- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
’ಬೆಂದಷ್ಟು ಹೊತ್ತು ತಣಿವಲೆ ಬೇಡ’ (ಹವ್ಯಕ ನುಡಿಗಟ್ಟು—7)
ಕೂಸಿಂಗೆಲ್ಲಿಂದಾರೂ ಪೊದು ಬಯಿಂದೊ ಭಾವಯ್ಯ ಕೇಳುವಗ ಎಲ್ಲಿಯೂ ಆಯಿದಿಲ್ಲೆ.ಎಂತ ಮಾಡುಸ್ಸು ಹೇದು ಅರಡಿತ್ತಿಲ್ಲೆ!. ಹೇಳಿರೆ; ಎಲ್ಲಿಯಾರು ಒದಗಿ ಬಕ್ಕು ಬಿಡಿ. ಬೆಂದಷ್ಟು ಹೊತ್ತು ತಣಿವಲೆ ಬೇಡ. ಹೇಳುಗು ಎನ್ನಪ್ಪ. ಆದರೆ ಈಗೀಗಾಣ ಅವಸ್ಥೆ
ನೋಡಿರೆ, ಕೃಷಿ,ಅಡಿಗೆ,ಪುರೋಹಿತ, ಮಾಣಿಯಂಗೊ ಕೂಸು ಸಿಕ್ಕಿದ್ದಿಲ್ಲೇಳಿ ಬೆಂದೊಂಡೇ ಇರೆಕಾವುತ್ತು.ಅವರ ತಣಿಶುಲೆ ಕೂಸುಸಿಕ್ಕುತ್ತಿಲ್ಲೆ ಮಿನಿಯ! ಆದರೆ ನಮ್ಮ ಶ್ರೀಗುರುಗೊ ಈ ವ್ಯಾಪ್ತಿಲಿ ಮದುವೆ ಆದವರ ವಿಶೇಷ ಸನ್ಮಾನ ಮಾಡಿ ಗುರುತಿಸುತ್ತಾಇದ್ದವು ಹೇಳ್ವದೊಂದು ಸಂತೋಷ. ಇರಳಿ.
ಉಂಬಲೆ ದೆನಿಗೇಳಿದ ಅಬ್ಬೆ ಬೆಶಿ-ಬೆಶಿ ಹೆಜ್ಜೆ ಬಡುಸಿಕ್ಕಿ “ಬೇಗ,ಬೇಗ ಉಂಡಿಕ್ಕಿ ಹೋಗಿ ಶಾಲಗೆ”, ಹೇಳುಗು. ಇದು ಕಂಡಾಬಟ್ಟೆ ಸುಡುತ್ತು. ಇದರ ಉಂಬದು ಹೇಂಗಪ್ಪ! ಹೇಳುವಗ; ಅಪ್ಪ ಅಲ್ಲಿದ್ದರೆ; “ಊದಿ-ಊದಿ ಉಣ್ಣಿ ಬೆಂದಷ್ಟು ಹೊತ್ತು ತಣಿವಲಿಲ್ಲೆ”. ಹೇಳುಗು.ಏವದೇ ಕಾದು ಕೂಬ್ಬ ಹೊತ್ತು ಹೇಳಿರೆ; ಬೇವಲೆ ಅಥವಾ ಬೆಳವಲೆ. ನಾವು ಒಂದು ಫಲಕೊಡುವ ಗೆಡು ನೆಟ್ಟತ್ತು ಹೇದಾದರೂ ಅದು ಫಲಕೊಡ್ಳೆ ತಯಾರಾತು, ತೆಂಗು, ಕೊಂಬೊಡದತ್ತು, ಕಂಗು ಸಿಂಗಾರ ಬಿಟ್ಟತ್ತು, ಬಾಳೆ ಮೋತೆ ಹಾಕಿತ್ತು. ಹೇಳಿ ಆದರೆ; ಫಲ ಕೊಯ್ಯೆಕ್ಕಾರೆ ಅಷ್ಟರವರೆಗೆ ಕಾದಷ್ಟು ಮತ್ತೆ ಕಾಯೆಕ್ಕಾಗಿಲ್ಲೆಯಿದ. ತಿಂಗಳುತುಂಬಿದ ಬಸರಿ; ಹಿಳ್ಳೆ ಮಡಿಲಿಂಗೆ ಬಪ್ಪಲೆ ಅಷ್ಟರವರೆಗೆ ಕಾದಷ್ಟು ಮತ್ತೆ ಕಾಯೆಡನ್ನೆ!
