Oppanna.com

ಗರುಡ ಪುರಾಣ – ಅಧ್ಯಾಯ 08 – ಭಾಗ 01

ಬರದೋರು :   ಚೆನ್ನೈ ಬಾವ°    on   17/10/2013    2 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರದ ಅಧ್ಯಾಯ 7ರ ಭಾಗಲ್ಲಿ ರಾಜಾ ಬಭ್ರುವಾಹನ ಅಪರಿಚಿತ ಪ್ರೇತಕ್ಕೆ ಮಾಡಿದ ಔರ್ಧ್ವದೇಹಿಕ ಕ್ರಿಯೆಯ ಬಗ್ಗೆ ಓದಿದ್ದದು. ಮುಂದೆ-
 
ಗರುಡ ಪುರಾಣಮ್                                              ಗರುಡಪುರಾಣ
ಅಥ ಅಷ್ಟಮೋsಧ್ಯಾಯಃ                                     ಅಧ್ಯಾಯ – 8
ಆತುರದಾನನಿರೂಪಣಮ್                                   ಮರಣಕಾಲಲ್ಲಿ ಮಾಡೇಕ್ಕಾದ ದಾನಂಗಳ ನಿರೂಪಣೆ
 
ಗರುಡ ಉವಾಚimages
ಆಮುಷ್ಮಿ ಕೀಂ ಕ್ರಿಯಾಂ ಸರ್ವಾಂ ವದ ಸುಕೃತಿನಾಂ ಮಮ ।
ಕರ್ತವ್ಯಾ ಸಾ ಯಥಾ ಪುತ್ರೈಸ್ತಥಾ ಚ ಕಥಯ ಪ್ರಭೋ ॥೦೧॥
ಗರುಡ° ಹೇಳಿದ° – ಹೇ ಪ್ರಭೋ!, ಸತ್ಕಾರ್ಯಂಗಳ ಮಾಡಿದವರ ಪರಲೋಕ ಕ್ರಿಯೆಗಳ ಎಲ್ಲವನ್ನೂ ಎನಗೆ ಹೇಳು. ಅವರ ಮಕ್ಕಳಿಂದ ಆ ಕ್ರಿಯೆಗೊ ಯಾವರೀತಿಯೆಲ್ಲ ಮಾಡಲ್ಪಡೆಕು ಹೇಳ್ವದೆಲ್ಲವನ್ನೂ  ಯಥಾವತ್ತಾಗಿ ಎನಗೆ ಹೇಳು.
ಶ್ರೀ ಭಗವಾನುವಾಚ
ಸಾಧು ಪೃಷ್ಟಂ ತ್ವಯಾ ತಾರ್ಕ್ಷ್ಯ ಮಾನುಷಾಣಾಂ ಹಿತಾಯ ವೈ ।
ಧಾರ್ಮಿಕಾರ್ಹಂ ಚ ಯತ್ಕೃತ್ಯಂ ತತ್ಸರ್ವಂ ಕಥಯಾಮಿ ತೇ ॥೦೨॥
ಭಗವಂತ° ಹೇಳಿದ° – ಏ ಗರುಡನೇ!, ಮಾನವರ ಹಿತಕ್ಕಾಗಿ ನಿನ್ನಂದ ಒಳ್ಳೆದನ್ನೇ ಕೇಳಿದ್ದಾತಿದು. ಯಾವ ಕಾರ್ಯಂಗೊ ಧರ್ಮಾತ್ಮನಾದವ° ಮಾಡ್ಳೆ ಯೋಗ್ಯವೋ ಅವುಗಳೆಲ್ಲವನ್ನೂ ನಿನಗೆ ಹೇಳುತ್ತೆ.
ಸುಕೃತೀ ವಾರ್ದ್ಧಕೇ ದೃಷ್ಟ್ವಾ ಶರೀರಂ ವ್ಯಾಧಿ ಸಂಯುತಮ್ ।
ಪ್ರತಿಕೂಲನ್ದ್ರಹಾಂಶ್ಚೈವ ಪ್ರಾಣಘೋಷಸ್ಯ ಚಾಶ್ರುತಿಮ್ ॥೦೩॥
ಧರ್ಮಾತ್ಮನು ಮುಪ್ಪಿಲ್ಲಿ ರೋಗಪೀಡಿತವಾದ ತನ್ನ ಶರೀರವ ನೋಡಿ ಗ್ರಹಂಗ ಪ್ರತಿಕೂಲವಾಗಿಪ್ಪದರ ಅರ್ತು ಪ್ರಾಣವಾಯುವಿನ ನಾದ ಕೇಳದ್ದೆ,
ತದಾ ಸ್ವಮರಣಂ ಜ್ಞಾತ್ವಾ ನಿರ್ಭಯಃ ಸ್ಯಾದತಂದ್ರಿತಃ ।
ಅಜ್ಞಾತಜ್ಞಾತಪಾಪಾನಂ ಪ್ರಾಯಶ್ಚಿತ್ತಂ ಸಮಾಚರೇತ್ ॥೦೪॥
ಅಂಬಗ, ತನ್ನ ಮರಣ ಸಮೀಪಿಸಿದ್ದರ ತಿಳುದು ನಿರ್ಭಯನಾಗಿ, ಆಲಸ್ಯ ರಹಿತನಾಗಿ, ತಿಳುದೋ ತಿಳಿಯದ್ದೆಯೋ ಮಾಡಿದ ಪಾಪಂಗೊಕ್ಕೆ ಪ್ರಾಯಶ್ಚಿತ್ತವ ಮಾಡಿಕೊಳ್ಳೆಕು.
ಯದಾ ಸ್ಯಾದಾತುರಃ ಕಾಲಸ್ತದಾ ಸ್ನಾನಂ ಸಮಾರಭೇತ್ ।
ಪೂಜನಂ ಕಾರಯೇದ್ವಿಷ್ಣೋಃ ಶಾಲಗ್ರಾಮಸ್ವರೂಪಿಣಃ ॥೦೫॥
ಏವಾಗ ಅವನ ಅಂತ್ಯಕಾಲ ಸಮೀಪುಸುತ್ತೋ ಅಂಬಗ ಮಿಂದಿಕ್ಕಿ ಶಾಲಗ್ರಾಮ ಸ್ವರೂಪನಾದ ವಿಷ್ಣುವ ಪೂಜೆಯ ಮಾಡುಸೆಕು.
