- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಭಗವಂತ° ಮಹಾವಿಷ್ಣು ಗರುಡಂಗೆ ಪಾಪಚಿಹ್ನೆಗಳ ಬಗ್ಗೆ ವಿವರುಸುತ್ತಾ ಇಪ್ಪದರ ಕಳುದವಾರದ ಭಾಗಲ್ಲಿ ಓದಿದ್ದದು. ಅದನ್ನೇ ಮುಂದುವರ್ಸಿ ಈ ವಾರ –
ಗರುಡ ಪುರಾಣ – ಅಧ್ಯಾಯ 05 – ಭಾಗ 02
ದ್ರವ್ಯಾರ್ಥಂ ದೇವತಾಪೂಜಾಂ ಯಃ ಕರೋತಿ ದ್ವಿಜಾಧಮಃ ।
ಸ ವೈ ದೇವಲಕೋ ನಾಮ ಹವ್ಯಕವೇಷು ಗರ್ಹಿತಃ ॥೩೩॥
ಏವ ಬ್ರಾಹ್ಮಣ° ಬರೇ ದ್ರವ್ಯಸಂಪಾದನಗೆ ಬೇಕಾಗಿ ದೇವತಾಪೂಜೆ ಮಾಡುತ್ತನೋ ಅವ° ಖಂಡಿತವಾಗಿಯೂ ದೇವಲಕ ಹೇದು ಎನುಸುತ್ತ° ಮತ್ತೆ ಅವ° ಹವ್ಯ-ಕವ್ಯಂಗಳಲ್ಲಿ (ದೇವಕಾರ್ಯ, ಪಿತೃಕಾರ್ಯ) ಅನರ್ಹನಾಗಿರುತ್ತ° (ನಿಂದನೀಯನಾವುತ್ತ°).
ಮಹಾಪಾತಕಜಾನ್ಘೋರಾನ್ನರಕಾನ್ಪ್ರಾಪ್ಯ ದಾರುಣಾನ್ ।
ಕರ್ಮಕ್ಷಯೇ ಪ್ರಜಾಯಂತೇ ಮಹಾಪಾತಕಿನಸ್ತ್ವಿಹ ॥೩೪॥
ಮಹಾಪಾತಕಂಗಳ ಮಾಡಿದವು ತಮ್ಮ ಪಾಪಂಗಳಿಂದ ಘೋರವಾದ ನರಕಲ್ಲಿ ದಾರುಣವಾದ ಫಲವ ಅನುಭವುಸಿ, ಪಾತಕಿ ಕರ್ಮ ಕ್ಷಯವಾದಮತ್ತೆ ಇಹಲೋಕಲ್ಲಿ ಹುಟ್ಟುತ್ತವು.
ಖರೋಷ್ಟ್ರಮಹಿಷೀಣಾಂ ಹಿ ಬ್ರಹ್ಮಹಾ ಯೋನಿಮೃಚ್ಛತಿ ।
ವೃಕಾಶ್ವಾನಶೃಗಾಲಾನಾಂ ಸುರಾಪಾ ಯಾಂತಿ ಯೋನಿಷು ॥೩೫॥
ಬ್ರಹ್ಮ ಹತ್ಯೆ ಮಾಡುವವ° ಕತ್ತೆ, ಒಂಟೆ, ಎಮ್ಮೆ ಗರ್ಭಲ್ಲಿ ಹುಟ್ಟುತ್ತ°, ಮದ್ಯಪಾನ ಮಾಡುವವ° ತೋಳ, ನಾಯಿ, ನರಿಗಳ ಗರ್ಭ ಹೊಂದುತ್ತ°.
ಕೃಮಿಕೀಟಪತಂಗತ್ವಂ ಸ್ವರ್ಣಸ್ತೇಯೀ ಸಮಾಪ್ನುಯಾತ್ ।
ತೃಣಗುಲ್ಮಲ ಲತಾತ್ವಂ ಚ ಕ್ರಮಶೋ ಗುರುತಲ್ಪಗಃ ॥೩೬॥
ಚಿನ್ನವ ಅಪಹರುಸುವವ° ಕ್ರಿಮಿ, ಕೀಟ, ಪತಂಗ ಮುಂತಾದ, ಗುರುಪತ್ನಿಯ ಅನುಭವುಸುವವ° ಹುಲ್ಲು, ಪೊದರು, ಬಳ್ಳಿ ಮುಂತಾದ ಜನ್ಮಂಗಳ ಕ್ರಮವಾಗಿ ಹೊಂದುತ್ತ°
ಪರಸ್ಯ ಯೋಷಿತಂ ಹೃತ್ವಾ ನ್ಯಾಸಾಪಹರಣೇನ ಚ ।
ಬ್ರಹ್ಮಸ್ವಹರಣಾಚ್ಚೀವ ಜಾಯತೇ ಬ್ರಹ್ಮರಾಕ್ಷಸಃ ॥೩೭॥
ಪರಸ್ತ್ರೀಯ ಅಪಹರುಸುವವ°, ಒತ್ತೆ ಮಡಿಗಿದ್ದರ ತಿಂದು ಹಾಕುವವ°, ಬ್ರಹ್ಮಜ್ಞಾನಿಯ ಸೊತ್ತಿನ ಅಪಹರುಸುವವ° ಬ್ರಹ್ಮರಾಕ್ಷಸ° ಆವುತ್ತ°.
ಬ್ರಹ್ಮಸ್ವಂ ಪ್ರಣಯಾಧ್ಬುಕ್ತಂ ದಹತ್ಯಾಸಪ್ತಮಂ ಕುಲಮ್ ।
ಬಲಾತ್ಕಾರೇಣ ಚೌರ್ಯೇಣ ದಹತ್ಯಾಚಂದ್ರತಾರಕಮ್ ॥೩೮॥
ಬ್ರಹ್ಮಜ್ಞಾನಿಯ ಆಸ್ತಿಯ ಗೆಳೆಯನ ಹಾಂಗೆ ನಟಿಸಿ ತಿಂಬವನ (ಪಾಪತ್ವ) ಏಳು ತಲೆಮಾರುಗಳವರೇಂಗೆ ಸುಡುತ್ತು. ಬಲಾತ್ಕಾರಂದ ಮತ್ತೆ ಕಳ್ಳತನಂದ ತಿಂಬವನ ಚಂದ್ರ ನಕ್ಷತ್ರಂಗೊ ಇಪ್ಪನ್ನಾರ ಸುಡುತ್ತು.
