- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಕಳುದವಾರ ಅಧ್ಯಾಯ 3ರಲ್ಲಿ ಓದಿದ್ದದು ಭಗವಂತ° ಗರುಡಂಗೆ ನಿರೂಪಿಸಿದ ಯಮಯಾತನೆಯ ಬಗ್ಗೆ. ಮುಂದೆ –
ಗರುಡ ಪುರಾಣಂ ಗರುಡ ಪುರಾಣ
ಅಥ ಚತುರ್ಥೋಧ್ಯಾಯಃ ಅಧ್ಯಾಯ 4 – ಭಾಗ 1
ನರಕಪ್ರದಪಾಪಚಿಹ್ನನಿರೂಪಣಮ್ ನರಕಂಗಳ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ
ಗರುಡ ಉವಾಚ
ಕೈರ್ಗಚ್ಛಂತಿ ಮಹಾಮಾರ್ಗೇ ವೈತರಣ್ಯಾಂ ಪತಂತಿ ಕೈಃ ।
ಕೈಃ ಪಾಪೈರ್ನರಕೇ ಯಾಂತಿ ತನ್ಮೇ ಕಥಯ ಕೇಶವ ॥೦೧॥
ಗರುಡ ಹೇಳಿದ° – “ಏ ಕೇಶವನೇ!, ಪಾಪಿಗೊ ಯಾವುದರಿಂದಲಾಗಿ (ಏವ ಪಾಪದ ಕಾರಣಂದಲಾಗಿ)ಹೋವುತ್ತವು. ಯಾವುದರಿಂದಲಾಗಿ ವೈತರಣೀ ನದಿಲಿ ಬೀಳುತ್ತವು. ಯಾವ ಪಾಪಂಗಳಿಂದಲಾಗಿ ನರಕಕ್ಕೆ ಹೋವ್ತವು ಹೇಳ್ವದರ ಎನಗೆ ಹೇಳು.”
ಶ್ರೀಭಗವಾನ್ ಉವಾಚ
ಸದೈವಾಕರ್ಮನಿರತಾಃ ಶುಭಕರ್ಮಪರಾಙ್ಮುಖಾಃ ।
ನರಕಾನ್ನರಕಂ ಯಾಂತಿ ದುಃಖಾದ್ದುಃಖಂ ಭಯಾದ್ಭಯಮ್ ॥೦೨॥
ಭಗವಂತ ಹೇಳಿದ°- ಏವತ್ತೂ ಅಶುಭಕರ್ಮಂಗಳಲ್ಲೇ ನಿರತರಾಗಿಪ್ಪೋರು, ಶುಭಕರ್ಮಂಗಳಿಂದ ವಿಮುಖರಾಗಿಪ್ಪೋರು ಒಂದು ನರಕಂದ ಇನ್ನೊಂದು ನರಕಕ್ಕೂ, ಒಂದು ದುಃಖಂದ ಇನ್ನೊಂದು ದುಃಖಕ್ಕೂ, ಒಂದು ಭಯಂದ ಇನ್ನೊಂದು ಭಯಕ್ಕೂ ಹೋವುತ್ತವು.
ಧರ್ಮರಾಜಪುರೇ ಯಾಂತಿ ತ್ರಿಭಿರ್ದ್ವಾರೈಸ್ತು ಧಾರ್ಮಿಕಾಃ ।
ಪಾಪಸ್ತು ದಕ್ಷಿಣದ್ವಾರಮಾರ್ಗೇಣೈವ ವ್ರಜಂತಿ ತತ್ ॥೦೩॥
ಧಾರ್ಮಿಕರು ಧರ್ಮರಾಜನ ಪುರಕ್ಕೆ ಮೂರು ದ್ವಾರಂಗಳಿಂದ ಹೋವುತ್ತವು. ಪಾಪಿಗೊ ದಕ್ಷಿಣದ್ವಾರದ ಮಾರ್ಗಂದಲೇ ಹೋವುತ್ತವು.
ಅಸ್ಮಿನ್ನೇವ ಮಹಾದುಃಖೇ ಮಾರ್ಗೇ ವೈತರಣೀ ನದೀ ।
ತತ್ರ ಯೇ ಪಾಪಿನೋ ಯಾಂತಿ ತಾನಹಂ ಕಥಯಾಮಿ ತೇ ॥೦೪॥
ಮಹಾದುಃಖಕರವಾದ ವೈತರಣೀ ನದಿ ಇಪ್ಪ ಇದೇ ಮಾರ್ಗಲ್ಲಿ ಯಾವ ಪಾಪಿಗೊ ಹೋವುತ್ತವೋ ಹೇಳ್ವದರ ಆನು ನಿನಗೆ ಹೇಳುತ್ತೆ.
ಬ್ರಹ್ಮಘ್ನಾಶ್ಚ ಸುರಾಪಾಶ್ಚ ಗೋಘ್ನಾ ವಾ ಬಾಲಘಾತಕಾಃ ।
ಸ್ತ್ರೀಘಾತೀ ಗರ್ಭಪಾತೀ ಚ ಯೇ ಚ ಪ್ರಚ್ಛನ್ನಪಾಪಿನಃ ॥೦೫॥
ಬ್ರಹ್ಮಹತ್ಯೆ ಮಾಡುವವು, ಸುರಾಪಾನ ಮಾಡುವವು, ಗೋಹತ್ಯೆ ಮಾಡುವವು, ಶಿಶುಹತ್ಯೆ ಮಾಡುವವು, ಸ್ತ್ರೀಹತ್ಯೆ ಮಾಡುವವು, ಗರ್ಭಪಾತ ಮಾಡುಸುವವು ಮತ್ತೆ ಗುಟ್ಟಿಲ್ಲಿ ಪಾಪಂಗಳ ಮಾಡುವವು,
ಯೇ ಹರಂತಿ ಗುರೋರ್ದ್ರವ್ಯಂ ದೇವದ್ರವ್ಯಂ ದ್ವಿಜಸ್ಯ ವಾ ।
ಸ್ತ್ರೀದ್ರವ್ಯಹಾರಿಣೋ ಯೇ ಚ ಬಾಲದ್ರವ್ಯಹರಾಶ್ಚ ಯೇ ॥೦೬॥
ಆರು ಗುರುಗಳ ದ್ರವ್ಯವ (ವಸ್ತು/ಧನ/ಸಂಪತ್ತು) ಅಥವಾ ದೇವರ ಪೈಸೆಯ (ವಸ್ತು/ಸಂಪತ್ತು/ದ್ರವ್ಯ) ಅಥವಾ ದ್ವಿಜರ ಪೈಸೆಯ ಅಪಹರುಸುತ್ತವೋ, ಆರು ಹೆಮ್ಮಕ್ಕಳ (ಕೂಸುಗಳ) ಧನವ ಅಪಹರುಸುತ್ತವೋ, ಆರು ಮಕ್ಕಳ ಪೈಸೆಯ ಅಪಹರುಸುತ್ತವೋ,
ಯೇ ಋಣಂ ನ ಪ್ರಯಚ್ಛಂತಿ ಯೇ ವೈ ನ್ಯಾಸಾಪಹಾರಕಾಃ ।
ವಿಶ್ವಾಸಘಾತಕಾ ಯೇ ಚ ಸವಿಷಾನ್ನೇನ ಮಾರಕಾಃ ॥೦೭॥
ಆರು ಇನ್ನೊಬ್ಬನತ್ರಂದ ತೆಕ್ಕೊಂಡ ಸಾಲವ ತೀರುಸುತ್ತವಿಲ್ಲೆಯೋ, ಆರು ಇನ್ನೊಬ್ಬ° ಒತ್ತೆ ಮಡಿಗಿದ್ದರ ಅಪಹರುಸುತ್ತವೋ, ಆರು ವಿಶ್ವಾಸಘಾತಕರೋ, ಮತ್ತೆ ಆರು ಅಶನಲ್ಲಿ ವಿಷ ಹಾಕಿ ಕೊಲ್ಲುತ್ತವೋ,
ದೋಷಗ್ರಾಹೀ ಗುಣಾಶ್ಲಾಘೀ ಗುಣವತ್ಸು ಸಮತ್ಸರಾಃ ।
ನೀಚಾನುರಾಗಿಣೋ ಮೂಢಾಃ ಸತ್ಸಂಗತಿಪರಾಙ್ಮುಖಾಃ ॥೦೮॥
