Oppanna.com

ಒಂದು ಪ್ರಕರಣದ ಸುತ್ತ- ೨, ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   28/05/2020    2 ಒಪ್ಪಂಗೊ

ಒಂದು ಪ್ರಕರಣದ ಸುತ್ತ- ೨

-ರಮ್ಯ ನೆಕ್ಕರೆಕಾಡು

ಬ್ರೋಕರ್ ಗೋಪಾಲಣ್ಣ ಬಂದು ಹೋದ ಮತ್ತೆ,ಅಂಜಲಿಯ ಪರಿಸ್ಥಿತಿ ಭಾರೀ ಕಂಗಾಲಾಗಿತ್ತು.ದಿನ ಇಡೀ ಕೋಣೆಯ ಒಳವೇ ಕಳೆಗು. ಅಂಜಲಿಯ ಕಣ್ಣುಗ ಒರಕ್ಕು ಕಾಣದ್ದೇ ವಾರವೇ ಕಳ್ದಿತ್ತು. ಕಣ್ಣಿನ ಕರೆ ಪೂರಾ ಕಪ್ಪಾಗಿ, ರೋಗಿಯ ಹಾಂಗಾಗಿತ್ತು. ಹೇಂಗಿಪ್ಪವರನ್ನೂ ಆಕರ್ಷಿಸುವ ನೀಳ ಕೂದಲು ಇಂದು ಬಾಚಣಿಗೆ ಕಾಣದ್ದೆ ಕೆದರಿ ಹೋಗಿತ್ತು. ಶಾಂತಂಗೆ ಮಗಳ ಜೀವನ ಕಣ್ಣೆದುರೇ ಹಾಳಾಪ್ಪ ಪರಿಸ್ಥಿತಿ ಇದ್ದರುದೇ, ಗೆಂಡನ ಮೀರಿ ಹೋಪಲೆ ಎಡಿಗಾಯ್ದಿಲ್ಲೆ.
” ಶಾಂತತ್ತೇ…. ಅಂಜಲಿ ಮನೆಲಿಲ್ಲೆಯಾ??” ಹೇಳಿ ಅಂಜಲಿಯ ಜೀವದ ಗೆಳತಿ, ಸಹನಾ ಮೆಟ್ಟು ಪೀಂಕ್ಸಿ ಒಳ ಬಂತು. ಮಗಳ ಪರಿಸ್ಥಿತಿ ಗ್ರೇಶಿ ಕಣ್ಣೀರರಿಶಿಗೊಂಡಿತ್ತ ಶಾಂತ ಅಟ್ಟೊಂಬಳಂದ ಹೆರ ಬಂತು,” ಸಹನಾ..ನೀನಾ..ಅಂಜಲಿ ಕೋಣೆಲಿದ್ದು, ಹೋಗು” ಹೇಳಿಯಪ್ಪದ್ದೆ,” ಎಂತ ಅತ್ತೆ ಭಾರೀ ಚಪ್ಪೆ?? ಉಷಾರಿಲ್ಲೆಯ?? ಬಪ್ಪ ತಿಂಗಳಿನ ಬ್ಯಾಂಕಿಂಗ್ ಎಕ್ಸಾಮಿಂಗೆ ಓದಿಗೊಂಬಲೆ ಹೇಳಿ ಎರಡು ಪುಸ್ತಕ ಆರ್ಡರ್ ಮಾಡಿತ್ತಿದೆಯ. ಅದು ಇಂದು ಸಿಕ್ಕಿತ್ತು. ಅದರ ಅಂಜಲಿಗೆ ಕೊಟ್ಟಿಕ್ಕಿ ಹೋಪಾಳಿ ಬಂದದು..” ಹೇಳಿ ಸಹನಾ ಬಂದ ವಿಷಯವ ಶಾಂತಂಗೆ ತಿಳಿಶಿತ್ತು. ವಾಸ್ತವವ ಸಹನಾಂಗೆ ಹೇಂಗೆ ಹೇಳುದಪ್ಪ?? ಎಂಗಳ ತಪ್ಪು ಇಪ್ಪ ಕಾರಣ ಸಹನನ ದೃಷ್ಟಿಲಿ ಎಂಗ ತುಂಬಾ ಕೀಳು ಮಟ್ಟಕ್ಕೆ ಇಳ್ದೆಯಾಳಿ ಅಕ್ಕು..