ಅರ್ಚಯೇದ್ಗಂಧಪುಷ್ಪೈಶ್ಚ ಕುಂಕುಮೈಸ್ತುಲಸೀದಲೈಃ ।
ಧೂಪೈರ್ದೀಪೈಶ್ಚ ನೈವೇದ್ಯೈರ್ಬಹುಭಿರ್ಮೋದಕಾದಿಭಿಃ ॥೦೬॥
ಗಂಧಪುಷ್ಪಂಗಳಿಂದ, ಕುಂಕುಮ ತುಳಸೀದಳಂಗಳಿಂದ, ಧೂಪದೀಪಂಗಳಿಂದ, ವಿವಿಧ ಮೋದಕಾದಿ ನೈವೇದ್ಯಂಗಳಿಂದ ಪೂಜಿಸೆಕು.
ದತ್ವಾ ಚ ದಕ್ಷಿಣಾಂ ವಿಪ್ರಾನ್ನೈ ವೇದ್ಯಾದೇವ ಭೋಜಯೇತ್ ।
ಅಷ್ಟಾಕ್ಷರಂ ಜಪೇನ್ಮಂತ್ರಂ ದ್ವಾದಶಾಕ್ಷರಮೇವ ಚ ॥೦೭॥
ಬ್ರಾಹ್ಮಣರಿಂಗೆ ದಕ್ಷಿಣೆಯ ಕೊಟ್ಟು, ನೈವೇದ್ಯಲ್ಲೇ ಭೋಜನಮಾಡಿಸಿ, ಅಷ್ಟಾಕ್ಷರೀ ಮಂತ್ರ (ಓಂ ನಮೋ ನಾರಾಯಣಾಯ)ವ ಮತ್ತು ದ್ವಾದಶಾಕ್ಷರೀ ಮಂತ್ರ (ಓಂ ನಮೋ ಭಗವತೇ ವಾಸುದೇವಾಯ)ವನ್ನೂ ಜಪಿಸೆಕು.
ಸಂಸ್ಮರೇಚ್ಛೃಣುಯಾಚ್ಚೈವ ವಿಷ್ಣೋರ್ನಾಮ ಶಿವಸ್ಯ ಚ ।
ಹರೇರ್ನಾಮ ಹರೇತ್ಪಾಪಂ ನೃಣಾಂ ಶ್ರವಣಗೋಚರಮ್ ॥೦೮॥
ವಿಷ್ಣುವಿನ ಮತ್ತು ಶಿವನ ನಾಮಂಗಳ ಸ್ಮರಿಸೆಕು ಮತ್ತು ಕೇಳೆಕು. ಹರಿಯ ನಾಮವು ಮನುಷ್ಯರ ಕೆಮಿಗೆ ಬಿದ್ದರೆ ಸಾಕು ಅವರ ಪಾಪಂಗಳೆಲ್ಲವೂ ನಾಶವಾವ್ತು.
ರೋಗಿಣೋಂsತಿಕಮಾಸಾದ್ಯ ಶೋಚನೀಯಂ ನ ಬಾಂಧವೈಃ ।
ಸ್ಮರಣೀಯಂ ಪವಿತ್ರಂ ಮೇ ನಾಮ ಧ್ಯೇಯಂ ಮುಹುರ್ಮುಹುಃ ॥೦೯॥
ರೋಗಿಯ ಹತ್ರೆ ಬಂದು ಅವನ ಬಂಧುಗೊ ದುಃಖಿಸಲಾಗ. ಎನ್ನ ಪವಿತ್ರವಾದ ನಾಮವ ಮತ್ತೆ ಮತ್ತೆ ಸ್ಮರಿಸೆಕು.
ಮತ್ಸ್ಯಃ ಕೂರ್ಮೋ ವರಾಹಶ್ಚ ನರಸಿಂಹಶ್ಚ ವಾಮನಃ ।
ರಾಮೋ ರಾಮಶ್ಚ ಕೃಷ್ಣಶ್ಚ ಬುದ್ಧಃ ಕಲ್ಕೀ ತಥೈವ ಚ ॥೧೦॥
ಮರ್ತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಹಾಂಗೂ ಕಲ್ಕಿ
ಏತಾನಿ ದಶ ನಾಮಾನಿ ಸ್ಮರ್ತವ್ಯಾನಿ ಸದಾ ಬುಧೈಃ ।
ಸಮೀಪೇ ರೋಗಿಣೋ ಬ್ರೂಯುರ್ಬಾಂಧವಾಸ್ತೇ ಪ್ರಕೀರ್ತಿತಾಃ ॥೧೧॥
ಈ ಹತ್ತು ನಾಮಂಗಳ ಬುದ್ಧಿವಂತರು ಏವತ್ತೂ ಸ್ಮರಿಸುತ್ತಿರೆಕು. ರೋಗಿಯ ಸಮೀಪಲ್ಲಿ ಈ ನಾಮಂಗಳ ಹೇಳುವವ್ವೇ ಬಾಂಧವರು ಹೇದು ಹೇಳಲ್ಪಡುತ್ತು.
ಕೃಷ್ಣೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ ।
ತಸ್ಯ ಭಸ್ಮೀಭವಂತ್ಯಾಶು ಮಹಾಪಾತಕಕೋಟಯಃ ॥೧೨॥
ಕೃಷ್ಣ ಹೇಳ್ವ ಮಂಗಳ ನಾಮವು ಆರ ಬಾಯಿಂದ ಹೆರಡುತ್ತೋ ಅವನ ಕೋಟಿ ಮಹಾ ಪಾತಕಂಗೊ ಭಸ್ಮವಾವುತ್ತು.
ಮ್ರಿಯಮಾಣೋ ಹರೇರ್ನಾಮ ಗೃಣನ್ಪುತ್ರೋಪಚಾರಿತಮ್ ।
ಅಜಾಮಿಲೋsಪ್ಯಗಾದ್ಧಾಮ ಕಿಂ ಪುನಃ ಶ್ರದ್ಧಯಾ ಗೃಣನ್ ॥೧೩॥
ಸಾವಲಿತ್ತಿದ್ದ ಅಜಾಮಿಳ° ತನ್ನ ಮಗನ ಹೆಸರಾದ ಹರಿಯ ನಾಮವ ಉಚ್ಛರಿಸಿ ಸ್ವರ್ಗವ ಸೇರಿದ°. ಮತ್ತೆ ಶ್ರದ್ಧೆಂದ ಉಚ್ಛರಿಸಿರೆ ಅದರ ಫಲ (ಶಕ್ತಿ) ಎಷ್ಟಿಕ್ಕು!
