Oppanna.com

ಒಂದು ಪ್ರಕರಣದ ಸುತ್ತ, ಭಾಗ ೧-ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   21/05/2020    6 ಒಪ್ಪಂಗೊ

ಬೈಲಿನ ಓದುಗರಿಂಗೆ ಎನ್ನ ನಮಸ್ಕಾರಂಗೊ..ಈ ಮೊದಲೇ ಆನು ಬರೆದ ಶಾಮಣ್ಣನ ಕಾರುಬಾರು ಹೇಳ್ತ ಲಘುಬರಹವ ಓದಿ,ಸ್ಪಂದಿಸಿದ್ದಿ. ಈಗ ತುಂಬಾ ದೀರ್ಘ ಅಲ್ಲದ್ರೂ, ‌ಸಣ್ಣಕ್ಕೆ “ಒಂದು ಪ್ರಕರಣದ ಸುತ್ತ” ಹೇಳಿ ಪತ್ತೇದಾರಿ ಧಾರಾವಾಹಿಯ ಬರೆವ ಪ್ರಯತ್ನ ಮಾಡಿದ್ದೆ. ಎಲ್ಲರೂ ಓದಿ, ಸ್ಪಂದಿಸಿ, ಪ್ರೋತ್ಸಾಹಿಸೆಕ್ಕು ಹೇಳಿ ಕೇಳಿಗೊಳ್ತೆ.
         – ರಮ್ಯ ನೆಕ್ಕರೆಕಾಡು

ಒಂದು ಪ್ರಕರಣದ ಸುತ್ತ- ೧

“ಎನಗೆ ಈಗಳೂ ನೆಂಪಿದ್ದು..ಕಳ್ದ ಸರ್ತಿ ಬಂದಿಪ್ಪಗ ಒಂದು ಸಣ್ಣ ಫ್ರಾಕು ಹಾಕಿಗೊಂಡು, ಎನ್ನ ಮೊಟ್ಟೆಲಿ ಹತ್ತಿ ಹಾರಿಗೊಂಡಿತ್ತ ಅಂಜಲಿ ಇದು..ಅಲ್ಲಕ್ಕಾ ಈಗ ನಿನ್ನಷ್ಟೆತ್ತರಕ್ಕೆ ಬೆಳದು ನಿಂದಿದನ್ನೇ!!..ಈಗಣ ಮಕ್ಕಳೇ ಹೀಂಗೆಯೋ, ಅಲ್ಲ ಕಾಲದ ಮಹಿಮೆಯೋ ದೇವರಿಂಗೇ ಗೊಂತು!!” ಹೇಳಿ ಅಂಜಲಿಯ ಸೋದರಮಾವ ಶರತ್ಚಂದ್ರ ಹೇಳಿಯಪ್ಪದ್ದೇ, ಅಂಜಲಿಯ ಅಮ್ಮ ಶಾಂತ,” ನೀನು ಎಂತ ಹೇಳ್ತೆ ಚಂದ್ರ..ನೀನು ಈ ಹೊಡೆಂಗೆ ಬಾರದ್ದೆ ಸರೀ ಹದ್ನೇಳು ವರ್ಷ ಆತು. ನೀನು ಅಂದು ಬಂದಿಪ್ಪಗ ಅಂಜಲಿಗೆ ಐದು ವರ್ಷ..ಹಾಂಗಿಪ್ಪಗ ಅಂಜಲಿ ಇಷ್ಟು ದೊಡ್ಡ ಆಯ್ದನ್ನೇ! ಹೇಳಿ ಆಶ್ಚರ್ಯ ಅಪ್ಪಲೆ ಎಂತ ಇದ್ದು??” ಹೇಳಿಗೊಂಡು ಕೈಲಿತ್ತ ಕಾಪಿ ಗ್ಲಾಸಿನ ಶರತ್ಚಂದ್ರಂಗೆ ಕೊಟ್ಟತ್ತು ಶಾಂತ.
