Oppanna.com

“ಹೊಸ ಬೇಸಾಯ” – (ಹಾಸ್ಯ ರೂಪಕ)

ಬರದೋರು :   ವಿಜಯತ್ತೆ    on   29/04/2015    14 ಒಪ್ಪಂಗೊ

ಪಾತ್ರ ವರ್ಗ-3 ಜೆನ.

1. ಪಾತತ್ತೆ-(ಪಾರ್ವತಿ)
2. ಪರಮತ್ತೆ-(ಪರಮೇಶ್ವರಿ) — ಇವಿಬ್ರೂ ಎರಟೆಕುಟ್ಟಿ (ಅವಳಿ) ಹೆಮ್ಮಕ್ಕೊ, ಅರುವತ್ತೈದೊರುಷ ದಾಂಟಿದೊವು.
3. ಪವಿತ್ರ-(ಮೇಲೆ ಉಲ್ಲೇಖಿಸಿದವರ ಸೋದರ ಸೊಸೆ)

ಸಂದರ್ಭ – ಪಾತತ್ತೆಯೂ ಪರಮತ್ತೆಯುದೆ ಅವರ ಅಪ್ಪನ ತಿಥಿಗೆ,ಕುಂಬಳೆ ಕರಾವಳಿಸೀಮಗೆ ಬಂದೊವು.ಅವರ ಗೆಂಡನ ಮನೆ ಮೂಡ್ಳಾಗಿ ಪಂಜ ಸೀಮೆ.

ಇನ್ನು ಮುಂದೆ  ರೂಪಕ –

 

ಪವಿತ್ರ-  (ಇಬ್ರು ಅತ್ತೆಕ್ಕಳೂ ರಿಕ್ಷಲ್ಲಿ ಬಂದಿಳುದು ಕೆಳ ಜಾಲಿಂಗಿಳಿತ್ತಾ ಇಪ್ಪವರ ನೋಡಿ) ಓಹೋ..ಅತ್ತೆಕ್ಕೊ ಬಂದವಿದ! ಪಾತತ್ತೆ,ಪರಮತ್ತೆ ಇಬ್ರೂ ಬನ್ನಿ.ಅಬ್ಬಿಲಿ ಕಾಲು ತೊಳಕ್ಕೊಂಡೇ ಬತ್ತೀರೋ ಚೆಂಬಿಲ್ಲಿ ನೀರು ತಂದು ಕೊಡೆಕೋ?

ಪಾತತ್ತೆ- ಏನೂ ಬೇಡಬ್ಬೋ…, ಈ ಚೀಲವ ಒಳ ಮಡಗಿಕ್ಕು. (ಇಬ್ರೂ ಸೊಸೆ ಹತ್ರೆ ಕೈ ಚೀಲವ ಕೊಟ್ಟೊವು)

ಪವಿತ್ರ- ಅಕ್ಕತ್ತೇ, ಇದರಲ್ಲಿ..,ಸೊಸಗೆಂತಾರೂ ತಿಂಬಲಿದ್ದ ಕಟ್ಟ ಇಲ್ಲದ್ದಿರ. ಇತ್ತೆ ಕೊಡಿ. (ಕೊಶೀಲಿ ತೆಕ್ಕೊಂಡತ್ತು ಸೊಸೆ)

ಪರಮತ್ತೆ- ನೀನೇವಗ ಬಂದೆ ಮೋಳೆ? ಕೋಲೇಜಿಂಗೆ ರಜೆಯೊ?

ಪವಿತ್ರ-  ನಿನ್ನೆ ಬಂದೆ ಅತ್ತೇ. ಇನ್ನೊಂದು ಹತ್ತುದಿನ ರಜೆ.

ಪವಿತ್ರ-   ಅದ್ಸರಿ, ಹೆರ ಜೆಗಿಲಿಲೇ ನಿಂದೊಂಡು ಮಾತಾಡ್ತು ಬೇಡ, ಒಳ ಬನ್ನಿ.  ಅಬ್ಬೆ ಮೀವಲೆ ಬೆಶಿನೀರಕೊಟ್ಟಗ್ಗೆ ಹೋಯಿದು. ಅಪ್ಪ ಸಾಮಾನು ತಪ್ಪಲೆ ಪೇಟಗೆ ಹೋಯಿದೊವು.

