Oppanna.com

ಗರುಡ ಪುರಾಣ – ಅಧ್ಯಾಯ 10 – ಭಾಗ 03

ಬರದೋರು :   ಚೆನ್ನೈ ಬಾವ°    on   28/11/2013    1 ಒಪ್ಪಂಗೊ

ಚೆನ್ನೈ ಬಾವ°

ಮರಣ ಹೊಂದಿದವ° ಅಗ್ನಿಹೋತ್ರಿಯಾಗಿದ್ದರೆ ನಾಲ್ಕನೆ ದಿನ, ಅಗ್ನಿಹೋತ್ರಿಯಲ್ಲದ್ದವ° ಆಗಿದ್ರೆ ಎರಡ್ನೇ ಅಥವಾ ಮೂರ್ನೇ ದಿನ ಅಸ್ಥಿಸಂಚಯನ ಮಾಡೆಕು ಹೇದು ಭಗವಂತ° ಹೇದಲ್ಯಂಗೆ  ಕಳುದವಾರದ ಭಾಗವ ನಿಲ್ಸಿದ್ದದು. ಮುಂದೆ –
 
ಗರುಡ  ಪುರಾಣ – ಅಧ್ಯಾಯ 10 – ಭಾಗ 03
ಗತ್ವಾ ಶ್ಮಶಾನಭೂಮಿಂ ಚ ಸ್ನಾನಂ ಕೃತ್ವಾ ಶುಚಿರ್ಭವೇತ್ ।images
ಊರ್ಣಾಸೂತ್ರಂ ವೇಷ್ಟಯಿತ್ವಾ ಪವಿತ್ರೀಂ ಪರಿಧಾಯ ಚ ॥೬೮॥
ಶ್ಮಶಾನ ಭೂಮಿಗೆ ಹೋಗಿ ಅಲ್ಲಿ ಮಿಂದು ಶುದ್ಧನಾಯೆಕು. ಉಣ್ಣೆಯ ವಸ್ತ್ರವ ಸುತ್ತಿಗೊಂಡು ಪವಿತ್ರವ ಧರಿಸಿಗೊಳ್ಳೆಕು.
ದದ್ಯಾತ್ ಶ್ಮಶಾನವಾಸಿಭ್ಯಸ್ತತೋ ಮಾಷಿಬಲಿಂ ಸುತಃ ।
ಯಮಾಯ ತ್ವೇತಿ ಮಂತ್ರೇಣ ತಿಸ್ರಃ ಕುರ್ಯಾತ್ಪರಿಕ್ರಮಾಃ ॥೬೯॥
ಮತ್ತೆ ಮಗ° ಶ್ಮಶಾನವಾಸಿಗೊಕ್ಕಾಗಿ “ಯಮಾಯ ತ್ವಾ ಮಖಾಯ ತ್ವಾ ಸೂರ್ಯಸ್ಯ ತ್ವಾ ತಪಸೇ ….. ” ಎಂಬ ಮಂತ್ರಂದ ಉದ್ದಿನ ಬಲಿಯ ಕೊಡೆಕು. ಮತ್ತು ಮೂರು ಪ್ರದಕ್ಷಿಣೆ ಮಾಡೆಕು.
ತತೋ ದುಗ್ಧೇನ ಚಾಭ್ಯುಕ್ಷ್ಯ ಚಿತಾಸ್ಥಾನಂ ಖಗೇಶ್ವರ ।
ಜಲೇನ ಸೇಚಯೇತ್ಪಶ್ಚಾದುದ್ಧರೇದಸ್ಥಿ ವೃಂದಕಮ್ ॥೭೦॥
ಏ ಗರುಡ!, ಮತ್ತೆ, ಚಿತೆಯ ಜಾಗೆಯ ಹಾಲಿಂದ ಮಂತ್ರಪೂರ್ವಕವಾಗಿ ತಳುದು, ನೀರ ಸೇಚನಗೊಳುಸಿ ಮತ್ತೆ ಅಸ್ಥಿ ಸಮೂಹವ ತೆಗೆಕು.
ಕೃತ್ವಾ ಪಲಾಶಪತ್ರೇಷು ಕ್ಷಾಲಯೇದ್ದುಗ್ಧವಾರಿಭಿಃ ।
ಸಂಸ್ಥಾಪ್ಯ ಮೃಣ್ಮಯೇ ಪಾತ್ರೇ ಶ್ರಾದ್ಧಂ ಕುರ್ಯಾದ್ಯಥಾವಿಧಿ ॥೭೧॥
ಪಾಲಾಶ ಎಲೆಲಿ ಅಸ್ಥಿಗಳ ಮಡುಗಿ ಹಾಲು ಮತ್ತೆ ನೀರಿಂದ ತೊಳೆಕು. ಮತ್ತೆ ಅದರ ಮಡಕೆಲಿ ಹಾಕಿ ವಿಧಿಪೂರ್ವಕವಾಗಿ ಶ್ರಾದ್ಧವ ಮಾಡೆಕು.
ತ್ರಿಕೋಣಂ ಸ್ಥಂಡಿಲಂ ಕೃತ್ವಾ ಗೋಮಯೇನೋಪಲೇಪಿತಮ್ ।
ದಕ್ಷಿಣಾಭಿಮುಖೋ ದಿಕ್ಷು ದದ್ಯಾತ್ಪಿಂಡತ್ರಯಂ ತ್ರಿಷು ॥೭೨॥
ಅಲ್ಲಿ ತ್ರಿಕೋಣಸ್ಥಂಡಿಲವ ಮಾಡಿ ಗೋಮಯ ಲೇಪಿಸಿ ದಕ್ಷಿಣಾಭಿಮುಖವಾಗಿ ಮೂರು ದಿಕ್ಕಿಲ್ಲಿ ಮೂರು ಪಿಂಡವ ಕೊಡೆಕು.
ಪುಂಜೀಕೃತ್ಯ ಚಿತಾಭಸ್ಮ ತತ್ರ ಧೃತ್ವಾ ತ್ರಿಪಾದುಕಾಮ್ ।
ಸ್ಥಾಪಯೇತ್ತತ್ರ ಸಜಲಮನಾಚ್ಛಾದ್ಯ ಮುಖಂ ಘಟಮ್ ॥೭೩॥
ಅಲ್ಲಿ ಚಿತಾಭಸ್ಮವ ರಾಶಿ ಹಾಕಿ, ತ್ರಿಪಾದುಕೆಯ ಮಾಡಿ (ಆಸನವ ಮಾಡಿ), ಅಲ್ಲಿ ಬಾಯಿಮುಚ್ಚದ್ದೆ ಇಪ್ಪ ನೀರು ತುಂಬಿದ ಕೊಡವ ಮಡುಗೆಕು.
ತತಸ್ತಂಡುಲಪಾಕೇನ ದಧಿಘೃತಸಮನ್ವಿತಮ್ ।
ಬಲಂ ಪ್ರೇತಾಯ ಸಜಲಂ ದದ್ಯಾನ್ಮಿಷ್ಟಂ ಯಥಾವಿಧಿ ॥೭೪॥
ಮತ್ತೆ ಅಕ್ಕಿ ಬೇಶಿ, ಮೊಸರು ಮತ್ತೆ ತುಪ್ಪವ ಕಲಸಿ ಪ್ರೇತಕ್ಕಾಗಿ ಮಧುರ ಬಲಿಯ ನೀರ ಸಮೇತ ವಿಧಿಪೂರ್ವಕವಾಗಿ ಕೊಡೆಕು.
ಪದಾನಿ ದಶ ಪಂಚೈವ ಚೋತ್ತರಸ್ಯಾಂ ದಿಶಿ ವ್ರಜೇತ್ ।
ಗರ್ತಂ ವಿಧಾಯ ತತ್ರಾಸ್ಥಿ ಪಾತ್ರಂ ಸಂಸ್ಥಾಪಯೇತ್ಖಗ ॥೭೫॥
ಏ ಗರುಡ!, ಮತ್ತೆ ಉತ್ತರ ದಿಕ್ಕಿಂಗೆ ಹದಿನೈದು ಹೆಜ್ಜೆಗಳ ನಡೆಕು. ಅಲ್ಲಿ ಒಂದು ಹಳ್ಳವ (ಹೊಂಡ) ತೋಡಿ ಅದರಲ್ಲಿ ಅಸ್ಥಿಗಳ ಪಾತ್ರವ ಮಡುಗೆಕು.
