- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಕೊಯಿಪ್ಪಾಡಿ ಗ್ರಾಮಲ್ಲಿ ಇಪ್ಪ ಒಂದು ಪುಟ್ಟ ಊರು ಕಾನ. ಇಲ್ಲಿ ಅಡಕ್ಕೆತೋಟದ ಮಧ್ಯಲ್ಲಿ ಧೂಮಾವತಿ ಸ್ಥಾನ. ಮುಂದುಹೊಡೆ ಸರೋವರ, ಹಿಂದಾಣ್ಹೊಡೆ ಹರಿವ ತೋಡು.
ಶಂಕರನಾರಾಯಣ ಮಠ: ಧೂಮಾವತಿ ಸ್ಥಾನಕ್ಕೆ ಕೂಗಳತೆ ದೂರಲ್ಲಿ ತೋಟಂದ ಮೇಲಣಹೊಡೆಯೇ ಮಠ. ಮೇಗಣ ಎರಡು ಕ್ಷೇತ್ರಂಗಳೂ ಒಂದಕ್ಕೊಂದು ಪೂರಕವಾಗಿದ್ದು. ಧೂಮಾವತಿ ದೈವದ ವಾರ್ಷಿಕೋತ್ಸವ ಸಂದರ್ಭಲ್ಲಿ ಭೂತಕೋಲ ನಡೆತ್ತು. ಭೂತದ ನೈವೇದ್ಯ ಬ್ರಾಹ್ಮಣ ಭೋಜನಕ್ಕೆ ನಿಷಿದ್ಧ ಹೇಳಿಯೊಂಡು ಊರ ಹತ್ತು ಸಮಸ್ತರು ಸೇರಿ ಶಂಕರನಾರಾಯಣ ದೇವರ ಸಾನಿಧ್ಯ ಪ್ರತಿಷ್ಠಾಪನೆ ಮಾಡ್ಲೆ ಕಾರಣ ವಾತಡ.
ವಾರ್ಷಿಕೋತ್ಸವ: ಹೊಸ್ತಿನ ದೇವಕಾರ್ಯ ಹೇಳಿ ಹೆಸರಿಪ್ಪ ಈ ಉತ್ಸವ, ಮಕರ ಸಂಕ್ರಮಣ ಕಳದ ಮತ್ತೆ ಯುಗಾದಿಗೆ ಮೊದಲು ಆರ್ದ್ರಾ ನಕ್ಷತ್ರಕ್ಕೆ ದೇವಕಾರ್ಯವನ್ನೂ, ಮರುದಿನ ಭೂತಕೋಲವನ್ನೂ ಮಾಡುವ ವಾಡಿಕೆ . ಪುಟ್ಟ ಊರಾದ ‘ಕಾನ’ದ ಬಯಲಿಲ್ಲಿ ಹವ್ಯಕಬ್ರಾಹ್ಮಣರೇ ನೆಲೆಗೊಂಡಿದ್ದು ಸಪ್ತಗೋತ್ರದವೂ ಇಲ್ಲಿ ವಾಸ್ತವ್ಯ ಇಪ್ಪದೊಂದು ವಿಶೇಷತೆ. ಈ ಬ್ರಾಹ್ಮಣರಲ್ಲಿ ಹನ್ನೆರಡು ವರ್ಗ ಹೇಳಿ ವಿಂಗಡಣೆ ಇದ್ದು. ಇವು ಸರದಿಯ ಹಾಂಗೆ ಆಡಳಿತ ನಡೆಸಿಕೊಂಡು ಬಪ್ಪದು ಸನಾತನ ವಾಡಿಕೆ. ಆದರೆ ವಾರ್ಷಿಕೋತ್ಸವದ ಊಟ (ಸಾಧಾರಣ ೧೦೦೦ಕ್ಕೂ ಮೇಲ್ಪಟ್ಟು ಸೇರುವ ಜನ)ದ ಖರ್ಚಿಂಗೆ ಪ್ರತಿಯೊಂದು ಮನೆಯವೂ ಅವರವರ ಕಾಣಿಕೆ ಒಪ್ಪುಸಲೇ ಬೇಕು. ಇದರ ಒಪ್ಪುಸದ್ದೆ ಇರ್ತವೂ ಇಲ್ಲೆ.
ನಿತ್ಯ + ನೈಮಿತ್ತಿಕ ಸೇವೆಃ ಪ್ರತಿ ಸಂಕ್ರಮಣದ ದಿನ ಮುಸ್ಸಂಜೆ ಹೊತ್ತಿಂಗೆ ತಂಬಿಲ (ತಂಬಿಲ ಹೇದರೆ ಇಲ್ಲಿ ಪೂಜೆ + ಮಂಗಳಾರತಿ) ಸೇವೆ. ಹಾಂಗೇ ಹಬ್ಬದ ಪಾಡ್ಯ, ಪತ್ತನಾಜೆ, ಪರ್ವದಿನಂಗಳಲ್ಲಿಯೂ ನಡೆತ್ತು. ಹೀಂಗೆ ವಿಶೇಷ ಪೂಜೆ ಅಲ್ಲದ್ದೆ ನಿತ್ಯವೂ ದೇವಿ ಸನ್ನಿಧಿಲಿ ಹಾಂಗೂ ಮಠಲ್ಲಿ ಪಾಯಸದೊಟ್ಟಿಂಗೆ ನೈವೇದ್ಯ ಮಾಡಿ ಮಂಗಳಾರತಿ ಆವುತ್ತು.