ಹೇಳಿದ ಸೊಸೆ;  “ಅಬ್ಬೇ…,ನೋಡಿಲ್ಲಿ ಆರು ಬಂದದೂಳಿ!” ಇಲ್ಲಿಂದಲೇ ಅಬ್ಬೆಹತ್ರೆ ಹೇಳಿಕ್ಕಿ; ಕೂರಿ. ಕಞ್ಞ್ ಕೊಟ್ಟಗೆಲೇ ಕೂದೊಂಡು ಮಾತಾಡುವೊ°, ಮಾತಾಡಿಯೊಂಡೇ ನಿಂಗೊಗೆ ಒಂದೊಂದು ಗ್ಲಾಸು ಕಾಪಿ ಮಾಡಿಕೊಡ್ತೆ”. ಹೇದಪ್ಪಗ ಅತ್ತೆಕ್ಕೊ ಕೊಶಿ ಆಗಿ ಮೋರೆ-ಮೋರೆ ನೋಡಿಗೊಂಡವು.

ಪಾತತ್ತೆ-  ನೋಡು ಪರಮು, ನಮ್ಮ ಪವಿತ್ರ ಕೋಲೇಜಿಂಗೆ ಸೇರಿರೂ ಎಲ್ಲಾ ಕೂಸುಗಳ ಹಾಂಗೆ ಸೆಡವಿಲ್ಲೆ ಮಿನಿಯ. ಇಲ್ಲಿಯಾಣ ಹಳೆ ಭಾಷೆಯೇ ಮಾತಾಡ್ತಿದ. ಹೋದವಾರಿ ಬಂದಿಪ್ಪಗ  ಹಳೆ ಭಾಷೆ ಮಾತಾಡ್ತೆಂತಕೆ? ಹೇದು ನಮ್ಮತ್ರೆ ತನಿಕೆ ಮಾಡಿಯೊಂಡಿದ್ದ ಕೂಸಿಂಗೆ ಈಗ ಒಳ್ಳೆ ಬುದ್ಧಿ ಬಯಿಂದು! ಹೇಳಿದ ಅತ್ತೆ; ಒಂದು ಮುಚ್ಚಟೆ ನೋಟ ಸೊಸೆ ಹೊಡೆಂಗೆ ಬಂತು.

ಪರಮತ್ತೆ-  ಅಪ್ಪು ಪಾತು, ಆನಾಗಲೇ ಜಾನ್ಸಿದೆ. ಸೊಸೆ ಮಾತಾಡುವದೀಗ ನಮ್ಮ ಹೆರಿಯೊವು ಮಾತಾಡಿಯೊಂಡಿದ್ದ ಹಾಂಗೇದು!

ಪವಿತ್ರ- ನಮ್ಮ ಹೆರಿಭಾಷೆಯ ಈಗಾಣ ಜವ್ವನಿಗರೂ ಜವ್ವನ್ತಿಗಳೂ  ಒಳಿಶಿ-ಬೆಳೆಶೆಕ್ಕಾಡ  ಅತ್ತೇ.

ಅತ್ತೆಕ್ಕೊ ಇಬ್ರೂ -( ಒಳ್ಳೆ ಕೊಶಿಂದ) ಆರು ಹೇಳಿದ್ದು ಕೂಸೆ ಈ ಶುದ್ದಿ?!

ಪವಿತ್ರ-  ಆನು ಕಂಪ್ಯೂಟರಿಲ್ಲಿಪ್ಪ  ಒಪ್ಪಣ್ಣ ಬಯಲಿನೊವು ಹೇಳಿದ್ದರ ನೋಡಿದ್ದು. ನಮ್ಮೋರು ಆರೋ ಕೊಟ್ಟದತ್ತೇ.

