Oppanna.com

ಅಜ್ಜಿಯ ಮೇಲಾರ

ಬರದೋರು :   ಶರ್ಮಪ್ಪಚ್ಚಿ    on   20/12/2018    1 ಒಪ್ಪಂಗೊ

ಅಜ್ಜಿಯ ಮೇಲಾರ

-ಪ್ರಸನ್ನಾ ವಿ.ಚೆಕ್ಕೆಮನೆ      

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ
ಪ್ರಸನ್ನಾ ವಿ.ಚೆಕ್ಕೆಮನೆ 
“ಇಂದೆಂತರ ಬೆಂದಿ?ಈ ತೊಂಡೆಕಾಯಿ ಮೇಲಾರ ಮಾಡು.ಯೇವಗಲು ಮಾಡುವಾಂಗಲ್ಲ .ರಜ ಲಾಯ್ಕ ಮಾಡೆಕು”.
ಅದೇಂಗೆ ಲಾಯ್ಕ ಮಾಡುದು?ಎನಗೆ ಗೊಂತಿದ್ದ ಹಾಂಗೆ ಮಾಡುದಾನು.ನಿಂಗೊಗದು ಮೆಚ್ಚದ್ರೆ ಆನೆಂತ ಮಾಡಲಿ?”
” ಮನೆಲಿಪ್ಪ ಹೆಮ್ಮಕ್ಕೊಗೆ ಬೇರೆ ಕೆಲಸ ಇಲ್ಲೆ.ಅಡಿಗೆ ಮಾತ್ರ ಮಾಡ್ಲಿಪ್ಪದು. ಗೆಂಡ ಹಶುವಾಗಿ ಬಪ್ಪಗ ಒಂದು ನೇರ್ಪದ ಹೆಜ್ಜೆ ಬೆಂದಿ ಕೂಡ ಮಾಡದ್ರೆ ಹೇಂಗೆ?ಇದೆಲ್ಲ ಸಣ್ಣಾದಿಪ್ಪಗ ಕಲ್ತರಾತು.ನಿನ್ನ ಹಾಂಗಿದ್ದವೆಲ್ಲ ಇನ್ನೆಂತರ ಕಲಿವದು”..
“ಅದಷ್ಟೇ.. ಆನಿನ್ನು ಕಲ್ತೆಂತಾಗೆಡ.ನಮ್ಮ ಮದುವೆಯಾಗಿ ಎಷ್ಟೊರ್ಷಾತು ಲೆಕ್ಕ ಹಾಕಿ ನೋಡ°”
” ಹಾಂಗೆಲ್ಲ ವರ್ಷ ಲೆಕ್ಕ ಹಾಕಲಾಗ ಹೇಳಿ ಆನಂದೇ ನಿನ್ನತ್ರೆ ಹೇಳಿದ್ದೆ.”
“ಆತು ಬೇಡ. ಮೇಲಾರ ಮಾಡೆಕಾದ್ದು ಹೇಂಗೇಳಿ ಹೇಳಿ ಕೊಡಿ. ಹಾಂಗೇ ಮಾಡ್ತೆ”
” ಎನ್ನಜ್ಜಿ ಎಷ್ಟು ಲಾಯ್ಕಕೆ ಮೇಲಾರ ಮಾಡುಗು.ಈಗಲೂ ಅದರ ರುಚಿ ನಾಲಗೆ ಕೊಡೀಲಿದ್ದು.ಮಾಡ್ತರೆ ಹಾಂಗೆ ಮಾಡೆಕು.”
” ಆತಪ್ಪಾ..ಇಂದು ನಿಂಗಳ ಲೆಕ್ಕದ ಮೇಲಾರ. ನಿಂಗಳೇ ಮಾಡಿ. ಆನು ಹತ್ರೆ ಬತ್ತಿಲ್ಲೆ “
“ಹಾ..ಹಾ….ಎನಗೆಂತ ಮೇಲಾರ ಮಾಡ್ಲೆ ಅರಡಿಯ ಗ್ರೇಶಿದ್ದೆಯಾ?ನಿನ್ನ ಹಾಂಗೆ ತೊಡಂಕು ನೀರಿನ ಹಾಂಗಿದ್ದದಲ್ಲ. ಒಳ್ಳೆ ಫಸ್ಟ್ ಕ್ಲಾಸ್ ಮೇಲಾರ ಮಾಡುವೆ. ಉಂಡಿಕ್ಕಿ ಹೇಳು ರುಚಿ ಹೇಂಗಿದ್ದೂಳಿ”
“ಅಬ್ಬಾ.. ಅಷ್ಟಾದರೆ ಸಾಕು.ಇದಾ….ತೊಂಡೆಕಾಯಿ ಇಲ್ಲೇ ಇದ್ದು. ಕೊರವಲೆ ಪೀಶಕತ್ತಿ ಇಲ್ಲೇ ಇದ್ದು. ಆನೊಂದರಿ ಅಬ್ಬಗೆ ಪೋನು ಮಾಡಿ ಮಾತಾಡಿಕ್ಕಿ ಬತ್ತೆ. ಅಷ್ಟಪ್ಪಗ ಮೇಲಾರ ಆದರೆ ಸಾಕು. ಗಡಿಬಿಡಿ ಇಲ್ಲೆ”.