ಲೋಹಚೂರ್ಣಾಶ್ಮ ಚೂರ್ಣೇ ಚ ವಿಷಂ ಚ ಜರಯೇನ್ನರಃ ।
ಬ್ರಹ್ಮಸ್ವಂ ತ್ರಿಷು ಲೋಕೇಷು ಕಃ ಪುಮಾಂಜರಯಿಷ್ಯತಿ ॥೩೯॥
ಲೋಹದ ಚೂರ್ಣ, ಕಲ್ಲಿನ ಚೂರ್ಣ (ಹುಡಿ) ಮತ್ತೆ ವಿಷವ ಮನುಷ್ಯ° ಜೀರ್ಣಿಸಿಗೊಂಬಲೆಡಿಗು. ಆದರೆ ಬ್ರಹ್ಮಜ್ಞಾನಿಯ ಸೊತ್ತಿನ (ಅಪಹರುಸುವಂವ) ಮೂರು ಲೋಕಂಗಳಲ್ಲಿಯೂ ಯಾವ ಮನುಷ್ಯ° ಜೀರ್ಣಿಸಿಗೊಂಗು?!
ಬ್ರಹ್ಮಸ್ವರಸಪುಷ್ಟಾನಿ ವಾಹನಾನಿ ಬಲಾನಿ ಚ ।
ಯುದ್ಧಕಾಲೇ ವಿಶೀರ್ಯಂತೇ ಸೈಕತಾಃ ಸೇತವೋ ಯಥಾ ॥೪೦॥
ಬ್ರಹ್ಮಜ್ಞಾನಿಯ ಧನಂದ ರಸವತ್ತಾಗಿ ಪುಷ್ಟಿಹೊಂದಿದ ವಾಹನ ಮತ್ತೆ ಸೈನ್ಯಂಗೊ ಯುದ್ಧಕಾಲಲ್ಲಿ ಮರಳಿನ ಸೇತುವೆಯ ಹಾಂಗೆ ಒಡದು ಪುಡಿಪುಡಿಯಾವುತ್ತು.
ದೇವದ್ರವ್ಯೋಪಭೋಗೇನ ಬ್ರಹ್ಮಸ್ವಹರಣೇನ ಚ ।
ಕುಲಾನ್ಯಕುಲತಾಂ ಯಾಂತಿ ಬ್ರಾಹ್ಮಣಾತಿಕ್ರಮೇಣ ಚ ॥೪೧॥
ದೇವರ ದ್ರವ್ಯವ ಉಪಭೋಗುಸುವದರಿಂದ ಮತ್ತೆ ಬ್ರಹ್ಮಸ್ವವ ಅಪಹರುಸುವದರಿಂದ, ಬ್ರಾಹ್ಮಣನ ಅನಾದರಣೆ ಮಾಡುವದರಿಂದ ಅವನ ಕುಲವು ನಷ್ಟವಾಗಿ ಹೋವುತ್ತು.
ಸ್ವಮಾಶ್ರಿತಂ ಪರಿತ್ಯಜ್ಯ ವೇದಶಾಸ್ತ್ರ ಪರಾಯಣಮ್ ।
ಅನ್ಯೇಭ್ಯೋ ದೀಯತೇ ದಾನಂ ಕಥ್ಯತೇsಯಮತಿಕ್ರಮಃ ॥೪೨॥
ತನ್ನ ಆಶ್ರಯಿಸಿಪ್ಪ ವೇದಶಾಸ್ತ್ರಪಾರಂಗತ ಬಿಟ್ಟು ಇತರರಿಂಗೆ ದಾನ ಕೊಟ್ರೆ ಅದು (ಬ್ರಾಹ್ಮಣನ) ಅತಿಕ್ರಮ ಹೇದು ಹೇಳಲ್ಪಡುತ್ತು.
ಬ್ರಾಹ್ಮಣಾತಿಕ್ರಮೋ ನಾಸ್ತಿ ವಿಪ್ರೇ ವೇದವಿವರ್ಜಿತೇ ।
ಜ್ವಲಂತಮಗ್ನಿಮುತ್ಸೃಜ್ಯ ನಹಿ ಭಸ್ಮನಿ ಹೂಯತೇ ॥೪೩॥
ವೇದವ ತ್ಯಜಿಸಿದ ವಿಪ್ರನ ಬಿಡುವದು ಬ್ರಾಹ್ಮಣಾತಿಕ್ರಮ ಎನಿಸುತ್ತಿಲ್ಲೆ. ಉರಿವ ಅಗ್ನಿಯ ಬಿಟ್ಟಿಕ್ಕಿ ಬೂದಿಲಿ ಹೋಮ ಮಾಡುತ್ತದಿಲ್ಲೆ.
ಅತಿಕ್ರಮೇ ಕೃತೇ ತಾರ್ಕ್ಷ್ಯ ಭುಕ್ತ್ವಾ ಚ ನರಕಾನ್ಕ್ರಮಾತ್ ।
ಜನ್ಮಾಂಧಃ ಸಂದರಿದ್ರಃ ಸ್ಯಾನ್ನ ದಾತಾ ಕಿಂತು ಯಾಚಕಃ ॥೪೪॥
ಹೇ ಪಕ್ಷಿಯೇ (ಗರುಡನೇ)!, ಬ್ರಾಹ್ಮಣನ ಅನಾದರ (ಅತಿಕ್ರಮ) ಮಾಡಿದಂವ° ಕ್ರಮವಾಗಿ ನರಕವ ಅನುಭವುಸಿ ಮತ್ತೆ ಹುಟ್ಟುಕುರುಡನೂ, ದರಿದ್ರನೂ ಆಗಿ ದಾನಿಯಾಗದ್ದೆ ಯಾಚಕ° (ಬೇಡುವವ°) ಆವುತ್ತ°.
ಸ್ವದತ್ತಾಂ ಪರದತ್ತಾಂ ವಾ ಯೋ ಹರೇಚ್ಚ ವಸುಂಧರಾಮ್ ।
ಷಷ್ಟಿವರ್ಷ ಸಹಸ್ರಾಣಿ ವಿಷ್ಥಾಯಾಂ ಜಾಯತೇ ಕೃಮಿಃ ॥೪೫॥
ತಾನೇ ದಾನ ಕೊಟ್ಟಿಪ್ಪ ಅಥವಾ ಇತರರು ದಾನ ಕೊಟ್ಟಿಪ್ಪ ಭೂಮಿಯ ಅಪಹರುಸುವಂವ° ಅರುವತ್ತು ಸಾವಿರ ವರ್ಷಂಗಳ ಕಾಲ ಮಲಲ್ಲಿ ಕ್ರಿಮಿಯಾಗಿ ಇರುತ್ತ°.
