- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಹೂಗು ಕೊಡ್ತಲ್ಲಿ ಹೂಗಿನ ಎಸಳು”-(ಹವ್ಯಕ ನುಡಿಗಟ್ಟು-98)
ಒಂದಾರಿ ಎಂತದೋ ಜೆಂಬಾರದ ಸಂದರ್ಭಲ್ಲಿ ಎನ್ನಪ್ಪᵒ ಆರಿಂಗೋ ದಕ್ಷಿಣೆ ಕೊಡುವಗ “ಇದು ಹೂಗು ಕೊಡ್ತಲ್ಲಿ ಹೂಗಿನ ಎಸಳು ಭಾವ” ಹೇಳಿದೊವು.
ಎಂತರ ಇದು! ಹೂಗು ಕೊಡ್ತಲ್ಲಿ ಹೂಗಿನ ಎಸಳು!!?. ಎನ ಕುತೂಹಲ ಹುಟ್ಟಿತ್ತು. ಅದುವೋ?
ದಕ್ಷಿಣೆ ಮರ್ಯಾದೆ ಕೊಡುವಗ ಕೆಲವು ಜೆನ ಹೆಚ್ಚು ಕೊಡುಗು ,ಕೆಲವು ಜೆನ ರಜಕಮ್ಮಿ ಕೊಡುಗು, ಇನ್ನು ಕೆಲವು ಜೆನ ತಕ್ಕಷ್ಟು ಕೊಟ್ಟರೂ ಕಮ್ಮಿ ಇದ್ದಷ್ಟೆ ಹೇಳುಗು.ಹೆಚ್ಚಿನವಕ್ಕೆ ಕೊಡೆಕು ಹೇಳಿದ್ದರೂ ತಾಕತ್ತಿರ.ವಿಶೇಷವಾಗಿ ಗೋದಾನ,ಭೂ ದಾನ ಹೇಳಿ ಕೊಡುವಗ ಕಿಂಚಿತ್ ದಕ್ಷಿಣೆಲಿಯೇ (ತಾಕತ್ತು ಇದ್ದವುದೇ) ನಿವೃತ್ತಿ ಮಾಡ್ತವು. (ಕನ್ಯಾದಾನ ಮಾಡುವಗ ಡಿಮಾಂಡ್ ನೋಡಿಗೊಂಡು ವರದಕ್ಷಿಣೆ) ಹಾಂಗೆ ಹೀಂಗಿಪ್ಪ ಸಂದರ್ಭಲ್ಲಿ ಇದರ ಉಪಯೋಗ.
ಹೂಗು ಕಮ್ಮಿ ಇದ್ದಷ್ಟೇಳಿ ಆದರೆ; ಸಿಂಗಾರವ ತುಂಡು ಮಾಡಿ ಹಾಕುದು.ದಾಸನ ಹೂಗಿನ ಎಸಳು ಮಾಡಿ ಹಾಕುದು. ಅಂಬಗ ಅರ್ಚನಗೆ ರಜ ಹೂಗು ಸಿಕ್ಕಿದಾಂಗಾವುತ್ತು. ಇಡೀ ಹೂಗು ಅರ್ಚನಗೆ ಸಿಕ್ಕದ್ದೆ ಇಪ್ಪಗ; ಎಸಳಿನ ಹಾಕುದು. ಹಾಂಗೇ ಹೆಮ್ಮಕ್ಕೊಗೆ ಮದುವೆ, ಉಪನಯನ ಇತ್ಯಾದಿ ಜೆಂಬಾರಕ್ಕೆ , ಸೂಡ್ಳೆ ಹಂಚುವಾಗ; ಮಲ್ಲಿಗೆ ಕಮ್ಮಿ ಆದರೆ ಮಾಲೆ ಕೊಡ್ಳೆ ಸಿಕ್ಕದ್ದರೆ ಒಂದು ತುಂಡು, ಅದೂ ಇಲ್ಲದ್ರೆ, ಒಂದು ಹೂಗಾದರೂ ಕೊಡೆಕಿದ ಅದು ನಮ್ಮ ಸಂಸ್ಕೃತಿ. ಒಟ್ಟಿಲ್ಲಿ ಇದ್ದಾಂಗೆ ಸುಧರ್ಸುದು.
ಹೆಚ್ಚಿನವಕ್ಕೆ ಕೊಡೆಕು ಕಂಡರೂ ಅಷ್ಟು ತಾಕತ್ತಿರ. ನಾವು ಈ ಸಾಲಿಂಗೆ ಸೇರುಗು. ಇದು ಅಪ್ಪᵒ ಹೇಳುವ ಮಾತು. ತಿಂಡಿ,ಹಣ್ಣು,ಯಾವುದೇ ಹಂಚುವಾಗ ನಿತ್ಯ ಜೀವನಲ್ಲಿ ಇದರ ಬಳಕೆ. ಇದ್ದದಲ್ಲಿ ಸುಧರ್ಸುದಕ್ಕೆ ಈ ಮಾತು ಉಪಯೋಗ ಮಾಡ್ತವು.
——-೦——-
ನುಡಿಗಟ್ಟಿನ ವಿವರಣೆ ಚೊಕ್ಕ ಆಯಿದು.
ಇದು ಶುದ್ಧ ಹವ್ಯಕ ಗಾದೆ. ವಿವರಣೆ ಲಾಯಕ ಆಯಿದು.
ಕಂಬಾರು ಭಾವಯ್ಯಂಗೆ ಧನ್ಯವಾದಂಗೊ
ಶಾಸ್ತ್ರಕ್ಕಾದರೂ ಕೊಡದ್ದೆ ಕಳಿಯ. ಗೋದಾನ ಕೊಡ್ಳೆ ಪೂರೈಸ ಹೇಳಿ ಪೈಸೆಲಿ ಹೊಂದಣಿಕೆ ಮಾಡುವದುದೆ ಹೀಂಗೆಯೋ ಹೇಳಿ.
ಈಗಾಣ ಮಕ್ಕೊಗೆ ಅರ್ಥ ಆಯೆಕಾರೆ, ಸ್ವೀಟಿನ ಬದಲು ಒಂದು ಚಾಕ್ಲೆಟ್ಟು ಅಲ್ಲದೊ ವಿಜಯಕ್ಕ ?
ಬೊಳುಂಬು ಗೋಪಾಲನ ಅರ್ಥವತ್ತಾದ ವಾಕ್ಯ ನೂರಕ್ಕೆ ನೂರುಸರಿ. ಹಿರಣ್ಯಕ್ಕೆ ಬದಲಾಗಿ ಕಿಂಚಿತ್ ನಾಣ್ಯಲ್ಲಿ ಸುಧರಿಕೆ!!. ಆ ಸಾಲು ಬರವಲೆ ಮರದೋತು.
ಬೊಳುಂಬು ಗೋಪಾಲ ನೆಂಪುಮಾಡಿಯಪ್ಪಗ ಮತ್ತೊಂದು ನೆಂಪಾತು. ಅದುದೆ ಸೇರ್ಸಿದೆ.
ವಿಜಯಕ್ಕನ ೯೮ನೆ ಹವ್ಯಕ ಗಾದೆಗೆ ಸುಸ್ವಾಗತ, ಈ ಗಾದೆಯ ಅರ್ಥ ಗೊಂತಿತ್ತಿಲ್ಲೆ, ಈಗ ಗೊಂತಾತು,