Oppanna.com

ಸ್ವಯಂವರ : ಕಾದಂಬರಿ : ಭಾಗ 27 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   09/12/2019    2 ಒಪ್ಪಂಗೊ

ಕಣ್ಣು ಮುಚ್ಚಿ ಮನುಗಿಯಪ್ಪಗ ಸುಶೀಲಂಗೆ ದಿನೇಸನ ನೆಂಪಾತು.
“ಛೀ…ಎಂತ ಚೆಂದ ಕಂಡು ಅದರೊಟ್ಟಿಂಗೆ ಓಡಿ ಬಂದದೋ” ಮನಸ್ಸಿಲ್ಲೇ ಹೇಸಿಗೆ ಆದಾಂಗಾತು.
ಅಂಬಗ ಯಾವುದೋ ಸಿನೆಮಾದ ಕತೆ ನೋಡಿ ಅದರಲ್ಲಿ ಇಪ್ಪ ಹಾಂಗಕ್ಕು, ದಿನೇಸ ಹೇಳಿರೆ ಸಿನೆಮಾ ನಟನ ಹಾಂಗೆ ಹೇಳಿ ಗ್ರೇಶಿದ್ದು.
ಮದುವೆ ಕಳುದ ಮತ್ತೆ ತುಂಬ ಪೈಸೆ ಅಕ್ಕು, ದೊಡ್ಡ ಮನೆಲಿ ನಿಂಬಲಕ್ಕು, ಅಬ್ಬೆ ಅಪ್ಪನ ನೋಡ್ಲೆ ಕಾರಿಲ್ಲಿ ಬಪ್ಪಲಕ್ಕು..ಅಕ್ಕನಿಂದಲೂ ಲಾಯ್ಕದ ಜೀವನ ಮಾಡಿ ತೋರ್ಸೆಕು ಹೇಳಿ ಕನಸು ಕಂಡದು!!. ಆದರೆ ಅಕೇರಿಗೆ ಆದ್ದೆಂತರ!!!!

“ಎಂತಾವ್ತು? ಎಂತಾರಾವ್ತರೆ ಹೇಳೆಕು, ಡಾಕ್ಟರ್ ನಿಂಗಳ ಒಟ್ಟಿಂಗೆ ಇಪ್ಪಲೆ ಹೇಳಿಕ್ಕಿ ಹೋಯಿದವು.”ಅಗತ್ಯ ಇದ್ದರೆ ಬತ್ತೆ” ಹೇಳಿದ್ದವು.ಸಮಸ್ಯೆ ಎಂತಾರಿದ್ದರೆ ಹೇಳಿ” ಸುಶೀಲ ಕೂಗಿಂಡು ತಲೆ ಆಡ್ಸುಗ ಆ ನರ್ಸು ಅದರ ಕೈ ಹಿಡುದು ಕೇಳಿತ್ತು.

“ಎನಗೆನ್ನ ಮಗಳ ನೋಡೆಕು,ಎನಗಾರೂ ಇಲ್ಲೆ.ಮಗಳು ಹೆರ ಇದ್ದತ್ತು.ಈಗ ಎಲ್ಲಿದ್ದು ಗೊಂತಿಲ್ಲೆ” ಸುಶೀಲ ಪುನಃ ಕೂಗಲೆ ಸುರು ಮಾಡಿತ್ತು.

“ಸಾಕು ಕೂಗಿತ್ತು.ಬಾಳಂತಿಯಕ್ಕೊ ಹೀಂಗೆ ಕೂಗಿರೆ ನಂಜು ಏರುತ್ತು ಹೇಳಿ ಹಳಬ್ಬರು ಹೇಳುದು ಕೇಳಿದ್ದೆ.ಈಗ ಆಸ್ಪತ್ರೆ ಮದ್ದಾದರೂ ರಜ್ಜ ಜಾಗ್ರತೆ ಮಾಡದ್ರಾಗ.ಎಂತಕೆ ಇಷ್ಟು ಬೇಜಾರ, ಎನ್ನತ್ರೆ ಹೇಳಿ,ಒಬ್ಬನೇ ದುಃಖ ಅನುಭವಿಸುಗ ಅದರ ಇನ್ನೊಬ್ಬರ ಹತ್ತರೆ ಹಂಚೆಕಾಡ,ಎನ್ನ ಹೆಸರು ಪ್ರಮೀಳಾ.ಮನಸ್ಸಿಲ್ಲಿ ಮಡುಗುವ ಸಂಕಟವ ಎನ್ನತ್ರೆ ಹೇಳ್ಲಕ್ಕಾದರೆ ಹೇಳಿ”