ಸ್ವಯಮೇವ ಚ ಯೋ ದತ್ತ್ವಾ ಸ್ವಯಮೇವಾಪಕರ್ಷತಿ ।
ಸ ಪಾಪೀ ನರಕಂ ಯಾತಿ ಯಾವದಾಭೂತಸಂಪ್ಲವಮ್ ॥೪೬॥
ತನ್ನಿಂದಲೇ ದಾನ ಕೊಡಲ್ಪಟ್ಟದ್ದರ ತಾನೇ ಕಿತ್ತುಗೊಂಬ ಪಾಪಿಯು ಪ್ರಳಯ ಕಾಲದವರೆಂಗೆ ನರಕಲ್ಲಿ ಇರುತ್ತ°.
ದತ್ತ್ವಾ ವೃತ್ತಿಂ ಭೂಮಿದಾನಂ ಯತ್ನತಃ ಪರಿಪಾಲಯೇತ್ ।
ನ ರಕ್ಷತಿ ಹರೇದ್ಯಸ್ತು ಸ ಪಂಗುಃ ಶ್ವಾsಭಿಜಾಯತೇ ॥೪೭॥
ಉದ್ಯೋಗವನ್ನೂ (ವೃತ್ತಿ = ಜೀವಿಕೆ- ಜೀವನ ನಿರ್ವಹಣೆಯ ಸಾಧನ), ಭೂದಾನವನ್ನೂ ಕೊಟ್ಟು ಅದರ ಪ್ರಯತ್ನಪೂರ್ವಕವಾಗಿ ಪಾಲುಸೆಕು. ಅದರ ರಕ್ಷುಸದ್ದೆ ಅಪಹರುಸುವಂವ ಕುಂಟನಾಯಿ ಆವುತ್ತ°.
ವಿಪ್ರಸ್ಯ ವೃತ್ತಿಕರಣೇ ಲಕ್ಷಧೇನುಫಲಂ ಭವೇತ್ ।
ವಿಪ್ರಸ್ಯ ವೃತ್ತಿಹರಣಾನ್ಮರ್ಕಟಃ ಶ್ವಾ ಕಪಿರ್ಭವೇತ್ ॥೪೮॥
ವಿಪ್ರಂಗೆ ಜೀವನವ (ಜೀವಿಕೆ) ಕೊಟ್ರೆ ಒಂದು ಲಕ್ಷ ಗೋವುಗಳ ದಾನ ಮಾಡಿದ ಫಲ ಬತ್ತು. ವಿಪ್ರನ ಜೀವಿಕೆಯ ಅಪಹರುಸುವಂವ° ಜೇಡ°, ನಾಯಿ ಮತ್ತೆ ಕಪಿಯಾಗಿ ಹುಟ್ಟುತ್ತ°.
ಏವಮಾದೀನಿ ಚಿಹ್ನಾನಿ ಯೋನಯಶ್ಚ ಖಗೇಶ್ವರ ।
ಸ್ವಕರ್ಮವಿಹಿತಾ ಲೋಕೇ ದೃಷ್ಯಂತೇsತ್ರ ಶರೀರಿಣಾಮ್ ॥೪೯॥
ಎಲೈ ಪಕ್ಷೀಂದ್ರ!, ತಮ್ಮ ಕರ್ಮಂಗೊಕ್ಕನುಸಾರವಾಗಿ ಈ ಲೋಕಲ್ಲಿ ಇವೇ ಮೊದಲಾದ ಚಿಹ್ನೆಗೊ ಮತ್ತೆ ಜನ್ಮಂಗೊ ಶರೀರಧಾರಿಗಳಲ್ಲಿ ಕಂಡುಬತ್ತು.
ಏವಂ ದುಷ್ಕರ್ಮಕರ್ತಾರೋ ಭುಕ್ತ್ವಾ ನಿರಯಯಾತನಾವ್ ।
ಜಾಯಂತೇ ಪಾಪಶೇಷೇಣ ಪ್ರೋಕ್ತಾ ಸ್ವೇತಾಸು ಯೋನಿಷು ॥೫೦॥
ಈ ರೀತಿ ಬೇಡಂಗಟ್ಟೆ ಕೆಲಸಂಗಳ ಮಾಡಿದವು ನರಕಯಾತನೆಯ ಅನುಭವುಸಿ ಉಳುದು ಪಾಪಂಗಳ ಅನುಭವುಸಲೆ ಈಗ ಹೇಳಿದ ಈ ಜೀವವರ್ಗಂಗಳಲ್ಲಿ ಹುಟ್ಟುತ್ತವು.
ತತೋ ಜನ್ಮ ಸಹಸ್ರೇಷು ಪ್ರಾಪ್ಯ ತಿರ್ಯಕ್ಶರೀರತಾವ್ ।
ದುಃಖಾನಿ ಭಾರವಹನೋದ್ಭವಾದೀನಿ ಲಭಂತಿ ತೇ ॥೫೧॥
ಮತ್ತೆ ಸಾವಿರಾರು ಜನ್ಮಂಗಳಲ್ಲಿ ಪ್ರಾಣಿ (ತಿರ್ಯಕ್) ಶರೀರಂಗಳ ಪಡದು, ಭಾರ ಹೊರ್ತದು ಮುಂತಾದ ದುಃಖಂಗಳ ಪಡೆತ್ತವು.
ಪಕ್ಷಿದುಃಖಂ ತತೋ ಭುಕ್ತ್ವಾ ವೃಷ್ಟಿಶೀತಾತಪೋದ್ಭವಮ್।
ಮಾನುಷಂ ಲಭತೇ ಪಶ್ಚಾತ್ಸಮೀಭೂತೇ ಶುಭಾಶುಭೇ ॥೫೨॥
ಮತ್ತೆ ಪಕ್ಷಿಯಾಗಿ ಮಳೆ ಶೀತ ಮತ್ತೆ ಬಿಸಿಲಿಂದ ಉಂಟಪ್ಪ ದುಃಖವ ಅನುಭವುಸಿ ಮತ್ತೆ ಶುಭಾಶುಭ ಕರ್ಮಂಗೊ ಸಮವಾದಪ್ಪಗ ಮನುಷ್ಯ ಶರೀರವ ಪಡೆತ್ತ°.