ಪಾತತ್ತೆ-   ಕಂಪ್ಯೂಟರಿಲ್ಲಿ ಒಪ್ಪಣ್ಣ ಬಯಲೊ?! ಹಾಂಗೊಂದು ಬಯಲು ಕಂಪ್ಯೂಟರಿಲ್ಲಿದ್ದೋ?! ಮನೆಲಿ ಇತ್ತೀಚೆಗೆ ಕಂಪ್ಯೂಟರ್ ತಯಿಂದೊವು. ಮಕ್ಕೊ ಮೂರು ಹೊತ್ತೂ ಅದಲ್ಲೇ ಗುರುಟೆಂಡಿರ್ತವು. ಉಮ್ಮಪ್ಪ ಅದರಲ್ಲಿ ಎಂತೆಲ್ಲ ಇದ್ದೋ!

ಪವಿತ್ರ- ಕಂಪ್ಯೂಟರಿಲ್ಲಿ  ಒಪ್ಪಣ್ಣ ಬಯಲು ಹೇಳ್ತ ಲೋಕವೇ ಸೃಷ್ಟಿ ಆಯಿದೀಗ ಹೇಳ್ಳಕ್ಕು.

ಪಾತತ್ತೆ-  ಅತಳ, ಸುತಳ, ಪಾತಾಳ,  ಹೇಳಿ ಈರೇಳು ಲೋಕವ ಹೇಳುಗು ಮದಲಾಣೊವು. ಈಗ ಇನ್ನು  ಒಪ್ಪಣ್ಣ ಹೇಳ್ತ ಲೋಕವನ್ನೂ ಸೃಷ್ಟಿ ಮಾಡಿದ್ದೊವೊ?!

ಪವಿತ್ರ- ನಮ್ಮ ಎಳ್ಯಡ್ಕ ಮಹೇಶಣ್ಣನೊಟ್ಟಿಂಗೆ ಕೆಲಾವು ಜೆನ ಚಙಾಯಿಗೊ ಸೇರಿಗೊಂಡು ಸೃಷ್ಟಿ ಮಾಡಿದ್ದದಾಡ. ಆ ಸೆಟ್ಟಿಲ್ಲಿ ನಮ್ಮ ದೊಡ್ಡಭಾವ ಹೇದು ದೊಡ್ಡಮಾಣಿ ರವಿಯಣ್ಣನ ಗೊಂತಿದ್ದನ್ನೆ ಅವನೂ, ಶರ್ಮಪ್ಪಚ್ಚಿ, ಚೆನ್ನೈಭಾವ, ರಘುವಣ್ಣ ಮುಳಿಯ, ಕಾನಾವು ಶ್ರೀಯಕ್ಕ, ವಜ್ರಾಂಗಿಯಣ್ಣ, ಹೀಂಗಿದ್ದವೆಲ್ಲ ಇದ್ದೊವು. ಮಹೇಶಣ್ಣ ಅದರಲ್ಲಿ ‘ಒಪ್ಪಣ್ಣ’ ಹೇದು ಮುಕ್ರಿ! ವಾರಕ್ಕೊಂದು ಕೃಷಿ ಮಾಡ್ತ°. ನಾಲ್ಕೈದು ವರ್ಷಾತು ಸುರುವಾಗಿ. ಇದರಲ್ಲಿ ಕೃಷಿ ಮಾಡ್ಳೆ ತುಂಬಾ ಜೆನ ಸೇರಿ; ಅದೊಂದು ದೊಡಾ ಬಯಲಾಯಿದೀಗ. ವರ್ಷಕ್ಕೊಂದಾರಿ ನಮ್ಮ ಭಾಷೆಲಿ ಬರವ ಸ್ಪರ್ಧೆ ಮಾಡಿ ಪ್ರೈಸು ಕೊಡ್ತವು. ಅದಕ್ಕೆ ನಮ್ಮ ಭಾಷೆಲಿ, ನಮ್ಮ ಜೆನಂಗಳತ್ರೆ ಅಭಿಮಾನ ಇದ್ದವರ ಹೆರಾಣವರನ್ನೂ ಕರೆಸಿ ವೇದಿಕೆಲಿ ಕೂರ್ಸಿ ಈ ಬಗ್ಗೆ ಅವರ ಅಭಿಪ್ರಾಯ ಹೇಳ್ಳೆ ಅವಕಾಶ ಕೊಡ್ತವು. ಹೋದವಾರಿ  ಎಂ.ನಾ ಚಂಬಲ್ತಿಮಾರು ಅಣ್ಣನ ಕರೆಶೀರೆ; ಈವಾರಿ ಮನ್ನೆ ನೀರ್ಚಾಲಿಲ್ಲಾದ್ದಕ್ಕೆ ಬೆಳ್ಳಿಗೆ ನಾರಾಯಣ ಮಣಿಯಾಣಿಯವರ ಬಪ್ಪಲೆ ಮಾಡಿದ್ದೊವು. ಆನು ಹೋಯಿದೆ. ಆ ಮನುಷ್ಯ ಅದೆಷ್ಟು ಚೆಂದಕೆ ನಮ್ಮ ಭಾಷೆ ಮಾತಾಡಿದ್ದಲ್ಲದ್ದೆ; ನಮ್ಮವರ ಸಂಸ್ಕೃತಿ-ಸಂಸ್ಕಾರವನ್ನೂ ಹಿಂದೆ ಆಗಿಹೋದವರನ್ನೂ ಉದಾಹರಣೆಕೊಟ್ಟು ಲಾಯಿಕಲ್ಲಿ ಹೇಳಿಯಪ್ಪಗ ಅಲ್ಲಿದ್ದೊವೆಲ್ಲ ಜೋರು ಕೈಚಪ್ಪಾಳೆ ತಟ್ಟಿದ್ದೊವು! ಎಳ್ಯಡ್ಕ ಮಾಸ್ಟ್ರುಮಾವ ಅಷ್ಟು ಪ್ರಾಯ ಆದೊವುದೆ ಒಪ್ಪಣ್ಣ ಬಯಲು ಸೃಷ್ಟಿ ಆದಬಗ್ಗೆ, ಬೆಳವಣಿಗೆಯಾದ ಬಗ್ಗೆ ಒಂದರ್ಧ ಗಂಟೆ  ಚೊಕ್ಕಕೆ ಮಾತಾಡಿದ್ದೊವು!

