Latest posts by ವಿಜಯತ್ತೆ (see all)
- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಹಿಂದಾಣವರ ಶುದ್ಧ ಮುದ್ರಿಕೆ,(ಭಾಗ-1)
ಆನು ಪ್ರೈಮೆರಿ ಶಾಲೆ ಕಲಿಯುತ್ತಿದ್ದ ಕಾಲ.ಅದು ಅಜ್ಜನಮನೆಂದ. ಅಜ್ಜನಮನೆಲಿ ಮೈಲಿಗೆ ಕೋಲು ಹೇಳಿ ಇದ್ದತ್ತು . ಎಂತಾ…ಅದೆಂತ ಕೋಲಪ್ಪ!! ಹೇಳೆಡಿ. ಅದು ನಮ್ಮ ಅಟ್ಟುಸೆಂಡು ಬಕ್ಕಾ!? ಕೇಳೆಡಿ..ಅಲ್ಲ..ವಸ್ತ್ರ ಹಾಕಲೆ ಉಪಯೋಗುಸುವ ತಂತಿಗೆ ಬದಲಾಗಿ ಅಂಬಗ ಇದ್ದಿದ್ದದು ಬೆದುರಿನ ಸಪುರದ ನಯಾ ಕೋಲು. ಇನ್ನು ನಿಂಗಳ ಪ್ರಶ್ನೆ ಅದರ ಮುಟ್ಟಿರೆ ಮೈಲಿಗೆ ಅಕ್ಕೋ ಕೇಳ್ತಿ ಅಲ್ದಾ?. ಸರಿ..ಅದಲ್ಲಿ ಶಾಲೆಂದ ಸಂಜೆ ಬಂದಕೂಡ್ಳೇ ಅಥವಾ ಹೆರ ಪೇಟಗೆ ಹೋಗಿ ಬಂದವರ ಬಟ್ಟೆ ವಗೈರೆ (ತೊಳವಲೆ ಮದಲೆ ಹಾಕುವ ಕೋಲು).ಈಗ ಹೇಳಿದಾಂಗೆ ಹೆರ ಸಾರ್ವಜನಿಕರು ಸೇರುವ ಎಲ್ಲಿಗೇ ಹೋಗಲಿ. ಅಲ್ಲಿಗೋಪಗ ಹಾಕಿದ ಡ್ರೆಸ್ ಅಲ್ಲಿಂದ ಹಿಂದಿರುಗುವಗ ಅದು ಮೈಲಿಗೆ!!!. ಇದೇ ನೋಡಿ ಈಗ ಕೊರೋನಾ ಪಗರುವ ವಿಚಾರವೂ..ಹೆರಾಣವರ ಕೈಕುಲುಕ್ಕುವದಾಗಲೀ ಅಪ್ಪಿಹಿಡುದು ಸಂತೋಷವ್ಯಕ್ತ ಪಡಿಸುವದಾಗಲೀ ಆಗದ್ದ ವಿಚಾರ… ಹೆರಾಣವಕ್ಕೆಲ್ಲಾ ಎತ್ತರಂದ ಕೊಡೆಕು..ಕೈಮುಟ್ಟಿ ಪಗರುದಲ್ಲ…
ಸತ್ತ ಮನಗೆ ಹೋಗಿಕ್ಕಿ ಬಂದಕೂಡ್ಳೇ ತಲಗೆ ಮೈಗೆ ಮೀಯೆಕ್ಕು..ಅಲ್ಲದ್ರೆ ಅದು ದೊಡಾ..ಮೈಲಿಗೆ..ಈಗ ಹೇಳುವ ವಿಚಾರ ವೂ ಇದೇ..ಸತ್ತ ರಜ ಹೊತ್ತಿಲ್ಲಿಯೇ ಅದಕ್ಕೆ ನಿರೋಧಕ ಶಕ್ತಿ ಇಲ್ಲದ್ದೆ ರೋಗಾಣು ಅಂಟುತ್ತು…
ನೋಡಿ…..ಮದಲಾಣವು ಅದರ ವಿವರ್ಸೆಂಡು ಕೂರದ್ದೆ ಆಗ ಹೇಳಿ ಅಷ್ಟೇ ಹೇಳಿದವು…
~~~ಲೇ- ವಿಜಯಾಸುಬ್ರಹ್ಮಣ್ಯ.