” ಅದೆಲ್ಲ ಆಗ. ಅಬ್ಬೆ ಹತ್ರೆ ಮಾತಾಡುದೂಳಿ ಇಡೀ ದಿನ ಮೊಬೈಲ್ ಕೆಮಿಗೆ ಮಡುಗಿ ಆರೋಗ್ಯ ಹಾಳುಮಾಡ್ಲಾಗ.ಎಷ್ಟು ಬೇಕೋ ಅಷ್ಟು ಮಾತು. ನೋಡು ಎನ್ನ ಹಾಂಗಾಯೆಕು’
“ಆತಾತು.ನಿಂಗಳೇ ಉಶಾರಿ.ಎನಗೆ ರಜಾ ಬೇರೆ ಕೆಲಸ ಇದ್ದು. ನಿಂಗೊ ಮೇಲಾರ ಮಾಡಿ.ಎಲ್ಲಾ ಸಾಮಾನುದೆ ಇಲ್ಲೇ ಇದ್ದು”.
” ಹಾಂಗೆ ಹೇಳಿ ತಪ್ಸೆಡ‌.ಮೇಲಾರ ಮಾಡುದೆಲ್ಲ ಅಪ್ಪು. ತೊಂಡೆಕಾಯಿ ಕೊರವದು ಹೇಂಗೇಳಿ ಹೇಳಿಕ್ಕಿ ಹೋಗು.ಮತ್ತೆ ಕೊರದ್ದು ಸರಿಯಾಯಿದಿಲ್ಲೆ ಹೇಳೆಡ”.
“ಹ್ಹ.. ಹ್ಹ.. ಇದು ಲಾಯ್ಕಿದ್ದು ನಿಂಗಳ ಪಂಚಾಯಿತಿಕೆ. ತೊಂಡೆಕಾಯಿ ಕೊರವಲೆ ಅರಡಿಯದ್ದ ಜೆನ ಮೇಲಾರ ಮಾಡ್ತವಾಡ. ಹೋಗಿ .ಹೋಗಿ..ಹೆರ ,ಆನೇ ಮಾಡುವೆ..”
” ಕೊರವಲೆ ಗೊಂತಿಲ್ಲದ್ದೆ ಅಲ್ಲ ಮಾರಾಯ್ತೀ.ನೀನು ಒಂದೊಂದರಿ ತೊಂಡೆಕಾಯಿಯ ಉರೂಟಿಂಗೆ ಕೊರೆತ್ತೆ. ಕೆಲವು ಸರ್ತಿ ಉದ್ದಕೆ ಕೊರೆತ್ತೆ. ಮತ್ತೆ ಕೆಲವು ಸರ್ತಿ ಗುಂಡುಕಲ್ಲಿಲ್ಲಿ ಗುದ್ದುದೂ ನೋಡಿದ್ದೆ. ಇದು ಯೇವ ಜಾತಿ ತೊಂಡೆಕಾಯಿ ಹೇಳಿ ಎನಗೊಂತಿಲ್ಲೆ. ಕೊರವದು ಹೇಂಗೇಳಿ ಹೇಳಿಕ್ಕಿ ಹೋಗು”
“ಎನಗೆ ನೆಗೆ ತಡವಲೆಡ್ತಿಲ್ಲೆ ನಿಂಗಳ ಮಾತು ಕೇಳುಗ. ಅಡ್ಡಕೆ ಕೊರವ ತೊಂಡೆಕಾಯಿ, ಉದ್ದಕೆ ಕೊರವದು,ಗುದ್ದುದು ಹೇಳಿ ತೊಂಡೆಕಾಯಿ ಬೇರೆ ಬೇರೆ ನಮೂನೆದಿಲ್ಲೆ. ಎಲ್ಲಾ ಒಂದೇ.  ತಾಳು ಮಾಡ್ತರೆ ಉರೂಟಿಂಗೆ,ಬೆಂದಿ ಮಾಡ್ತರೆ ಉದ್ದಕೆ, ಹುಳಿಮೆಣಸಿನ ಕೊದಿಲು ಮಾಡ್ತರೆ ಗುದ್ದಿ ಮಾಡುದು.”
“ಅದಾ..ಅದನ್ನೇ ಆನೂ ಹೇಳುದು.ಯೇವ ಬೆಂದಿಗಾದರೂ ಕೊರದ ಬಾಗ ಸರೀ ಇದ್ದರೆ ಆ ಬೆಂದಿಯ ರುಚಿ ಹೆಚ್ಚುತ್ತಾಡ.” ಮುರಿ ನನ್ನಾಯೆಂಗಿಲ್ ಕರಿ ನನ್ನಾಯಿ” ಹೇಳಿ ಎನ್ನಜ್ಜಿ ಹೇಳುದು ಕೇಳಿದ್ದೆ.ಮಲೆಯಾಳ ಗಾದೆ ಅದು“.
“ಆ ತೊಂಡೆಕಾಯಿ ಇತ್ಲಾಗಿ ಕೊಡಿ. ಮೇಲಾರಕ್ಕೆ ಕೊರವಗ ಅರ್ಧ ಬಾಗ ಮಾಡಿ ಮತ್ತೆ ಉದ್ದಕೆ ಕೊರೆಕು”
“ಅದೆನಗೆ ಅರ್ಥಾಯಿದಿಲ್ಲೆ .ಅಡ್ಡವಾ ,ಉದ್ದವಾ ,ಒಂದೆರಡು ಕೊರದು ತೋರ್ಸು. ಮತ್ತೆ ಆನೇ ಕೊರೆತ್ತೆ”
“ಹ್ಹ..ಹ್ಹ..ಆತಾತು. ಅದನ್ನೇ ಆನುದೆ ಹೇಳಿದ್ದು.ಇಲ್ಲಿ ಕೊಡಿ ಹೇಳಿ……ಇದಾ..ಹೀಂಗೆ ಬಾಗ ಮಾಡೆಕು. ಅಷ್ಟಪ್ಪಗ ನಿಂಗಳ ಅಜ್ಜಿ ಹೇಳಿದ ‘ಮುರಿ” ನನ್ನಾವ್ತು. ಮತ್ತೆ ನಿಂಗೊ ಕರಿ ಮಾಡಿರಾತು”.
