Oppanna.com

“ಕಂಡು  ಮುಟ್ಟೆ ಪದ್ಯ  “

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   20/08/2019    2 ಒಪ್ಪಂಗೊ

“ಕಂಡು  ಮುಟ್ಟೆ ಪದ್ಯ  “

ಶಿರೋನಾಮೆ ನೋಡುಗಳೇ ಎಲ್ಲೋರು ‘ಇದಕ್ಕೆ ಬರವಲೆ ಬೇರೆಂತದೂ ಸಿಕ್ಕಿದ್ದಿಲ್ಯಾ ? ಹೀಂಗಿದ್ದ ಪದ್ಯ ಇದ್ದಾ? ಹೀಂಗಿದ್ದ ಶಬ್ದಂಗಳ ಎಲ್ಲ ಹೇಳ್ಲಾಗಾಳಿ ಇದಕ್ಕೆ ಗೊಂತಿಲ್ಯಾ ” ಹೇಳಿ ಮನಸ್ಸಿನ ಮೂಲೆಲಿ ಖಂಡಿತ ಗ್ರೇಶಿರ್ತಿ ಹೇಳಿ ಎನಗೆ ಗೊಂತಿದ್ದು.
ಆದರೆ ಇದು ಆರನ್ನೂ ಬೈವ ಕತೆ ಅಲ್ಲ ಹೇಳಿ ಮದಾಲು ಹೇಳುತ್ತೆ.ಮತ್ತೊಂದು ಸಮದಾನದ ಸಂಗತಿ ಹೇಳಿರೆ ಇದೊಂದು ಬೈವ ಪದ ಹೇಳಿ ಈಗಾಣ ಮಕ್ಕೊಗೆ ಗೊಂತೂ ಇರ. ಎಂತದೇ ಆಗಲಿ ಹಳಬ್ಬರ ಬೈಗಳು ತಿಂದವಕ್ಕೆ ಮಾತ್ರ ಗೊಂತು ನಮ್ಮ ಭಾಷೆಯ “ಭಾಷಾ ಸೌಂದರ್ಯ”!! ಅಜ್ಜನೋ,ಅಜ್ಜಿಯೋ ಬೈವಗ ಅದರರ್ಲಿ ಬೈವ ಶಬ್ದ ಒಂದೋ,ಎರಡೋ ಇಕ್ಕಷ್ಟೆ ,ಅದಕ್ಕಿಂತ ಹೆಚ್ಚು ಗಾದೆ ಮಾತುಗೊ,ನುಡಿಗಟ್ಟುಗೊ,ಹಳೆ ಉದಾಹರಣೆಗೊ,ಅಲಂಕಾರಂಗೊ…..ಅಬ್ಬಬ್ಬಾ……!!

