Oppanna.com

ಒಂದು ಪ್ರಕರಣದ ಸುತ್ತ -೯ :ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   16/07/2020    6 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೯ 

-ರಮ್ಯ ನೆಕ್ಕರೆಕಾಡು

“ದಾರಿದೀಪ” ಹೇಳಿ ಬರೆದ ದೊಡ್ಡ ಕಮಾನಿನ ದಾಂಟಿಕ್ಕಿ ಎಲ್ಲರೂ ಒಳ ಹೋದವು. ಇಕ್ಕೆಲಲ್ಲಿ ಗಾರ್ಡನ್, ಗಾರ್ಡನಿನ ಮಧ್ಯೆ ಇಪ್ಪ ದಾರಿ ಆಶ್ರಮದ ಕಟ್ಟಡಕ್ಕೆ ಹೋವ್ತು. ಗಾರ್ಡನಿಲಿಪ್ಪ ತರತರದ ಗುಲಾಬಿ, ಜೀನ್ಯ,ಡೇಲ್ಯ, ಎರವಂತಿಗೆ, ಕಿಸ್ಕಾರ, ಅಬ್ಬಂತಿಗೆ, ಮಲ್ಲಿಗೆ, ಬಟ್ಟಲು ಮಂದಾರ, ಲಂಬಾಸು,ಗೆಂಟಿಗೆ ಎಲ್ಲಾ ಹೋಪವರ ಸ್ವಾಗತಿಸಿದ ಹಾಂಗಿತ್ತು. ಕೆಲವರು ಅಲ್ಲಿ ನೀರು ಬಿಟ್ಟುಗೊಂಡು, ಹುಲ್ಲುತೆಗದು ಬುಡ ಒತ್ತಾರೆ ಮಾಡಿಗೊಂಡು ಒಂದೇ ಹಾಂಗೆಪ್ಪ ಅಂಗಿ ಹಾಕಿಗೊಂಡು ಇಪ್ಪದರ ಕಂಡಪ್ಪಗ ಅವು ದಾರಿದೀಪಲ್ಲಿ ಆಶ್ರಯ ತೆಕ್ಕೊಂಬವು ಹೇಳಿ ಗೊಂತಾಯ್ಕೊಂಡಿತ್ತು. ಆಫೀಸು ಕೋಣೆಗೆ ಎತ್ತುವಲ್ಯೊರೆಗುದೇ ಹೀಂಗೆ ಯುನಿಫಾರ್ಮ್ ಹಾಕಿದ ಸುಮಾರು ಜನ ಸಿಕ್ಕಿತ್ತಿದವು. ಅವರ ನೋಡಿಯಪ್ಪಗ ಗೆತಿ ಇಲ್ಲದ್ದವು ಹೇಳಿ ಆರೂ ಹೇಳವು!! ಸಂಸಾರ ತಾಪತ್ರಯದ ಬಲೆಲಿ ಸಿಕ್ಕಿಹಾಕಿಗೊಳ್ಳದ್ದೇ ಅವರದ್ದೇ ಹೊಸ ಬದುಕಿನ ಕಟ್ಟಿ ಆನಂದ ಸಾಗರಲ್ಲಿ ತೇಲಿಗೊಂಡಿದ್ದಾಂಗಿತ್ತಿದವು. ಇಷ್ಟೆಲ್ಲದರ ಮಧ್ಯೆ ಶಾಂತನ ಕಣ್ಣು ಮಾತ್ರ ಮಗಳ ಹುಡ್ಕಿಗೊಂಡಿದ್ದತ್ತು. ಆಫೀಸು ಕೋಣೆಯೊಳ ಹೋಗಿಯಪ್ಪಗ ಒಂದು ಹೆಣ್ಣು ಕಸವು