“ಓಹ್..!!, ಆನು ಒಂದೆರಡು ಕೊರದು ತೋರ್ಸು ಹೇಳಿದ್ದಕ್ಕೆ ಪೂರ್ತಿ ಕೊರದು ಮಡುಗಿದ್ದಾ?ಎನಗೆಂತ ಅರಡಿಯ ಗ್ರೇಶಿದ್ಯಾ?”
“ಅಯ್ಯೋ ಇಲ್ಲೆಪ್ಪಾ.. ನಿಂಗಳ ಅಜ್ಜಿಯ ಪಾಕ ಅಲ್ಲದಾ ನಿಂಗೊ ಮಾಡುದು. ಗೊಂತಿಲ್ಲೆ ಹೇಳಿರೆ ಹೇಂಗಕ್ಕು”.
” ಹಾಂಗೆ ಹೇಳು. ಎನ್ನಜ್ಜಿ ಹೇಳಿರೆ ಆರೂ ಗ್ರೇಶಿದ್ದೆ?ಎಷ್ಟು ಕೆಲಸ ಮಾಡುಗು ಗೊಂತಿದ್ದಾ?”
“ಆತು.ಅಜ್ಜಿ ಮಾಡ್ಲಿ. ಆನೀಗ ಹೆರ ಹೋವ್ತೆ. ನಿಂಗೊಗೆ ಇನ್ನೆಂತದೂ ಕೇಳ್ಲಿಲ್ಲೆನ್ನೇ..”
“ಇಲ್ಲೆ. ಆನು ಮಾಡುವೆ. ಅದೂ….ಮೇಲಾರ ಮಾಡುವ ಪಾತ್ರ ಯೇವದೂ ಹೇಳಿಕ್ಕಿ ಹೋಗು.ಇಲ್ಲದ್ರೆ ಮತ್ತೆ ಅದು ಹಾಲು ಕಾಸುವ ಪಾತ್ರ, ತಾಳು ಬೇಶುವ ಪಾತ್ರ ಹೇಳಿ ಪರಂಚೆಡ”.
“ತಾಳು ಮಾಡುವ ಪಾತ್ರವು,ಮೇಲಾರ ಮಾಡುವ ಪಾತ್ರವೂ ನಿಂಗೊಗೆ ಗೊಂತಿಲ್ಯಾ?ಹಾಲಿನ ಪಾತ್ರಲ್ಲಿ ಹಾಲು ಕಾಸಿ ಮಡುಗಿದ್ದೆ.ಇನ್ನು ಬದಲಿ ಹೋಗ”.
” ಒಂದು ಮೈಲು ದೂರಂದ ಏನೇನೋ ಹೇಳಿರೆ ಎನಗರ್ಥಾಗ.ಪಾತ್ರ ಯೇವದೂಳಿ ತಂದು ಕೊಟ್ಟರೆ ಎಂತಾವ್ತೂಳಿಲ್ಲೆಯಾ?”
“ಇದಾ..ಪಾತ್ರ,ಮುಚ್ಚಲು,ಸೌಟು ಎಲ್ಲ ಎದುರೇ ತಂದು ಮಡುಗಿದ್ದೆ. ಬಾಗ ಪಾತ್ರಕ್ಕೆ ಹಾಕಿ ನೀರು ಹಾಕೆಕು ಒಲೆಲಿ ಮಡುಗುಗ ಹೇಳಿ ಗೊಂತಿದ್ದನ್ನೆ. ಇಲ್ಲದ್ರೆ ಪಾತ್ರ ಕರಂಚುಗು”.
” ಪಾತ್ರ ಕರಂಚಿರೆಂತಾ?ಆನಲ್ದಾ ತಂದು ಕೊಡುದು. ಎನ್ನ ಅಜ್ಜಿ ಎಷ್ಟು ದೊಡ್ಡ ಚಿಟ್ಟಗುಳಿಲಿ ಮೇಲಾರ ಮಾಡುಗು. ಅದೆಲ್ಲ ಕರಂಚಿಂಡಿತ್ತಿಲ್ಲೆ‌. ದೊಡ್ಡ ಒಲೆಗೆ ಕಿಚ್ಚಾಕಿ ಮಡುಗೆಕು…..”
“ಎಂತಾ ನಿಂಗಳೂ ಒಲೆಲಿ ಮಾಡ್ತೀರಾ?ಒಲೆಗೆ ಕಿಚ್ಚು ಹಿಡಿಶಿ ಕೊಡುವೆ ಬೇಕಾರೆ”.
” ಅದೆಂತದೂ ಬೇಡ ಮಾರಾಯ್ತೀ..ಪಾತ್ರ ಕರಂಚುಗು ಹೇಳಿ ಹೆದರಿಕೆ ಇದ್ದರೆ ಎಷ್ಟು ನೀರು ಬೇಕೂಳಿ ನೋಡಿ ಹಾಕಿಕ್ಕಿ ಹೋಗು.ಮತ್ತೆ ಪಿರಿಪಿರಿ ಬೇಡ ನಿನ್ನದು”.
” ಇದಾ..ಹೀಂಗೆ ಬಾಗ ಮುಂಗುವಷ್ಟು ನೀರು ಹಾಕೆಕು. ಕೊದುದ ಮತ್ತೆ ಸ್ಟೌ ದೊಡ್ಡ ಮಾಡೆಡಿ.ಹದಾ ಕಿಚ್ಚು ಸಾಕು”.
“ಹ್ಹೋ..ಸಾಕು ನಿನ್ನ ಉಪದೇಶ. ಆನು ಮಾಡ್ತೆ ಈಗ .ನೀನು ಎಡೇಲಿ ಮಾತಾಡಿರೆ ಎನಗೆ ದಡಬಡ ಆವ್ತು.”