ಎನ್ನ ಬಾಲ್ಯಲ್ಲಿ ಹೀಂಗಿದ್ದ ಗಾದೆ ಮಾತುಗಳ ಬೈಗಳು ಮಾತ್ರ ತಿಂದು ಗೊಂತಷ್ಟೆ.ಬೇರೆ ರೀತಿಯ ಅಸಂಬದ್ಧ ಬೈಗಳು ತಿಂದು ಗೊಂತಿಲ್ಲೆ.
” ತರ್ಕಕ್ಕೆ ಬರ್ಕತ್ತಿಲ್ಲೆ, ತನ್ನಿಚ್ಚಗೂ ಚಾಣಿತ್ತಲಗೂ ಮದ್ದಿಲ್ಲೆ ,ಹೆಬ್ಬಾರಂಗೆ ಹಿಡುದಷ್ಟೇ ಗಾತ್ರ, ಮೂರು ಮೊಳ ನೇವಗ ಆರು ಮೊಳ ಹರಿವದು,…….” ಹೀಂಗೇ ಒಂದೊಂದು ತಪ್ಪಿಂಗೆ ಬೇರೆ ಬೇರೆ  ಗಾದೆ ಮಾತುಗಳ ಸಹಿತವಾದ ಬೈಗಳು ಕೇಳಿರೆ ನಮ್ಮ ಶಬ್ದ ಭಂಢಾರ ಬೆಳೆತ್ತು..ಆ ಕಾಲಲ್ಲಿ ಇದರೆಲ್ಲ ಕೇಳುಗ ಕಂಡಿತ ದುಃಖ ಬಯಿಂದು, ಅಬ್ಬೆಯ ಹಿಂದೆ ನಿಂದು ಸೆರಗಿಲ್ಲಿ ಕಣ್ಣುದ್ದಿದ್ದೂ ಇಕ್ಕು. ಆದರೆ ಸತ್ಯ ಹೇಳೆಕಾ ಈಗ ಎನಗೆ ಎಷ್ಟೋ ಗಾದೆ ಮಾತುಗೊ,ಹಳೇ ಶಬ್ದಂಗೊ ನೆಂಪಿಪ್ಪಲೆ ಕಾರಣವೇ ಈ ಬೈಗಳು.ಈ ಗಾದೆಗೊ ಸಾಲದ್ದಕ್ಕೆ ಬೇಕಾರೆ ನಾಕು ಉಪದೇಶ ಹೇಳಿ ಸರ್ವಜ್ಞ ವಚನಂಗೊ,ಸೋಮೇಶ್ವರ ಶತಕದ ಸಾಲುಗೊ ಕೂಡಾ ಸೇರುವ ಕ್ರಮ ಇದ್ದು…..ಹೀಂಗೇ ಒಂದರಿ ಸುರು ಮಾಡಿದ ಬೈಗಳು ನಿಂಬಲೆ ಕನಿಷ್ಟ ಅರ್ಧ ಗಂಟೆಯಾದರೂ ಬೇಕು.

ಅಂಬಗ ಎಲ್ಲ ಕಾಣದ್ದ ಸರ್ವಜ್ಞ ಕವಿಯತ್ರೆ,ಸೋಮೇಶ್ವರ ಶತಕ ಬರದರವತ್ರೆಲ್ಲ ಎಷ್ಟು ಕೋಪ ಬಂದುಕೊಂಡಿದ್ದತ್ತು.ಈಗ ಅದೆಲ್ಲ ಗ್ರೇಶುಗ ನೆಗೆ ಬತ್ತು.ಈಗಾಣ ಮಕ್ಕೊಗೆ ಹಾಂಗೆಲ್ಲ ಬೈಯೆಕಾವ್ತೂ ಇಲ್ಲೆ,ಈಗಾಣವಕ್ಕೆ ಹಾಂಗೆ ಚೆಂದಕೆ ಬೈವಲೆ ಗೊಂತೂ ಇಲ್ಲೆ ಹೇಳುದೇ ನಿಜವಾದ ಸತ್ಯ..

ಅಯ್ಯೋ ಹೇಳ್ಲೆ ಹೆರಟ ವಿಶಯವೇ ಬೇರೆ, ಇಲ್ಲಿ ಬರದ್ದದೇ ಬೇರೆ ಆತನ್ನೇ.ಅಂಬಗ ವಾಪಾಸು ಹಳೇ ವಿಶಯಕ್ಕೆ ಬಪ್ಪೊ°.ಇದು ತುಂಬ ಹಳೇ ಕಾಲದ ಶುದ್ದಿ. ಓ ಮನ್ನೆ ಎಂತೋ ಮಾಡುಗ ನೆಂಪಾದ್ದು.

ಇದು ಸುಮಾರು ವೊರುಷದ ಹಿಂದೆ ನೆಡದ ವಿಶಯವೇ.