ಸ್ತ್ರೀಪುಂಸೋಸ್ತು ಪ್ರಸಂಗೇನ ಭೂತ್ವಾ ಗರ್ಭೇ ಕ್ರಮಾದಸೌ ।
ಗರ್ಭಾದಿಮರಣಾಂತಂ ಚ ಪ್ರಾಪ್ಯ ದುಃಖಂ ಮ್ರಿಯೇತ್ಪುನಃ ॥೫೩॥
ಸ್ತ್ರೀ ಪುರುಷನ ಸಂಬಂಧಂದ ಗರ್ಭಲ್ಲಿ ಉತ್ಪನ್ನವಾಗಿ ಅನುಕ್ರಮವಾಗಿ ಗರ್ಭಂದ ಹಿಡುದು ಮೃತ್ಯುವಿನ ವರೇಂಗೆ ದುಃಖವ ಅನುಭವುಸಿ ಮರಣ ಹೊಂದುತ್ತ°.
ಸಮುತ್ಪತ್ತೇರ್ವಿನಾಶಶ್ಚ ಜಾಯತೇ ಸರ್ವದೇಹಿನಾಮ್ ।
ಏವಂ ಪ್ರವರ್ತಿತಂ ಚಕ್ರಂ ಭೂತಗ್ರಾಮೇ ಚತುರ್ವಿಧೇ ॥೫೪॥
ಸರ್ವಜೀವಿಗಳಲ್ಲಿಯೂ ಉತ್ಪತ್ತಿ ಮತ್ತೆ ವಿನಾಶ ಉಂಟಾವುತ್ತು. ಈ ರೀತಿಯಾಗಿ ನಾಲ್ಕುವಿಧ ಭೂತಶರೀರಂಗಳಲ್ಲಿ ಜನ್ಮ-ಮೃತ್ಯು ಚಕ್ರ ಸುತ್ತಿಗೊಂಡಿರುತ್ತು. (ನಾಲ್ಕು ವಿಧ ಭೂತಶರೀರಂಗೊ – ೧.ಉದ್ಭಿಜ = ವೃಕ್ಷ ಲತಾ ಗುಲ್ಮಾದಿ, ೨.ಸ್ವೇದಜ = ತಿಗಣೆ, ಹೇನು, ೩.ಅಂಡಜ = ಪಕ್ಷಿ, ಕೋಳಿ, ಹಾವು, ಆಮೆ ಇತ್ಯಾದಿ, ೪. ಜರಾಯುಜ = ಮನುಷ್ಯ, ಪಶು ಇತ್ಯಾದಿ ಜರಾಬಳ್ಳಿಯೊಟ್ಟಿಂಗೆ ಹುಟ್ಟುವ ಪ್ರಾಣಿಗೊ).
ಘಟೀಯಂತ್ರಂ ಯಥಾ ಮರ್ತ್ಯಾ ಭ್ರಮಂತಿ ಮಮ ಮಾಯಯಾ।
ಭೂಮೌ ಕದಾಚಿನ್ನರಕೇ ಕರ್ಮಪಾಶಸಮಾವೃತಾಃ ॥೫೫॥
ಮನುಷ್ಯರು ಎನ್ನ ಮಾಯೆಂದ ಕರ್ಮಪಾಶಂದ ಬಂಧಿಸಲ್ಪಟ್ಟವರಾಗಿ ಒಂದರಿ ಭೂಮಿಲಿ ಮತ್ತೊಂದರಿ ನರಕಲ್ಲಿ ಗಂಟೆಯಂತ್ರದ (ಮುಳ್ಳಿನಾಂಗೆ) ಹಾಂಗೆ ತಿರುಗುತ್ತಾ ಇರುತ್ತವು.
ಅದತ್ತ ದಾನಾಚ್ಚ ಭವೇದ್ದರಿದ್ರೋ ದರಿದ್ರಭಾವಾಚ್ಚ ಕರೋತಿ ಪಾಪಮ್ ।
ಪ್ರಾಪಪ್ರಭಾವಾನ್ನರಕೇ ಪ್ರಯಾತಿ ಪುನರ್ದರಿದ್ರಃ ಪುನರೇವ ಪಾಪಿ ॥೫೬॥
ದಾನ ಮಾಡದ್ದೆ ಇಪ್ಪಂವ° ದರಿದ್ರನಾವುತ್ತ°, ದರಿದ್ರನಪ್ಪದರಿಂದ ಪಾಪವ ಮಾಡುತ್ತ°. ಪಾಪದ ಪ್ರಭಾವಂದ ನರಕಕ್ಕೆ ಹೋವುತ್ತ°, ಪುನಃ ದರಿದ್ರನಾವುತ್ತ°, ಪುನಃ ಪಾಪಿಯಾವುತ್ತ°.
ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ್ ।
ನಾಭುಕ್ತಂ ಕ್ಷೀಯತೇ ಕರ್ಮಕಲ್ಪಕೋಟಿಶತೈರಪಿ ॥೫೭॥
ತಾನು ಮಾಡಿದ ಶುಭಾಶುಭ ಕರ್ಮಂಗಳ ಅವಶ್ಯವಾಗಿಯೂ ಅನುಭವುಸಲೇ ಬೇಕು. ಕರ್ಮಂಗೊ ಅನುಭವುಸದ್ದೆ ನೂರು ಕೋಟಿ ಕಲ್ಪಂಗಳಾದರೂ ನಾಶ ಆವುತ್ತಿಲ್ಲೆ.
ಇತಿ ಗರುಡಪುರಾಣೇ ಸಾರೋದ್ಧಾರೇ ಪಾಪಚಿಹ್ನನಿರೂಪಣಂ ನಾಮ ಪಂಚಮೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಪಾಪ ಚಿಹ್ನೆಗಳ ನಿರೂಪಣೆ ಹೇಳ್ವ ಐದನೇ ಅಧ್ಯಾಯ ಮುಗುದತ್ತು.
