Oppanna.com

ಕವನ ಪ್ರಥಮ – ಕಳೆದೊಂದು ವರುಷ

ಬರದೋರು :   ಸಂಪಾದಕ°    on   06/07/2021    0 ಒಪ್ಪಂಗೊ

ಶ್ರೀಮತಿ ಪಾರ್ವತಿ ಶಾಸ್ತ್ರಿ
ಸಾಕೇತ, ಕರ್ಮಲ, ಪುತ್ತೂರು

ಕಳೆದೊಂದು ವರುಷಲ್ಲಿ ಜೀವನವೆ ಬದಲಾತು
ಸುಳುದು ಹೆರ ಬೈಂದಿಲ್ಲೆ ಮನೆಯೊಳಂದ|
ಘಳಿಗೆಗೊಂದು ನಮೂನೆ ಕರಿಕಷಾಯವ ಕುಡುದು
ತಳಿಯದ್ದೆ ಎಲ್ಲೋರು ಕೂದ್ದಂಬಗ|

ಬಂದ ಮಾರಿಕೊರೋನ ಹೆದರಿಸಿತ್ತೆಲ್ಲೋರ
ನಿಂದು ಮಾಡ್ಸಿತ್ತು ಮಾರಣ ಹೋಮವ|
ಸಂದತ್ತು ವರುಷವೇ ದಾಂಟಿತ್ತು ಮುಂದಂಗೆ
ಬಂಧುಬಳಗದ ಮೋರೆ ಕಾಂಬಲಿದ್ದ|

ಹಾರಿ ಹಿಡುದತ್ತಲ್ದಜೋರು ಪೀಡೆಯಿದೊಂದು
ದಾರಿ ನಡೆವದು ಬಾಯಿ ಮೂಗು ಮುಚ್ಚಿ|
ಸೇರುಲಾಗ ಜೆನಂಗೊ ಲೆಕ್ಕಂದ ಹೆಚ್ಚಾಗಿ
ಭಾರಿ ದೊಡ್ಡಕೆ ಜೆಂಬ್ರ ತೆಗವಲಿಲ್ಲೆ|

ಕಾಲು ತೊಳದಿಕ್ಕಿಯೇ ಮನೆಯೊಳಂಗೆ ಬರೆಕ್ಕು
ಹಾಳು ಮೂಳೆಲ್ಲ ಹೆರ ತಿಂಬಲಿಲ್ಲೆ|
ಶಾಲೆ ಮಕ್ಕಳ ಪಾಡು ಕೇಳಲೇ ಯೆಡಿಯಪ್ಪ
ಸೇಲೆ ಮಾಡ್ಯೊಂಡು ಮೊಬೈಲು ಕೈಲೇ|

ದೆನಿಮುನಿಯೆ ಕೇಳದ್ದ ಮನೆಲಿ ಮಕ್ಕಳ ಗೌಜಿ
ಮನೆಲೆ ಕೂದೊಂಡೆ ಕಂಪೆನಿ ಕೆಲಸಡೊ|
ಸೊನೆ ಮಾವಿನಾಮೆಡಿಯ ಖಾರದುಪ್ಪಿನ ಕಾಯಿ
ಮನೆಯ ಹೆಮ್ಮಕ್ಕೊ ಮಾಡಿರೆ ರುಚಿಯಡೊ|

ಹಿಂದಾಣ ಸಂಸ್ಕೃತಿಯ ನಾವೆಲ್ಲ ಮರೆದತ್ತು
ಬಂದ ರೋಗದ ಭೀತಿ ತರ್ಸಿತ್ತು ನೆಂಪು|
ಚೆಂದಲ್ಲಿ ಮನೆ ಮಕ್ಕಳೊಟ್ಟಿಂಗೆ ಖುಷಿಲಿದ್ದು
ಮುಂದಂಗೆ ಜಾಗ್ರತೆಯ ಮಾಡಿರಾತು|

ಎಲ್ಲದಕು ಮದ್ದಿದ್ದು ನಾವು ರಜ ಕಾಯೆಕ್ಕು
ಎಲ್ಲ ನೋಡ್ತವನೊಬ್ಬ ಇದ್ದ° ಮೇಲೆ|
ನಿಲ್ಲಿಸುಲೆ ಎಡಿಗೊ ಆಕಾಶ ಬೀಳ್ತರೆ ಹರುದು
ಗೆಲ್ಲೆಕ್ಕು ನಿಂದು ನಮ್ಮದೆ ಕಾಲ ಮೇಲೆ||

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×