“ಇಲ್ಲೆಪ್ಪಾ.. ಆನು ಹೆರ ಹೋವ್ತೆ ಹೇಳಿ ಆಗಂದ ಹೇಳ್ತೆ.ನಿಂಗಳೇ ಅದೂ ಇದೂ ಹೇಳಿ ನಿಲ್ಸಿದ್ದು.”
” ಇದಕ್ಕಿನ್ನು ಎಂತ ಹಾಕೆಕಾದ್ದು?ಅದರನ್ನಾರು ಹೇಳಿಕ್ಕಿ ಹೋಗು.ಮತ್ತೆ ಆನೊಬ್ಬನೇ ಮಾಡಿಕೊಂಬೆ”.
” ಮೆಣಸಿನ ಹೊಡಿ,ಅರಶಿನ ಹೊಡಿ,ಉಪ್ಪು,ಬೇಕಾರೆ ಸಣ್ಣ ತುಂಡು ಬೆಲ್ಲ”.
“ಅದೆಂತ ಬೇಕಾರೆ ಬೆಲ್ಲ?”
” ನಿಂಗಳ ಅಜ್ಜಿ ಮೇಲಾರಕ್ಕೆ ಬೆಲ್ಲ ಹಾಕಿಂಡಿತ್ತವಾಳಿ ಎನಗೆ ಗೊಂತಿಲ್ಲೆ. ಆನಾದರೆ ಸಣ್ಣ ತುಂಡು ಹಾಕುತ್ತೆ. ನಿಂಗೊ ಅಜ್ಜಿಯ ಪಾಕ ಮಾಡುವ ಕಾರಣ ಹಾಂಗೇಳಿದ್ದಷ್ಟೆ.”
“ಎನ್ನ ಅಜ್ಜಿಯೂ ಸಣ್ಣ ತುಂಡು ಬೆಲ್ಲ ಹಾಕುಗು. ಮಜ್ಜಿಗೆ ಹುಳಿ ಇದ್ದರೆ ಸಣ್ಣ ತುಂಡು ಬೆಲ್ಲ ಹಾಕೆಕಾಡ. ಹೇಳುದು ಕೇಳಿದ್ದೆ ಆನು”.
” ಹ್ಹೋ..ಅಂಬಗ ಕ್ರಮ ಎಲ್ಲ ಗೊಂತಿದ್ದು.ಮಾಡಿ..ಮಾಡಿ…..”
” ಎನ್ನ ತಮಾಷೆ ಮಾಡೇಕೂಳಿಲ್ಲೆ. ಈಗ ಇದಕ್ಕೆ ಹಾಕಲೆ ಉಪ್ಪು ಎಲ್ಲಿದ್ದು?”
“ಉಪ್ಪು ಉಪ್ಪಿನಂಗಡಿಲಿಕ್ಕು. ಹೋಗಿ ತನ್ನಿ..ಮತ್ತೆ ಮೇಲಾರ ಮಾಡಿರೆ ಸಾಕು”.
” ಎನಗೆ ಹುಡ್ಕಿ ತೆಕ್ಕೊಂಬಲೆ ಎಡಿಯದ್ದೆ ಅಲ್ಲ. ನೀನಿಪ್ಪಗ ಅಂತೇ ಎಂತಕೆ ಅತ್ಲಾಗಿತ್ಲಾಗಿ ಕರಡಿಗೆ ಪರಡಿಂಡು ಕೂಬದೆಂತಕೇಳಿ ನಿನ್ನತ್ರೆ ಕೇಳಿದ್ದಷ್ಟೆ, ಹೇಳದ್ರೆ ಆನು ಹುಡ್ಕಿ ತೆಕ್ಕೊಂಬೆ”
“ಇದುವೇ ಉಪ್ಪು. ಕೈ ತುಂಬ ಹಾಕಿಕ್ಕೆಡಿ.ಮತ್ತೆ ಉಂಬಲೆಡಿಯ”
“ಹ್ಹೋ..ಆತು ಸಾಕು. ಎನಗೆಂತ ಅಷ್ಟೂ ಅಂದಾಜಾಗದಾ?ತುಳುವಿಲ್ಲೊಂದು ಗಾದೆಯಿದ್ದು…..”
“ಗಾದೆ ಎಲ್ಲ ಮೇಲಾರ ಮಾಡಿಕ್ಕಿ ಹೇಳಿ. ಆನು ಹೆರ…..”
“ಅದೆಂತರ ಆಗಂದ ಹೆರ….ಹೆರ..ಹೇಳಿ ಹೆರಡುದು ಕಾಣ್ತು. ಆನು ಮಾಡುದೇಂಗೇಳಿ ನೋಡಿರೆ ನಾಳೆಂದ ಮತ್ತೆ ನಿನಗೂ ಹಾಂಗೇ ಮಾಡ್ಲಕ್ಕು. ಅಂತೇ ಈಚವ° ಮಾಡ್ತ ಹೇಳಿ ಹೆರ ಹೋಗಿ ಕೂದರೆ ಅಭ್ಯಾಸ ಅಪ್ಪದೇವಗ. ಕಂಡು ಕಲಿವಲೂ……”
“ಸಾಕು..ಗಾದೆ ಪೂರ್ತಿ ಎನಗೊಂತಿದ್ದು. ಹೋವ್ತಿಲ್ಲೆ. ಇಲ್ಲೇ ನಿಲ್ಲುತ್ತೆ ಅಕ್ಕೋ. ಸಮದಾನ ಆತನ್ನೇ..”
” ಇದಕ್ಕೆ ಉಪ್ಪು ಎಷ್ಟು ಹಾಕೆಕು?”
