Oppanna.com

“ಕಾರ್ಯ ಆಯೆಕ್ಕಾರೆ, ಕಾಕೆಯ ಕಾಲೂ ಹಿಡಿವ ಜಾತಿ”-(ಹವ್ಯಕ ನುಡಿಗಟ್ಟು-75)

ಬರದೋರು :   ವಿಜಯತ್ತೆ    on   12/12/2016    5 ಒಪ್ಪಂಗೊ

 

“ಕಾರ್ಯ ಆಯೆಕ್ಕಾರೆ, ಕಾಕೆಯ ಕಾಲೂ ಹಿಡಿವ ಜಾತಿ”-(ಹವ್ಯಕ ಬುಡಿಗಟ್ಟು-75)

ಆನು ಸಣ್ಣದಿಪ್ಪಗಣ ಒಂದಿನದ ಶುದ್ದಿ ನೆಂಪಾತು. ಎನ್ನಪ್ಪನ ಚಙಾಯಿ ಚುಬ್ಬಣ್ಣ ಬಂದವು.  ಆರೂಳಿ ನೋಡ್ಳೆ ಆನು ಹೆರಬಂದಪ್ಪಗ “ಎರಡು ಗ್ಲಾಸು ಕಾಪಿ ಮಾಡಿ ಕೊಂಡ ಮೋಳೆ” ಹೇಳಿದವು ಎನ್ನಪ್ಪᵒ. ಅವರ ಪಟ್ಟಾಂಗ ಆಗೆಂಡಿದ್ದತ್ತು ಹೇಳುವೊᵒ.ಮಾತುಕತೆಲಿ ಕೆಲಸದ ಆಳುಗಳ ಶುದ್ದಿ ಬಾರದ್ದಿಕ್ಕೊ ಕೃಷಿಕರಿಂಗೆ!.

ಕಾಪಿ ತೆಕ್ಕಂಡು ಹೆರ ಬಪ್ಪಗ , “ಕೆಲಸದಾಳುಗೊ ಬೆಳದ್ದವೀಗ  ಒಂದೊಂದರ ಮರ್ಜಿ, ಹೇಳಿ ಸುಕ ಇಲ್ಲೆ.ಹಾಂಗೆ ಹೇಳೆಂಡು, ಅವರ ಕಾರ್ಯ ಆಯಕ್ಕಾರೆ, ಕಾಕೆಯ ಕಾಲೂ ಹಿಡಿಗವು” ಎನ್ನಪ್ಪ ಚುಬ್ಬಣ್ಣ ಮಾವನತ್ರೆ ಹೇಳುಸ್ಸು ಕೇಟತ್ತು.

ಅವರ ಪಟ್ಟಾಂಗ ಮುಗುದು, ಅವನೂ ಹೋದ ಮತ್ತೆ ಆನು ಅಪ್ಪನತ್ರೆ ಕೇಳಿದೆ. “ಅಪ್ಪᵒ, ಚುಬ್ಬಣ್ಣ ಮಾವನತ್ರೆ ನಿಂಗೊ, ಕಾರ್ಯ ಆಯೆಕ್ಕಾರೆ; ಕಾಕೆಯ ಕಾಲೂ ಹಿಡಿಗೂದು ಹೇಳುಸ್ಸು ಕೇಟತ್ತು. ಕಾಕೆ ಕಾಲು ಹಿಡಿವಲೆಡಿಗೊ? ಎಂತಕೇ ಹೇಳುಸ್ಸು? ಕೇಟೆ. “ಅದೆಂತದೊ ನೀನೀಗ ಹೋಗು, ನಿನ್ನ ಪಾಠ ಓದು”. ಹೇದೊವು. ಆನಂಬಗ ಹೈಸ್ಕೂಲಿಂಗೆ ಹೋಗೆಂಡಿತ್ತೆ.

