Oppanna.com

ಸಮಸ್ಯೆ 98 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   27/06/2015    18 ಒಪ್ಪಂಗೊ

ಮಳೆಗಾಲ ಶುರುವಾತು.ಬೈಲಿನ ಗುಡ್ದೆ ಕೊಡೀ೦ದ ಈ ದೃಶ್ಯ ಕ೦ಡತ್ತು. ಈ ವಾರ ಒ೦ದು ಪದ್ಯ ಕಟ್ಟುವ ಬನ್ನಿ.cloud

18 thoughts on “ಸಮಸ್ಯೆ 98 : ಚಿತ್ರಕ್ಕೆ ಪದ್ಯ

  1. ಮತ್ತೆ ಈ ಶಾಮಣ್ಣನ ಶುದ್ದಿ ಹೇದರೆ ಹಾಂಗೆಯೇ .ಮಂಡೆ ಬೆಚ್ಚ …

  2. ಈ ಶಾಮಣ್ಣಂಗೆ ಮಾತ್ರೆ ಶುದ್ದಿ ಹೇಳೆಕಾತಿಲ್ಲೇ….ಛೆ …

    1. ಅದಾ… ಹೇಳಿದ್ದಲ್ಲದ? …. ಬಾಲಣ್ಣಂಗೆ ಮಂಡೆ ಬೆಶಿ ಸುರು ಆತು… 🙂

  3. ಹಗಲ ದೇವರು ಸುತ್ತಿ ವಸ್ತ್ರವ
    ನೆಗರಿ ಮಡುಗಿರೆ ಗುಡುಗಿ ದೇವತೆ
    ಬೆಗರ ವಾಸನೆ ತೊಳದು ತೆಗವಲೆ ಬಾನ ಕಲ್ಲಿಲಿದಾ
    ಒಗದು ಜೆಪ್ಪಿರೆ ಕುರೆಯ ನೊರೆಯದು
    ರಗಳೆಯಿಲ್ಲದೆ ಹರಡೆ ಬಾನಿಲಿ
    ಹೊಗೆಯ ಸುರುಳಿಯ ಹಾಂಗೆ ಕಾಂಬದು ಮೋಡ ಚಿತ್ತಾರ ||

  4. ಯಮಾತಾರಾಜಭಾನಸಲಗಂ

    1. ‘ಯಮಾತಾರಾಜಭಾನಸಲಗಂ’ ಹೇಳಿರೆ ಎಂತರ?
      ಯಮಾತಾ = ಯಮನ ಮಾತೆ = ಸಂಧ್ಯಾ = ಸೂರ್ಯನ ಹೆಂಡತಿ
      ರಾಜ = ಅರಸ
      ಭಾನ = ಸೂರ್ಯ
      ಸಲಗಂ = ಗಂಡಾನೆ = ಐರಾವತ
      ಹೇಳಿರೆ, ಐರಾವತದ ಮೇಲೆ ಹೆಂಡತಿ ಸಂಧ್ಯೆಯ ಒಟ್ಟಿಂಗೆ ರಾಜನ ಹಾಂಗೆ ಕೂದುಗೊಂಡಿಪ್ಪ ಸೂರ್ಯ.
      ಹೇಳಿರೆ ಐರಾವತದ ಹಾಂಗೆ ಕಾಂಬ ಮೋಡದ ಎಡೇಂದ ಇಣ್ಕುವ ಹೊತ್ತೋಪಗಾಣ ಸೂರ್ಯ
      ಹೇಳಿ ಅರ್ಥ ಅವುತ್ತು. ಅಂಬಗ ಮಾತ್ರಾಗಣ ಹೇಳಿರೆ ಎಂತರ? 🙁 🙁 🙁

      1. ವಿಶ್ಲೇಷಣೆ ಭಾರೀ ಲಾಯ್ಕಿದ್ದು ಶ್ಯಾಮಣ್ಣಾ …. ನಿಂಗಳ ತಲೆಗೆ ಕೊಡೆಕ್ಕು ….. ಬಹುಮಾನ!