“ರುಚಿಗೆ ತಕ್ಕಷ್ಟು”
“ಅದೆನಗೂ ಗೊಂತಿದ್ದು. ಎನ್ನ ಅಜ್ಜಿ ಅಡಿಗೆ ಮಾಡುಗ ಮನೆಯವು,ಆಳುಗೊ ,ನೆಂಟ್ರುಗೊ ಹೇಳಿ ದಿನಕ್ಕೆ ಎಷ್ಟು ಜೆನ ಮನೆಲಿ. ಅಜ್ಜಿ ಕಣ್ಣಂದಾಜಿಲಿ ಉಪ್ಪು ಮೆಣಸು ಹಾಕಿರೆ ಅದು ತ್ರಾಸಿಲ್ಲಿ ತೂಗಿ ಹಾಕಿದಾಂಗೆ.ಅಷ್ಟೂ ಹಾಳಿತ. ಎಷ್ಟು ದೊಡ್ಡ ಪಾತ್ರ ಅದೆಲ್ಲ. ಈಗ ಇಷ್ಟು ಸಣ್ಣ ಪಾತ್ರಲ್ಲಿ ನಾಲ್ಕು ಸೌಟು ಮೇಲಾರ ಮಾಡ್ಲೆ ಅರಡಿತ್ತಿಲ್ಲೆ ನಿನಗೆ..”
“ಆತಾತು..ಎನಗೆ ಅಷ್ಟೆಲ್ಲ ಮಾಡಿ ಗೊಂತಿಲ್ಲೆ. ಎನ್ನ ಅಬ್ಬಗೂ ಗೊಂತಿರ.ಎನ್ನ ಅಬ್ಬೆಯ ಅಬ್ಬಗೂ…..”
“ಮಾಡುವ ಕೆಲಸಲ್ಲಿ ಶ್ರದ್ದೆ ಬೇಕು. ಮೇಲಾರ ಮಾಡಿ ಅಪ್ಪನ್ನಾರ ಅದರ  ವಿಶಯವನ್ನೇ ಆಲೋಚನೆ ಮಾಡಿಂಡು ಅದರ ಹೇಂಗೆ ಮಾಡಿರೆ ಎಷ್ಟು ರುಚಿಯಕ್ಕೂಳಿ ಮಾತ್ರ ತಲೆಲಿರೆಕು. ಗೊಂತಾತೋ”.
” ಈಗ ಸರೀ ಗೊಂತಾತು.ಇದಾ ಉಪ್ಪು.. ಇಷ್ಟು ಹಾಕೆಕಿದಾ..”
“ನೀನೇ ಹಾಕಿದ್ದೊಳ್ಳೆದಾತು. ಉಪ್ಪು ಕೈಲಿ ಕೊಡುವ ಕ್ರಮಯಿಲ್ಲೇಡ”
“ಅಜ್ಜಿ ಹೇಳಿದ್ದಲ್ಲದಾ ನಿಂಗೊಗೆ. ಎನಗೂ ಅಜ್ಜಿಯೇ ಹೇಳಿದ್ದು”
“ಆಗಂದ ಅಸಬಡಿತ್ತೆ ನಿನ್ನ ಈ ಸ್ಟೌ ಹೊತ್ಸುಲೆ. ಚೆಂದ ನೋಡಿಂಡು ನಿಂಬದು ಬಿಟ್ಟು ಒಂದರಿ ಹೊತ್ಸಿ ಕೊಡ್ಲಾಗದಾ?”
“ಅದರ ಅಜ್ಜಿ ಹೇಳಿಕೊಟ್ಟಿದವಿಲ್ಲೇದಿಕ್ಕು. ಇದಾ….ಹೀಂಗೆ ಇದರ ತಿರುಗಿಸಿ …..”
“ಸ್ಟೌ ಹೊತ್ಸಿ ಕೊಟ್ಟಿದೆ ಹೇಳಿ ದೊಡ್ಡ ಜನ ಆಯೆಕೂಳಿಲ್ಲೆ.”
“ಹ್ಹ..ಹ್ಹ..ಆತಪ್ಪಾ‌….ನಿಂಗೊ ಮಾಡಿ….ಆನಿಲ್ಲೇ ನಿಂದು ನೋಡ್ತೆ”
“ಕಾಯಿ ಎಲ್ಲಿದ್ದು?ಸೊಲುದ್ದದಿದ್ದಾ?”
“ಇದಾ..ಇದು ಸೊಲುದು ಒಡದು ಮಡುಗಿದ ತೆಂಗಿನಕಾಯಿ ಹೇಳ್ತವು”
“ನಿನ್ನ ಕುಶಾಲೆಲ್ಲ ಈಗ ಬೇಡಾತ. ಆನು ಮೇಲಾರ ಮಾಡಿದ್ದರ ಉಂಡ ಮತ್ತೆ ಹೇಳು”
“ಅಲ್ದಾ ಮತ್ತೆ..ನಿಂಗಳ ಅಜ್ಜಿಯ ಮೇಲಾರ ..ಅಲ್ಲಲ್ಲ..ಅಜ್ಜಿ ಹೇಳಿಕೊಟ್ಟ ರೀತಿಯ ಮೇಲಾರ ಉಂಡಿಕ್ಕಿ ಜಡ್ಜ್ ಮೆಂಟ್ ಕೊಡ್ಲೇ ಕಾದು ನಿಂದದಾನು”
“ಆ ಕೆರೆಮಣೆ ಎಲ್ಲಿದ್ದು ಹೇಳಿಕ್ಕಿ ಸಾಕು ನಿನ್ನ ತಮಾಷೆ ,ಕುಶಾಲೆಲ್ಲ.ಅಟ್ಟುಂಬೊಳ ಪಾತ್ರ ಎಲ್ಲ ಅಚ್ಚುಕಟ್ಟಾಗಿ ಮಡುಗಿರಲ್ಲದಾ ಬೇಕಪ್ಪಗ ಬೇಕಾದ್ದು ಸಿಕ್ಕುದು….”