ಉಡುಗಿಗೊಂಡಿತ್ತು. ಶರತ್ಚಂದ್ರ,” ಮೆನೇಜರ್ ಎಲ್ಲಿ..??” ಹೇಳಿ ಕೇಳಿದ. ಉಡುಗುವ ಭರಲ್ಲಿ ಆ ಹೆಂಗಸಿಗೆ ಇವು ಬಂದದೇ ಗೊಂತಾಗಿತ್ತಿಲ್ಲೆ.. ಶರತ್ಚಂದ್ರನ ಸ್ವರ ಕೇಳಿದ ಕೂಡ್ಲೇ ತಿರುಗಿ,” ಸಾರೀ…. ನಿಂಗ ಬಂದದು ಗೊಂತಾಯ್ದಿಲ್ಲೆ..” ಹೇಳಿ ಹಿಡ್ಸೂಡಿಯ ಬಾಗಿಲೆಡಕ್ಕಿಲಿ ಮಡುಗಿಕ್ಕಿ ಸೀದಾ ಹೋಗಿ ಮೆನೇಜರ್ ಸೀಟಿಲಿ ಹೋಗಿ ಕೂದತ್ತು. ಇಲ್ಲಿ ಎಲ್ಲರೂ ಒಂದೇ ಹೇಳುವಾಂಗೆ ಬರೆದ ದೊಡ್ಡ ದೊಡ್ಡ ಬೋರ್ಡು ಇಲ್ಲದ್ರುದೇ ಎಲ್ಲಾ ಅವರ ನಡವಳಿಕೆಯೇ ಹೇಳಿಗೊಂಡಿತ್ತು. ” ಇಷ್ಟೊಳ್ಳೆ ಜಾಗೆಲಿ ಇಪ್ಪ ಕಾರಣ ಅಂಜಲಿಗೆ ಮನೆಯ ನೆನಪಾದರೂ ಹೇಂಗೆ ಬಕ್ಕು..??” ಹೇಳಿ ಕೇಶವ ಮನಸ್ಸಿಲಿಯೇ ಗ್ರೇಶಿಗೊಂಡ. ಶರತ್ಚಂದ್ರ,” ಎಂಗೊಗೆ ಒಂದು ಇನ್ಫಾರ್ಮೇಷನ್ ಬೇಕಿತ್ತು… ಅಂಜಲಿ ಹೇಳ್ತ ಕೂಸು ಇಲ್ಲಿಗೆ ಬಂದು ಸೇರಿದ್ದಾ..??” ಹೇಳಿಗೊಂಡು ಅಂಜಲಿ ಕಾಣೆ ಆದ ತಾರೀಕಿನ ಪೂರಾ ಹೇಳಿದ. ಆ ಹೆಂಗಸು,” ಲೆಟ್ ಮೀ ಚೆಕ್ ಇಟ್..” ಹೇಳಿಕ್ಕಿ ಒಂದು ಪುಸ್ತಕವ ಕಪಾಟಿಂದ ತೆಕ್ಕೊಂಡು ಬಂತು. ಅದರ ಬಿಡ್ಸಿ ಒಂದು ಪುಟಲ್ಲಿ ಬೆರಳಿನ ಕೊಡಿಯ ಕೆಳಂಗೊರೆಗೆ ಎಳಕ್ಕೊಂಡು ಹೋದಪ್ಪಗ ಅಂಜಲಿ ಕಾಣೆ ಆದ ತಾರೀಕು ಎಂಟ್ರಿ ಆಗಿತ್ತು. ಅಲ್ಲಿ ಮಾತ್ರ ಯಾವುದೇ ಹೆಸರು ಇತ್ತಿಲ್ಲೆ. ಫಿಮೇಲ್ ಹೇಳಿ ಬರದ್ದು ಬಿಟ್ಟರೆ ಹೆಚ್ಚಿಗೆ ಎಂತ ವಿವರ ಇತ್ತಿಲ್ಲೆ. ಆ ಹೆಂಗಸು ಕೂಡ್ಲೇ ” ಹೋ…. ಇದು ಈ ಕೇಸಾ..?” ಹೇಳಿಕ್ಕಿ,” ನಿಂಗ ಹೇಳಿದ ದಿನ ಉದಿಯಪ್ಪಗ ಈ ಕೂಸು