“ಆನೆಂತರ ಹೇಳೆಕಾದ್ದು? ಹೇಂಗೆ ಹೇಳೆಕಾದ್ದು,ರಾಜಕುಮಾರಿಯ ಹಾಂಗೆ ಬೆಳದ ಆನು ಎನ್ನ ಹಾಂಕಾರಂದಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದದರ ಕೇಳಿರೆ ನೀನು ಕೂಡ ಎನ್ನ ಮೋರಗೆ ತುಪ್ಪುವೆ” ಸುಶೀಲನ ದೆನಿಲಿ ಬಲವೇ ಇದ್ದತ್ತಿಲ್ಲೆ.

“ನಿಂಗೊಗೀಗ ತುಂಬ ನಿತ್ರಾಣ ಇದ್ದು.ಈಗ ಸುಮ್ಮನೆ ಮನುಗಿ.ನಿಂಗೊ ಆಸ್ಪತ್ರೆಂದ ಹೋಪ ಮದಲು ಆನು ಖಂಡಿತ ನಿಂಗಳ ಕತೆ ಕೇಳುವೆ.

” ಅಲ್ಲ..ಎನಗೀಗ ಹೇಳೆಕು.ಈ ಆಸ್ಪತ್ರೆಂದ ಹೋದರೆ ಎನಗೆ ನಿಂಬಲೆ ಸಾನು ಮನೆಯಿಲ್ಲೆ.ಕರಕ್ಕೊಂಡು ಹೋಪವು ಇಲ್ಲೆ‌.ಎನ್ನ ಪ್ರೀತಿಸುವವುದೆ ಇಲ್ಲೆ”
ಪ್ರಮೀಳ° ಸುಶೀಲನ ಮೋರೆಯನ್ನೇ ನೋಡಿತ್ತು.ಮಾತಾಡ್ಲೆ ಬಂಙ ಬತ್ತಾಯಿದ್ದು. ಸ್ವರ ನೇರ್ಪ ಹೆರಡ್ತಿಲ್ಲೆ.ಅಲ್ಲಿಂದಲೂ ಅದಕ್ಕೆ ಕತೆ ಹೇಳೆಕಾಡ.ಕರಕ್ಕೊಂಡು ಹೋಪವು ಇಲ್ಲದ್ರೆ ಇಲ್ಲದ್ರೆ ಇದರ ಇಲ್ಲಿ ಸೇರ್ಸಿದ್ದಾರು..ಎಂತ ಸಂಗತಿಯೋ ಎಂತದೋ? ಆಗ ಬಂದು ನೋಡಿದ್ದೆಲ್ಲ ಆರಾದಿಕ್ಕು? ನೆತ್ತರು ಕೊಡ್ಲೆ ಬಂದ ಜವ್ವನಿಗ ಆರು?’ ಅದರ ಮನಸಿಲ್ಲಿ ಹೀಂಗಿದ್ದ ಪ್ರಶ್ನೆಗೊ ಎಲ್ಲ ಇಪ್ಪಗ ಸುಶೀಲ ಮೆಲ್ಲಂಗೆ ಮಾತಾಡ್ಲೆ ಸುರು ಮಾಡಿತ್ತು.ಮಾತಾಡುವ ಒಟ್ಟಿಂಗೆ ಅದರ ಮನಸಿಲ್ಲಿ ಅಂದ್ರಾಣ ವಿಶಯಂಗೊ ಎಲ್ಲ ಸಿನೆಮಾ ಚಿತ್ರದ ಹಾಂಗೆ ಮೂಡಿಬಂತು.

ಅಂದು!! ಆ ದಿನ!! ಸುಶೀಲಂಗೆ ಎಂದೂ ಮರೆಯ!!

