- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಪಾಪಿ ಹೋದಲ್ಲಿ ಮೊಳಕ್ಕಾಲು ನೀರು”-{ಹವ್ಯಕ ನುಡಿಗಟ್ಟು-28}
“ಈ ವಾರಿ ಅಡಕ್ಕೆ,ಗೆನಮೆಣಸು,ತೆಂಗಿನ ಕಾಯಿ ಹೀಂಗಿದ್ದ ಫಲ ವಸ್ತುಗೊಕ್ಕೆಲ್ಲ ಕ್ರಯ ಏರಿದ್ದು ಭಾವಯ್ಯ”. ಹೀಂಗೆ ಜೆಂಬಾರಲ್ಲಿ ಸೇರಿದ ಭಾವಂದ್ರು ಮಾತಾಡಿಯೊಂಡೊವು. ಅಷ್ಟಪ್ಪಗ ನಮ್ಮ ಆಚಕರೆ ಪಾಪದ ಅಪ್ಪಚ್ಚಿ ಒಬ್ಬ “ಪಾಪಿ ಹೋದಲ್ಲಿ ಮೊಳಕ್ಕಾಲು ನೀರಡ” ಹೇಳ್ತ ಹಾಂಗೆ ಎನ್ನ ಗೆನಮೆಣಸು ಬಳ್ಳಿ ಎಲ್ಲ ಸೂಟೆಲಿ ಸುಟ್ಟ ಹಾಂಗಾಯಿದಪ್ಪ!. ಹತ್ತು ಕಿಲೊ ಆಯೆಕ್ಕಾದಲ್ಲಿ ಒಂದು ಕಿಲೊ ಸಿಕ್ಕೀರೆ ಭಾಗ್ಯ!.ತೆಂಗಿನಕಾಯಿಯೋ; ಎನ ಒಡವಲೆ ತಕ್ಕಿತವೇ ಉಳ್ಳೊ!.ಇದರೆಲ್ಲ ಕೊಯಿವಲೆ ಜೆನವೋ ಉಮ್ಮಪ್ಪ ಎಲ್ಲಿದ್ದು?. ಮದ್ದಿನ ಕೊಂಬಿನ ಹಾಂಗೆ ಊರಿಂಗೊಂದು ಆಸಾಮಿ ಇದ್ದರೆ; ಅದಕ್ಕೆ ಸಾವಿರ ದಮ್ಮಯ್ಯ-ದಕ್ಕಯ್ಯ ಹಾಕಿಯಪ್ಪಗ ಅದು ಬಂದರೂ ಅದಲ್ಲಿ ಸಿಕ್ಕುದು ಅದಕ್ಕೆ ಕೂಲಿ ಕೊಡ್ಳೇ ಸಾಲ!.ಹೀಂಗಿದ್ದ ಪರಿಸ್ಥಿತಿಲಿ ಕ್ರಯ ಏರಿತ್ಕಂಡ್ರೂ ಗುಣ ಇಲ್ಲೆ.ಗುಣ ಸಿಕ್ಕೆಕ್ಕಾರೆ ಕೂಲಿ ಆಳು ಸಿಕ್ಕೆಕ್ಕು.ಅವಕ್ಕೆ ಒಂದು ಹದಾಕೆ ಸಂಬಳ ಇರೆಕು.ಅಲ್ಲದ್ರೆ ಎನ್ನ ಹಾಂಗಿದ್ದವಕ್ಕೆ ಸ್ವಂತ ಮಾಡ್ಳೆ ಎಡಿಗಾರೆ ಆ ಗುಣ”. ಹತ್ರೆ ಕೂದಂಡಿದ್ದವಕ್ಕೆ ಮಾಂತ್ರಕೇಳ್ತ ಹಾಂಗೆ ಹೇದೊಂಡವು. ಆ ಮಾತಿಂಗೆ ಅಲ್ಲಿದ್ದ ಚಙಾಯಿಗಳೂ ಒಪ್ಪಿಗೆಲಿ ಅಪ್ಪು ಅಪ್ಪಚ್ಚಿ ಹೇದೊವು. ಇದೀಗಾಣ ಸಣ್ಣ,ಸಣ್ಣ ಹಿಡುವಳಿದಾರರು ಜೀವನಲ್ಲಿ ಎದುರುಸೆಕ್ಕಾದ ಪರಿಸ್ಥಿತಿ!. ಎಷ್ಟು ನೀರಿದ್ದಲಿಂಗೆ ಹೋದರೂ ಪಾಪಿಗೆ ಮೊಳಕ್ಕಾಲು ನೀರೇ ದಕ್ಕುಗಷ್ಟೆ ಹೇದೊಂದು ಮಾತು.
