಗೆ ಬಂಙಪ್ಪಲಾಗಾಳಿ ಮಾಂತ್ರ ಅದಕ್ಕಿಪ್ಪದು.ಹಾಂಗೇ ಆದಿಕ್ಕು ಸುಶೀಯ ಮಗಳ ಕಂಡಪ್ಪಗ ಮನಸ್ಸು ಕರಗಿದ್ದದು.ಸುಶೀಯ ಅವಸ್ಥೆ ಎಂತದೋ? ದೇವರಿಂಗೇ ಗೊಂತು..’

“ನೆತ್ತರು ತೆಗದಾತು.ಇನ್ನೊಂದು ಹತ್ತು ನಿಮಿಷ ಕಳುದು ನಿಂಗೊ ಎದ್ದರೆ ಸಾಕು” ಹೇಳಿ ಸೂಜಿ ಕುತ್ತಿದಲ್ಲಿ ಉದ್ದಲೆ ಹತ್ತಿ ತುಂಡು ಕೊಟ್ಟಿಕ್ಕಿ ಆ ನರ್ಸು ಹೆರ ಹೋತು.

ಹತ್ತು ನಿಮಿಷ ಕಳುದು ಎದ್ದವಂಗೆ ಸುಶೀಲನ ನೋಡದ್ದೆ ಮನಸ್ಸು ಕೇಳ!!
ಅಲ್ಲೇ ಹೆರ ಇಪ್ಪ ನರ್ಸಿನತ್ತರೆ ಒಳ ಬಿಡ್ಲೆಡಿಗೋಳಿ ಕೇಳಿದ°.
“ಇಲ್ಲೆ. ಈ ಇರುಳು ಹಾಂಗೆಲ್ಲ ಒಳ ಬಿಡುವ ಕ್ರಮ ಇಲ್ಲೆ.ಎಂಗೊಗೆ ಮತ್ತೆ ಸಮಸ್ಯೆ ಆವ್ತು” ಹೇಳಿ ಜೋರು ಮಾಡಿರೂ ರಜಾ ಹೊತ್ತು ಕಳುದು “ಒಳ ಬಿಡುವ°,ನಿಂಗೊ ಇಲ್ಲಿಯೇ ನಿಲ್ಲಿ” ಹೇಳಿಕ್ಕಿ ಒಳ ಹೋತು.

“ಮಗುವಿಂಗೆ ಹಾಲು ಕೊಡ್ತಾಯಿದ್ದು.ಅದರೊಟ್ಟಿಂಗೆ ಒಂದು ನರ್ಸುದೆ ಇದ್ದು.ಐದು ನಿಮಿಷ ಕಳುದು ಹೋಪಲಕ್ಕು. ಅದರ ಮನಸ್ಸು ಸರಿ ಇಲ್ಲೆ.ನಿಂಗ ಹೋದರೂ ಹೆಚ್ಚು ಜಾಗ್ರತೆ ಮಾಡೆಕು.ಎಂತಾರು ಹೆಚ್ಚು ಕಮ್ಮಿ ಆದರೆ ನಾಳಂಗೆ ಡಾಕ್ಟರಕ್ಕೊ ಎಂಗಳ ಬೈಗು” ಹೆರ ಬಂದು ಕೇಶವಂಗೆ ಮಾಂತ್ರ ಕೇಳುವ ಹಾಂಗೆ ಹೇಳಿತ್ತದು.

ಅದು ಅವಂಗೂ ಗೊಂತಿದ್ದ ಕಾರಣ ರಜಾ ಆಲೋಚನೆ ಮಾಡಿಂಡೇ ಒಳ ಹೋದ್ದದು.ಅಷ್ಟಪ್ಪಗ ಅದು ಮನುಗಿಂಡಿದ್ದತ್ತು.ಹತ್ತರೆ ಇಪ್ಪ ನರ್ಸು “ಮಾತಾಡೆಡಿ” ಹೇಳಿ ಕೈ ಬಾಶೆ ಮಾಡಿರೂ, ಸುಶೀಲನ ಅಂಬಗಾಣ ಅವಸ್ಥೆ ನೋಡಿ ಅವಂಗೆ ಮಾತಾಡ್ಲೆ ಎಡಿಯದ್ದಾಂಗಾತು.