ತಸ್ಯೋಪರಿ ತತೋ ದದ್ಯಾತ್ಪಿಂಡಂ ದಾಹಾರ್ತಿನಾಶನಮ್ ।
ಗರ್ತಾದುದ್ಧೃತ್ಯ ತತ್ಪಾತ್ರಂ ನೀತ್ವಾ ಗಚ್ಛೇಜ್ಜಲಾಶಯಮ್ ॥೭೬॥
ಅದರ ಮೇಗೆ ದಹನದ ಕಷ್ಟವ ನಾಶ ಮಾಡುವಂತಹ ಪಿಂಡವ ಕೊಡೆಕು. ಮತ್ತೆ ಹಳ್ಳಂದ ಆ ಪಾತ್ರವ ತೆಗದು, ಅದರ ಒಂದು ಜಲಾಶಯದ ಹತ್ರಂಗೆ ತೆಕ್ಕೊಂಡು ಹೋಯೆಕು.
ತತ್ರ ಪ್ರಕ್ಷಾಲಯೇದ್ದುಗ್ಧ ಜಲಾದಸ್ಥಿ ಪುನಃ ಪುನಃ ।
ಚರ್ಚಯೇಚಂದನೇನಾಥ ಕುಂಕುಮೇನ ವಿಶೇಷತಃ ॥೭೭॥
ಅಲ್ಲಿ ಹಾಲು ಮತ್ತೆ ನೀರಿಂದ ಮತ್ತೆ ಮತ್ತೆ ಅಸ್ಥಿಗಳ ತೊಳೆಕು. ಮತ್ತೆ ಚಂದನ ಹಾಂಗೂ ವಿಶೇಷವಾಗಿ ಕುಂಕುಮಂದ ಅಸ್ಥಿಗೊಕ್ಕೆ ಲೇಪುಸೆಕು.
ಧೃತ್ವಾ ಸಂಪುಟಾಕೇ ತಾನಿ ಕೃತ್ವಾ ಚ ಹೃದಿಮಸ್ತಕೇ ।
ಪರಿಕ್ರಮ್ಯ ನಮಸ್ಕೃತ್ಯ ಗಂಗಾಮಧ್ಯೇ ವಿನಿಕ್ಷಿಪೇತ್ ॥೭೮॥
ಅವುಗಳ ಸಂಪುಟಲ್ಲಿ ಧರಿಸಿ ಎದೆಯ ಮೇಗೆ ಮತ್ತು ತಲೆ ಮೇಗೆ ಮಡಿಗಿ, ಪ್ರದಕ್ಷಿಣೆ ಮಾಡಿ, ನಮಸ್ಕರಿಸಿ ಗಂಗೆಯ ಮಧ್ಯಲ್ಲಿ ಹಾಕೆಕು.
ಅಂತರ್ದಶಾಹಂ ಯಸ್ಯಾಸ್ಥಿ ಗಂಗಾತೋಯೇ ನಿಮಜ್ಜತಿ ।
ನ ತಸ್ಯ ಪುನರಾವೃತ್ತಿಃ ಬ್ರಹ್ಮಲೋಕಾತ್ಕದಾಚನ ॥೭೯॥
ಆರ ಅಸ್ಥಿಗೊ ಹತ್ತು ದಿನಂದೊಳ ಗಂಗೆಯ ನೀರಿಲ್ಲಿ ಮುಳುಗುತ್ತೋ, ಅವಂಗೆ ಇನ್ನು ಎಂದಿಂಗೂ ಬ್ರಹ್ಮಲೋಕಂದ ಹಿಂದಿರಿಗಿ ಪುನಃ ಈ ಲೋಕಕ್ಕೆ ಬಪ್ಪಲಿಲ್ಲೆ.
ಯಾವದಸ್ಥಿ ಮನುಷ್ಯಸ್ಯ ಗಂಗಾತೋಯೇಷು ತಿಷ್ಠತಿ ।
ತಾವದ್ವರ್ಷಸಹಸ್ರಾಣಿ ಸ್ವರ್ಗಲೋಕೇ ಮಹೀಯತೇ ॥೮೦॥
ಎಷ್ಟು ವರ್ಷಂಗಳ ಕಾಲ ಮನುಷ್ಯನ ಅಸ್ಥಿಗೊ ಗಂಗೆಯ ನೀರಿಲ್ಲಿ ಇರುತ್ತೋ, ಅಷ್ಟು ಸಾವಿರ ವರ್ಷಂಗಳವರೆಂಗೆ ಅವ° ಸ್ವರ್ಗಲೋಕಲ್ಲಿ ಗೌರವಿಸ್ಪಡುತ್ತ ಇರುತ್ತ°.
ಗಂಗಾಜಲೋರ್ಮಿಂ ಸಂಸ್ಪೃಶ್ಯ ಮೃತಕಂ ಪವನೋ ಯದಾ ।
ಸ್ಪೃಶತೇ ಪಾತಕಂ ತಸ್ಯ ಸದ್ಯ ಏವಂ ವಿನಶ್ಯತಿ ॥೮೧॥
ಗಂಗಾನದಿಯ ಅಲೆಯ ಸ್ಪರ್ಶಿಸಿ ಬಂದ ಗಾಳಿ ಏವಾಗ ಸತ್ತವನ ಸ್ಪರ್ಶಿಸುತ್ತೋ, ಆ ಕ್ಷಣವೇ ಅವನ ಪಾಪಂಗಳೆಲ್ಲವೂ ನಾಶ ಆವುತ್ತು.
ಆರಾಧ್ಯ ತಪಸೋಗ್ರೇಣ ಗಂಗಾಂ ದೇವೀಂ ಭಗೀರಥಃ ।
ಉದ್ಧಾರಾರ್ಥಂ ಪೂರ್ವಜಾನಾಮಾನಯದ್ಬ್ರಹ್ಮಲೋಕತಃ ॥೮೨॥
ಉಗ್ರವಾದ ತಪಸ್ಸಾರಾಧನೆಂದ ಭಗೀರಥ° ತನ್ನ ಪೂರ್ವಜರ ಉದ್ಧಾರ ಮಾಡ್ಳೆ ಬೇಕಾಗಿ ಗಂಗೆಯ ಬ್ರಹ್ಮಲೋಕಂದ ಕರಕ್ಕೊಂಡು ಬಂದ°.
ತ್ರಿಷು ಲೋಕೇಷು ವಿಖ್ಯಾತಂ ಗಂಗಾಯಾಃ ಪಾವನಂ ಯಶಃ ।
ಯಾ ಪುತ್ರಾನ್ಸಗರಸ್ಯೈತಾನ್ ಭಸ್ಮಾಖ್ಯಾನನಯದ್ದಿವಮ್ ॥೮೩॥
ಗಂಗಾನದಿಗೆ ಪಾವನ ಮಾಡುವ ಯಶಸ್ಸು ಮೂರು ಲೋಕಲ್ಲಿಯೂ ಪ್ರಖ್ಯಾತವಾಗಿದ್ದು. ಸಗರನ ಏವ ಮಕ್ಕೊ ಭಸ್ಮೀಭೂತರಾಯ್ದವೋ ಅವರ ಗಂಗಾನದಿ ಸ್ವರ್ಗಲೋಕಕ್ಕೆ ಕರಕ್ಕೊಂಡು ಹೋಯ್ದು.
