- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
೨೦೧೮ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ
ಕುಂಬಳೆ- ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾಮಂಡಲ ಸಹಯೋಗಲ್ಲಿ ಪ್ರತಿವರ್ಷ ಅಖಿಲಭಾರತ ಮಟ್ಟಲ್ಲಿ ನಡದುಬಪ್ಪ ಕೊಡಗಿನಗೌರಮ್ಮಕಥಾಸ್ಪರ್ಧೆ ಇವಾರಿಯೂ ಸಾಗಿಬಂದು ಅದರ ಫಲಿತಾಂಶ ನಮ್ಮ ಬಯಲಿಂಗೆ ಹಾಕ್ತಾ ಇದ್ದೆ.
ಪ್ರಥಮ- ಶ್ರೀಮತಿ ಅಕ್ಷತಾ ರವಿರಾಜ್ ಪೆರ್ಲ, ಇವರ ’’ಕಾಸಿನಸರ” ಕಥೆಗೆ ಈ ಪ್ರಶಸ್ತಿ ಸಿಕ್ಕಿದ್ದು.( ಪ್ರಶಸ್ತಿ ಹೇಳುದು ಪ್ರಥಮ ಬಹುಮಾನವ, ಎರಡ್ನೇ ಮೂರನೇ ಬಹುಮಾನಂಗೊ ಪ್ರಶಸ್ತಿ ಅಲ್ಲ. ಇವಕ್ಕೆ ಇನ್ನು ಮುಂದೆ ಈ ವೇದಿಕೆಲಿ ಭಾಗವಹಿಸಲೆ ಅವಕಾಶ ಇದ್ದು.) ಪೆರ್ಲದ ಕಯ್ಯಂಕೂಡೆಲು ಶ್ರೀಯುತ ಗಣರಾಜ ಭಟ್ಟರ ಹೆಂಡತಿಯಾದ ಇವು ’ಅಕ್ಷರ’ ಹೇಳುವ ಕಾವ್ಯ ನಾಮಂದ ಗುರುತಿಸಿಗೊಂಡು ಬರೆವದಲ್ಲದ್ದೆ ವಿವಿದೆಡೆ ಸಾಹಿತ್ಯಗೋಷ್ಟಿಯ ಅತಿಥಿಯಾಗಿಯೂ ಭಾಗವಹಿಸಿದ ಅಕ್ಷತಂಗೆ ಎರಡು ವರ್ಷ ಹಿಂದೆ ಇದೇ ವೇದಿಕೆಲಿ ದ್ವಿತೀಯ ಬಹುಮಾನ ಸಿಕ್ಕಿದ್ದು.ತುಳು ಸಾಹಿತ್ಯ ಪ್ರಶಸ್ತಿಯೂ ಬಂದ ಅಕ್ಷತಾ ಇತ್ತೀಚೆಗೆ ಮಂಗಳೂರು ಆಕಾಶವಾಣಿಯ ನಿರ್ಮಾಣ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿಪ್ಪ ಇವರ ’ಕಂದೀಲು’ ಸಣ್ಣಕತಾ ಸಂಕಲನ ಬಿಡುಗಡೆಗೊಂಡಿದು.replica watches UK
ದ್ವಿತೀಯ-ಶ್ರೀಮತಿ ಅನ್ನಪೂರ್ಣ ಬೆಜಪ್ಪೆಯವರ ’ಒಲವಿನ ಬಂಧ’ ಕತೆ ಎರಡ್ನೇ ಬಹುಮಾನ ಗೆದ್ದಿದು.ಪ್ರಸಿದ್ಧ ಜ್ಯೋತಿಷಿ ಕಿದೂರು ಬೆಜಪ್ಪೆ ಶ್ರೀಯುತ ಚಂದ್ರಶೇಖರವರ ಪತ್ನಿಯಾಗಿ ಗೃಹಿಣಿಯಾದ ಅನ್ನಪೂರ್ಣ ಎರಡು ವರ್ಷಂದ ಸಾಹಿತ್ಯ ಕ್ಷೇತ್ರಲ್ಲಿ ಕಾಲೂರಿ ಹಲವಾರು ಕವನ,ಲೇಖನ,ಮಿನಿಕತೆಗಳ ಪತ್ರಿಕೆಗಳಲ್ಲೂ ಸಾಮಾಜಿಕ ಜಾಲತಾಣಲ್ಲಿಯೂ ನಮ್ಮ ಒಪ್ಪಣ್ಣ ಬಯಲಿಲ್ಲಿಯೂ ಬರದು ಓದುಗರಿಂಗೆ ಪರಿಚಯಾದ ಹೊಸ ಲೇಖಕಿ.
ತೃತೀಯ-ಶ್ರೀಮತಿ ಮನೋರಮ ಬಿ.ಎನ್. ಬರದ ’ಶಾರದೆಶಾಪ’ ಕತಗೆ ಮೂರ್ನೇ ಬಹುಮಾನ ಬಯಿಂದು.ಲೇಖಕಿಯೂ ವೃತ್ತಿಲಿ ಕಲಾಸಂಶೋಧಕಿಯೂ ನೂಪುರಭ್ರಮರಿ ಪತ್ರಿಕೆ ಸಂಪಾದಕಿಯೂ ಆದ ಇವು ಸಾಹಿತ್ಯಕ್ಷೇತ್ರಲ್ಲಿ ಪುಸ್ತಕವನ್ನೂ ಬರದ್ದವು.
ತೀರ್ಪುಗಾರರಾಗಿ ಸಹಕರಿಸಿದೊವುಃ-ಪ್ರಸಿದ್ಧ ಸಾಹಿತಿ ನಿವೃತ್ತ ಅಧ್ಯಾಪಕರೂ ಆದ ನವಗೆ ಪರಿಚಯದ ಶ್ರೀಯುತ ಬಾಲಮಧುರಕಾನನ, ಹಾಂಗೇ ಕಲ್ಲಕಟ್ಟ ಶಾಲೆಯ ಹೆಡ್ ಮಾಸ್ಟ್ರು ಶ್ರೀ ಶ್ಯಾಮಪ್ರಸಾದ ಕುಳಮರ್ವ, ಇನ್ನೊಬ್ಬರು ಕನ್ನಡಸಾಹಿತ್ಯಪರಿಷತ್ತು ಕಾಸರಗೋಡು ಜಿಲ್ಲೆಯ ಅಧ್ಯಕ್ಷರಾದ ಎಸ್.ವಿ.ಭಟ್.ಕಾಸರಗೋಡು.
ವಿಜೇತರಿಂಗೆ ಅಭಿನಂದನೆ ಹೇಳ್ತಾ ತೀರ್ಪುಗಾರರಿಂಗೆ ಧನ್ಯವಾದ ಹೇಳ್ತಾ …
ಕತಾಸ್ಪರ್ಧೆಯ ಸಂಚಾಲಕಿ , ವಿಜಯಾಸುಬ್ರಹ್ಮಣ್ಯ,ಕುಂಬಳೆ.
—-೦—-