ಆರು ಪರರ ದೋಷವ ಗ್ರಹಣಮಾಡುತ್ತವೋ, ಉತ್ತಮ ಗುಣಂಗಳ ಪ್ರಶಂಸಿಸುತ್ತವಿಲ್ಲೆಯೋ, ಗುಣವಂತರಲ್ಲಿ ಮತ್ಸರಪಡುತ್ತವೋ, ನೀಚರ ಪ್ರೀತಿಸುತ್ತವೋ, ಮೂಢರು, ಸತ್ಸಂಗಂದ ವಿಮುಖರಾದೋರು,
ತೀರ್ಥಸಜ್ಜನಸತ್ಕರ್ಮಗುರುದೇವನಿಂದಕಾಃ ।
ಪುರಾಣವೇದಮೀಮಾಂಸಾನ್ಯಾಯವೇದಾಂತದೂಷಕಾಃ ॥೦೯॥
ತೀರ್ಥ, ಸಜ್ಜನ, ಸತ್ಕರ್ಮ, ಗುರು, ಮತ್ತೆ ದೇವರ ನಿಂದನೆ ಮಾಡುವವು, ಪುರಾಣ, ವೇದ, ಮೀಮಾಂಸ, ನ್ಯಾಯ ಮತ್ತೆ ವೇದಾಂತಂಗಳ ದೂಷಣೆ ಮಾಡುವವು,
ಹರ್ಷಿತಾ ದುಃಖಿತಂ ದೃಷ್ಟ್ವಾ ಹರ್ಷಿತೇ ದುಃಖದಾಯಕಾಃ ।
ದುಷ್ಟವಾಕ್ಯಸ್ಯ ವಕ್ತಾರೋ ದುಷ್ಟಚಿತ್ತಾಶ್ಚ ಯೇ ಸದಾ ॥೧೦॥
ದುಃಖಿತರ ನೋಡಿ ಸಂತೋಷ ಪಡುವವು, ಹರ್ಷಿತರಾಗಿದ್ದೋರ ದುಃಖಿಗಳಾಗಿ ಮಾಡುವವು, ಬೇಡಂಗಟ್ಟೆ ಮಾತುಗಳ ಆಡುವವು, ಏವತ್ತೂ ದುರಾಲೋಚನೆಲಿ ಇಪ್ಪವು,
ನ ಶೃಣ್ವಂತಿ ಹಿತಂ ವಾಕ್ಯಂ ಶಾಸ್ತ್ರವಾರ್ತಾಂ ಕದಾಪಿ ನ ।
ಆತ್ಮಸಂಭಾವಿತಾಃ ಸ್ತಬ್ಧಾ ಮೂಢಾಃ ಪಂಡಿತಮಾನಿನಃ ॥೧೧॥
ಹಿತವಚನಂಗಳನ್ನೂ, ಶಾಸ್ತ್ರದ ವಿಷಯಂಗಳನ್ನೂ ಏವತ್ತೂ ಕೇಳದ್ದೇ ಇಪ್ಪವು, ಆತ್ಮಶ್ಲಾಘನೆಯನ್ನೇ ಮಾಡುತ್ತವು (ತಾನೇ ಸಂಭಾವಿತ°, ದೊಡ್ಡವ° ಹೇದು ತಿಳ್ಕೊಂಡಿಪ್ಪವು), ಕಠಿಣ ಹೃದಯಿಗೊ, ಮೂಢರು, ತಮ್ಮನ್ನೇ ಪಂಡಿತ° ಹೇದು ತಿಳ್ಕೊಂಬವು,
ಏತೇ ಚಾನ್ಯೇ ಚ ಬಹವಃ ಪಾಪಿಷ್ಠಾ ಧರ್ಮವರ್ಜಿತಾಃ ।
ಗಚ್ಛಂತಿ ಯಮಮಾರ್ಗೇ ಹಿ ರೋದಮಾನಾ ದಿವಾನಿಶಮ್ ॥೧೨॥
ಇವೆಲ್ಲೋರೂ, ಪಾಪಿಗಳೂ, ಧರ್ಮಹೀನರೂ ಆದ ಇನ್ನೂ ಅನೇಕರು ಯಮಮಾರ್ಗಲ್ಲಿ ಹಗಲು ಇರುಳು ಕೂಗಿಯೊಂಡು ಹೋವುತ್ತವು.
ಯಮದೂತೈಸ್ತಾಡ್ಯಮಾನಾ ಯಾಂತಿ ವೈತರಣೀಂ ಪ್ರತಿ ।
ತಸ್ಯಾಂ ಪತಂತಿ ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೧೩॥
ಯಮದೂತರಿಂದ ಬಡುಶಿಗೊಂಡು, ವೈತರಣೀ ನದಿಯ ಕಡೆಂಗೆ ಹೋವುತ್ತವು. ಯಾವ ಪಾಪಿಗೊ ಅದರ್ಲಿ ಬೀಳುತ್ತವು ಹೇಳ್ವದರ ಆನು ನಿನಗೆ ಹೇಳುತ್ತೆ.
ಮಾತರಂ ಯೇsವಮನ್ಯಂತೇ ಪಿತರಂ ಗುರುಮೇವ ಚ ।
ಆಚಾರ್ಯಂ ಚಾಪಿ ಪೂಜ್ಯಂ ಚ ತಸ್ಯಾಂ ಮಜ್ಜಂತಿ ತೇ ನರಾಃ ॥೧೪॥
ಆರು ಅಬ್ಬೆ ಅಪ್ಪ° ಗುರು ಆಚಾರ್ಯ° ಮತ್ತೆ ಪೂಜ್ಯರ ಅವಮಾನಿಸುತ್ತವೋ ಆ ಮನುಷ್ಯರು ಅದರ್ಲಿ ಮುಳುಗುತ್ತವು.
ಪತಿವ್ರತಾಂ ಸಾಧುಶೀಲಾಂ ಕುಲೀನಾಂ ವಿನಯಾನ್ವಿತಾಮ್ ।
ಸ್ತ್ರಿಯಂ ತ್ಯಜಂತಿ ಯೇ ದ್ವೇಷಾದ್ವೈತರಣ್ಯಾಂ ಪತಂತಿ ತೇ ॥೧೫॥
ಆರು ಪತಿವ್ರತೆಯೂ, ಸಾಧುಶೀಲೆಯೂ, ಕುಲೀನಳೂ, ವಿನಯಶೀಲೆಯೂ ಆದ ಸ್ತ್ರೀಯರ ದ್ವೇಷಂದ ತ್ಯಜಿಸುತ್ತವೋ ಅವು ವೈತರಣೀ ನದಿಲಿ ಬೀಳುತ್ತವು.
ಸತಾಂ ಗುಣಸಹಸ್ರೇಷು ದೋಷಾನಾರೋಪಯಂತಿ ಯೇ ।
ತೇಷ್ವವಜ್ಞಾಂ ಚ ಕುರ್ವಂತಿ ವೈತರಣ್ಯಾಂ ಪತಂತಿ ತೇ ॥೧೬॥
ಆರು ಸಾವಿರಾರು ಗುಣಂಗಳಿಪ್ಪವರ ಮೇಗೆ ದೋಷಾರೋಪಣೆ ಮಾಡುತ್ತವೋ ಮತ್ತೆ ಅವರ ತಿರಸ್ಕಾರ ಮಾಡುತ್ತವೋ ಅವು ವೈತರಣೀ ನದಿಲಿ ಬೀಳುತ್ತವು.
ಬ್ರಾಹ್ಮಣಾಯ ಪ್ರತಿಶ್ರುತ್ಯ ಯಥಾರ್ಥಂ ನ ದದಾತಿ ಯಃ ।
ಆಹೂಯ ನಾಸ್ತಿ ಯೋ ಬ್ರೂಯಾತ್ತ ಯೋರ್ವಾಸಶ್ಚ ಸಂತತಮ್ ॥೧೭॥
ಆರು ಬ್ರಾಹ್ಮಣಂಗೆ ಪ್ರತಿಜ್ಞೆಮಾಡಿಕ್ಕಿ ಅದರ ಪ್ರಕಾರವಾಗಿ ಕೊಡುತ್ತವಿಲ್ಲೆಯೋ, ಅವರ ದೆನಿಗೊಂಡಿಕ್ಕಿ (ಆಹ್ವಾನಿಸಿ) ಎಂತದೂ ಇಲ್ಲೆ ಹೇದು ಹೇಳುತ್ತವೋ ಅವು ಏವತ್ತೂ ಅಲ್ಲೇ ವಾಸ ಮಾಡುತ್ತವು.