‘ಎಷ್ಟು ಚೆಂದಕೆ ಉರುಟುರುಟಾಗಿದ್ದ ಸುಶೀ ಈಗ ಬರೀ ಎಲುಗು ,ಚೋಲಿ ಮಾಂತ್ರ!!. ಕಣ್ಣೆಲ್ಲ ಹೊಂಡಕ್ಕೆ ಹೋಯಿದು.ಕಣ್ಣ ಕರೇಲಿ ಕೂಗಿದ ಗುರ್ತದ ಹಾಂಗೆ ಕಣ್ಣೀರು ಆ ಕರೆಂಟಿನ ಬೆಣಚ್ಚಿಲ್ಲಿ ಹೊಳವದು ಕಂಡಪ್ಪಗ ಅವನ ಎದೆಲಿ ಎಂತೋ ಸಂಕಟ.ಕೈಯ ನರಂಬೆಲ್ಲ ನೆಗದು ಕಾಣ್ತಾಯಿದ್ದು ‌.ಬಹುಶಃ ಮನೆಂದ ಹೋದ ಮತ್ತೆ ಅದು ಹೊಟ್ಟೆ ತುಂಬ ಉಂಡಿರದಾ ‘ ಹೇಳಿಯೂ ಆತು.ಹೆಚ್ಚು ಹೊತ್ತು ನೋಡ್ಲೆಡಿಯದ್ದೆ ಅವ° ಸೀದಾ ಹೆರ ಬಂದ°.
“ಅಯ್ಯೋ ಎನ್ನ ತಂಗೇ..ನಿನಗೆ ನೀನೇ ಹೀಂಗಿದ್ದ ಅವಸ್ಥೆ ಬಲುಗಿ ಹಾಕಿದೆನ್ನೇ. ಎಂಗೊ ಹೇಂಗಿದರ ನೋಡುದು?” ಹೇಳಿಂಡು ಅಲ್ಲಿಪ್ಪ ಬೆಂಚಿಲ್ಲಿ ಕೂದು ಸಣ್ಣ ಮಕ್ಕಳ ಹಾಂಗೆ ಕೂಗಿದ°

“ಎಂತಾತು ಭಾವಾ°?” ಚಂದ್ರ ಶೇಖರ ಹತ್ತರೆ ಬಂದ°. ಹೇಂಗಿದ್ದ ಪರಿಸ್ಥಿತಿಲೂ ಕಣ್ಣೀರು ತಡದು ನಿಂದವ° ಕೇಶವ°. ಅಪ್ಪನ ಅಸೌಖ್ಯ,ತಂಗೆ ಓಡಿ ಹೋದ್ದು,ಬಂಙ ಬಂದು ಕಲ್ತು ಸೇರಿದ ಕೆಲಸ ಬಿಟ್ಟದು..ಇದೆಲ್ಲ ಆದಪ್ಪಗಳೂ ಒಬ್ಬನೇ ಎಲ್ಲವನ್ನೂ ತಡಕ್ಕೊಂಡಿದ° .ಆದರೆ ಈಗ ಹೀಂಗೆ ಸಣ್ಣ ಮಕ್ಕಳ ಹಾಂಗೆ ಕೂಗುದು ಹೇಳಿರೆ……!!