ಅರ್ಚಕರುಃ ಇಲ್ಲಿ ಪೂಜೆ ಮಾಡಿಯೊಂಡು ಬತ್ತವು ನಾಣಿತ್ತಿಲು ಮನೆತನದವು. ಪ್ರಸ್ತುತ ಶ್ರೀಯುತ ಮಹಾಲಿಂಗ ಭಟ್ಟರು ನಾಣಿತ್ತಿಲು.
ಐತಿಹ್ಯಃ ಪೂರ್ವಕಾಲಲ್ಲಿ ಎರಡು ಗೋತ್ರಂಗಳ ಹಿರಿಯವು (ಹಿಳ್ಳೆಜ್ಜನ ಮನೆ, ವಿಶ್ವಾಮಿತ್ರ ಗೋತ್ರ + ಕಿಟ್ಟಜ್ಜನ ಮನೆ, ವಸಿಷ್ಟ ಗೋತ್ರ) ನಮ್ಮೂರಲ್ಲಿ ಒಂದು ಧರ್ಮದೈವ ಸಾನಿಧ್ಯ ಪ್ರತಿಷ್ಠಾಪಿಸೆಕು ಹೇಳಿ ತೀರ್ಮಾನಿಸಿ ಕೋಟೆಕ್ಕಾರು ಬಲ್ಯಾಯ (ತುಳು ಬ್ರಾಹ್ಮಣರು) ವಂಶಸ್ಥರ ಮನೆಗೆ ಹೋದವು. ಆ ಮನೆಯ ಹಿರಿಯವರತ್ರೆ ತಮ್ಮ ಇಷ್ಟಾರ್ಥವ ಹೇಳಿಯೊಂಡು ಮನವಿ ಮಾಡಿದವು. ಆ ಹಿರಿಯವು ತಮ್ಮ ಮಂತ್ರ ತಂತ್ರ ವಿಧಿ ವಿಧಾನಪೂರ್ವಕ ದೈವೀಶಕ್ತಿಯ ಮಣ್ಣಿನ ಕೊಡಲ್ಲಿ ಆಹ್ವಾನಿಸಿ ಭದ್ರಪಡಿಸಿ ಹೇಳಿದವು “ಈ ಕೊಡವ ನಿಂಗ ಎಲ್ಲಿ ಮಡಗಲೆ ತೀರ್ಮಾನ ಮಾಡಿದ್ದೀರೋ ಅಲ್ಲೇ ಮಡಗೆಕು” ಇದರ ಒತ್ತಿ ಹೇಳಿದವು. ಆ ಅಜ್ಜಂದರು ಕೊಡ ತೆಕ್ಕೊಂಡು ನೆಡಕ್ಕೊಂಡು ಬಪ್ಪಾಗ ಕಾನದ ಬಯಲಿನ ಆ ಕೆರೆ ಹತ್ರಂಗೆ ಎತ್ತುವಾಗ ಕತ್ತೆಲಾತನ್ನೆ, ಸಂಧ್ಯಾವಂದನೆ ಮಾಡೆಕನ್ನೇ ಹೇದೊಂಡು ಒಂದು ಕಲ್ಲಿನ ಮೇಗೆ ಮಡಗಿ ಅವರ ಕೈಂಕರ್ಯವ ತೀರ್ಸಿದವು. ಅದರ ಮುಗುಶಿಕ್ಕಿ ಬಂದು ಕೊಡ ನೆಗ್ಗುವಾಗ ಕೊಡ ಬಾರದ್ದೆ ಅಲ್ಲೇ ಒಡದತ್ತಡ. ಹಾಂಗಾಗಿ ಆ ಸ್ಥಳಲ್ಲೇ ಗುಡಿ ಕಟ್ಟಿದವಡ. ಅದೇ ಕರಿಕಲ್ಲಿಂಗೇ ಈಗಲೂ ‘ದರ್ಪಣ’ ಬಿಂಬವಾಗಿ ಪೂಜೆ ಆವುತ್ತಾ ಇದ್ದು.
ವಿಶೇಷತೆ : ಬ್ರಾಹ್ಮಣರೇ ಇಲ್ಲಿ ಬೆಳ್ಚಪ್ಪಾಡರು ಆಗಿಯೊಂಡು ಇಪ್ಪದು ಅಪೂರ್ವ ವಿಶೇಷತೆ. ತಂಬಿಲ, ವಾರ್ಷಿಕೋತ್ಸವ, ಭೂತಕೋಲ ಮೊದಲಾದ ಸೇವಾ ಸಮಯಲ್ಲಿ ಬೆಳ್ಚಪ್ಪಾಡರಿಂಗೆ ದರ್ಶನ ಹಿಡಿವ ರೂಢಿ. ದರ್ಶನ ಪಾತ್ರಿಗ ತುಳುವಲ್ಲೇ ಹೇಳ್ಸುವ ಕ್ರಮ. ಕಾರಣ ಇದು ತುಳು ಬ್ರಾಹ್ಮಣರಲ್ಲಿಂದ ತಂದ ದೈವೀ ಶಕ್ತಿ.