ಗದ್ಯರೂಪಲ್ಲಿ –
ಏವ ಬ್ರಾಹ್ಮಣಾಧಮ° ದ್ರವ್ಯಾರ್ಜನಗಾಗಿಯೇ ದೇವತಾಪೂಜೆಯ ಮಾಡುತ್ತನೋ ಅಂವ ದೇವಲಕ° ಎನುಸುತ್ತ°. ಅಂತಹ ಬ್ರಾಹ್ಮಣ ದೇವಕಾರ್ಯ ಮತ್ತೆ ಪಿತೃಕಾರ್ಯಂಗೊಕ್ಕೆ ವರ್ಜಿತ° (ನಿಂದನೀಯ°). ಮಹಾಪಾತಕಂದ ಪ್ರಾಪ್ತ ಅತ್ಯಂತ ಘೋರ ಹಾಂಗೂ ದಾರುಣ ನರಕಂಗಳ ಪ್ರಾಪ್ತಿ ಹೊಂಡಿ ಮಹಾಪಾತಕಿ ಕರ್ಮಂಗೊ ಕ್ಷಯವಾದ ಮತ್ತೆ ಪುನಃ ಈ ಲೋಕಲ್ಲಿ ಹುಟ್ಟುತ್ತ°. ಬ್ರಹ್ಮ ಹತ್ಯೆಯ ಮಾಡಿದಂವ° ಕತ್ತೆ ಒಂಟೆ ಎಮ್ಮೆಯ ಯೋನಿಯ ಪ್ರಾಪ್ತಿ ಹೊಂದುತ್ತ°. ಮದ್ಯಪಾನ ಮಾಡುವಂವ° ತೋಳ°, ನಾಯಿ, ನರಿಯ ಯೋನಿಗಳಲ್ಲಿ ಜನಿಸುತ್ತ°. ಚಿನ್ನವ ಅಪಹರುಸುವಂವ° ಕ್ರಿಮಿ-ಕೀಟ ಹಾಂಗೂ ಚಿಟ್ಟೆಯ ಯೋನಿಲಿ ಜನಿಸುತ್ತ°. ಗುರುಪತ್ನಿಯ ಗಮನ ಮಾಡುವಂವ° ಕ್ರಮವಾಗಿ ಹುಲ್ಲು ಪೊದರು ಬಳ್ಳಿ ಜನ್ಮಂಗಳ ಹೊಂದುತ್ತ°.
ಪರಸ್ತ್ರೀ ಹರಣ ಮಾಡುವಂವ°, ಅಡವು ಮಡಗಿದ್ದರ ಅಪಹರುಸುವಂವ° ಹಾಂಗೂ ಬ್ರಾಹ್ಮಣನ ಧನವ ಅಪಹರುಸುವಂವ° ಬ್ರಹ್ಮರಾಕ್ಷಸ° ಆವುತ್ತ°. ಬ್ರಾಹ್ಮಣನ ಧನ ಕಪಟಸ್ನೇಹಂದ ಉಪಭೋಗುಸುವಂವ° ಏಳು ಜನ್ಮಂಗಳವರೇಂಗೆ ತನ್ನ ಕುಲವ ವಿನಾಶ ಮಾಡುತ್ತ. ಬಲಾತ್ಕಾರ ಹಾಂಗೂ ಕಳ್ಳತನಂದ ಭೋಗುಸುವಂವ ಚಂದ್ರ ನಕ್ಷತ್ರಂಗೊ ಇಪ್ಪನ್ನಾರ ತನ್ನ ಕುಲವ ನಾಶ ಮಾಡುತ್ತ° (ಚಂದ್ರ ನಕ್ಷತ್ರಂಗೊ ಇಪ್ಪನ್ನಾರ ಅವನ ಪಾಪತ್ವ ಅವನ ಸುಡುತ್ತು).
ಲೋಹ ಮತ್ತೆ ಶಿಲೆಯ ಪುಡಿಯ ಹಾಂಗೂ ವಿಷವ ತಿಂದು ಜೀರ್ಣಿಸುಲೆ ಎಡಿಗಕ್ಕು, ಆದರೆ, ಬ್ರಹ್ಮಸ್ವವ ತಿಂದು ಜೀರ್ಣುಸಲೆ ಈ ಮೂರ್ಲೋಕಲ್ಲಿ ಏವ ಮನುಷ್ಯಂಗೆ ಎಡಿಗು?!. ಬ್ರಾಹ್ಮಣನ ಸಂಪತ್ತಿಂದ ಪೋಷಣೆಗೊಂಡ ಸೇನೆ (ಬಲ) ಹಾಂಗೂ ವಾಹನ ಯುದ್ಧಕಾಲಲ್ಲಿ ಹೊಯಿಗೆಲಿ ನಿರ್ಮಿಸಿದ ಸಂಕದ ಹಾಂಗೆ ಜಜ್ಜಿ ಪುಡಿಯಕ್ಕು. ದೇವದ್ರವ್ಯವ ಉಪಭೋಗುಸುವದರಿಂದ ಅಥವಾ ಬ್ರಹ್ಮಸ್ವವ ಅಪಹರುಸುವದರಿಂದ ಅಥವಾ ಅತಿಕ್ರಮಣ ಮಾಡುವದರಿಂದ ಕುಲ ನಾಶವಾಗಿ ಹೋಕು. ತನ್ನ ಆಶ್ರಯಿಸಿದ ವೇದ-ಶಾಸ್ತ್ರ ಪಾರಂಗತ ಬ್ರಾಹ್ಮಣನ ಬಿಟ್ಟಿಕ್ಕಿ ಅನ್ಯ ಬ್ರಾಹ್ಮಣಂಗೆ ದಾನ ನೀಡುವದು ಬ್ರಾಹ್ಮಣನ ಅತಿಕ್ರಮಣ ಮಾಡಿದಾಂಗೆ ಆವುತ್ತು. ವೇದವೇದಾಂಗದ ಜ್ಞಾನರಹಿತ ಬ್ರಾಹ್ಮಣನ ಬಿಡುವದು ಅತಿಕ್ರಮಣ ಹೇದು ಆವುತ್ತಿಲ್ಲೆ. ಎಂತಕೆ ಹೇಳಿರೆ., ಹೊತ್ತುವ ಅಗ್ನಿಯ ಬಿಟ್ಟು ಬೂದಿಗೆ ಆಹುತಿ ಕೊಡ್ಳೆ ಆವುತ್ತಿಲ್ಲೆ. ಹೇ ಪಕ್ಷೀಂದ್ರ!, ಬ್ರಾಹ್ಮಣನ ಅತಿಕ್ರಮಣ ಮಾಡುವ ವ್ಯಕ್ತಿ ನರಕಂಗಳ ಭೋಗುಸಿ, ಅನುಕ್ರಮವಾಗಿ ಜನ್ಮಾಂಧ ಮತ್ತೆ ದರಿದ್ರನಾವುತ್ತ°. ಅಂವ ಎಂದಿಗೂ ದಾನಿ ಅಪ್ಪಲಿಲ್ಲೆ, ಬದಲಿಂಗೆ ಯಾಚನೆಯನ್ನೇ ಮಾಡುತ್ತವನಾವುತ್ತ°.