ಎಂಗಳ ನೆರೆಕರೆಲಿ ಒಂದು ಅತ್ತೆ ಇತ್ತಿದ್ದು.ಅವರ ಹೆಸರು ಕಲಾವತಿ ಹೇಳಿ ನೆಂಪು. ಎಲ್ಲೋರು ಅವರ ಕಲಕ್ಕ,ಕಲತ್ತೆ..ಹಾಂಗೇ ದಿನಿಗೇಳಿಂಡಿದ್ದದು.ತುಂಬ ಒಳ್ಳೆ ಮನಸಿನ ಹೆಮ್ಮಕ್ಕೊ. ಅವಕ್ಕೆ ಹಾಡು,ಪದ್ಯ ಹೇಳಿರೆಲ್ಲ ಭಾರೀ ಪ್ರೀತಿ. ಎಲ್ಯಾರು ಪೂಜೆಲ್ಲ ಇದ್ದರೆ ನೋಡೆಕು.ದೊಡ್ಡ ಸ್ವರಲ್ಲಿ ಅವು ಹಾಡು ಹೇಳುವ ಚೆಂದ.ಎಲ್ಲೋರು ಚ’ ಕಾರ ಎತ್ತದ್ದೆ ಕೇಳಿಂಡು ನಿಂಗು.ಅಷ್ಟು ಲಾಯ್ಕಲ್ಲಿ ಹಾಡುವ ಅತ್ತೆ ಅವು.ರಜಾ ಪಾಪದ ಜೆನವುದೆ. ಎಂಗಳ ಮನೆಗೆ ಒಂದೊಂದರಿ ಬಂದುಕೊಂಡಿತ್ತಿದ್ದವು.

ಅದಕ್ಕಿಂತ ಮದಲು ಒಂದು ವಿಶಯ ಹೇಳ್ಲೆ ಬಿಟ್ಟತ್ತದ.ಅದೆಂತರ ಹೇಳಿರೆ ಎನ್ನ ಅಬ್ಬೆ ಎಂಗಳ ಊರಿಲ್ಲಿ ಸಂಗೀತ ಕಲ್ತ ಜೆನ ಹೇಳಿ ಅಬ್ಬೆಯತ್ರೆ ಎಲ್ಲೋರಿಂಗು ರಜ ಗೌರವ ಹೆಚ್ಚು. ಮತ್ತೊಂದು ದೊಡ್ಡ ವಿಶಯ ಎಂತರ ಹೇಳಿರೆ ಎನ್ನ ಅಬ್ಬೆ ಕಲ್ತದು ಮಲೆಯಾಳ!!

“ಮಲೆಯಾಳಲ್ಲಿ ಭಾರೀ ಲಾಯ್ಕ ಲಾಯ್ಕ ಪದ್ಯಂಗೊ ಇರ್ತು.ಒಂದರಿ ಕೇಳಿರೆ ಇನ್ನೊಂದರಿ ಕೇಳೆಕೂಳಿ ಅಪ್ಪದು.” ಹೇಳಿ ಕಲತ್ತೆ ಮನೆಗೆ ಬಂದಿಪ್ಪಗ ಹೇಳಿ ಅಬ್ಬೆ ಹತ್ತರೆ ಕೆಲವು ಸಂಗೀತವೊ,ಪದ್ಯವೊ ಎಲ್ಲ ಹಾಡ್ಸಿಕ್ಕಿ,ಅವುದೆ ಒಟ್ಟಿಂಗೆ ಹಾಡಿಕ್ಕಿ

“ಭಾರೀ ಲಾಯ್ಕಲ್ಲಿ ಹಾಡ್ತೆ ನೀನು” ಹೇಳಿ ಅಬ್ಬಗೊಂದು ಬಾಯಿ ಮಾತಿನ ಸರ್ಟಿಫಿಕೇಟುದೆ ಕೊಟ್ಟಿಕ್ಕಿ ಹೋಪದು.

ಅಂಬಗ ಸತ್ಯಕ್ಕೂ ಸಂಗೀತದ ಮೌಲ್ಯ ಗೊಂತಿಲ್ಲದ್ದ ಎಂಗಳ ಹಾಂಗಿಪ್ಪವು ಅವು ಹೋದ ಮತ್ತೆ ಕೆಲವು ಸರ್ತಿ ತಮಾಶೆಗೆ ಅವು ಹಾಡಿದಾಂಗೆ ಹಾಡಿ ಬೈಗಳು ತಿಂಬ ಕ್ರಮವೂ ಇದ್ದು.