“ಎನಗೆ ಸುಶೀಯ ನೋಡ್ಲೆಡಿತ್ತಿಲ್ಲೆ ಭಾವಾ°.ಅದರ ಅವಸ್ಥೆ ಬಾಯಿ ಬಿಟ್ಟು ಹೇಳೆಕೂಳಿಲ್ಲೆ.ಅದರ ಕಾಂಬಗಳೇ ಗೊಂತಾವ್ತು. ಈ ಸೌಭಾಗ್ಯಕ್ಕೆ ಬೇಕಾಗಿ ಅದು ದಿನೇಸನೊಟ್ಟಿಂಗೆ ಓಡಿ ಹೋದ್ದಾ? ಹಾಳಾಗಿ ಹೋಗು ಹೇಳಿ ಬಾಯಿಲಿ ಹೇಳಿದ್ದೆ. ಅಂದರೂ ಹೀಂಗಕ್ಕು ಗ್ರೇಶಿದ್ದಿಲ್ಲೆ.ಈಗ ಎಂತ ಮಾಡುದು ಅದರ ಹೇಳಿ!! ಕಣ್ಣಿಲ್ಲಿ ಕಾಣದ್ರೆ ಬೇಜಾರಿತ್ತಿಲ್ಲೆ. ಇನ್ನೀಗ ಬಿಟ್ಟಿಕ್ಕಿ ಹೋಪದೇಂಗೆ?ಕರಕ್ಕೊಂಡು ಹೋವ್ತರೆ ಆ ದಿನೇಸನ ಮದುವೆ ಆದ್ದಕ್ಕೆ ನಾವು ಒಪ್ಪಿಗೆ ಕೊಟ್ಟ ಹಾಂಗಾತಿಲ್ಯಾ? ಅಪ್ಪ° ಸರಿ ಇರ್ತಿದ್ದರೆ ಅಪ್ಪ° ಹೇಳಿದಾಂಗೆ ಮಾಡ್ಲಾವ್ತಿತು.ಇದೀಗ ಆನೆಂತ ಮಾಡುದು? ಮೂರು ಹೊತ್ತು ಚೋರು ತಿಂಬಲೆ ಗತಿಯಿಲ್ಲೆ ಹೇಳಿ ಸುಶೀ ಬಾಯಿಲಿ ಹೇಳೆಕೂಳಿಲ್ಲೆ.ಕಾಂಬಗಳೇ ಗೊಂತಾವ್ತು……. ಎನ್ನ ತಲೆಯೇ ಹಾಳಾವ್ತಾಯಿದ್ದು ಭಾವಾ°…..”

ಚಂದ್ರ ಶೇಖರಂಗೆ ಬೇಜಾರಾದ್ದು ಸುಶೀಲನ ವಿಶಯಲ್ಲಿ ಅಲ್ಲ,ಕೇಶವನ ವಿಷಯಲ್ಲಿ. ಪಾಪ!!
ಸುಶೀಲನ ಅಂದು ತಿದ್ದಲೆ ನೋಡಿಯೂ ಆಯಿದಿಲ್ಲೆ ಅವಂಗೆ. ಅವನ ಮಾತಿಂಗೆ ಆರೂ ಬೆಲೆ ಕೊಟ್ಟಿದವಿಲ್ಲೆ.ಮತ್ತೆ ಬಂಙ ಬಪ್ಪಗ ಆ ಕಷ್ಟ ಪೂರಾ ಅನುಭವಿಸಲೆ ಕೇಶವನೇ ಬೇಕಾಗಿ ಬಂತು. ಅಪ್ಪ° ಅಪ್ಪ° ಹೇಳಿ ಅಪ್ಪನ ಆರೋಗ್ಯ ಸರಿಯಾವ್ತಾ ಹೇಳಿ ಎಷ್ಟು ದಿಕಂಗೆ ಕರಕ್ಕೊಂಡು ಹೋಗಿ ಮದ್ದು ಮಾಡ್ಸಿದ°. ಹೆಚ್ಚು ಪ್ರಯೋಜನ ಆಗದ್ರೂ ಅವನ ಪ್ರಯತ್ನ ಈಗಲೂ ಮಾಡ್ತಾ ಇದ್ದ°.
ಮದುವೆ ವಿಶಯ ತೆಗವಗಲೂ ‘ ಈಗ ಬೇಡ ಭಾವಾ°..ಅಪ್ಪನ ಆರೋಗ್ಯ ಮದಾಲು” ಹೇಳಿ ಮಾತು ಬದಲ್ಸಿಂಡಿತ್ತಿದ್ದ.ಸುಶೀಲ ಹೀಂಗೆ ಹೋದ ಕಾರಣ ಅವಂಗೆ ಕೂಸುಗಳತ್ರೆ ನಂಬಿಕೆ ಇಲ್ಲದ್ದಾಂಗಾಯಿದು ಹೇಳಿ ಅವನ ಕೆಲವು ಕ್ರಮಲ್ಲೇ ಗೊಂತಾಗಿಂಡಿದ್ದತ್ತು.ಶೈಲನೂ ಈ ವಿಶಯಲ್ಲಿ ಒತ್ತಾಯ ಮಾಡಿರೂ ಕೇಳಿದ್ದಾಯಿಲ್ಲೆ.
ಹಾಂಗಿದ್ದ ಜೆನ ಈಗ ಸುಶೀಲನ ನೋಡಿಕ್ಕಿ ಬಂದು ಕೂಗುತ್ತ° ಹೇಳಿ ಆದರೆ ಅವನ ಮನಸ್ಸಿಂಗೆ ಎಷ್ಟು ಸಂಕಟ ಆವ್ತಾಯಿಕ್ಕು ಹೇಳಿ ಅಂದಾಜು ಮಾಡ್ಲೆ ಸಾನು ಎಡ್ತಿದಿಲ್ಲೆ.