ಸ್ವಯಂ ದತ್ತಾಪಹರ್ತಾ ಚ ದಾನಂ ದತ್ವಾsನುತಾಪಕಃ ।
ಪರವೃತ್ತಿ ಹರಶ್ಚೈವ ದಾನೇ ದತ್ತೇ ನಿವಾರಕಃ ॥೧೮॥
ತಾನೇ ದಾನ ಕೊಟ್ಟದ್ದರ ಕಿತ್ತುಗೊಂಬವ°, ದಾನವ ಕೊಟ್ಟು ಪಶ್ಚಾತ್ತಾಪ ಪಡುವಂವ°, ಪರರ ಜೀವಿಕೆಯ ಅಪಹರುಸುವಂವ°, ಮತ್ತೊಬ್ಬ° ದಾನ ಕೊಡ್ತದರ ನಿಷೇಧಿಸುವಂವ°,
ಯಜ್ಞವಿಧ್ವಂಸಕಶ್ಚೈವ ಕಥಭಂಗಕರಶ್ಚ ಯಃ ।
ಕ್ಷೇತ್ರಸೀಮಾಹರಶ್ಚೈವ ಯಶ್ಚ ಗೋಚರಕರ್ಷಕಃ ॥೧೯॥
ಯಜ್ಞವ ಧ್ವಂಸ ಮಾಡುವಂವ°, ಪುರಾಣ ಕಥಗೆ ವಿಘ್ನವುಂಟುಮಾಡುವಂವ°, ಹೊಲದ ಮೇರೆಯ ಅಪಹರುಸುವಂವ° (ಜಾಗೆಯ ಗಡಿಯ ಅತಿಕ್ರಮಣ ಮಾಡುವಂವ°), ಗೋಮೇವ (ಭೂಮಿಯ/ಪ್ರದೇಶವ) ಅಪಹರುಸುವಂವ°,
ಬ್ರಾಹ್ಮಣೋ ರಸವಿಕ್ರೇತಾ ಯದಿಸ್ಯಾದ್ ವ್ಯಷಲೀಪತಿಃ ।
ವೇದೋಕ್ತಯಜ್ಞಾದನ್ಯತ್ರ ಸ್ವಾತ್ಮಾರ್ಥಂ ಪಶುಮಾರಕಃ ॥೨೦॥
ಬ್ರಾಹ್ಮಣನಾಗಿಯೂ ರಸವಿಕ್ರಯ (ಮಾದಕ ದ್ರವ ಪದಾರ್ಥವ ಮಾರುವವ°) ಮಾಡುವವ°, ಕೀಳ್ದರ್ಜೆಸ್ತ್ರೀಯ ವರುಸುವವ°, ವೇದೋಕ್ತಯಜ್ಞಂಗೊಕ್ಕೆ ವ್ಯತಿರಿಕ್ತವಾಗಿ ಸ್ವಾನಂದಕ್ಕಾಗಿ ಪಶುಹತ್ಯೆಮಾಡುವವ°
ಬ್ರಹ್ಮಕರ್ಮಪರಿಭ್ರಷ್ಟೋ ಮಾಂಸಭೋಕ್ತಾ ಚ ಮದ್ಯಪಃ ।
ಉಚ್ಛೃಂಖಲಿಸ್ವಭಾವೋ ಯಃ ಶಾಸ್ತ್ರಾಧ್ಯಯನವರ್ಜಿತಃ ॥೨೧॥
ಬ್ರಹ್ಮಕರ್ಮವ ಮಾಡದ್ದೇ ಇಪ್ಪಂವ°, ಮಾಂಸ ಭಕ್ಷಣೆ ಮಾಡುವಂವ, ಮದ್ಯಪಾನ ಮಾಡುವಂವ°, ಸ್ವೇಚ್ಛಾಚಾರಿಯಾದಂವ°, ಶಾಸ್ತ್ರಾಧ್ಯಯನ ಮಾಡದ್ದೆ ಇಪ್ಪಂವ°,
ವೇದಾಕ್ಷರಂ ಪಠೇಚ್ಛೂದ್ರಃ ಕಾಪಿಲಂ ಯಃ ಪಯಃ ಪಿಬೇತ್ ।
ಧಾರಯೇದ್ ಬ್ರಹ್ಮಸೂತ್ರಂ ಚ ಭವೇದ್ವಾ ಬ್ರಾಹ್ಮಣೀ ಪತಿಃ ॥೨೨॥
ಯಾವ ಶೂದ್ರನಾದವ° ವೇದಾಕ್ಷರವ ಪಠಿಸುತ್ತನೋ, ಕಪಿಲೆಯ ಹಾಲ ಕುಡಿತ್ತನೋ, ಯಜ್ಞೋಪವೀತವ ಧರುಸುತ್ತನೋ, ಬ್ರಾಹ್ಮಣ ಸ್ತ್ರೀಯ ಗಂಡನಾವ್ತನೋ,
ರಾಜಭಾರ್ಯಾಭಿಲಾಷೀ ಚ ಪರದಾರಾಪಹಾರಕಃ ।
ಕನ್ಯಾಯಾಂ ಕಾಮುಕಶ್ಛೈವ ಸತೀನಾಂ ದೂಶಕಶ್ಚ ಯಃ ॥೨೩॥
ರಾಜನ ಪತ್ನಿಯ ಇಚ್ಛಿಸುವಂವ°, ಮತ್ತೆ ಪರಸ್ತ್ರೀಯರ ಅಪಹರುಸುವಂವ°, ಕನ್ಯೆಯರ ಕಾಮಿಸುವಂವ°, ಮತ್ತೆ ಪತಿವ್ರತಾ ಸ್ತ್ರೀಯರ ದೂಷಿಸುವಂವ°,
ಏತೇ ಚಾನ್ಯೇ ಚ ಬಹವೋ ನಿಷಿದ್ಧಾಚರಣೋತ್ಸುಕಾಃ ।
ವಿಹಿತತ್ಯಾಗಿನೋ ಮೂಢಾ ವೈತರಣ್ಯಾಂ ಪತಂತಿ ತೇ ॥೨೪॥
ಇವೆಲ್ಲೋರೂ, ನಿಷಿದ್ಧವಾದ ಆಚರಣೆಲಿ ಉತ್ಸುಕರಾದೋರು, ಶಾಸ್ತ್ರವಿದಿತ ಕರ್ಮಂಗಳ ತ್ಯಜಿಸಿದ ಮೂಢರು ಮತ್ತೆ ಇನ್ನೂ ಅನೇಕರು ವೈತರಣೀ ನದಿಲಿ ಬೀಳುತ್ತವು.
ಸರ್ವಂ ಮಾರ್ಗಮತಿಕ್ರಮ್ಯ ಯಾಂತಿ ಪಾಪಾ ಯಮಾಲಯೇ ।
ಪುನರ್ಯಮಾಜ್ಞಯಾಗತ್ಯ ದೂತಾಸ್ತಸ್ಯಾಂ ಕ್ಷಿಪಂತಿ ತಾನ್ ॥೨೫॥
ಮಾರ್ಗಂಗಳೆಲ್ಲವ ದಾಂಟಿ ಪಾಪಿ ಯಮಾಲಯಕ್ಕೆ ಹೋವುತ್ತವು. ಅಲ್ಲಿ ಯಮನ ಆಜ್ಞೆ ಪ್ರಕಾರ ದೂತರು ಅವರ ಪುನಃ ಅದೇ ವೈತರಣೀ ನದಿಲಿ ಇಡ್ಕುತ್ತವು.
ಯಾ ವೈ ದುರಂಧರಾ ಸರ್ವಧೌರೇಯಾಣಾಂ ಖಗಾಧಿಪ ।
ಅತಸ್ತಸ್ಯಾಂ ಪ್ರಕ್ಷಿಪಂತಿ ವೈತರಣ್ಯಾಂ ಚ ಪಾಪಿನಃ ॥೨೬॥
ಏ ಪಕ್ಷಿರಾಜನೇ!, ನರಕಂಗಳಲ್ಲಿ ಅತಿ ಮುಖ್ಯವಾದ ವೈತರಣಿಲಿ ಆ ಪಾಪಿಗಳ ಅವು ಅಂಬಗ ಇಡ್ಕುತ್ತವು.
ಕೃಷ್ಣಾ ಗೌರ್ಯಾದಿ ನೋ ದತ್ತಾ ನೋರ್ಧ್ವದೇಹಕ್ರಿಯಾಃ ಕೃತಾಃ ।
ತಸ್ಯಾಂ ಭುಕ್ತ್ವಾ ಮಹದುಃಖಂ ಯಾಂತಿ ವೃಕ್ಷಂ ತಟೋದ್ಭವಮ್ ॥೨೭॥
ಕೃಷ್ಣವರ್ಣದ ಗೋವಿನ ದಾನಕೊಡದ್ದೆ ಇಪ್ಪವು, ಔರ್ಧ್ವದೇಹಕ್ರಿಯೆಯ ಮಾಡದ್ದೆ ಇಪ್ಪವು ಅದರಲ್ಲಿ ಮಹಾದುಃಖವ ಅನುಭವಿಸಿ, ಆ ನದಿಯ ದಡಲ್ಲಿ ಹುಟ್ಟಿದ ಮರದ ಹತ್ರೆ ಹೋವುತ್ತವು.