        1. ಪೋಲೀಸು ಟೇಷನಿಲಿ ಕೆಲವು ಜೆನಂಗಳ ತಲೆಗೆ ಇಂತಿಷ್ಟು ಬಹು ಮಾನ ಹೇಳಿ ಹಾಕಿರ್ತವದಾ… ಹಾಂಗೆಯಾ? ಎಂತ?…. 🙁

      2. ಹಾಂಗಲ್ಲ ಶ್ಯಾಮಣ್ಣ – ಯೆ ಮಾತರ ( ಮಾತ್ರೆ) ಜಬಾನ್ಸೆ ಅಲಗಂ … ಹೇಳಿರೆ ಈ ಮಾತ್ರೆ ನಾಲಗೆಗೆ ಅಂಟುತ್ತಿಲೆ ಹೇಳ್ತಾ ತಾತ್ಪರ್ಯ. ಬೇಕಾರೆ ಡಾಗುಟ್ರತ್ರೆ ಕೇಳಿಕ್ಕಿ.

        1. ನಿಂಗ ಒಟ್ಟಾರೆ ಮೇಲೆ ಈಮಾತ್ರೆಯ ಹೊಡಿ ಮಾಡಿ ಹಾಕಿದಿರೋ ಹೇಳಿ…..ಡಾಗುಟ್ರತ್ರೆ ಕೇಳ್ಲೆ ಬೈಲಿಂಗೆ ಬಂದುಕೊಂಡಿತ್ತ ಡಾಗುಟ್ಟ್ರಕ್ಕಳಲ್ಲಿ ಒಬ್ಬನೂ ಪತ್ತೆ ಇಲ್ಲೆ. ಬಾಲಣ್ಣಂಗೆ ಇದರ ನೋಡಿ ಮಂಡೆ ಬೆಷಿ ಸುರು ಅಕ್ಕು.

  5. ಕೆಳಾಣ ಪದ್ಯ “ಅನಿಲ್ ಕುಂಬ್ಳೆ ವೃತ್ತ” ಲ್ಲಿ ಬರದ್ದು. 🙂

    ಪಟ್ಟಿ ಪಟ್ಟಿ ನೆಲದ ಮೇಲೆ
    ಅಟ್ಟಿ ಅಟ್ಟಿ ಮೋಡಕಟ್ಟಿ
    ದಿಗಂತ ಹೊಡೆಂಗೆ ನೋಟ
    (ಇಂಟರ್)ನೆಟ್ಟು ನೋಡಿರೆ
    ಬಕ್ಕ ಮಳೆ? ಇಕ್ಕ ಮಳೆ?
    ತೊಳದು ಹೋಕ ಮನದಕೊಳೆ?
    ಸುಳಿವ ನೆನಪು ಮನಸಿಲೀಗ
    ಬಪ್ಪದೆಂತಕೆ?

    1. ಈ ವೃತ್ತ ಎಲ್ಲಿ ಹುಡುಕಿದರೆ ಸಿಕ್ಕುಗು ಶ್ಯಾಮಣ್ಣ?

      1. ಹೋ… ಅದುವಾ… ಅದು ಮೊನ್ನೆ ಮೊನ್ನೆ ಬೆಂಗ್ಳೂರಿಂಗೆ ಹೋದಿಪ್ಪಗ ಆ ಮಹಾತ್ಮಾ ಗಾಂಧಿ ಮಾರ್ಗ ಇದ್ದಲ್ಲದಾ? ಅದಲ್ಲಿ ವಿದಾನ ಸೌದ ಹೊಡೆಂಗೆ ಬಪ್ಪಗ ಸಿಕ್ಕುತ್ತದಾ… ಒಂದು ವೃತ್ತ… ಅದುವೇ ಅನಿಲ್ ಕುಂಬ್ಳೆ ವೃತ್ತ. ಅಲ್ಲಿಯೇ ಕರೇಲಿ ಒಂದು ಸಿಮೆಂಟಿನ ಬೆಂಚಿ ಇದ್ದದಾ.. ಅದರ ಮೇಲೆ ಕೂದು ಮೊಬೈಲಿಲಿ ಇಂಟರ್ ನೆಟ್ಟು ಬಿಡಿಸಿ ಒಪ್ಪಣ್ಣ ಕೊಂ ನೋಡುವಾಗ ಈ ಪದ್ಯ ಹೊಳದ್ದು. ಅದರ ಅಲ್ಲಿಯೇ ಬರದು ಮಡಿಕ್ಕೊಂಡದು… ಹಾಂಗಾಗಿ ಅದು “ಅನಿಲ್ ಕುಂಬ್ಳೆ ವೃತ್ತ” ಲ್ಲಿ ಬರದ ಪದ್ಯ 🙂 🙂 🙂