ಪೂರ್ವೇ ವಯಸಿ ಪಾಪಾನಿ ಯೇ ಕೃತ್ವಾ ಮಾನವಾ ಮೃತಾಃ ।
ಗಂಗಾಯಾಮಸ್ಥಿ ಪತನಾತ್ ಸ್ವರ್ಗಲೋಕಂ ಪ್ರಯಾಂತಿ ತೇ ॥೮೪॥
ಪೂರ್ವಾವಸ್ಥೆಲಿ ಯೇವ ಪಾಪಂಗಳ ಮಾಡಿ ಮರಣಹೊಂದುತ್ತವೋ, ಅವರ ಅಸ್ಥಿ ಗಂಗಾನದಿಲಿ ಬಿದ್ದರೆ ಅವು ಸ್ವರ್ಗಲೋಕಕ್ಕೆ ಹೋವುತ್ತವು.
ಕಶ್ಚಿದ್ವ್ಯಾಧೋ ಮಹಾರಣ್ಯೇ ಸರ್ವಪ್ರಾಣಿಹಿಂಸಕಃ ।
ಸಿಂಹೇನ ನಿಹತೋ ಯಾವತ್ಪಯಾತಿ ನರಕಾಲಯೇ ॥೮೫॥
ಒಬ್ಬಾನೊಬ್ಬ° ಬೇಡ° ಮಹಾರಣ್ಯಲ್ಲಿ ಎಲ್ಲ ಪ್ರಾಣಿಗಳ ಕೊಂದುಗೊಂಡು ಇತ್ತಿದ್ದವ°, ಒಂದು ಸಿಂಹಂದ ಕೊಲ್ಲಲ್ಪಟ್ಟ°. ಅವ° ಹಾಂಗೆ ನರಕಕ್ಕೆ ಹೋಗ್ಯೊಂಡಿತ್ತಿದ್ದ°
ತಾವತ್ಕಾಲೇನ ತಸ್ಯಾಸ್ಥಿ ಗಂಗಾಯಾಂ ಪಾತಿತಂ ತದಾ ।
ದಿವ್ಯಂ ವಿಮಾನಮಾರುಹ್ಯ ಸ ಗತೋ ದೇವಮಂದಿರಮ್ ॥೮೬॥
ಅದೇ ಸಮಯಲ್ಲಿ ಅವನ ಅಸ್ಥಿಗೊ ಗಂಗೆಲಿ ಬಿದ್ದತ್ತು. ಅಂಬಗ ಅವ° ದಿವ್ಯವಾದ ವಿಮಾನವ ಹತ್ತಿ ದೇವಲೋಕಕ್ಕೆ ಹೋದ°.
ಅತಃ ಸ್ವಮೇವ ಸತ್ಪುತ್ರೋ ಗಂಗಾಯಾಮಸ್ಥಿ ಪಾತಯೇತ್ ।
ಅಸ್ಥಿಸಂಚಯನಾದೂರ್ಧ್ವಂ ದಶಗಾತ್ರಂ ಸಮಾಚರೇತ್ ॥೮೭॥
ಹಾಂಗಾಗಿ, ಸತ್ಪುತ್ರ° ತಾನೇ ಅಸ್ಥಿಯ ಗಂಗೆಲಿ ಹಾಕೆಕು. ಅಸ್ಥಿ ಸಂಚಯನ ಮಾಡಿದ ಮತ್ತೆ ದಶಗಾತ್ರ ವಿಧಿಯ ಆಚರುಸೆಕು.
ಅಥ ಕಶ್ಚಿದ್ವಿದೇಶೇ ವಾ ವನೇ ಚೌರಭಯೇ ಮೃತಃ ।
ನ ಲಬ್ಧಸ್ತಸ್ಯ ದೇಹಶ್ಚೇಚ್ಛೃಣುಯಾದ್ಯದ್ದಿನೇ ತದಾ ॥೮೮॥
ಆರಾರು ವಿದೇಶಲ್ಲಿ ಅಥವಾ ಮಹಾರಣ್ಯಲ್ಲಿ  ಅಥವಾ ಚೋರರ ಭಯಂದ ಮೃತನಾಗಿದ್ದರೆ ಹಾಂಗೂ ಅವನ ದೇಹ ಸಿಕ್ಕದ್ರೆ, ಅಂಬಗ ಮರಣ ಸುದ್ದಿ ಸಿಕ್ಕಿಯಪ್ಪದ್ದೆ
ದರ್ಭಪುತ್ತಲಕಂ ಕೃತ್ವಾ ಪೂರ್ವವತ್ಕೇವಲಂ ದಹೇತ್ ।
ತಸ್ಯ ಭಸ್ಮಸಮಾದಾಯ ಗಂಗಾತೋಯೋ ವಿನಿಕ್ಷಿಪೇತ್ ॥೮೯॥
ದರ್ಭೆಂದ ಬೊಂಬೆಯ ಮಾಡಿ ಹಿಂದೆ ಹೇಳಿದ ರೀತಿಲಿ ಕೇವಲ ಅದನ್ನೇ ದಹಿಸೆಕು. ಅದರ ಭಸ್ಮವ ತೆಕ್ಕೊಂಡು ಗಂಗಾಜಲಲ್ಲಿ ಹಾಕೆಕು.
ದಶಗಾತ್ರಾದಿಕಂ ಕರ್ಮ ತದ್ದಿನಾದೇವ ಕಾರಯೇತ್ ।
ಸ ಏವ ದಿವಸೋ ಗ್ರಾಹ್ಯಃ ಶ್ರಾದ್ಧೇ ಸಾಂವತ್ಸರಾದಿಕೇ ॥೯೦॥
ಅದೇ ದಿನಂದಲೇ ದಶಗಾತ್ರವಿಧಿ ಮೊದಲಾದ ಕರ್ಮಂಗಳ ಮಾಡೆಕು. ವಾರ್ಷಿಕ ಶ್ರಾದ್ಧ ಇತ್ಯಾದಿ ಕರ್ಮಂಗಳ ಮಾಡ್ಳೂ ಸಾನ ಅದೇ ದಿನವ ತೆಕ್ಕೊಳ್ಳೆಕು.
ಪೂರ್ಣೇ ಗರ್ಭೇ ಮೃತಾ ನಾರೀ ವಿದಾರ್ಯ ಜಠರಂ ತದಾ ।
ಬಾಲಂ ನಿಷ್ಕಾಸ್ಯ ನಿಕ್ಷಿಪ್ಯ ಭೂಮೌ ತಾಮೇವ ದಾಹಯೇತ್ ॥೯೧॥
ಪೂರ್ಣ ಗರ್ಭವತಿಯಾದಿ ಸ್ತ್ರೀ ಮೃತ ಆದರೆ ಅಂಬಗ ಅದರ ಹೊಟ್ಟೆಯ ಕತ್ತರುಸಿ, ಮಗುವಿನ ಹೆರತೆಗದು, ಅದರ ಭೂಮಿಲಿ ಹುಗುದು, ಮತ್ತೆ ಆ ಸ್ತ್ರೀಯ ಮಾಂತ್ರ ದಹನ ಮಾಡೆಕು.
ಗಂಗಾತೀರೇ ಮೃತಂ ಬಾಲಂ ಗಂಗಾಯಾಮೇವ ಪಾತಯೇತ್ ।
ಅನ್ಯದೇಶೇ ಕ್ಷಿಪೇದ್ಭೂಮೌ ಸಪ್ತವಿಂಶತಿಮಾಸಜಮ್ ॥೯೨॥
ಗಂಗಾತೀರಲ್ಲಿ ಮರಣ ಹೊಂದಿದ ಬಾಲಕನ ಗಂಗೆಲಿಯೇ ಹಾಕೆಕು. ಅನ್ಯ ಪ್ರದೇಶಂಗಳಲ್ಲಿ ಇಪ್ಪತ್ತೇಳು ತಿಂಗಳುವರೆಗಾಣ ಮಗುವಿನ ಭೂಮಿಲಿ ಹೂಳೆಕು.