ಕೂಟಸಾಕ್ಷ್ಯಪ್ರದಾತಾರಃ ಕೂಟಧರ್ಮಪರಾಯಣಾಃ ।
ಛಲೇನಾರ್ಜಸಂಸಕ್ತಾಶ್ಚೌರ್ಯವೃತ್ತ್ಯಾ ಚ ಜೀವಿನಃ ॥೨೮॥
ಸುಳ್ಳು ಸಾಕ್ಷಿ ಹೇಳುವವು, ಮಿಥ್ಯಾಧರ್ಮಲ್ಲಿ ಪ್ರವೃತ್ತರಾಗಿಪ್ಪವು, ಮೋಸಂದ ಸಂಪಾದುಸುವವು, ಕದ್ದುಗೊಂಡು ಜೀವನ ಮಾಡುವವು,
ಛೇದಯಂತ್ಯತಿವೃಕ್ಷಾಂಶ್ಚ ವನಾರಾಮವಿಭಂಜಕಾಃ ।
ವ್ರತಂ ತೀರ್ಥಂ ಪರಿತ್ಯಜ್ಯ ವಿಧವಾಶೀಲನಾಶಕಾಃ ॥೨೯॥
ದೊಡ್ಡ ಮರಂಗಳ ಕತ್ತರುಸುವವು, ಕಾಡುಗಳ, ತೋಟಂಗಳ ನಾಶಮಾಡುವವು, ವ್ರತಂಗಳನ್ನೂ ತೀರ್ಥಂಗಳನ್ನೂ ತ್ಯಜಿಸುವವು, ವಿಧವೆಯ ಶೀಲವ ನಾಶಮಾಡುವವು,
ಭರ್ತಾರಂ ದೂಷಯೇನ್ನಾರೀ ಪರಂ ಮನಸಿ ಧಾರಯೇತ್ ।
ಇತ್ಯಾದ್ಯಾಃ ಶಾಲ್ಮಲೀವೃಕ್ಷೇ ಭುಜಂತೇ ಬಹುತಾಡನಮ್ ॥೩೦॥
ತನ್ನ ಪತಿಯ ದೂಷಿಸಿ, ಪರರ ಮನಸ್ಸಿಲ್ಲಿ ಧ್ಯಾನುಸುವ ಸ್ತ್ರೀ ಮೊದಲಾದವು ಶಾಲ್ಮಲೀ ವೃಕ್ಷದ ಹತ್ರೆ ಬಹಳ ಪೆಟ್ಟು ತಿಂತವು.
ತಾಡನಾತ್ಪತಿತಾ ದೂತಾಃ ಕ್ಷಿಪಂತಿ ನರಕೇಷು ತಾನ್ ।
ಪತಂತಿ ತೇಷು ಯೇ ಪಾಪಾಸ್ತಾನಹಂ ಕಥಯಾಮಿ ತೇ ॥೩೧॥
ಆ ಹೊಡೆತಂದ ಕೆಳಂಗೆ ಬಿದ್ದೋರ ದೂತರು ಎಳದು ನರಕದೊಳಂಗೆ ಇಡ್ಕುತ್ತವು. ಯಾವ ಪಾಪಿಗೊ ಅದರ್ಲಿ ಬೀಳುತ್ತವು ಹೇಳ್ವದರ ಆನು ನಿನಗೆ ಹೇಳುತ್ತೆ.
ಗದ್ಯರೂಪಲ್ಲಿ –
ಭಗವಂತನತ್ರೆ ಗರುಡ° ಹೇಳುತ್ತ° – “ಏ ಕೇಶವ!, ಏವ ಪಾಪಂಗಳ ಕಾರಣಂದಲಾಗಿ ಪಾಪಿ ಮನುಷ್ಯರು ಯಮಲೋಕದ ಮಾರ್ಗಲ್ಲಿ ಹೋವುತ್ತವು, ಏವ ಪಾಪದ ಕಾರಣಂದಲಾಗಿ ವೈತರಣೀ ನದಿಲಿ ಬೀಳುತ್ತವು, ಏವ ಪಾಪದ ಕಾರಣಂದಲಾಗಿ ನರಕಕ್ಕೆ ಹೋವ್ತವು ಹೇಳಿ ಎನ ವಿವರುಸು”.
ಅದರ ಕೇಳಿದ ಭಗವಂತ° ಗರುಡಂಗೆ ಹೇಳುತ್ತ° – “ಸದಾ ಪಾಪಕರ್ಮಂಗಳಲ್ಲಿ ತೊಡಗಿಪ್ಪ, ಶುಭಕರ್ಮಂಗಳಿಂದ ವಿಮುಖರಾದೋರು ಒಂದು ನರಕಂದ ಇನ್ನೊಂದು ನರಕಕ್ಕೆ, ಒಂದು ದುಃಖಂದ ಇನ್ನೊಂದು ದುಃಖವ ಮತ್ತೆ ಒಂದು ಭಯಂದ ಇನ್ನೊಂದು ಭಯವ ಹೊಂದುತ್ತವು. ಧಾರ್ಮಿಕ ಜನರು (ಪುಣ್ಯಾತ್ಮರು) ಧರ್ಮರಾಯನ ಪುರಕ್ಕೆ ಮೂರು ಮಾರ್ಗಂಗಳಿಂದ ಹೋವುತ್ತವು. ಪಾಪಿಗೊ ದಕ್ಷಿಣ ದ್ವಾರದ ಮಾರ್ಗಂದಲೇ ಅಲ್ಲಿಗೆ ಹೋವುತ್ತವು. ಇದೇ ಮಹಾದುಃಖದಾಯಕ ದಕ್ಷಿಣ ಮಾರ್ಗಲ್ಲಿಯೇ ವೈತರಣೀ ನದೀ ಇಪ್ಪದು. ಏವ ಪಾಪಿಗೊ ಈ ಮಾರ್ಗಲ್ಲಿ ಹೋವುತ್ತವು ಹೇಳ್ವದರ ನಿನಗೆ ಆನು ವಿವರುಸುತ್ತೆ”. ಭಗವಂತ° ತನ್ನ ವಿವರಣೆಯ ಗರುಡಂಗೆ ಮುಂದೆ ಈ ರೀತಿಯಾಗಿ ಹೇಳುತ್ತ° –
“ಬ್ರಹ್ಮಹತ್ಯೆ ಮಾಡುವವು (ಇಲ್ಲಿ ಮಾಡುವವು ಹೇಳಿರೆ ಮಾಡಿದವು ಹೇಳಿ ಅರ್ಥ), ಮದ್ಯಪಾನ ಮಾಡುವವು, ಗೋಹತ್ಯೆ ಮಾಡುವವು, ಶಿಶುಹತ್ಯೆ ಮಾಡುವವು, ಸ್ತ್ರೀ ಹತ್ಯೆ ಮಾಡುವವು, ಭ್ರೂಣಹತ್ಯೆ ಮಾಡುವವು, ಗುಪ್ತರೀತಿಲಿ ಪಾಪಕರ್ಮವ ಮಾಡುವವು, ಗುರುವಿನ ಧನವ/ಸಂಪತ್ತಿನ ಅಪಹರುಸುವವು, ದೇವತೆ ಮತ್ತೆ ಬ್ರಾಹ್ಮಣರ ಸಂಪತ್ತಿನ ಅಪಹರುಸುವವು, ಸ್ತ್ರೀಸಂಪತ್ತಿನ ಹರಣ ಮಾಡುವವು, ಬಾಲದ್ರವ್ಯವ ಹರಣ ಮಾಡುವವು, ಸಾಲ ತೆಕ್ಕೊಂಡು ಹಿಂದೆ ಕೊಡದ್ದಿಪ್ಪವು, ಅಡವು ಮಡಿಗಿದ್ದರ ತಿಂದು ಹಾಕುವವು, ವಿಶ್ವಾಸಘಾತುಕರು, ವಿಷಾನ್ನ ಕೊಟ್ಟು ಕೊಲ್ಲುವವು, ಅನ್ಯರ ದೋಷವ / ಪಾಪವ ಸ್ವೀಕರುಸುವವು, ಸದ್ಗುಣಂಗಳ ಪ್ರಶಂಸೆ ಮಾಡದವು, ಗುಣವಂತರಲ್ಲಿ ಮತ್ಸರ ತಾಳುವವು, ನೀಚರಲ್ಲಿ ಅನುರಾಗಿ ಹೊಂದಿಪ್ಪವು, ಮೂಢರು, ಸತ್ಸಂಗಂದ ದೂರ ಇಪ್ಪೋರು, ತೀರ್ಥಕ್ಷೇತ್ರಂಗಳ, ಸಜ್ಜನರ, ಸತ್ಕರ್ಮಂಗಳ, ಗುರುಜನರ ಮತ್ತೆ ದೇವತೆಗಳ ನಿಂದುಸುವವು, ಪುರಾಣ, ವೇದ, ಮೀಮಾಂಸ, ನ್ಯಾಯ ಮತ್ತೆ ವೇದಾಂತಂಗಳ ದೂಷಣೆ ಮಾಡುವವು, ದುಃಖಿಗಳ ಕಂಡು ಸಂತೋಷಪಡುವವು, ಸಂತುಷ್ಟರಿಂಗೆ ದುಃಖನೀಡುವವು, ಹಾಂಗೇ ಸದಾ ದೂಷಿತ ಮನೋವೃತ್ತಿಯಿಪ್ಪೋರು, ಹಿತಕರ ವಾಕ್ಯ ಮತ್ತೆ ಶಾಸ್ತ್ರೀಯ ವಚನಂಗಳ ಎಂದೂ ಕೇಳದ್ದವು, ತಮ್ಮನ್ನೇ ಶ್ರೇಷ್ಠರೆಂದು ಗರ್ವತೋರುವವು, ಮೂರ್ಖರಾಗಿಪ್ಪೋರು, ಕಠಿಣ ಹೃದಯಿಗೊ, ತಮ್ಮನ್ನೇ ವಿದ್ವಾಂಸ ಹೇದು ತಿಳಿವವು, ಧರ್ಮಹೀನರು, ಹೀಂಗೆ ಈ ರೀತಿಯ ಬೇರೆ ಬೇರೆ ಪಾಪಕರ್ಮಂಗಳಲ್ಲಿ ತೊಡಗಿಪ್ಪೋರು ಯಮದೂತರಿಂದ ಪೆಟ್ಟುತಿಂದುಗೊಂಡು ದುಃಖವ ಅನುಭವಿಸಿಗೊಂಡು ಹಗಲು ಇರುಳು ನಡಕ್ಕೊಂಡು ಕೂಗ್ಯೊಂಡೇ ಈ ಯಮಮಾರ್ಗಲ್ಲಿ ವೈತರಣೀ ನದಿ ಹತ್ರಂಗೆ ಹೋವುತ್ತವು. ಇನ್ನು ಯಾವ ಪಾಪಿಗೊ ಆ ವೈತರಣೀ ನದಿಲಿ ಬೀಳುತ್ತವು ಹೇಳ್ವದರ ಹೇಳುತ್ತೆ-