ಮನೆಬಿಟ್ಟು ಹೋಪಲೆ ಹೆರಟ ತಂಗಮ್ಮ ವಾಪಾಸು ಅಜ್ಜಿಯ ನೋಡ್ಲೆ ಬಂದಿಕ್ಕಿ, ಸುಶೀಲನ ಹತ್ತರೆ ದಿನಿಗೇಳಿ ಇರುಳಪ್ಪಗ ಹಟ್ಟಿಯ ಹಿಂದಂಗೆ ದಿನೇಸ ಬಕ್ಕು. ಹೇಂಗಾರು ಉಪಾಯ ಮಾಡಿ ಮನೆಂದ ಹೆರ ಬನ್ನೀ. ಮದುವೆ ಕಳುದ ಮತ್ತೆ ನಿಂಗಳ ಅಪ್ಪ° ಒಪ್ಪದ್ದೆಂತ ಮಾಡ್ತಾಳಿಲ್ಯಾ?” ಹೇಳಿತ್ತು.

ಸುಶೀಲಂಗೆ ಅದು ಭಾರೀ ಕೊಶಿಯಾತು. ಹೇಂಗಾರು ಮಾಡಿ ಮನೆಬಿಟ್ಟು ಹೋಗಿ ದಿನೇಸನ ಹೆಂಡತ್ತಿಯಾಗಿಂಡು ಧೈರ್ಯಲ್ಲಿ ಬದ್ಕೆಕೂಳಿ ಅದಕ್ಕಿದ್ದದು.ಮನೆಲಿ ಎಷ್ಟೊತ್ತಿಂಗೂ ಅಪ್ಪ,ಅಬ್ಬೆ, ಆಳುಗೊ ಹೇಳಿ ಒಬ್ಬ ಅಲ್ಲದ್ರೆ ಇನ್ನೊಬ್ಬನ ಹೆದರಿಕೆ ಇಪ್ಪದೇ.ಅಣ್ಣ ಬಂದರಂತೂ ದಿನೇಸ ಇಪ್ಪ ಹೊಡೆಂಗೆ ಮೋರೆ ತಿರುಗುಸುಲೆ ಸಾನು ಬಿಡ್ತಾಯಿಲ್ಲೆ.
ಅದರ ಮದುವೆ ಆದ ಮತ್ತೆ ಇವ° ಒಪ್ಪದ್ದೆ ಎಂತ ಮಾಡ್ತ ನೋಡೆಕು.ಅಕ್ಕನಿಂದ ಲಾಯ್ಕದ ಜೀವನ ಎನ್ನದು ಹೇಳಿ ಇವಕ್ಕೆಲ್ಲ ತೋರ್ಸಿ ಕೊಡೆಕಾರೆ ಇಲ್ಲಿಂದ ಹೋಗಿ ಅದರ ಮದುವೆ ಆಗಿಯೇ ಆಯೆಕಷ್ಟೆ. ಹೇಂಗೂ ಇನ್ನಾಣ ವಾರಕ್ಕಪ್ಪಗ ಹದಿನೆಂಟು ವರ್ಷ ಆವ್ತು. ಮತ್ತೆ ಆರ ಹೆದರಿಕೆ!!
ಸುರುವಿಂಗೆ ಅಪ್ಪನಮನೆಗೆ ಬಪ್ಪದು ಬೇಡ, ಹೇಳುಗು ಅಪ್ಪ°.ರಜ್ಜ ದಿನ ಕಳುದ ಮತ್ತೆ ಒಪ್ಪಂದೆಂತ! ಹೇಂಗಾರು ಒಪ್ಪುಗು.ಭಾವನ ಪ್ರೀತಿಲಿ ನೋಡುವ ಹಾಂಗೆ ದಿನೇಸನನ್ನೂ ನೋಡುಗು….
ಹೀಂಗೇ ಗ್ರೇಶಿಂಡು ಇರುಳಪ್ಪಲೆ ಕಾದು ಕೂದತ್ತದು.ಅಜ್ಜಿಗೆ ಸೌಖ್ಯ ಇಲ್ಲದ್ದ ಕಾರಣ ಅಬ್ಬೆ ಅಪ್ಪ° ಹೆಚ್ಚು ಅತ್ಲಾಗಿ ಗಮನ ಕೊಟ್ಟದು ಭಾರೀ ಒಳ್ಳೆದಾತದಕ್ಕೆ.

