Oppanna.com

“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”-(ಹವ್ಯಕ ನುಡಿಗಟ್ಟು-93)

ಬರದೋರು :   ವಿಜಯತ್ತೆ    on   20/06/2017    14 ಒಪ್ಪಂಗೊ

“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”—(ಹವ್ಯಕ ನುಡಿಗಟ್ಟು-93).

ಇದೆಂತಪ್ಪ ನಾಡು ಹೋಗು ಹೇಳುದು, ಕಾಡು ಬಾ ಹೇಳುದು!.ಆಶ್ಚರ್ಯ ಆವುತ್ತಲ್ಲೊ!. ಎನಗೂ ಸುರುವಿಂಗೆ ಹಾಂಗೇ ಆಯಿದು. ಎಂತ ಕತೆ ನೋಡುವೊಂ.

ಮನುಷ್ಯಂಗೆ  ಚತುರಾಶ್ರಮ ಹೇಳಿ ನಾಲ್ಕು ವಿಧ ಇದ್ದಡ. ೧.ಬ್ರಹ್ಮಚರ್ಯ,೨.ಗೃಹಸ್ಥ,೩.ವಾನಪ್ರಸ್ಥ,೪.ಸನ್ಯಾಸ. ಹೀಂಗೆ.

ಬ್ರಹ್ಮೋಪದೇಶ ಆದಮತ್ತೆ ಮದುವೆ ಅಪ್ಪಲ್ಲಿವರೆಗೆ ಬ್ರಹ್ಮಚರ್ಯ, ಮತ್ತೆ ಮದುವೆ ಆದಮತ್ತೆ ಗೃಹಸ್ಥ. ಈ ಅವಧಿಲಿ ರಜ ದೀರ್ಘಕಾಲ ಜೀವಿತಾವಧಿ. ಇಲ್ಲಿ ಮಕ್ಕೊ ಪ್ರಾಯಕ್ಕೆ ಬಂದು ಅವಕ್ಕೂ ಮದುವೆ ಆಗಿ, ಪುಳ್ಳಿಯಕ್ಕೊಲ್ಲಾಗಿ, ಅರುವತ್ತೊರುಷಪ್ಪಗ ಷಷ್ಟಿಪೂರ್ತಿ ಮಾಡುತ್ತೊವು. ಮತ್ತೆ ಕಾರ್ಭಾರೆಲ್ಲ ಹೆರಿಮಗಂಗೆ ಕೊಡುದಾಡ. ಹಾಂಗೆ ನಮ್ಮ ಪುರೋಹಿತರಾದ; ಕೋಣಮ್ಮೆ ಮಹಾದೇವ ಭಟ್ರು ಹೇಳುದು ಕೇಳಿದ್ದೆ.ಅದ್ರಿಂದಲೂ ಮತ್ತೆ ಸಹಸ್ರ ಚಂದ್ರ ಆಗಿ,  ದೇಹ ಹಣ್ಣಪ್ಪಗ ಮತ್ತೆ ವಾನಪ್ರಸ್ಥ. ಕಾಡಿಂಗೆ ಹೋಪದು. ಅಲ್ಲಿ ಸನ್ಯಾಸಿಗಳ ಹಾಂಗೆ ಗಡ್ಡೆ-ಗೆಣಸು ತಿಂದೊಂಡು ದೇವರ ಧ್ಯಾನಮಾಡಿಗೊಂಡು ಅಂತ್ಯಕಾಲ ಕಳವದು.{ಇದೆಲ್ಲಾ ಅನಾದಿಕಾಲದ ಮಾತು. ಈಗ ಆರುದೆ ಚತುರಾಶ್ರಮ ಪಾಲುಸುತ್ತೊವಿಲ್ಲೆಯಾದರೂ  ಈ ಮಾತು ಬಳಕೆಲಿ ಒಳುದ್ದು.}

ನಮ್ಮಲ್ಲಿ ಹಳೇ ಮನುಷ್ಯರು ಇದ್ದರೆ, ತಾನು ಮಾಡುವ ಕರ್ತವ್ಯದ ಎಲ್ಲಾ ಕೆಲಸಂಗೊ ಮುಗುಕ್ಕೊಂಡು ಬಯಿಂದು ಹೇಳುವದಕ್ಕೆ(ವಾನಪ್ರಸ್ಥಕ್ಕೆ)  ’ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು,’. ಈ ನುಡಿಯ ಉಪಯೋಗ ಮಾಡ್ತವು. ಇನ್ನು ಕೆಲವು ವರ್ಷ ಕಳಿವಗ ಮಾತು ಮರೆಯಕ್ಕು. ಬರದು ಮಡಗೆಂಡ್ರೆ ಪುಸ್ತಕಲ್ಲಿಯಾದರೂ ಒಳಿಗು. ಎಂತ ಹೇಳ್ತಿ?