ಒಹೋ ಅವಕ್ಕೆ ಕಾಪಿ ಮಾಡಿ ತಪ್ಪಲಪ್ಪಗ ಎನ ಓದಲಿಲ್ಯೊ. ಹೇದು ಜಾನ್ಸೀರೂ  ಎನ್ನಪ್ಪᵒ ಹಾಂಗಿದ್ದ ಚೋದ್ಯಂಗೊಕ್ಕೆ ವಿವರ ಹೇಳುಗು. ಅದೆಷ್ಟೂ ಎನ ಹೇಳಿದ್ದೊವುದೆ. ಈಗ ಅವಕ್ಕೆ ಮೂಡಿಲ್ಲೆ. ಹೇಳಿ ಸಮಾಧಾನ ಮಾಡಿಯೊಂಡೆ.

ಮತ್ತೊಂದು ದಿನ, ಎನ್ನ ತಮ್ಮ “ಅಕ್ಕᵒ,ಎನ್ನ ಫ್ರೆಂಡ್ ಆನು ನೋಟ್ಸ್ ಕೇಳುವಗ ಕೊಡದ್ದೆ, ಎನ್ನ ದೂರ-ದೂರ ಮಡಗೆಂಡಿದᵒ,ಹೇಳಿತ್ತಿದ್ದೆಲ್ಲೊ; ಅವᵒ ಇಂದು ಎನ್ನತ್ರೆ

“ಎನ್ನ ನೋಟ್ಸ್ ಕಾಣುತ್ತೇ ಇಲ್ಲೆ,ಪ್ಲೀಸ್ ಒಂದಾರಿ ಕೊಡುವಿಯಾ ಮಾರಾಯ” ಹೇದᵒ. “ಇಲ್ಲೆ ನೀನು ಎನಗೆ ಕೇಳುವಗ ಕೊಟ್ಟಿದಿಲ್ಲೆನ್ನೆ” ಹೇಳಿದೆ. ಅಂಬಗ
“ಆತು ಮಾರಾಯ , ಬೇರೆ ಆರತ್ರೂ ಎನ ಸಿಕ್ಕಿದ್ದಿಲ್ಲೆ. ಇಂದು ಬರಕ್ಕೊಂಡು ಹೋಗಿ ಮಾಸ್ಟ್ರಿಂಗೆ ತೋರ್ಸದ್ರೆ ಎನ ಪನಿಷ್ಮೆಂಟ್ ಖಂಡಿತ. ನೀನು ಕೊಡದ್ದಿರೆಡ,ನಿನ್ನ ಕಾಲು ಹಿಡಿತ್ತೆ ಹೇದᵒ”. ಹೇಳುವಗ ಎನಗೂ ನೆಗೆ ಬಂತು, ತಮ್ಮನೂ ಬಿದ್ದು-ಬಿದ್ದು ನೆಗೆ ಮಾಡಿಯೊಂಡು ಬೊಬ್ಬೆ ಅಪ್ಪಗ ಅಲ್ಲೆ ಅಪ್ಪᵒ ಬಂದೊವು.

“ಎಂತರ ಮಕ್ಕಳೆ ಗಲಾಟೆ”, ಹೇದು ಕೇಟವು.

“ತಮ್ಮನ ಚಙಾಯಿ ಮನ್ನೆ ಇವಂಗೆ ನೋಟ್ಸ್ ಕೊಡದ್ದೆ ಸತಾಯಿಸಿದವᵒ, ನಿನ್ನ ಕಾಲು ಹಿಡಿತ್ತೆ ಒಂದ್ಸರ್ತಿ ಕೊಡು” ಹೇದು ದಮ್ಮಯ-ದಕ್ಕಯ ಹಾಕುತ್ತನಡ”.ಆನು ಹೇಳುವಗ; ಅಪ್ಪᵒ, “ಅದು ಕೆಲವು ಜೆನ ಅವರ ಕಾರ್ಯ ಆಯೆಕ್ಕಾರೆ,ಅವರ ಬೇರೆಲ್ಲ ಹಮ್ಮು-ದಮ್ಮು ಬಿಟ್ಟು, ಕಾಕೆಯ ಕಾಲು ಹಿಡಿವಲೂ ತಯಾರಿರುತ್ತೊವು ಹೇಳುಸ್ಸು ಇದಕ್ಕಿದ”.ಎಂತಕೆ ಆ ಉದಾಹರಣೆ ಕೊಡುದು ಆನು ಕೇಟಪ್ಪಗ