ಹೊತ್ತೋಪಗ ಲಾಯ್ಕಲ್ಲಿ ತಲಗೆಲ್ಲ ಮಿಂದಿಕ್ಕಿ ಹೊಸ ಲಂಗ ರವಕೆ ಹಾಕಿತ್ತು.ಇರುಳಪ್ಪಗ ಮತ್ತೆ ಮಾತುಲೆ ಬಂಙ.ಕೆಲವು ದಿನಂದ ಇತ್ಲಾಗಿ ಅಬ್ಬೆ,ಅಪ್ಪನ ಕಣ್ಣು ಅದರ ಮೇಗೇ ಇದ್ದು ಹೇಳಿಯೂ ಅಂದಾಜಿದ್ದು.ಇರುಳಪ್ಪಗ ಬಾಗಿಲು ತೆಗವ ಅಜನ ಕೇಳಿರೆ ಅಬ್ಬೆಯೋ,ಅಪ್ಪನೋ ಬಂದು ನೋಡ್ತವು.ಇಂದು ಅಜ್ಜಿಗೆ ಹುಶಾರಿಲ್ಲದ್ದದು ಅಜ್ಜಿ ಪುಣ್ಯ!!!!!

ಅದಕ್ಕೆ ಸುಮಾರು ಚಿನ್ನ ಮಾಡ್ಸಿತ್ತಿದ್ದವು ಚಂದ್ರಣ್ಣ. ಹೊಸ ನಮೂನೆಯ ಅಗಲ ನಮೂನೆಯ ಮಾಲೆ,ಅವಲಕ್ಕಿ ಮಾಲೆ,ನೆಕ್ ಲೇಸುದೆ ಎರಡು ಮೂರು ರೀತಿದು ಇದ್ದತ್ತು.ಕೆಮಿದೂದೆ ಹಾಂಗೆ.ಬಳೆಗಳೂ ಇದ್ದು.

ಶೈಲನಿಂದಲೂ ಹೆಚ್ಚು ಕೊಂಗಾಟದ ಕೂಸಾದ ಕಾರಣ ಗೆಣಮೆಣಸು ಮಾರಿಯಪ್ಪಗ ಎಲ್ಲ ಚಂದ್ರಣ್ಣ ಕುಞಿ ಮಗಳಿಂಗೆ ಬೇರೆ ಬೇರೆ ನಮೂನೆಯ ಚಿನ್ನದ ಒಡವೆ ಮಾಡ್ಸಿ ತಕ್ಕು.ಒಂದರಿಯೋ,ಎರಡು ಸರ್ತಿಯೋ ಹಾಕಲೆ ಕೊಟ್ಟದು ಬಿಟ್ಟರೆ ಅದರ ಎಲ್ಲಿ ಮಡುಗುದು ಹೇಳಿ ಸಾನು ಸುಶೀಗೆ ಗೊಂತಿಲ್ಲೆ. ನಿತ್ಯಕ್ಕೆ ಸಣ್ಣ ಕೆಂಪು ಗುಂಡು ನೇಲುವ ರಿಂಗು ಕೆಮಿಗೂದೆ,ಕೊರಳಿಂಗೆ ಒಂದು ಬೆಳ್ಳಿ ಚೈನಿಂಗೆ ಚಿನ್ನದ ಒಪ್ಪ ಕೊಟ್ಟ ಮಾಲೆಯೂದೆ ಮಾಂತ್ರ ಇದ್ದದು.ಕೈಗೆ ಹೇಂಗಾರು ಬಣ್ಣ ಬಣ್ಣದ ಕಾಜುಗೊ ಪೇಟೆಲಿ ಸಿಕ್ಕುತ್ತನ್ನೇ!!