ಪರಮತ್ತೆ- ಅಪ್ಪೊ!! ಆಶ್ಚರ್ಯ ಆವುತ್ತು. ಆ ಬಯಲಿಲ್ಲಿ ಎಂತೆಲ್ಲ ಮಾಡ್ಳಾವುತ್ತು ಕೂಸೆ?!

ಪವಿತ್ರ-   ನವ ಮನಸ್ಸಿಂಗೆ ತೋರಿದ; ನವಗೆ, ಊರಿಂಗೆ ಒಳ್ಳೆದಾವುತ್ತ ವಿಚಾರವ ಅಲ್ಲಿ ಕೃಷಿ ಮಾಡ್ಳಕ್ಕಾಡ.

ಪಾತತ್ತೆ ಪರಮತ್ತೆಃ-  (ಇಬ್ರೂ) ಆ ಲೋಕವ ನವ ನೋಡ್ಳೆಡಿಗಾ!? ಅಲ್ಲಿ ಹೋಗಿ ಬೇಸಾಯ ಮಾಡ್ಳೆಡಿಗಾ?

ಪವಿತ್ರ-  ನಾವು ನಮ್ಮ ಮನೆಲೇ ಕೂದಂಡು ನೋಡ್ತ ಲೋಕ ಅದು. ಅದರೊಳ ಹೋಗಿ, ವೈವಾಟು, ದೂರಲ್ಲಿಪ್ಪವರ ಮಾಂತ್ರವೊ!; ಹೆರ ದೇಶಲ್ಲಿಪ್ಪವರತ್ರೂ ಮಾತಾಡ್ಳಕ್ಕು. ಒಂದು ಮಟ್ಟಿಂಗೆ ಎಂತದೂ ಮಾಡ್ಳಕ್ಕಿದಾ!

ಪಾತತ್ತೆ-  ಮಾತಾಡ್ಸಾದರೂ ಮಣ್ಣಾಕಿತ್ತಾಡ. ಬೇಸಾಯವ ಇಲ್ಲೇ ಕೂದಂಡು ಮಾಡ್ಳೆಡಿಗಾರೆ ಈಗ ಕೆಲಸದಾಳುಗೊ ಸಿಕ್ಕದ್ದ ಬಙ ತಪ್ಪುಗಿದ.