ತನ್ನಿಂದ ಕೊಡಲ್ಪಟ್ಟ ಅಥವಾ ಅನ್ಯರಿಂದ ಕೊಡಲ್ಪಟ್ಟ ಭೂಮಿಯ ಆರು ಅಪಹರುಸುತ್ತನೋ, ಅಂವ° ಅರುವತ್ತು ಸಾವಿರ ವರ್ಷಂಗಳವರೇಂಗೆ ಮಲಲ್ಲಿಪ್ಪ ಕ್ರಿಮಿ ಆವುತ್ತ°. ಆರು ಸ್ವಯಂ ನೀಡಿ ಪುನಃ ಸ್ವಯಂ ಹಿಂದೆ ಪಡಕ್ಕೊಳ್ಳುತ್ತನೋ ಅಂಥ ಪಾಪಿ ಒಂದು ಕಲ್ಪದವರೇಂಗೆ ನರಕಲ್ಲಿ ಇರುತ್ತ°. ಉದ್ಯೋಗ ಅಥವಾ ಜೀವನಕ್ಕಾಧಾರ ಭೂಮಿಯ ಕೊಟ್ಟಿಕ್ಕಿ ಮತ್ತೆ ಯತ್ನಪೂರ್ವಕ ಅದರ ರಕ್ಷಣೆಯನ್ನೂ ಮಾಡೆಕು. ಆರು ರಕ್ಷಣೆ ಮಾಡದ್ದೆ ಅದರ ಹರಣ ಮಾಡುತ್ತನೋ ಅಂವ ಕುಂಟನಾಯಿ ಆವುತ್ತ°. ಬ್ರಾಹ್ಮಣಂಗೆ ಜೀವನ ನಿರ್ವಹಣೆಯ ಸಾಧನವ ಕೊಡುವ ವ್ಯಕ್ತಿ ಒಂದು ಲಕ್ಷ ಗೋದಾನದ ಫಲ ಪ್ರಾಪ್ತಿ ಹೊಂದುತ್ತ° ಮತ್ತೆ ಬ್ರಾಹ್ಮಣನ ವೃತ್ತಿಯ ಹರಣ ಮಾಡುವಂವ° ಜೇಡ°, ನಾಯಿ, ಮರ್ಕಟ° ಆವುತ್ತ°.
ಹೇ ಗರುಡ!, ಜೀವಿಗೊಕ್ಕೆ ತಮ್ಮ ಕರ್ಮಂಗಳ ಅನುಸಾರವಾಗಿ ಲೋಕಲ್ಲಿ ಈ ಮೇಗೆ ವಿವರಿಸಿದ ಚಿಹ್ನೆಗಳಿಪ್ಪದರ ದೇಹಧಾರಿಗಳಲ್ಲಿ ಕಾಂಬಲಕ್ಕು. ಈ ಪ್ರಕಾರ ದುಷ್ಕರ್ಮ (ಪಾಪ) ಮಾಡುವ ಜೀವಿಯು ನರಕೀಯ ಯಾತನೆಂಗಳ ಭೋಗುಸಿ, ಉಳುದ ಪಾಪಂಗಳ ಭೋಗುಸಲೆ ಈ ಮೇಗೆ ಹೇಳಿದ ಯೋನಿಗೊಕ್ಕೆ ಹೋವುತ್ತವು. ಮತ್ತೆ ಸಾವಿರಾರು ವರ್ಷಂಗಳ ವರೇಂಗೆ ಪಶು-ಪಕ್ಷಿಗಳ ಶರೀರವ ಪ್ರಾಪ್ತಿ ಹೊಂದಿ ಅವು ಭಾರ ಹೊರುವ ಮುಂತಾದ ಕಾರ್ಯಂಗಳಿಂದ ದುಃಖವ ಹೊಂದುತ್ತವು. ಮತ್ತೆ, ಪಕ್ಷಿಯಾಗಿ ಮಳೆ, ಶೀತ ಹಾಂಗೂ ಬಿಸಿಲಿನ ತಾಪಂದ ಬೆಂದು ಹೋವುತ್ತವು. ಇದಾದಮತ್ತೆ, ಪುಣ್ಯ ಮತ್ತೆ ಪಾಪಂಗೊ ಸಮಾನವಾದಪ್ಪಗ ಮನುಷ್ಯ ಯೋನಿ ಪ್ರಾಪ್ತ ಆವುತ್ತು. ಸ್ತ್ರೀ-ಪುರುಷರ ಸಂಬಂಧಂದ ಅಂವ° ಗರ್ಭಲ್ಲಿ ಉತ್ಪನ್ನನಾಗಿ ಅನುಕ್ರಮವಾಗಿ ಗರ್ಭಂದ ಹಿಡುದು ಮೃತ್ಯುವಿನವರೇಂಗೆ ದುಃಖಂಗಳ ಪ್ರಾಪ್ತಿ ಹೊಂದಿ ಪುನಃ ಮರಣ ಹೊಂದುತ್ತ°.
ಈ ಪ್ರಕಾರ ಸಮಸ್ತ ಜೀವಿಗಳ ಜನ್ಮ (ಉತ್ಪತ್ತಿ) ಮತ್ತೆ ನಾಶ ಉಂಟಾವ್ತು. ಈ ಜನನ-ಮರಣದ ಚಕ್ರ ನಾಲ್ಕು ಪ್ರಕಾರದ ಸೃಷ್ಟಿಲಿ (ಉದ್ಭಿಜ, ಸ್ವೇದಜ, ಅಂಡಜ, ಜರಾಯುಜ) ನಡೆತ್ತಾ ಇರುತ್ತು. ಎನ್ನ ಮಾಯೆಂದ ಘಟೀಯಂತ್ರದ ಹಾಂಗೆ ಜೀವಿಗೊ ಸುತ್ತುತ್ತಾ ಇರುತ್ತವು. ದಾನ ಮಾಡದ್ದೆ ಇಪ್ಪಂವ° ದರಿದ್ರನಾವುತ್ತ°, ದರಿದ್ರನಪ್ಪದರಿಂದ ಪಾಪವ ಮಾಡುತ್ತ°. ಪಾಪದ ಪ್ರಭಾವಂದ ನರಕಕ್ಕೆ ಹೋವುತ್ತ°, ಪುನಃ ದರಿದ್ರನಾವುತ್ತ°, ಪುನಃ ಪಾಪಿಯಾವುತ್ತ°. ದಾನ ಮಾಡದ್ದಿಪ್ಪದರಿಂದ ಜೀವಿ ದರಿದ್ರನಾವುತ್ತ°, ದರಿದ್ರನಾದಮತ್ತೆ ಪಾಪ ಮಾಡುತ್ತ°, ಪಾಪದ ಪ್ರಭಾವಂದ ನರಕಕ್ಕೆ ಹೋವುತ್ತ°. ಮತ್ತೆ ನರಕಂದ ಹಿಂದಂತಾಗಿ ಬಂದು ಪುನಃ ದರಿದ್ರ ಮತ್ತೆ ಪುನಃ ಪಾಪಿ ಆವುತ್ತ°.