ಹೇಳಿ ವಿಷಯವ ತಿಳಿಶುಲೆ ಎಡಿಯದ್ದೆ, ಶಾಂತ” ನೀನು ಅಂಜಲಿಯತ್ರೆ ಹೋಗಿ ಮಾತಾಡು…” ಹೇಳಿಕ್ಕಿ ಒಳ ಹೋತು. ಸಹನಾ ” ಅಂಜು ಕುಟ್ಟೀ…..” ಹೇಳಿ ಯಾವಗ್ಳೂ ಅಂಜಲಿಯ ದಿನಿಗೇಳುವ ಹಾಂಗೆ ಇಂದುದೇ ರಾಗ ಎಳಕ್ಕೊಂಡು, ಅಂಜಲಿಯ ಕೋಣೆ ಬಾಗಿಲು ತೆಗದತ್ತು.ಮಂಚಲ್ಲಿ ಕೂದುಗೊಂಡು ಕಿಟಕಿಯನ್ನೇ ದಿಟ್ಟಿಸಿ ನೋಡಿಗೊಂಡಿತ್ತ, ಅಂಜಲಿಯ ಕಂಡಪ್ಪದ್ದೆ ಸಹನಂಗೆ ಒಂದರಿಯಂಗೆ “ಜುಂ” ಆತು..ಕೂಡ್ಲೇ ಅಂಜಲಿಯತ್ರೆ ಹೋಗಿ,” ಅಂಜಲಿ ಎಂತ ನೀನು ಹೀಂಗಾದ್ದು..ಹೆರ ನೋಡ್ರೆ ಅತ್ತೆದೆ ಭಾರೀ ಚಪ್ಪೆ ಇದ್ದವು..ನಿನ್ನ ನೋಡೆರೆ ವಿಚಿತ್ರ ಆವ್ತು…ಎಂತಾತು ಕೂಚಕ್ಕ??” ಹೇಳಿ ಅಂಜಲಿಯ ಕೆಪ್ಪಟೆ ಮುಟ್ಟಿ ಕೇಳಿತ್ತು ಸಹನಾ. ಅಂಜಲಿಗೆ ಮನಸ್ಸಿನ ತಳಮಳ ಹೇಳಿಗೊಂಬಲೆ ಸಹನಾ ಬಿಟ್ಟರೆ ಮತ್ತೆ ಆರೂ ಇತ್ತವೇಲ್ಲೆ. ಸಹನನ ಕೈಯ ಹಿಡ್ಕೊಂಡು ಅಂಜಲಿ,ಜೋರು ಕೂಗುಲೆ ಸುರು ಮಾಡಿತ್ತು.ಸಹನಂಗೆ ಎಂತ ‌ಆವ್ತ ಇದ್ದು ಹೇಳಿಯೇ ಅರೆಡಿಯ..ಅಂಜಲಿ ಕುಂಞಿ ಮಕ್ಕಳ ಹಾಂಗೆ ಕೂಗಿಗೊಂಡೇ ಎಲ್ಲಾ ವಿಷಯವನ್ನುದೇ ಸಹನಂಗೆ ಹೇಳಿತ್ತು.”ನೋಡು ಸಹನಾ…ಎನ್ನ ಯಾವುದೋ ತೊಂಡಂಗೆ ಕಟ್ಟುತ್ತವಡ…ಅದಲ್ಲದ್ದೆ ನಾಳೆ ಆನೋಬ್ಬನೇ ಅವನ ಭೇಟಿ ಅಪ್ಪಲೆ ಹೋಯೆಕ್ಕಡ!! ಆನು ಎಲ್ಯಾರು ಹೋಗಿ ಸ್….ಸ್….ಸ್…ಸಾಯ್ತೆ..” ಹೇಳಿ ಎಕ್ಕಿ ಎಕ್ಕಿ ಕೂಗಿತ್ತು. ಸಹನಂಗೆ ಪಕ್ಕಕ್ಕೆ ಎಂತ ಮಾಡೆಕ್ಕು ಹೇಳಿ ಗೊಂತಾಯ್ದಿಲ್ಲೆ…ಮತ್ತೆ ಅಂಜಲಿಯ ಕಣ್ಣುದ್ದಿಕ್ಕಿ,” ಇದಾ…ನೀನು ಹೀಂಗೆ ಪೆದ್ದಿಯಾಂಗೆ ಸಾಯ್ತೆ , ಹಾಂಗೆ ಹೀಂಗೆಲ್ಲ ಮಾತಾಡೆಡ..