ಹರಿರ್ಹರತಿ ಪಾಪಾನಿ ದುಷ್ಟಚಿತ್ತೈರಪಿಸ್ಮೃತಃ ।
ಅನಿಚ್ಛಯಾಪಿ ಸಂಸ್ಪೃಷ್ಟೋ ದಹತ್ಯೇವ ಹಿ ಪಾವಕಃ ॥೧೪॥
ದುಷ್ಟಚಿತ್ತನೂ ಹರಿನಾಮವ ಸ್ಮರಿಸಿರೆ ಹರಿ ಅವನ ಪಾಪಂಗಳೆಲ್ಲವ ನಾಶ ಮಾಡುತ್ತ°. ಅಗ್ನಿಯ ಇಚ್ಛೆಯಿಲ್ಲದ್ದೆ ಮುಟ್ಟಿರೂ ಅದು ಸುಟ್ಟೇ ಸುಡುತ್ತು.
ಹರೇರ್ನಾಮಶ್ಚ ಯಾ ಶಕ್ತಿಃ ಪಾಪನಿರ್ಹರಣೇ ದ್ವಿಜ ।
ತಾವತ್ಕರ್ಮ ಸಮರ್ಥೋ ನ ಪಾತಕಂ ಪಾತಕೀ ಜನಃ ॥೧೫॥
ಎಲೈ ಗರುಡನೇ!, ಹರಿಯ ನಾಮಲ್ಲಿ ಪಾಪಂಗಳ ನಾಶಮಾಡುವ ಶಕ್ತಿ ಎಷ್ಟು ಇದ್ದೋ ಅಷ್ಟು ಪಾಪಂಗಳ ಮಾಡ್ಳೆ ಪಾಪಿಗೊ ಅಸಮರ್ಥರಾಗಿದ್ದವು.
ಕಿಂಕರೇಭ್ಯೋ ಯಮಃ ಪ್ರಾಹಾನಯಧ್ವಂ ನಾಸ್ತಿ ಕಂ ಜನಮ್ ।
ನೈವಾನಯತ ಭೋ ದೂತಾಃ ಹರಿನಾಮಸ್ಮರಂ ನರಮ್ ॥೧೬॥
ಯಮಧರ್ಮರಾಜ° ತನ್ನ ದೂತರಿಂಗೆ ಹೇಳಿದ್ದ° – “ಎಲೈ ದೂತರೇ, ನಾಸ್ತಿಕ ಜನರ ಇಲ್ಲಿಗೆ ಕರಕ್ಕೊಂಡು ಬನ್ನಿ ಮತ್ತೆ ಹರಿನಾಮಸ್ಮರಣೆ ಮಾಡಿಗೊಂಡಿಪ್ಪ ಜನರ ಇಲ್ಲಿಗೆ ಕರ್ಕೊಂಡು ಬರೆಡಿ”.
ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವಂ ಹರಿಮ್ ।
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ ॥೧೭॥
ಅಚ್ಯುತ, ಕೇಶವ, ರಾಮ, ನಾರಾಯಣ, ಕೃಷ್ಣ, ದಾಮೋದರ, ವಾಸುದೇವ, ಹರಿ, ಶ್ರೀಧರ, ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ, ಶ್ರೀರಾಮಚಂದ್ರ ಹೀಂಗೆ ಭಜಿಸೆಕು.
ಕಮಲನಯನ ವಾಸುದೇವ ವಿಷ್ಣೋ ಧರಣೀಧರಾಚ್ಯುತ ಶಂಖಚಕ್ರಪಾಣೇ ।
ಭವ ಶರಣಮಿತೀರಯಂತಿ ಯೇ ವೈ ತ್ಯಜ ಭಟ ದೂರತರೇಣ ತಾನಪಾಪಾನ್ ॥೧೮॥
ಎಲೈ ಭಟರೇ, ಯಾವ ಮನುಷ್ಯರು “ಹೇ ಕಮಲನಯನ, ಹೇ ವಾಸುದೇವ, ಹೇ ವಿಷ್ಣೋ, ಹೇ ಧರಣೀಧರ, ಹೇ ಅಚ್ಯುತ, ಹೇ ಶಂಖಚಕ್ರಧಾರಿ, ಈ ಸಂಸಾರಲ್ಲಿ ಎನ್ನ ರಕ್ಷಕನೇ ಹೇದು ಸ್ತುತಿಸಿಗೊಂಡು ಇರುತ್ತವೋ ಅಂತಹ ಪಾಪಹೀನರ ದೂರಂದಲೇ ಬಿಟ್ಟಿಕ್ಕಿ.
ತಾನಾನಯಧ್ವಮಸತೋ ವಿಮುಖಾನ್ಮುಕುಂದಪಾದಾರವಿಂದ ಮಕರಂದರಸಾದಜಸ್ರಮ್ ।
ನಿಷ್ಕಿಂಚನೈಃ ಪರಮಹಂಸಕುಲೈ ರಸಜ್ಞೈರ್ಜುಷ್ಟಾದ್ಗೃಹೇ ನಿರಯವರ್ತ್ಮನಿ ಬದ್ಧತೃಷ್ಣಾನ್ ॥೧೯॥
ಪಾಪಕರ್ಮಂಗಳಿಂದ ವಿಮುಖರಾಗಿ ಸರ್ವವನ್ನೂ ಪರಿತ್ಯಜಿಸಿ, ಬ್ರಹ್ಮರಸಾನುಭವಿಗಳಾದ ಪರಮಹಂಸರ ಕುಲದವರಿಂದ ಸೇವಿಸಲ್ಪಟ್ಟ ಮುಕುಂದನ ಪಾದಾರವಿಂದಂಗಳ ಮಕರಂದದ ಆಸ್ವಾದನೆಂದ ವಿಮುಖರಾಗಿಪ್ಪ ಮತ್ತೆ ನರಕದ ದಾರಿಯಾದ ಸಂಸಾರದ ತೃಷ್ಣೆಂದ ಬಂಧಿತರಾದ ಆ ಪಾಪಿಗಳ ಕರಕ್ಕೊಂಡು ಬನ್ನಿ.