“ಹೀಂಗೆ ಸಣ್ಣ ಮಕ್ಕಳ ಹಾಂಗೆ ಕೂಗಿರೆ ಹೇಂಗೆ? ಮಾವ° ಗುಣಾಗಿ ಮನಗೆ ಬಂದಪ್ಪಗ ಕೇಳುವೊ°. ಈಗ ಬೇಕಾರೆ ಆಸ್ಪತ್ರೆಯ ಪೈಸೆ ಕಟ್ಲಕ್ಕು.ಸರೀ ಗೊಂತಿಲ್ಲದ್ದೆ ಸಕಾಯ ಮಾಡಿರೆ ಆ ಪೈಸೆಂದ ಅದಕ್ಕೆ ಉಪಕಾರ ಆಗದ್ರೆ ಎಂತ ಮಾಡುದು? ದಿನೇಸನ ಜಾತಿಯವೆಲ್ಲ ಊರಿಂದೂರಿಂಗೆ ಹೋಪವಲ್ಲದಾ? ಹಾಂಗಾಗಿ ಅದು ಹೀಂಗಿಪ್ಪದಾಗಿಕ್ಕು.” ಚಂದ್ರ ಶೇಖರ ಅವನ ಸಮದಾನ ಮಾಡ್ಲೆಡಿತ್ತಾಳಿ ನೋಡಿದ°.

“ಎನಗೆ ಹಾಂಗೆ ಕಾಣ್ತಿಲ್ಲೆ ಭಾವಾ°, ಸುಶೀಲನ ಒಂದರಿ ನೋಡಿ ನಿಂಗೊ,ಲೆಂಕ್ರಿ ಓಟೆ ಹಾಂಗಾಯಿದು. ಕೈಲಿ ಕಾಲ್ಲಿ ಎಲ್ಲ ನರಂಬು ನೆಗದು ಕಾಣ್ತು. ಮೂರು ಹೊತ್ತು ಸರಿಯಾಗಿ ಚೋರು ಕೂಡ ಸಿಕ್ಕುದ್ದಾಂಗಿದ್ದು ಅದರ ಸ್ಥಿತಿ”.