ಜೀವಿಂದ ಮಾಡಲ್ಪಟ್ಟ ಶುಭಾಶುಭ ಕರ್ಮಂಗಳ ಫಲಂಗಳ ಜೀವಿ ಅನುಭವಿಸಿಯೇ ತೀರೆಕು. ಎಂತಕೆ ಹೇಳಿರೆ., ನೂರಾರು ಕಲ್ಪಂಗೊ ಕಳುದರೂ ಕರ್ಮಫಲ ಅನುಭವುಶದ್ದೆ ನಾಶ ಆವುತ್ತಿಲ್ಲೆ.
ಈ ರೀತಿಯಾಗಿ ಭಗವಾನ್ ಮಹಾವಿಷ್ಣು ಗರುಡಂಗೆ ವಿವರಿಸಿದಲ್ಯಂಗೆ ಗರುಡಪುರಾಣದ ಉತ್ತರಖಂಡ- ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ಹೇಳ್ವ ಭಾಗದ ‘ಪಾಪಚಿಹ್ನೆಗಳ ನಿರೂಪಣೆ’ ಹೇಳ್ವ ಐದನೇ ಅಧ್ಯಾಯ ಮುಗುದತ್ತು.
[ಚಿಂತನೀಯಾ –
ದೇವತಾ ಪೂಜೆ, ದೇವತಾರಾಧನೆ ಹೇಳಿರೆ ಅದು ಆಡಂಬರಕ್ಕೋ, ಸ್ವಯಂ ಪ್ರತಿಷ್ಥೆಗೋ ಮಾಡುವದಲ್ಲ. ಅದು ಭಗವಂತನ ನಿಜ ಭಕ್ತಿ ಸೇವೆ ಆಗಿರೆಕು. ಅದರಿಂದ ಮಾತ್ರ ಭಗವದ್ಪ್ರೀತಿಗೆ ಪಾತ್ರನಾಗಿ ಯಶಸ್ಸು ಗಳುಸಲಕ್ಕು. ಅದರ ಬಿಟ್ಟಿಕ್ಕಿ ಸ್ವಾರ್ಥವೊಂದೇ ಲಕ್ಷ್ಯವಾಗಿ ಮಡಿಕ್ಕೊಂಡು ಆರಾಧುಸುವ ಏವ ಬ್ರಾಹ್ಮಣನೂ ಸ್ತುತ್ಯಾರ್ಹನಾವ್ತನಿಲ್ಲೆ. ಅವನ ದೂರಮಡಿಕ್ಕೊಂಬದರಿಂದ ಏವ ದೋಷವೂ ಇಲ್ಲೆ. ಬ್ರಾಹ್ಮಣನಾದಂವ° ಸರ್ವಜನಹಿತಾರ್ಥಾಯ ಪೂಜೆ ಮಾಡ್ತಂವನಾಗಿರೆಕು. ಅದುವೇ ಅವಂಗೆ ಭೂಷಣ. ಅದರಿಂದ ಅಂವ ಪೂಜಾರ್ಹ ಬ್ರಾಹ್ಮಣ° ಆವುತ್ತ. ಅಂತಹ ಪೂಜಾರ್ಹ ಬ್ರಾಹ್ಮಣನ ಎಂದಿಂಗೂ ಅಗೌರವಂದ ಕಾಂಬಲಾಗ. ಅವಂಗೆ ಸಲ್ಲತಕ್ಕ ಮರ್ಯಾದಿಗಳ ಮಾಡೆಕೆ. ದೇವಸ್ವವ ಅಪಹರುಸುವ ಬ್ರಾಹ್ಮಣ° ವಿನಾಶದತ್ತೆ ತಳ್ಳಲ್ಪಡುತ್ತ°, ಪೂಜಾರ್ಹ ಬ್ರಾಹ್ಮಣನ ತಿರಸ್ಕರಿಸುವದರಿಂದ ಕುಲನಾಶ ಖಂಡಿತ. ವೇದೋಕ್ತ ಬ್ರಾಹ್ಮಣನ ಅನಾದರ ಮಾಡಿದಂವ ಜನ್ಮ ಜನ್ಮಾಂತರಂಗಳಲ್ಲಿಯೂ ಕಷ್ಟವ ಅನುಭವುಸುತ್ತ°. ಅದೇ ರೀತಿ ದೇವಸ್ವ ಮತ್ತೆ ಬ್ರಹ್ಮಸ್ವ ಬಹು ಮುಖ್ಯ ವಿಷಯ. ಅದು ಸೇವಗೆ ಇಪ್ಪದು. ಅದರ ಸ್ವಾರ್ಥಕ್ಕಾಗಿ ಅಪಹರುಸಲೆ ಮನಸ್ಸಿಲ್ಲಿ ಕೂಡ ಗ್ರೇಶಲಾಗ. ಅದರಿಂದ ಎಂದಿಗೂ ಒಳಿತು ಆವುತ್ತಿಲ್ಲೆ. ಅದೇ ರೀತಿ ಬ್ರಹ್ಮ ಹತ್ಯೆ, ಸ್ತ್ರೀ ಹರಣ. ಮುಂದಾಣ ಜನ್ಮಂಗಳಲ್ಲಿಯೂ ಕಷ್ಟ ದುಃಖವ ಅನುಭವುಸೇಕ್ಕಾಗಿ ಬತ್ತು.