“ಹ್ಹ..ಹ್ಹ..ಬೇಡ ನಿಂಗೊ ಮುಂದುವರಿಶೆಕೂಳಿಲ್ಲೆ.ಎನಗೊಂತಿದ್ದು.ಎನ್ನ ಅಜ್ಜಿ ಎನಗೆಂತದೂ ಹೇಳಿ ಕೊಟ್ಟಿದವಿಲ್ಲೇಳಿ ಅಲ್ದಾ ….ಕೆರೆಮಣೆ ಇಲ್ಲಿ ಇದಾ ನಿಂಗಳ ಎದುರೇ ಇದ್ದು.ಇದನ್ನೇ ಎಂಗೊ ಕೆರೆಮಣೆ ಹೇಳುದು”
“ಹ್ಹೋ..ದೊಡ್ಡ ಜನ. ಬಾಕಿದ್ದವಂಗೆ ಒಲೆ ಬುಡಲ್ಲಿ ಕೆಲಸ ಮಾಡಿ ಬಚ್ಚಿಯಪ್ಪಗ ಪಕ್ಕ ಕಂಡಿದಿಲ್ಲೆ. ಅದಕ್ಕೆ ಹೀಂಗೆ ನೆಗೆ ಮಾಡೆಕೂಳಿಲ್ಲೆ”
“ಹ್ಹ.. ಹ್ಹ..ಅಪ್ಪನ್ನೇ..ಒಲೆ ಬುಡಲ್ಲಿ ನಿಂದು ಬೆಗರು ನೀರು ಬಿಚ್ಚಿತ್ತದಾ..ಅಯ್ಯೋ ಪಾಪ..ಇದಾ ಕಾಯಿ ಆನೇ ಕೆರದು ಕೊಡ್ತೆ”
“ಬೇಡ ಕಾಯಿ ಕೆರವಲೊಂದು ತಟ್ಟೆ ತಂದು ಕೊಡು ಸಾಕು”
“ಇದಾ..ತೆಕ್ಕೊಳಿ”
“ಇಷ್ಟು ಸಣ್ಣ ತಟ್ಟೆಲಿ ಕಾಯಿ ಕೆರದು ಹಾಕುದೇಂಗೆ?ಎನ್ನ ಅಜ್ಜಿ ಎಷ್ಟು ದೊಡ್ಡ ಹಾಳೆ ತಂದು ಕಾಯಿ ಕೆರಕ್ಕೊಂಡಿದ್ದದು”
“ಹಾಳೆ ಎಲ್ಲ ಈಗ ಬೇಡ.ಇಲ್ಲಿ ಈಗ ನಾವಿಬ್ರೆ ಇಪ್ಪದು. ರಜ ಅತ್ಲಾಗಿ ನಿಲ್ಲಿ ,ತೋರ್ಸುತ್ತೆ”
“ದೊಡ್ಡ ತಟ್ಟೆ ತಾ ಹೇಳಿದ್ದಕ್ಕೆ ಕಾಯಿ ಕೆರದು ಕೊಟ್ಟದೆಂತಕೆ?”
“ಇಷ್ಟು ಸಣ್ಣ ತಟ್ಟೆಲಿ ಕಾಯಿ ಸೂಳಿ ಹೆರ ಬಿಕ್ಕದ್ದ ಹಾಂಗೆ ಎನಗೆ ಕೆರವಲೆ ಎಡಿತ್ತೂಳಿ ನಿಂಗೊಗೆ ತೋರ್ಸಲೆ”
“ಎಲ..!! ಭಾರೀ ದೊಡ್ಡ ಜನ ನೀನು..ಮಿಕ್ಸಿ ಎಲ್ಲಿದ್ದು?”
“ಓ ಅಲ್ಲಿ ,ಆ ಕರೇಲಿದ್ದು”
” ಬೇಗ ಬೇಗ ತಂದು ಕೊಡು. ಎನಗೆ ಅಡಿಗೆ ಮಾಡಿಕ್ಕಿ ಬೇರೆ ಕೆಲಸ ಇದ್ದು..ನಿನ್ನ ಹಾಂಗೆ ಮೊಬೈಲ್ ಗುರುಟುದಲ್ಲ”
“ಆತಪ್ಪಾ..ಎನಗೆ ಯಾವ ಕೆಲಸವೂ ಇಲ್ಲೆ‌.ಇದಾ ಲಾಯ್ಕ ತೊಳದು ಮಡುಗಿದ್ದೆ”
” ಇದರ ಎನ್ನೆದುರು ತಂದು ಮಡುಗಿಕ್ಕಿ ದೂರ ನಿಂದದೆಂತಕೆ?ಇದಕ್ಕೆ ಕಾಯಿ ಹಾಕುದೇಂಗೇಳಿ ರಜ ಹೇಳು”
“ಓ..ಎನಗೆ ಅದು ತಲಗೋಯಿದಿಲ್ಲೆ ಆತಾ..ನಿಂಗಳ ಅಜ್ಜಿ ದೊಡ್ಡ ಕಡವ ಕಲ್ಲಿಲ್ಲಿ ಕಡದವಕ್ಕೆ ಈ ಮಿಕ್ಸಿ ಮುಟ್ಟಿ ಅಭ್ಯಾಸ ಇರ. ಮತ್ತೇಂಗೆ ಅವು ನಿಂಗೊಗೆ ಹೇಳಿ ಕೊಡುದು?ಹ್ಹ..”