” ಆತು ನೋಡುವೊ°, ಅದಕ್ಕೆ ಸರೀ ಬೋದ ಬಂದಪ್ಪಗ ಶೈಲನತ್ರೆ ಮಾತಾಡ್ಲೆ ಹೇಳ್ತೆ.” ಭಾವ° ಅಷ್ಟು ಹೇಳಿರೂ ಅವನ ಹೆಚ್ಚು ಸಮದಾನ ಆಯಿದಿಲ್ಲೆ. ಅಬ್ಬೆ ಅಪ್ಪನ ಕೊಂಗಾಟದ ಮಗಳು ಸುಶೀಲನ ಅವಸ್ಥೆಗೆ ಅವನ ಮನಸ್ಸು ಅಸಹಾಯಕತೆಲಿ ದುಃಖ ಪಟ್ಟುಕೊಂಡಿದ್ದತ್ತು.

ಕಣ್ಣು ಮುಚ್ಚಿ ಮನುಗಿದ ಸುಶೀಲಂಗೆ ಅಬ್ಬೆ “ಸುಶೀ..ಸುಶೀ….ಜಾಗ್ರತೆ ಮಗಳೂ..” ಹೇಳಿ ಹೇಳಿದಾಂಗಾಗಿ ಫಕ್ಕನೆ ಕಣ್ಣೊಡದು ನೋಡಿತ್ತು.
“ಅಬ್ಬೇ….ಅಮ್ಮಾ……ನೀನೆಲ್ಲಿದ್ದೆ? ” ಮೆಲ್ಲಂಗೆ ಎದ್ದು ಕೂಬಲೆಡಿತ್ತಾ ನೋಡಿತ್ತು.
“ಈಗ ಏಳೆಡಿ..ಮತ್ತೆ ಡಾಕ್ಟರು ಬಂದ ಮತ್ತೆ ಎದ್ದರೆ ಸಾಕು,ಎಂತಾರಾಯೆಕಾರೆ ಹೇಳಿ” ಅಲ್ಲಿಪ್ಪ ನರ್ಸು ಬಂದು ಹೇಳಿಯಪ್ಪಗ ಹೊಸ ಜೆನರ ನೋಡುವ ಹಾಂಗೆ ಅದರ ನೋಡಿತ್ತು ಸುಶೀಲ.
ಆ ನರ್ಸಿಂಗೂ ಹಾಂಗೇ ಆತು.ಆಸ್ಪತ್ರಗೆ ಬಂದ ಲಾಗಾಯ್ತು ಬೊಬ್ಬೆ ಹೊಡದು ಗೌಜಿ ಮಾಡಿಂಡಿದ್ದದಕ್ಕೆ ಈಗ ಎಂತಾತು? ಎಲ್ಲ ಸರಿಯಾತಾದಿಕ್ಕು.ಬಚಾವು.ನೆತ್ತರು ಕೊಟ್ಟಪ್ಪಗ ಸರಿಯಾತನ್ನೇ.