                        ———–೦———–

14 thoughts on ““ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”-(ಹವ್ಯಕ ನುಡಿಗಟ್ಟು-93)

  1. ವಿಜಯಕ್ಕ, ಶಿವರಾಮ ಭಟ್ಟರ ಪರಿಚಯ. ಇವು ಕರ್ನಾಟಕ ಸರಕಾರಲ್ಲಿ ಕಾನೂನು ಮತ್ತು ವ್ಯವಸ್ಥೆ ಯ ಮುಖ್ಯ ಅಧಿಕಾರಿಯಾಗಿ ಕೆಲವು ವರ್ಷಗಳ ಹಿಂದೆ ನಿವೃತ್ತ ರಾಗಿದ್ದಾರೆ. ಚವುರ್ಕಾಡು ಇವರ ಆದಿಮನೆ . ಈಗ ಪಟ್ಟಾಜೆ. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಚವುರ್ಕಾಡು ಶಿವರಾಮ ಭಟ್ಟರು. ಧನ್ಯವಾದಗಳು ವಿಜಯಕ್ಕ.

        1. ಅಪ್ಪೊ! ಅಂಬಗ ಆ ಉಲ್ಲೇಖವ ಎಂತಕೆ ಬಿಟ್ಟದಪ್ಪ!.ಓಹೋ ಹರನೂ ಹರಿಹರನೂ ಓಳ್ಳೆದಾತು. ಪರಿಚಯ!!

  2. ಜೀವನದ ಸಂಧ್ಯಾಕಾಲಲ್ಲಿ ಇಪ್ಪದರ, ನುಡಿಗಟ್ಟು ರೂಪಲ್ಲಿ ವ್ಯಕ್ತ ಪಡುಸುವದು ಹೀಂಗೆ.
    ಹೊತ್ತು ಕಂತಿತ್ತು, ಇನ್ನು ಸೂರ್ಯ ಮುಳುಗಲೆ ಹೆಚ್ಚು ಹೊತ್ತಿಲ್ಲೆ, ಹೇಳುವ ಧ್ವನಿ ಕೂಡಾ ಇಲ್ಲಿದ್ದು

    1. ಅಪ್ಪು ಭಾವಯ್ಯ, ಮದ್ಯ್ಹಾಹ್ನ ತಿರುಗಿತ್ತು, ಹೊತ್ತು ಕಂತಿತ್ತು. ಹೀಂಗೇ ಹೆರಿಯವು ಹೇಳುಗು.

  3. ಓದಿ ಸ್ಪಂಧಿಸುತ್ತೊವಿದ್ದರೇ ಬರವವಕ್ಕೆ ಸ್ಪೂರ್ತಿ. ಒಪ್ಪ ಕೊಟ್ಟ ಚೆನ್ನೈ ಭಾವಂಗೆ, ಬೊಳುಂಬು ಗೋಪಾಲಂಗೆ, ಕಂಬಾರು ಭಾವಂಗೆಲ್ಲ ಧನ್ಯವಾದಂಗೊ

  4. ಅಪ್ಪು. ನಾವು ಕೇಳಿದ್ದ ನುಡಿಗಟ್ಟು. ಆದರೆ ಹೀಂಗೆ ನೆಂಪು ಮಾಡಿಯೊಂದು ಇದ್ದರೆ ಮರೆಯಾ. ಹೀಂಗೆ ಬರೆತ್ತಾ ಇರಿ

  5. ಪ್ರಾಯ ಆದ ಅಜ್ಜಂದ್ರು ಹೇಳ್ತು ಕೇಳಿದ್ದೆ ಈ ಮಾತಿನ. ವಿಜಯಕ್ಕ ಹೇಳಿದ್ದು ಸತ್ಯ. ಈಗಾಣ ಕಾಲಲ್ಲಿ ಕಾಡಿಂಗೆ ಹೋಪಲೆ ಕಾಡೇ ಕಡಮ್ಮೆ ಆಯಿದು. ವೃದ್ಧಾಶ್ರಮಂಗೊ ಹೆಚ್ಚುತ್ತಾ ಇಪ್ಪದು ಕೇಳಿ ಬೇಜಾರಾವ್ತು.

    1. “ಎನಗೆಂತರ ಮಧ್ಯಾಹ್ನ ತಿರುಗಿತ್ತು” ಅರುವತ್ತೆಪ್ಪತ್ತೊರುಷ ಕಳುದೊವು; ಈ ಮಾತು ಹೇಳುದು ಕೇಳಿದ್ದೀರಾಯಿಕ್ಕು ಅಲ್ಲೊ ಶಂಕರಣ್ಣ!. ಈ ಮಾತಿನ ಪ್ರಯೋಗದ ಮತ್ತೊಂದು ರೂಪ ಇದು. ಧನ್ಯವಾದ ನಿಂಗಳ ಒಪ್ಪಕ್ಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×