ಆರು ಅಬ್ಬೆ, ಅಪ್ಪ°, ಗುರು, ಆಚಾರ್ಯ° ಹಾಂಗೂ ಪೂಜ್ಯವ್ಯಕ್ತಿಗಳ ಅಪಮಾನ ಮಾಡುತ್ತವೋ ಅವು ಅದರ್ಲಿ ಮುಳುಗುತ್ತವು. ಇನ್ನು, ಆರು ಪತಿವ್ರತೆ, ಸಚ್ಚಾರಿತ್ರೆ, ಉತ್ತಮ ಕುಲೋತ್ಪನ್ನ ವಿನಯಯುಕ್ತ ಸ್ತ್ರೀ (ಪತ್ನಿ)ಯ ದ್ವೇಷದ ಕಾರಣಂದ ಬಿಡುತ್ತವೋ, ಅವು ಆ ವೈತರಣೀ ನದಿಲಿ ಬೀಳುತ್ತವು. ಆರು ಸಹಸ್ರಗುಣಂಗಳಿದ್ದರೂ ಕೂಡ ಸತ್ಪುರುಷ ಮೇಲೆ ದೋಷದ ಆರೋಪಣೆ ಮಾಡುತ್ತವೋ, ಅವರ ಅವಹೇಳನ ಮಾಡುತ್ತವೋ /ತಿರಸ್ಕರುಸುತ್ತವೋ ಅವು ವೈತರಣೀ ನದಿಲಿ ಬೀಳುತ್ತವು. ಆರು ಒಬ್ಬ° ಬ್ರಾಹ್ಮಣಂಗೆ ಮಾತು ಕೊಟ್ಟಿಕ್ಕಿ ಮತ್ತೆ ಯಥಾರ್ಥ ರೂಪಲ್ಲಿ ನಡಕ್ಕೊಳ್ಳುತ್ತವಿಲ್ಲೆಯೋ (ಪ್ರತಿಜ್ಞಾಭ್ರಷ್ಠರು), ಮತ್ತೆ ಅವರ ದೆನಿಗೊಂಡು ‘ಇಲ್ಲೆ’ ಹೇದು ಹೇಳುತ್ತವೋ ಅವು ಸದಾ ವೈತರಣೀ ನದಿಲಿ ನಿವಾಸ ಮಾಡುತ್ತವು. ಆರು ತಾನು ಕೊಟ್ಟ ದಾನವ ಮರಳಿ ಕಿತ್ತುಗೊಳ್ಳುತ್ತವೋ, ದಾನ ಕೊಟ್ಟಿಕ್ಕಿ ಪಶ್ಚಾತ್ತಾಪ ಪಡುತ್ತವೋ, ಆರು ಅನ್ಯರ ಜೀವನ ನಿರ್ವಹಣೆಯ ಸಾಧನಂಗಳ ಅಪಹರಣ ಮಾಡುತ್ತವೋ, ಇನ್ನೊಬ್ಬ° ಕೊಡ್ತ ದಾನವ ತಡೆತ್ತವೋ, ಯಜ್ಞವ ವಿಧ್ವಂಸಗೊಳುಸುತ್ತವೋ, ಪುರಾಣ ಕಥಾಭಂಗ ಮಾಡುತ್ತವೋ, ಕ್ಷೇತ್ರದ ಸೀಮೆಯ ಹರಣ ಮಾಡುತ್ತವೋ (ಗಡಿ ಮೀರಿ ಜಾಗೆ ಒಳಹಾಕುತ್ತವೋ), ಆರು ಗೋ ಗ್ರಾಸ / ಗೋಮೇವ ಭೂಮಿಯ ಹರಣ ಮಾಡುತ್ತವೋ, ಜೀವಿಗಳ ಜೀವನಾಧಾರಕ್ಕೆ ಇಪ್ಪ ಕೃಷಿ ಭೂಮಿಯ ಅನ್ಯ ಉದ್ದೇಶಂಗೊಕ್ಕೆ ಉಪಯೋಗುಸುತ್ತವೋ, ಯಾವಾತ° ಮದ್ಯ ಮಾರುವ ಬ್ರಾಹ್ಮಣನಾಗಿರ್ತನೋ, ನೀಚ ಸ್ತ್ರೀಯ ಮದುವೆ ಅಪ್ಪ ಬ್ರಾಹ್ಮಣನಿರ್ತನೋ, ಯಾವಾತ° ಶಾಸ್ತ್ರೋಕ್ತ ಅಲ್ಲದ್ದ ಸ್ವಸಂತೋಷಕ್ಕಾಗಿ ಪಶುಹತ್ಯೆ ಮಾಡುವ ಬ್ರಾಹ್ಮಣನಾಗಿದ್ದನೋ, ಆರು ಬ್ರಹ್ಮ ಕರ್ಮಂಗಳ ಮಾಡುತ್ತವಿಲ್ಲೆಯೋ / ಚ್ಯುತರಾವ್ತವೋ, ಮಧು ಮಾಂಸ ವ್ಯಸನಿಗಳಾಗಿರುತ್ತವೋ, ಸ್ವೇಚ್ಛಾಚಾರ ಪ್ರವೃತ್ತಿಯುಳ್ಳವರಾಗಿರುತ್ತವೋ, ಆರು ಶಾಸ್ತ್ರಾಧ್ಯಯನರಹಿತರಾಗಿರುತ್ತವೋ (ಬ್ರಾಹ್ಮಣ°), ಯಾವ ಶೂದ್ರ ವೇದಾಕ್ಷರ ಉಚ್ಛರುಸುತ್ತನೋ, ಕಪಿಲಧೇನುವ ಹಾಲ ಕುಡಿತ್ತನೋ, ಜನಿವಾರ ಧರುಸುತ್ತನೋ, ಬ್ರಾಹ್ಮಣ ಕೂಸಿನ ಮದುವೆ ಆವ್ತನೋ, ಆರು ರಾಜಸ್ತ್ರೀಯರ, ಪರಸ್ತ್ರೀಯರ ಅಪಹರುಸುತ್ತವೋ, ಅಪ್ರಾಪ್ತ ಕನ್ಯೆಯರ ಮೇಲೆ ಕಾಮಕಣ್ಣಿಪ್ಪವರಾಗಿರುತ್ತವೋ, ಹಾಂಗೇ ಇನ್ನು ಆರು ನಿಷಿದ್ಧ ಆಚರಣೆಲಿ ಉತ್ಸುಕರಾಗಿರುತ್ತವೋ, ಶಾಸ್ತ್ರವಿಹಿತ ಕರ್ಮಂಗಳ ಬಿಟ್ಟ ಮೂಢರಾದ ಇವೆಲ್ಲೋರು ಆ ವೈತರಣೀ ನದಿಲಿ ಬೀಳುತ್ತವು. ಪಾಪಕರ್ಮಿಗೊ ಯಾತನಾಮಯ ಈ ಇಡೀ ಯಮಮಾರ್ಗವ ನಡಕ್ಕೊಂಡು ಹೋಗಿ ಯಮನ ಪುರುವ ಸೇರುತ್ತವು. ಮತ್ತೆ ಪುನಃ ಅಲ್ಲಿಂದ ಯಮನ ಆಜ್ಞೆಯ ಪ್ರಕಾರ ಯಮದೂತರುಗೊ ಇವರ ಆ ಮಹಾದುಃಖಕರವಾದ, ಕಷ್ಟಕರವಾದ, ಭಯಕರವಾದ ವೈತರಣೀ ನದಿಲಿ ಪುನಃ ಇಡ್ಕುತ್ತವು.
ಕಂದುವರ್ಣದ (ಕಪಿಲಾ) ಹಸುವಿನ ದಾನ ಕೊಡದ್ದೋರು (ಜೀವಿತಕಾಲಲ್ಲಿ ತಾನು ಅಥವಾ ಮರಣಾನಂತರ ಇವರ ಉದ್ದೇಶಕ್ಕಾಗಿ ತನ್ನ ಬಂಧುಗಳಿಂದ ಕಪಿಲಾ ಗೋದಾನ ಮಾಡದ್ದೋರು) , ಔರ್ಧ್ವದೈಹಿಕ ಕ್ರಿಯೆಗಳ ಮಾಡದ್ದೆ ಇಪ್ಪೋರು (ತಾನು ತನ್ನ ಹಿರಿಯರ ಅಥವಾ ತನಗೆ ತನ್ನ ಮಕ್ಕಳಿಂದ ಔರ್ಧ್ವದೈಹಿಕ ಕ್ರಿಯೆ ಮಾಡದ್ದೋರು) ಅದರ್ಲಿ ಮುಳುಗಿ ಮಹಾದುಃಖವ ಅನುಭವುಸಿ, ಆ ವೈತರಣೀ ನದಿಯ ದಡಲ್ಲಿ ಹುಟ್ಟಿದ ಮಹಾದುಃಖಕರ ಶಾಲ್ಮಲೀ ಮರದ ಹತ್ರಂಗೆ ಹೋವುತ್ತವು.
