Oppanna.com

ಹಿಂದಾಣವರ ಶುದ್ಧಮುದ್ರಿಕೆ ಭಾಗ-4

ಬರದೋರು :   ವಿಜಯತ್ತೆ    on   28/05/2020    1 ಒಪ್ಪಂಗೊ

ಹಿಂದಾಣವರ ಶುದ್ಧಮುದ್ರಿಕೆ (ಭಾಗ-4)
ಬಾಳಂತಿಯ ಮೈಲಿಗೆ
ನಮ್ಮ ಹವ್ಯಕರಲ್ಲಿ ಕೆಲಾವು ಮೈಲಿಗಗೊ.ಅದರಲ್ಲಿ ಪೇಟೆ ಮೈಲಿಗೆ, ಕೆಲಸಿಮೈಲಿಗೆ, ಹೆರಗಿದ್ದಮೈಲಿಗೆ ನೋಡಿತ್ತು ನಾವು. ಇನ್ನು ಬಾಳಂತಿ(ಬಾಣಂತಿ) ಮೈಲಿಗೆ ಬಗ್ಗೆ ಒಂದಿಷ್ಟು..
ಸಾದಾರಣ ಹತ್ತೈವತ್ತು ವರ್ಷ ಹಿಂದೆ ಮನೆಲೇ ಹೆರಿಗೆ ಅಪ್ಪದು. ಅನಿವಾರ್ಯ ಆದರೆ ಮಾತ್ರ ಮನೆಲಿದ್ದ ಗೆಂಡುಮಕ್ಕೊ ಹೋಗಿ ಡಾಕ್ಟ್ರ(ದಾಕುದಾರ)ಕರಕ್ಕೊಂಡು ಬಪ್ಪದು!.ಕೆಲವುಸರ್ತಿ ಈ ಡಾಕ್ಟ್ರು ಎತ್ತುವಗ ಬಸರಿಯ ಜೀವ ಹೋಪದೂ ಇದ್ದು.ಹೆತ್ತು ಸಾವ ಉದಾಹರಣೆಯೂ ಇದ್ದು.ಬಾಳಂತಿ ಅತ್ಲಾಗಿ ,ಮಗು ಇತ್ಲಾಗಿ ಆದ್ದು ಹಿಳ್ಳೆಯ ಅಜ್ಜಿಯಕ್ಕೊ ಸಾಂಕಿ ದೊಡ್ಡ ಮಾಡಿದ ದೃಷ್ಟಾಂತ ಎಷ್ಟೋ ಇದ್ದು.
ಇನ್ನೀಗ ಆ ಬಗ್ಗೆ ಶುದ್ಧಮುದ್ರಿಕೆ ನೋಡುವೊ°.ಮದಲಾಣ ಮನಗಳ ಉಗ್ರಾಣಂಗೊ(ಕೋಣೆ) ಕಸ್ತಲೆಯೆ. ಅದರಲ್ಲೂ ಹೆರಿಗೆ,ಬಾಣಂತಿ ಕೋಣೆಲ್ಲ ಮತ್ತೂ ಕಸ್ತಲೆ ಇಕ್ಕು. ಬಾಳಂತಿಗೆ ಸಂಬಂಧ ಪಟ್ಟವು ಮಾತ್ರ ಅಲ್ಲಿಗೆ ಹೋಪಲೆ ಬಿಡುಗಷ್ಟೆ. ಹಿಳ್ಳೆಯ ಹತ್ತು ದಿನದ ಎಡೆಲಿ ಬೇರೆವಕ್ಕೆ ಕರಕ್ಕೊಂಬಲೆ ಅವಕಾಶ ಇಲ್ಲೆ!.ನೋಡುತ್ತರೂ ದೂರಂದ. ಹಿಳ್ಳೆಯ ಅಡಕ್ಕೆಮರದ ಹಾಳೆಲಿ ವಸ್ತ್ರಹಾಕಿ
ಮನುಷುವದು!.ಆ ವಸ್ತ್ರವೋ ತೊಳದು ಕ್ಲೀನಾಗಿರೆಕು.ಬಾಳಂತಿ ಅಥವಾ ಮೀಶುವ ಹೆಣ್ಣು ಬಿಟ್ಟು  ಅತೀ ಅಗತ್ಯದವು ಕರಕ್ಕೊಂಬಗ ಬರೇ ಹಾಳೆಲಿ ಮನುಷಿ ಪಗರುವದು!.