“ಅದಪ್ಪು ಅಕ್ಕ..ನೀನು ಹೇಳಿದ್ದು ಸರಿಯೇ..ಎನಗೆ ಈ ಪೋಲಿಸ್ ಅಧಿಕಾರಿ ಹುದ್ದೆ ಸಿಕ್ಕಿದಮತ್ತೆ, ಗಳಿಗೆಗೊಂದರಿ ಟ್ರಾನ್ಸ್ಫರ್ ಆಗಿ ಊರು ಊರು ತಿರುಗಿ ಈಚೊಡೆಂಗೆ ಬಪ್ಪಲೇ ಎಡಿಗಾಯ್ದಿಲ್ಲೆ..ಈಗ ಇಲ್ಲಿಗೆ ಟ್ರಾನ್ಸ್ಫರ್ ಆಗಿ ನಿಂಗಳ ಎಲ್ಲ ನೋಡುವ ಕಾಲ ಕೂಡಿಬಂತು” ಹೇಳಿ ಕಾಫಿಯ ಊಫಿ ಊಫಿ ಕುಡುದ. ಅಮ್ಮ ಮತ್ತೆ ಸೋದರಮಾವ ಮಾತಾಡುದರ ತಳೀಯದ್ದೆ ಕೂದುಗೊಂಡು ಕೇಳಿಗೊಂಡಿತ್ತ ಅಂಜಲಿ,” ಅಲ್ಲ ಮಾವ ಬಪ್ಪದು ಹೇಂಗೂ ಬೈಂದಿ..ಒಟ್ಟಿಂಗೆ ವೀಣಾ ಅತ್ತೆಯನ್ನುದೆ ಕರಕ್ಕೊಂಡು ಬರ್ತಿದ್ದರೆ ಲಾಯ್ಕಿರ್ತಿತ್ತು…ಪ್ರತೀ ಸರ್ತಿ ಫೋನಿಲಿ ಮಾತಾಡುದೇ ಆತು.ಇಂದು ಬಪ್ಪಲೆ ಒಂದು ಚಾನ್ಸ್ ಇತ್ತು ಅತ್ತೆಗೆ” ಹೇಳಿ ಅಂಜಲಿ ಹೇಳಿಯಪ್ಪದ್ದೇ,” ಅಯ್ಯೋ..ಅದಕ್ಕೆ ಎಂತಾಯೆಕ್ಕು?? ಇನ್ನು ಊರಿಲಿಯೇ ಇಪ್ಪದನ್ನೇ..ವಾರಕ್ಕೊಂದರಿ ಬಂದು ಹೋಯ್ಕೊಂಡಿದ್ದರಾತು..ಎಂಗ ಈಗ ಊರಿಲಿಪ್ಪಗಳೇ ನಿನಗೆ ಒಂದು ಒಳ್ಳೆ ಸಂಬಂಧ ಹುಡ್ಕಿ ಮದುವೆ ಮಾಡ್ಸುವನಾಳಿ..” ಹೇಳಿ ಶರತ್ಚಂದ್ರ ಅಂಜಲಿಯ ಬಾಯಿಗೆ ಕೋಲುಹಾಕಿದ. ಅಷ್ಟೊತ್ತು ನೆಗೆ ನೆಗೆ ಮಾಡಿಗೊಂಡಿತ್ತ ಅಂಜಲಿ, ಮಾವ ಮದುವೆಯ ವಿಷಯ ತೆಗದಪ್ಪದ್ದೇ ಕೋಪಲ್ಲಿ ಎದ್ದಿಕ್ಕಿ ಕೋಣೆಗೆ ಹೋತು. ಶರತ್ಚಂದ್ರ ಶಾಂತನ ಮೋರೆ ನೋಡಿ ತಲೆ ಕೆಳ ‌ಹಾಕಿದ.
“ಹೋ….ಬಾವೋ…ಯಾವಗ ಬಂದದು ಮಾರಯನೆ ನೀನು?? ಎಂಗಳ ಎಲ್ಲ ನೆಂಪಿದ್ದು ಹೇಳಿ ಆತಂಬಗ..” ಹೇಳಿ ಅಂಜಲಿಯ ಅಪ್ಪ ಕೇಶವ, ಕೈಲಿತ್ತ ಸಾಮಾನಿನ ಚೀಲವ ಶಾಂತನತ್ರೆ ಕೊಟ್ಟಿಕ್ಕಿ ಶರತ್ಚಂದ್ರನ ಹತ್ರೆ ಹೋಗಿ ಕೂದ.” ಎಂತ ಮಾಡುದು ಬಾವಾ..ಎನ್ನ ಕೆಲಸವೇ ಹಾಂಗಿಪ್ಪದು..ಕೆಲಸದ ದೆಸೆಂದಾಗಿ ಇತ್ಲಾಗಿ ಬಪ್ಪಲೇ ಎಡಿಗಾಯ್ದಿಲ್ಲೆ..” ಹೇಳಿ ಶರತ್ಚಂದ್ರ ಚಪ್ಪೆ ಮೋರೆ ಮಾಡಿದ. ಇವ್ವಿಬ್ರು ಚಪ್ಪೆಗುದ್ದಿಗೊಂಡು ಕೂದರುದೇ, ಶಾಂತಂಗೆ” ಈ ಅಂಜಲಿ ಎಂತಕಪ್ಪಾ ಹೀಂಗೆ ಮಾಡಿತ್ತು?? ಚಂದ್ರ ಎಂತ ಗ್ರೇಶಿದನಾ….ಏನಾ..” ಹೇಳ್ತ ವಿಷಯವೇ ಮನಸ್ಸಿಲಿ ಕೊರಕ್ಕೊಂಡಿತ್ತು.