ಜಿಹ್ವಾ ನ ವಕ್ತಿ ಭಗವದ್ಗುಣನಾಮಧೇಯಂ ಚೇತಶ್ಚನ ಸ್ಮರತಿ ತಚ್ಚರಣಾರವಿಂದಮ್ ।
ಕೃಷ್ಣಾಯ ನೋ ನಮತಿ ಯಚ್ಚಿರ ಏಕದಾಪಿ ತಾನನಯಧ್ವಮಸತೋsಕೃತವಿಷ್ಣುಕೃತ್ಯಾನ್ ॥೨೦॥
ಆರ ನಾಲಗೆ ಭಗವಂತನ ಗುಣಂಗಳನ್ನೂ ನಾಮಂಗಳನ್ನೂ ಹೇಳುತ್ತಿಲ್ಲೆಯೋ, ಆರ ಮನಸ್ಸು ಆ ಭಗವಂತನ ಚರಣಾರವಿಂದಂಗಳ ಸ್ಮರಿಸುತ್ತಿಲ್ಲೆಯೋ, ಆರ ಶಿರವು ಒಂದು ಸರ್ತಿಯೂ ತಲೆಬಾಗಿ ಕೃಷ್ಣನ ನಮಸ್ಕರಿಸುತ್ತಿಲ್ಲೆಯೋ, ಆರು ಈ ವಿಷ್ಣುವಿನ (ಪೂಜಾದಿ) ಕಾರ್ಯಂಗಳ ಮಾಡುತ್ತಿಲ್ಲೆಯೋ ಅಂತಹ ಪಾಪಿಗಳ ಕರಕ್ಕೊಂಡು ಬನ್ನಿ”.
ತಸ್ಮಾತ್ಸಂಕೀರ್ತನಂ ವಿಷ್ಣೋರ್ಜಗನ್ಮಂಗಲಮಂಹಸಾಮ್ ।
ಮಹತಾಮಪಿ ಪಕ್ಷೀಂದ್ರ ವಿದ್ಧೈಕಾಂತಿಕನಿಷ್ಕೃತಿಮ್ ॥೨೧॥
ಎಲೈ ಪಕ್ಷೀಂದ್ರನೇ!, ಹಾಂಗಾಗಿ ಭಗವಾನ್ ವಿಷ್ಣುವಿನ ನಾಮ ಸಂಕೀರ್ತನೆ ಜಗತ್ತಿಲ್ಲಿ ಮಂಗಳಕರವಾದ್ದು ಹಾಂಗೂ ಅತಿ ದೊಡ್ಡ ಪಾಪಂಗೊಕ್ಕೂ ಏಕಮಾತ್ರ ಪ್ರಾಯಶ್ಚಿತ್ತರೂಪವಾದ್ದು.
ಪ್ರಾಯಶ್ಚಿತ್ತಾನಿ ಚೀರ್ಣಾನಿ ನಾರಾಯಣಪರಾಙ್ಮುಖಮ್ ।
ನ ನಿಷ್ಪುನಂತಿ ದುರ್ಬುದ್ಧಿಂ ಸುರಾಕುಂಭಮಿವಾಪಗಾಃ ॥೨೨॥
ಹೆಂಡದ ಗಡಿಗೆಯ ಹೇಂಗೆ ನದಿಗೊ ಪ್ರವಿತ್ರಗೊಳುಸದೋ, ಹಾಂಗೇ, ಪಾಪಂಗೊಕ್ಕೆ ಮಾಡಲ್ಪಟ್ಟ ಪ್ರಾಯಶ್ಚಿತ್ತಂಗಳೂ ನಾರಾಯಣನಿಂದ ವಿಮುಖನಾದ ದುಷ್ಟಬುದ್ಧಿಯ ಮನುಷ್ಯನ ಪವಿತ್ರ ಮಾಡ.
ಕೃಷ್ಣನಾಮ್ನಾ ನ ನರಕಂ ಪಶ್ಯಂತಿ ಗತಕಿಲ್ಬಿಷಾಃ ।
ಯಮಂ ಚ ತದ್ಭಟಾಶ್ಚೈವ ಸ್ವಪ್ನೇsಪಿ ನ ಕದಾಚನ ॥೨೩॥
ಕೃಷ್ಣನ ನಾಮಸ್ಮರಣೆಂದ ಪಾಪಂಗೊ ಕಳದು ಹೋವುತ್ತು. ಮತ್ತೆ ಅಂತವು ನರಕವ ಆಗಲೀ, ಯಮನ ಆಗಲೀ ಅಥವ ಅವನ ಭಟರನ್ನಾಗಲೀ ಏವತ್ತೂ ಸ್ವಪ್ನಲ್ಲಿಯೂ ಕೂಡ ನೋಡುತ್ತವಿಲ್ಲೆ.
ಮಾಂಸಾಸ್ಥಿ ರಕ್ತವತ್ಕಾಯೇ ವೈತರಣ್ಯಾಂ ಪತೇನ್ನ ಸಃ ।
ಯೋಂsತೇ ದದ್ಯಾದ್ದ್ವಿಜೇಭ್ಯಶ್ಚ ನಂದನಂದನ ಗಾಮಿತಿ ॥೨೪॥
ಆರು ಅಂತ್ಯಕಾಲಲ್ಲಿ ಗೋವಿನ ನಂದನಂದನಂಗೆ ಹೇದು ದ್ವಿಜಂಗೆ ದಾನ ಮಾಡುತ್ತವೋ ಅವು ಮಾಂಸ, ಮೂಳೆ, ರಕ್ತಂಗಳಿಂದ ಉಂಟಾದ ದೇಹವೆಂಬ ವೈತರಿಣಿಲಿ ಬೀಳುತ್ತವಿಲ್ಲೆ.
ಅತಃ ಸ್ಮರೇನ್ಮಹಾವಿಷ್ಣೋರ್ನಾಮ ಪಾಪೌಘನಾಶನಮ್ ।
ಗೀತಾ ಸಹಸ್ರನಾಮಾನಿ ಪಠೇದ್ವಾ ಶ್ರುಣುಯಾದಪಿ ॥೨೫॥
ಹಾಂಗಾಗಿ, ಪಾಪಂಗಳ ಸಮೂಹವನ್ನೇ ನಾಶಮಾಡುವಂತಹ ಮಹಾವಿಷ್ಣುವಿನ ನಾಮಂಗಳ ಸ್ಮರಿಸೆಕು. ಗೀತೆ ಮತ್ತೆ ಸಹಸ್ರನಾಮಂಗಳ ಪಠಿಸೆಕು ಅಥವಾ ಕೇಳೆಕು.
 
ಗದ್ಯರೂಪಲ್ಲಿ –
 
ಗರುಡ° ಹೇಳಿದ° – ಹೇ ಪ್ರಭೋ!, ಪುಣ್ಯಾತ್ಮರ ಪರಲೋಕ ಕ್ರಿಯೆಗಳ ಬಗ್ಗೆ ಎಲ್ಲವನ್ನೂ ಎನಗೆ ಹೇಳು. ಅವರ ಮಕ್ಕಳಿಂದ ಆ ಕ್ರಿಯೆಗೊ ಯಾವರೀತಿಯೆಲ್ಲ ಮಾಡಲ್ಪಡೆಕು ಹೇಳ್ವದೆಲ್ಲವನ್ನೂ ಯಥಾವತ್ತಾಗಿ ಹೇಳು.