ಇಲ್ಲಿಗೆ ಬಂದದು. ಅದರ ಯಾವ ವಿವರವೂ ಕೊಟ್ಟಿದಿಲ್ಲೆ… ಎಂತದೋ ಇಕ್ಕಟ್ಟಿಲಿದ್ದಾಂಗೆ ಇತ್ತು. ‌ಹಾಂಗಾಗಿ ರಜ ಸಮಯ ಹೋಗಲಿ ಹೇಳಿ ಅದರ ಹಾಂಗೇ ಬಿಟ್ಟಿದೆಯ..” ಹೇಳಿತ್ತು. ” ಎಂಗೊಗದರ ನೋಡೆಕ್ಕು..” ಹೇಳಿ ಶರತ್ಚಂದ್ರ ಹೇಳಿದ. ಆ ಹೆಂಗಸು ಅವರ ಆಶ್ರಮದ ‌ಹಿಂದಣ ಹೊಡೆಂಗೆ ಕರಕ್ಕೊಂಡು ಹೋತು.
ಅಲ್ಲಿ ಕಲ್ಲಿನ ಬೆಂಚಿಲಿ ಕೂದುಗೊಂಡು ಎಲ್ಲಿಯೋ ನೋಡಿಗೊಂಡು ಆಲೋಚನೆ ಮಾಡಿಗೊಂಡಿತ್ತ ಕೂಸಿನ ತೋರ್ಸಿಕ್ಕಿ,” ಅದಾ.. ಅಲ್ಲಿ….” ಹೇಳಿತ್ತು ಆ ಹೆಂಗಸು. ಶಾಂತ “ಅಂಜಲೀ….” ಹೇಳಿ ಓಡಿಗೊಂಡು ಹೋಗಿ ಕೈ ಹಿಡ್ದತ್ತು. ಅದು ಎಲ್ಲರ ನೋಡಿ ಹೆದರಿ ನಿಂದತ್ತು. ಎಲ್ಲರೂ ಕಣ್ಣು ಬಾಯಿ ಬಿಟ್ಟು ಬಾಕಿ ಆದವು. ಕೇಶವ,”ಇ..ದಾ..ರೋ.. ಬೇ..ರೆ” ಹೇಳಿ ಪಿಸುಗುಟ್ಟಿದ. ಶಾಂತ ನಿಂದಲ್ಲಿಂದಲೇ ತಿರುಗಿ,” ಈ ಕೂಸಲ್ಲ ಎಂಗಳ ಅಂಜಲಿ ಎಲ್ಲಿ..??” ಹೇಳಿ ಹೆದರಿದ ಮೋರೆಲಿ ರಜ ನೆಗೆ ಮಾಡಿಗೊಂಡು ಕೇಳಿತ್ತು. ಆ ಹೆಂಗಸು,” ಸಧ್ಯಕ್ಕೆ ಈ ಕೂಸು ಬಿಟ್ಟರೆ ಬೇರೆ ಆರೂ ಇಲ್ಲಿ ಸೇರಿದ್ದವೇಲ್ಲೆ” ಹೇಳಿಯಪ್ಪಗ ಎಲ್ಲರಿಂಗೂ ಡಿಂಡಿಂಮ್ಮನೆ ಸೆಡ್ಲು ಬಡ್ದಾಂಗೆ ಆತು. ಶಾಂತ ಅಲ್ಲಿಯೇ ಬೆಂಚಿಲಿ ಕೂದುಗೊಂಡು ಕೂಗುಲೆ ಸುರು ಮಾಡಿತ್ತು. ಶರತ್ಚಂದ್ರ ಸಹನಾನ ಮೋರೆ ನೋಡಿದ. ಸಹನಾ ಇದರ ಬಿಟ್ಟರೆ ಎನಗೆ ಬೇರೆಂತ ಗೊಂತಿಲ್ಲೆ ಹೇಳುವಾಂಗೆ ತಲೆ ಆಡ್ಸಿತ್ತು. ‌ಹೋದ ಬಸವ ಬಂದ ಬಸವ ಹೇಳುವಾಂಗೆ ಆಶ್ರಮಕ್ಕೆ ಹೋಗಿಯೂ ಎಂತ ಪ್ರಯೋಜನ ಆಯ್ದಿಲ್ಲೆ.