ಇಂದು ಮಾತ್ರ ಹೇಂಗಾರು ಮಾಡಿ ಒಂದು ಚಿನ್ನದ ಚೈನಾದರೂ ಅಬ್ಬೆಯತ್ರೆ ತರ್ಕ ಮಾಡಿ ತೆಕ್ಕೊಳೆಕೂಳಿ ಗ್ರೇಶಿದ್ದತ್ತು.ಅದರ ಗ್ರಾಚಾರ ಸರಿ ಇಲ್ಲದ್ದ ಕಾರಣ ಆದಿಕ್ಕು ಅಬ್ಬಗೆ ಹೊತ್ತೋಪಗ ಅಂತೂ ಕೆಲಸದ ರಾಶಿಯೇ ಇದ್ದತ್ತು.ಅದರೆಡೆಲಿ ಹೋಗಿ ‘ಚೈನು ಬೇಕು’ ಹೇಳಿರೆ ಅಬ್ಬಗೆ ಸಂಶಯ ಬಕ್ಕು. ಈಗ ಎಲ್ಲಿಗೂ ಹೋಪಲೂ ಇಲ್ಲೆ.ಅಂತೇ ಎಂತಕೆ ?’ ಕೇಳುಗಷ್ಟೆ.ಅಪ್ಪನತ್ರೆ ಕೇಳ್ಲೆ ಈಗ ಮದ್ಲಾಣಾಂಗೆ ಧೈರ್ಯ ಇಲ್ಲೆ.ಮದಲೆಲ್ಲ ಆಗಿದ್ದರೆ ಅಬ್ಬೆ ಹತ್ತರೆ ತರ್ಕ ಮಾಡಿರೆ ಸಮದಾನ ಮಾಡುದು ಅಪ್ಪನೇ.ಈಗ ಅಪ್ಪನೂ ಬೈಗಷ್ಟೆ.

ಯೇವ ಉಪಾಯವೂ ಕಾಣದ್ದೆ ಮಂಡೆ ಬೆಶಿಯಾತದಕ್ಕೆ.ನಾಲ್ಕೈದು ಅಂಗಿ,ಒಂದೆರಡು ಸೀರೆಗಳ ಒಂದು ಬೇಗಿಂಗೆ ತುಂಬುಸಿಕ್ಕಿ ಹಳೇ ಹಟ್ಟಿಯ ಹಿಂದಾಣ ಹೊಡೆಲಿ ಸೌದಿ ಓಶುವಲ್ಲಿ ಮಡುಗಿಕ್ಕಿ ಬಂತು.ಅಷ್ಟು ಫಕ್ಕನೆ ಆರಿಂಗೂ ಅಂದಾಜಾಗ ಅಲ್ಲಿದ್ದರೆ.

ಇರುಳು ಉಂಬಗ ಅಬ್ಬೆ ಮಾಡಿದ ಹಾಗಲಕಾಯಿ ಮೆಣಸುಕಾಯಿ ರಜ ಹೆಚ್ಚೇ ಆತು ಕೊಂಡತ್ತು
“ಹಾಂಗೆ ಅದರನ್ನೇ ತಿಂದರೆ ಉಷ್ಣಕ್ಕು ಕೂಸೇ” ಹೇಳಿ ಅಬ್ಬೆ ಹೇಳಿಯಪ್ಪಗ ಫಕ್ಕನೆ ತಲೆಲಿ ಒಂದು ಉಪಾಯ ನೆಂಪಾತು.ಇರುಳಪ್ಪಗ ಮನೆಂದ ಹೆರ ಇಳಿವಲೆ ಇದೇ ಸುಲಾಭದ ಐಡಿಯಾ ಹೇಳಿ ಮನಸ್ಸಿಲ್ಲಿ ಗಟ್ಟಿ ನಿರ್ಧಾರ ಮಾಡಿಕ್ಕಿ ಮನುಗುಲೆ ಹೋತು.