ಭಗವಂತ° ವಿಷ್ಣು ಹೇಳಿದ° – ಹೇ ಗರುಡ!, ಮನುಷ್ಯರ ಹಿತದೃಷ್ಟಿಂದ ನಿನ್ನಂದ ಕೇಳಲ್ಪಟ್ಟದಿದು ಉತ್ತಮವಾತು. ಧಾರ್ಮಿಕ ಮನುಷ್ಯಂಗಾಗಿ ಮಾಡ್ಳೆ ತಕ್ಕುದಾದ ಯಾವ ಕಾರ್ಯಂಗೊ ಇದ್ದೋ ಅವೆಲ್ಲವ ನಿನಗೆ ಹೇಳುತ್ತೆ. ಪುಣ್ಯಾತ್ಮ ವ್ಯಕ್ತಿ ವೃದ್ಧಾಪ್ಯಕ್ಕೆ ಬಂದಮತ್ತೆ ತನ್ನ ಶರೀರ ವ್ಯಾಧಿಗ್ರಸ್ಥವಾದಪ್ಪಗ ಮತ್ತೆ ಗ್ರಹಂಗಳ ಪ್ರತಿಕೂಲತೆಯ ಗಮನುಸಿ ಹಾಂಗೂ ಪ್ರಾಣವಾಯುವಿನ ನಾದ ಕೇಳುತ್ತಿಲ್ಲೇಳಿಯಪ್ಪಗ, ತನ್ನ ಮರಣದ ಸಮಯ ಹತ್ರೆ ಬಂತು ಹೇಳ್ವದರ ಅರ್ತು ನಿರ್ಭನಾಗಿ, ಆಲಸ್ಯರಹಿತನಾಗಿ, ತಿಳುದೋ – ತಿಳಿಯದ್ದೆಯೋ ಮಾಡಿದ ಪಾಪಂಗಳ ನಾಶಕ್ಕಾಗಿ ಪ್ರಾಯಶ್ಚಿತ್ತವ ಮಾಡಿಕೊಳ್ಳೆಕು.
ಒಂದು ವೇಳೆ ಅಂತ್ಯಕಾಲ ಸಮೀಪಿಸಿತ್ತು ಹೇಳಿ ಆದರೆ ಮಿಂದು ಶಾಲಗ್ರಾಮ ಸ್ವರೂಪ° ಭಗವಂತ° ವಿಷ್ಣುವಿನ ಪೂಜೆಯ ಮಾಡುಸೆಕು. ಗಂಧ, ಪುಷ್ಪ, ಕುಂಕುಮ ತುಳಸೀದಳ, ಧೂಪ, ದೀಪ ಮತ್ತೆ ವಿವಿಧ ಮೋದಕಾದಿ ನೈವೇದ್ಯಂಗಳಿಂದ ಭಗವಂತನ ಅರ್ಚನೆಯ ಮಾಡೆಕು. ಬ್ರಾಹ್ಮಣರಿಂಗೆ ದಕ್ಷಿಣೆಯ ಕೊಟ್ಟು, ನೈವೇದ್ಯಲ್ಲೇ ಭೋಜನಮಾಡಿಸಿ, ಅಷ್ಟಾಕ್ಷರೀ ಮಂತ್ರ (ಓಂ ನಮೋ ನಾರಾಯಣಾಯ)ವ ಮತ್ತು ದ್ವಾದಶಾಕ್ಷರೀ ಮಂತ್ರ (ಓಂ ನಮೋ ಭಗವತೇ ವಾಸುದೇವಾಯ)ವನ್ನೂ ಜಪಿಸೆಕು. ಮತ್ತೆ ಭಗವಂತ° ವಿಷ್ಣುವಿನ ಮತ್ತು ಶಿವನ ನಾಮಸ್ಮರಣೆ ಮಾಡೆಕು ಮತ್ತು ಕೇಳೆಕು. ಹರಿ ನಾಮ ಕೆಮಿಗೆ ಬಿದ್ದರೆ ಸಾಕು ಅವನ ಪಾಪಂಗ ಎಲ್ಲವೂ ನಾಶವಾವ್ತು. ರೋಗಿಯ ಹತ್ರೆ ಬಂದು ಬಂಧು ಬಾಂಧವರು ಶೋಕವ ಮಾಡ್ಳಾಗ. ಬದಲಾಗಿ, ಎನ್ನ ಪವಿತ್ರವಾದ ನಾಮವ ಪದೇ ಪದೇ ಸ್ಮರಣೆ ಕೀರ್ತನೆ ಮಾಡೆಕು.
ಮರ್ತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಮತ್ತೆ ಕಲ್ಕಿ – ಈ ಹತ್ತು ನಾಮಂಗಳ ಬುದ್ಧಿವಂತರು ಏವತ್ತೂ ಸ್ಮರಿಸುತ್ತಿರೆಕು. ರೋಗಿಯ ಸಮೀಪಲ್ಲಿ ಈ ನಾಮಂಗಳ ಹೇಳುವವ್ವೇ ಬಾಂಧವರು ಹೇದು ಹೇಳಲ್ಪಡುತ್ತು. ಕೃಷ್ಣ ಹೇಳ್ವ ಮಂಗಳ ನಾಮವು ಆರ ಬಾಯಿಂದ ಹೆರಡುತ್ತೋ ಅವನ ಕೋಟಿ ಮಹಾ ಪಾತಕಂಗೊ ಭಸ್ಮವಾವುತ್ತು. ಸಾವಲಿತ್ತಿದ್ದ ಅಜಾಮಿಳ° ತನ್ನ ಮಗನ ಹೆಸರಾದ ಹರಿ/ನಾರಾಯಣ ನಾಮವ ಉಚ್ಛರಿಸಿ ಸ್ವರ್ಗವ ಸೇರಿದ°. ಮತ್ತೆ ಶ್ರದ್ಧೆಂದ ಉಚ್ಛರಿಸಿರೆ ಅದರ ಫಲ (ಶಕ್ತಿ) ಎಷ್ಟಿಕ್ಕು!. ದುಷ್ಟಚಿತ್ತನೂ ಹರಿನಾಮವ ಸ್ಮರಿಸಿರೆ ಹರಿ ಅವನ ಪಾಪಂಗಳೆಲ್ಲವ ನಾಶ ಮಾಡುತ್ತ°. ಅಗ್ನಿಯ ಇಚ್ಛೆಯಿಲ್ಲದ್ದೆ ಮುಟ್ಟಿರೂ ಅದು ಸುಟ್ಟೇ ಸುಡುತ್ತು. ಎಲೈ ಗರುಡನೇ!, ಹರಿಯ ನಾಮಲ್ಲಿ ಪಾಪಂಗಳ ನಾಶಮಾಡುವ ಶಕ್ತಿ ಎಷ್ಟು ಇದ್ದೋ ಅಷ್ಟು ಪಾಪಂಗಳ ಮಾಡ್ಳೆ ಪಾಪಿಗೊ ಅಸಮರ್ಥರಾಗಿದ್ದವು.