ಪರಮತ್ತೆ-   ಅಪ್ಪು, ಅಪ್ಪು ಹೀಂಗೆಡಿಗಾರೆ ಅಕ್ಕಿ-ಬತ್ತಕ್ಕೆ ದರಿದ್ರ ತಪ್ಪುಗಲ್ಲೊ!?

ಪವಿತ್ರ-  ಹಃ…ಹಃ…ಹಃ…ಅದು ಹಾಂಗಲ್ಲ ಅತ್ತೆಕ್ಕಳೇ . ನಿಂಗೊ ಲೆಕ್ಕಹಾಕಿದಾಂಗಿರ್ಸಲ್ಲದು. ಭೂಮಿ ಕೈಗೆ ಸಿಕ್ಕುತ್ತಲ್ಲದು! ಉಂಡು ಹೊಟ್ಟೆ ತುಂಬ್ಸುದಲ್ಲದು. ಆದರೆ ಮಂಡೆ ತುಂಬುಸುದು. ಸಾಹಿತ್ಯ ಬೇಸಾಯ ಹೇದೊಂಡು  ಕಂಪ್ಯೂಟರಿಲ್ಲಿ ಮಾಡ್ತ ಹೊಸ ಬೇಸಾಯ! ನಿಂಗೊಗುದೆ ಇದರ ನೋಡ್ಳಕ್ಕು, ಕಲಿವಲಕ್ಕು. ಮಕ್ಕಳತ್ರೊ, ಪುಳ್ಳಿಯಕ್ಕಳತ್ರೊ ಹೇಳಿರೆ ಕಲುಶುಗು. ನಿಂಗಳ ಪ್ರಾಯದೋರೂ ಈಗ ಕಲಿವಲೆ ಹೆರಟಿದೊವು.

ನಿಂಗಳ ಹಾಡುಗಳ, ಜಾನಪದ ನುಡಿಗಳ, ಮದಲಾಣ ಕ್ರಮಂಗಳ, ಪೂಜೆ-ಪುನಸ್ಕಾರಕ್ಕೆ ಸಮ್ಮಂದ ಪಟ್ಟದರ, ಮಕ್ಕಳ ಸಾಂಕುವಕ್ರಮ, ನಿಂಗೊ ದನಗಳ ಸಾಂಕಿದ ರೀತಿ, ದನಗಳ ಮದ್ದುಗೊ, ಈಗಾಣ ಕೂಸುಗೊಕ್ಕೆ ಎಚ್ಚರಿಕೆ ಮಾತುಗೊ, ಎಲ್ಲವನ್ನೂ ಒಂದೊಂದೇ ನೆಂಪುಮಾಡಿ ಹಾಕ್ಸಿ. ನಿಂಗಳಿಂದಾಗಿ ಮುಂದಾಣವಕ್ಕದು ಸಿಕ್ಕಲಿ ಹೇಳ್ತ ಇರಾದೆ ಬಯಲಿನವರದ್ದು.

ಪಾತತ್ತೆ + ಪರಮತ್ತೆ –   ಒಹೋ ಹಾಂಗಿದ್ದವಾರುದೆ ನಮ್ಮ ಸಮೂಹಲ್ಲಿ ಬಂದವನ್ನೆ. ಈಗ ಎಲ್ಲಾ ಭಾಷೆಯವೂ ಅವರದೇ ಆದ ಭಾಷೆ, ಕ್ರಮ ಒಳುಶುತ್ತ ಮಟ್ಟಿಲ್ಲಿ ಸಾಧನೆ ಮಾಡ್ತವಾಡ! ನಾವು ಮಾಂತ್ರ ಹಿಂದೆ ಬಿದ್ದದು ಗ್ರೇಶೆಂಡಿದ್ದಿದ್ದೆ. ಇದೊಳ್ಳೆ ಕಾರ್ಯ. ಆ ಒಪ್ಪಣ್ಣನ  ನವ ಗೊಂತಿದ್ದು ಒಪ್ಪ ಮಾಣಿ. ಇನ್ನಾಣ ಬೇಸಾಯವ ಹೀಂಗೊಂದು ಆಲೋಚನೆ ಮಾಡೆಕ್ಕವ. ಒಂಧತ್ತು ಹೆಣ್ಣುಗಳ ಗೆದ್ದೆ, ತೋಟದ ಬೇಸಾಯಕ್ಕೆ ಒಪ್ಪಣ್ಣ ಬಯಲಿಂಗೆ  ಕರೆಶುಸಲೆ ಹೇಳೆಕ್ಕು. ಅವು ಚೂಡಿದಾರ ಹಾಕೆಂಡು ಎದಗೆ ಮೊಬೈಲು ಬಿಗುಕ್ಕೊಂಡು ಬಂದರೂ ಅಡ್ಡಿಲ್ಲೆ.