ನೀನು ಈಗ ಇಪ್ಪ ಪರಿಸ್ಥಿತಿ ನೋಡಿ ಅವನೇ ನಿನ್ನ ಬೇಡಾಳಿ ಹೇಳುಗು..ಒಂದು ವೇಳೆ ಅವ ತಪ್ಪಿ ನಿನ್ನ ಒಪ್ಪಿಗೊಂಡರೆ, ಮದುವೆಗೆ ಒಂದು ವಾರ ಇಪ್ಪಗಳಾಣ್ಣು ಓಡಿ ಹೋಗು..” ಹೇಳಿ ಸಹನಾ ಊಹಿಸುಲೇ ಎಡಿಯದ್ದಾಂಗಪ್ಪ ಮಾತು ಹೇಳಿಯಪ್ಪಗ ಅಂಜಲಿ ಕೂಗುದರ ನಿಲ್ಸಿಕ್ಕಿ, ಸಹನನ ಮೋರೆಯನ್ನೇ ನೋಡಿತ್ತು..ಸಹನಾ,” ಅಪ್ಪು..ಅಂಜು…ನಿನಗೆ ಹೀಂಗೆ ಮಾಡುದು ಬಿಟ್ಟರೆ ಬೇರೆ ದಾರಿ ಇಲ್ಲೆ…ಆನು ಹೀಂಗೆ ಹೇಳುದು ಸರಿಯಲ್ಲ…ಆದರೆ ಇಷ್ಟು ಸಮಯ ಎನ್ನೊಟ್ಟಿಂಗಿದ್ದ ನಿನ್ನ ಜೀವನ ಹಾಳಪ್ಪದು ಎನಗೆ ಇಷ್ಟ ಇಲ್ಲೆ…ನಾಳೆ ಎಂತಕುದೇ ಅವನ ಮೀಟ್ ಆಗು…ಮುಂದೆ ಎಂತಾಳಿ ಮತ್ತೆ ನೋಡ್ಲಕ್ಕು..” ಹೇಳಿ ಸಹನಾ ಅಂಜಲಿಗೆ ಒಂದೊಳ್ಳೆ ಉಪಾಯ ಹೇಳಿ ಕೊಟ್ಟತ್ತು. ನೀರಿಲಿ ಮುಳುಗುವವಂಗೆ ಹುಲ್ಲುಕಡ್ಡಿ ಆಸರೆ ಆದ ಹಾಂಗೆ, ಅಂಜಲಿಗುದೇ ಸಹನಾ ಹೇಳಿದ್ದು ಸರಿ ಹೇಳಿ ಕಂಡತ್ತು.” ನಿನ್ನ ವೇಷವ ಎನ್ನಂದ ನೋಡ್ಲೆ ಎಡಿತ್ತಿಲ್ಲೆ..ಮೊದಲು ಹೋಗಿ ಮಿಂದಿಕ್ಕಿ, ತಲೆ ಎಲ್ಲಾ ಬಾಚು..ಕಸ್ತಲೆ ಆಯ್ಕಾರೆ ಮೊದಲೇ ಮನೆಗೆ ಎತ್ತೆಕ್ಕನ್ನೇ…ನಿನ್ನ ಜೀವನ ಸರಿ ಆದರೆ ಮೊದಲು ಎನಗೇ ಖುಷಿ ಅಪ್ಪದು…ಟಾಟಾ…” ಹೇಳಿಕ್ಕಿ ಸಹನಾ ಮನೆಗೆ ಹೋತು. ಅಂಜಲಿ ಅಂಗಿ- ಬೈರಾಸು ಹಿಡ್ಕೊಂಡು, ಕೋಣೆಂದ ಹೆರ ಬಂತು. ಕೇಶವಂಗುದೇ ಶಾಂತಂಗುದೇ ಆಶ್ಚರ್ಯ, ಖುಷಿ ಒಟ್ಟಿಂಗೆ ಆತು. “ಅಂತೂ ಸಹನಾ ಬಂದು ಹೋದ ಮತ್ತೆ ಆದರೂ ಇದಕ್ಕೆ ಬುದ್ಧಿ ಬಂತನ್ನೇ…ಅದುವಾಗಿಯೇ ಮಾತಾಡುವನ್ನಾರ ನಾವು ಎಂತ ಮಾತಾಡ್ಸುಲೆ ಹೋಪದು ಬೇಡ…” ಹೇಳಿ ಕೇಶವ ಶಾಂತನತ್ರೆ ಗುಟ್ಟಿಲಿ ಹೇಳಿದ. ಮಿಂದಿಕ್ಕಿ ಬಂದ ಅಂಜಲಿ,” ಅಪ್ಪ…ಅವರ ಭೇಟಿ ಅಪ್ಪಲೆ ನಾಳೆ ಎಷ್ಟೊತ್ತಿಂಗೆ ಹೋಯೆಕ್ಕಡ..??” ಹೇಳಿ  ಚೆಂಡಿಹರ್ಕಿಲಿ ತಲೆ ಉದ್ದಿಗೊಂಡು ಕೇಳಿತ್ತು. ಕೇಶವನ ಸಂತೋಷಕ್ಕೆ ಪಾರವೇ ಇಲ್ಲದ್ದಾಂಗೆ ಆತು..”ಮಧ್ಯಾಹ್ನ ಮೇಲೆ, ಐಸ್ಕ್ರೀಮ್ ಪಾರ್ಲರಿಂಗೆ ಹೋಯೆಕ್ಕಡ..” ಹೇಳಿ ಖುಷೀಲಿ ‌ಹೇಳಿದ. ಶಾಂತಿಗೆ ಮಗಳ ಬದಲಾವಣೆ ಆಶ್ಚರ್ಯ ತಪ್ಪದಕ್ಕಿಂತ ಮಗಳು ಮೊದ್ಲಣ ಹಾಂಗೆ ಆತನ್ನೇ ಹೇಳ್ತ ವಿಷಯವೇ ಖುಷಿ ಕೊಟ್ಟಿತ್ತು. ಆ ದಿನ ಇರುಳು ಮನಸ್ಸಿನ ಭಾರ ಕಮ್ಮಿ ಆದ ಕಾರಣ, ಅಂಜಲಿಗೆ ಲಾಯ್ಕಕ್ಕೆ ಒರಕ್ಕು ಬಂತು.
ಈಗ ಅರವಿಂದನ ಭೇಟಿ ಅಪ್ಪಲೆ ಹೋಪ ಸಮಯ. ಅರವಿಂದ ಎನ್ನ ಒಪ್ಪಿಗೊಂಬಲಾಗ ಹೇಳಿ ಬೇಕೋಳಿಯೇ ಅಂಜಲಿ, ಹಳತ್ತು ಚೂಡಿದಾರ ಹಾಕಿ, ಯಾವುದೇ ಅಲಂಕಾರ ಮಾಡದ್ದೆ ಹೆರಟತ್ತು. ಇದರ ವೇಷ ನೋಡಿದ, ಶಾಂತ”ಎಂತ ಮಗಳೋ ಇದು. ಈ ಅಂಗಿ ನೆಲ ಉದ್ದುವ ಹರ್ಕಿನಾಂಗೆ ಇದ್ದು…ರಜ ಲಾಯ್ಕಕ್ಕೆ ರೆಡಿ ಆಗು…” ಹೇಳಿಯಪ್ಪದ್ದೆ ಅಂಜಲಿ,” ಅವು ಮದುವೆ ಅಪ್ಪದು ಎನ್ನ ಅಂಗಿಯ ಅಲ್ಲನ್ನೇ…” ಹೇಳಿಕ್ಕಿ ಮೆಟ್ಟು ಸಿಕ್ಸಿಗೊಂಡು ಹೋಗಿಯೇ ಬಿಟ್ಟತ್ತು.
ಗಂಟೆ ಆರಾತು. ಧಡಕ್ಕನೆ ಬಾಗಿಲು ತೆಗೆದು ಅಂಜಲಿ ಮನೆ ಒಳಂಗೆ ಬಂದು, ಬ್ಯಾಗಿನ ಸೋಫಾಲ್ಲಿ ಇಡುಕ್ಕಿ, ಕೋಣೆಯೋಳಂಗೆ ಹೋಗಿ ಬಾಗಿಲು ಹಾಕಿತ್ತು. ಕೇಶವಂಗುದೆ ಶಾಂತಂಗುದೇ, ಎಂತಾತು ಹೇಳಿ ಅರೆಡಿಯ..