- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಮೀಸುತ್ತವಂಗೆ ಮೀಸೆ ಭಾರ ಅಕ್ಕೊ?”-(ಹವ್ಯಕ ನುಡಿಗಟ್ಟು-102)
ಮದಲಿಂಗೆ ಮೂಲೆಮನೆ ಚುಬ್ಬಣ್ಣಜ್ಜನ ಮನೆಲಿ ತುಂಬಾಜೆನ. ಕೂಡು ಕುಟುಂಬ. ವರ್ಷವೂ ಮನೆಲಿ ಮದುವೆ,ಉಪನಯನ, ಹೇಳಿ ದೊಡ್ಡಜೆಂಬಾರಲ್ಲದ್ದೆ; ತ್ರಿಕಾಲ ಪೂಜೆ, ಸತ್ಯನಾರಾಯಣ ಪೂಜೆ,ಆಟಿ ತಿಂಗಳ ಹೊಡಾಡಿಕೆ,ಹರಿಸೇವೆ,ದೇವಕಾರ್ಯ, ಹೀಂಗೆ ಗರ್ಗಟ್ಳೆ ಒಂದಲ್ಲದ್ರೆ ಒಂದು ಅನುಪತ್ಯ ಆಗೆಂಡೇ ಇಕ್ಕು.
ಒಂದೊರುಷ ತಂಗೆಯ ಮದುವೆ ಮಾಡಿಕೊಟ್ಟು, ಮೂರುತಿಂಗಳಾಯಿದಷ್ಟೆ.ಆ ಭಾವᵒ ವಾಹನ ಅಪಘಾತಲ್ಲಿ ತೀರಿಹೋದ!. ಆ ಮತ್ತೆ ತಂಗೆಯನ್ನೂ ಕರಕ್ಕೊಂಡು ಬಂದು ಮನೆಲೇ ಮಾಡಿಗೊಂಡಪ್ಪಗ ; ಒಬ್ಬ ಚಙಾಯಿ,ಕೇಚಣ್ಣ ; “ಕೊಟ್ಟ ಕೂಸುಗಳ ಜವಾಬ್ದಾರಿಯನ್ನೂ ಹೊರೆಕಾಗಿ ಬಂತನ್ನೆ ಚುಬ್ಬಣ್ಣಾ!” ಹೇಳುವಗ
“ನಾವು ಸಂಸಾರ ಸಮುದ್ರಲ್ಲಿ ಮೀಸುವದು. ಮೀಸುತ್ತವಂಗೆ ಮೀಸೆ ಭಾರ ಅಕ್ಕೊ ಕೇಚಣ್ಣ?” ಹೇಳುವಗ ; ಎಷ್ಟು ತಾಳ್ಮೆಯ ಖನಿ ಈ ಚುಬ್ಬಣ್ಣ! ಹೇಳಿ ಕಂಡತ್ತು ಕೇಚಣ್ಣಂಗೆ!!.
ದೊಡಾ…ಹೊರೆ ಬೆಳೂಲಕಟ್ಟ ತಲೆಲಿಪ್ಪಗ ಅದರ ಮೇಗೊಂದು ಸಣ್ಣ ಸೂಡಿ ಮಡಗೀರೆ , ಅದೊಂದು ಭಾರ ಅಲ್ಲ, ಹೇಳುವ ಮಾತಿನಾಂಗೆ ಇದರ ಬಳಕೆ ಮಾಡ್ತವು.
————–೦————
ಪ್ರಾಸಬದ್ಧವಾಗಿ ಲಾಯಕಿದ್ದು ನುಡಿಗಟ್ಟು. ಒಪ್ಪುವಂತಹ ಮಾತು.
ಈ ನುಡಿಗಟ್ಟು ಹೊಸತಾಗಿ ಕೇಳ್ತಾ ಇಪ್ಪದು.
ವಿವರಣೆ ಲಾಯಿಕ ಆಯಿದು.