Oppanna.com

“ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58}

ಬರದೋರು :   ವಿಜಯತ್ತೆ    on   26/06/2016    6 ಒಪ್ಪಂಗೊ

-“ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58}

ಮದಲಿಂಗೆ ಇಂದ್ರಾಣ ದಿನದಾಂಗಲ್ಲ . ಒಂದು ಮನೆಲಿ ತುಂಬ ಜೆನ ಇಕ್ಕು. ಅಬ್ಬೆ-ಅಪ್ಪಂಗೆ ಈಗಾಣ ಕಾಲದ ಹಾಂಗೆ ಒಂದೋ ಎರಡೋ ಮಕ್ಕೊ ಅಲ್ಲ!. ಮನೆ ಹೆಮ್ಮಕ್ಕೊಗೆ ಮನೆಕೆಲಸ ಸುಲಭ ಅಲ್ಲ.ಪೈಪಿನ ನೀರಿರ. ಗ್ಯಾಸ್ ಇರ.. ಕಡವಲೆ, ಹೊಡಿಮಾಡ್ಳೆ ಮಿಶನಿರ.ದನಗಳ ಹಟ್ಟಿಕೆಲಸ ಇಕ್ಕು.ಊಟ-ಚಾಯಕ್ಕೆ ಆಳುಗೊ ಇಕ್ಕು.

ಆನು ಸಣ್ಣಾದಿಪ್ಪಗ ಶಾಲಗೆ ಹೋಗೆಂಡಿಪ್ಪಗಣ ಮಾತು.ಮಳೆಗಾಲದ ಗೆದ್ದೆ ಬೇಸಾಯದ ಸಮಯ. ಮದ್ಯಾಹ್ನ ಒಂದು ಗಂಟೆಪ್ಪಗ; ಹೂಡುತ್ತ ಆಳು, ನೇಜಿ ಹೆಣ್ಣುಗೊ ಎಲ್ಲ ಒಟ್ಟಿಂಗೆ ಉಂಬಲೆ ಬಂದವು. ಎನ್ನಬ್ಬಗೆ ಅಡಿಗೆ ಪೂರ ಆಯಿದಿಲ್ಲೆ. ಅಪ್ಪನೂ ಮಿಂದಿಕ್ಕಿ ಬಂದು, “ಆಳುಗೊಕ್ಕೆ ಬಡುಸಿಕ್ಕಿ  ಎನ ಬಡುಸು” ಹೇಳಿಂಡು ಒಳ ಬಂದು ನೋಡಿರೆ, ಬೆಂದಿ ಕೊದಿಯೆಕ್ಕಷ್ಟೆ,ಒಗ್ಗರಣೆ ಹಾಕೆಕ್ಕಷ್ಟೇದು ಕಂಡಪ್ಪಗ . “ಇದೆಂತದು!.ಹೊತ್ತುತ್ತ ಮನಗೆ ತೋಡುತ್ತ ಬಾವಿ, ಹಾಂಗಾತನ್ನೆ”.ಹೇಳಿಗೊಂಡವು. ಎನಗೆ ಅದರ ಅರ್ಥ ಸಿಕ್ಕಿದ್ದಿಲ್ಲೆ. ಆಳುಗೊಕ್ಕೆ ಹೆರಮಡಗಿಕ್ಕಿ, ಅಪ್ಪಂಗೆ, ಮಕ್ಕೊಗೆ, ಎಲ್ಲೋರಿಂಗು ಉಂಡಾದ ಮತ್ತೆ , ಅಪ್ಪಂ   ರಜ್ಜ ಹೊತ್ತು ಮನುಗಿಕ್ಕಿ ಎದ್ದು; “ಒಂದು ಗ್ಲಾಸು ಚಾಯ ಮಾಡಿಕೊಂಡ ಮೋಳೆ”   ಹೇಳಿದವು. ಚಾಯ, ಕಾಪಿ, ಮಾಡ್ಳೆ ಸಣ್ಣದಿಪ್ಪಗಳೇ ಶಾಲಗೆ  ರಜೆ ಆದರೆ ಕೂಸುಗಳತ್ರೇ  ಹೇಳುಗು  .ಚಾಯ ತಂದುಕೊಟ್ಟಿಕ್ಕಿ ಆನುಕೇಳಿದೆ.