ಅತಃ ಪರಂ ದಹೇತ್ತಸ್ಯ ಗಂಗಾಯಾಮಸ್ಥಿ ನಿಕ್ಷಿಪೇತ್ ।
ಜಲಕುಂಭಶ್ಚ ದಾತವ್ಯಂ ಬಾಲಾನಾಮೇವ ಭೋಜನಮ್ ॥೯೩॥
ಅದರಿಂದ ಮೇಗಾಣ ವಯಸ್ಸಿನೋರಿಂಗೆ ದಹನ ಸಂಸ್ಕಾರ ಮಾಡೆಕು. ಅವನ ಅಸ್ಥಿಗಳ ಗಂಗಾನದಿಲಿ ಬಿಡೆಕು ಹಾಂಗೂ ಜಲಕುಂಭವ ದಾನ ಮಾಡಿ ಮಕ್ಕೊಗೆ ಊಟ ಕೊಡೆಕು.
ಗರ್ಭನಷ್ಟೇ ಕ್ರಿಯಾ ನಾಸ್ತಿ ದುಗ್ಧಂ ದೇಯಂ ಮೃತೇ ಶಿಶೌ ।
ಘಟಂ ಚ ಪಾಯಸಂ ಭೋಜಂ ದದ್ಯಾದ್ಬಾಲವಿಪತ್ತಿಷು ॥೯೪॥
ಗರ್ಭಲ್ಲಿಯೇ ನಷ್ಟಹೊಂದಿರೆ ಏವ ಕ್ರಿಯೆಯನ್ನೂ ಮಾಡೇಕ್ಕಾದ್ದಿಲ್ಲೆ. ಶಿಶು ಮರಣ ಹೊಂದಿರೆ ಹಾಲು ಕೊಡೆಕು. ಬಾಲಕ° ಮರಣ ಹೊಂದಿರೆ ಕೊಡದಾನವನ್ನೂ, ಪಾಯಸ ತಿಂಡಿಯನ್ನೂ ಕೊಡೆಕು.
ಕುಮಾರೇ ಚ ಮೃತೇ ಬಾಲಾನ್ಕುಮಾರಾನೇವ ಭೋಜಯೇತ್ ।
ಸಬಾಲಾನ್ಭೋಜಯೇದ್ವಿಪ್ರಾನ್ಪೌಗಂಡೇ ಸವ್ರತೇsವ್ರತೇ ॥೯೫॥
ಕುಮಾರಾವಸ್ಥೆಲಿ ಮೃತನಾದರೆ ಕುಮಾರ ಬಾಲಕರಿಂಗೇ ಭೋಜನ ಕೊಡೆಕು. ಬಾಲಕ° (೫ರಿಂದ ೧೦ವರ್ಷದೊಳಾಣ) ಮೃತನಾದರೆ ಬಾಲಕರ ಜತೆಲಿ ಬ್ರಾಹ್ಮಣರಿಂಗೂ ಊಟ ಹಾಕೆಕು.
ಮೃತಶ್ಚ ಪಂಚಮಾದೂರ್ಧ್ವಮವ್ರತಃ ಸವ್ರತೋsಪಿ ವಾ ।
ಪಾಯಸೇನ ಗುಡೇನಾಪಿ ಪಿಂಡಾಂದದ್ಯಾದ್ದಶ ಕ್ರಮಾತ್ ॥೯೬॥
ಐದರಿಂದ ಹೆಚ್ಚಿಗೆ, ಯಜ್ಞೋಪವೀತ ಸಹಿತನಾದ ಅಥವಾ ಯಜ್ಞೋಪವೀತರಹಿತನಾದ ಬಾಲಕ ಮೃತನಾದರೆ ಪಾಯಸಂದ ಅಥವಾ ಬೆಲ್ಲಂದ ಕ್ರಮವಾಗಿ ಹತ್ತು ಪಿಂಡವ ಕೊಡೆಕು.
ಏಕಾದಶಂ ದ್ವಾದಶಂ ಚ ವೃಷೋತ್ಸರ್ಗವಿಧಿಂ ವಿನಾ ।
ಮಹಾದಾನವಿಹೀನಂ ಚ ಪೌಗಂಡೇ ಕೃತ್ಯಮಾಚರೇತ್ ॥೯೭॥
ಪೌಗಂಡರಿಂಗೆ (ಎಂಟರಿಂದ ಹತ್ತೊಂಬತ್ತು ವರ್ಷ ಪ್ರಾಯ) ಏಕಾದಶ ವಿಧಿ ಮತ್ತೆ ದ್ವಾದಶ ವಿಧಿಗಳ, ವೃಷೋತ್ಸರ್ಗ ಮತ್ತೆ (ಶಯ್ಯಾದಾನ ಮೊದಲಾದ) ಮಹಾದಾನಂಗಳ ಮಾಡದ್ದೆ ಕರ್ಮವ ಮಾಡೆಕು.
ಜೀವಮಾನೇ ಚ ಪಿತರಿ ನ ಪೌಗಂಡೇ ಸಪಿಂಡನಮ್ ।
ಅತಸ್ತಸ್ಯ ದ್ವಾದಶಾಹನ್ಯೇಕೋದ್ದಿಷ್ಟಂ ಸಮಾಚರೇತ್ ॥೯೮॥
ಅಪ್ಪ° ಬದುಕಿಪ್ಪಗ ಐದರಿಂದ ಹತ್ತು ವರುಷದೊಳಗಾಣ ಮಕ್ಕೊಗೆ ಸಪಿಂಡದ ವಿಧಿಯ ಮಾಡದ್ದೆ, ಹನ್ನೆರಡ್ನೇ ದಿನ ಅವಂಗೆ ಏಕೋದ್ದಿಷ್ಟ ಶ್ರಾದ್ಧವ ಆಚರುಸೆಕು. (ಏಕೋದ್ದಿಷ್ಟ ಶ್ರಾದ್ಧ = ಮರಣ ಹೊಂದಿದವನ ಕುರಿತು ಒಂದೇ ದಿನ ಮಾಡ್ತ ಶ್ರಾದ್ಧ ಕ್ರಿಯೆ)
ಸ್ತ್ರೀಶೂದ್ರಾಣಾಂ ವಿವಾಹಸ್ತು ವ್ರತಸ್ಥಾನೇ ಪ್ರಕೀರ್ತಿತಃ ।
ವ್ರತಾತ್ಪ್ತಾಕ್ ಸರ್ವವರ್ಣಾನಾಂ ವಯಸ್ತುಲ್ಯಾಕ್ರಿಯಾ ಭವೇತ್ ॥೯೯॥
ಸ್ತ್ರೀಯರಿಂಗೆ ಮತ್ತು ಶೂದ್ರರಿಂಗೆ ಉಪ್ನಾನದ ಜಾಗೆಲಿ ಮದುವೆ ಸಂಸ್ಕಾರ ಹೇಳಿದ್ದದು. ಉಪ್ನಾನಂದ ಮದಲು ಎಲ್ಲ ವರ್ಣದೋರಿಂಗೂ ಒಂದೇ ರೀತಿಯ ಕ್ರಿಯೆಗಳ ಆಚರುಸೆಕು.
ಸ್ವಲ್ಪಾತ್ಕರ್ಮಪ್ರಸಂಗಾಚ್ಚ ಸ್ವಲ್ಪಾದ್ವಿಷಯಬಂಧನಾತ್ ।
ಸ್ವಲ್ಪೇ ವಯಸಿ ದೇಹೇ ಚ ಕ್ರಿಯಾಂ ಸ್ವಲ್ಪಾಮಪೀಚ್ಛತಿ ॥೧೦೦॥
ರಜಾ ಕರ್ಮಪ್ರಸಂಗಂಗಳಿಂದ, ರಜಾ ವಿಷಯಬಂಧನಂಗಳಿಂದ, ರಜಾ ವಯಸ್ಸಿನ ದೇಹಲ್ಲಿ, ಕ್ರಿಯೆಗಳೆಲ್ಲವನ್ನೂ ರಜಾವೇ ಇಚ್ಛೆ ಪಡುವದು.