ಯಮಧರ್ಮರಾಜ ತನ್ನ ಕಿಂಕರರಿಂಗೆ ಈ ರೀತಿಯಾಗಿ ಹೇಳಿದ್ದ° – “ಎಲೈ ದೂತರೇ, ನಾಸ್ತಿಕ ಜನರ ಇಲ್ಲಿಗೆ ಕರಕ್ಕೊಂಡು ಬನ್ನಿ ಮತ್ತೆ ಹರಿನಾಮಸ್ಮರಣೆ ಮಾಡಿಗೊಂಡಿಪ್ಪ ಜನರ ಇಲ್ಲಿಗೆ ಕರ್ಕೊಂಡು ಬರೆಡಿ”. ಅಚ್ಯುತ, ಕೇಶವ, ರಾಮ, ನಾರಾಯಣ, ಕೃಷ್ಣ, ದಾಮೋದರ, ವಾಸುದೇವ, ಹರಿ, ಶ್ರೀಧರ, ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ, ಶ್ರೀರಾಮಚಂದ್ರ ಹೀಂಗೆ ಭಜಿಸೆಕು. ಎಲೈ ಭಟರೇ, ಯಾವ ಮನುಷ್ಯರು “ಹೇ ಕಮಲನಯನ, ಹೇ ವಾಸುದೇವ, ಹೇ ವಿಷ್ಣೋ, ಹೇ ಧರಣೀಧರ, ಹೇ ಅಚ್ಯುತ, ಹೇ ಶಂಖಚಕ್ರಧಾರಿ, ಈ ಸಂಸಾರಲ್ಲಿ ಎನ್ನ ರಕ್ಷಕನೇ ಹೇದು ಸ್ತುತಿಸಿಗೊಂಡು ಇರುತ್ತವೋ ಅಂತಹ ಪಾಪಹೀನರ ದೂರಂದಲೇ ಬಿಟ್ಟಿಕ್ಕಿ. ಪಾಪಕರ್ಮಂಗಳಿಂದ ವಿಮುಖರಾಗಿ ಸರ್ವವನ್ನೂ ಪರಿತ್ಯಜಿಸಿ, ಬ್ರಹ್ಮರಸಾನುಭವಿಗಳಾದ ಪರಮಹಂಸರ ಕುಲದವರಿಂದ ಸೇವಿಸಲ್ಪಟ್ಟ ಮುಕುಂದನ ಪಾದಾರವಿಂದಂಗಳ ಮಕರಂದದ ಆಸ್ವಾದನೆಂದ ವಿಮುಖರಾಗಿಪ್ಪ ಮತ್ತೆ ನರಕದ ದಾರಿಯಾದ ಸಂಸಾರದ ತೃಷ್ಣೆಂದ ಬಂಧಿತರಾದ ಆ ಪಾಪಿಗಳ ಕರಕ್ಕೊಂಡು ಬನ್ನಿ. ಆರ ನಾಲಗೆ ಭಗವಂತನ ಗುಣಂಗಳನ್ನೂ ನಾಮಂಗಳನ್ನೂ ಹೇಳುತ್ತಿಲ್ಲೆಯೋ, ಆರ ಮನಸ್ಸು ಆ ಭಗವಂತನ ಚರಣಾರವಿಂದಂಗಳ ಸ್ಮರಿಸುತ್ತಿಲ್ಲೆಯೋ, ಆರ ಶಿರವು ಒಂದು ಸರ್ತಿಯೂ ತಲೆಬಾಗಿ ಕೃಷ್ಣನ ನಮಸ್ಕರಿಸುತ್ತಿಲ್ಲೆಯೋ, ಆರು ಈ ವಿಷ್ಣುವಿನ (ಪೂಜಾದಿ) ಕಾರ್ಯಂಗಳ ಮಾಡುತ್ತಿಲ್ಲೆಯೋ ಅಂತಹ ಪಾಪಿಗಳ ಮಾತ್ರ ಕರಕ್ಕೊಂಡು ಬನ್ನಿ”.
ಎಲೈ ಪಕ್ಷೀಂದ್ರನೇ!, ಹಾಂಗಾಗಿ ಭಗವಾನ್ ವಿಷ್ಣುವಿನ ನಾಮ ಸಂಕೀರ್ತನೆ ಜಗತ್ತಿಲ್ಲಿ ಮಂಗಳಕರವಾದ್ದು ಹಾಂಗೂ ಅತಿ ದೊಡ್ಡ ಪಾಪಂಗೊಕ್ಕೂ ಏಕಮಾತ್ರ ಪ್ರಾಯಶ್ಚಿತ್ತರೂಪವಾದ್ದು. ಹೆಂಡದ ಗಡಿಗೆಯ ಹೇಂಗೆ ನದಿಗೊ ಪ್ರವಿತ್ರಗೊಳುಸದೋ, ಹಾಂಗೇ, ಪಾಪಂಗೊಕ್ಕೆ ಮಾಡಲ್ಪಟ್ಟ ಪ್ರಾಯಶ್ಚಿತ್ತಂಗಳೂ ನಾರಾಯಣನಿಂದ ವಿಮುಖನಾದ ದುಷ್ಟಬುದ್ಧಿಯ ಮನುಷ್ಯನ ಪವಿತ್ರ ಮಾಡ. ಕೃಷ್ಣನ ನಾಮಸ್ಮರಣೆಂದ ಪಾಪಂಗೊ ಕಳದು ಹೋವುತ್ತು. ಮತ್ತೆ ಅಂತವು ನರಕವ ಆಗಲೀ, ಯಮನ ಆಗಲೀ ಅಥವ ಅವನ ಭಟರನ್ನಾಗಲೀ ಏವತ್ತೂ ಸ್ವಪ್ನಲ್ಲಿಯೂ ಕೂಡ ನೋಡುತ್ತವಿಲ್ಲೆ. ಆರು ಅಂತ್ಯಕಾಲಲ್ಲಿ ಗೋವಿನ ನಂದನಂದನಂಗೆ ಹೇದು ದ್ವಿಜಂಗೆ ದಾನ ಮಾಡುತ್ತವೋ ಅವು ಮಾಂಸ, ಮೂಳೆ, ರಕ್ತಂಗಳಿಂದ ಉಂಟಾದ ದೇಹವೆಂಬ ವೈತರಿಣಿಲಿ ಬೀಳುತ್ತವಿಲ್ಲೆ. ಹಾಂಗಾಗಿ, ಪಾಪಂಗಳ ಸಮೂಹವನ್ನೇ ನಾಶಮಾಡುವಂತಹ ಮಹಾವಿಷ್ಣುವಿನ ನಾಮಂಗಳ ಸ್ಮರಿಸೆಕು. ಗೀತೆ ಮತ್ತೆ ಸಹಸ್ರನಾಮಂಗಳ ಪಠಿಸೆಕು ಅಥವಾ ಕೇಳೆಕು.