ಹೆಮ್ಮಕ್ಕಳ ಸಭೆಲಿ ಮಾತಾಡ್ತಿಪ್ಪ ಆಚಮನೆ ಅತ್ತೆ “ಅದೆಷ್ಟೊ ಸಮಯಂದ ಸ್ಟೋರಿಂಗೆ ಬೆಣ್ತೆಕ್ಕಿಯೇ ಬಯಿಂದಿಲ್ಲೆ ಮಿನಿಯ!.ಅಂಗಡಿಂದ ಹೆಚ್ಚು ಕ್ರಯಕೊಟ್ಟು ತಂದದೇ ಉಳ್ಳೊ!.ನಿನ್ನೆ ಕೆಲಸದ ಲಚ್ಚಿಮಿ ಹೇಳಿತ್ತು “ಬೊಳಂತೆ ಅರಿ ಬತ್ತಿಂಡಕ್ಕ”. ಸರಿ ಮಾಣಿಯ ಕಳ್ಸಿದೆ . ಅವ ಹೋದವ ಅಲ್ಲಿಂದಲೇ ಫೋನು ಮಾಡ್ತಂ “ಬೆಣ್ತೆಕ್ಕಿ ಈಗಷ್ಟೇ ಮುಗುದತ್ತಾಡ ಇನ್ನು ಬೇಕಾರೆ ಕುಚ್ಚಿಲು” ಹೇದು. ಹ್ಞುಂ.. “ಪಾಪಿ ಹೋದಲ್ಲಿ ಮೊಳಕ್ಕಾಲು ನೀರು ಹೇಳ್ಸಿದಕ್ಕಿದ”!. ನಿರಾಶೆಂದ ಞವುಂಡಿತ್ತದು.
ಕೃಷಿಭವನಲ್ಲಿ ತೆಂಗು,ಕಂಗಿಂಗೆ ಈಟಿನ ಹೊಡಿ ಸಿಕ್ಕೆಕ್ಕಾರೆ ಮಳೆಕಾಲ ಸುರುವಿಲ್ಲಿ ಅರ್ಜಿ ಹಾಕೆಕ್ಕೂದು ಆರೋ ಹೇದೊವು. ಹಾಂಗೆ ಬೇಗ ಅರ್ಜಿ ಹಾಕಿಯೂ ಆತು.ಅದು ಪಾಸಾಗಿ ಕೊಡ್ತದು ಏವಗಳೊ? ಕೇಳೆಂಡೇ ಇದ್ದಿದ್ದೆ. ಓ ಮನ್ನೆ ಆರೋ ಹೇದೊವು “ಕೊಡ್ಳೆ ಸುರುಮಾಡಿದ್ದವಾಡ” ಹಾಂಗೆ ಹೋದೆ. ಅಲ್ಲಿಗೆತ್ತಿಯಪ್ಪಗ “ಈಗ ಬಂದ ’ಕೋಟ’ ಮುಗಿಯಿತು ” ಹೇಳೆಕ್ಕೋ!!.ಅಂತೂ ಪಾಪಿ ಹೋದಲ್ಲಿ ಮೊಳಕ್ಕಾಲು ನೀರು ಹೇದೊಂಡು ಬಂದೆ. ಹೀಂಗೆ ನಮ್ಮ ಸರದಿಗಪ್ಪಗ ತತ್ವಾರಪ್ಪದು!. ಜೀವನಲ್ಲಿ ಬಂದೊಂಡೇ ಇರ್ತಲ್ಲೊ ಎಂತ ಹೇಳ್ತಿ?.