ಕಿಶೋರೇ ತರುಣೇ ಕುರ್ಯಾಚ್ಛಯ್ಯಾ ವೃಷಮಖಾದಿಕಮ್ ।
ಪದದಾನಂ ಮಹಾದಾನಂ ಗೋದಾನಮಪಿ ದಾಪಯೇತ್ ॥೧೦೧॥
ಕಿಶೋರಾವಸ್ಥೆಲಿ, ತರುಣಾವಸ್ಥೆಲಿ, ಶಯ್ಯಾದಾನವನ್ನೂ, ವೃಷೋತ್ಸರ್ಗ, ಹೋಮ ಮೊದಲಾದುವುಗಳನ್ನೂ, ಪದದಾನ, ಮಹಾದಾನಂಗಳನ್ನೂ ಹಾಂಗೂ ಗೋದಾನವನ್ನೂ ಮಾಡೆಕು.
ಯತೀನಾಂ ಚೈವ ಸರ್ವೇಷಾಂ ನ ದಾಹೋ ನೋದಕಕ್ರಿಯಾ ।
ದಶಗಾತ್ರಾದಿಕಂ ತೇಷಾಂ ನ ಕರ್ತವ್ಯಂ ಸುತಾದಿಭಿಃ ॥೧೦೨॥
ಎಲ್ಲ ಸಂನ್ಯಾಸಿಗೊಕ್ಕೆ ದಹನ ಸಂಸ್ಕಾರವೂ ಇಲ್ಲೆ, ಉದಕಕ್ರಿಯೆಗಳೂ ಇಲ್ಲೆ. ಮಕ್ಕೊ ಅವಕ್ಕೆ ದಶಗಾತ್ರ ವಿಧಿಗಳೆಲ್ಲ ಮಾಡ್ಳಾಗ.
ದಂಡಾಗ್ರಹಣಮಾತ್ರೇಣ ನರೋ ನಾರಾಯಣೋ ಭವೇತ್ ।
ತ್ರಿದಂಡಗ್ರಹಣಾತ್ತೇಷಾಂ ಪ್ರೇತತ್ವಂ ನೈವ ಜಾಯತೇ ॥೧೦೩॥
ದಂಡವ ಹಿಡುದ ಮಾತ್ರಂದಲೇ ನರ° ನಾರಾಯಣನಾವ್ತ°. ತ್ರಿದಂಡವ (ವಾಗ್ದಂಡ, ಮನೋದಂಡ, ಕಾಯದಂಡ) ಧರಿಸಿಗೊಂಬದರಿಂದ ಅವಂಗೆ ಪ್ರೇತತ್ವ ಉಂಟಾವುತ್ತಿಲ್ಲೆ.
ಜ್ಞಾನಿನಸ್ತು ಸದಾ ಮುಕ್ತಾಃ ಸ್ವರೂಪಾನುಭವೇನ ಹಿ ।
ಅತಸ್ತೇ ತು ಪ್ರದತ್ತಾನಾಂ ಪಿಂಡಾನಾಂ ನೈವ ಕಾಂಕ್ಷಿಣಃ ॥೧೦೪॥
ಜ್ಞಾನಿಗಳಾದರೋ ಸ್ವರೂಪ ಅನುಭವಂದಲೇ ಏವತ್ತೂ ಮುಕ್ತರಾಗಿರುತ್ತವು. ಹಾಂಗಾಗಿ ದಾನ ಕೊಡಲ್ಪಟ್ಟ ಪಿಂಡವ ಇಚ್ಚಿಸುತ್ತವಿಲ್ಲೆ.
ತಸ್ಮಾತ್ಪಿಂಡಾದಿಕಂ ತೇಷಾಂ ನ ತು ನೋದಕಮಾಚರೇತ್ ।
ತೀರ್ಥಶ್ರಾದ್ಧಂ ಗಯಾಶ್ರಾದ್ಧಂ ಪಿತೃಭಕ್ತ್ಯಾ ಸಮಾಚರೇತ್ ॥೧೦೫॥
ಹಾಂಗಾಗಿ ಅವಕ್ಕೆ ಜಲದಾನ, ಪಿಂಡದಾನ ಇತ್ಯಾದಿಗಳ ಆಚರುಸಲಾಗ. ಆದರೆ ಪಿತೃಭಕ್ತಿಂದ ತೀರ್ಥಶ್ರಾದ್ದವನ್ನೂ, ಗಯಾಶ್ರಾದ್ಧವನ್ನೂ ಆಚರುಸೆಕು.
ಹಂಸಂ ಪರಮಹಂಸಂ ಚ ಕುಟೀಚಬಹೂದಕೌ ।
ಏತಾನ್ಸಂನ್ಯಾಸಿನಸ್ತಾರ್ಕ್ಷ್ಯ ಪೃಥಿವ್ಯಾಂ ಸ್ಥಾಪಯೇನ್ಮೃತಾನ್ ॥೧೦೬॥
ಎಲೈ ಗರುಡನೇ!, ಹಂಸ, ಪರಮಹಂಸ, ಕುಟೀಚಕ ಮತ್ತೆ ಬಹೂದಕ ಸಂನ್ಯಾಸಿಗೊ ಮರಣ ಹೊಂದಿದ ಮತ್ತೆ ಭೂಮಿಯಡಿಲಿ ಮಡುಗೆಕು.
ಗಂಗಾದೀನಾಮಭಾವೇ ಹಿ ಪೃಥಿವ್ಯಾಂ ಸ್ಥಾಪನಂ ಸ್ಮೃತಮ್ ।
ಯತ್ರ ಸಂತಿ ಮಹಾನದ್ಯಸ್ತದಾ ತಾಸ್ವೇವ ನಿಕ್ಷಿಪೇತ್ ॥೧೦೭॥
ಎಲ್ಲಿ ಗಂಗಾದಿ ನದಿಗೊ ಇಲ್ಲೆಯೋ ಅಲ್ಲಿ ಮಾತ್ರ ಭೂಮಿಯಡಿಲಿ ಮಡುಗೆಕು ಹೇದು ಹೇಳಿದ್ದದು. ಎಲ್ಲಿ ಮಹಾನದಿಗೊ ಇದ್ದೋ ಅಲ್ಲಿ ಆ ನದಿಲಿಯೇ ಪ್ರವಾಹಿತಗೊಳುಸೆಕು.
 
ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ದಾಹಾಸ್ಥಿ ಸಂಚಯಕರ್ಮನಿರೂಪಣಂ ನಾಮ ದಶಮೋsಧ್ಯಾಯಃ ॥
ಇಲ್ಲಿಗೆ ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ದಹನ ಮತ್ತೆ ಅಸ್ಥಿಸಂಚಯನ ಕರ್ಮಂಗಳ ನಿರೂಪಣೆ’ ಹೇಳ್ವ ಹತ್ತನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
 
ಸಂಚಯನದಂದು ಶ್ಮಶಾನ ಭೂಮಿಗೆ ಹೋಗಿ ಮಿಂದು ಪವಿತ್ರರಾಯೆಕು. ಉಣ್ಣೆಯ ವಸ್ತ್ರವ ಸುತ್ತಿಗೊಂಡು ಪವಿತ್ರ ಧಾರಣೆ ಮಾಡಿ, ಶ್ಮಶಾನವಾಸಿ ಭೂತಾದಿಗೊಕ್ಕಾಗಿ ಮಗ° ‘ಯಮಾಯ ತ್ವಾ..’ ಮಂತ್ರಂದ ಉದ್ದಿನ ಬಲಿಯ ಕೊಡೆಕು. ಮೂರು ಪ್ರದಕ್ಷಿಣೆ ಬರೆಕು. ಇದಾಗಿಕ್ಕಿ, ಚಿತೆಯ ಜಾಗೆಯ ಹಾಲು ಮತ್ತು ಜಲವ ಸಿಂಪಡಿಸೆಕು. ಮತ್ತೆ ಅಸ್ಥಿಸಂಚಯ (ಸಂಗ್ರಹ) ಮಾಡೆಕು. ಆ ಅಸ್ಥಿಗಳ ಪಲಾಶ ಎಲೆಲಿ ಮಡಿಗಿ ಹಾಲು ಮತ್ತು ನೀರಿಂದ ತೊಳೆಕು. ಮತ್ತೆ ಮಣ್ಣಿನ ಮಡಕ್ಕೆಲಿ ಮಡಿಗಿ ಯಥಾವಿಧಿ ಶ್ರಾದ್ಧ ಪಿಂಡದಾನವ ಮಾಡೆಕು. ತ್ರಿಕೋಣ ಸ್ಥಂಡಿಲವ ಮಾಡಿ ಅದರ ಗೋಮಯಂದ ಸಾರುಸಿ, ದಕ್ಷಿಣಾಭಿಮುಖವಾಗಿ ಸ್ಥಂಡಿಲದ ಮೂರು ಕೋನಂಗಳ ಮೇಗೆ ಮೂರು ಪಿಂಡದಾನ ಮಾಡೆಕು. ಮತ್ತೆ ಚಿತಾಭಸ್ಮವ ಏಕತ್ರ ಕೂಡಿ, ಅದರ ಮೇಗೆ ತ್ರಿಪಾದುಕೆಯ ಮಾಡಿ (ಆಸನವ ಮಾಡಿ), ಅದರ ಮೇಗೆ ಅಗಲ ಬಾಯಿಯಿಪ್ಪ (ಮುಚ್ಚದ್ದಿಪ್ಪ) ಜಲತುಂಬಿದ ಮಣ್ಣಿನ ಪಾತ್ರೆಯ ಮಡುಗೆಕು.