ಹೀಂಗೆ ನುಡಿಗಟ್ಟಿಲ್ಲಿ ಶಬ್ಧಾರ್ಥ ಮಾಂತ್ರ ಅಲ್ಲದ್ದೆ ಅಂತರಾರ್ಥಂಗೊ ಕೆಲಾವು ಇರ್ತು.ಅದರ ಅರ್ತು ಮನನ ಮಾಡಿಗೊಂಡರೆ; ಫಲ ನಿರೀಕ್ಷೆಲಿ, ತಳಮಳ, ಆತಂಕ ಕಮ್ಮಿ ಅಕ್ಕು ಹೇಳಿ ಹಿರಿಯೋರ ಹೇಳಿಕೆ. ಒಟ್ಟಾರೆ ತಾಳ್ಮೆಗೆ ಒಂದು ಸಂದೇಶವಾಗಿದ್ದೀ ನುಡಿ.
ಮಾಲಕ್ಕ, ಅಪರೂಪಲ್ಲಿ ಬಯಿಂದು , ಮೇಲೆ ಬರದ್ದದರ ಸರಿಯಾಗಿ ಓದಿಗೊಳಿ
ಓಹೋ ಮಲಕ್ಕ ಅಪರೂಪಲ್ಲಿ ಬಂತೊ ಬಯಲಿಂಗೆ! ಧನ್ಯವಾದ
ಲಾಯಕಾಯಿದು ವಿಜಯಕ್ಕ
ಹರೇರಾಮ, ಹಾಂ , ಗೋಪಾಲಣ್ಣ ಹೇಳಿದ ಹಾಂಗೆ ಉಪಯೋಗುಸುದಪ್ಪು. ಮತ್ತೆ ನರಸಿಂಹಣ್ಣನ ಅರ್ಥೈಕೆ ಸರಿಯಾಗಿದ್ದು. ಎಲ್ಲರಿಂಗೂ ಧನ್ಯವಾದಂಗೊ
ಹರೇ ರಾಮ, ರಘುಮುಳಿಯ ಹೇಳಿದ್ದು ಸರಿ. ಅದು ಗಾದೆ ಮಾತಾದರೆ,, ಇದು ನುಡಿಗಟ್ಟು ಈ ಗಾದೆ ಮಾತಿನ ತುಂಬ ದಿನಂದ ಕಷ್ಟ ಪಟ್ಟು ಮಾಡಿದ್ದದರ ಒಂದು ನಿಮಿಷಲ್ಲಿ ಹಾಳು ಮಾಡೀರೆ ಉಪಯೋಗುಸುದು.
ಒಪ್ಪ ಕೊಟ್ಟದು ನೋಡಿಯಪ್ಪಗ ಇಂತಿಷ್ಟು ಜೆನ ಓದಿದ್ದವು ಹೇದು ಗೊತಾವುತ್ತು. ಬರದ್ದಕ್ಕೆ ಸಾರ್ಥಕ ಆಯೆಕ್ಕಾರೆ ಓದುವವು ಇರೆಕು. ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದ .
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ – ಹೇಳಿದ ಹಾಂಗೆ ಅಲ್ಲದೋ ವಿಜಯತ್ತೆ ? ಲಾಯಕ ಇದ್ದು ನುಡಿಗಟ್ಟು .
ಲಾಯಿಕಿದತ್ತೆ ನುಡಿಗಟ್ಟು
“ಬೆಂದಷ್ಟು ಬೇವಲೆ ಇಲ್ಲೆ ಇನ್ನು “ಹೇಳಿದೆ ಇದರ ಬಳಕೆ ಮಾಡುತ್ತವು ,ಲಾಯಕ ಆಯಿದು ವಿಜಯಕ್ಕ
ವಿಜಯತ್ತೆದು ಒಳ್ಳೆ ಅಂಕಣ ಇದು. ಲಾಯಕ ಇದ್ದು
ಅಪ್ಪಪ್ಪು.ಅಡಕ್ಕೆ ಸೊಲುದಷ್ಟು ಹೊತ್ತು ಕೋಕ ಹೆರ್ಕಲೆ ಬೇಡ.
ಹಿರಿಯರ ಕಿರಿಯರು ತಮಾಷೆ ಮಾಡಿದರೆ ‘ನೀನೂ ಎನ್ನ ಹಾಂಗೆ ಅಪ್ಪಾಗ ಎಂತ ಮಾಡ್ತೆ ನೋಡುವೋ.ಬೆಂದಷ್ಟು ಹೊತ್ತು ತಣಿವಲೆ ಬೇಡ ‘ ಹೇಳಿ ಹೇಳುಗು.