ಶರ್ಮಭಾವ ಹೇಳಿದ್ದಪ್ಪು .ಒಂದೊಂದು ಬರದ ಹಾಂಗೆ ಮತ್ತೊಂದು ಸಿಕ್ಕುತ್ತದ . ಗೋಪಾಲ ಹೇಳಿದಾಂಗೆ ನೆಂಪಾದಾಂಗೆ ಬರವೊಂ . ತೆಕ್ಕುಂಜೆ ಕುಮಾರ ಹೇಳಿದಾಂಗೆ ಪತ್ತಾಯ ತುಂಬುಸಲೆಡಿಯದ್ರೂ ‘ಪರೆ’ ತುಂಬುಸಲೆಡಿತ್ತೊ ನೋಡುವೊಂ.
ಶರ್ಮಭಾವ ಭಾರಿ ಅಪರೂಪ .ಒಳ್ಳೆ ಸಂತೋಷಾತು. ತೆಕ್ಕುಂಜೆ ಕುಮಾರನ ಪ್ರೋತ್ಸಾಹಕ್ಕೆ ಕುಷಿ ಆತು. ಒಪ್ಪಕೊಟ್ಟ ಎಲ್ಲೊರಿಂಗೂ ಧನ್ಯವಾದಂಗೊ
ಅಪ್ಪಪ್ಪು, ಒಂದೊಂದೇ ಬಂದುಗೊಂಡಿರಲಿ, ನಮ್ಮ ಪತ್ತಾಯ ತುಂಬಲಿ.
ಅಪ್ಪು. ನುಡಿಗಟ್ಟುಗಳ ಭಂಡಾರವೇ ಇದ್ದು ನಮ್ಮ ಭಾಷೇಲಿ. ಚಿಕ್ಕಮ್ಮ ಒಂದೊಂದಾಗಿ ಅದರ ಬೀಗ ಮುದ್ರೆ ತೆಗೆದು ತೋರಿಸುತ್ತಾ ಇದ್ದವು .ಹೀಂಗೆ ನಡೆತ್ತಾ ಇರಲಿ .
ಒಳ್ಳೆ ನುಡಿಗಟ್ಟು. ಎಲ್ಲರ ಅನುಭವಕ್ಕೆ ಬಪ್ಪಂತಹ ಸಂದರ್ಭವ ನುಡಿಗಟ್ಟಿಲ್ಲಿ ಚೆಂದಕೆ ವಿವರಿಸಿದ್ದು ಲಾಯಿಕ ಆಯಿದು.
ಲೇಖನಲ್ಲಿ ಇನ್ನೊಂದು ನುಡಿಗಟ್ಟು ಕಂಡತ್ತದ “ಮದ್ದಿನ ಕೊಂಬಿನ ಹಾಂಗೆ ಊರಿಂಗೊಂದು ಆಸಾಮಿ”
ಈ ಸರ್ತಿ ಕಡು ಬೇಸಗೆಲಿ ಮಳೆ ಬಂದು ಬೆಂಗಳೂರಿನ ಮಾರ್ಗಂಗಳಲ್ಲಿ ಮೊಳಕಾಲು ನೀರು .. ಪಾಪಿಗಳೇ ತುಂಬಿ ಹೋದ್ದದೊ ಹೇಳಿ ಒಂದು ಸಂಶಯ ..
ಒಳ್ಳೆ ನುಡಿಗಟ್ಟು ಅತ್ತೆ .
ಹರೇ ರಾಮ. ಚೆನ್ನೈಭಾವಂಗು ಬೊಳುಂಬು ಗೋಪಾಲಂಗು.
ಬೊಳುಂಬು ಮಾವನ ಒಪ್ಪಕ್ಕೆ ಎನ್ನದೊಂದು ಹೆಬ್ಬೆಟ್ಟು
(ಅಂಬಗ ಬರವಲೆ ಅರಡಿತ್ತಿಲ್ಯೋ ಕೇಳೆಡಿ… ಹಳತ್ತರ ಮರವಲಾಗ ಅಲ್ಲದ!. ಅದಕ್ಕೆ)
ವಿಜಯತ್ತೆಯ ಈ ವರಸೆ ಇನ್ನೂ ಇನ್ನೂ ಬಂದೊಂಡಿರಲಿ
ಪ್ರತಿಯೊಂದು ನುಡಿಗಟ್ಟಿಲ್ಲಿಯುದೆ ಎಷ್ಟೊಂದು ಅರ್ಥ ಅಡಗಿದ್ದು, ವಿಜಯಕ್ಕನ ಶ್ರಮ ಸಾರ್ಥಕ.