“ಅಂತೇ ತಮಾಷೆ ಮಾಡಿರೆ ಎನಗೆ ಪಿಸ್ರು ಬಕ್ಕು ‌. ಬೇಗ ಒಂದರಿ ಮಿಕ್ಸಿಗೆ ಹಾಕಿ ಕೊಡು”
“ಅಯ್ಯಯ್ಯೋ..ಪಿಸ್ರು ಬರ್ಸುವ ಹಾಂಗಿದ್ದ ಕೆಲಸ ಆನು ಮಾಡುವನಾ..?ಅದೂದೇ ನಿಂಗೊ ಎನಗೆ ಇಷ್ಟು ಲಾಯ್ಕಕ್ಕೆ ಅಡಿಗೆ ಮಾಡಿ ಕೊಡುಗ. ಇದಾ.‌‌…ಇಷ್ಟೇ ಇಪ್ಪದು..”
“ಹ್ಹೋ ಕಾಯಿ ಸಣ್ಣಾತನ್ನೇ..ಇನ್ನು ಆನೆಂತಕೆ ಇದರ ಪುನಃ ಕಡವದು. ಮಿಕ್ಸಿ ತೊಳವಲೆ ಎಲ್ಲ ಎನಗೆ ಗೊಂತಿಲ್ಲೆ. ಬೇಕಾರೆ ನೀನೆ ಅರಪ್ಪು ಬಾಗಕ್ಕೆ ಹಾಕಿ ಮಿಕ್ಸಿ ತೊಳದು ಮಡುಗು”
“ಮೇಲಾರಕ್ಕೆ ಮಜ್ಜಿಗೆ ಹಾಕೆಕೂಳಿ ಅಜ್ಜಿ ಹೇಳಿಕೊಟ್ಟಿದವಿಲ್ಯಾ ಅಂಬಗ?”
“ಹಾಂ..ಹಾಕೆಕು..ಎನಗೆ ನೆಂಪಿದ್ದು. ನೀನೆಂತ ಹೇಳ್ತೇಳಿ ಆನು ಮಾತಾಡದ್ದದಷ್ಟೆ..
“ಎಷ್ಟು ಹಾಕೆಕಪ್ಪಾ…..?”
“ಎಷ್ಟು!!  ಒಂದಿಷ್ಟು ಹಾಕಿರಾತು. ಒಂದು ಸೌಟು ಸೀವು ಮಜ್ಜಿಗೆಯೂ ಹಾಕಿರೆ ಪರಿಮ್ಮಳಾವ್ತಾಡ”
“ಇದೂದೆ ಅಜ್ಜಿ ಹೇಳಿದ್ದಾ?”
“ಅಲ್ಲದ್ದೆ ಮತ್ತೆ..!”
“ಅಂಬಗ ಹಾಕಿ.ಮಜ್ಜಿಗೆ ಅಲ್ಲಿ ಫ್ರಿಜ್ ಲಿದ್ದು.”
” ಅದರ ನೀನೇ ತೆಗದು ಕೊಡು. ಇಲ್ಲದ್ರೆ ಅದು ಮಸರು,ಇದು ಹುಳಿ ಮಜ್ಜಿಗೆ, ಇನ್ನೊಂದು ಸೀವು ಮಜ್ಜಿಗೆ ಎಲ್ಲ ಒಟ್ಟು ಮಾಡಿದಿ ಹೇಳಿ ಎನ್ನ ಬೈವೆ ಮತ್ತೆ”
“ಅಲ್ದಾ ಮತ್ತೆ..ಆನಲ್ಲದ ನಿಂಗಳ ಬೈವದು..”
“ಅಲ್ಲ ಮತ್ತೆ ಆನಾ?”
” ಇದಾ ಮಜ್ಜಿಗೆ ಎರದು ಕಾಯಿ ಕೂಡಿದೆ. ಉಪ್ಪು ಸಾಕಾ ನೋಡಿ”
“ಮಾಡಿದ ಅಡಿಗೆಯ ರುಚಿ ನೋಡ್ಲಾಗ. ಅದು ಉಂಬವು ಹೇಳ್ತವು…….”
“ಎನ್ನ ಅಜ್ಜಿ ಹಾಂಗೆ ಹೇಳುಗೂಳಿ ಅಲ್ಲದಾ ಹೇಳ್ಲೆ ಹೆರಟದು. ಆ ಅಜ್ಜಿಯ ಪುಳ್ಳಿಯೇ ಅಲ್ಲದೋ ಒಪ್ಪಣ್ಣ ಆನೂದೇ…..ಎನಗೂ ಅಜ್ಜಿ ಹೇಳಿಕೊಟ್ಟಿದವು ರಜ….”
“ಅಜ್ಜಿ ಅಜ್ಜಿ ಹೇಳಿಂಡು ಮೇಲಾರಕ್ಕೆ ಒಗ್ಗರಣೆಯೂ ಹಾಕಿದೆಯಾ? ಆನು ಹಾಕುತ್ತಿತಿಲ್ಯಾ?”
” ನಿಂಗೊಗೆ ಎಣ್ಣೆ, ಸಾಸಮೆಕಾಳು,ಮೆಣಸು, ಬೇವಿನಸೊಪ್ಪು ಎಲ್ಲ ಹುಡ್ಕಿ ಕೊಡುವ ಹೊತ್ತಿಂಗೆ ಎನಗೆ ಮೇಲಾರ ಹಾಕಿ ಉಂಡಕ್ಕು ಹೇಳಿ ಕಂಡತ್ತು “
“ಆತಪ್ಪಾ…..ಭಾರೀ ಒಪ್ಪಕ್ಕ ನೀನು”
” ಎಂತ ಲಂಚವಾ ಇದು?”
