Oppanna.com

  ಹಿಂದಾಣವರ ಶುದ್ಧಮುದ್ರಿಕೆ-(ಭಾಗ-3)

ಬರದೋರು :   ವಿಜಯತ್ತೆ    on   28/05/2020    0 ಒಪ್ಪಂಗೊ

  ಹಿಂದಾಣವರ ಶುದ್ಧಮುದ್ರಿಕೆ-(ಭಾಗ-3)
ಹೆರಗಿದ್ದ ಮೈಲಿಗೆ
ಹೆಂಗಳೆಯರ ಸಂತಾನಕ್ಕೆ ಸಾಧಾರಣವಾಗಿ12 ವರ್ಷಂದ 14 ,15 ವರ್ಷದ ಒಳ ಋತುಚಕ್ರ ಸುರುವಾವುತ್ತು.ಆದರೆ…ಇತ್ತೀಚೆಗೆ 8ವರ್ಷಕ್ಕೇ ಸುರುವಾವುತ್ತು ಕೆಲವು!. ಅದು ಈಗಿನ ಆಹಾರಂದಾಗಿ ಹೇಳಿ ಕೆಲವು ಜನರ ಅನಿಸಿಕೆ!!.  ಏನೇ ಇರಲಿ ,ಪಾಪ…,ಆ ಎಳೆ ಪ್ರಾಯಲ್ಲಿ ಅವಕ್ಕೆ ಕಷ್ಟವೂ ಅಪ್ಪು.ನಾಲ್ಕನೇ ತರಗತಿಲಿಪ್ಪಗಳೇ ಋತುಚಕ್ರ ಸುರುವಪ್ಪ ದೃಷ್ಟಾಂತ ಆನು ಇತ್ತೀಚೆಗೆ ಶಾಲೆಲಿ ಕಂಡಿದೆ..ಕಿವಿಮಾತು ಹೇಳಿದ್ದೆ.ಅದಿರಳಿ.
ಈ  ಲಾಗಾಯ್ತಿಂದ ಆರೋಗ್ಯವಂತರಿಂಗೆ ಪ್ರತಿ ತಿಂಗಳು ಆದರೆ ಜೀವನದ ಕಾಲಘಟ್ಟಲ್ಲಿ ವ್ಯತ್ಯಾಸ (ಗರ್ಭಿಣಿ ವಗೈರೆ ಸಮೆಲಿ ) ಆವತ್ತು.
ಈಗ ಆ ವಿಷಯದ ಮೈಲಿಗೆ ವಿಚಾರಕ್ಕೆ ಬಪ್ಪೊಂ.
ಒಳಾಂದ ಹೆರಬಂದು ಬೇರೆ ಕೂರೆಕ್ಕು , ದೂರ ಮನುಗೆಕ್ಕು.ಅಡಿಗೆಒಳ, ದೇವರೊಳ ಅಲ್ಲದ್ದೆ ಒಳಾಣ ಸುತ್ತಿನ ಕೋಣೆಗೆ ಬಪ್ಪಲಿಲ್ಲೆ!!.ಅವಕ್ಕೆ ಸುತ್ತಲೆ, ಮನುಗಲೆ ಬೇರೆ ವಸ್ತ್ರ(ಮನುಗಲೆ ಕೊಟ್ಟದಕ್ಕೆ ನಿರ್ಧಿಷ್ಟ ಹೆಸರು *ಹಕ್ಕೆ*).
ಅವಕ್ಕೆ ಆಸರಿಂಗೆ, ಆಹಾರ  ಬೇರೆಯೇ ಕೂರ್ಸಿ ಕೊಡೆಕು.
ಆ ಎಂಜಲಿನ ಗೋಮಯ ಹಾಕಿ ಎರಡೆರಡು ಸರ್ತಿ ಉದ್ದಿ ತೆಗೆಕು!!!.ಮೂರು ಇರುಳು ಕಳುದು ನಾಲ್ಕನೇ ದಿನ  ಉದಿಯಪ್ಪಗ ಅವಕ್ಕೆ ಹೆರಿ ಹೆಮ್ಮಕ್ಕೊ  ಎಣ್ಣೆಕೊಡೆಕು.ಆ ಎಣ್ಣೆಯ ಅಂಗೈಲಿ ಬೇಡಿಗೊಂಡು.ಎರಡೂ ಕಾಲಿನ ಹೆಬ್ಬೆರಳಿನ ಬುಡಲ್ಲಿ ಭೂದೇವಿಗೆ ಮುಟ್ಟುಸಿಕ್ಕಿ  ಅದರ ತನ್ನ ಹೊಕ್ಕುಳಿಂಗೆ ಮುಟ್ಟುಸೆಕ್ಕು. ಮತ್ತೆ ಎಣ್ಣೆ ಬೇಡಿ; ತಲೆ,ಮೋರೆ , ಕೈ,ಕಾಲು ಇತರ ಲೇಪಮಾಡಿಕ್ಕಿ ತಲಗೆ ಮೈಗೆ ಮಿಂದು ಚೆಂಡಿ ಹಿಂಡಿಗೊಂಡು ಒಳಬಂದು ಒಣವಸ್ತ್ರ ಸುತ್ತುವದು..
ಮತ್ತೆ ಹೊಸ್ತಿಲಿಂಗೆ ಹೊಡಾಡುವದು ಪ್ರಾಮುಖ್ಯ!!!.ನಾಲ್ಕನೇ ದಿನ ಒಳಬಪ್ಪಲಕ್ಕಷ್ಟೆ.
ಆದರೆ ಮಾರಣೆದಿನ ಐನೀರು ಮೀಯದ್ದೆ ಶುದ್ಧ ಆಗ. ಪೂಜಗೆ ಹೂ ಕೊಯಿವಲಾಗ‌, ದೇವಸ್ಥಾನಕ್ಕೆ ಪ್ರವೇಶ ಏಳುದಿನ ಕಳಿಯೆಕ್ಕು..
ಋತು ಸಮೆಲಿ ಅವು ಎಂತದೂ ಕೆಲಸ ಮಾಡ್ಳಾಗ ನಿಶ್ಶಕ್ತಿ.ರೋಗ ನಿರೋಧ ಶಕ್ತಿ ಇಲ್ಲೆ ಹೇಳಿ ಲೆಕ್ಕ.,ಆದರೆ ಕುಟುಂಬ ಸಣ್ಣಾದಾಂಗೆ ಹೆರಾಣ ಕೆಲಸ ಮಾಡ್ಳಕ್ಕೂಳಿ ಆತು.ಇತ್ತೀಚೆಗೆ ಕೆಲವು ವರ್ಷಂದ ದೂರಕೂಬ್ಬ ಸಂಪ್ರದಾಯವೇ ಮಾಯ ಆತು!.
ಆದರೆ ಹೆಮ್ಮಕ್ಕೊ ಈ ಸಮೆಲಿ ಕೆಲಸ ಮಾಡಿ ಅಧ್ವಾನ ಆದರೆ ಬೇರೆ ರೋಗಕ್ಕೆ ಕಾರಣ ಹೇಳಿ ಆಯರ್ವೇದ ತಜ್ಞರ ಅಭಿಪ್ರಾಯ ಇಪ್ಪದಪ್ಪು..
           -+-+-++-+-+
(ಲೇ~ವಿಜಯಾಸುಬ್ರಹ್ಮಣ್ಯ,ಕುಂಬಳೆ)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×