” ಹ್ಞೋಂ…ಮಾತಾಡಿಗೊಂಡು ಗಂಟೆ ಹೋದ್ದೇ ಗೊಂತಾಯ್ದಿಲ್ಲೆನ್ನೇ..ಆನಿನ್ನು ಹೆರಡ್ತೆ ಆಗದಾ ಅಕ್ಕಾ…” ಹೇಳಿಕ್ಕಿ ಶರತ್ಚಂದ್ರ ಬೆಲ್ಟು ಸರಿಮಾಡಿಗೊಂಡು ಎದ್ದು ನಿಂದ. ” ನೀನಿಂದು ಹೋಪಲಿಲ್ಲೆ ಚಂದ್ರೊ..ನೀನು ಎಷ್ಟು ವರ್ಷ ಕಳ್ದ ಮತ್ತೆ ಬಂದದು..ಹಾಂಗಿಪ್ಪಗ ಒಂದು ಪಾಯಸ ಮಾಡಿ ಬಳ್ಸದ್ದೆ ಹೇಂಗೆ?? ಇಂದಿರುಳು ಕೂದಿಕ್ಕಿ ನಾಳೆ ಹೋದರೆ ಸಾಕು…” ಹೇಳಿ ಶಾಂತ ತಕರಾರು ತೆಗದತ್ತು. “ಏ…ಇಲ್ಲೆಪ್ಪಾ….ಆನಿಂದಿರುಳು ಇಲ್ಲಿ ನೀನು ಮಾಡಿದ ಪಾಯಸ ತಿಂದುಕೊಂಡು ಕೂದರೆ, ಅಲ್ಲಿ ವೀಣಂಗೆ ಚಪ್ಪೆ ಅಕ್ಕು..ಹೇಂಗೂ ಈಚೊಡೆಂಗೆ ಬೈಂದೆ..ಅಕ್ಕಂಗೆ ಮೋರೆ ತೋರ್ಸಿಕ್ಕಿ ಬಪ್ಪ ಹೇಳಿ ಬಂದದು..ಇನ್ನೊಂದರಿ ಕಾಂಬ..ಬಾವ ಬತ್ತೆ ಆತ…ಅಕ್ಕ ಅಂಜಲಿಯತ್ರೆ ಹೇಳಿಕ್ಕು..” ಹೇಳಿ ಸೋಫಲ್ಲಿ ಮಡುಗಿತ್ತ ಮೊಬೈಲಿನ ಕಿಸೆಗೆ ಹಾಕಿಗೊಂಡ.” ಮತ್ತೆಂತ ಮಾಡುದು? ನಿನ್ನ ಕಟ್ಟಿಹಾಕುಲೆಡಿತ್ತಾ? ಇನ್ನೊಂದರಿ ವೀಣನನ್ನೂ ಕರ್ಕೊಂಡು ಎರಡು ದಿನ ನಿಂಬ ಹಾಂಗೆ ಬರೆಕ್ಕು..” ಹೇಳಿ ಶಾಂತ ಪ್ರೀತಿಂದ ತಮ್ಮನ ಕಳ್ಸಿ ಕೊಟ್ಟತ್ತು.