ಸುಳ್ಳು ಸಾಕ್ಷಿ ಹೇಳುವವು, ಮಿಥ್ಯಾಧರ್ಮಲ್ಲಿ ಪ್ರವೃತ್ತರಾಗಿಪ್ಪೋರು, ಮೋಸಮಾಡಿ ಸಂಪಾದುಸುವವು, ಕಳ್ಳತನಂದ ಜೀವನ ಸಾಗುಸುವವು, ದೊಡ್ಡ ದೊಡ್ಡ ಮರಂಗಳ ಕತ್ತರುಸಿ ಕಾಡು ನಾಶ ಮಾಡುವವು, ಕೃಷಿ ಭೂಮಿ ಯಾ ತೋಟವ ನಾಶಮಾಡುವವು (ಉಪಯೋಗ ಮಾಡದ್ದೆ ವೃಥಾ ಹಾಳುಬಿಡುವವು), ವ್ರತ-ತೀರ್ಥಂಗಳ ತ್ಯಜಿಸುವವು, ವಿಧವೆಯರ ಶೀಲ ಹರಣ ಮಾಡುವವು, ತನ್ನ ಗೆಂಡನ ದೂಷಿಸಿ ಪರರ ಮನಸ್ಸಿಲ್ಲಿ ಗ್ರೇಶುವ ಸ್ತ್ರೀಯರು ಈ ಮೊದಲಾದ ಪಾಪಿಗೊ ಈ ಶಾಲ್ಮಲೀ ವೃಕ್ಷದ ಮೂಲಕ ಭಾರೀ ಹೊಡೆತವ ತಿಂತವು. ಹೊಡೆತಂದ ಕೆಳಬಿದ್ದವರ ನೆಗ್ಗಿ ಯಮನ ದೂತರು ಭಾರೀ ನರಕಕ್ಕೆ ಇಡುಕ್ಕುತ್ತವು. ಅಲ್ಲಿ ಯಾವ ಪಾಪಿಗೊ ಬೀಳುತ್ತವು ಹೇಳ್ವದರ ನಿನಗೆ ಹೇಳುತ್ತೆ” ಹೇದು ಭಗವಂತ° ಮತ್ತೆ ಮುಂದಾಣ ಭಾಗವ ಗರುಡಂಗೆ ಹೇಳ್ಳೆ ಉದ್ಯುಕ್ತನಾವ್ತ°.
[ಚಿಂತನೀಯಾ–
ಭಗವಂತನ ಬಗ್ಗೆ ಒಂದಿಷ್ಟೂ ಎಚ್ಚರ ಇಲ್ಲದ್ದೆ ಅವನ ಕುರಿತಾಗಿ ಚಿಂತುಸದ್ದೆ ಕೇವಲ ತನ್ನ ಸುಖಕ್ಕಾಗಿ ಪಾಪ ದೋಷಂಗಳನ್ನೂ ಲಕ್ಷ್ಯಮಾಡದ್ದೆ ಇಪ್ಪದು ಮನುಷ್ಯರು ಜೀವನಲ್ಲಿ ಮಾಡುವ ಬಹುದೊಡ್ಡ ತಪ್ಪು. ಅದರಿಂದ ಒಂದರಿಯಂಗೆ ಇಹಲ್ಲಿ ಸುಖ ಸಿಕ್ಕಿರೂ ಮುಂದೆ ಪರಲ್ಲಿ ಬಹುಕಷ್ಟವ ಅನುಭವುಸೆಕ್ಕಾವ್ತು. ಇಂದು ನಾಕು ಜೆನರ ಒಟ್ಟಿಂಗೆ ನಾವು ನೆಗೆ ಮಾಡ್ತದರ ನೋಡಿ ಸಂತೋಷ ಪಡ್ಳೆ ಹತ್ತು ಹಲವು ಮಂದಿ ನಮ್ಮೊಟ್ಟಿಂಗೆ ಇಕ್ಕು., ಆದರೆ ಪರಲ್ಲಿ ಈ ಆರೊಬ್ಬನೂ ಸಕಾಯಕ್ಕೆ ಸಿಕ್ಕುತ್ತವಿಲ್ಲೆ. ಪರಲ್ಲಿ ಏಕಾಂಗಿಯಾಗಿ ತಾನು ಮಾಡಿದ ತಪ್ಪುಗಳ ಗ್ರೇಶಿ ಗ್ರೇಶಿ ದುಃಖಿಸಿಗೊಂಡು ಯಮದೂತರಿಂದ ಕ್ರೂರವಾಗಿ ಪೆಟ್ಟುತಿಂದುಗೊಂಡು ಯಾತನೆಯ ಅನುಭವುಸೆಕ್ಕಾವ್ತು ಹೇಳ್ವ ಎಚ್ಚರ ಜೀವಿತಕಾಲಲ್ಲಿ ಇದ್ದುಗೊಂಡು ಭಗವದ್ಪ್ರಜ್ಞೆಂದ ಬಾಳಿರೆ ಅದು ಮುಂದಾಣ ದಾರಿಯ ಸುಗಮಗೊಳುಸಲೆ ಸಹಾಯಕ ಆವ್ತು. ಅರಿಷಡ್ವರ್ಗಂಗಳ ವಶವಾಗಿ ಭಗವಂತನ ವಿಷಯಲ್ಲಿ ಒಂದಿಷ್ಟೂ ಲಕ್ಷ್ಯ ಇಲ್ಲದ್ದೆ. ಪಾಪ ಪ್ರಜ್ಞೆಯೋ, ಹೆದರಿಕೆಯೋ ಇಲ್ಲದ್ದೆ ಸತ್ಯ ಶಾಂತಿ ಪ್ರೇಮ ದಾನ ದಯೆ ಧರ್ಮಂಗಳ ಮರದು ಮಾಡುವ ಕೆಲಸಂಗೊ ದುಷ್ಕರ್ಮವೇ ಸರಿ. ಭಗವಂತ° ಇಂತದ್ದರ ಸಹಿಸುತ್ತನಿಲ್ಲೆ. ತಾನು ಮಾಡಿದ ಕರ್ಮಕ್ಕೆ ತಕ್ಕ ಫಲವ ಮುಂದೆ ಅವ ಅನುಭವಿಸಿಯೇ ತೀರುತ್ತ°. ಅಷ್ಟಪ್ಪಗ ಅವನ ಸಕಾಯಕ್ಕೆ ಆರೂ ಇರ್ತವಿಲ್ಲೆ. ಮನುಷ್ಯರು ಮನೋವಾಕ್ಕಾಯಂಗಳಿಂದ ಶುಭಕಾರ್ಯಂಗಳನ್ನೇ ಏವತ್ತೂ ಆಚರಿಸಿಗೊಂಡಿರೆಕು. ಅಶುಭ ಕಾರ್ಯಂಗೊ ಧರ್ಮಕ್ಕೆ ವಿರುದ್ಧವಾದ್ದು ಆವ್ತು. ಅದರಿಂದ ಶುಭ ಎಂದಿಂಗೂ ದಕ್ಕ. ಹತ್ಯೆ, ವ್ಯಭಿಚಾರ, ಕಳ್ಳತನ, ಮದ್ಯಪಾನ, ಮಾಂಸಭಕ್ಷಣ ಇತ್ಯಾದಿಗೊ ಎಂದಿಂಗೂ ಶ್ರೇಯಸ್ಕರ ಅಲ್ಲ. ಇದು ಉತ್ತಮ ಜೀವನದ ಲಕ್ಷಣಂಗೊ ಅಲ್ಲ. ಮನುಷ್ಯನಾಗಿ ಹುಟ್ಟಿದ ಮತ್ತೆ ಋಣತ್ರಯಂಗೊ ಇದ್ದೇ ಇದ್ದು. ಅದರ ತೀರ್ಸುವದು ಮತ್ತು ಮುಂದಾಣ ಜನಾಂಗವ ಸೃಷ್ಟಿಸಿ ಅವರನ್ನೂ ಅದೇ ಮಾರ್ಗಲ್ಲಿ ಕೊಂಡೋಪ ಜವಾಬ್ದಾರಿ ಪ್ರತಿಯೊಬ್ಬ ಮನುಷ್ಯಂಗೂ ಇದ್ದು. ಉತ್ತಮವಾಗಿಪ್ಪದರ ಒಂದಿಷ್ಟು ಮೆಚ್ಚದ್ದೆ ಇಪ್ಪದು, ತನ್ನದು ಮಾತ್ರವೇ ಉತ್ತಮ ಹೇಳಿ ತಿಳ್ಕೊಂಬದು, ಇತರರ ದೋಷಂಗಳನ್ನೇ ಎತ್ತಿ ಹೇಳಿ ಹಂಗುಸುವದು , ಇತರರ ದೋಷಂಗಳ ಮರೆ ಮಾಡ್ಳೆ ತಾನು ಮುಂದಪ್ಪದು ಇತ್ಯಾದಿಗೊ ಜೀವನಲ್ಲಿ ಶ್ರೇಯಸ್ಸಿನ ಉಂಟುಮಾಡುತ್ತಿಲ್ಲೆ. ದಾನ ಧರ್ಮ ತಪಸ್ಸುಗಳಿಂದ ಉತ್ತಮ ಗುಣಂಗಳ ಹೊಂದಿ ಜೀವನ ಸಾರ್ಥಕ ಪಡಿಸಿಗೊಳ್ಳೆಕ್ಕಾದ್ದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಪರರ ವಸ್ತುಗಳಲ್ಲಿ ಮನಸ್ಸು ಹೂಡುವದು, ಅದರ ಅಪಹರುಸಲೆ ದಾರಿ ಹುಡ್ಕುವದು ಇತ್ಯಾದಿಗೊ ನಮ್ಮ ಜೀವನವ ನಾವೇ ಹಾಳು ಮಾಡಿಗೊಂಬದೇ ಸರಿ. ಕೊಟ್ಟ ಮಾತಿನಂತೆ ನಡಕ್ಕೊಂಬದು, ಕೊಟ್ಟ ವಿಷಯಲ್ಲಿ ಪಶ್ಚಾತ್ತಾಪ ಪಡದ್ದೆ ಇಪ್ಪದು ಉತ್ತಮ ಮನುಷ್ಯನ ಗುಣ. ವಚನ ಭ್ರಷ್ಟರ ಧರ್ಮ ಎಂದೂ ಸಹಿಸುತ್ತಿಲ್ಲೆ. ವೇದ, ಶಾಸ್ತ್ರ ವಿಷಯಂಗಳಲ್ಲಿ ಶ್ರದ್ಧಾ ಭಕ್ತಿಯ ಮಡಿಕ್ಕೊಂಬದು, ಶಾಸ್ತ್ರೋಕ್ತ ವಿಷಯಂಗಳ ಜೀವನಲ್ಲಿ ಪರಿಪಾಲುಸುವದು ನಮ್ಮ ಆದ್ಯ ಕರ್ತವ್ಯಂಗೊ. ವ್ರತ-ತೀರ್ಥಯಾತ್ರೆ ಜೀವನಲ್ಲಿ ಮಾಡೇಕ್ಕಾಗಿಪ್ಪ ನಮ್ಮ ಕರ್ತವ್ಯಂಗೊ ಹೇದು ತಿಳುದು ಅದರ ಆಚರುಸೆಕ್ಕಾದ್ದು ನಮ್ಮ ಧರ್ಮ. ಅಬ್ಬೆ ಅಪ್ಪ°, ಗುರು ಹಿರಿಯರ, ಸಾಧು ಸಜ್ಜನರ, ಪೂಜ್ಯರ ಗೌರವಿಸೆಕ್ಕಾದ್ದು ನಮ್ಮ ಕರ್ತವ್ಯಂಗೊ. ಅವರ ಮತ್ತು ಶಾಸ್ತ್ರ, ದೇವತಾ ನಿಂದನೆ, ಅಪಹಾಸ್ಯ ಮಾಡುವದು ಮನುಷ್ಯರಿಂಗೆ ಸರ್ವಥಾ ಭೂಷಣ ಅಲ್ಲ. ಶಾಸ್ತ್ರ ನ್ಯಾಯ ಮತ್ತೆ ಅದಕ್ಕೆ ಅನುಗುಣವಾಗಿ ಇಪ್ಪ ದೇಶೀಯ ಸಾಮಾಜಿಕ ನ್ಯಾಯಂಗಳ ಗೌರವಿಸೆಕ್ಕಾದ್ದು ಮನುಷ್ಯರ ಕರ್ತವ್ಯ. ಇನ್ನೊಬ್ಬರ ದೂಷಣೆ ಮಾಡುವದು ನಮ್ಮ ಅಧಃಪತನಕ್ಕೆ ನಾವೇ ಕಾರಣ ಆವ್ತು. ನಾವು ಮಾಡುವ ಪ್ರತಿಯೊಂದು ಕೆಲಸವೂ ಧರ್ಮ ಮೆಚ್ಚುವ ಕಾರ್ಯವಾಗಿರೆಕು. ಅದು ಭಗವಂತಂಗೂ ಸಂಪ್ರೀತಿ. ಬೇಡಂಗಟ್ಟೆ ಯೋಚನೆ ಮಾಡುವದು, ಕುಶಾಲಿಂಗಾದರೂ ಬೇಡಂಗಟ್ಟೆ ಮಾಡುವದು ಎಂದೂ ನಮ್ಮ ಉತ್ತಮ ಸ್ಥಿತಿಗೆ ಕೊಂಡೋವ್ತಿಲ್ಲೆ. ಪರನಿಂದೆ ಪರಮಾತ್ಮನಿಂದೆ ನಮ್ಮ ಸರ್ವನಾಶಕ್ಕೆ ಕಾರಣ ಆವ್ತು. ಕಷ್ಟಲ್ಲಿಪ್ಪೋರ ಹೀಯಾಳುಸುವದು, ಅಥವಾ ಸಂತೋಷಲ್ಲಿಪ್ಪೋರ ಸಂತೋಷವ ಕಲಂಕಿಸಿ ದುಃಖವ ಉಂಟುಮಾಡುವದು ಅವರಲ್ಲಿಪ್ಪ ಪರಮಾತ್ಮಂಗೆ ಮಾಡುವ ದ್ರೋಹ ಆವ್ತು. ಅದೇ ರೀತಿ ಆತ್ಮಸ್ತುತಿ, ಶುಷ್ಕಭಾಷಣ, ಸ್ವಯಂಘೋಷಿತ ಪಾಂಡಿತ್ಯ ಎಲ್ಲವೂ ಒಣಕ್ಕಟೆಯೇ. ಅದು ಅಂತೇ ಗರ್ವ ಪಟ್ಟುಗೊಂಬಲೆ ಮಾತ್ರ ಸಾಧನ ಆಗಿರ್ತು. ಅಹಂಕಾರ ಪಟ್ಟುಗೊಂಬದರಿಂದ ಏವ ಲಾಭವೂ ಸಿಕ್ಕುತ್ತಿಲ್ಲೆ. ದುರಾಲೋಚನೆ ಮಾಡುವವರಿಂದ, ದುಷ್ಕರ್ಮಿಗಳಿಂದ ದೂರ ಇಪ್ಪದೇ ಶ್ರೇಯಸ್ಕರ. ನಮ್ಮ ಕಣ್ಣೆದುರು ಕಾಂಬ ಪ್ರತಿಯೊಂದರಲ್ಲಿಯೂ ಭಗವಂತ° ಇದ್ದ°, ಕಣ್ಣೆದುರ ಇಪ್ಪ ಪ್ರತಿಯೊಂದ
ೂ ಈ ಜೀವಿಗಳ ವಾಸಕ್ಕೆ ಅನುಕೂಲವಾಗಿಪ್ಪದಕ್ಕೆ ಆ ಭಗವಂತ° ಕೊಟ್ಟ ಪ್ರಸಾದ ಹೇದು ತಿಳ್ಕೊಳ್ಳೆಕ್ಕಾದ್ದು ಅತೀ ಅಗತ್ಯ. ಇಲ್ಲದ್ರೆ ಅನಗತ್ಯ ವಿಷಯಕ್ಕೆ ಕತ್ತಿ/ಕೊಡಲಿ ಹಾಕುವ ಪ್ರಸಂಗ ಏರ್ಪಡುತ್ತು. ಜೀವಿಗಳ ಜೀವನಾಧಾರ ವಿಷಯಂಗಳ ಅಪಹರುಸುವದೋ, ಹಾಳುಮಾಡುವದೋ, ಅಥವಾ ಸದ್ಬಳಕೆ ಮಾಡದ್ದೆ ಇಪ್ಪದು ಭಗವಂತಂಗೆ ಮಾಡುವ ಅಪರಾಧ ಆವ್ತು. ಪರರ ದೋಷಂಗಳ ಹುಡ್ಕಿ ಹೆರ್ಕುವದರಿಂದ ನಮ್ಮ ನಮ್ಮ ದೋಷಂಗಳ ಹುಡ್ಕಿ ಪರಿಷ್ಕರಿಸಿಗೊಂಬದು ಎಷ್ಟೋ ಮೇಲು.