 
[ ಚಿಂತನೀಯಾ –
 
“ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ” – ಹುಟ್ಟಿದವಂಗೆ ಸಾವು ತಪ್ಪಿದ್ದಲ್ಲ, ಸತ್ತವಂಗೆ ಹುಟ್ಟು ಕೂಡ ನಿಶ್ಚಿತ. ಆದರೆ ಅದು ಯಾವಾಗ ಹೇಳುವದು ಅವನವನ ಕರ್ಮ ಫಲಕ್ಕೆ ಅನುಗುಣವಾಗಿ ಇಪ್ಪದು. ಅದನ್ನೇ ಶಂಕರಾಚಾರ್ಯರು ಹೇಳಿದ್ದದು “ಪುನರಪಿ ಜನನಂ ಪುನರಪಿ ಮರಣಮ್..”. ಜನನ ಮರಣ ಹೇಳ್ವದ ಸಂಸಾರ ಬಂಧನ ಚಕ್ರ. ಹಾಂಗಾಗಿ ನಿರ್ದಿಷ್ಟ ಸಮಯಾನಂತರ ಈ ದೇಹವ ಬಿಟ್ಟು ಬಿಡೆಕ್ಕಾದ್ದು ಅನಿವಾರ್ಯ. ಅದರ ಆರಿಂದಲೂ ತಪ್ಪುಸಲೆ ಎಡಿಯ. ಸದಾ ಕಾಲ ಭಗವಂತನ ನಾಮಸ್ಮರಣೆ ಶ್ರೇಯಸ್ಕರ ಮಾರ್ಗ. ಅದರ ಮರದಿಕ್ಕಿ ಸಾಯ್ತವನ ಹತ್ರೆ ಕೂದೊಂಡು ಆರ್ತನಾದ ಮಾಡುವದರಿಂದ ಎಂತ ಗುಣವೂ ಇಲ್ಲೆ. ಅದರ ಬದಲಿಂಗೆ ಅವನ ಕೆಮಿಗೆ ಕೇಳ್ವಾಂಗೆ ವಿಷ್ಣುಸ್ಮರಣೆ ಮಾಡುವದರಿಂದ ಅವನ ಮುಂದಾಣ ಮಾರ್ಗ ಸುಗಮ ಆವ್ತು. ಜೀವಾತ್ಮನೂ ದೇಹವೂ ಬೇರೆ ಬೇರೆಯೇ ಆದ್ದರಿಂದ ಈ ದೇಹ ಬಂಧನದ ಮೋಹಕ್ಕೆ ತುತ್ತಾಗಿ ಬಂಧುತ್ವವ ಕಲ್ಪಿಸಿಗೊಂಡು ಕೂಗುವದು ವ್ಯರ್ಥ.
ಎಲ್ಲವೂ ಭಗವಂತನ ಇಚ್ಛೆ. ಎಲ್ಲವೂ ಭಗವಂತನಿಂದ, ಎಲ್ಲವೂ ಭಗವಂತನೇ ಹೇದು ಅರ್ತು ನಡದರೆ ನವಗೆ ಏವ ಕಷ್ಟವೂ ಎದುರಾವುತ್ತಿಲ್ಲೆ. ಅದಕ್ಕಾಗಿಯೇ ಸದಾ ಹರಿಸ್ಮರಣೆ ಮಾಡಿಗೊಂಡಿರೆಕು ಹೇಳಿ ಹೇಳಿದ್ದದು. ಹಾಂಗೇಳಿ ಎಲ್ಲ ಕೆಲಸವನ್ನು ಬಿಟ್ಟು ಭಗವದ್ ಭಜನೆ ಮಾಡಿಗೊಂಡು ಕೂದರೆ ಹೊಟ್ಟೆತುಂಬುಗೋ ಹೇಳಿ ಕೇಳಿರೆ ಅದು ಮೂರ್ಖತನ. ಕರ್ಮ ಮಾಡೆಕು. ಸಾಮಾಜಿಕ ಕರ್ಮ ಬೇರೆ, ಆಧ್ಯಾತ್ಮಿಕ ಕರ್ಮ ಬೇರೆ. ಸಾಮಾಜಿಕ ಕರ್ಮಲ್ಲಿಯೂ ಭಗವದ್ಪ್ರಜ್ಞೆಂದ ಕೆಲಸ ನಿರ್ವಹಿಸೆಕು ಹೇಳ್ವದು ಮುಖ್ಯ ಗಮನುಸೆಕ್ಕಾದ ವಿಷಯ. ಪ್ರಜ್ಞಾಪೂರ್ವಕವಾಗಿ ಕರ್ಮವ ಮಾಡಿ ಕೃಷ್ಣಾರ್ಪಣಮಸ್ತು ಹೇದು ಭಗವಂತಂಗೆ ಅರ್ಪಿಸೆಕ್ಕಾದ್ದು ಕರ್ತವ್ಯ.    ಅದರಿಂದ ನಾವು ತಿಳುದೋ ತಿಳಿಯದ್ದೆಯೋ ಮಾಡಿದ ಪಾಪತ್ವ ನಷ್ಟ ಆವ್ತು ಹೇಳಿ ಭಗವಂತನೇ ಭರವಸೆ ಕೊಟ್ಟಿದ°. ಭಗವಂತನ ಭಕ್ತರ ಯಮಕಿಂಕರರು ಮುಟ್ಟುತ್ತವಿಲ್ಲೆ. ದೇವದೂತರು ಬಂದು ಅವರ ಸುಗಮವಾಗಿ ಎತ್ತುಸೆಕ್ಕಾದಲ್ಯಂಗೆ ಎತ್ತುಸುತ್ತವು. ನಿಶ್ಚಲ ಮನಸ್ಸಿಂದ ಭಗವಂತನ ಸ್ಮರಣೆ ಮಾಡುವವನ ಸಮಸ್ತ ಬಾಧೆಗಳೂ, ಸಮಸ್ತ ದುಃಖಂಗಳೂ ಬಿಟ್ಟು ಹೋವುತ್ತು.