ತಮ್ಮ  ಹೋದ ಮತ್ತೆ, ಶಾಂತ ಸೀದಾ ಅಂಜಲಿಯ ಕೋಣೆಗೆ ಹೋಗಿ,” ಅಂಜಲಿ…. ನೀನಿಂದು ಹೀಂಗೆ ಮಾಡಿದ್ದು ಎನಗೆ ಚೂರುದೇ ಸರಿ ಕಂಡತ್ತಿಲ್ಲೆ…ನಿನಗೆ ಕೋಪ ಬಪ್ಪ ಹಾಂಗೆ ಮಾವ ಎಂತ ಹೇಳಿದ್ದ? ಪಾಪ ಅವಕ್ಕೆ ಮಕ್ಕ ಇಲ್ಲೆ..ನಿನ್ನನ್ನೇ ಮಗಳು ಹೇಳಿ ಗ್ರೇಶಿಗೊಂಡು ಕೊಂಡಾಟಲ್ಲಿ ರಜ ಸಲಿಗೆಂದಲೇ ಹೇಳಿದ್ದು…ಅಷ್ಟಕ್ಕುದೇ ಅವ ಹೇಳಿದ್ದರಲ್ಲಿ ತಪ್ಪಿಲ್ಲನ್ನೇ..ಪ್ರಾಯಕ್ಕೆ ಬಂದ ಕೂಸುಗಳ ಎಷ್ಟು ದಿನಾಳಿ ಮನೆಲಿ ಮಡಿಕ್ಕೊಂಬಲಕ್ಕು?? ಆದಷ್ಟು ಬೇಗ ನಿನ್ನ ಮದುವೆ ಮಾಡಿ ಕೊಡೆಕ್ಕು..” ಹೇಳಿ ಶಾಂತ ಮಗಳತ್ರೆ ಒಂದೆರಡು ಮಾತು ಹೆಚ್ಚಿಗೇ ಹೇಳಿತ್ತು. ಅಮ್ಮ ಮಾತಾಡುದರ ಪೂರಾ ಕೇಳಿಗೊಂಡು ಕಿಟಕಿಂದ ಹೆರ ನೋಡಿಗೊಂಡಿತ್ತ ಅಂಜಲಿ,” ಅಲ್ಲಮ್ಮಾ…ಮಾವ ಎಂತದೋ ಹೇಳ್ತವು ಹೇಳಿ ನೀನುದೇ ಹೀಂಗೆ ಮಾತಾಡುದ?? ಎಲ್ಲಿ ಹೋದರೂ, ಆರತ್ರೆ ಮಾತಾಡ್ರುದೇ ಮಾತಿನ ಮದುವೆಯ ವಿಷಯಕ್ಕೆ ತಿರುಗ್ಸಿ ಮಡುಗುತ್ತವು. ಎನಗೆ ಈಗ ಕಲ್ತಾದ್ದಷ್ಟೆ..ಇನ್ನು ಕೆಲಸ ಹುಡ್ಕಿ ಎನ್ನ ಕಾಲ ಮೇಲೆ ಆನೇ ನಿಂಬಷ್ಟು ಸಮಯ ಆದರೂ ಕೊಡಿ..” ಹೇಳಿ ಬರಬರನೆ ಮಾತಾಡಿತ್ತು.ಇದರ ಎಲ್ಲಾ ಬಾಗಿಲಿನತ್ರಂದ ಕೇಳ್ಸಿಗೊಂಡ ಕೇಶವ ಮಗಳತ್ರೆ ಬಂದು,” ನೀನು ಕೆಲಸ ಹುಡ್ಕಿ ಮಾಡೆಕ್ಕಾದ ಸಾಧನೆ ಅಷ್ಟರಲ್ಲೇ ಇದ್ದು…ಅಲ್ಲ ಮಗಳೇ ನೀನೇ ರಜ ಯೋಚನೆ ಮಾಡು..ಕೂಸುಗಳ ಮನೆಲಿ ಮಡಿಕ್ಕೊಂಬದು, ಸೆರಗಿಲಿ ಕೆಂಡ ಕಟ್ಟಿಗೊಂಬದು ಎರಡೂ ಒಂದೇ…ನಾವೆಂತಕೆ ಸುಮ್ಮನೆ ನಾಕು ಜನರ ಬಾಯಿಗೆ ಆಹಾರ ಅಪ್ಪದು?? ಕಾಲವುದೇ ತುಂಬಾ ಕೆಟ್ಟಿದು. ಇಂದು ಇದ್ದ ಹಾಂಗೆ ನಾಳೆ ಇರ್ತಿಲ್ಲೆ..