“ಕಾಕೆ ಹೇಳಿರೆ,ಅದೊಂದು ನೀಚ ಪಕ್ಷಿ ಹೇಳಿ ಲೆಕ್ಕ.ತಿಥಿ ಮಾಡುವಗ ತಿಥಿಪಿಂಡ ತಿಂಬಲೆ ಮಾಂತ್ರ ಅದರ ಗಣನೆ. ತಾನು ಶ್ರೇಷ್ಟ ವ್ಯಕ್ತಿ ಹೇಳೆಂಬೊವು, ತನ್ನ ಕಾರ್ಯ ಆಯೆಕ್ಕಾರೆ ಅಂತದರ ಕಾಲು ಹಿಡಿವಲೂ ತಯಾರಿರುತ್ತವು. ಅಷ್ಟು ಕೆಳಮಟ್ಟಕ್ಕೂ ಇಳಿಗು ಹೇಳಿ ಅರ್ಥ ಬಪ್ಪಲ್ಲಿ, ಈ ಮಾತು ಬಳಸಿಗೊಂಬದು”.

——-೦——

5 thoughts on ““ಕಾರ್ಯ ಆಯೆಕ್ಕಾರೆ, ಕಾಕೆಯ ಕಾಲೂ ಹಿಡಿವ ಜಾತಿ”-(ಹವ್ಯಕ ನುಡಿಗಟ್ಟು-75)

  1. ಬೊಳುಂಬು ಗೋಪಾಲಂಗು,ಸೇಡಿಗುಮ್ಮೆ ಗೋಪಾಲಂಗೂ ಓದಿ ನೋಡಿ ಅನಿಸಿಕೆ ಬರದ್ದಕ್ಕೆ ಧನ್ಯವಾದಂಗೊ ,’ಕಾರ್ಯ ಆಯೆಕ್ಕಾರೆ ಕಾಕೆ ಕಾಲು ಹಿಡಿಗು’ ಹೇದು ಬೇಕಾಷ್ಟು ಜೆನ ಹೇಳ್ತದು ಕೇಳಿದ್ದೆ . ಎನ್ನ ಅಪ್ಪ ಮಾಂತ್ರ ಅಲ್ಲ.(ಇದು ಹೊಸ ಸೃಷ್ಟಿ ಅಲ್ಲಪ್ಪ!.

  2. ಕಾಕೆ ಕಾಲಿನ ಹಾಂಗಿಪ್ಪ ಅಕ್ಷರ ಬರೆತ್ತದು ಕೇಳಿದ್ದೆ. ಕಾಕೆ ಕಾಲಿನ ಹಾಂಗ್ದೆ ಬರೆತ್ತವು ಡಾಕ್ಟ್ರಕ್ಕೊ ಆವ್ತವು ಹೇಳಿ ತಮಾಷಗೂ ಹೇಳ್ತವು.
    ಇದು ಹೊಸ ನುಡಿಗಟ್ಟು ಲಾಯಕಾಯಿದು. ಕಾರ್ಯ ಆಯೆಕಾರೆ ಕತ್ತೆ ಕಾಲು ಹಿಡಿತ್ತದುದೆ ಇದೇ ನಮುನೆ ಇದ್ದು.

  3. ಒಳ್ಳೆದಾಯಿದು.ಇದರ ಕೇಳಿದ್ದಿಲ್ಲೆ.
    ಕಾರ್ಯವಾಸಿ ಕತ್ತೆಯ ಕಾಲು ಕಟ್ಟು —ಹೇಳಿ ಓದಿದ್ದೆ. ಸಂತೋಷ ಚಿಕ್ಕಮ್ಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×