ಇನ್ನೀಗ ನಿಜವಾದ ವಿಶಯಕ್ಕೆ ಬಪ್ಪೊ°.ಎನ್ನ ಚಿಕ್ಕಮ್ಮ ಕಾಸರಗೋಡು ಗವರ್ಮೆಂಟು ಕೋಲೇಜಿಂಗೆ ಹೋಗಿಂಡಿಪ್ಪಗ ಒಂದೊಂದರಿ ಎಂಗಳಲ್ಲಿಗೆ ಬಪ್ಪ ಕ್ರಮ ಇದ್ದತ್ತು.ಶುಕ್ರವಾರ ಬಂದರೆ ಶನಿವಾರ, ಆದಿತ್ಯವಾರ ಕಳುದು ಸೋಮವಾರ ಕೋಲೇಜಿಂಗೆ ಇಲ್ಲಿಂದಲೇ ಹೋಪ ಕ್ರಮ.

ಚಿಕ್ಕಮ್ಮ ಎನ್ನ ಅಬ್ಬೆಂದಲೂ ಹೆಚ್ಚು ಸಂಗೀತ ಕಲ್ತಿದು,ಸಾಲದ್ದಕ್ಕೆ ಅದರ ಸ್ವರವೂ ತುಂಬಾ ಇಂಪು.ಕೋಲೇಜಿಲೆಲ್ಲ ಪದ್ಯ ಹೇಳಿ ಬಹುಮಾನ ಗಳಿಸಿದ ಜೆನ ಅದು.

ಒಂದು ಸರ್ತಿ ಚಿಕ್ಕಮ್ಮ ಮನಗೆ ಬಂದ ಸಮಯಲ್ಲಿ ಕಲತ್ತೆ ಬಂದವು.ಅವಕ್ಕೆ ಚಿಕ್ಕಮ್ಮನ ಕಂಡು ಗೊಂತಿದ್ದು.ಈಗ ಮಾತಾಡಿ ಸರೀ ಗುರ್ತಪ್ಪಗ ಕಲತ್ತೆ ಚಿಕ್ಕಮ್ಮನತ್ರೆ ಒಂದು ಪದ್ಯ ಹೇಳ್ಲೆ ಹೇಳಿದವು.

“ಯೇವ ಪದ್ಯ ಅಕ್ಕು ?” ಕೇಳಿತ್ತು ಚಿಕ್ಕಮ್ಮ.

ಕಲತ್ತೆಗೆ ಮಲೆಯಾಳ ಚಿತ್ರಗೀತೆ ಹೇಳಿರೆ ಭಾರೀ ಇಷ್ಟ.  ಅಬ್ಬೆಗೆ ಚಿತ್ರಗೀತೆ ಎಲ್ಲ ಹೆಚ್ಚು ಗೊಂತಿಲ್ಲೆ. ಎಲ್ಲ ಅರ್ಧರ್ಧ ಗೊಂತಿಪ್ಪದು. ಅದೂದೆ ಮನೆಲಿಪ್ಪ ಒಂದು ಪೊಟ್ಟು ರೇಡಿಯಲ್ಲಿ ನಾಕು ಗಂಟಗೆ ಸಿಲೋನು ಹೇಳುವ ಸ್ಟೇಶನಿಂದ ಹೇಳುವ ಪದ್ಯಂಗೊ. ಕಲತ್ತೆ ಹಾಂಗಲ್ಲ, ಅವಕ್ಕೆ ಕೇಳೆಕೂಳಿ ಆದ ಪದ್ಯವ ಹೇಂಗಾರು ಸಾಧನೆ ಮಾಡಿ ಕೇಳುಗು.