ಯಾವಗ ಎಂತಾಕ್ಕು ಹೇಳುದೂ ಭಾರೀ ಬಂಙವೇ..ವಾಸ್ತವ ನಮಗೆ ಪೂರಕ ಆಗಿಪ್ಪಲೂ ಸಾಕು, ಕೇಡಪ್ಪಲೂ ಸಾಕು…ನಾವದರ ಬೇಡಾಳಿ ನೂಕುಲೆಡಿಯ!! ಎಲ್ಲವನ್ನುದೆ ಸ್ವೀಕರ್ಸದ್ದೇ ವಿಧಿ ಇಲ್ಲೆನ್ನೇ…” ಹೇಳಿ ಕೇಶವ ಅಂಜಲಿಯ ತಲೆ ಉದ್ದಿದ. ಅಬ್ಬೆ- ಅಪ್ಪನ ಮಾತುಗ ಅಂಜಲಿಯ ಕಟ್ಟಿ ಹಾಕಿತ್ತು. ಮನಸ್ಸಿಲ್ಲದ್ರುದೇ ಮದುವೆಗೆ ಒಪ್ಪಿಗೊಂಬದು ಅಂಜಲಿಗೆ ಅನಿವಾರ್ಯ ಆತು. ಮಗಳು ಮದುವೆಗೆ ಒಪ್ಪಿಗೊಂಡತ್ತನ್ನೇ ಹೇಳಿ ಶಾಂತಂಗುದೇ, ಕೇಶವಂಗುದೇ ಮನಸ್ಸಿಂಗೆ ಸಮಾಧಾನ ಆತು.
ಆ  ದಿನ ಇರುಳಿಡೀ ಅಂಜಲಿಗೆ ಮನಸ್ಸಿಡೀ ಭಾರ ಆದ ಹಾಂಗೆ ಅನುಭವ. ಎಂತ ಮಾಡೆರೂ ಒರಕ್ಕು ಹತ್ತರಂಗೆ ಸುಳಿದಿತ್ತಿಲ್ಲೆ.ಹೊಡೆಚ್ಚಿ ಹೊಡೆಚ್ಚಿ ಇರುಳಿಡೀ ಕಳ್ದತ್ತು. ಯಾವಾಗ್ಳೂ ಗಂಟೆ ಎಂಟಾಗದ್ದೇ, ಹಸೆಂದ ಏಳದ್ದ ಅಂಜಲಿ ಇಂದು ಬೆಣ್ಚಿ ಅಪ್ಪ ಮೊದಲೇ ಎದ್ದಿತ್ತು.” ಎಂತ ಸುಬ್ಬಿಗೆ ಬೇಗ ಉದಿಯಾದ್ದು?? ಅಮ್ಮಂಗೆ ರಜ ಸಹಾಯ ಮಾಡುವಾಳಿ ಕಂಡತ್ತಾಳಿ!!” ಹೇಳಿ ಶಾಂತ ಕೊಂಡಾಟಲ್ಲಿ ಮಗಳ ಪ್ರಶ್ನಿಸಿದ್ದಕ್ಕೆ, ಬರೇ ಒಂದು ಭಾವರಹಿತ ನೆಗೆ ಅಂಜಲಿಯ ಉತ್ತರ ಆಗಿತ್ತು. ಶಾಂತಂಗೆ ಮಗಳ ಮನಸ್ಸು ಅರ್ಥ ಅಪ್ಪದರಲ್ಲಿ ತಡವಾಯ್ದಿಲ್ಲೆ.”ಅಂಜಲಿ…ನಿನಗೆ ನಿನ್ನೇಯೇ ಎಲ್ಲಾ ಅರ್ಥ ಮಾಡ್ಸಿ..” ಹೇಳಿ ಮುಗಿಶುದರೊಳ ಅಂಜಲಿ,” ಆನೆಂತಾರು ಹೇಳಿದೆನ ಈಗ??….ಸರಿ ಎಂತಾರು ಕೆಲಸ ಇದ್ದರೆ ಹೇಳು ಮಾಡ್ತೆ..ಅಂಬಗಾರು ಮನಸ್ಸಿಂಗೆ ರಜ ಸಮಾಧಾನ ಅಕ್ಕು..” ಹೇಳು ಶಾಂತಂಗೆ ನಾಟುವಾಂಗೆ ಮಾತಡಿತ್ತು. ಶಾಂತ ಆದರುದೆ ಪಾಪ ಎಂತ ಮಾಡುದು…ಹೆತ್ತಬ್ಬೆ ಆಗಿ ಅದರ ವಾದವುದೇ ಸರಿಯನ್ನೇ..