ಬಾಣಂತಿ ತಲೆದಿಂಬಿನ ಅಡಿಲಿ ಒಂದು ಪೀಶಾಕತ್ತಿ ಇರೆಕು. ಅದು ಮೀವಲೆ ಅಥವಾ ದೇಹಬಾಧೆ ತೀರ್ಸಲೆ ಹೆರ ಹೋವುತ್ತರೆ ಆ ಪೀಶಕತ್ತಿ ಬಾಣಂತಿ ಕೈಲಿರೆಕು.ಹಾಂಗೇ ಕಾಸರ್ಕಾನ ಕಣೆ,ಕಹಿಬೇವಿನಕಣೆಯ ಬಾಣಂತಿ ಮನುಗುವ ಕೋಣೆ+ಅದು ಮೀವ ಬೆಶಿನೀರಕೊಟ್ಟಗೆಲಿ ಕಟ್ಟುಗು.( ಈಗಾಣ ಭಾಷೆಲಿ ಹೇಳ್ತರೆ ಇದು ವೈರಸ್ ನಿರೋಧಕ).
*ಆಹಾರ*:-ಹೆತ್ತಪ್ಪಗ ಕಾಳುಜೀರಿಗೆ ಕಷಾಯ. ಅದು ಹತ್ತು ದಿನವೂ ಮುಂದುವರಿಗು.ಮತ್ತೆ ದಶಮೂಲಾರಿಷ್ಠ.ಊಟಕ್ಕೆ ದನದ ಮಜ್ಜಿಗೆ+ನಿಂಬೆಹುಳಿ ಉಪ್ಪಿನಕಾಯಿ. ಎಡೆ ಎಡೆಲಿ ಆಸರಪ್ಪಗ ನೀರು ಕುಡಿವದು ನಿಷಿದ್ಧ..ಎಡೆಹೊತ್ತಿಲ್ಲಿ ಒಂದೆರಡು ಸರ್ತಿ ಕಡುಕಾಫಿ.ಹತ್ತು ದಿನ ಕಳುದಮೇಲೆ ದನದಹಾಲು+ತುಪ್ಪ.ಸೇವನೆ.
ಹತ್ತನೆದಿನ ಬಾಣಂತಿಯ, ಹೆರ ಇದ್ದಇತರ ಎಲ್ಲಾ ಬಟ್ಟೆ-ಬರೆ ತೊಳದು ಹಾಕೆಕ್ಕು ಮಡಿವಾಳ್ತಿ ಬಂದು.
ಹನ್ನೊಂದನೆದಿನ ಪುಣ್ಯಾಯ ಪುರೋಹಿತರು ಬಂದು ಕ್ರಿಯೆ ಮಾಡ್ಸುಗು.ಅಂದು ಮನೆವಲ್ಲದ್ದೆ ಹೆರಾಣ ಬ್ರಾಹ್ಮಣ ಬಂದು ಪಂಚಗವ್ಯ ಕೂಡಿ ತಳಿಯೆಕ್ಕು.ಮಗುವಿನ ಅಬ್ಬೆ+ಅಪ್ಪ ಕುಡಿಯೆಕ್ಕು .ಮನೆಯ ಎಲ್ಲಾ ಕೋಣಗೆ ತಳಿಯೆಕ್ಕು.
ಅಂದು ಮಗುವಿಂಗೆ ಮುಂಜಿ ಕಟ್ಟುವದು ಅಪ್ಪ°. ಮಗುವಿನ ಅಮ್ಮ; ಬಂದವಕ್ಕೆಲ್ಲ ಕೊಟ್ಟು ಹೊಡಾಡುವದು , ಮಗುವಿಂಗೆ ಜೇನು ನಕ್ಕುಸಿಕ್ಕಿ ಪೈಸೆ ಕೈಲಿ ಮಡಗಿಕ್ಕಿ ;ಬಂದವೆಲ್ಲರೂ ಅವರವರ ಬಲ ಪವಿತ್ರ ಬೆರಳಿನ ತೊಳದು ಕ್ಲೀನ್ ಮಾಡಿ ಆ ಬೆರಳಿಲ್ಲಿ ಮಗುವಿಂಗೆ ಚೂರು ಜೇನು ನಕ್ಕುಸುವದು. ಆರ ಕೈಲಿ ಅಮೃತ ಇಕ್ಕು ಗೊಂತಿಲ್ಲೇಡ.ಅದು ಮಗುವಿಂಗೆ ಸಿಕ್ಕೇಕ್ಕಡ. ಪುಣ್ಯಾಯ ದಿನ ಮಾತ್ರ ಮಾಡಿದ  ತಾಳು,ಮೇಲಾರ ,ಪಾಯಸ ಉಂಬಲೆ ಬಾಣಂತಿಗೆ ರಿಯಾಯಿತಿ ಇದ್ದು..ಹೊಟ್ಟೆ ತುಂಬಾ ಉಂಬಲಿಲ್ಲೆ!.
*ತೊಟ್ಳಿಲ್ಲಿ ಮನುಷುವ ಶಾಸ್ತ್ರ*
ಹನ್ನೆರಡನೆಯ ದಿನ ಹಿಳ್ಳೆಯ ತೊಟ್ಳಿಲ್ಲಿ ಮನುಷುವದು. ಅಂದು ದೇವರಪೂಜೆ ,ದೇವರಪ್ರಸಾದ ಮಗುವಿಂಗೆ ಹಾಕಿಕ್ಕಿ ,ತೊಟ್ಳಿಲ್ಲಿ ಮನುಷುದು. ಮದಾಲು ಎರಡು ಸೊಲಿಯದ್ದ ತೆಂಗಿನಕಾಯಿ ಮಡಗಿ ತೂಗೆಕ್ಕು. ಮತ್ತೆ ಮಗುವಿನ ಎರಡೆರಡು ಜೆನಾಗಿ ಹೆಮ್ಮಕ್ಕೊ ತೂಗುವದು.
ಹದಿನಾರು ದಿನಮುಷ್ಟ
 ಬಾಣಂತಿ, ಮಗುವಿನ ಸಹಿತ ಹೆರಾಣ ಚಾವಡಿ,ವಗೈರೆ ಬಪ್ಪಲಿಲ್ಲೆ.ಕೂಸಾದರೆ 39 ದಿನಲ್ಲಿ, ಮಾಣಿಯಾದರೆ 41 ದಿನಲ್ಲಿ ಹಸೆಮಡುಸಿ ಹತ್ತರಾಣ ದೇವಸ್ಥಾನಕ್ಕೆ ಕರಕ್ಕೊಂಡು ಹೋಪ ಕಟ್ಳೆ.(ಅದಕ್ಕೆ ಮನೆಪಗರುವದು ಹೇಳ್ತವು)
ಮತ್ತೆ ಅಪ್ಪನಮನೆವು ಬಂದು ಕರಕ್ಕೊಂಡು ಹೋಪದು.ಇದಕ್ಕೆ ಹೆತ್ತೆದ್ದು ಹೋಪದು ಹೇಳ್ತವು.
(ವಿ:ಸೂ-ಎಂಗೊ 7 ಜೆನಮಕ್ಕೊ ಅಬ್ಬೆಪ್ಪಂಗೆ.ಸಣ್ಣತಂಗೆ ಎನ್ನಂದ 17 ವರ್ಷಕ್ಕೆ ಸಣ್ಣಾದರೆ; ಸಣ್ಣ ತಮ್ಮ20 ವರ್ಷ ಕ್ಕೆ ಸಣ್ಣ.ಎನ್ನ ಮದುವೆಪ್ಪಗ ಸಣ್ಣತಮ್ಮಂಗೆ 8 ತಿಂಗಳು. ಈ ಸಮೆಲಿ ಆನು ಮಾಡೆಕ್ಕಾದ ಅಬ್ಬೆಯ ಸೇವೆಮಾಡಿದ ಅನುಭವಲ್ಲಿ ಬರದೆ)
        ~~~~~~~~~
(ಲೇ-ವಿಜಯಾಸುಬ್ರಹ್ಮಣ್ಯ,ಕುಂಬಳೆ)

One thought on “ಹಿಂದಾಣವರ ಶುದ್ಧಮುದ್ರಿಕೆ ಭಾಗ-4

  1. ಮಡಿ ಮೈಲಿಗೆ, ನಮ್ಮ ಕ್ರಮಂಗಳ ಬಗೆಲಿ ವಿಜಯಕ್ಕನ ಅನುಭವದ ಮಾತುಗೊ ಈ ಕೊರೊನಾದ ಕಾಲಲ್ಲಿ ನಿಜ ಹೇಳಿ ಕಾಣುತ್ತು. ಶುದ್ಧದ ಬಗ್ಗೆ ಶುದ್ದಿಯ ಕೊಡ್ತಾ ಇಪ್ಪ ವಿಜಯಕ್ಕಂಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×