“ಎಂತಕೆ ನಿಂಗೊ  ’ಹೊತ್ತುತ್ತ ಮನಗೆ ತೋಡುತ್ತ ಬಾವಿ’ ಹೇಳಿದ್ದು” ಕೇಳಿದೆ.

“ಅದುವೋ .. ಒಂದು ಮನಗೆ ಕಿಚ್ಚು ಹಿಡುದರೆ ಅದಕ್ಕೆ ಅಂಬಗಳೇ ನೀರೆರದು ನನುಸೆಕ್ಕೋ ಅಲ್ಲಾ ಸುಮಾರು ಹೊತ್ತ ನೋಡೆಂಡು ಮತ್ತೋ?”.

“ಅಂಬಗಳೇ ಆಯೆಕ್ಕು” ಹೇಳಿದೆ.

“ ಹಾಂ..,ಅದೇ ಅರ್ಥಯಿದ. ಹಶುವಾಗಿ ಹೊಟ್ಟೆ ಕರಂಚುವಗ ಊಟ ಸಿಕ್ಕದ್ರೂ ಹಾಂಗೆ. ಅದದು ಹೊತ್ತಿಂಗೆ ಆಯೆಕ್ಕಾದ ಕೆಲಸ ಆಗದ್ದೆ  ಜಾಂಕೆಂಡು ಕೂರುತ್ತ ವಿಷಯಕ್ಕೆ  ಹೇಳುಸ್ಸು”.ಹೇಳಿದೊವು.

ಸಣ್ಣದಿಪ್ಪಗಣ ಹೀಂಗಿದ್ದ ಪ್ರಸಂಗ ಒಂದೊಂದು ನೆಂಪಾವುತ್ತು.

———೦——-

 

 

6 thoughts on ““ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58}

  1. ಅರ್ಥಗರ್ಭಿತ ನುಡಿಗಟ್ಟು, ಧನ್ಯವಾದಂಗೊ ವಿಜಯತ್ತಿಗೆಗೆ

  2. ಒಳ್ಳೆದಿದ್ದು.ಸಂಸ್ಕೃತಲೂ ಇದಿದ್ದು

  3. ಸಮಯಕ್ಕೆ ಬೇಕಪ್ಪಗ ಸಿಕ್ಕದ್ದದು ಪ್ರಯೋಜನ ಇಲ್ಲೆ . ಒಳ್ಳೆ ನುಡಿಗಟ್ಟು ಅಕ್ಕ. ಮನಗೆ ಬೆಂಕಿ ಬಿದ್ದಪ್ಪಗ ಬಾವಿ ತೋಡಿದ ಹಾಂಗೆ ಆತು.
    .. ಬಪ್ಪಲಪ್ಪಗ ಹಿತ್ತಿಲು ಹುಡುಕ್ಕಿದ ಹಾಂಗಾತು. ಹೀಂಗಿಪ್ಪ ಕೆಲವು ಗಾದೆಮಾತುಗೊ ಇದಕ್ಕೆ ಹೊಂದುತ್ತು.

  4. ಈ ಗಾದೆಮಾತಿನ ಅರ್ಥ ಹಿಂಗೂ ಇದ್ದಲ್ದಾ ವಿಜಯಕ್ಕಾ, ಸಮಯಕ್ಕಪ್ಪಗ ಹೆರಟ್ರೆ ಯಾವ ಕೆಲಸವೂ ಪ್ರಯೋಜನಕ್ಕೆ ಬಾರ. ಯುದ್ದ ಕಣ್ಣ ಮುಂದೆ ಇಪ್ಪಾಗ ಶಸ್ತ್ರಾಭ್ಯಾಸ ಮಾಡಿದ ಹಾಂಗೆ…. ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×