ಹೆಚ್ಚಿಗೇ ಮಾತಾಡದ್ದೇ,” ಹೂಗಿನ ಬುಡಕ್ಕೆ ರಜ ನೀರು ಬಿಡು..ಅಷ್ಟೊತ್ತಿಂಗೆ ಎನಗೆ ದೋಸೆ ಎರೆದಕ್ಕು” ಹೇಳಿತ್ತು. ಅಂಜಲಿ ಅಮ್ಮ ಹೇಳಿದಾಂಗೆ ಹೂಗಿನ ಸೆಸಿಗೋಕ್ಕೆ ಪೈಪ್ಪು ಹಿಡಿವಲೆ ಸುರು ಮಾಡಿತ್ತು. ಅಂಬಗ ದೂರಂದ ಆರೋ ಸ್ಕೂಟರಿಲಿ ಈಚೊಡೆಂಗೆ ಬಪ್ಪದು ಕಂಡತ್ತು. ನೋಡೆರೆ ಬ್ರೋಕರ್ ಗೋಪಾಲಣ್ಣ! ಈ ಗೋಪಾಲಣ್ಣಂದೆ ಕೇಶವಂದೇ ಭಾರೀ ಆಪ್ತರು. ದೂರಲ್ಲಿ ಸಂಬಂಧಿಗಳುದೇ ಅಪ್ಪು. ನೀರಿನ ಪೈಪಿನ ಅಲ್ಲಿಯೇ ಕೆಳ ಹಾಕಿ ಅಂಜಲಿ,” ಹೋ…ಏನು ಬ್ರೋಕರ್ ಮಾವ..ಇಂದೆಂತ ಉದಿಯಾಯ್ಕಾರೆ ಇತ್ಲಗಿ ಬಂದದು??” ಹೇಳಿ ಆಶ್ಚರ್ಯಲ್ಲಿ ಕೇಳಿತ್ತು. ಸ್ಕೂಟರಿಂದ ಇಳ್ದು, ಒಂದು ಚೀಲವ ಕಿಂಕ್ಲೆಡೆಲಿ ಮಡಿಕ್ಕೊಂಡು,” ಒಳ್ಳೆದು ಕೂಸೇ…ವಿಷಯ ಇಪ್ಪದಕ್ಕೇ ಬಂದದು..ಬಾ..ಬಾ..ಒಳ ಬಾ.” ಹೇಳಿ ಗೋಪಾಲಣ್ಣ ರಜ ಕುತೂಹಲ ಬಪ್ಪ ಹಾಂಗೆ ಮಾತಾಡಿದ. ಅಂಜಲಿ ಬ್ರೋಕರ್ ಗೋಪಾಲಣ್ಣನ ಬೆನ್ನಾರೆ ಒಳ ಹೋತು. ಕೇಶವ ಗೋಪಾಲಣ್ಣನ ಸ್ವಾಗತಿಸಿದ. ಅಪ್ಪಂಗೆ ಬ್ರೋಕರ್ ಮಾವ ಬಪ್ಪದು ಮೊದಲೇ ನಿರೀಕ್ಷೆ ಇತ್ತು ಹೇಳಿ ಅಂಜಲಿಗೆ ಕೇಶವನ ನಡವಳಿಕೆ ನೋಡಿಯಪ್ಪಗ ಗೊಂತಾತು. ಸೋಫಾಲ್ಲಿ ಕೂದ ಗೋಪಾಲಣ್ಣ,”ಕೇಶವ ಆನು ನಿನ್ನೆ ಇರುಳು ಫೋನಿಲಿ ಹೇಳಿದ ಹಾಂಗೆ ಎನಗೆ ಇಂದು ಬೇರೆ ಕಡೆಂಗೆ ಹೋಪಲಿದ್ದು..ನಮ್ಮ ಅಂಜಲಿಯ ಮದುವೆ ವಿಷಯನ್ನೆ..ಹಾಂಗಾಗಿ ಬೇಗ ಬಂದದು..ಇದ ಮೂರು ಮಾಣಿಯಂಗಳ ಜಾತಕ ಫಟ ತೈಂದೆ.