Latest posts by ವಿಜಯತ್ತೆ (see all)
- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಗೋಸುಪ್ರಭಾತ (ಕವನ)
ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||ಎದ್ದೇಳು||
ಮುಕ್ಕೋಟಿ ದೇವರ್ಕಳನು ಹೊತ್ತು ನಿಂತಬ್ಬೆ|
ಮುಕ್ಕಣ್ಣಂಗೆ ನಂದಿಯನು ಹೆತ್ತುಕೊಟ್ಟಬ್ಬೆ||
ಮುಂಗೋಳಿ ಕೂಗಿತ್ತು ಏಳಮ್ಮ ಮಾತೆ|
ಮುಂದಾಗಿ ಸಂಪದವ ಕರುಣಿಸೆಮಗೆ||
ಕ್ಷೀರಸಾಗರ ಮಥನದಲಿ ಒಲಿದು ಬಂದಬ್ಬೆ|
ಕ್ಷೀರಾದಿ ಮಧುರ ರಸ ಸದಾ ನೀಡುತಿಪ್ಪೆ||
ಜಗದ ಜನರ ಒಲಿದು ಸಲಹುವ ಜಗದಂಬೆ|
ಜಗಜನನಿ ಗ್ರಾಸವ ನೀಡಿ ಬೇಡಿಕೊಂಬೆ||
ನಿನ್ನ ಕಣ್ಣಲ್ಲಿಪ್ಪ ಸೂರ್ಯ ರ್ಚಂದ್ರರಿಂಗೆ ನಮಿಪೆ|
ಕೊಂಬಿಲಿಪ್ಪ ಯಮಧರ್ಮರಿಂಗೆ ವಂದಿಸುವೆ||
ಹೊಕ್ಕುಳಿಲ್ಲಿಪ್ಪ ನರ ನಾರಾಯಣರಿಂಗೆ ಕೈಮುಗಿವೆ|
ಬಾಲಲ್ಲಿ ಭದ್ರವಾಗಿಪ್ಪ ಭಾಗೀರತಿಗೆ ಬಾಗುವೆ||
ಗೋಮೂತ್ರಲ್ಲಿಪ್ಪ ಗಂಗೆಯೇ ನಮಿಪೆ|
ಗೋಮಯಲ್ಲಿಪ್ಪ ಮಹಾಲಕ್ಷ್ಮಿಯೇ ಮಣಿವೆ||
ಪಾದಗಳಲ್ಲಿಪ್ಪ ದಿಕ್ಪಾಲಕರಿಂಗೆರಗುವೆ|
ಬೆನ್ನಿಲ್ಲಿಪ್ಪ ಬ್ರಹ್ಮಾದಿ ಮೂರುತಿಗೆ ಮಣಿವೆ||
ಮುಟ್ಟಿ ಪ್ರದಕ್ಷಿಣೆ ಗೈದವನ ಆಜನ್ಮ ಪಾಪ ನೀಗುವೆ|
ಮೂರುಪ್ರದಕ್ಷಿಣೆ ಮಾಡಿದವನ ಮೂರ್ಜನ್ಮ ಪಾಪತೊಳೆವೆ||
ಏಳು ಪ್ರದಕ್ಷಿಣೆಗೆ ಸಪ್ತಜನ್ಮ ಪಾಪ ತೊಳೆವೆ|
ಗೋ ಅರ್ಕಂದ ಸಕಲರೋಗ ನಿವಾರಣೆ ಮಾಡುವ ಮಾತೆ ಎದ್ದೇಳು||
~~~~~×~~~~
ಲೇ~ವಿಜಯಾಸುಬ್ರಹ್ಮಣ್ಯ,ಕುಂಬಳೆ.