ಸುಶೀಲ ಅದರನ್ನೇ ಮತ್ತೆ ಮತ್ತೆ ನೋಡಿತ್ತು.
‘ಅಕ್ಕ° ಬಯಿಂದಾ ಎನ್ನ ನೋಡ್ಲೆ,ಅಣ್ಣ ಬಯಿಂದನಾ?, ಎನಗೇಕೆ ಹೀಂಗೆ ಅವೆಲ್ಲ ಇಲ್ಲಿಗೆ ಬಂದ ಹಾಂಗಪ್ಪದು.ಎಲ್ಲ ಎನ್ನ ಭ್ರಮೆಯಾ? ಅಲ್ಲ….ಅಲ್ಲ…ಅದು ಮನುಗಿಂಡೇ ತಲೆಯಾಡ್ಸಿತ್ತು.
“ಅಕ್ಕನ ಕಂಡಿದೆ ಆನು.ಎನ್ನ ಒಪ್ಪಕ್ಕನ ಒಟ್ಟಿಂಗೆ ಬಂದದು.ಈಗ ನೆಂಪಾವ್ತು. ಅಣ್ಣ ಬಯಿಂದ°.ಎನ್ನ ದೂರಂದ ನಿಂದು ನೋಡಿಕ್ಕಿ ಹೋದ್ದು.ಅವರ ಇನ್ನೊಂದರಿ ಕಾಣೆಕೆನಗೆ.ಆನು ಮಾಡಿದ ಅಪರಾಧಕ್ಕೆ ದೇವರು ಕೊಟ್ಟ ಶಿಕ್ಷೆ ಇದು. ಅಬ್ಬೆಪ್ಪನ ಮನಸಿಂಗೆ ಕೊಟ್ಟ ಬೇಜಾರಕ್ಕೆ ಪ್ರಾಯಶ್ಚಿತ್ತ ಇಲ್ಲೆ.ಆನಿದರ ಎಲ್ಲ ಅನುಭವಿಸೆಕು.ಎನ್ನೊಟ್ಟಿಂಗೆ ಈ ಮಕ್ಕಳುದೆ ಅನುಭವಿಸೆಕು.ಇದು ದಿನೇಸನ ಮಕ್ಕೊ. ಇವಕ್ಕೆ ಜಾತಿ ಇಲ್ಲೆ ಸಂಸ್ಕಾರ ಇಲ್ಲೆ.ಎಂತದೂ ಇಲ್ಲೆ..’

“ನಿಂಗೊಗೆ ಎಂತಾರು ಬೇಕಾ? ಆನು ಕೊಡ್ತೆ”
ಸುಶೀಲ ಮನುಗಿದಲ್ಲೇ ನೆರಕ್ಕುದು ಕಂಡು ನರ್ಸು ಅದರ ಹತ್ತರಂಗೆ ಬಂತು.
“ಎನಗೆ ಎನ್ನ ಅಕ್ಕನ ತೋರ್ಸುಲೆಡಿಗಾ? ಒಂದರಿ ನೋಡೆಕೆನಗೆ”
“ಅವು ಹೆರ ಇದ್ದವಾ? ”
“ಇಲ್ಲೆ,ಅದು ಎಲ್ಲಿದ್ದು ಗೊಂತಿಲ್ಲೆ. ಆನವರ ಪ್ರೀತಿಯ ಅರ್ಥ ಮಾಡದ್ದೆ ಎನ್ನಷ್ಟಕೇ ಓಡಿ ಬಂದೆ,ಎನ್ನ ಪಾಪಕ್ಕೆ ಪರಿಹಾರ ಸಿಕ್ಕೆಕಾರೆ ಅವರ ನೋಡಿ,ಕಾಲು ಹಿಡಿಯೆಕು”

ಇದು ಹೀಂಗೆಲ್ಲ ಏನಾರು ಹೇಳುದೊಂದೂ ಆ ನರ್ಸಿಂಗೆ ಅರ್ಥಾಯಿದಿಲ್ಲೆ. ಅಂದರೂ ಇದೆಂತೋ ಭಾರೀ ಕಷ್ಟಲ್ಲಿದ್ದೂಳಿ ಗೊಂತಾತು.ಹಾಂಗೆ ಇದರ ಅವಸ್ಥೆ ಹೀಂಗಾದ್ದು ಹೇಳಿ ಜೀವನದ ಅನುಭವ ಇಪ್ಪ ಅದು ಅಂತೇ ಅಂದಾಜು ಮಾಡಿತ್ತು.
“ನಿಂಗೊ ಕೈ ಹನ್ಸುಲಾಗ, ಅಕ್ಕನ ಹುಡ್ಕುವೊ°, ಅವು ನಿಂಗಳ ನೋಡ್ಲೆ ಬಕ್ಕು. ಈಗ ಹೆಚ್ಚು ಮಾತಾಡೆಡಿ” ಹೇಳಿ ಅದರ ಹತ್ತರೆ ಕೂದು ಕೈ ಹಿಡ್ಕೊಂಡತ್ತು.