ಮತ್ತೆ ಅಕ್ಕಿಯ ಬೇಶಿ (ಅನ್ನ ಮಾಡಿ), ಮೊಸರು, ತುಪ್ಪ ಕಲಸಿ ಮೃಷ್ಠಾನ್ನ (ಮಧುರಾನ್ನ) ಮಾಡಿ, ನೀರಿನ ಸಮೇತ ಪ್ರೇತಕ್ಕಾಗಿ ಮಧುರ ಬಲಿಯ ವಿಧಿಪೂರ್ವಕವಾಗಿ ಕೊಡೆಕು. ಮತ್ತೆ ಉತ್ತರ ದಿಕ್ಕಿಲ್ಲಿ ಹದಿನೈದು ಹೆಜ್ಜೆ ನಡಾದು ಅಲ್ಲಿ ಗುಂಡಿತೋಡಿ ಅಸ್ಥಿ ಪಾತ್ರೆಯ ಅದರ್ಲಿ ಮಡುಗೆಕು. ಅದರ ಮೇಗೆ ದಾಹ ಜನಿತ ಪೀಡೆಯ ನಷ್ಟಗೊಳುಸುವ ಪಿಂಡಪ್ರದಾನ ಮಾಡೆಕು. ಮತ್ತೆ ಆ ಗುಂಡಿಂದ ಅಸ್ಥಿ ಪಾತ್ರವ ತೆಗದು ಜಲಾಶಯದ ಹತ್ರಂಗೆ ಹೋಯೆಕು. ಅಲ್ಲಿ ಹಾಲು ಮತ್ತು ನೀರಿಂದ ಆ ಅಸ್ಥಿಗಳ ಪುನಃ ತೊಳದು ಅಸ್ಥಿಗೊಕ್ಕೆ ಚಂದನ ಮತ್ತು ವಿಶೇಷತಃ ಕುಂಕುಮ ಲೇಪಿಸೆಕು. ಮತ್ತೆ ಅಸ್ಥಿಗಳ ಸಂಪುಟಲ್ಲಿ ಇರಿಸಿ (ದೊನ್ನೆಲಿ ಇರಿಸಿ) ಹೃದಯ ಮತ್ತು ಶಿರಸ್ಸಿಂಗೆ ಸ್ಪರ್ಶಿಸಿಗೊಂಡು, ಪ್ರದಕ್ಷಿಣೆ ಮಾಡಿ, ನಮಸ್ಕರಿಸಿ, ಗಂಗಾನದಿಲಿ ಬಿಡೆಕು.
ಯಾವ ಮೃತ ಜೀವಿಯ ಅಸ್ಥಿ ಹತ್ತು ದಿನಂದೊಳ ಗಂಗಾನದಿಲಿ ವಿಸರ್ಜಿತವಾವ್ತೋ, ಅವ° ಎಂದಿಂಗೂ ಬ್ರಹ್ಮಲೋಕಂದ ಮತ್ತೆ ಹಿಂತುರುಗತ್ತನಿಲ್ಲೆ. ಗಂಗಾನದಿಲಿ ಮನುಷ್ಯನ ಅಸ್ಥಿ ಎಲ್ಲಿವರೇಂಗೆ ಇರುತ್ತೋ ಅಷ್ಟು ಸಾವಿರ ವರ್ಷಂಗಳ ವರೆಂಗೆ ಅವ° ಸ್ವರ್ಗಲೋಕಲ್ಲಿ ವಿರಾಜಮಾನನಾಗಿರುತ್ತ°. ಗಂಗಾನದಿಯ ಅಲೆಗಳ ಸ್ಪರ್ಶಿಸಿದ ವಾಯು, ಒಂದು ವೇಳೆ ಮೃತನ ಸ್ಪರ್ಶಿಸಿರೆ, ಕೂಡಲೆ ಆ ಮೃತ ವ್ಯಕ್ತಿಯ ಪಾಪಂಗಳೆಲ್ಲವೂ ನಾಶವಾವ್ತು. ಭಗೀರಥ ಮಹಾರಾಜ° ಉಗ್ರ ತಪಸ್ಸಿಂದ ಗಂಗಾದೇವಿಯ ಆರಾಧನೆ ಮಾಡಿ, ತನ್ನ ಪೂರ್ವಜರ ಉದ್ಧಾರ ಮಾಡ್ಳೆ ಗಂಗಾದೇವಿಯ ಬ್ರಹ್ಮಲೋಕಂದ ಭೂಲೋಕಕ್ಕೆ ಕರೆಕ್ಕೊಂಡು ಬೈಂದ. ಆ ಗಂಗಾನದಿಗೆ ಪಾವನ ಮಾಡುವ ಪವಿತ್ರ ಯಶಸ್ಸು ಮೂರು ಲೋಕಲ್ಲಿಯೂ ವಿಖ್ಯಾತವಾಗಿದ್ದು. ಸಗರನ ಏವ ಮಕ್ಕೊ ಭಸ್ಮೀಭೂತರಾಗಿತ್ತಿದ್ದವೋ, ಅವರ ಗಂಗಾನದಿ ಸ್ವರ್ಗಲೋಕಕ್ಕೆ ಕರಕ್ಕೊಂಡು ಹೋಯಿದು.
ಏವ ಮನುಷ್ಯರು ತನ್ನ ಪೂರ್ವಾವಸ್ಥೆಲಿ ಪಾಪಂಗಳ ಮಾಡಿ ಮತ್ತೆ ಮರಣ ಹೊಂದುತ್ತವೋ, ಅವರ ಅಸ್ಥಿಗಳ ಗಂಗಾನದಿಲಿ ಬಿದ್ದರೆ ಅವು ಸ್ವರ್ಗಲೋಕಕ್ಕೆ ಹೋವುತ್ತವು. ಒಂದಾನೊಂದು ಮಹಾರಣ್ಯಲ್ಲಿ ಒಬ್ಬಾನೊಬ್ಬ ಮಹಾವ್ಯಾಧ ಇತ್ತಿದ್ದ. ಅವ° ಅರಣ್ಯಲ್ಲಿ ಎಲ್ಲ ಪ್ರಾಣಿಗಳ ಕೊಂದುಗೊಂಡು ಇತ್ತಿದ್ದವ°, ಸಿಂಹದ ಆಕ್ರಮಣಂದ ಮರಣ ಹೊಂದಿದ°. ಮತ್ತೆ ನರಕಕ್ಕೆ ಹೋಗಿಯೊಂಡಿತ್ತಿದ್ದ°. ಅದೇ ಸಂದರ್ಭಲ್ಲಿ ಅವನ ಅಸ್ಥಿಗೊ ಗಂಗಾನದಿಗೆ ಬಿದ್ದತ್ತು. ಅದರ ಫಲವಾಗಿ ಆ ವ್ಯಾಧ° ದಿವ್ಯ ವಿಮಾನಲ್ಲಿ ಏರಿಗೊಂಡು ದೇವಲೋಕಕ್ಕೆ ಹೋದ°. ಹಾಂಗಗಿ ಸತ್ಪುತ್ರನಾದವ° ತಾನೇ ತನ್ನ ಅಪ್ಪನ ಅಸ್ಥಿಗಲ ಗಂಗಾನದಿಲಿ ವಿಸರ್ಜನೆ ಮಾಡೆಕು. ಅಸ್ಥಿಸಂಚಯದ ಮತ್ತೆ ದಶಗಾತ್ರವಿಧಿಯ ಅನುಷ್ಠಾನ ಮಾಡೆಕು.