ಅಂಬಗ ಕೆಲವು ಮನೆಗಳಲ್ಲಿ ಟೇಪ್ ರೆಕಾರ್ಡರ್ ಇದ್ದತ್ತು.ಅದರಲ್ಲಿ ಕೇಸೆಟ್ಟು ಹಾಕಿರೆ ಪದ್ಯ ಕೇಳಿಂಡಿದ್ದತ್ತು.ಕಲತ್ತೆಯ ಮನೆಲಿ ಅದು ಇಲ್ಲದ್ರೂ ಇಪ್ಪ ಮನಗೆ ಹೋದರೆ ಒಂದರಿ ಅವರತ್ರೆ ಕೇಳಿ ,ಒಂದು ಕೇಸೆಟ್ಟಿನ ಪದ್ಯ ಕೇಳಿಕ್ಕಿ ,ಅದರೊಟ್ಟಿಂಗೆ ಹಾಡಿ ಅಭ್ಯಾಸ ಮಾಡಿಕ್ಕಿ ಹೋಕಷ್ಟೆ ಕಲತ್ತೆ.

ಈಗ ಚಿಕ್ಕಮ್ಮ ‘ಯೇವ ಪದ್ಯಕ್ಕು’ ಕೇಳಿಯಪ್ಪಗ ಅವು ರಜಾ ಆಲೋಚನೆ ಮಾಡಿದವು‌.ಮತ್ತೆ ಫಕ್ಕನೆ ನೆಂಪಾದವರ ಹಾಂಗೆ ” ಆ ಕಂಡುಮುಟ್ಟೆ” ಪದ್ಯ ಗೊಂತಿದ್ದರೆ ಅದರ ಹೇಳು. ಏಸುದಾಸಿನೊಟ್ಟಿಂಗೆ ಎಸ್.ಜಾನಕಿ ಹಾಡಿದ್ದೋ ಕಾಣ್ತು. ಭಾರೀ ಲಾಯ್ಕ ಇದ್ದು.ಆನು ನಾಲ್ಕೈದು ಸರ್ತಿ ಕೇಳಿದ್ದೆ.ಕಂಡುಮುಟ್ಟೆ..ಕಂಡುಮುಟ್ಟೇ ‌.‌.ಹೇಳಿ ಅಂಬಗಂಬಗ ಹೇಳ್ತವು. ಸಿನೆಮಲ್ಲಿ ಆರನ್ನಾರು ಬೈವ ಪದ್ಯ ಆದಿಕ್ಕು, ಅಂದರೂ ಕೇಳ್ಲೆ ಲಾಯ್ಕ ಇದ್ದು..”

ಕಲತ್ತೆಯ ಮಾತು ಕೇಳಿ ಎಂಗೊ ಎಲ್ಲ ಮೇಗೆಕೆಳ ನೋಡಿದೆಯ°. ಆ ಶಬ್ದ ಹೇಳಿರೆ ಮನೆಲಿ ದೊಡ್ಡವರ ಕೈಂದ ಸರೀ ಮಂಗಳಾರತಿ ಸಿಕ್ಕುತ್ತು. ಅಂಬಗ ಹಾಂಗಿದ್ದ ಒಂದು ಪದ್ಯ ಹೇಳಿರೆ ಅಜ್ಜಿ, ಅಜ್ಜ ಎಂತ ಮಾಡುಗು’ ಹೇಳಿ ಎಂಗೊ ಅತ್ಲಾಗಿತ್ಲಾಗಿ ಮೋರೆ ಮೋರೆ ನೋಡಿಂಡು ಉಕ್ಕಿ ಬಪ್ಪ ನೆಗೆಯ ತಡವ ಪ್ರಯತ್ನ ಮಾಡಿದೆಯ°.

“ಅದೇವ ಪದ್ಯ ಕಲಕ್ಕಾ..ಆನು ಕೇಳಿದ್ದಿಲ್ಲೆನ್ನೇ.ಹಾಂಗಿದ್ದ ಪದ್ಯವೂ ಇದ್ದಾ?” ಅಬ್ಬಗೇ ಆಶ್ಚರ್ಯ ಆತು.