ದಾನ ಹೇಳ್ವದು ಒಂದು ಬಗೆ ತಪಸ್ಸು. ಆ ದಾನ ಪರಮಾತ್ಮನ ಸೇವೆ ಹೇಳ್ವ ಮನೋಭಾವಂದ ಮಾಡೆಕು. ಅಲ್ಲಿ ಸ್ವಾರ್ಥಕ್ಕೆ ಲವಲೇಶವೂ ಎಡೆ ಇಲ್ಲೆ. ಗೌರವಂದ ಅಭಿಮಾನಂದ ಅರ್ಹನಾದೋನಿಂಗೆ ದಾನ ಕೊಡೆಕು. ದಾನ ಕೊಟ್ಟದರ ಅಂವ ಕಾಪಾಡ್ಳೆ ಅನುಕೂಲವನ್ನೂ ಮಾಡಿಕೊಡುವದು ಉತ್ತಮ. ಅದಕ್ಕಾಗಿಯೇ ಅರ್ಹನಾದವಂಗೆ ದಾನ ಕೊಡೆಕು ಹೇಳ್ವದು. ಸಿಕ್ಕಿದ ದಾನವ ದುರುಪಯೋಗ ಪಡುಸುವದೋ, ಕೊಟ್ಟ ದಾನವ ಸೀಂತ್ರಿ ಮಾಡಿ ಪುನಃ ಪಡವದೋ ಮಹಾಪಾಪ, ಜನ್ಮಾಂತರ ಕಷ್ಟವ ಎದುರುಸೆಕ್ಕಾವ್ತು.
ಜನನ ಮರಣ ಹೇಳ್ವದು ರಾಟೆಯ ಹಾಂಗೆ ಸುತ್ತಿಗೊಂಡೇ ಇರುತ್ತು. ಜನನಲ್ಲಿ ಸದ್ಬುದ್ಧಿಂದ ತನ್ನತನವ ಅರ್ತು ಸಾಧನೆ ಕೈಗೊಂಡರೆ ಮೋಕ್ಷಕ್ಕೆ ದಾರಿ. ಆದ್ರೆ ಬಾಯಿಲಿ ಹೇಳ್ತಷ್ಟು ಸುಲಭ ಅಲ್ಲ. ಅಂದರೂ ಸನ್ಮಾರ್ಗ ನಡತೆ ಮುಂದಾಣ ದಾರಿಯ ಸುಗಮಗೊಳುಸುತ್ತು ಹೇಳ್ತರ್ಲಿ ಎರಡು ಮಾತಿಲ್ಲೆ. ಗರುಡಪುರಾಣಲ್ಲಿ ವಿವಿಧ ರೀತಿಯ ಪಾಪಚಿಹ್ನೆಗೊ ಹೇಳಲ್ಪಟ್ಟದ್ದರ ನಾವು ನಮ್ಮ ನಿತ್ಯ ಜೀವನಲ್ಲಿ ಕಣ್ಣಾರೆ ಕಾಂಬಲೆಡಿತ್ತು. ಕಣ್ಣಾರೆ ಕಂಡ ಮತ್ತೆ ಆದರೂ ನಾವು ಎಚ್ಚರ ತೆಕ್ಕೊಂಡು ಜಾಗೃತರಾಗದ್ರೆ ಇನ್ನು ನಮ್ಮ ಕಾಪಾಡ್ಳೆ ಆರಿಂದಲೂ ಎಡಿಯ. ನಾವು ಮಾಡಿದ ಪಾಪ ನಾವೇ ಅನುಭವುಶೆಕು. ಅದು ಎಷ್ಟು ಜನ್ಮಂಗೊ ಪಡೆಕ್ಕಾವ್ತೋ ನಮ್ಮಿಂದ ಗ್ರೇಶಿ ನೋಡ್ಳೂ ಎಡಿಯದ್ದ ವಿಚಾರ.
ಸರ್ವಾಂತರ್ಯಾಮಿಯಾದ, ಸರ್ವಶಕ್ತನಾದ ಭಗವಂತ° ಎಲ್ಲೋರಿಂಗೂ ಸದ್ಬುದ್ಧಿ, ಸನ್ಮಾರ್ಗವ ನೀಡಲಿ ಹೇದು ಹಾರೈಸಿಗೊಂಡು ಈ ಅಧ್ಯಾಯವ ಮುಗುಶುತ್ತು. ಹರೇ ರಾಮ.]
ಮುಂದೆ ಎಂತರ..? ಬಪ್ಪ ವಾರ ನೋಡುವೋ°.
ದೇವಾರಾಧನೆ,ದಾನ,ಜನನ ಮರಣದ ನೆಡುಗಾಣ ಬದುಕ್ಕು ಯಾವ ರೀತಿ ಇರೇಕು ಹೇಳ್ತದರ ವಿವರಣೆ,ಚಿ೦ತನೆ ಎರಡೂ ಮನಸ್ಸಿ೦ಗೆ ತಟ್ಟಿತ್ತು.
ಧನ್ಯವಾದ ಭಾವ.
ಬ್ರಾಹ್ಮಣ ಜನ್ಮಲ್ಲಿ ಹುಟ್ಟಿ, ಸಂಧ್ಯಾವಂದನೆ ಕೂಡಾ ಮಾಡದ್ದ (ಸಮಯ ಸಾಲದ್ದೆಯೊ, ಮನಸ್ಸಿಲ್ಲದ್ದೆಯೊ,ಗೊಂತಿಲ್ಲದ್ದೆಯೊ) ಇಪ್ಪ ಹಲವಾರು ಬ್ರಾಹ್ಮಣರಿಂಗೋಸ್ಕರವೇ ಈ ಬಾರಿಯ ಚಾತುರ್ಮಾಸ್ಯಲ್ಲಿ ನಮ್ಮ ಗುರುಗೊ ಸಂಧ್ಯಾವಂದನೆ ಮತ್ತೆ ಕುಂಕುಮಾರ್ಚನೆ ವಿಷಯಕ್ಕೆ ಹೆಚ್ಚಿನ ಒತ್ತು ಕೊಟ್ಟು ತಿಳಿಸಿದ್ದವು. ನಾವು ಸಾಧ್ಯವಾದಷ್ಟೂ ಅವು ಹಾಕಿಕೊಟ್ಟ ಮಾರ್ಗಲ್ಲಿ ನೆಡದು ಸ್ತುತ್ಯಾರ್ಹ ಬ್ರಾಹ್ಮಣರಪ್ಪೊ. ಹರೇ ರಾಮ.