        1. ಆ ಅನಿಲ್ ಕುಂಬ್ಳೆ ವೃತ್ತದ ಮಾತ್ರಾಗಣದ ಲೆಕ್ಕಾಚಾರ ಹೇಂಗೋ ! ಒಂದರಿ ಹೇಳಿಕ್ಕಿ ಶಾಮಣ್ಣಾ ..

        2. ಬಾಲಣ್ಣ …(ಮಾತ್ರಾಗಣದ ಲೆಕ್ಕಾಚಾರ ) ಮಾತ್ರಾಗಣ ಹೇಳಿರೆ ಎಂತರ? 🙁 🙁 🙁

  6. ಪಂಚಚಾಮರ ವೃತ್ತ —
    ವಿಶಾಲ ನೀಲದಂಬರಲ್ಲಿ ತೇಲಿ ಬಪ್ಪ ಮೋಡವೇ
    ತುಷಾರಪುಂಜದದ್ರಿ ರಾಜನ೦ಥ ಶೋಭೆ ನಿನ್ನದೂ I
    ನಿಶಾನೆ ಕಂಡು ಹೇಳುಗಿಂದು ಕಪ್ಪುಮೋಡ ಸೋರುಗೂ
    ಶಶಾಂಕ ಬಿಂಬ ಮಂಡಲಲ್ಲಿ ಬಾಲಚಂದ್ರ° ಕಾಣುಗೋ II

    ಹೊತ್ತೋಪಗ ಆಕಾಶ ನೋಡಿ ಒಬ್ಬ° ಮುಸಲ್ಮಾನ ಇಂದು ಪೆರ್ನಾಲ್ ಆಚರಿಸುಲೆ ಎಡಿಗೋ ,ಎಡಿಯದೋ ಹೇಳಿ ಆಲೋಚನೆ ಮಾಡುವ ಕಲ್ಪನೆ .

  7. ಮಳೆಗಾಲಕ್ಕೆ ವೇದಿಕೆ
    ಮಳೆಯವತರಕ್ಕೆ ವೇದಿಕೆ
    ಹೊಳೆತ್ತು ಮಿಂಚು ಭರ ಸೆಡಿ ಲು ಕಸ್ತಲೆ ಕಟ್ಟೀ
    ತೊಳದು ಕೊಳೆ ಸ್ವಚ್ಛ ಇಳೇ
    ನಳನಳುಸುಗು ಪೇಟೆ ಹಳ್ಳಿ ಲವಲವಿಕೆಂದಾ

  8. ಬೆಟ್ಟ ಹತ್ತಿಕಿ ನಿಂದು ನೋಡಿರೆ
    ಪಿಟ್ಟೆ ಕಾಣುಗು ದೂರದೂರುಗೊ
    ಮುಟ್ಟುಲೋದರೆ ಕೈಗೆ ಸಿಕ್ಕುಗೊ ನೀಲಿಯಾಕಾಶ |
    ಮಟ್ಟಿ ನೆಲವದು ಕೆಂಪು ಪಚ್ಚೆಯ
    ಪಟ್ಟೆ ವಸ್ತ್ರವ ಹೊದದು ಕೂದ್ದದೊ
    ಮಿಟ್ಟೆ ಜಾಗೆಲಿ ಇನ್ನು ಇದ್ದೋ ನೀರ ಹೊಂಡಂಗ ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×