14 thoughts on ““ಹೊಸ ಬೇಸಾಯ” – (ಹಾಸ್ಯ ರೂಪಕ)

  1. ಇದೆಂತ ಹೊಸ ಬೇಸಾಯ ಹೇಳಿ ನೋಡ್ಲೆ ಹೆರಟರೆ, ಇದು ನಮ್ಮ ಬೈಲಿನ ಬೇಸಾಯವೇ ಹೇಳಿ ಗೊಂತಾಗಿ ಕೊಶೀ ಆತು. ಹೆಚ್ಚಿನ ಸಂಖ್ಯೆಲಿ ನಮ್ಮವು ಬಂದು ಇಲ್ಲಿ ಕೃಷಿ ಮಾಡಿ ಫಸಲು ಕೊಯ್ಯಲಿ, ಬೇರೆಯವಕ್ಕೂ ಹಂಚಲಿ

  2. ಬೊಳುಂಬು ಗೋಪಾಲ ,ನಿನ್ನ ಹಾಂಗಿದ್ದ ಸುಸಂಸ್ಕೃತಿಯ, ಉತ್ಸಾಹಿ ಜವ್ವನಿಗರು ಬಯಲಿಂಗೆ ದೊರಕ್ಕಿದ ಕಾರಣ ನಮ್ಮದು ಒಳುದು ಬೆಳಗ್ಗು. ಏವಸಂಶಯವೂ ಇಲ್ಲೆ. ಇಲ್ಲಿ ಆಯೆಕ್ಕಪ್ಪದು ಕೃಷಿ ಮಾಡುವಗ ಬೆನ್ನು ತಟ್ಟುವ ಕೆಲಸ. ಬರದಪ್ಪಗ ಒಪ್ಪ ಕೊಟ್ಟರೆ…ಇಷ್ಟು ಜೆನ ಓದಿದ್ದೊವು ಹೇಳ್ತ ಸಮಾಧಾನ ಆವುತ್ತು ಬರದವಕ್ಕೆ. ಎಂತ ಹೇಳ್ತೆ?.

  3. ಬೈಲಿನ ಕೃಷಿ ಬಗ್ಗೆ ಬೈಲಿಲ್ಲಿ ನಾಟಕ ಸೂಪರ್ ಆಯಿದು. ವಿಜಯಕ್ಕ ಬೈಲಿಲ್ಲಿಪ್ಪದು ತುಂಬಾ ಅಭಿಮಾನದ ಸಂಗತಿ. ಎಲ್ಲೋರು ಒಟ್ಟು ಸೇರಿ ಬೈಲಿನೊಳ ಕೃಷಿ ಮಾಡುವೊ. ಹವ್ಯಕ ಸಾಹಿತ್ಯ ಇನ್ನಷ್ಟು ಬೆಳೆಯಲಿ. ಶಾಲಗೆ/ಕಾಲೇಜಿಂಗೆ ಹೋಪ ಮಕ್ಕಳುದೆ ಕೈ ಜೋಡುಸಲಿ.

  4. ಆಹಾ …ವಿಜಯಕ್ಕಾ .

  5. ಲಾಯಿಕ ಆಯಿದು ಚಿಕ್ಕಮ್ಮ

  6. ಓದಿ ಒಪ್ಪಕೊಟ್ಟ ಪಾರ್ವತಿ,ತೆಕ್ಕುಂಜ ಕುಮಾರ,ರಘುಮುಳಿಯ,ಇಂದಿರತ್ತೆ,ಚೆನ್ನೈಭಾವ ಎಲ್ಲೋರಿಂಗೂ ಧನ್ಯವಾದಂಗೊ

  7. ನಮ್ಮ ಬೈಲಿನ ಅಭಿಮಾನದ ದ್ಯೋತಕ ವಿಜಯತ್ತೆಯ ಈ ರೂಪಕ. ಕೇವಲ ಓದುತ್ತಕ್ಕೆ ಮಾಂತ್ರ ಸೀಮಿತವಾಗಿರದೆ ಪ್ರಯೋಗ ಪ್ರಚಾರಕ್ಕೂ ಸೂಕ್ತವಾಗಿದ್ದು.