ಎಲ್ಲಾ ದೊಡ್ಡ ಕುಳ! ಹಾಂಗೆ ನಮ್ಮ ಒಪ್ಪಕ್ಕಂಗೆ ಆರೂ ಬೇಡಾಳಿ ಆದರೆ, ಎನ್ನ ಮಗ ಇದ್ದನ್ನೇ..” ಹೇಳಿ ಕಣ್ಣಿನ ಒಂದರಿ ಗಟ್ಟಿ ಮುಚ್ಚಿ ತೆಗದು ಅಂಜಲಿಯ ನೋಡಿ, ಮೂವತ್ತೆರಡು ಹಲ್ಲು ಬಿಟ್ಟು ನೆಗೆ ಮಾಡಿದ. ಅಂಜಲಿಗೆ ಗೋಪಾಲಣ್ಣನ ತಮಾಷೆ ದೊಡ್ಡ ವಿಷಯವೇ ಆಯ್ದಿಲ್ಲೆ..”ನಿನ್ನ ಜೀವನಲ್ಲಿ ಎಂತ ಆವ್ತ ಇದ್ದು ಹೇಳ್ತ ನಿರ್ಧಾರಕ್ಕೆ ಬಪ್ಪ ಮೋದಲೇ ಎಲ್ಲ ಬೇಗ ಬೇಗ ನಡೆದು ಹೋವ್ತಾ ಇದ್ದು..” ಹೇಳಿ ಅಂಜಲಿಯ ಮನಸ್ಸು ತಟ್ಟಿ ತಟ್ಟಿ ಹೇಳಿಗೊಂಡಿತ್ತು.
ಬ್ರೋಕರ್ ಗೋಪಾಲಣ್ಣ ತಂದ ಜಾತಕ ಫಟಲ್ಲಿ, ಕೇಶವಂಗೆ ಒಬ್ಬ ಮಾಣಿಯ ಭಾರೀ ಖುಷಿ ಆತು.ಆ ಮಾಣಿಗೆ ಸರ್ಕಾರಿ ಉದ್ಯೋಗ ಇತ್ತು. ಒಳ್ಳೇ ಸಂಬಳವುದೇ ಇದ್ದ ಕಾರಣ ಕೇಶವ ಆ ಮಾಣಿಗೇ ಮಗಳಿನ ಕೊಡೆಕ್ಕು ಹೇಳ್ತ  ನಿರ್ಧಾರಕ್ಕೆ ಬಂದ. ಶಾಂತಂಗುದೇ ಮಗಳಿಂಗುದೇ ಮಾಣಿಯ ಫಟ ನೋಡ್ಲೆ ಕೊಟ್ಟ. ಆದರೆ ಅವಕ್ಕೆ ಆಶ್ಚರ್ಯ ಆತು. ಮಾಣಿಗೆ ಒಳ್ಳೆ ಪ್ರಾಯ ಆದ ಹಾಂಗೆ ಕಂಡುಗೊಂಡಿತ್ತು.ಕೇಶವ,” ಮಾಣಿಗೆ ಪ್ರಾಯ ನಲುವತ್ತು ಕಳ್ತಡ..ಎಂತಾತು?? ಒಳ್ಳೆ ಕೆಲಸ..ಎಂತ ಊನವುದೇ ಇಲ್ಲೆ..ಅಂಜಲಿ ಇಲ್ಲಿಗಿಂತ‌ ಅಲ್ಲಿಯೇ ಖುಷಿಲಿ ಇಕ್ಕು..” ಹೇಳಿಯಪ್ಪದ್ದೆ ಶಾಂತ,” ಇಷ್ಟು ಒಳ್ಳೆ ಕೆಲಸ ಇದ್ದ ಮತ್ತೆ, ಆರುದೆ ಎಂತಕೆ ಕೂಸು ಕೊಟ್ಟಿದವೇಲ್ಲೆ?? ಎನಗೆಂತಕೋ ಅಮಸರ ಮಾಡುದು ಬೇಡಾಳಿ ಕಾಣ್ತು..” ಹೇಳಿತ್ತು. ಅಂಬಗ ಬ್ರೋಕರ್ ಗೋಪಾಲಣ್ಣ,”ಮಾಣಿಯ ಹೆಸರು, ಅರವಿಂದ ಹೇಳಿ. ಹಾಂಗೆ ಹೇಳುವಾಂಗಿಪ್ಪ ಸಮಸ್ಯೆ ಎಂತ ಇಲ್ಲೆ..ಇದು ಮಾತ್ರ ಎರಡ್ನೇ ಸಂಬಂಧ..ಮೊದಲಣ ಹೆಂಡತಿ ಸತ್ತಿದಡ..