Oppanna.com

“ಕಿಡಿಯಾದರೂ ಕಾಡಿನ ಸುಡುಗದು” (ವಿಶೇಷ ನುಡಿ ಪ್ರಯೋಗ)

ಬರದೋರು :   ವಿಜಯತ್ತೆ    on   05/01/2019    2 ಒಪ್ಪಂಗೊ

“ಕಿಡಿಯಾದರೂ ಕಾಡಿನ ಸುಡುಗದು”-(ವಿಶೇಷ ನುಡಿ ಪ್ರಯೋಗ-೧೧೦)

ಅಚ್ಚುಮಕ್ಕ ಬರೇ ಪಾಪದ ಹೆಮ್ಮಕ್ಕೊ.ಮನೆ ಒಳ-ಹೆರ ಹೇದು ಒಳ್ಳೆತ ಗೈಗು. ಅದಕ್ಕೆ ಒಬ್ಬನ ಬೈದು ಬೇನೆಮಾಡಿ ಗೊಂತಿಲ್ಲೆ.ಆದರೆ ಹೊಸ ವಿಶೇಷ ಸುದ್ದಿಗೊ ಅದರ ಕೆಮಿಗೆ ಬಿದ್ದರೆ ಬೇರೆ ಆತ್ಮೀಯರತ್ರೆ ಹೇಳದ್ದೆ ಅದರ ಮನಸ್ಸಿಲ್ಲಿ ಒಳಿಯ. ಹೀಂಗೊಂದು ದಿನ ತೋಟಕ್ಕೆ ಅಡಕ್ಕೆ ಹೆರ್ಕಲೆ ಹೋದೋಳಿಂಗೆ ಆಚಕರೆತೋಟಲ್ಲಿದ್ದ ಪಾತಕ್ಕನನ್ನೂ ಕಂಡತ್ತಿದ!. ಪಾತಕ್ಕನ ಕೈಸನ್ನೆಮಾಡಿ ಹತ್ತರೆ  ದೆನಿಗೇದೊಂಡತ್ತು. ಎಂತೋ ಪಿಸಿಪಿಸಿ ಹೇಳಿತ್ತು ಕೆಮೀಲಿ!!.ಅದರ ವರ್ತಮಾನ ಕೇಳಿಯೊಂಡ ಅಚ್ಚುಮಕ್ಕನ ಬಾಯಿಂದ  “ಅಯ್ಯೋ..ದೇವರೇ..ಹೀಂಗೂ ಆತೋ!.ಕಲಿಕಾಲಪ್ಪಾ!!” ಹೇಳಿ ಬಂತಿದ..,

ಮರುದಿನ ಊರಿಡೀ ಹಬ್ಬಿತ್ತಾ ಶುದ್ದಿ..  “ಸುಳ್ಯತ್ತ್ಲಾಗಿ ನಮ್ಮ ಜಾತಿ ಕೂಸೊಂದು ಬ್ಯಾರಿ ಒಟ್ಟಿಂಗೆ ಹೋಯಿದಾಡ”.

ಊರಿಡೀ ಹಬ್ಬಿಯಪ್ಪಗ ಪಾತಕ್ಕಂಗೆ ಅಚ್ಚುಮಕ್ಕ ಹೇಳಿದ್ದು.., ಅಚ್ಚುಮಕ್ಕನತ್ರೆ ಕೇಳುವಗ “ಎನಗೆ ಬೇರೆ ಆರೋ ಹೇಳಿದ್ದೂಳಿ” ಆತು..ಅಚ್ಚುಮಕ್ಕನತ್ರಂದ ಅದು ಹಬ್ಬಿತ್ತೂಳಿಯಪ್ಪಗ ಅದರ ಗಂಡ ಒಪ್ಪಣ್ಣಜ್ಜᵒ  “ಹಾಂಗಿದ್ದ ಕಿಚ್ಚಿನ ಕಿಡಿಹಾಂಗಿದ್ದ ವಿಷಯ ನಾವಾಗಿ ಹೇಳ್ಲಾಗ. ಸಣ್ಣಕಿಡಿಯಾದರೂ ಕಾಡಿನ ಸುಡುತ್ತಾಂಗೆ..ಊರಿಡೀ ಹಬ್ಬಿ ಹೇಸಿಗೆ ಅಕ್ಕು.  ಒಂದು ಕೂಸಿನ ಬಗ್ಗೆ ಹೇಳುವಾಗ ಜಾಗ್ರತೆ ಬೇಕು” ಹೇದೊವು.

—-೦—ವಿಜಯಾಸುಬ್ರಹ್ಮಣ್ಯ,ಕುಂಬಳೆ.

2 thoughts on ““ಕಿಡಿಯಾದರೂ ಕಾಡಿನ ಸುಡುಗದು” (ವಿಶೇಷ ನುಡಿ ಪ್ರಯೋಗ)

  1. ಉದಾಹರಣೆ ಸಹಿತ ವಿವರಣೆ ಲಾಯಿಕ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×