ಮನಗೆ ಕಿಚ್ಚುಬಿದ್ದ ಮತ್ತೆ ಬಾವಿ ಹುಡ್ಕುವದರಿಂದ ಮನೆಯತ್ರ ಬಾವಿ ಇಪ್ಪದೇ ಒಳ್ಳೆದು. ಹಾಂಗೇ, ಅಂತ್ಯಕಾಲಕ್ಕೆ ಮಾತ್ರ ಭಗವಂತನ ಸ್ಮರಣೆ ಮಾಡ್ತಕ್ಕಿಂತ ನಿರಂತರವಾಗಿ ಭಗವದ್ ಸ್ಮರಣೆ ಮಾಡಿಗೊಂಡಿದ್ದರೆ ಜನ್ಮ ಪಾವನ ಅಪ್ಪದರಲ್ಲಿ ಎಂತ ಸಂಶಯ. ಭಗವದ್ಗೀತೆಲಿಯೂ ಹೇಳಿದಾಂಗೆ ಅಂತ್ಯಕಾಲಕ್ಕೆ ವಿಷ್ಣುವಿನ ಸ್ಮರಣೆ ಮಾಡಿರೆ ಅವನ ಪಾಪಂಗಳೆಲ್ಲವೂ ತೊಲಗುತ್ತು. ಆದರೆ ಅಂತ್ಯಕಾಲಕ್ಕೆ ಆ ಪ್ರಜ್ಞೆ ಬರೇಕಾರೆ ಅಷ್ಟು ಸುಲಭದ ವಿಷಯ ಅಲ್ಲ. ಆ ಕಾಲಕ್ಕೆ ಏನೇನೋ ಮೋಹ ಬಂಧುತ್ವವೇ ಮನಸ್ಸಿಂಗೆ ಬಲವಾಗಿ ಅಪ್ಪಿಗೊಂಬದು. ಅದಕ್ಕೆ ನಿರಂತರ ಪ್ರಯತ್ನ ಅಗತ್ಯ. ಅದನ್ನೇ ಗೀತೆಲಿ ಹೇಳಿದ್ದದು – “ಅಭ್ಯಾಸ ಯೋಗ ಯುಕ್ತೇನ ಚೇತಸಾ ನಾನ್ಯಗಾಮಿನ..” – ಅನ್ಯಚಿಂತನೆಯ ಎಲ್ಲವ ಬಿಟ್ಟಿಕ್ಕಿ ನಿರಂತರ ಭಗವದ್ ನಾಮವ  ಅಭ್ಯಾಸ ಮಾಡಿರೆ ಮಾತ್ರ ಅಂತ್ಯಕಾಲಲ್ಲಿಯೂ ಅದುವೇ ನೆಂಪು ನಿಂಗಷ್ಟೆ. ಅಂತ್ಯಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಲೇವರಮ್ | ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ||ಭ.ಗೀ೮.೫|| – ಅಂತ್ಯಕಾಲಲ್ಲಿ ಭಗವಂತನ ನಾಮಸ್ಮರಣೆ ಮಾಡಿಗೊಂಡು ದೇಹಬಿಟ್ಟವಂಗೆ ಭಗವಂತನ ಸನ್ನಿಧಾನವೇ ಲಭಿಸುತ್ತು ಹೇಳ್ವದರ್ಲಿ ಸಂಶಯವೇ ಬೇಡ.
ಎಲ್ಲೋರ ಮನಸ್ಸಿಲ್ಲಿ ಭಗವದ್ ಪ್ರಜ್ಞೆ ಸ್ಥಿರಗೊಳ್ಳಲಿ. ಎಲ್ಲೋರಿಂಗೂ ಭಗವದ್ ಪ್ರಜ್ಞೆ ದಾರಿ ದೀಪವಾಗಲಿ. “ಸರ್ವತ್ರ ಗೋವಿಂದ ನಾಮ ಸಂಕೀರ್ತನಂ ಗೋವಿಂದ ಗೋವಿಂದ” ಹೇಳಿಗೊಂಡು ಈ ಭಾಗಕ್ಕೆ ಹರೇ ರಾಮ.]
 
ಮುಂದೆ ಎಂತರ…     ಬಪ್ಪ ವಾರ ನೋಡುವೋ°.

2 thoughts on “ಗರುಡ ಪುರಾಣ – ಅಧ್ಯಾಯ 08 – ಭಾಗ 01

  1. ಹರೇರಾಮ, ಚೆನ್ನೈಭಾವ, ನಮ್ಮ ಗ್ರಂಥಾಲಯಕ್ಕೆ ಬಂದು ಗರುಡಪುರಾಣ ಇದ್ದೋ? ಕೇಳ್ತವರತ್ರೆ ಒಪ್ಪಣ ಬಯಲು ಓದಿ ಹಂತ- ಹಂತವಾಗಿ ಚೆನ್ನೈಭಾವ ಬರದ ಗರುಡಪುರಾಣ ಬತ್ತನ್ನೆ! ಹೇಳ್ತಾಇದ್ದೆ

  2. ನಮ್ಮ ಪೂರ್ವಜರು ಅದಕ್ಕೇ ಇರೆಕು ಮನುಷ್ಯರಿಂಗೆಲ್ಲಾ ಜಾತಿ ಭೇದ ಇಲ್ಲದ್ದೆ ದೇವರ ಹೆಸರನ್ನೇ ಮಡಗಿಂಡಿತ್ತಿದ್ದವು. ಸದಾ ದೇವರ ಹೆಸರನ್ನೇ ಉಚ್ಚರಿಸಿಯಾದರೂ ಪಾಪ ಕಳವಲಾವುತ್ತನ್ನೆ. ಹಾಂಗೇ ಶವ ಸಂಸ್ಕಾರಕ್ಕೆ ಕೊಂಡೋಪಗ ನಾರಾಯಣ ಸ್ಮರಣೆ ಮಾಡಿಂಡಿತ್ತಿದ್ದವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×