“ಆಗ ಎನ್ನ ನೋಡ್ಲೆ ಆರಾರು ಬಯಿಂದವಾ?” ಸುಶೀಲ ಪುನಃ ಕೇಳಿತ್ತು.ಶೈಲನ ನೋಡಿ ಬೊಬ್ಬೆ ಹೊಡವಗ ಈ ನರ್ಸು ಇತ್ತಿದ್ದಿಲ್ಲೆ. ಹಾಂಗಾಗಿ ಅದು ಗೊಂತಿಲ್ಲೆ ಅದಕ್ಕೆ. ಕೇಶವ° ಬಪ್ಪಗ ಇದ್ದತ್ತು.ರೆಜಾ ದೂರಂದ ನೋಡಿ ಸಂಕಟ ಪಟ್ಟು ಕೊಂಡು ಹೋದ್ದರ ನೋಡಿದ್ದದು‌.ಆಸ್ಪತ್ರೆಲಿ ಇದೆಲ್ಲ ಅದಕ್ಕೆ ಹೊಸ ವಿಶಯವೇ ಅಲ್ಲದ್ದ ಕಾರಣ ಹೆಚ್ಚು ಗುಮಾನ ಕೊಟ್ಟಿದೂ ಇಲ್ಲೆ.ಈಗ ಸುಶೀಲ ಕೇಳಿಯಪ್ಪಗ ನೆಂಪಾತು.
“ಅಪ್ಪು. ಒಬ್ಬ ಜವ್ವನಿಗ° ಬಂದು ನೋಡಿಕ್ಕಿ ಹೋಯಿದ°.ಸಪೂರಾಗಿ ಉದ್ದ ಇದ್ದ.ಮೂವತ್ತರ ಒಳ ಇಕ್ಕಷ್ಟೆ ಪ್ರಾಯ.ಆನು ಮಾತಾಡಿದ್ದಿಲ್ಲೆ. ಅವ° ಹತ್ತರಂಗೆ ಬಯಿಂದನೂ ಇಲ್ಲೆ”.

ಅಂಬಗ ಆಗ ಬಂದದು ಅಣ್ಣ ಆದಿಕ್ಕಾ. ಅವ° ಇಲ್ಲಿಗೆ ಬಪ್ಪದೆಂತಕೆ? ಅದೂದೆ ಈ ಆಸ್ಪತ್ರೆಗೆ. ಎಲ್ಲ ಎನ್ನ ಭ್ರಮೆ’ ಹಾಂಗೆ ಗ್ರೇಶಿಂಡು ಕಣ್ಣು ಮುಚ್ಚಿ ಮನುಗಿತ್ತು.ಕಣ್ಣೀರು ಮಾತ್ರ ಕೆಪ್ಪಟೆಲಿ ಇಳುಕ್ಕೊಂಡೇ ಇದ್ದತ್ತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 26 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಕತೆ ರೈಸುತ್ತರ ಒಟ್ಟಿಂಗೆ ಮನಸ್ಸಿಂಗೆ ಚುರುಕ್ ಮುಟ್ಟುಸುತ್ತಾ ಇದ್ದು. ಅಂತೂ ಕೇಶವಂಗೆ ಈಗ ಉಭಯ ಸಂಕಟ.

  2. ಈ ಕಥೆ ಓದುವಾಗ ಅದರ ನಾವೇ ಅನುಭವಿಸುತ್ತ ಹಾಂಗೆ ಆವುತ್ತು…ಪಾತ್ರವೇ ನಾವೇ ಹೇಳುವಷ್ಟು…..ಆರಿಂಗೂ ಕಷ್ಟ ಅನುಭವಿಸದ್ದೆ ಬುದ್ಧಿ ಬತ್ತಿಲ್ಲೆ… ಇನ್ನು ಕಾಲು ಹಿಡಿದು ಎಂಥ ಮಾಡುದು… ಅಪ್ಪದೆ ಲ್ಲ ಆಗಿ ಆತನ್ನೆ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×