“ಎಂತಕೆ?”
” ಬಟ್ಲು ಮಡುಗಿ ಬಳ್ಸುಲೆ “.
” ಅದು ಮತ್ತೆ ನೀನು ಬಳ್ಸದ್ರೆ ಎನಗೆ ಉಂಡದು ಉಂಡಾಂಗೇ ಆಗ”
” ನಿಂಗಳ ಅಜ್ಜಂಗೂ ಹಾಂಗೇಡ.ಅಜ್ಜಿ ಬಳ್ಸದ್ರೆ ಹೊಟ್ಟೆ ತುಂಬಿಕೊಂಡೇ ಇತ್ತಿಲ್ಲೇಡ”.
“ನಿನಗೆ ಹೇಂಗೆ ಗೊಂತು?”
“ನಿಂಗಳ ಅಜ್ಜಿ ಎನ್ನ ಅಮ್ಮನ ಅಬ್ಬೆ ಆದ ಕಾರಣ….”
“ಹ್ಹ….ಹ್ಹ…..ಅಂಬಗ ಒಟ್ಟಿಂಗೆ ಉಂಬ. ಮತ್ತೆ ಬೇಗ ಹೆರಡು. ನಾವೊಂದರಿ ಅಜ್ಜಿಯ ಕಂಡು ಮಾತಾಡ್ಸಿಕ್ಕಿ ಬಪ್ಪ”
“ಆಹಾ..‌‌..ನಿಂಗೊ ಮಾಡಿದ ಮೇಲಾರದ ವರ್ಣನೆ ಮಾಡ್ಲಾ?”
“ಅಜ್ಜಿ ಎದುರಂದ ಹೇಳಿ ಎನ್ನ ಮರ್ಯಾದೆ ತೆಗೆಡ .ಆನಿಷ್ಟರ ವರೆಗೆ ಅಜ್ಜಿ ಮೇಲಾರ ಮಾಡುಗ ಒಳ ಹೊಕ್ಕು ನೋಡಿದವನು ಅಲ್ಲ. ಅಜ್ಜಿ ಎನಗೆ ಮೇಲಾರ ಮಾಡ್ಲೆ ಹೇಳಿಕೊಟ್ಟಿದವೂ ಇಲ್ಲೆ.
” ಹ್ಹ….ಹ್ಹ…..ಸತ್ಯ ಹೆರ ಬಂತದ ಬಾಯಿಂದ..ಹ್ಹ..ಹ್ಹ..ಬನ್ನೀ ಉಂಬಲೆ”
” ಬಂದೆ. ಹೇಂಗಾಯಿದು ನೋಡು ಮೇಲಾರ? “
“ವಾಹ್ ಎಷ್ಟು ರುಚಿಯಾಯಿದಲ್ಲದ ನಿಂಗಳ ಅಜ್ಜಿಯ ಮೇಲಾರ….”
“ಆನು ಹೇಳುವಂದ ಮೊದಲೇ ನೀನು ಒಗ್ಗರಣೆ ಹಾಕಿದ್ದೆಂತಕೆ? ಇಲ್ಲದ್ರೆ ಇನ್ನೂ ಲಾಯ್ಕ ಆವ್ತಿತು”
“ಅಪ್ಪಪ್ಪು….ಇನ್ನು ಯೇವಗಲೂ ನಿಂಗಳೇ ಮಾಡಿ. ಆನು ಅಜ್ಜಿ ಹತ್ತರೆ ಹೇಳ್ತೆ”.
” ಸಾಕು..ಸಾಕು ಎನ್ನ ಹೊಗಳಿದ್ದು..”
“ಅಲ್ಲ ಮತ್ತೆ ಎಲ್ಲ ಎನ್ನ ಕೈಲಿ ಮಾಡ್ಸಿಕ್ಕಿ ಅಜ್ಜಿ ಮೇಲಾರಾಡ”.
” ಅಜ್ಜಿ ಹತ್ತರೆ ಇದರ ಎಲ್ಲ ಹೇಳಿರೆ ನೋಡು…..”
“ಹ್ಹ….ಹ್ಹ…..ಸಣ್ಣಾದಿಪ್ಪಗ ಎನ್ನ ಜಡೆ ಎಳದು ಗುದ್ದಿದ ಹಾಂಗೆ ಈಗಲೂ…..”
“ಸಾಕು ನಿನ್ನ ವರ್ಣನೆ.. ಬೇಗ ಹೆರಡು….”
“ಅಬ್ಬ ಈಗಲೇ ಕೋಪ ಬಂತಾ?”
“ಹ್ಹ…ಹ್ಹ..ನಿನ್ನ ಮಾತು ಕೇಳಿರೆ ಆರಿಂಗಾರು ಕೋಪ ಬಕ್ಕಾ? ಬೇಗ ಹೋಪ ಹೇಳಿದ್ದಷ್ಟೆ”.
“ಆಹಾ….ಮೇಲಾರದ ವರ್ಣನೆ ಮಾಡ್ಲೆ ತಡವಾವ್ತು ಅಲ್ಲದ?”
~~~***~~~
– ಪ್ರಸನ್ನಾ ವಿ ಚೆಕ್ಕೆಮನೆ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಅಜ್ಜಿಯ ಮೇಲಾರ

  1. ಮೇಲಾರ ಕಥೆ ಭಾರಿ ಲಾಯ್ಕಾತು. ಮೇಲಂದ ಎರಡು ಹಸಿಮೆಣಸು ಸಿಗಿದು ಹಾಕಿ ಮುಚ್ಚಿ ಮಡುಗಿದರೆ ಮತ್ತೂ ಪರಿಮಳ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×