ಬ್ರಹ್ಮಕರ್ಮವ ಮಾಡೇಕ್ಕಾಪ್ಪದು ಪ್ರತಿಯೊಬ್ಬ ಬ್ರಾಹ್ಮಣನ ಕರ್ತವ್ಯ. ಸಂಧ್ಯಾವಂದನೆಯನ್ನೇ ಬಿಟ್ಟ ಬ್ರಾಹ್ಮಣ ಅಧೋಗತಿಗೆ ಇಳಿತ್ತ. ಸಂಧ್ಯಾವಂದನೆಯನ್ನೇ ಅಲಕ್ಷಿಸುವ ಬ್ರಾಹ್ಮಣಂಗೆ ಮತ್ತೆ ಬೇರೆ ಏವ ಕರ್ಮಲ್ಲಿಯೂ ಹಕ್ಕು ಇಲ್ಲೆ. ಅದು ಬ್ರಾಹ್ಮಣಂಗೆ ಆಯಸ್ಸು, ವರ್ಚಸ್ಸು , ವಿವೇಕ , ಯಶಸ್ಸು ಕೊಡುವಂತಾದ್ದು. ಅಂತಃಕರಣ ಶುದ್ಧಿಂದ ಬ್ರಹ್ಮಕರ್ಮವ ಪಾಲುಸೇಕ್ಕಾದ್ದು ನಮ್ಮ ಕರ್ತವ್ಯ. ಮನುಷ್ಯನ ಸುಖಶಾಂತಿನೆಮ್ಮದಿಗೆ ಬೇಕಾಗಿ ಇಪ್ಪದು ವೇದ ಶಾಸ್ತ್ರ ಧರ್ಮ. ಅದರ ಶ್ರದ್ಧೆಂದ ಪಾಲುಸೇಕ್ಕಾದ್ದು ವಿವೇಕತನ.
ಸುಳ್ಳು ಮೋಸ ವಂಚನೆ ಎಂದೂ ನವಗೆ ಶ್ರೇಯಸ್ಸುಂಟುಮಾಡುತ್ತಿಲ್ಲೆ. ಅದರಿಂದ ನಮ್ಮ ಬಾಳನ್ನೂ ಹಾಳುಮಾಡಿಗೊಂಬದರ ಒಟ್ಟಿಂಗೆ ಇನ್ನೊಬ್ಬನ ಬಾಳನ್ನೂ ಹಾಳುಮಾಡಿ ದೇವತಾಕೋಪಕ್ಕೆ ತುತ್ತಪ್ಪಲಕ್ಕಷ್ಟೇ. ತನಗೆ ಬೇಡದ್ದು ಎಲ್ಲವೂ ವ್ಯರ್ಥ ಹೇದು ತಿಳ್ಕೊಂಬದು ಪರಮ ಮೂರ್ಖತನ. ವ್ರತ ತೀರ್ಥ ಆಚಾರ ವಿಚಾರಂಗೊ ಶ್ರೇಯಸ್ಸಿನ ಹಾದಿ. ಅದರ್ಲಿ ಶ್ರದ್ಧೆ ಭಕ್ತಿ ಮಡಿಕ್ಕೊಂಡು ಆಚರಣೆ ಮಾಡುವದು ನವಗೆ ಉತ್ತಮ.
ದಾನಧರ್ಮಾದಿ ಆಚರಣೆಗೊ ಭಗವದ್ಪ್ರೀತಿ ಆಚರಣೆಗೊ. ಮನಸಾರೆ ಅರ್ತು ಶ್ರದ್ಧಾಭಕ್ತಿಂದ ಸತ್ಪಾತ್ರಂಗೆ ಅದರ ಕೊಡೇಕ್ಕಾದ್ದು ಕರ್ತವ್ಯ. ಕೊಟ್ಟ ಮತ್ತೆ ಅಯ್ಯೋ ಕೊಟ್ಟೆನ್ನೇ ಹೇದು ಪರಿತಪುಸಲೆ ಆಗ. ಕೊಡುತ್ತೆ ಹೇಳಿದ ಮತ್ತೆ ಕೊಡದ್ದೆ ಇಪ್ಪದು ಸೋಲುಸಿದ್ದಕ್ಕೆ ಸಮಾನ. ಇದರಿಂದ ಅವನ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ ಪಾಪತ್ವಕ್ಕೆ ಕಾರಣ ಆವ್ತು. ನಾವು ನಮ್ಮ ಜೀವನವ ಸಾರ್ಥಕ ಪಡಿಸಿಗೊಂಬಲೆ ಶ್ರಮ ವಹಿಸೆಕು. ಅದಕ್ಕಿಪ್ಪ ಧರ್ಮಕರ್ಮಲ್ಲಿ ನಿರತನಾಗಿರೆಕು. ನಮ್ಮ ನಂತ್ರಾಣ ಪೀಳಿಗೆಯನ್ನೂ ಅದೇ ಮಾರ್ಗಲ್ಲಿ ನಡವಲೆ ಅನುಕೂಲ ಮಾಡೆಕು. ನಾವು ನಮ್ಮ ಹಿರಿಯರ ಔರ್ಧ್ವದೈಹಿಕ ಕ್ರಿಯೆಗಳ ಶಾಸ್ತ್ರವತ್ತಾಗಿ ಮಾಡೆಕು. ಅದರಿಂದ ಅವಕ್ಕೂ ಶ್ರೇಯಸ್ಸು ನವಗೂ ಶ್ರೇಯಸ್ಸು. ಸ್ವೇಚ್ಛಾವೃತ್ತಿಯ ಬಿಟ್ಟಿಕ್ಕಿ ಶಾಸ್ತ್ರೀಯ ಜೀವನವ ಮಾಡಿರೆ ಅದರಿಂದ ಮುಂದಾಣ ದಾರಿ ಉತ್ತಮ ಆಗಿರ್ತು ಹೇಳ್ವದರ್ಲಿ ಏವ ಸಂಶಯವೂ ಬೇಡ.]
ಮುಂದಾಣ ಭಾಗ ಬಪ್ಪವಾರ ನೋಡುವೋ°
ಹರೇ ರಾಮ.
ಈ ನರಕ ಮತ್ತು ಸ್ವರ್ಗದ ಕಲ್ಪನೆ ಎಲ್ಲ ಧರ್ಮಗಳಲ್ಲೂ ಆದಷ್ಟು ಸಾಮ್ಯತೆ ಇರೋದು ನನಗೆ ಬಹಳ ಆಶ್ಚರ್ಯ..ಮತ್ತೆ ಈ ಗರುಡ ಪುರಾಣ..ಹಾಗೂ ಡಾಂಟೆಯ ಡಿವೈನ್ ಕಾಮೆಡಿಯು ಕೂಡ ಇಂಥದ್ದೇ ಸಾಮ್ಯ ಹೊಂದಿರುವುದು ಇನ್ನೂ ದೊಡ್ಡ ಆಶ್ಚರ್ಯ…ನನಗೆ ಇವನ್ನೆಲ್ಲ ಓದುತ್ತಾ ಅನ್ನಿಸಿದ್ದು..ಮತ್ತೆ ವಿವೇಕಾನಂದರ ನುಡಿಯೆ”ಸರ್ವಧರ್ಮಗಳೂ ಸರ್ವ ಪ್ರಾರ್ಥನೆಗಳು ಒಬ್ಬನನ್ನೇ ಸೇರುತ್ತವೆ” ಇಂತಹ ಸಹಿಷ್ಣುತೆ ನಮ್ಮಲ್ಲಿ ಇರೋದು ಒಂದು ಶಾಪ ಕೂಡ..ಹಾಗೆ ವರವು ಹೌದು..ಅನ್ನಿಸ್ತಿದೆ ನಂಗೆ
ಅನ್ಯರ ಸುಖವ ಕಂಡು ಮರುಗುವುದು ಮತ್ತು
ಮತ್ತೊಬ್ಬರ ಕಷ್ಟವ ಕಂಡು ಸಂಬ್ರಮಿಸುವುದು ಮಹಾ ಪಾಪದ ಕೆಲಸ ಇದಕ್ಕೆ ಶಿಕ್ಷೆ ಅನುಭವಿಸಲೇಬೇಕು.
ಹಿಂದೂ ಧರ್ಮಲ್ಲಿ ಸ್ತ್ರೀಯರಿಂಗೆ, ಪಶು ಪಕ್ಷಿಯಾದಿ ಸಕಲ ಜೀವರಾಶಿಗೆ, ಗೋವಿಂಗೆ ಮತ್ತೆ ಅಪ್ಪ ಅಮ್ಮ ಹಿರಿಯರಿಂಗೆ ಪ್ರಕ್ರತಿ ಸಂಪತ್ತಿಂಗೆ ಕೊಟ್ಟ ಗೌರವ ಬೇರೆ ಯಾವುದೇ ಧರ್ಮಲ್ಲಿ ಕೊಟ್ಟಹಾಂಗೆ ಕಾಣ್ತಿಲ್ಲೆ. ಅದಕ್ಕೇ ಅವರ ದೇಶಂಗಳಲ್ಲಿ ಜೀವನವೇ ನರಕಕ್ಕೆ ಸಮಾನ ಆಯಿದು. ಇನ್ನು ಪಾಶ್ಚ್ಯಾತ್ಯ ಸಂಸ್ಕುತಿಯ ಅನುಸರಿಸಲೆ ಹೆರಟ ನಮ್ಮ ಯುವಪೀಳಿಗೆ ನರಕದ ಹಾದಿಲೇ ನಡೆತ್ತಾ ಇದ್ದವು.
ಇವರ ದೇವರೇ ಕಾಯೆಕ್ಕು. ಹರೇ ರಾಮ.