ಹೆಮ್ಮಕ್ಕಳ ಮನೆಲಿ ಬಿಟ್ಟಿಕ್ಕಿ, ಶರತ್ಚಂದ್ರಂದೆ, ಕೇಶವಂದೆ ಹೀಂಗೆಪ್ಪ ಬೇರೆ ಬೇರೆ ಆಶ್ರಮಲ್ಲಿ ಹೋಗಿ ವಿಚಾರ್ಸೆರುದೇ ಅಂಜಲಿಯ ಸುಳಿವೇ ಸಿಕ್ಕಿದ್ದಿಲ್ಲೆ.. ಮಗಳು ಎಲ್ಲಿ ಹೋಗಿಕ್ಕಪ್ಪಾ..?? ಹೇಳಿ ಅಂಜಲಿಯ ಗ್ರೇಶಿ ಗ್ರೇಶಿ ಕೂಗುವ ಅಬ್ಬೆ ಅಪ್ಪನ ಸಂಕಟ ನೋಡಿ ವೀಣಾ, ಎನಗೆ ದೇವರು ಮಕ್ಕಳ ಕೊಡದ್ದೇ ಇಪ್ಪದು ಒಳ್ಳೆದಾತು.. ಹೇಳಿ ಗ್ರೇಶಿವಷ್ಟಕ್ಕೆ ಪರಿಸ್ಥಿತಿ ಬಂದು ಎತ್ತಿತ್ತು.
ಅಂಜಲಿ ಕಾಣೆ ಆಗಿ ಹದ್ನೈದು ದಿನ ಕಳ್ತು. ಕೇಶವನುದೇ ಶರತ್ಚಂದ್ರಂದೇ ಸೇರಿ ಅಂಜಲಿಯ ಹುಡ್ಕಲೆ ಊರೂರು ತಿರುಗಿದವು. ಎಲ್ಲಿ ಹೋತಿಕ್ಕಿತ್ತಪ್ಪಾ ಈ ಕೂಸು?? ಒಂದರಿ ಸಿಕ್ಕೆರೆ ಸಾಕಿತ್ತು ಹೇಳಿ ಕೆಲವು ಊರಿನ ಜೆನಂಗೊ ಗ್ರೇಶಿಗೊಂಡದೂ ಇದ್ದು..