ಒಂದುವೇಳೆ ಯಾವನೇ ವ್ಯಕ್ತಿ ವಿದೇಶಲ್ಲಿ ಅಥವಾ ಅರಣ್ಯಲ್ಲಿ ಅಥವಾ ಚೋರರ ಭಯಂದ ಮರಣ ಹೊಂದಿದ್ದಿದ್ದರೆ, ಹಾಂಗೂ ಅವನ ಶವ ಪ್ರಾಪ್ತಿಯಾಗದ್ರೆ, ಏವ ದಿನದಂದು ಮರಣದ ಸಮಾಚಾರ ಪ್ರಾಪ್ತಿಯಾವ್ತೋ ಅದೇ ದಿನ ಕುಶದ ಬೊಂಬೆಯ ನಿರ್ಮಿಸಿ, ವಿಧಿಪೂರ್ವಕವಾಗಿ, ಕೇವಲ ಅದರ ದಹನ ಸಂಸ್ಕಾರ ಮಾಡೆಕು ಮತ್ತು ಅದರ ಭಸ್ಮವ ತೆಕ್ಕೊಂಡು ಗಂಗಾನದಿಲಿ ವಿಜರ್ಜಿಸೆಕು. ದಶಗಾತ್ರದ ಕರ್ಮವ ಕೂಡ ಅದೇ ದಿನ ಸುರುಮಾಡೆಕು. ಮತ್ತು, ವಾರ್ಷಿಕ ಶ್ರಾದ್ಧಲ್ಲಿಯೂ ಕೂಡ ಅದೇ ದಿನವನ್ನೇ ಗ್ರಹಣ ಮಾಡೆಕು. ಪೂರ್ಣಗರ್ಭವತಿ ಸ್ತ್ರೀ ಮೃತವಾದರೆ, ಅದರ ಉದರವ ಕೊರದು ಮಗುವಿನ ಹೆರತೆಗೆಕು. ಒಂದುವೇಳೆ ಮಗುವೂ ಮರಣ ಹೊಂದಿದ್ದರೆ ಮೃತ ಮಗುವ ಭೂಮಿಲಿ ಹುಗಿಯೆಕು, ಮತ್ತೆ ಮೃತ ಸ್ತ್ರೀಯ ದಹನ ಮಾಡೆಕು. ಗಂಗಾ ತೀರಲ್ಲಿ ಮೃತನಾದ ಮಗುವಿನ ಗಂಗಾನದಿಲಿಯೇ ಪ್ರವಹಿಸಿಬಿಡೆಕು. ಅನ್ಯಸ್ಥಾನಲ್ಲಿ ಮರಣ ಹೊಂದಿದ್ದರೆ ಇಪ್ಪತ್ತೇಳು ತಿಂಗಳವರೆಗಾಣ ಮಗುವಿನ ಭೂಮಿಲಿ ಹುಗಿಯೆಕು. ಇದರಿಂದ ಮೇಗಾಣ ಪ್ರಾಯದ ಮಗುವಿನ ದಹನ ಸಂಸ್ಕಾರ ಮಾಡೆಕು. ಮತ್ತು ಅವನ ಅಸ್ಥಿಗಳ ಗಂಗಾನದಿಲಿ ವಿಸರ್ಜಿಸೆಕು ಹಾಂಗೂ ಜಲಕುಂಭ ಪ್ರದಾನಿಸೆಕು ಮತ್ತು ಬರೇ ಮಕ್ಕೊಗೆ ಮಾತ್ರ ಭೋಜನ ಕೊಡೆಕು.
ಗರ್ಭಲ್ಲೇ ನಷ್ಟವಾಗಿ ಹೋದರೆ ಆ ಗರ್ಭಸ್ಥ ಶಿಶುವಿನ ಉದ್ದೇಶಂದ ಅದಕ್ಕೆ ಯಾವುದೇ ಕ್ರಿಯೆ ಮಾಡ್ಳೆ ಇಲ್ಲೆ. ಆದರೆ ಶಿಶುವಿಂಗಾಗಿ ಹಾಲು ದಾನ ಮಾಡೆಕು. ಬಾಲಕನಾಗಿದ್ದರೆ (ಚೌಲಕರ್ಮದ ಮುನ್ನಾಣ ಹಂತ ಅಥವಾ ಮೂರು ವರ್ಷ ಪ್ರಾಯದ ಹಂತ) ಅವಂಗಾಗಿ ಜಲತುಂಬಿದ ಘಟವ ದಾನ ಮಾಡೆಕು ಮತ್ತು ಮಕ್ಕೊಗೆ ಪಾಯಸ ತಿಂಡಿಗಳ ಭೋಜನ ಮಾಡುಸೆಕು. ಕುಮಾರಾವಸ್ಥೆಲಿ ಮೃತನಾದರೆ ಕುಮಾರ ಬಾಲಕರಿಂಗೇ ಭೋಜನ ಕೊಡೆಕು. ಬಾಲಕ° (೫ರಿಂದ ೧೦ವರ್ಷದೊಳಾಣ) ಮೃತನಾದರೆ ಬಾಲಕರ ಜತೆಲಿ ಬ್ರಾಹ್ಮಣರಿಂಗೂ ಊಟ ಹಾಕೆಕು. ಐದರಿಂದ ಹೆಚ್ಚಿಗೆ, ಯಜ್ಞೋಪವೀತ ಸಹಿತನಾದ ಅಥವಾ ಯಜ್ಞೋಪವೀತರಹಿತನಾದ ಬಾಲಕ ಮೃತನಾದರೆ ಪಾಯಸಂದ ಅಥವಾ ಬೆಲ್ಲಂದ ಕ್ರಮವಾಗಿ ಹತ್ತು ಪಿಂಡವ ಕೊಡೆಕು. ಪೌಗಂಡರಿಂಗೆ (ಎಂಟರಿಂದ ಹತ್ತೊಂಬತ್ತು ವರ್ಷ ಪ್ರಾಯ) ಏಕಾದಶ ವಿಧಿ ಮತ್ತೆ ದ್ವಾದಶ ವಿಧಿಗಳ, ವೃಷೋತ್ಸರ್ಗ ಮತ್ತೆ (ಶಯ್ಯಾದಾನ ಮೊದಲಾದ) ಮಹಾದಾನಂಗಳ ಮಾಡದ್ದೆ ಕರ್ಮವ ಮಾಡೆಕು. ಅಪ್ಪ° ಬದುಕಿಪ್ಪಗ ಐದರಿಂದ ಹತ್ತು ವರುಷದೊಳಗಾಣ ಮಕ್ಕೊಗೆ ಸಪಿಂಡದ ವಿಧಿಯ ಮಾಡದ್ದೆ, ಹನ್ನೆರಡ್ನೇ ದಿನ ಅವಂಗೆ ಏಕೋದ್ದಿಷ್ಟ ಶ್ರಾದ್ಧವ ಆಚರುಸೆಕು. (ಏಕೋದ್ದಿಷ್ಟ ಶ್ರಾದ್ಧ = ಮರಣ ಹೊಂದಿದವನ ಕುರಿತು ಒಂದೇ ದಿನ ಮಾಡ್ತ ಶ್ರಾದ್ಧ ಕ್ರಿಯೆ)
ಸ್ತ್ರೀಯರಿಂಗೆ ಮತ್ತು ಶೂದ್ರರಿಂಗೆ ಉಪ್ನಾನದ ಜಾಗೆಲಿ ಮದುವೆ ಸಂಸ್ಕಾರ ಹೇಳಿದ್ದದು. ಉಪ್ನಾನಂದ ಮದಲು ಎಲ್ಲ ವರ್ಣದೋರಿಂಗೂ ಒಂದೇ ರೀತಿಯ ಕ್ರಿಯೆಗಳ ಆಚರುಸೆಕು. ಆರು ಅಲ್ಪ ಕರ್ಮವ ಮಾಡಿರುತ್ತವೋ, ಅಲ್ಪ ವಿಷಯಾಸಕ್ತರಾಗಿರುತ್ತವೋ, ಅಲ್ಪ ಅವಸ್ಥೆ ಇರುತ್ತವೋ, ಅಲ್ಪ ಶರೀರದವರಾಗಿರುತ್ತವೋ – ಇಂಥ ಜೀವಗಳ ಮರಣ ಆದರೆ, ಅವರ ಕ್ರಿಯೆಗೊ ಕೂಡ ಅಲ್ಪ ಪ್ರಮಾಣಲ್ಲೇ ಮಾಡುವದು. ಕಿಶೋರಾವಸ್ಥೆಲಿ, ತರುಣಾವಸ್ಥೆಲಿ, ಶಯ್ಯಾದಾನವನ್ನೂ, ವೃಷೋತ್ಸರ್ಗ, ಹೋಮ ಮೊದಲಾದುವುಗಳನ್ನೂ, ಪದದಾನ, ಮಹಾದಾನಂಗಳನ್ನೂ ಹಾಂಗೂ ಗೋದಾನವನ್ನೂ ಮಾಡೆಕು.
