- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ”-(ಹವ್ಯಕ ನುಡಿಗಟ್ಟು-101)
ಇದೆಂತಪ್ಪ ಮನೆಂದ ದೊಡ್ಡ ಮೆಟ್ಟುಕಲ್ಲು!.ಹೀಂಗೆ ಆರಾರು ಮಾಡ್ಳಿದ್ದೊ?. ಎಲ್ಲೋರಿಂಗು ಕಾಂಬ ಮಾತಪ್ಪದು. ಎಂತ ವಿಷಯಕ್ಕೀ ಮಾತು, ನೋಡುವೊᵒ.
ಹವ್ಯಕರಲ್ಲಿ ನೆಂಟಸ್ತಿಕೆ ಮಾಡುವಗ ಹೆಚ್ಚಾಗಿ, ಕೂಸಿನ ಕೊಡುವಗ ತಮ್ಮಿಂದ ಧನಿಕರಿಂಗೂ ಕೂಸಿನ ತಪ್ಪಗ ತಮ್ಮಿಂದ ರಜ ಬಡವರನ್ನೇ ಆಯ್ಕೆ ಮಾಡುವದು ಹಿಂದಾಣ ಪದ್ಧತಿ. (ಈಗೀಗ ಇದರ ಪಾಲುಸುತ್ತೊವಿಲ್ಲೆ ಹೇಳುವೊᵒ).
ಒಬ್ಬ ಬಡ, ಭಾವᵒ; ಅವನ ಮಗಂಗೆ ಕೂಸು ಹುಡುಕ್ಕುದು ಮೂರ್ನಾಲ್ಕು ವರ್ಷಾತು. ಅವನ ಮಗᵒ, ಆರಂಕಿಗೆ ಹತ್ತರತ್ತರೆ ಸಂಬಳದ ಇಂಜಿನಿಯರೆ. ಇದರೆಡೆಲಿ ಕಾಂಬಲೆ ಸಿಕ್ಕಿಪ್ಪಗ ಅವನ ಪೇಚಾಟ ಹೇಳಿಗೊಂಡᵒ.
ಏವದಾರೂ ಒಳ್ಳೆ ಅನುಕೂಲ ಇಪ್ಪ ಕುಳವಾರು ಹೇಳಿತ್ಕಂಡ್ರೆ , “ಆ ಕುಳವಾರು ನವಗೆ ದೊಡ್ಡಾತು.ಪ್ರಾಯಲ್ಲಿ ಅಲ್ಲ!. ಬಗೆ ಬದುಕ್ಕಿಲ್ಲಿ!!. “ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ” ನಮ್ಮಾಂಗೆ ಇದ್ದವು ಅಥವಾ ರಜ ಬಡವರಾದರೂ ಚಿಂತೆಯಿಲ್ಲೆ; ಹೇಳುದು ಅವನ ವಾದ.
ಈ ಮಾತಿನ ಹೀಂಗೂ ಬಳಸಿಗೊಳ್ತವು. ಆದಾಯ ಬತ್ತ ಆಸ್ತಿ ಸಣ್ಣದಾಗಿ ಮನೆ ದೊಡಾ..>.ಬಂಗ್ಲೆ ಹಾಂಗೆ ಕಟ್ಟೀರೂ “ಮನೆ ಅಶನ ಕೊಡ, ಆದಾಯ ನೋಡೆಂಡೆ ಮನೆ ಕಟ್ಟೆಕ್ಕು, ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ” ಹೇಳುಗು.
———-೦———
ತಲೆಂದ ದೊಡ್ಡ ಮುಂಡಾಸು ಅಪ್ಪಲಾಗ ಅಲ್ಲದೊ ವಿಜಯಕ್ಕ. ನುಡಿಗಟ್ಟ್ಟು ಅರ್ಥವತ್ತಾಗಿದ್ದು.
ಹಾಂ…ಬೊಳುಂಬು ಗೋಪಾಲನ ಈ ಉಪಮೆ ಇದಕ್ಕೆ ಹೊಂದುತ್ತು. ಧನ್ಯವಾದ.
ನಮ್ಮ ಆದಾಯಕ್ಕೆ ತಕ್ಕ ಹಾಂಗೆ ನಾವು ಖರ್ಚು ಮಾಡೆಕ್ಕು
ಆದಾಯ ಕಮ್ಮಿ ಇಪ್ಪವು ಅದಕ್ಕಿಂತ ,ಆಡಂಬರ ಜೀವನ ಮಾಡಿರೆ ಹಿರಿಯರು ಹೇಳುವ ಹಿತವಚನವಾ ಇದು?ಆನು ಹಾಂಗೆ ಗ್ರೇಶಿದ್ದು.
ಪ್ರಸನ್ನಾ, ಆದಾಯಕ್ಕೆ ತಕ್ಕಂತೆ ಖರ್ಚು ಮಾಡುದಕ್ಕೆ “ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು” ಹೇಳ್ತವು ಇದರ ಬಳಸುತ್ತವೋ ಗೊಂತಿಲ್ಲೆ.
ನೂರೊಂದು ನೆನಪಿನ ನುಡಿಗಟ್ಟು ಓದಿಪ್ಪಗ ,
ನಾವಗೆ ಕಾಡಿದ ಮೊಟ್ಟ ಮೊದಲಾಣ
ಪ್ರಶ್ನೆ ,,,,ಹವ್ಯಕಲ್ಲಿ ,
ಹಿ೦ಗೇಲ್ಲಾ ಉಂಟೇ !!!!!!!!,
ಭಾವ ?
ಹವ್ಯಕಲ್ಲಿ ಹಿಂಗಿದ್ದ ಗಾದೆ ಇದ್ದನ್ನೇ ಭಾವಾ .
ಆನು ಹೊಸ ಗಾದೆ ಹೇಳಿದ್ದು ವಿಜಯಕ್ಕ.
ಹಂಚಿದವಂಗೆ ಕೊಚ್ಚಲು ಹೇದು ಒಂದು ಗಾದೆ ಕೇಟ ಹಾಂಗೆ iddu ವಿಜಯಕ್ಕ.
ಹಂಚಿದವಂಗೆ ಕೊಚ್ಚಲು ಹೇಳಿ ಇದ್ದು. ಆದರೆ ಅದು ಇದಕ್ಕೆ ಸಮ ಅಲ್ಲ ಶಿವರಾಮಣ್ಣ.