ಆಗಿಹೋದ್ದಕ್ಕೆ ಎಂತ ಮಾಡ್ಲೆ ಎಡಿತ್ತು? ಹುಗಿವಷ್ಟು ಆಸ್ತಿ ಇದ್ದು…ಎಂತ ಹೇಳ್ತೆ ಕೇಶವ..” ಹೇಳಿ ದೊಡ್ಡ ಶಾಕ್ ಕೊಟ್ಟ.ಕೇಶವ,” ನಿಂಗ ಹೇಳಿದ್ದು ನೂರಕ್ಕೆ ನೂರು ಸತ್ಯ…ಆಗಿ ಹೋದ್ದಕ್ಕೆ ಎಂತ ಮಾಡ್ಲೆ ಎಡಿಯ. ಒಟ್ಟಾರೆ ಆ ಮನೆಗೆ ಹೋಯ್ಕಾರೆ ನಮ್ಮ ಅಂಜಲಿ ಪುಣ್ಯ ಮಾಡಿದ್ದು..ಎಂಗೊಗೆ ಒಪ್ಪಿಗೆ ಇದ್ದು..” ಹೇಳಿ ಕೇಶವ ಭಾರೀ ಕೆಳ ಮಟ್ಟಕ್ಕೆ ಇಳ್ದ. ಮಗಳ ಜೀವನಕ್ಕಿಂತ ಪೈಸೆಯೇ ಕೇಶವಂಗೆ ಹೆಚ್ಚಾಗಿ ಹೋತು. ಬ್ರೋಕರ್ ಗೋಪಾಲಣ್ಣಂಗೆ ಮಾಣಿ ಕಡೆಯವು ಪೈಸೆ ಆಶೆ ತೋರ್ಸಿಕ್ಕಿ, ಎಲ್ಲಿಯಾರೂ ಸಂಬಂಧ ಮಾಡಿ ಕೋಡುವಾಂಗೆ ಕೇಳಿತ್ತಿದವು. ಆಪ್ತನ ಮಗಳಿನ ಮೃತ್ಯು ಕೂಪಕ್ಕೆ ತಳ್ಳುಲೆ ಗೋಪಾಲಣ್ಣಂದೆ ತಯಾರಿತ್ತಿದ. ಶಾಂತಂಗೆ ಅಡಕ್ಕತ್ತರಿಲಿ ಸಿಕ್ಕಿಹಾಕಿಗೊಂಡ ಪರಿಸ್ಥಿತಿ!! ಅಂಜಲಿಗೆ ಗಾಯದ ಮೇಲೆ ಉಪ್ಪು ಹಾಕಿದಾಂಗಾತು. ಯಾವುದೇ ಭಾವನೆ ಇಲ್ಲದ್ದೆ ಕಂಬದ ಹಾಂಗೆ ನಿಂದಿತ್ತು ಅಂಜಲಿ…

ಮುಂದುವರೆತ್ತು >>>>>

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

6 thoughts on “ಒಂದು ಪ್ರಕರಣದ ಸುತ್ತ, ಭಾಗ ೧-ರಮ್ಯ ನೆಕ್ಕರೆಕಾಡು

  1. ಕಥೆ ಒಳ್ಳೆದಾಗಿ ಬತ್ತಾ ಇದ್ದು. ಸಂಭಾಷಣೆ ಎಲ್ಲ ನೈಜವಾಗಿ ದ್ದು. ಕೇಶವನ ತೀರ್ಮಾನ ರಜ್ಜ ಗಡಿಬಿಡಿ ಆತೊ ಹೇಳಿ. ಎಂತದೇ ಇರಳಿ ಒಂದನೇ ಕಂತಿಲ್ಲೇ ಆಸಕ್ತಿ ಹುಟ್ಟುಸಿದ್ದು ಕಥೆ. ಚೆಂದಕೆ ಮುಂದುವರಿಯಲಿ.

  2. ಒಳ್ಳೇ ಲಾಯಿಕದ ಕುತೂಹಲಕಾರಿ ಕಥೆ,👌👌

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×