ಅಬ್ಬೆಯೂ ಅಲ್ಲೇ ಮನುಗುಲೆ ಬಂದಪ್ಪಗ ಕೋಪವೇ ಬಂತು.ಅಂದರೂ ಮಾತಾಡಿದ್ದಿಲ್ಲೆ. ಹೋಪಗ ರೆಜಾ ಪೈಸೆ ಕೊಂಡೋಪದೆಲ್ಲಿಂದ ಹೇಳಿ ಆಗಿಂಡಿದ್ದತ್ತು. ಅಪ್ಪ° ಅಜ್ಜಿ ಹತ್ತರೆ ಕೂದೊಂಡಿಪ್ಪಗ ಮೆಲ್ಲಂಗೆ ಅಪ್ಪನ ಮೇಜಿನ ಹತ್ತರೆ ಹೋಗಿ ಬಗ್ಗಿ ನೋಡಿತ್ತು. ಅಪ್ಪ° ಅಡಕ್ಕೆ ಮಾರಿಕ್ಕಿ ಬಂದು ಪೈಸೆ ಮಡುಗುದೆಲ್ಲಿ ಹೇಳಿ ಸರೀ ಗೊಂತಿದ್ದ ಕಾರಣ ಬಂಙ ಆಯಿದಿಲ್ಲೆ. ನೂರು ರೂಪಾಯಿಗಳ ಒಂದೆರಡು ಕಟ್ಟಂಗಳನ್ನೇ ತೆಗದು ಅದರ ರೂಮಿಂಗೆ ಬಂದು ತಲೆಕೊಂಬಿನ ಅಡೀಲಿ ಮಡುಗಿತ್ತು.

ಇರುಳು ಮನುಗಿರೂ ಒರಕ್ಕು ಬಯಿಂದಿಲ್ಲೆ. ಎಷ್ಟೊತ್ತಿಂಗೆ ಅಬ್ಬೆಯ ಕಣ್ಣು ತಪ್ಸಿಂಡು ಹೆರ ಹೋಪಲೆಡಿಗು,ಹೋದ ಮತ್ತೆ ದಿನೇಸನೊಟ್ಟಿಂಗೆ ಮದುವೆಯಾಗಿ ಅದರ ಮನೆಲಿ ಮಹಾರಾಣಿಯ ಹಾಂಗೆ ಇಪ್ಪಲೆಡಿಗು,ಹೊಸ ಊರಿಂಗೆ ಹೋದಪ್ಪಗ ಅಲ್ಲಿಪ್ಪವೆಲ್ಲ ಎನ್ನ ಹೇಂಗೆ ಎದುರುಕೊಂಗು…..ಹೀಂಗಿದ್ದ ಆಲೋಚನೆಲೇ ಕಣ್ಣು ಮುಚ್ಚಿ ಮನುಗಿತ್ತದು.
ನಡಿರುಳಪ್ಪಗ ಅಬ್ಬೆ ಎದ್ದು ಹೆರ ಹೋದಪ್ಪಗ ಬಚಾವು ” ಹೇಳಿ ಎದ್ದು ಕೂದು ಪೈಸಿನ ಕಟ್ಟವ ಸೊಂಟಲ್ಲಿ ಕಟ್ಟಿಕೊಂಡತ್ತು. ಅಬ್ಬೆ ಒಳಬಪ್ಪಗ ಕೊಂಗಾಟ ಮಾಡಿಂಡು ಹೊಟ್ಟೆ ಬೇನೆ ಆವ್ತು ‘ ಹೇಳಿ ಉಪಾಯ ಮಾಡಿಕ್ಕಿ ಹೆರ ಇಳುದ ಸುಶೀಲ ಮತ್ತೆ ತಿರುಗಿ ಸಾನು ನೋಡದ್ದೆ ಜಾಲಿಂಗಿಳುದತ್ತು.

ಹೆದರಿಕಾವ್ತು, ಕರೆಂಟು ಹೋದರೆ ಹೇಳಿ ಅಬ್ಬೆ ಕೈಂದ ತೆಕ್ಕೊಂಡ ಲೈಟುದೆ ಇದ್ದ ಕಾರಣ ಸೀದಾ ಬೇಗುದೆ ಹೆಗಲಿಂಗೆ ಹಾಕಿಂಡು ಮುಂದೆ ನೆಡದತ್ತು.ಮನೆ ನಾಯಿ ಜಾಕಿ ಇದರ ಗುರ್ತಯಿದ್ದ ಕಾರಣ ಕೊರಪ್ಪಿದ್ದಿಲ್ಲೆ.