ಭೂತ ಕಟ್ಟುವವು ಹೊಲೆಯರು, ಇವಕ್ಕೆ ‘ಕೋಪಾಳರು’ ಹೇಳ್ತವು.
ಪೂರ್ವ ಕಾಲಂದಲೇ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಗುರುಗಳ ಸವಾರಿ ಕುಂಬಳೆ ಸೀಮೆಗೆ ಬಂದರೆ ‘ಮೊಕ್ಕಾಂ’ ಮಾಡುದು ಈ ಕ್ಷೇತ್ರಲ್ಲಿ. ಹಿಂದಣ ಕಾಲಲ್ಲಿ ಈ ಊರ ಜನಂಗೊ ನ್ಯಾಯ ತೀರ್ಮಾನ ಮಾಡ್ಲೆ ಇಲ್ಲಿಗೆ ಬಪ್ಪ ಕ್ರಮ. ಜೀವನದ ಜಟಿಲ ಸಮಸ್ಯೆ, ಗುಣಕಾಣದ್ದ ರೋಗ ರುಜಿನ, ಸಂತತಿ ವಗೈರೆಗೆಲ್ಲ ಹರಕೆ ಹೇಳಿಯೊಂಡು ಪರಿಹಾರ ಕಂಡುಕೊಳ್ಳುತ್ತಾ ಇಪ್ಪದು ಇಲ್ಲಿಯ ಕಾರಣಿಕ. ಈ ರೀತಿಲಿ ಹಲವಾರು ಉದಾಹರಣೆ ನಿದರ್ಶನಂಗೊ ಇದ್ದು.
ವಿ. ಸೂ.: ಈ ಸರ್ತಿ ಯಕ್ಷಗಾನ ಬಯಲಾಟ ಇದ್ದಡ.
*******************
VERY GOOD INFORMATION. THUMBA LAYKA AAYIDU BARADDU.THANKS., VIJAYAKKA
ಕೋಟೆಕ್ಕಾರು ಬಲ್ಯಾಯ (ತುಳು ಬ್ರಾಹ್ಮಣರು) emballi Ulalu Kadmannaya antha odeku. Karana eegalu a dhumavathiya ondu amsha ee Ulalu maneyalli iddu. Mathu Shankaranarayana devaru matharu allade Shedikavu devara ondu amsha. Ivu eraduve Kadmannaya tharavadina mane devaru mathu daiva. Artlcle chennagiddu, thumba thanks!
ಎನ್ನ ಮನೆ ದೇವರು ….
Daivangala Parichay Layakayidu.
ನಿಂಗಳೆಲ್ಲರ ಅಭಿಮಾನಕ್ಕೆ ಧನ್ಯವಾದಂಗೊ ಹರೇರಾಮ-
ಬರೆದ್ದು ಸಂಕ್ಷಿಪ್ತವಾಗಿಯೂ ಲಾಯ್ಕ ಅಯಿದು.
ಹರೇ ರಾಮ,
ಆ೦ಗ್ಲ ಭಾಷೆಲಿಪ್ಪ ನುಡಿಗಟ್ಟು “ sweet, brief & to the point ” ನೆ೦ಪಾತು. ಹೇಳೆಕಾದ್ದರ ಎಲ್ಲವನ್ನುದೆ ಹೇಳಿದ್ದೆ. ಲಾಯಕಾಯಿದು. ಧನ್ಯವಾದ + ಒಪ್ಪ೦ಗೊ. ನಮಸ್ತೇ….
ಕ್ಷೇತ್ರ ಪರಿಚಯ ಲಾಯಕ ಆತು.. ಧನ್ಯ ವಾದ೦ಗೊ…
ಒಳ್ಲೆಯ ಪರಿಚಯ. ಶುಭವಾಗಲಿ.
ಹರೇ ರಾಮ. ಕ್ಷೇತ್ರ ಪರಿಚಯ ಲಾಯಕ ಆತು. ಕಾಲಾವಧಿ ಕಾರ್ಯಕ್ರಮಕ್ಕೆ ದೂರದೂರಂದಲೂ ಅಲ್ಪಭಕ್ತರು ಬಂದು ಪ್ರಾರ್ಥಿಸಿ ಸೇವೆ ಸಲ್ಲುಸುತ್ತವು ಹೇಳಿ ಕೇಳಿದ್ದೆ. ದೈವ-ದೇವರು ಎಲ್ಲೋರಿಂಗೂ ಸನ್ಮಂಗಳವ ನೀಡಲಿ.