ಎಲ್ಲ ಸಂನ್ಯಾಸಿಗೊಕ್ಕೆ ದಹನ ಸಂಸ್ಕಾರವೂ ಇಲ್ಲೆ, ಉದಕಕ್ರಿಯೆಗಳೂ ಇಲ್ಲೆ. ಮಕ್ಕೊ ಅವಕ್ಕೆ ದಶಗಾತ್ರ ವಿಧಿಗಳೆಲ್ಲ ಮಾಡ್ಳಾಗ. ದಂಡವ ಹಿಡುದ ಮಾತ್ರಂದಲೇ ನರ° ನಾರಾಯಣನಾವ್ತ°. ತ್ರಿದಂಡವ (ವಾಗ್ದಂಡ, ಮನೋದಂಡ, ಕಾಯದಂಡ) ಧರಿಸಿಗೊಂಬದರಿಂದ ಅವಂಗೆ ಪ್ರೇತತ್ವ ಉಂಟಾವುತ್ತಿಲ್ಲೆ.  ಜ್ಞಾನಿಗಳಾದರೋ ಸ್ವರೂಪ ಅನುಭವಂದಲೇ ಏವತ್ತೂ ಮುಕ್ತರಾಗಿರುತ್ತವು. ಹಾಂಗಾಗಿ ದಾನ ಕೊಡಲ್ಪಟ್ಟ ಪಿಂಡವ ಇಚ್ಚಿಸುತ್ತವಿಲ್ಲೆ. ಹಾಂಗಾಗಿ ಅವಕ್ಕೆ ಜಲದಾನ, ಪಿಂಡದಾನ ಇತ್ಯಾದಿಗಳ ಆಚರುಸಲಾಗ. ಆದರೆ ಪಿತೃಭಕ್ತಿಂದ ತೀರ್ಥಶ್ರಾದ್ದವನ್ನೂ, ಗಯಾಶ್ರಾದ್ಧವನ್ನೂ ಆಚರುಸೆಕು. ಹಂಸ, ಪರಮಹಂಸ, ಕುಟೀಚಕ ಮತ್ತೆ ಬಹೂದಕ – ಈ ನಾಲ್ಕು ಪ್ರಕಾರದ ಸಂನ್ಯಾಸಿಗೊ ಮರಣ ಹೊಂದಿದ ಮತ್ತೆ ಭೂಮಿಯಡಿಲಿ ಮಡುಗೆಕು. ಎಲ್ಲಿ ಗಂಗಾದಿ ನದಿಗೊ ಇಲ್ಲೆಯೋ ಅಲ್ಲಿ ಮಾತ್ರ ಭೂಮಿಯಡಿಲಿ ಮಡುಗೆಕು ಹೇದು ಹೇಳಿದ್ದದು. ಎಲ್ಲಿ ಮಹಾನದಿಗೊ ಇದ್ದೋ ಅಲ್ಲಿ ಆ ನದಿಲಿಯೇ ಪ್ರವಾಹಿತಗೊಳುಸೆಕು.
 
ಈ ರೀತಿಯಾಗಿ ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ದಹನ ಮತ್ತೆ ಅಸ್ಥಿಸಂಚಯನ ಕರ್ಮಂಗಳ ನಿರೂಪಣೆ’ ಹೇಳ್ವ ಹತ್ತನೇ ಅಧ್ಯಾಯ ಮುಗುದತ್ತು.
 
[ಚಿಂತನೀಯಾ –
ವ್ಯಕ್ತಿಯೋರ್ವ° ಮೃತನಾದರೆ ಅವನ ಕೊಂಡೋಗಿ ಕಿಚ್ಚಿಂಗಾಕಿ ಬೂದಿ ಮಾಡಿಕ್ಕಿ ಬಂದರೆ ಅಲ್ಲಿಗೆ ಕೆಲಸ ಮುಗಿತ್ತಿಲ್ಲೆ. ಮಗನಾದವ° ಅವನ ಸದ್ಗತಿಗಾಗಿ ಮತ್ತಾಣ ಕಾರ್ಯಂಗಳ ಮಾಡಿ ಸತ್ಪುತ್ರ° ಹೇಳ್ವ ಹೆಸರಿಂಗೆ ಅನ್ವರ್ಥನಾಯೆಕು. ಅವನ ಅಸ್ಥಿ ಸಂಚಯನ ಕರ್ಮವ ಶ್ರದ್ಧಾ ಭಕ್ತಿಂದ ಮಾಡಿ ಅಸ್ಥಿಯ ಗಂಗೆಲಿ ಬಿಡುವ ಜವಾಬ್ದಾರಿ ಮಗನಾದವನ ಕರ್ತವ್ಯ. ಹಾಂಗೇ ಮತ್ತಾಣ ಸದ್ಗತಿ ಕಾರ್ಯಂಗಳನ್ನೂ ವಿಧಿವತ್ತಾಗಿ ಮಾಡಿ ಪಿತೃಋಣವ ತೀರುಸೆಕು. ದಶಗಾತ್ರ ವಿಧಿ ಹೇದು ಇಲ್ಲಿ ಒಂದ ಪ್ರಸ್ತಾಪಿಸಿದ್ದ ಭಗವಂತ°. ಅದೆಂತರ ಹೇದು ಮುಂದಾಣ ಅಧ್ಯಾಯಲ್ಲಿ ನೋಡ್ವೊ.
ಎಲ್ಲೋರಿಂಗೂ ಕರ್ತವ್ಯ ಪ್ರಜ್ಞೆ ಜಾಗೃತವಾಗಿರಲಿ. ಭಗವಂತ° ಎಲ್ಲೋರ ಚಿತ್ತವ ಸತ್ ಚಿತ್ತವಾಗಿ ಪ್ರಚೋದಿಸಲಿ ಹೇದುಗೊಂಡು ಈ ಭಾಗಕ್ಕೆ ಹರೇ ರಾಮ.]

One thought on “ಗರುಡ ಪುರಾಣ – ಅಧ್ಯಾಯ 10 – ಭಾಗ 03

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×