ಹೀಂಗೆಪ್ಪಗ ಶರತ್ಚಂದ್ರ ಕೇಶವಂಗೆ ಸ್ಟೇಷನಿಂದ ಫೋನು ಮಾಡಿ,” ಭಾವ… ಅದು…. ಒಂದು ಅಂಜಲಿಯ ಪ್ರಾಯದ ಕೂಸಿನ ಹೆಣ ಸಿಕ್ಕಿದ್ದಡ. ಆಸ್ಪತ್ರೆಲಿ ಆ ಹೆಣ ಇದ್ದಡ ಈಗ.. ನಾವೊಂದರಿ ನೋಡಿಕ್ಕಿ ಬಪ್ಪ.. ಅಕ್ಕನತ್ರೆ ಎಂತರನ್ನುದೆ ಹೇಳುಲೆ ಹೋಗೆಡಿ…” ಹೇಳಿದ್ದರ ಕೇಳಿ ಕೇಶವಂಗೆ ಒಂದರಿಯಂಗೆ ಚಳಿಂಗ್ರಿ ಹಿಡ್ದಾಂಗಾತು. ಮನಸ್ಸಿನ ಗಟ್ಟಿ ಮಾಡಿಗೊಂಡು ಇಬ್ರುದೇ ಆಸ್ಪತ್ರೆಗೆ ಹೋದವು. ಶವಾಗಾರಕ್ಕೆ ಹೊಗ್ಗುವಾಗಳೇ ಕೆಟ್ಟ ವಾಸನೆ ಬಂದಾಂಗಾತು. ಹೆಣ ಹಾಳಾಗದ್ದಾಂಗೆ ವ್ಯವಸ್ಥೆ ಮಾಡಿ ಪೆಟ್ಟಿಗೆಲಿ ಮಡಿಗೆರುದೇ ವಾಸನೆ ಬಂದುಗೊಂಡಿತ್ತು. ಸಧ್ಯ ಸಿಕ್ಕಿದ ಹೆಣಗಳ ಪೂರಾ ಅಲ್ಲಿತ್ತ ಜನ ಪೆಟ್ಟಿಗೆಂದ ಎಳದು ಎಳದು ತೋರ್ಸಿತ್ತು. ಹೆಣ ಎಲ್ಲಾ ಎಲ್ಕೊಟೆ ಕಟ್ಟಿತ್ತು. ಕೇಶವಂಗೆ ಅದರ ಎಲ್ಲಾ ನೋಡಿ ಮೈ ಇಡೀ ಒಂಥರಾ ಆತು. ಪುಣ್ಯಕ್ಕೆ ಅಲ್ಲಿಪ್ಪ ಒಂದು ಹೆಣವುದೇ ಅಂಜಲಿದಾಗಿತ್ತಿಲ್ಲೆ. ಮನಸ್ಸು ಹಗುರ ಆತು.
ಒಂದು ದಿನ ಅಂಜಲಿಯ ಹುಡ್ಕಿ ಉದಯಕಾಲಕ್ಕಪ್ಪಗ ಶರತ್ಚಂದ್ರ ಮನೆಗೆ ಎತ್ತಿದ್ದು. ಹಾಂಗಾಗಿ ಅವಂಗೆ ಒಳ್ಳೆ ಒರಕ್ಕು ಬಂದಿತ್ತು. ಹತ್ತು ಗಂಟೆ ಹೋತ್ತಿಂಗೆ ಆದ ಕಾಲಿಂಗ್ ಬೆಲ್ ಅವನ ಏಳುವಾಂಗೆ ಮಾಡಿತ್ತು. ಸೀದಾ ಎದ್ದು ಕಣ್ಣು ತಿಕ್ಕಿಗೊಂಡು ಬಾಗಿಲು ತೆಗೆದ. ಆರುದೇ ಇತ್ತಿದವೇಲ್ಲೆ. ಮತ್ತೆ ಆರಂಬಗ ಬೆಲ್ ಮಾಡಿದ್ದು?? ಹೇಳಿ ಗ್ರೇಶಿಗೊಂಡು ಹೆರ ಕಾಲು ಮಡುಗೆಕ್ಕಾರೆ ಕಾಲ ಬುಡಲ್ಲಿ ಅವಂಗೊಂದು ಆಶ್ಚರ್ಯ ಕಾದಿತ್ತು!!!

       -ಮುಂದುವರೆತ್ತು..

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

6 thoughts on “ಒಂದು ಪ್ರಕರಣದ ಸುತ್ತ -೯ :ರಮ್ಯ ನೆಕ್ಕರೆಕಾಡು

  1. ಕತೆ ಲಾಯ್ಕಲ್ಲಿ ಕುತೂಹಲಕಾರಿಯಾಗಿ ಬತ್ತಾ ಇದ್ದು.ಈ ಅಂಜಲಿ ಎಲ್ಲಿಗೆ ಹೋದಿಕ್ಕು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×