ರೆಜ್ಜ ಮುಂದೆ ಹೋಪದಪ್ಪಗ ಅಲ್ಲಿ ದಿನೇಸನೂ ಮತ್ತೊಂದು ಜೆನವೂ ಇದ್ದತ್ತು.ದಿನೇಸ ಇದರ ಕೈಂದ ಬೇಗು ತೆಕ್ಕೊಂಡಿಕ್ಕಿ ” ಬೇಗ ನಡೆ, ಅಲ್ಲಿ ಕಾರು ನಿಲ್ಸಿದ್ದವು .ಮಾತಾಡದ್ದೆ ಅದಕ್ಕೆ ಹತ್ತೆಕು” ಹೇಳಿತ್ತು.

ಸುಶೀಗೆ ಮನಸ್ಸಿನ ಸಂತೋಶ ತಡವಲೇ ಎಡಿತ್ತಿಲ್ಲೆ. ಅಬ್ಬಾ…ಇಷ್ಟು ದಿನ ಕನಸು ಕಂಡ ಬದ್ಕು ಈಗ ಕೈಗೆ ಸಿಕ್ಕಿತ್ತು.ಇನ್ನಾರನ್ನೂ ಹೆದರೆಡ.ಧೈರ್ಯಲ್ಲಿ ದಿನೇಸನೊಟ್ಟಿಂಗೆ ಇಪ್ಪಲಕ್ಕು.ಕಾರಿಲ್ಲಿ ಅದರತ್ರೆ ಕೂದು ಅದರ ಹೆಗಲಿಂಗೆ ಎರಗಿ ಕೂದೊಂಡು ಕನಸು ಕಾಂಬಲೆ ಸುರು ಮಾಡಿದ ಸುಶೀಗೆ ಅವು ಎಲ್ಲಿಗೆ ಕರಕ್ಕೊಂಡು ಹೋಪದು ಹೇಳಿ ಸಾನು ಗೊಂತಿಲ್ಲೆ.

ಉದಿಯಾದ ಮತ್ತೂದೆ ಕಾರು ಮುಂದೆ ಮುಂದೆ ಹೋಗಿಂಡಿದ್ದತ್ತು.ಯೇವದೋ ಊರಿನ ಕೋಲನಿಯ ಹಾಂಗಿದ್ದ ಹರ್ಕುಪುರ್ಕು ಮನೆಗಳ ಎಡೇಲಿಪ್ಪ ಒಂದು ಪೊಳಿಕ್ಕಟೆ ಮನೆ ಎದುರು ಹೋಗಿ ಕಾರು ನಿಂದಪ್ಪಗ ಸುಶೀಲಂಗೆ ಸರಿಯಾಗಿ ಎಚ್ಚರಿಕೆಯಾಗಿ ಕಣ್ಣೊಡದು ನೋಡಿತ್ತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 27 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಸುಶಿ ಕಳ್ಳ ಕೆಲಸಕ್ಕೆ ಎಂಥಾ ಹೇಳಿ ಹೇಳೆಕ್ಕು…ಇದರ ಬರದ ಕ್ರಮ ಮೆಚ್ಚೆಕ್ಕು…ಹೆಣ್ಣು ಹೆತ್ತೊರು ಯಾವ ರೀತಿ ಜಾಗ್ರತೆ ಮಾಡಿರು ಸಾಲ…ಕೆಟ್ಟ ಮನಸ್ಸಿಂಡಲಾಗಿ ಎಂತೆಲ್ಲ ಆವುತ್ತು…ಕಥೆ ಒಳ್ಳೆ ಲಾಯ್ಕಲ್ಲಿ ಮನ ಮುಟ್ಟುವ ಹಾಂಗೆ ಇದ್ದು

  2. ಅಜ್ಜಿಗೆ ಹುಶಾರಿಲ್ಲದ್ದದು ಅಜ್ಜಿ ಪುಣ್ಯ!!!!! ಈ ವಾಕ್ಯ ಒಳ್ಳೆ ರೈಸಿತ್ತಿದ !! ಅಂತೂ ಸುಶೀಲನ ಪ್ಲಾನು ಸಕ್ಸೆಸ್ಸು ಆತು ಹೇಳಲಿಯೋ. ಅಲ್ಲ ಅದರ ಕರ್ಮ ಹೇಳಲಿಯೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×