ಅಷ್ಟಪ್ಪಗ ಫೋನು ರಿಂಗಾತು..ಆಚೊಡೆಂದ ಅರವಿಂದ” ಹಲೋ….ಮಾವ‌..ಇದಾನು ಅರವಿಂದ ಮಾತಾಡುದು…ಎನಗೆ ಅಂಜಲಿಯ ಭಾರೀ ಇಷ್ಟಾತು..ಹೆಚ್ಚಿಗೆ ಆಡಂಬರ ಇಲ್ಲದ್ದೇ, ಸಿಂಪಲ್ ಆಗಿ ಇದ್ದು…” ಹೇಳಿಯಪ್ಪದ್ದೆ ಕೇಶವನ ಮನಸ್ಸು ಸಂತೋಷಲ್ಲಿ ಹಾರಿ ಕೊಣುದತ್ತು.”ಆಗಲಿ ಎಂಗಳ ಮಗಳು ಪುಣ್ಯ ಮಾಡಿದ್ದು…ಇನ್ನು ಮುಂದುವರೆಶುಲಕ್ಕು ಅಂಬಗ…ಒಂದೊಳ್ಳೆ ದಿನ ನೋಡಿ ಮನೆ ನೋಡ್ಲೆ ಬನ್ನಿ ಅಂಬಗ..” ಹೇಳೀ ಫೋನು ಕಟ್ ಮಾಡಿದ ಕೇಶವ, ಶಾಂತನತ್ರೆ ವಿಷಯ ತಿಳಿಶಿದ. ಆದರೆ ಶಾಂತಂಗೆ ಪುನಃ ಅಂಜಲಿಗೆ ಎಂತಾತಪ್ಪಾ ಹೇಳಿ ಮಂಡೆಬೆಶಿ ಸುರಾತು.
ಮರುದಿನ ಉದಿಯಪ್ಪಗ ಅಂಜಲಿಯ ಕಾಪಿ ಕುಡಿವಲೆ ದಿನಿಗೇಳುಲೆ ಹೋಪಗ ಶಾಂತಂಗೆ ಆಶ್ಚರ್ಯ ಕಾದಿತ್ತು..ಅಂಜಲಿ ಕೋಣೆಯೊಳ ಇತ್ತಿಲ್ಲೆ. ಮನೆ ಇಡೀ ಹುಡ್ಕಿ ಆತು ಅಂಜಲಿಯ ಪತ್ತೆಯೇ ಇಲ್ಲೆ.”ಓಯ್……ಅಂಜಲಿಯ ಎಲ್ಲಿದೇ ಕಾಣ್ತಾ ಇಲ್ಲೆ…” ಹೇಳ್ತ ಶಾಂತನ ಬೊಬ್ಬೆ ಅಂಜಲಿ ನಾಪತ್ತೆ ಆಯ್ದು ಹೇಳ್ತ ಸುದ್ದಿಗೆ ಸೂಚನೆ ಆತು…

ಮುಂದುವರೆತ್ತು..>>>>

ಒಂದನೇ ಭಾಗ ಓದಲೆ ಇಲ್ಲಿಗೆ ಹೋಗಿ:-

ಒಂದು ಪ್ರಕರಣದ ಸುತ್ತ, ಭಾಗ ೧-ರಮ್ಯ ನೆಕ್ಕರೆಕಾಡು

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಒಂದು ಪ್ರಕರಣದ ಸುತ್ತ- ೨, ರಮ್ಯ ನೆಕ್ಕರೆಕಾಡು

  1. ಎಂತದೇ ಆದರೂ ಅಂಜಲಿಯ ಜೀವನ ಹಾಳಾದ ಹಾಂಗೆ ಕಾಣ್ತು. ಒಳ್ಳೆದಾದರೆ ಅಲ್ಲಿ ಒಂದು ಪವಾಡವೇ ಆಯೆಕ್ಕಷ್ಟೆ 😥‌

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×