“ಆನುದೆ ಕೇಳಿದ್ದಿಲ್ಲೆ” ಹೇಳಿದವು ದೊಡ್ಡಬ್ಬೆ.

“ಹಾಂಗಿದ್ದ ಅಸಂಬದ್ಧ ಪದ್ಯಂಗೊ ಎಲ್ಲ ಹೇಳೆಕೂಳಿಲ್ಲೆ.ಎಂತಾರು ರಾಮಾ…ಕೃಷ್ಣಾ..ಹೇಳುವ ಪದ್ಯ ಗೊಂತಿದ್ದರೆ ಹೇಳು‌.ಕೊಡ್ಲಾದ ಕೂಸುಗೊ ಚೆಂದದ ಪದ್ಯ ಹೇಳೆಕು” ಅಜ್ಜಿ ಒಳ ಎಲ್ಲೋ ಇತ್ತಿದ್ದರೂ ಅವರ ಕೆಮಿ ಇಲ್ಲೇ ಇದ್ದತ್ತು ಹೇಳಿ ಗೊಂತಾತು.

“ನಿಂಗೊ ಒಂದರಿ ಈ ಕಂಡುಮುಟ್ಟೆ ಪದ್ಯ ಕೇಳಿ ನೋಡಿ ಅತ್ತೇ.ಇನ್ನೊಂದರಿ ಹಾಡ್ಲೆ ಹೇಳುವಿ.ಅಷ್ಟು ಲಾಯ್ಕ ಇದ್ದಾತ.ಅದರ್ಲಿ ಎಡೇಲಿ ‘ ಕಂಡುಮುಟ್ಟೇ….ಳಿ ರಾಗ ಎಳಾದು ಹೇಳುದು ಮತ್ತೂ ಲಾಯ್ಕ ಇದ್ದತ್ತೇಅದಕ್ಕೆ ಗೊಂತಿದ್ದರೆ ಒಂದರಿ ಹೇಳ್ಲಿ.ಈಗ ಕೂಸು ನೋಡ್ಲೆ ಬಂದವರ ಮುಂದೆ ಪದ್ಯ ಹೇಳುದಲ್ಲನ್ನೇ.ಹಾಂಗೆ ಹೇಳಿದ್ದಷ್ಟೆ” ಕಲತ್ತೆ ಅಜ್ಜಿಯ ಸಮದಾನ ಮಾಡ್ಲೆ ಹೆರಟವು.

ಅಂದರೂ ಈ ಕಂಡುಮುಟ್ಟೆ ಪದ್ಯ ಯೇವದೂಳಿ ಗೊಂತಾಯೆಕನ್ನೇ.ಅಬ್ಬೆ, ಚಿಕ್ಕಮ್ಮ, ದೊಡ್ಡಬ್ಬೆ ಎಲ್ಲ ಅತ್ಲಾಗಿತ್ಲಾಗಿ ಚರ್ಚೆ ಮಾಡ್ಲೆ ಸುರು ಮಾಡಿದವು.

“ಕಂಡು ಕಂಡು ನೀ….ಎನ್ನ ಕೈ ಬಿಡುವರೇ ‌‌..ಕೃಷ್ಣಾ…” ಆದಿಕ್ಕೋ ಹೇಳಿ ಕೇಳಿತ್ತು ಮನೆಲಿಪ್ಪ ಚಿಕ್ಕಮ್ಮ.

“ಅದೆಲ್ಲ ಅಲ್ಲಪ್ಪಾ..ಇದರ್ಲಿ ಒಂದು ಗೆರೆ ಮುಗಿವಗ ‘ ಕಂಡುಮುಟ್ಟೆ’ ಕಂಡುಮುಟ್ಟೆ’ ಹೇಳ್ತವು. ಪದ್ಯ ಚೆಂದಯಿದ್ದು.ಇದು ಸಿನೆಮಾ ಪದ್ಯ ” ಹೇಳಿದವು ಕಲತ್ತೆ.