    ಬೈಲ ಹಡ್ಳು ಬಿಡ್ಳಾಗ, ನಮ್ಮ ಬೈಲು, ನಮ್ಮೋರು ಎಲ್ಲೋರು ನಮ್ಮ ಬೈಲಿಂಗೆ ಬರೆಕು ಬೆಳೆಶೆಕು ಹೇಳ್ತ ಸಂದೇಶವ ಕೊಡುವ ಈ ರೂಪಕ ಚಿಂತನೆಗೆ ವಿಜಯತ್ತೆಗೆ ಹರೇ ರಾಮ.

  8. ಒಪ್ಪಣ್ಣನ ಬೈಲನ್ನೂ , ಅವು ನಡೆಸಿಕೊಟ್ಟ ಕಾರ್ಯಕ್ರಮದ ಚೆಂದವನ್ನೂ ಮನಮುಟ್ಟುವಾಂಗೆ ಹೇಳಿದ ‘ಹೊಸಕ್ರಮ’ ಭಾರೀ ಲಾಯ್ಕಾಯಿದು ವಿಜಯತ್ತೆ …..

  9. ವಿಜಯತ್ತೆಯ ರೂಪಕ ನೋಡುಲೆ ಶುರು ಮಾಡಿಯಪ್ಪಗ ಅಂದಾಜಿ ಆದ್ದು .. ಓ.. ಇದು ನಮ್ಮ ಬೈಲಿನ ಕತೆ ಹೇಳಿ .. ಕೊಶಿಯಾತು . ಅತ್ತೆಯ ಮನಸ್ಸಿಂದ ಮೂಡಿದ ಈ ಒಪ್ಪ ಮಾತುಗೋ ಬೈಲಿನ ಎಲ್ಲಾ ಬಂಧುಗೊಕ್ಕೆ ಕೃಷಿಯ ಬೆಳೆಸುಲೆ ಸಹಕಾರಿ ಅಕ್ಕು .
    ಪ್ರಪಂಚದ ಭಾಷೆಗೋ ಅವನತಿಯ ದಾರಿಲಿ ಮುಂದುವರಿವ ಈ ಕಾಲಲ್ಲಿ ನಮ್ಮ ಭಾಷೆಯ ಒಳುಶಿ ಬೆಳೆಶೋದು ನಮ್ಮ ಎಲ್ಲೋರ ಕರ್ತವ್ಯವೂ ಅಪ್ಪು . ಒಪ್ಪಣ್ಣ ಮಾಡಿಕೊಟ್ಟ ಈ ದೊಡ್ಡ ಅವಕಾಶವ ಸರಿಯಾಗಿ ಬಳಸಿಗೊಂಬ .
    ಭಾಷೆ ಬೆಳದರೆ ಸಂಸ್ಕೃತಿಯೂ ಸಮೃದ್ಧ..

  10. ನಿಂಗಳ ಅಭಿಮಾನಕ್ಕೆ ನಮೋ ನಮಃ ವಿಜಯತ್ತೆ. ನಿಂಗಳಾಂಗಿರ್ತ ಹೆರಿಯೋರು ಬೈಲಿಂಗೆ ಇಳುದು ಕೃಶಿ ಮಾಡೊದು ಪವಿತ್ರನ ಹಾಂಗಿರ್ಸವಕ್ಕೆ ಸ್ಫೂರ್ತಿ ಆಗಲಿ ಹೇದು ಹಾರೈಸುತ್ತೆ

  11. ಬಹಳ ಲಾಯಿಕ ಆಯ್ದು ವಿಜಯಕ್ಕ ಸೂಪರ್ .ಧನ್ಯವಾದ೦ಗೊ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×