ಆತನ್ನೇ.. ಅಯ್ಯನ ಮಂಡೆ!! ಎಷ್ಟು ಪದ್ಯ ಹೇಳಿರೂ ಅದಲ್ಲ,ಇದಲ್ಲ..ಎಂಗೊಗೆಲ್ಲ ನೆಗೆ ಬಂದು ತಡೆಯದ್ದೆ ದೊಡ್ಡಕೆ ನೆಗೆ ಮಾಡಿದ್ದಕ್ಕೆ ಬೇಕಾಗಿ “ಹೋಗಿ ಪುಸ್ತಕ ಬಿಡ್ಸುಂಡು ಕೂರಿ” ಹೇಳುವ ಶಿಕ್ಷೆಯೂ ಸಿಕ್ಕಿತ್ತು.ಪುಸ್ತಕ ಬಿಡುಸುಲೆ ಮಾಂತ್ರ ಹೇಳಿದ ಕಾರಣ ಓದುವ ಕೆಲಸ ಇತ್ತಿದ್ದಿಲ್ಲೆ. ಹಾಂಗಾಗಿ ಅಂತೇ ಪಿಸಿ ಪಿಸಿ ಮಾತಾಡಿ ಆದಷ್ಟು ಶಬ್ದ ಹೆರ ಬಾರದ್ದಾಂಗೆ ನೆಗೆ ಮಾಡಿಂಡಿತ್ತಿದ್ದೆಯ°”.

ಹಾಂಗೇ ಮಾತಾಡಿ ಮಾತಾಡಿ ರೆಜ ಹೊತ್ತಪ್ಪಗ ಚಿಕ್ಕಮ್ಮ

“ಮಧುರ ಪ್ರತೀಕ್ಷತನ್ ಪೂಂಗಾವಿಲ್ ವಚ್ಚೊರು ಮಣಿವೇಣು ಗಾಯಕನೆ ಕಂಡುಮುಟ್ಟಿ….” ಹೇಳುವ ಪದ್ಯವಾ ಕೇಳಿತ್ತು.

ಕೂದೊಂಡಿದ್ದ ಕಲತ್ತೆ ಫಕ್ಕನೆ ಎದ್ದು ನಿಂದವು

“ಅದೇ…‌.ಅದೇ‌…..ಪದ್ಯ…..ನಿನಗೆ ಗೊಂತಿದ್ದರೆ ಹೇಳು” ಭಾರೀ ಸಂತೋಷಲ್ಲಿ ಹೇಳಿದವು.

“ಹೋ…ಈ ಪದ್ಯವಾ….ಇದರ ತುಂಬ ಸರ್ತಿ ಕೇಳಿದ್ದೆಯ°,ಆದರೆ ನಿಂಗೊ ಕಂಡುಮುಟ್ಟೆ ಹೇಳಿಯಪ್ಪಗ ಅಂದಾಜಾಯಿದಿಲ್ಲೆ” ಅಬ್ಬೆ, ದೊಡ್ಡಬ್ಬೆ ಎಲ್ಲ ಜೋರು ನೆಗೆ ಮಾಡುಗ ಎಂಗೊಗೆ ಅರ್ಥ ಆಗದ್ರೂ ಎಂಗಳೂ ಸೇರಿದೆಯ°.

ಆ ಪದ್ಯ ‘ಭಾಗ್ಯಮುದ್ರ’ ಹೇಳುವ ಸಿನೆಮಾದ ಪದ್ಯ ಆಡ.1967ನೇ ಇಸವಿಲಿ ಬಂದ ಹಳೇ ಸಿನೆಮಾದ ಪದ್ಯ ,ಎಲ್ಲೋರಿಂಗು ಗೊಂತಿಪ್ಪ ಪದ್ಯವೇ ಆದರೂ ” ಕಂಡುಮುಟ್ಟಿ” ಹೇಳುವಲ್ಲಿ “ಕಂಡುಮುಟ್ಟೆ” ಆದಪ್ಪಗ ಮಾಂತ್ರ ಅರ್ಥ ಅನರ್ಥ ಆದಾಂಗಾತು.{ಮಲೆಯಾಳಲ್ಲಿ ಕಂಡುಮುಟ್ಟಿ ಹೇಳಿರೆ ಕಾಂಬಲೆ ಸಿಕ್ಕಿದ°(ದ್ದು) ಹೇಳಿ ಅರ್ಥ}

ಅಂದು ಆ ಪದ್ಯವ ಚಿಕ್ಕಮ್ಮನ ಕೈಲಿ ಎರಡು ಮೂರು ಸರ್ತಿ ಹಾಡ್ಸಿ ,ಕೇಳಿಕ್ಕಿ ಹೋದ್ದದು ಕಲತ್ತೆ.ಹೋಪಗ ಎಂಗಳತ್ರೆ ನೆಗೆ ಮಾಡಿಂಡು ಕೇಳಿದವು

“ಭಾಷೆ ಗೊಂತಿಲ್ಲದ್ದ ಈ ಅತ್ತೆಯ ಇನ್ನು ನಿಂಗೊ ಕಂಡುಮುಟ್ಟೆ ಅತ್ತೆ ಹೇಳಿ ದಿನಿಗೇಳುವಿರಾ ಹೇಂಗೆ?”

ಎಂಗೊ ಒಂದರಿಯೂ ಕಲತ್ತೆಯ ಹಾಂಗೆ ದಿನಿಗೇಳದ್ರೂ ಈ ಪದ್ಯಕ್ಕೆ ಮಾಂತ್ರ “ಕಂಡುಮುಟ್ಟೆ ಪದ್ಯ” ಹೇಳಿ ಒಂದು ಅಡ್ಡ ಹೆಸರು ಬಿದ್ದತ್ತು. ಈ ಪದ್ಯ ಕೇಳುಗ ಎಲ್ಲ ಆ ಘಟನೆ ನೆಂಪಾಗಿ ಒಬ್ಬನೇ ಕೂದರೂ ನೆಗೆ ಬತ್ತು.

“ಬರೀ ಬೆಗುಡು,ಒಬ್ಬನೇ ಕೂದು ನೆಗೆ ಮಾಡ್ಲೆಂತಾಯಿದಿದಕ್ಕೇಳಿ” ಆರೂ ಬೈವದು ಬೇಡ .ಅದರ ಮದಲೇ ಈ  ಬರಹವ ನಿಲ್ಸುತ್ತೆ.

{ಈ ವಿಶಯ ಈಗ ನೆಂಪಾದ್ದೇಂಗೇಳಿರೆ ಮನ್ನೆ ಮಲೆಯಾಳ ಟೋಪ್ ಸಿಂಗರ್ ಕಾರ್ಯಕ್ರಮಲ್ಲಿ ಒಂದು ಒಪ್ಪಕ್ಕ° ಈ ಪದ್ಯ ಹಾಡುದು ಕೇಳಿಯಪ್ಪಗ}

ಮೂಲ ಹಾಡು ಕೇಳೆಕ್ಕಾದವಕ್ಕೆ ಇಲ್ಲಿದ್ದು ಸಂಕೋಲೆ”-

https://www.youtube.com/watch?v=G9RGcG-h1rs

ಪ್ರಸನ್ನಾ ವಿ ಚೆಕ್ಕೆಮನೆ

ಧರ್ಮತ್ತಡ್ಕ

 

ಪ್ರಸನ್ನಾ ಚೆಕ್ಕೆಮನೆ

2 thoughts on ““ಕಂಡು  ಮುಟ್ಟೆ ಪದ್ಯ  “

  1. ಭಾರಿ ಲಾಯ್ಕಿದ್ದು ಕಥೆ

  2. ತುಂಬಾ ಸ್ವಾರಸ್ಯಕರ ಬರಹ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×